Tag: mumbai police

  • `ಮಹಾ’ ಡಿಸಿಎಂ ʻದೇಶದ್ರೋಹಿʼ ಎಂದ ಕಾಮೆಡಿಯನ್ – ಕುನಾಲ್ ಕಮ್ರಾ ವಿರುದ್ಧ ಎಫ್‌ಐಆರ್‌

    `ಮಹಾ’ ಡಿಸಿಎಂ ʻದೇಶದ್ರೋಹಿʼ ಎಂದ ಕಾಮೆಡಿಯನ್ – ಕುನಾಲ್ ಕಮ್ರಾ ವಿರುದ್ಧ ಎಫ್‌ಐಆರ್‌

    ಮುಂಬೈ: ಮಹಾರಾಷ್ಟ್ರದ ಡಿಸಿಎಂ ಏಕನಾಥ್‌ ಶಿಂಧೆ (Eknath Shinde) ವಿರುದ್ಧ ಅವಹೇಳಕಾರಿ ಹೇಳಿಕೆ ನೀಡಿದ ಹಿನ್ನೆಲೆ ಸ್ಟ್ಯಾಂಡ್-ಅಪ್ ಕಾಮೆಡಿಯನ್ ಕುನಾಲ್ ಕಮ್ರಾ (Stand up comedian Kunal Kamra) ವಿರುದ್ಧ ಶಿವಸೇನಾ ಕಾರ್ಯಕರ್ತರು ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

    ಹೌದು. ಮುಂಬೈನಲ್ಲಿ (Mumbai) ನಡೆದ ಹಾಸ್ಯ ಕಾರ್ಯಕ್ರಮವೊಂದರಲ್ಲಿ ಕಾಮೆಡಿಯನ್‌ ಕಾಮ್ರಾ ಏಕನಾಥ್‌ ಶಿಂಧೆ ಅವರನ್ನು ಅಪಹಾಸ್ಯ ಮಾಡಿದ್ದಾರೆ. ಕಮ್ರಾ ಸ್ವತಃ ಹಂಚಿಕೊಂಡ ಕಾರ್ಯಕ್ರಮದ ಕ್ಲಿಪ್‌ನಲ್ಲಿ ಅವರು ʻಥಾಣೆಯ ನಾಯಕʼ ಎಂದು ಉಲ್ಲೇಖಿಸಿದ್ದರು. ಪಕ್ಷವನ್ನು ವಿಭಜಿಸಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಕ್ಕಾಗಿ ಶಿಂಧೆ ಅವರನ್ನು ಟೀಕಿಸಿದರಲ್ಲದೇ ಏಕನಾಥ್ ಶಿಂಧೆ ಅವರನ್ನ ʻದೇಶದ್ರೋಹಿʼ ಎಂದೂ ಸಹ ಕರೆದಿದ್ದಾರೆ ಎನ್ನಲಾಗಿದೆ.

    ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ ಶಿವಸೇನೆ ಸಂಸದ ನರೇಶ್ ಮ್ಹಾಸ್ಕೆ ಈ ಬಗ್ಗೆ ಕಾಮಿಡಿಯನ್‌ಗೆ ಎಚ್ಚರಿಕೆ ನೀಡಿದ್ದರು. ಅಲ್ಲದೇ ಕಾರ್ಯಕರ್ತರು ಶಿವಸೇನಾ (ಶಿಂಧೆ ಬಣ) ಕಾರ್ಯಕರ್ತರು (Shiv Sena Worker) ಕುನಾಲ್ ಕಮ್ರಾಗೆ ಬೆದರಿಕೆ ಹಾಕಿ, ಕಾಮ್ರಾ ಪ್ರದರ್ಶನ ನೀಡಿದ ಖಾರ್‌ನ ಹ್ಯಾಬಿಟಾಟ್ ಕಾಮಿಡಿ ಕ್ಲಬ್‌ಗೆ ಹಾನಿ ಮಾಡಿದ್ದರು. ಈ ಬೆನ್ನಲ್ಲೇ ಶಾಸಕ ಮುರ್ಜಿ ಪಟೇಲ್‌ ಅವರು ಕಾಮ್ರಾ ವಿರುದ್ಧ ಎಂಐಡಿಸಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದ್ದಾರೆ. ಇದು ಭಾರೀ ರಾಜಕೀಯ ವಿವಾದಕ್ಕೂ ಕಾರಣವಾಗಿದೆ.

    ಕುನಾಲ್‌ ಕಾಮ್ರಾ ಹೇಳಿದ್ದೇನು?
    ಮುಂಬೈನ ಹ್ಯಾಬಿಟಾಟ್ ಕಾಮಿಡಿ ಕ್ಲಬ್‌ನಲ್ಲಿ ಕಾರ್ಯಕ್ರಮ ನೀಡುವಾಗ ಮಹಾರಾಷ್ಟ್ರದ ರಾಜಕೀಯ ವಿಭಜನೆಯ ಬಗ್ಗೆ ಮಾತನಾಡಿದ್ದರು. ಏಕನಾಥ್‌ ಶಿಂಧೆ – ಉದ್ದವ್ ಠಾಕ್ರೆ ನಡುವಿನ ರಾಜಕೀಯ ಉಲ್ಲೇಖಿಸುತ್ತಾ ಮೊದಲು ಶಿವಸೇನಾ ಬಿಜೆಪಿಯಿಂದ ಹೊರಬಂದಿತು, ನಂತರ ಶಿವಸೇನಾ ಶಿವಸೇನಾದಿಂದಲೇ ಹೊರಬಂದಿತು. ಎನ್‌ಸಿಪಿಯಿಂದ ಎನ್‌ಸಿಪಿ ಹೊರಬಂದಿತು. ಇವರೆಲ್ಲಾ ಒಂದು ಮತದಾರನಿಗೆ 9 ಬಟನ್‌ಗಳನ್ನು ನೀಡಿದ್ದಾರೆ. ಥಾಣೆಯು ರಾಜಕೀಯ ಭದ್ರಕೋಟೆಯಾಗಿದ್ದು, ಗದ್ದಾರ್‌ (ದ್ರೋಹಿ) ಆಳ್ವಿಕೆ ಎಂದು ಪರೋಕ್ಷವಾಗಿ ಹಾಡು ಹೇಳುತ್ತಾ ಟೀಕಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

