Tag: Mumbai Attack

  • ಮುಂಬೈ ಉಗ್ರರ ವಿರುದ್ಧ ಆಪರೇಷನ್‌ಗೆ ಯುಪಿಎ ಅಡ್ಡಿ – ಚಿದಂಬರಂ ಹೇಳಿಕೆ, ಸೋನಿಯ ವಿರುದ್ಧ ಬಿಜೆಪಿ ಕೆಂಡ

    ಮುಂಬೈ ಉಗ್ರರ ವಿರುದ್ಧ ಆಪರೇಷನ್‌ಗೆ ಯುಪಿಎ ಅಡ್ಡಿ – ಚಿದಂಬರಂ ಹೇಳಿಕೆ, ಸೋನಿಯ ವಿರುದ್ಧ ಬಿಜೆಪಿ ಕೆಂಡ

    ಮುಂಬೈ: 2008ರ ಮುಂಬೈನ ತಾಜ್‌ ಹೋಟೆಲ್ (2008 Mumbai Attacks) ಮೇಲೆ ನಡೆದ ಭಯೋತ್ಪಾದನಾ ದಾಳಿಗೆ ಸಂಬಧಿಸಿದಂತೆ ಮಾಜಿ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ (P Chidambaram) ರಹಸ್ಯವೊಂದನ್ನು ಬಟ್ಟಬಯಲು ಮಾಡಿದ್ದು ಸಂಚಲನ ಮೂಡಿಸಿದೆ.

    166 ಜನರ ಹತ್ಯೆ ನಂತರ ಪಾಕಿಸ್ತಾನದಲ್ಲಿ (Pakistan) ಲಷ್ಕರ್ -ಇ-ತೋಯ್ಬಾ ಉಗ್ರರ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸಲು ನಾನು ಮುಂದಾಗಿದ್ದೆ. ಆದರೆ ಅದಕ್ಕೆ ಯುಪಿಎ ಸರ್ಕಾರ ಅಡ್ಡಗಾಲು ಹಾಕಿತ್ತು ಅಂತ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

    ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಿರೋಧ ಹಾಗೂ ಅಮೆರಿಕದ (USA) ಒತ್ತಡದಿಂದ ಅಂದಿನ ಯುಪಿಎ ಸರ್ಕಾರ (UPA Government) ರಾಜತಾಂತ್ರಿಕ ಮಾರ್ಗವನ್ನು ಆಯ್ಕೆ ಮಾಡಿಕೊಂಡಿತು ಎಂಬ ಸ್ಫೋಟಕ ವಿಚಾರವನ್ನ ಹೊರಹಾಕಿದ್ದಾರೆ. ಇದನ್ನೂ ಓದಿ:  ಪಾಕಿಸ್ತಾನದಲ್ಲಿ ಬಾಂಬ್‌ ದಾಳಿ – ಕನಿಷ್ಠ 10 ಜನ ಸಾವು

    ಚಿದಂಬರಂ ಹೇಳಿಕೆ ಹೊರಬೀಳುತ್ತಿದ್ದಂತೆಯೇ ಬಿಜೆಪಿ ಕೆಂಡಕಾರಿದ್ದು, ಅಂದಿನ ಯುಪಿಎ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದೆ. ಈ ಕುರಿತು ಸಾಮಾಜಿಕ ಜಾಲತಾಣದ ಪೋಸ್ಟ್ ಮಾಡಿರುವ ಬಿಜೆಪಿ ನಾಯಕ ಶೆಹಜಾದ್ ಪೂನಾವಾಲಾ, ಪಾಕಿಸ್ತಾನ ವಿರುದ್ಧ ಪ್ರತೀಕಾರಕ್ಕೆ ಮುಂದಾಗಿದ್ದ ಚಿದಂಬರಂ ಅವರನ್ನು ಸೋನಿಯಾ ಗಾಂಧಿ ಅಥವಾ ಮನಮೋಹನ್ ಸಿಂಗ್ ಅವರು ತಡೆದರೇ ಎಂದು ಪ್ರಶ್ನಿಸಿದ್ದಾರೆ.

    ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿ ಮುಂಬೈ ದಾಳಿಯನ್ನು ವಿದೇಶಿ ಶಕ್ತಿಗಳ ಒತ್ತಡದಿಂದಾಗಿ ದುರುಪಯೋಗಪಡಿಸಿಕೊಳ್ಳಲಾಗಿದೆ ಅಂತ ಮಾಜಿ ಗೃಹ ಸಚಿವರು ಒಪ್ಪಿಕೊಂಡಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ.

