Tag: Mumbai Highcourt

  • ಮಹಿಳೆಯರನ್ನು ಐಟಂ ಎಂದು ಕರೆಯುವಂತಿಲ್ಲ- ರೋಡ್ ರೋಮಿಯೋಗಳಿಗೆ ಕೋರ್ಟ್ ಖಡಕ್ ಎಚ್ಚರಿಕೆ

    ಮಹಿಳೆಯರನ್ನು ಐಟಂ ಎಂದು ಕರೆಯುವಂತಿಲ್ಲ- ರೋಡ್ ರೋಮಿಯೋಗಳಿಗೆ ಕೋರ್ಟ್ ಖಡಕ್ ಎಚ್ಚರಿಕೆ

    ಮುಂಬೈ: ಅಪ್ರಾಪ್ತ ಬಾಲಕಿಯನ್ನು `ಐಟಂ’ ಎಂದು ಕರೆದು ಲೈಂಗಿಕವಾಗಿ ಕಿರುಕುಳ ನೀಡಿದ 25 ವರ್ಷದ ಉದ್ಯಮಿಯೊಬ್ಬನಿಗೆ 7 ವರ್ಷಗಳ ಬಳಿಕ 1.5 ವರ್ಷ ಜೈಲು ಶಿಕ್ಷೆ ವಿಧಿಸಿರುವ ಮುಂಬೈ ಕೋರ್ಟ್ (Mumbai Court), ಮಹಿಳೆಯರನ್ನು ಐಟಂ ಎಂದು ಕರೆಯುವಂತಿಲ್ಲ ಎಂದು ರೋಡ್ ರೋಮಿಯೋಗಳಿಗೆ ಖಡಕ್ ಎಚ್ಚರಿಕೆ ನೀಡಿದೆ.

    ಮುಂಬೈನ ದಿಂಡೋಶಿಯಲ್ಲಿರುವ ಸೆಷನ್ಸ್ ಕೋರ್ಟ್‌ನ (Sessions Court) ವಿಶೇಷ ನ್ಯಾಯಾಧೀಶರಾದ ಎಸ್.ಜೆ ಅನ್ಸಾರಿ ಅವರ ನೇತೃತ್ವದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯಿತು. ಈ ವೇಳೆ `ಐಟಂ’ ಎಂಬ ಪದವು ಮಹಿಳೆಯರನ್ನು ಲೈಂಗಿಕ ರೀತಿಯಲ್ಲಿ ಆಕ್ಷೇಪಿಸುತ್ತದೆ. ಇದು ಐಪಿಸಿ (IPC) ಸೆಕ್ಷನ್ 354ರ ಅತಿರೇಖದ ವರ್ತನೆಯನ್ನು ಸೂಚಿಸುವ ಅಪರಾಧವಾಗಿದೆ ಎಂದು ಪರಿಗಣಿಸಿದೆ. ಇದನ್ನೂ ಓದಿ: ಮಹಿಳೆಯರ ನಗ್ನ ವೀಡಿಯೋ ಇಟ್ಕೊಂಡು ಬ್ಲಾಕ್‌ಮೇಲ್ ಮಾಡ್ತಿದ್ದ ಆರೋಪಿ ಅರೆಸ್ಟ್

    ಹಾಗಾಗಿ ಅಪ್ರಾಪ್ತ ಬಾಲಕಿಯನ್ನು ಐಟಂ ಎಂದು ಕರೆದ ಉದ್ಯಮಿಯನ್ನು ಐಪಿಸಿ (IPC) ಸೆಕ್ಷನ್ 354 ಹಾಗೂ ಲೈಂಗಿಕ ಅಪರಾಧಗಳು ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಅಪರಾಧಿ ಎಂದು ಘೋಷಿಸಿ, 1.5 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೇ ಮಹಿಳೆಯರನ್ನು (Womens) ರಕ್ಷಿಸಲು ಇಂತಹ ಕಠಿಣ ಅಪರಾಧ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತವಾಗಿದೆ ಎಂದು ನ್ಯಾಯಾಧೀಶರು ಒತ್ತಿ ಹೇಳಿದ್ದಾರೆ. ಇದನ್ನೂ ಓದಿ: ನಿಷೇಧದ ನಡುವೆಯೂ ಪಟಾಕಿ ಸದ್ದು- ಅತಿಯಾದ ವಾಯುಮಾಲಿನ್ಯದಿಂದ ಉಸಿರಾಟಕ್ಕೂ ತೊಂದರೆ

    Law

    ಆರೋಪಿಯು `ಐಟಂ’ ಎಂಬ ಪದವನ್ನು ಬಳಸುವ ಮೂಲಕ ಆಕೆಯನ್ನು ಸಂಬೋಧಿಸಿದ್ದಾನೆ. ಇದು ಹುಡುಗಿಯರನ್ನು ಅವಹೇಳನಕಾರಿ ಶೈಲಿ ಸಂಬೋಧಿಸುವ ಸಾಮಾನ್ಯ ಪದವಾಗಿದೆ, ಜೊತೆಗೆ ಅತಿರೇಕದ ವರ್ತನೆಯನ್ನು ತೋರುತ್ತದೆ. ಇಂತಹ ಅಪರಾಧಗಳನ್ನು ಕಠಿಣ ಕ್ರಮಗಳ ಮೂಲಕ ನಿಭಾಯಿಸಬೇಕಿದೆ. ಜೊತೆಗೆ ರೋಡ್ ರೋಮಿಯೋಗಳಿಗೆ ತಕ್ಕಪಾಠ ಕಲಿಸುವ ಜೊತೆಗೆ ಮಹುಳೆಯರನ್ನು ರಕ್ಷಿಸಬೇಕಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಮೇಲಿನ ಎಲ್ಲ ಅಂಶಗಳನ್ನು ಪರಿಗಣಿಸಿ ಆರೋಪಿಗೆ 1.5 ವರ್ಷ ಜೈಲು ಶಿಕ್ಷೆ ವಿಧಿಸಿದೆ.

    ಮುಂಬೈನ ದಿಂಡೋಶಿಯಲ್ಲಿರುವ ಸೆಷನ್ಸ್ ಕೋರ್ಟ್ 2015ರಲ್ಲಿ ನಡೆದ ಘಟನೆಗೆ ಈಗ ಶಿಕ್ಷೆ ವಿಧಿಸಿದೆ. 2015ರಂದು ಅಪ್ರಾಪ್ತ ಬಾಲಕಿ ಶಾಲೆಯಿಂದ ಹಿಂದಿರುಗುತ್ತಿದ್ದಾಗ ಉದ್ಯಮಿಯೊಬ್ಬ ಬಾಲಕಿಯನ್ನು ಐಟಂ ಎಂದು ಸಂಬೋಧಿಸಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು, ಇದೀಗ ಕೋರ್ಟ್ ಶಿಕ್ಷೆ ವಿಧಿಸಿದೆ.

    Live Tv
    [brid partner=56869869 player=32851 video=960834 autoplay=true]