    ಕಾಮ್ರಾಗೆ ಉದ್ಧವ್‌ ಠಾಕ್ರೆ ಬಣ ಬೆಂಬಲ
    ಶಿವಸೇನಾ (ಉದ್ಧವ್‌ ಠಾಕ್ರೆ ಬಣ) ಸಂಸದ ಸಂಜಯ್ ರಾವುತ್ ಅವರು ಕಾಮ್ರಾ ಅವರ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಟ್ವೀಟರ್‌ನಲ್ಲಿ ʻಕುನಾಲ್ ಕಿ ಕಮಾಲ್, ಜೈ ಮಹಾರಾಷ್ಟ್ರʼ ಎಂದು ಬರೆದಿದ್ದಾರೆ. ಮತ್ತೊಬ್ಬ ಸಂಸದರಾದ ಪ್ರಿಯಾಂಕಾ ಚತುರ್ವೇದಿ ಕೂಡ ಕಾಮ್ರಾಗೆ ಬೆಂಬಲ ನೀಡಿದ್ದು, ʻಪ್ರಿಯ ಕುನಾಲ್, ಧೈರ್ಯವಾಗಿರು. ನೀವು ಬಹಿರಂಗಪಡಿಸಿದ ವ್ಯಕ್ತಿ ಮತ್ತು ತಂಡ ನಿಮ್ಮನ್ನು ಬೆನ್ನಟ್ಟುತ್ತಾರೆ. ನಿಮ್ಮ ಮನಸ್ಸಿನ ಮಾತನ್ನು ಹೇಳುವ ಹಕ್ಕನ್ನು ನಾನು ಸಾಯುವವರೆಗೂ ಸಮರ್ಥಿಸಿಕೊಳ್ಳುತ್ತೇನೆʼ ಎಂದು ಎಂದಿದ್ದಾರೆ.

  • ಆತ್ಮಹತ್ಯೆಗೆ ಯತ್ನಿಸಿದ್ನಾ ಪುಣೆ ಅತ್ಯಾಚಾರ ಆರೋಪಿ? – ಬಂಧನದ ವೇಳೆ ಕುತ್ತಿಗೆಯಲ್ಲಿ ಗಾಯದ ಗುರುತು ಪತ್ತೆ

    ಆತ್ಮಹತ್ಯೆಗೆ ಯತ್ನಿಸಿದ್ನಾ ಪುಣೆ ಅತ್ಯಾಚಾರ ಆರೋಪಿ? – ಬಂಧನದ ವೇಳೆ ಕುತ್ತಿಗೆಯಲ್ಲಿ ಗಾಯದ ಗುರುತು ಪತ್ತೆ

    ಮುಂಬೈ: ಪುಣೆ ಬಸ್‌ನಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅರೆಸ್ಟ್‌ ಆಗುವ ಮುನ್ನ ಆರೋಪಿ ಆತ್ಮಹತ್ಯೆಗೆ ಯತ್ನಿಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

    ಆರೋಪಿ ಬಂಧನಕ್ಕೆ 13 ಪೊಲೀಸ್ ಟೀಂ, 500ಕ್ಕೂ ಹೆಚ್ಚು ಪೊಲೀಸರು ಡ್ರೋನ್, ಶ್ವಾನದಳ ಬಳಸಲಾಗಿತ್ತು. ಕೃತ್ಯದ ಬಳಿಕ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿ ಆರೋಪಿ ಮನೆಗೆ ಹೋಗಿದ್ದ. ಬಂಧನದ ವೇಳೆ ಕುತ್ತಿಗೆಯಲ್ಲಿ ಗಾಯದ ಗುರುತು ಪತ್ತೆಯಾಗಿದೆ.

    ಶಿರೂರ್‌ನ ಗುನಾತ್ ಗ್ರಾಮದ ನಿವಾಸಿ ದತ್ತಾತ್ರಾಯ ರಾಮದಾಸ್ ಗೇಡ್ (37) ಶುಕ್ರವಾರ ಮಧ್ಯಾಹ್ನ 1:10 ರ ಸುಮಾರಿಗೆ ಅರೆಸ್ಟ್‌ ಆಗಿದ್ದ. ಸಾಸೂನ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ಬಂಧನಕ್ಕೆ ಒಳಪಡಿಸಲಾಯಿತು.

    ಪುಣೆ ಸಿಟಿ ಪೊಲೀಸ್‌ ಆಯುಕ್ತ ಅಮಿತೇಶ್ ಕುಮಾರ್ ಅವರು, ಆರೋಪಿ ಕುತ್ತಿಗೆಯಲ್ಲಿ ಗಾಯದ ಗುರುತಿತ್ತು. ಪ್ರಾಥಮಿಕ ತನಿಖೆಯಲ್ಲಿ ಆತ ಆತ್ಮಹತ್ಯೆಗೆ ಯತ್ನಿಸಿರುವ ಶಂಕೆ ಮೂಡಿದೆ ಎಂದು ತಿಳಿಸಿದ್ದಾರೆ.

    ಆರೋಪಿಯು ಮನೆಯೊಂದಕ್ಕೆ ತೆರಳಿ ನೀರು ಮತ್ತು ಆಹಾರಕ್ಕಾಗಿ ಮನವಿ ಮಾಡಿಕೊಂಡಿದ್ದ. ಆ ಕುಟುಂಬ ಆರೋಪಿ ಬಂಧನಕ್ಕೆ ಪೊಲೀಸರಿಗೆ ಸಹಕಾರ ನೀಡಿದೆ.

  • `ಮಹಾ’ ಡಿಸಿಎಂ ಏಕನಾಥ್ ಶಿಂಧೆಗೆ ಬಾಂಬ್ ಬೆದರಿಕೆ – ಮುಂಬೈ ಪೊಲೀಸರಿಂದ ಇಬ್ಬರ ಬಂಧನ

    `ಮಹಾ’ ಡಿಸಿಎಂ ಏಕನಾಥ್ ಶಿಂಧೆಗೆ ಬಾಂಬ್ ಬೆದರಿಕೆ – ಮುಂಬೈ ಪೊಲೀಸರಿಂದ ಇಬ್ಬರ ಬಂಧನ

    ಮುಂಬೈ: ಮಹಾರಾಷ್ಟ್ರ (Maharashtra) ಉಪಮುಖ್ಯಮಂತ್ರಿ ಏಕನಾಥ್ ಶಿಂಧೆಗೆ (Eknath Shinde) ಬಾಂಬ್ ಬೆದರಿಕೆ (Bomb threat) ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಮುಂಬೈ ಪೊಲೀಸರು (Mumbai Police) ಬಂಧಿಸಿದ್ದಾರೆ.