  • Mumbai Attack | ರಾಣಾ ವಿರುದ್ಧ ಸಾಕ್ಷಿಗಾಗಿ ನಿಗೂಢ ಮಹಿಳೆಯ ಹಿಂದೆ ಬಿದ್ದ ಎನ್‌ಐಎ

    Mumbai Attack | ರಾಣಾ ವಿರುದ್ಧ ಸಾಕ್ಷಿಗಾಗಿ ನಿಗೂಢ ಮಹಿಳೆಯ ಹಿಂದೆ ಬಿದ್ದ ಎನ್‌ಐಎ

    – ತಹವ್ವೂರ್‌ ರಾಣಾಗೆ ಎನ್‌ಐಎ ಕೇಳಿದ ಆ 18 ಪ್ರಶ್ನೆಗಳು ಯಾವುವು?
    – ಭಾರತ ಹಸ್ತಾಂತರ ತಡೆಯಲು 32 ಆರೋಗ್ಯ ಸಮಸ್ಯೆ ಕಾರಣ ನೀಡಿದ್ದ ರಾಣಾ ಪರ ವಕೀಲ

    ನವದೆಹಲಿ: 2008ರ ಮುಂಬೈ ದಾಳಿ (Mumbai Attack) ಪ್ರಕರಣದ ಉಗ್ರ ತಹವ್ವೂರ್ ಹುಸೇನ್ ರಾಣಾ (Tahawwur Hussain Rana) ವಿಚಾರಣೆ ಆರಂಭಿಸಿರುವ ರಾಷ್ಟ್ರೀಯ ತನಿಖಾ ದಳ (NIA) ಸಾಕ್ಷ್ಯ ಕಲೆಹಾಕಲು ನಿಗೂಢ ಮಹಿಳೆಯ ಹಿಂದೆ ಬಿದ್ದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

    ರಾಣಾ ಭಾರತದಲ್ಲಿದ್ದ ವೇಳೆ ಆತನ ಜೊತೆಗಿದ್ದ ಮಹಿಳೆಯನ್ನು ಪತ್ತೆಹಚ್ಚಲು ಎನ್‌ಐಎ ತನಿಖಾಧಿಕಾರಿಗಳ ತಂಡ ಮುಂದಾಗಿದೆ. ಆಕೆಯ ಗುರುತು ಇನ್ನೂ ಸ್ಪಷ್ಟವಾಗಿಲ್ಲ. ಆದ್ರೆ ಈ ಮಹಿಳೆ ರಾಣಾ ನಡೆಸಿದ ಪಿತೂರಿಯ ಭಾಗವಾಗಿರಬಹುದು ಅಥವಾ ರಾಣಾ ಸಂಪರ್ಕದ ಬಗ್ಗೆ ಪ್ರಮುಖ ಮಾಹಿತಿಯನ್ನೂ ಹೊಂದಿರಬಹುದು ಶಂಕಿಸಲಾಗಿದೆ. ಆ ಮಹಿಳೆ ರಾಣಾ ಭಾರತದಲ್ಲಿ ಇದ್ದಷ್ಟು ದಿನ ಅವನ ಪತ್ನಿ ಎಂದೇ ಹೇಳಿಕೊಂಡಿದ್ದಳು. ಈಕೆಯನ್ನ ಪತ್ತೆಹಚ್ಚಿದ್ರೆ, ಇನ್ನಷ್ಟು ರಹಸ್ಯಗಳನ್ನ ಬಯಲಿಗೆಳೆಯಬಹುದು ಎಂದು ಅಧಿಕಾರಿಗಳು ಮಹಿಳೆಯ ಹುಡುಕಾಟಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

    ರಾಣಾಗೆ 18ರ ಕಂಟಕ
    ಈಗಾಗಲೇ ಮೊದಲ ಸುತ್ತಿನ ವಿಚಾರಣೆ ನಡೆಸಿರುವ ಎನ್‌ಐಎ ರಾಣಾಗೆ 18 ಪ್ರಮುಖ ಪ್ರಶ್ನೆಗಳನ್ನ ಕೇಳಿದೆ. ವಿಚಾರಣೆ ವೇಳೆ ಪಾಕ್‌ ಗುಪ್ತಚರ ಸಂಸ್ಥೆ ಐಎಸ್‌ಐ ಹಾಗೂ ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್ ಬಗ್ಗೆ ಹಲವು ರಹಸ್ಯಗಳನ್ನ ಬಾಯ್ಬಿಟ್ಟಿದ್ದಾನೆ. ಈ ಪ್ರಶ್ನೆಗಳು ಮಾಧ್ಯಮಗಳಿಗೆ‌ ಉನ್ನತ ಮೂಲಗಳಿಂದ ಲಭ್ಯವಾಗಿದೆ. ಎನ್‌ಐಎ ಕೇಳಿದ 18 ಪ್ರಶ್ನೆಗಳು ಯಾವುದು ಅಂತ ನೋಡೋದಾದ್ರೆ..

