Tag: mumbai karnataka

  • ಮಹಾರಾಷ್ಟ್ರದಲ್ಲಿ ಭಾರೀ ಮಳೆ- ಮುಂಬೈ ಕರ್ನಾಟಕದಲ್ಲಿ ಜನಜೀವನ ಅಸ್ತವ್ಯಸ್ಥ

    ಮಹಾರಾಷ್ಟ್ರದಲ್ಲಿ ಭಾರೀ ಮಳೆ- ಮುಂಬೈ ಕರ್ನಾಟಕದಲ್ಲಿ ಜನಜೀವನ ಅಸ್ತವ್ಯಸ್ಥ

    ಬೆಳಗಾವಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಮುಂಬೈ ಕರ್ನಾಟಕದಲ್ಲಿ ಜನಜೀವನ ಅಸ್ತವಸ್ಥವಾಗಿದೆ.

    ಗಡಿ ಜಿಲ್ಲೆಯ ಬಹುತೇಕ ನದಿಗಳು ತುಂಬಿ ಹರಿಯತ್ತಿದ್ದು ಕೆಲಕಡೆ ಏಕಾಏಕಿ ಭಾರೀ ಮಳೆಯಾಗಿ ಅವಾಂತರ ಸೃಷ್ಟಿಯಾಗಿದೆ. ಬೆಳಗಾವಿ ನಗರ ಸೇರಿದಂತೆ ಸವದತ್ತಿ, ಬೈಲಹೊಂಗಲ, ಗೋಕಾಕ್, ಕಿತ್ತೂರು ಹಾಗೂ ಖಾನಾಪೂರ ತಾಲೂಕಿನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ.

    ಕಳೆದ ರಾತ್ರಿಯಿಂದ ಮತ್ತೆ ನಿರಂತರವಾಗಿ ಸುರಿಯುತ್ತಿರುವದರಿಂದ ಹಳ್ಳ-ಕೊಳ್ಳಗಳ ನೀರು ಸೇತುವೆ ಮೇಲೆ ಬಂದು ಕೆಲಕಡೆ ರಸ್ತೆ ಸಂಚಾ ರ ಅಸ್ಥವ್ಯಸ್ಥವಾಗಿದೆ. ಸವದತ್ತಿ ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಸೋಗಲ ಸೋಮೇಶ್ಚರ ಮಂದಿರದ ಮಂದಿನ ಜಲಧಾರೆಯಲ್ಲಿ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಕೆಲಕಾಲ ಯಾತ್ರಾರ್ಥಿಗಳಿಗೆ ಜಲದಿಗ್ಭಂದ ಮಾರ್ಪಾಡಾಗಿತ್ತು.

    ಸ್ಥಳೀಯರು ಹಗ್ಗಗಳನ್ನು ಹಿಡಿದು ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ. ಒಂದೆಡೆ ಸುರಿಯುತ್ತಿರುವ ಮಳೆ ಇನ್ನೊಂದೆಡೆ ಕಟಾವಿಗೆ ಬಂದ ಪೈರು ಕಣ್ಮುಂದೆ ನೀರಿನಲ್ಲಿ ಕೊಚ್ಚಿ ಹೊಗುತ್ತಿರುವದನ್ನು ಕಂಡ ರೈತರು ಮಮ್ಮಲ ಮರುಗುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆಗಳು ಸರ್ಕಾರ ನಮ್ಮ ನೆರವಿಗೆ ಬರಬೇಕು ಎಂದು ಆಗ್ರಹಿಸಿದ್ದಾರೆ.