    ಮಹಾರಾಷ್ಟ್ರದ ದೆಲ್ಗಾಂವ್ ಮಾಹಿ ಬುಲ್ದಾನಾದ ನಿವಾಸಿಗಳಾದ ಮಂಗೇಶ್ ವಾಯಲ್ (35), ಅಭಯ್ ಶಿಂಗ್ನೆ (22) ಬಂಧಿತ ಆರೋಪಿಗಳು. ಇಬ್ಬರನ್ನೂ ಬುಲ್ದಾನಾ ಪೊಲೀಸರು ಬಂಧಿಸಿದ್ದಾರೆ ಎಂದು ಡಿಸಿಪಿ ದತ್ತ ನಲವಾಡೆ ತಿಳಿಸಿದ್ದಾರೆ. ಇದನ್ನೂ ಓದಿ: ಡಿವೋರ್ಸ್‌ ಬಳಿಕ ಚಹಲ್‌ನಿಂದ 60 ಕೋಟಿ ಜೀವನಾಂಶ – ಧನಶ್ರೀ ಕುಟುಂಬ ಹೇಳಿದ್ದೇನು?

     

    ಏಕನಾಥ್ ಶಿಂಧೆ ಅವರ ಕಾರಿಗೆ ಬಾಂಬ್ ಹಾಕುವುದಾಗಿ ಗೋರೆಗಾಂವ್ ಮತ್ತು ಜೆ.ಜೆ ಮಾರ್ಗ್ ಪೊಲೀಸ್ ಠಾಣೆಗಳಿಗೆ ಇ-ಮೇಲ್ ಬೆದರಿಕೆ ಸಂದೇಶಗಳು ಬಂದಿದ್ದವು. ಮರಾಠಿ ಭಾಷೆಯಲ್ಲಿದ್ದ ಇ-ಮೇಲ್‌ಗಳನ್ನು ಬೇರೆ ಬೇರೆ ಹೆಸರುಗಳಲ್ಲಿ ಎರಡೂ ಪೊಲೀಸ್ ಠಾಣೆಗಳಿಗೆ ಆರೋಪಿಗಳು ಕಳುಹಿಸಿದ್ದರು. ಇ-ಮೇಲ್ ಐಪಿ ಅಡ್ರಸ್‌ಗಳನ್ನು ಟ್ರ್ಯಾಕ್‌ ಮಾಡಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಐಫೋನ್‌ 16ಇ ಬಿಡುಗಡೆ | ಬೆಲೆ ಎಷ್ಟು? ಬೇರೆ ದೇಶದಲ್ಲಿ ಎಷ್ಟು? ಭಾರತದಲ್ಲಿ ದುಬಾರಿ ಯಾಕೆ?

    ಅಪರಿಚಿತರಿಂದ ಬಂದ ಇ-ಮೇಲ್ ವಿರುದ್ಧ ಗೋರೆಗಾಂವ್ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್‌ಗಳ 351 (3) ಮತ್ತು 353 (2) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ʻಲೇಡಿ ಡಾನ್‌ʼ ಜೋಯಾ ಅರೆಸ್ಟ್‌ – ಈಕೆ ಹಿನ್ನೆಲೆ ಕಂಡು ಪೊಲೀಸರೇ ಶಾಕ್‌

    ಶಿಂಧೆ ಅವರಿಗೆ ಬಂದಿರುವ ಬೆದರಿಕೆಯು ದೇಶದ ಕಾನೂನು ಮತ್ತು ಸುವ್ಯವಸ್ಥೆಯ ಸ್ಥಿತಿಯ ಬಗ್ಗೆ ಜನರಲ್ಲಿ ಅನುಮಾನಗಳನ್ನು ಹುಟ್ಟುಹಾಕಿದೆ ಎಂದು ಕಾಂಗ್ರೆಸ್ ಶಾಸಕ ಸತೇಜ್ ಪಾಟೀಲ್ ಟೀಕಿಸಿದ್ದಾರೆ. ಇದನ್ನೂ ಓದಿ: ಹೃದಯ ಕುಂಡದಲ್ಲಿ ಹೂಗಳ ಜೋಡಿಸುವ ಅವಳ ಮಾತುಗಳು ನಂಗಿಷ್ಟ!

  • ʻಮಹಾʼ ಡಿಸಿಎಂ ಏಕನಾಥ್ ಶಿಂಧೆಗೆ ಬಾಂಬ್ ಬೆದರಿಕೆ – ಮುಂಬೈ ಪೊಲೀಸರಿಂದ ತನಿಖೆ ಶುರು

    ʻಮಹಾʼ ಡಿಸಿಎಂ ಏಕನಾಥ್ ಶಿಂಧೆಗೆ ಬಾಂಬ್ ಬೆದರಿಕೆ – ಮುಂಬೈ ಪೊಲೀಸರಿಂದ ತನಿಖೆ ಶುರು

    ಮುಂಬೈ: ಮಹಾರಾಷ್ಟ್ರದ ಡಿಸಿಎಂ ಏಕನಾಥ್ ಶಿಂಧೆ (Eknath Shinde) ಅವರ ಕಾರನ್ನು ಸ್ಫೋಟಿಸುವುದಾಗಿ ಅಪರಿಚಿತ ವ್ಯಕ್ತಿಯೊಬ್ಬ ಮುಂಬೈ ಪೊಲೀಸರಿಗೆ (Mumbai Police) ಇಮೇಲ್‌ ಮೂಲಕ ಬೆದರಿಕೆ ಸಂದೇಶ ಕಳುಹಿಸಿದ್ದಾನೆ ಎಂದು ವರದಿಯಾಗಿದೆ.

    ಗೋರೆಗಾಂವ್, ಜೆ.ಜೆ ಮಾರ್ಗ್ ಪೊಲೀಸ್ ಠಾಣೆ ಮತ್ತು ರಾಜ್ಯ ಸರ್ಕಾರದ ಪ್ರಧಾನ ಕಚೇರಿಯಾದ ಮಂತ್ರಾಲಯದ ನಿಯಂತ್ರಣ ಕೊಠಡಿಗೆ ಬೆದರಿಕೆ ಸಂದೇಶಗಳು ಬಂದಿವೆ. ಈ ಬೆನ್ನಲ್ಲೇ ಪ್ರಕರಣ ದಾಖಲಿಸಿಕೊಂಡಿರುವ ಮುಂಬೈ ಪೊಲೀಸರು ಇಮೇಲ್‌ ವಿಳಾಸ ಪತ್ತೆ ಹೆಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ. ಇದನ್ನೂ ಓದಿ: ಪನಾಮದಲ್ಲಿ ಬಂಧಿಯಾಗಿರುವ ಭಾರತೀಯ ವಲಸಿಗರು ಸೇಫ್‌ – ರಾಯಭಾರ ಕಚೇರಿ ಮಾಹಿತಿ

    ಶಿಂಧೆ ಅವರ ಕಾರನ್ನು ಸ್ಫೋಟಿಸುವುದಾಗಿ ಅಪರಿಚಿತ ವ್ಯಕ್ತಿ ಬೆದರಿಕೆ (Bomb Threat) ಹಾಕಿದ್ದಾನೆ. ಈ ಹಿನ್ನೆಲೆ ಏಕನಾಥ್ ಶಿಂಧೆ ಅವರ ನಿವಾಸದಲ್ಲಿ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಅಲ್ಲದೇ ಸಾರ್ವಜನಿಕರು ಎಚ್ಚರಿಕೆಯಿಂದಿರುವಂತೆ ಪೊಲೀಸರು ಸೂಚಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್‌ ಸಮಸ್ಯೆ ಪರಿಹಾರಕ್ಕೆ AI ಮೊರೆ – ಏನಿದು VAC?