    1. 2008ರ ನವೆಂಬರ್‌ 26ರಂದು ನೀವು ಎಲ್ಲಿದ್ರಿ?
    2. ನೀವು ಭಾರತದಲ್ಲಿದ್ದ ಸಮಯದಲ್ಲಿ ಯಾರ‍್ಯಾರನ್ನ ಎಲ್ಲೆಲ್ಲಿ ಭೇಟಿ ಮಾಡಿದ್ದೀರಿ?
    3. ಡೇವಿಡ್ ಕೋಲ್ಮನ್ ಹೆಡ್ಲಿ ನಿಮಗೆ ಎಷ್ಟು ದಿನಗಳಿಂದ ಗೊತ್ತು? ನಕಲಿ ವೀಸಾ ನೀಡಿ ಭಾರತಕ್ಕೆ ಕಳುಹಿಸಿದ್ದು ಏಕೆ?
    4. ಹೆಡ್ಲಿಯನ್ನ ಭಾರತದಲ್ಲಿ ಭೇಟಿ ನೀಡಿದ ಸ್ಥಳಗಳ ಬಗ್ಗೆ ನಿಮಗೆ ಏನು ಹೇಳಿದರು?
    5. ಮುಂಬೈ ದಾಳಿಯಲ್ಲಿ ನಿಮ್ಮ ಮತ್ತು ಹೆಡ್ಲಿಯ ಪಾತ್ರವೇನು?
    6. ಡೇವಿಡ್ ಕೋಲ್ಮನ್ ಹೆಡ್ಲಿಗೆ ಭಾರತೀಯ ವೀಸಾ ಪಡೆಯಲು ನೀವು ಹೇಗೆ ಸಹಾಯ ಮಾಡಿದ್ದೀರಿ?
    7. ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್ ನಿಮಗೆ ಹೇಗೆ ಗೊತ್ತು? ನೀವು ಯಾವಾಗ ಮತ್ತು ಎಲ್ಲಿ ಅವನನ್ನ ಮೊದಲ ಬಾರಿಗೆ ಭೇಟಿ ಮಾಡಿದ್ರಿ?
    8. ಹಫೀಜ್ ಸಯೀದ್ ಜೊತೆಗೆ ನಿಮ್ಮ ನಂಟೇನು?
    9. ಲಷ್ಕರ್-ಎ-ತೈಬಾಗೆ ನೀವು ಹೇಗೆ ಸಹಾಯ ಮಾಡಿದ್ದೀರಿ? ನಿನ್ನ ಸಹಾಯಕ್ಕೆ ಪ್ರತಿಯಾಗಿ ಲಷ್ಕರ್ ನಿನಗೆ ಏನು ಕೊಟ್ಟನು?
    10. ಲಷ್ಕರ್-ಎ-ತೊಯ್ಬಾದಲ್ಲಿ ಎಷ್ಟು ಜನರಿದ್ದಾರೆ? ಅದರ ರಚನೆ ಹೇಗಿದೆ? ನೇಮಕಾತಿ ಹೇಗೆ ನಡೆಯುತ್ತದೆ? ಯಾರು ಮಾಡುತ್ತಾರೆ?
    11. ಲಷ್ಕರ್ ನಡೆಸಲು ನಿಧಿ ಎಲ್ಲಿಂದ ಬರುತ್ತದೆ? ಹೆಚ್ಚು ನಿಧಿ ಸಂಗ್ರಹ ಮಾಡುವವರು ಯಾರು?
    12. ಶಸ್ತ್ರಾಸ್ತ್ರಗಳನ್ನು ಯಾರು ಪೂರೈಸುತ್ತಾರೆ? ನೀವು ಯಾವ ದೇಶಗಳಿಂದ ಶಸ್ತ್ರಾಸ್ತ್ರಗಳನ್ನು ಪಡೆಯುತ್ತೀರಿ?
    13. ಪಾಕಿಸ್ತಾನಿ ಸೇನೆ ಮತ್ತು ISI ನಿಮಗೆ ಹೇಗೆ ಸಹಾಯ ಮಾಡುತ್ತದೆ?
    14. ದಾಳಿ ಮಾಡಲು ನೀವು ಗುರಿಗಳನ್ನು ಹೇಗೆ ಆರಿಸುತ್ತೀರಿ? ಗುರಿಯ ಮೇಲೆ ದಾಳಿ ಮಾಡಲು ISI ನಿಮಗೆ ಸೂಚನೆಗಳನ್ನು ನೀಡುತ್ತದೆಯೇ?
    15. ISIಯ ಯೋಜನೆ ಏನು? ಭಾರತದ ನಿಮ್ಮ ಗುರಿ ಸಾಧಿಸಲು ಸಾಧ್ಯವಾಗಲಿಲ್ಲವೇ?
    16. ಐಎಸ್‌ಐ ಹೊರತಾಗಿ ಪಾಕಿಸ್ತಾನ ಸರ್ಕಾರಕ್ಕೂ ಭಯೋತ್ಪಾದಕ ದಾಳಿಯ ಮಾಹಿತಿ ಸಿಗುತ್ತದೆಯೇ?
    17. ದಾಳಿಯ ಸಮಯದಲ್ಲಿ ಭಯೋತ್ಪಾದಕರಿಗೆ ಯಾರು ಸೂಚನೆಗಳನ್ನು ನೀಡುತ್ತಾರೆ?
    18. ಆತ್ಮಹತ್ಯಾ ದಾಳಿಗಳಿಗೆ ಹುಡುಗರನ್ನು ಹೇಗೆ ಸಿದ್ಧಪಡಿಸ್ತಾರೆ, ಅವರಿಗೆ ಏನು ಉಪದೇಶ ಕೊಡ್ತಾರೆ?