  • ‌ಕಪಿಲ್‌ ಶರ್ಮಾ ಸೇರಿ ನಾಲ್ವರು ಬಾಲಿವುಡ್‌ ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ

    ‌ಕಪಿಲ್‌ ಶರ್ಮಾ ಸೇರಿ ನಾಲ್ವರು ಬಾಲಿವುಡ್‌ ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ

    – ಬೆದರಿಕೆ ಇಮೇಲ್‌ ವಿಳಾಸ ಪಾಕಿಸ್ತಾನದಲ್ಲಿ ಪತ್ತೆ; ಕೇಸ್‌ ದಾಖಲು

    ಮುಂಬೈ: ನಟ ಸೈಫ್‌ ಅಲಿ ಖಾನ್‌ಗೆ ಚಾಕು ಇರಿತ ಪ್ರಕರಣದ ಬೆನ್ನಲ್ಲೇ ಬಾಲಿವುಡ್‌ ತಾರೆಯರಿಗೆ ಸರಣಿ ಜೀವ ಬೆದರಿಕೆ ಬಂದಿದೆ. ಹಾಸ್ಯನಟ ಕಪಿಲ್ ಶರ್ಮಾ (Kapil Sharma), ನಟ ರಾಜ್‌ಪಾಲ್ ಯಾದವ್, ನೃತ್ಯ ನಿರ್ದೇಶಕ ರೆಮೋ ಡಿಸೋಜಾ ಮತ್ತು ಗಾಯಕಿ – ಹಾಸ್ಯ ನಟಿ ಸುಗಂಧ ಮಿಶ್ರಾ (Sugandha Mishr) ಪಾಕಿಸ್ತಾನ ಮೂಲದ ಇ-ಮೇಲ್‌ನಿಂದ ಜೀವ ಬೆದರಿಕೆ ಬಂದಿರುವುದಾಗಿ ಮುಂಬೈ ಪೊಲೀಸರು ತಿಳಿಸಿದ್ದಾರೆ.

    ಈ ಕುರಿತು ಸೆಲೆಬ್ರಿಟಿಗಳು ನೀಡಿದ ದೂರಿನ ಮೇರೆಗೆ ಮುಂಬೈನ ಅಂಬೋಲಿ ಮತ್ತು ಓಶಿವಾರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಈ ಸಂಬಂಧ ತನಿಖೆ ಕೈಗೊಂಡಿದ್ದರೆ. ಇದನ್ನೂ ಓದಿ: ನಿವೃತ್ತಿ ಬಗ್ಗೆ ಮಾತನಾಡಿದ ರಶ್ಮಿಕಾ ಮಂದಣ್ಣ- ಶ್ರೀವಲ್ಲಿ ಅಭಿಮಾನಿಗಳು ಶಾಕ್

    ಇ-ಮೇಲ್‌ ಬೇದರಿಕೆ ಸಂದೇಶ ಏನಿದೆ?
    ನಾವು ನಿಮ್ಮ ಇತ್ತೀಚಿನ ಎಲ್ಲಾ ಚಟುವಟಿಕೆಗಳನ್ನು ಗಮನಿಸುತ್ತಿದ್ದೇವೆ. ಇದು ಪ್ರಚಾರದ ಸ್ಟಂಟ್‌ ಅಲ್ಲ, ನಿಮಗೆ ಕಿರುಕುಳ ನೀಡುವ ಪ್ರಯತ್ನವೂ ಅಲ್ಲ. ಈ ಸಂದೇಶವನ್ನ ಅತ್ಯಂತ ಗಂಭೀರವಾಗಿ ಪರಿಗಣಿಸಿ. ನಾವು ಹೇಳಿದಂತೆ ಕೇಳದಿದ್ದರೆ, ನಿಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಮೇಲೂ ತೀವ್ರ ಪರಿಣಾಮ ಬೀರಬಹುದು. 8 ಗಂಟೆಗಳ ಒಳಗೆ ಈ ಸಂದೇಶಕ್ಕೆ ಪ್ರತಿಕ್ರಿಯಿಸಿ ಅಂತ ಇ-ಮೇಲ್‌ನಲ್ಲಿ ಬೆದರಿಕೆ (E-Mail Threats) ಬಂದಿದೆ. ಇದನ್ನೂ ಓದಿ: ವಿಟ್ಲ ಪಂಚಲಿಂಗೇಶ್ವರ ಜಾತ್ರೆಯಲ್ಲಿ ದೇವರ ಪ್ರಭಾವಳಿಗೆ ಬಡಿದ ಡ್ರೋಣ್‌

    ಬೆದರಿಕೆ ಬಂದ ಇಮೇಲ್‌ ವಿಳಾಸ ಪಾಕಿಸ್ತಾನದಲ್ಲಿ ಪತ್ತೆಯಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿರುವುದಾಗಿ ಮುಂಬೈ ಪೊಲೀಸ್‌ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಸೈಫ್‌ ಅಲಿ ಖಾನ್‌ಗೆ ಇರಿದದ್ದು ನಿಜವೇ ಅಥವಾ ನಟಿಸ್ತಿದ್ದಾರೆಯೇ? – ಬಿಜೆಪಿ ಸಚಿವ ರಾಣೆ ಲೇವಡಿ

  • ಸೈಫ್‌ ಮೇಲೆ ಹಲ್ಲೆ: ಅಂತಾರಾಷ್ಟ್ರೀಯ ಪಿತೂರಿ ಶಂಕೆಯನ್ನು ತಳ್ಳಿಹಾಕುವಂತಿಲ್ಲ – ಆರೋಪಿ 5 ದಿನ ಪೊಲೀಸ್‌ ಕಸ್ಟಡಿಗೆ

    ಸೈಫ್‌ ಮೇಲೆ ಹಲ್ಲೆ: ಅಂತಾರಾಷ್ಟ್ರೀಯ ಪಿತೂರಿ ಶಂಕೆಯನ್ನು ತಳ್ಳಿಹಾಕುವಂತಿಲ್ಲ – ಆರೋಪಿ 5 ದಿನ ಪೊಲೀಸ್‌ ಕಸ್ಟಡಿಗೆ

    ಮುಂಬೈ: ಸೈಫ್‌ ಅಲಿಖಾನ್‌ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾದ ಆರೋಪಿಯನ್ನು ಮುಂಬೈ ಕೋರ್ಟ್‌ 5 ದಿನ ಪೊಲೀಸ್‌ ಕಸ್ಟಡಿಗೆ ನೀಡಿದೆ.

    ವಿಚಾರಣೆ ಸಂದರ್ಭದಲ್ಲಿ ಈ ಕೃತ್ಯದ ಹಿಂದೆ ಅಂತಾರಾಷ್ಟ್ರೀಯ ಪಿತೂರಿ ಶಂಕೆಯನ್ನು ತಳ್ಳಿಹಾಕುವಂತಿಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

    ಸೈಫ್‌ ಅಲಿಖಾನ್‌ ಮನೆಯಲ್ಲಿ ನಡೆದ ಕಳ್ಳತನ (Theft) ಯತ್ನಕ್ಕೆ ಸಂಬಂಧಿಸಿದಂತೆ  ಆರೋಪಿ  ಮೊಹಮ್ಮದ್ ಸರಿಫುಲ್ ಇಸ್ಲಾಂ ಶೆಹಜಾದ್‌ನನ್ನು (Mohammad Sariful Islam Shehzad)  ಥಾಣೆಯಲ್ಲಿ ಬಂಧಿಸಲಾಗಿತ್ತು.

    ಈ ಆರೋಪಿ ಬಾಂಗ್ಲಾದೇಶದವನಾಗಿರಬಹುದು ಎಂದು ತನಿಖೆಯಿಂದ ತಿಳಿದುಬಂದಿದೆ. ಅವನ ಬಳಿ ಯಾವುದೇ ಭಾರತೀಯ ದಾಖಲೆಗಳಿಲ್ಲ. ಅವನು ಬಾಂಗ್ಲಾದೇಶದವನೆಂದು ನಾವು ಶಂಕಿಸಿದ್ದೇವೆ, ನಾವು ತನಿಖೆ ನಡೆಸುತ್ತಿದ್ದೇವೆ ಮತ್ತು ಅವನ ವಿರುದ್ಧದ ಪ್ರಕರಣಕ್ಕೆ ಪಾಸ್‌ಪೋರ್ಟ್ ಕಾಯ್ದೆಯ ಆರೋಪಗಳನ್ನು ಸೇರಿಸಿದ್ದೇವೆ ಎಂದು ಡಿಸಿಪಿ ದೀಕ್ಷಿತ್ ಗೆಡಮ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.

    ಆರೋಪಿ ಬಾಂಗ್ಲಾದೇಶದವನೆಂದು ಸೂಚಿಸುವ ಕೆಲವು ವಸ್ತುಗಳನ್ನು ಆತನಿಂದ ವಶಪಡಿಸಿಕೊಂಡಿದ್ದೇವೆ. ಅವನು ಭಾರತಕ್ಕೆ ಅಕ್ರಮವಾಗಿ ಬಂದು ತನ್ನ ಹೆಸರನ್ನು ಬಿಜೋಯ್ ದಾಸ್ ಎಂದು ಬದಲಾಯಿಸಿಕೊಂಡಿದ್ದಾನೆ. ಸುಮಾರು ನಾಲ್ಕು ತಿಂಗಳಿನಿಂದ ಮುಂಬೈ ಸುತ್ತಮುತ್ತಲ ಪ್ರದೇಶದಲ್ಲಿ ವಾಸಿಸುತ್ತಿದ್ದ. ನಂತರ ಮನೆಗೆಲಸದ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ಮೊದಲ ಬಾರಿಗೆ ಸೈಫ್‌ ನಿವಾಸ ಪ್ರವೇಶಿಸಿದ್ದಾನೆ. ದರೋಡೆ ಮಾಡುವ ಉದ್ದೇಶದಿಂದಲೇ ಆತ ಮನೆಗೆ ಪ್ರವೇಶಿಸಿದ್ದ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಕಸ್ಟಡಿಗೆ ಪಡೆಯಲಾಗುವುದು. ನಂತರ ಹೆಚ್ಚಿನ ತನಿಖೆ ನಡೆಯಲಿದೆ ಎಂದು ಹೇಳಿದರು.

    ಮೊಹಮ್ಮದ್ ಸರಿಫುಲ್ ಇಸ್ಲಾಂ ಶೆಹಜಾದ್ ವಿಜಯ್ ದಾಸ್, ಬಿಜೋಯ್ ದಾಸ್ ಮತ್ತು ಮೊಹಮ್ಮದ್ ಇಲಿಯಾಸ್ ಸೇರಿದಂತೆ ಹಲವು ಹೆಸರುಳನ್ನು ಇಟ್ಟುಕೊಂಡು ಓಡಾಡುತ್ತಿದ್ದ.

  • ಸೈಫ್‌ ಮೇಲೆ ಹಲ್ಲೆ ಎಸಗಿದ ದಾಳಿಕೋರ ಬಾಂಗ್ಲಾ ಪ್ರಜೆ:  ಮುಂಬೈ ಪೊಲೀಸ್‌

    ಸೈಫ್‌ ಮೇಲೆ ಹಲ್ಲೆ ಎಸಗಿದ ದಾಳಿಕೋರ ಬಾಂಗ್ಲಾ ಪ್ರಜೆ: ಮುಂಬೈ ಪೊಲೀಸ್‌

    ಮುಂಬೈ: ನಟ ಸೈಫ್ ಅಲಿ ಖಾನ್ (Saif Ali Khan) ಅವರ ಮುಂಬೈ ಮನೆಗೆ ನುಗ್ಗಿ ನಟನಿಗೆ ಆರು ಬಾರಿ ಇರಿದ ಹಲ್ಲೆಕೋರನನ್ನು ಬಂಧಿಸಲಾಗಿದ್ದು, ಆತ 5-6 ತಿಂಗಳ ಹಿಂದೆ ಬಾಂಗ್ಲಾದೇಶದಿಂದ (Bangladesh) ಅಕ್ರಮವಾಗಿ ಭಾರತಕ್ಕೆ ಬಂದಿದ್ದಾನೆ ಎಂದು ಮುಂಬೈ ಪೊಲೀಸರು (Mumbai Police) ಹೇಳಿದ್ದಾರೆ.

    ಇಂದು ಬೆಳಿಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಪಿ ದೀಕ್ಷಿತ್ ಗೆಡಮ್, ಸೈಫ್‌ ಅಲಿಖಾನ್‌ ಮನೆಯಲ್ಲಿ ನಡೆದ ಕಳ್ಳತನ (Theft) ಯತ್ನಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಥಾಣೆಯಲ್ಲಿ ಬಂಧಿಸಲಾಗಿದೆ. ಆರೋಪಿಯನ್ನು ಮೊಹಮ್ಮದ್ ಸರಿಫುಲ್ ಇಸ್ಲಾಂ ಶೆಹಜಾದ್ (Mohammad Sariful Islam Shehzad) ಎಂದು ಗುರುತಿಸಲಾಗಿದೆ ಎಂದರು.