    32 ಆರೋಗ್ಯ ಸಮಸ್ಯೆ ಕಾರಣ ನೀಡಿದ್ದ ರಾಣಾ:
    ಇನ್ನೂ ತನ್ನನ್ನು ಭಾರತಕ್ಕೆ ಹಸ್ತಾಂತರಿಸುವುದನ್ನು ತಡೆಯಲು ರಾಣಾ ಎಲ್ಲಾ ರೀತಿಯ ಪ್ರಯತ್ನಗಳನ್ನೂ ಮಾಡಿದ್ದ ಅನ್ನೋ ಹೊಸ ವಿಚಾರ ಸಹ ಬೆಳಕಿಗೆ ಬಂದಿದೆ. ಈ ಮಾಹಿತಿಯು ಅಮೆರಿಕ ತನಿಖಾ ಏಜೆನ್ಸಿಗಳಿಗೆ ನೀಡಿದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

    ರಾಣಾನನ್ನ ಭಾರತಕ್ಕೆ ಹಸ್ತಾಂತರಿಸುವುದನ್ನು ತಡೆಯಲು ರಾಣಾ ಪರ ವಕೀಲ ಅಮೆರಿಕದ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ 32 ಆರೋಗ್ಯ ಸಮಸ್ಯೆಗಳನ್ನು ಉಲ್ಲೇಖಿಸಿದ್ದರು. ಅಲ್ಲದೇ ತನ್ನ ಕಕ್ಷಿಗಾರನಿಗೆ ಭಾರತದ ಜೈಲುಗಳಲ್ಲಿ ಚಿತ್ರಹಿಂಸೆ ನೀಡಬಹುದು, ಇದರಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ರಾಣಾ ಜೀವನ ಬೇಗ ಅಂತ್ಯವಾಗಲಿದೆ. ಆದ್ದರಿಂದ ಭಾರತಕ್ಕೆ ಹಸ್ತಾಂತರಿಸದಂತೆ ಕೋರ್ಟ್‌ಗೆ ಮನವಿ ಮಾಡಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.

  • Mumbai Attack| ರಾಣಾ ವಿರುದ್ಧ ಸಾಕ್ಷಿ ನುಡಿಯಲಿದ್ದಾರೆ ನಿಗೂಢ ವ್ಯಕ್ತಿಗಳು!

    Mumbai Attack| ರಾಣಾ ವಿರುದ್ಧ ಸಾಕ್ಷಿ ನುಡಿಯಲಿದ್ದಾರೆ ನಿಗೂಢ ವ್ಯಕ್ತಿಗಳು!