    ಈ ಆರೋಪಿ ಬಾಂಗ್ಲಾದೇಶದವನಾಗಿರಬಹುದು ಎಂದು ತನಿಖೆಯಿಂದ ತಿಳಿದುಬಂದಿದೆ. ಅವನ ಬಳಿ ಯಾವುದೇ ಭಾರತೀಯ ದಾಖಲೆಗಳಿಲ್ಲ. ಅವನು ಬಾಂಗ್ಲಾದೇಶದವನೆಂದು ನಾವು ಶಂಕಿಸಿದ್ದೇವೆ, ನಾವು ತನಿಖೆ ನಡೆಸುತ್ತಿದ್ದೇವೆ ಮತ್ತು ಅವನ ವಿರುದ್ಧದ ಪ್ರಕರಣಕ್ಕೆ ಪಾಸ್‌ಪೋರ್ಟ್ ಕಾಯ್ದೆಯ ಆರೋಪಗಳನ್ನು ಸೇರಿಸಿದ್ದೇವೆ ಎಂದು ತಿಳಿಸಿದರು.

    ಆರೋಪಿ ಬಾಂಗ್ಲಾದೇಶದವನೆಂದು ಸೂಚಿಸುವ ಕೆಲವು ವಸ್ತುಗಳನ್ನು ಆತನಿಂದ ವಶಪಡಿಸಿಕೊಂಡಿದ್ದೇವೆ. ಅವನು ಭಾರತಕ್ಕೆ ಅಕ್ರಮವಾಗಿ ಬಂದು ತನ್ನ ಹೆಸರನ್ನು ಬಿಜೋಯ್ ದಾಸ್ ಎಂದು ಬದಲಾಯಿಸಿಕೊಂಡಿದ್ದಾನೆ. ಸುಮಾರು ನಾಲ್ಕು ತಿಂಗಳಿನಿಂದ ಮುಂಬೈ ಸುತ್ತಮುತ್ತಲ ಪ್ರದೇಶದಲ್ಲಿ ವಾಸಿಸುತ್ತಿದ್ದ. ನಂತರ ಮನೆಗೆಲಸದ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ಮೊದಲ ಬಾರಿಗೆ ಸೈಫ್‌ ನಿವಾಸ ಪ್ರವೇಶಿಸಿದ್ದಾನೆ. ದರೋಡೆ ಮಾಡುವ ಉದ್ದೇಶದಿಂದಲೇ ಆತ ಮನೆಗೆ ಪ್ರವೇಶಿಸಿದ್ದ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಕಸ್ಟಡಿಗೆ ಪಡೆಯಲಾಗುವುದು. ನಂತರ ಹೆಚ್ಚಿನ ತನಿಖೆ ನಡೆಯಲಿದೆ ಎಂದು ಹೇಳಿದರು.

    ಮೊಹಮ್ಮದ್ ಸರಿಫುಲ್ ಇಸ್ಲಾಂ ಶೆಹಜಾದ್ ವಿಜಯ್ ದಾಸ್, ಬಿಜೋಯ್ ದಾಸ್ ಮತ್ತು ಮೊಹಮ್ಮದ್ ಇಲಿಯಾಸ್ ಸೇರಿದಂತೆ ಹಲವು ಹೆಸರುಳನ್ನು ಇಟ್ಟುಕೊಂಡು ಓಡಾಡುತ್ತಿದ್ದ.

  • ಬಾಬಾ ಸಿದ್ದಿಕಿ ಹತ್ಯೆ ಕೇಸ್‌ – 4,590 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ ಮುಂಬೈ ಪೊಲೀಸ್

    ಬಾಬಾ ಸಿದ್ದಿಕಿ ಹತ್ಯೆ ಕೇಸ್‌ – 4,590 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ ಮುಂಬೈ ಪೊಲೀಸ್

    ಮುಂಬೈ: ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ (Baba Siddique) ಹತ್ಯೆ ಪ್ರಕರಣದ ಸಂಬಂಧ ಮುಂಬೈ ಪೊಲೀಸರ ತನಿಖಾ ತಂಡ ವಿಶೇಷ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (MCOCA) ನ್ಯಾಯಾಲಯಕ್ಕೆ ಸೋಮವಾರ 4,590 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದೆ.

    ತನಿಖೆ ಪೂರ್ಣಗೊಳಿಸಿದ ಮುಂಬೈ ಪೊಲೀಸರ ತಂಡ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌, ಆತನ ಸಹೋದರ ಅನ್ಮೋಲ್‌ ಬಿಷ್ಣೋಯ್‌ ಸೇರಿದಂತೆ ಒಟ್ಟು 26 ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ. ಇದನ್ನೂ ಓದಿ: ಮಕ್ಕಳಲ್ಲೇ ಪತ್ತೆಯಾದ ವೈರಸ್ – ಹೆಚ್‌ಎಂಪಿವಿ ಹಾನಿಕಾರಕವಲ್ಲ, ಭಯ ಪಡದಿರಿ… ನಿರ್ಲಕ್ಷ್ಯವೂ ಮಾಡದಿರಿ.!

    ಶುಭಂ ಲೋಂಕರ್, ಯಾಸಿನ್ ಸಿದ್ದಿಕ್ ಮತ್ತು ಅನ್ಮೋಲ್ ಬಿಷ್ಣೋಯ್ ಪ್ರಕರಣದ ಮಾಸ್ಟರ್‌ ಮೈಂಡ್‌ಗಳೆಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ಮುಂಬೈನಲ್ಲಿ ತಮ್ಮ ಪ್ರಾಬಲ್ಯ ಸ್ಥಾಪಿಸಲು ಬಿಷ್ಣೋಯ್ ಗ್ಯಾಂಗ್ ಹತ್ಯೆಗೆ ಸಂಚು ರೂಪಿಸಿತ್ತು ಎಂದು ಹೇಳಲಾಗಿದೆ. ಇದನ್ನೂ ಓದಿ: ಚಿಕ್ಕಮಗಳೂರು | ಎಸ್ಟೇಟ್ ಮ್ಯಾನೇಜರ್ ಮೇಲೆ ಅಕ್ರಮ ಬಾಂಗ್ಲಾ ವಲಸಿಗರಿಂದ ಕಲ್ಲು ತೂರಾಟ

    2024ರ ಅಕ್ಟೋಬರ್‌ 12 ರಂದು, ಮುಂಬೈನ ಬಾಂದ್ರಾದಲ್ಲಿರುವ ಪುತ್ರ ಶಾಸಕ ಜೀಶನ್ ಸಿದ್ದಿಕಿ ಅವರ ಕಚೇರಿಯ ಹೊರಗೆ ಬಾಬಾ ಸಿದ್ದಿಕಿ ಅವರನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿತ್ತು. ಸಿದ್ದಿಕಿ ಹತ್ಯೆಗೆ 9.9 ಎಂಎಂ ಪಿಸ್ತೂಲ್‌ ಬಳಸಲಾಗಿತ್ತು, ಒಟ್ಟು 6 ಸುತ್ತುಗಳಲ್ಲಿ ಗುಂಡು ಹಾರಿಸಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಯುಪಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ಬಳಿಕ ಪ್ರಕರಣದ ತನಿಖೆನ್ನು ಮುಂಬೈ ಪೊಲೀಸರು ಕೈಗೆತ್ತಿಕೊಂಡಿದ್ದರು

    ವಿಚಾರಣೆ ವೇಳೆ ಆರೋಪಿ ಶಿವಕುಮಾರ್‌, ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ ಜೊತೆ ಸಂಬಂಧ ಇದೆ. ಲಾರೆನ್ಸ್ ಬಿಷ್ಣೋಯ್‌ನ ಸಹೋದರ ಅನ್ಮೋಲ್ ಬಿಷ್ಣೋಯ್‌ನ ಸೂಚನೆಯ ಮೇರೆಗೆ ಕೊಲೆ ಮಾಡಲಾಗಿದೆ. ಲಾರೆನ್ಸ್‌ನ ಆಪ್ತ ಸಹಾಯಕನಾಗಿದ್ದ ಶುಭಂ ಲೋಂಕರ್ ಎಂಬುವವನು ಅನ್ಮೋಲ್ ಬಿಷ್ಣೋಯ್ ಜೊತೆಗೆ ಸಂಪರ್ಕ ಸಾಧಿಸಲು ಸಕರಿಸಿದ್ದ ಎಂಬುದಾಗಿಯೂ ಒಪ್ಪಿಕೊಂಡಿದ್ದನು.

  • ಬಾಂಬ್‌ ಸ್ಫೋಟಿಸಿ ಮೋದಿ ಹತ್ಯೆ ಮಾಡುವುದಾಗಿ ಮುಂಬೈ ಪೊಲೀಸರಿಗೆ ಬೆದರಿಕೆ

    ಬಾಂಬ್‌ ಸ್ಫೋಟಿಸಿ ಮೋದಿ ಹತ್ಯೆ ಮಾಡುವುದಾಗಿ ಮುಂಬೈ ಪೊಲೀಸರಿಗೆ ಬೆದರಿಕೆ

    ಮುಂಬೈ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಹತ್ಯೆ ಮಾಡುವುದಾಗಿ ಮುಂಬೈ ಪೊಲೀಸರಿಗೆ ಶನಿವಾರ ಬೆದರಿಕೆ ಸಂದೇಶ (Threatening Massage) ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಇಂದು ಬೆಳಗ್ಗೆ ಮುಂಬೈ ಟ್ರಾಫಿಕ್‌ ಪೊಲೀಸರ ವಾಟ್ಸಪ್‌ ಸಹಾಯವಾಣಿಗೆ (HelpLine) ಬೆದರಿಕೆ ಸಂದೇಶ ಬಂದಿದೆ. ಅದರಲ್ಲಿ ಇಬ್ಬರು ಐಎಸ್‌ಐ ಏಜೆಂಟ್‌ಗಳು ಪ್ರಧಾನಿ ಮೋದಿಯನ್ನು ಗುರಿಯಾಗಿಸಿಕೊಂಡು ಬಾಂಬ್‌ ಸ್ಫೋಟ ನಡೆಸುವ ಸಂಚು ನಡೆಸಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು ಎಂದು ಸಂಬಂಧಪಟ್ಟ ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: Pink Ball Test | ಭಾರತಕ್ಕೆ ಮತ್ತೆ ಟ್ರಾವಿಸ್‌ ʻಹೆಡ್ಡೇಕ್‌ʼ – ಆಸೀಸ್‌ಗೆ 29 ರನ್‌ಗಳ ಮುನ್ನಡೆ

    ಸಂದೇಶ ಕಳುಹಿಸಿದ ಮೊಬೈಲ್‌ ಸಂಖ್ಯೆಯ ಲೊಕೆಶನ್‌ ರಾಜಸ್ಥಾನದ ಅಜ್ಮೀರ್‌ನಲ್ಲಿ ಪತ್ತೆಯಾಗಿದೆ. ಆರೋಪಿಯನ್ನ ಪತ್ತೆ ಮಾಡಲು ತಕ್ಷಣ ಪೊಲೀಸ್ ತಂಡವನ್ನು ಕಳುಹಿಸಲಾಗಿದೆ. ಸದ್ಯ ಘಟನೆ ಸಂಬಂಧ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ. ಇದನ್ನೂ ಓದಿ: ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಬೈಕ್ – ಅಂಜನಾದ್ರಿ ಬೆಟ್ಟಕ್ಕೆ ಹೊರಟಿದ್ದ ಸವಾರ ಸಾವು

    ಮುಂಬೈ ಟ್ರಾಫಿಕ್ ಪೊಲೀಸರ ಸಹಾಯವಾಣಿಗೆ ಈ ಹಿಂದೆ ಹಲವು ಬಾರಿ ಹುಸಿ ಬೆದರಿಕೆ ಸಂದೇಶಗಳು ಬಂದಿದ್ದವು. ಇದನ್ನೂ ಓದಿ: ಶಿಗ್ಗಾಂವಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು – ಭಾನುವಾರ ಕ್ಷೇತ್ರದ ಮತದಾರರಿಗೆ ಕೃತಜ್ಞತಾ ಸಮಾವೇಶ

  • ಮೋದಿ ಮನೆ ಹೊರಗಿನ ನಾಯಿಯಂತೆ ಚುನಾವಣಾ ಆಯೋಗ ವರ್ತಿಸುತ್ತಿದೆ: ನಾಲಿಗೆ ಹರಿಬಿಟ್ಟ ಕಾಂಗ್ರೆಸ್‌ ಎಂಎಲ್‌ಸಿ

    ಮೋದಿ ಮನೆ ಹೊರಗಿನ ನಾಯಿಯಂತೆ ಚುನಾವಣಾ ಆಯೋಗ ವರ್ತಿಸುತ್ತಿದೆ: ನಾಲಿಗೆ ಹರಿಬಿಟ್ಟ ಕಾಂಗ್ರೆಸ್‌ ಎಂಎಲ್‌ಸಿ

    ಮುಂಬೈ: ಮಹಾರಾಷ್ಟ್ರ ಕಾಂಗ್ರೆಸ್ ಎಂಎಲ್‌ಸಿ ಅಶೋಕ್‌ ಎ ಜಗತಾಪ್‌ ಅಲಿಯಾಸ್‌ ಭಾಯ್ ಜಗತಾಪ್ ಚುನಾವಣಾ ಆಯೋಗದ (Election Commission) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದು, ವಿವಾದಕ್ಕೆ ಗುರಿಯಾಗಿದ್ದಾರೆ. ʻಚುನಾವಣಾ ಆಯೋಗ ಮೋದಿ ಮನೆಯ ಹೊರಗಿನ ನಾಯಿಯಂತೆ ಚುನಾವಣಾ ಆಯೋಗ ವರ್ತಿಸುತ್ತಿದೆ ಎಂದು ಜಗತಾಪ್ (Bhai Jagtap) ನಾಲಿಗೆ ಹರಿಬಿಟ್ಟಿದ್ದಾರೆ.

    ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶದ (Maharashtra Assembly Elections Result) ಕುರಿತು ಮಾತನಾಡಿದ ಭಾಯ್‌ ಜಗತಾಪ್‌, ಚುನಾವಣಾ ಆಯೋಗದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಅಲ್ಲದೇ ಹೇಳಿಕೆಗೆ ಕ್ಷಮೆ ಯಾಚಿಸಲ್ಲ ಎಂದು ಮೊಂಡುತನ ತೋರಿದ್ದಾರೆ. ಇದನ್ನೂ ಓದಿ: ನಮ್ಮ ಮಠಕ್ಕೂ ಮುಸ್ಲಿಂ ಭಕ್ತರಿದ್ದಾರೆ, ನಾನೂ ಮುಸ್ಲಿಂ ಮದುವೆಗಳಿಗೆ ಹೋಗ್ತಿನಿ – ಚಂದ್ರಶೇಖರ ಸ್ವಾಮೀಜಿ ಯೂಟರ್ನ್‌

    ನನ್ನ ಹೇಳಿಕೆಗೆ ನಾನು ಸ್ವಲ್ಪವೂ ಕ್ಷಮೆಯಾಚಿಸಲ್ಲ. ಆಯೋಗವು ಮೋದಿ ಮತ್ತು ಇತರ ಮಂತ್ರಿಗಳ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದರೆ ನಾನು ಹೇಳಿದ್ದು ಸರಿ ಎಂದಿದ್ದಾರೆ. ಚುನಾವಣಾ ಆಯೋಗ ಇರುವುದು ದೇಶದ ಪ್ರಜಾಪ್ರಭುತ್ವ ಮತ್ತಷ್ಟು ಬಲಪಡಿಸಲು ಹೊರತು ಯಾರ ಸೇವೆ ಮಾಡಲು ಅಲ್ಲ. ಹಾಗಾಗಿ ನಾನು ಕ್ಷಮೆಕೇಳಲ್ಲ ಎಂದಿದ್ದಾರೆ. ಇದನ್ನೂ ಓದಿ: Cyclone Fengal | ಚೆನ್ನೈ ಏರ್‌ಪೋರ್ಟ್‌ನಿಂದ 13 ವಿಮಾನಗಳ ಯಾನ ರದ್ದು

    ಚುನಾವಣಾ ಆಯೋಗ ಇರೋದು ಪ್ರಜಾಪ್ರಭುತ್ವ ಬಲಪಡಿಸಲು, ದುರದೃಷ್ಟವಶಾತ್ ಅವುಗಳನ್ನು ದುರುಪಯೋಗ ಪಡಿಸಿಕೊಳ್ಳುವಂತಹ ಕೆಲಸ ಮಹಾರಾಷ್ಟ್ರದಲ್ಲಿ ಮಾತ್ರವಲ್ಲದೇ ಇಡೀ ದೇಶದಲ್ಲಿ ನಡೆಯುತ್ತಿವೆ. ಮಹಾರಾಷ್ಟ್ರದಲ್ಲಿ ರಾಜ್ಯದ ಜನರು ಮಹಾಯುತಿ ಆಡಳಿತವನ್ನು ಸಂಪೂರ್ಣವಾಗಿ ವಿರೋಧಿಸಿದ್ದರು. ಆದ್ರೂ ಜಯ ಸಿಕ್ಕಿದೆ ಅಂದ್ರೆ, ಇದರ ಸಂಪೂರ್ಣ ಕ್ರೆಡಿಟ್ ಇವಿಎಂಗಳಿಗೆ ಸಲ್ಲುತ್ತದೆ. ಇಲ್ಲಿ ಇವಿಎಂಗಳನ್ನು ತಿರುಚಲಾಗಿದೆ, ಕೆಲವು ಸ್ಥಳಗಳಲ್ಲಿ ಹ್ಯಾಕ್ ಮಾಡಲಾಗಿದೆ ಎಂದು ಒತ್ತಿ ಹೇಳಿದ್ದಾರೆ.

    ಮುಂಬೈ ಪೊಲೀಸರಿಗೆ ಬಿಜೆಪಿ ದೂರು:
    ಚುನಾವಣಾ ಆಯೋಗದ ವಿರುದ್ಧ ನಾಲಿಗೆ ಹರಿಬಿಟ್ಟ ಜಗತಾಪ್‌ ವಿರುದ್ಧ ಬಿಜೆಪಿ ನಾಯಕರು ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ. ಚುನಾವಣಾ ಆಯೋಗಕ್ಕೂ ಪತ್ರಬರೆದಿದ್ದಾರೆ. ಇದನ್ನೂ ಓದಿ: ವಾರಣಾಸಿ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಬಳಿ ಆಕಸ್ಮಿಕ ಬೆಂಕಿ – 200 ದ್ವಿಚಕ್ರ ವಾಹನಗಳು ಭಸ್ಮ

    ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಮಾತನಾಡಿ, ಸಾಂವಿಧಾನಿಕ ಸಂಸ್ಥೆಯನ್ನು ಅವಮಾನಿಸುವುದು, ಕಾಂಗ್ರೆಸ್‌ಗೆ ಅಭ್ಯಾಸವಾಗಿಬಿಟ್ಟಿದೆ. ಈಗ ಅವರು ಚುನಾವಣಾ ಆಯೋಗವನ್ನ ಅನುಮಾನಿಸುತ್ತಿದ್ದಾರೆ. ಜಾರ್ಖಂಡ್, ಜಮ್ಮು-ಕಾಶ್ಮೀರ, ವಯನಾಡ್, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಚುನಾವಣೆ ನಡೆದಾಗ ಚುನಾವಣಾ ಆಯೋಗ ಚೆನ್ನಾಗಿತ್ತು. ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಮಾತ್ರ ಚೆನ್ನಾಗಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.