    ನವದೆಹಲಿ: ಮುಂಬೈ ದಾಳಿ (Mumbai Attack) ಪ್ರಕರಣ ಉಗ್ರ ತಹವ್ವೂರ್ ರಾಣಾನ (Tahawwur Hussain Rana) ವಿಚಾರಣೆಯನ್ನು ರಾಷ್ಟ್ರೀಯ ತನಿಖಾ ದಳ (NIA) ಆರಂಭಿಸಿದೆ. ಈ ವಿಚಾರಣೆಯ ಸಂದರ್ಭದಲ್ಲಿ ರಾಣಾ ವಿರುದ್ಧ ಸಾಕ್ಷ್ಯ ನುಡಿಯಲು ನಿಗೂಢ ವ್ಯಕ್ತಿಗಳು ಸಾಲುಗಟ್ಟಿ ನಿಂತಿದ್ದಾರೆ ಎಂದು ಎನ್‌ಐಎ ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.

    ಉಗ್ರ ಡೇವಿಡ್‌ ಹೆಡ್ಲಿ (David Headley) ಅಮೆರಿಕ ಪ್ರಜೆಯಾಗಿದ್ದರೆ ರಾಣಾ ಕೆನಡಾದ (Canada) ಪ್ರಜೆಯಾಗಿದ್ದಾನೆ. ಹೀಗಿದ್ದರೂ ಅವರು ಭಾರತಕ್ಕೆ (India) ಆಗಾಗ ಬರುತ್ತಿದ್ದರು. ಇವರು ಬರುವ ವೇಳೆ ಇವರನ್ನು ಸ್ವೀಕರಿಸಿದ ಮತ್ತು ವಸತಿ ವ್ಯವಸ್ಥೆ ಮಾಡಿದ ವ್ಯಕ್ತಿಗಳು ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳಾಗುತ್ತಾರೆ. ಇವರು ತಿಳಿಸುವ ಮಾಹಿತಿಗಳು ತನಿಖೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

    ಈ ಮೊದಲೇ ಈ ಸಾಕ್ಷಿಗಳು ಹೇಳಿಕೆ ನೀಡಿದ್ದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿದೆ. ಭವಿಷ್ಯದಲ್ಲಿ ಲಷ್ಕರ್-ಎ-ತೈಬಾ (LeT) ಸೇರಿದಂತೆ ಯಾವುದೇ ಉಗ್ರ ಸಂಘಟನೆಯಿಂದ ಇವರಿಗೆ ಸಮಸ್ಯೆಯಾಗದೇ ಇರಲು ನ್ಯಾಯಾಲಯದ ದಾಖಲೆಗಳಲ್ಲಿಯೂ ಸಹ ಈ ವ್ಯಕ್ತಿಗಳ ಗುರುತನ್ನು ಗೌಪ್ಯವಾಗಿಡಲಾಗಿತ್ತು.  ಇದನ್ನೂ ಓದಿ: ರಾಣಾ ಇರೋ ಸೆಲ್‌ಗೆ 12 ಅಧಿಕಾರಿಗಳಿಗೆ ಮಾತ್ರ ಪ್ರವೇಶ – ಕೋಟೆಯಾಗಿ ಬದಲಾದ NIA ಕಚೇರಿ

    ಭಾರತೀಯ ತನಿಖಾಧಿಕಾರಿಗಳು ರಾಣಾನನ್ನು ವಿಚಾರಣೆ ನಡೆಸುತ್ತಿರುವುದು ಇದೇ ಮೊದಲು. ಜೂನ್ 2010 ರಲ್ಲಿ ಎನ್‌ಐಎ ಅಮೆರಿಕದಲ್ಲಿ ರಾಣಾನ ಬಾಲ್ಯ ಸ್ನೇಹಿತ ಡೇವಿಡ್‌  ಹೆಡ್ಲಿಯನ್ನು ವಿಚಾರಣೆ ನಡೆಸಿತ್ತು. ಈ ನಿಗೂಢ ಸಾಕ್ಷಿ ರಾಣಾ ಮತ್ತು ಡೇವಿಡ್‌ ಹೆಡ್ಲಿಯೊಂದಿಗೆ ಸಂಬಂಧ ಹೊಂದಿದ್ದು, ರಾಣಾನ ಪಾತ್ರವನ್ನು ಪತ್ತೆಹಚ್ಚುವಲ್ಲಿ ಸಾಕ್ಷಿಯ ಹೇಳಿಕೆ ಪ್ರಮುಖ ಪಾತ್ರವಹಿಸಲಿದೆ ಮೂಲಗಳು ತಿಳಿಸಿವೆ.

    ಎನ್‌ಐಎ ತನಿಖಾ ವಿವರಗಳ ಪ್ರಕಾರ 2006ರ ವೇಳೆಗೆ ದಾಳಿಯ ಯೋಜನೆ ನಡೆಯುತ್ತಿದ್ದಾಗ, ಹೆಡ್ಲಿ ಮೊದಲು ಎಲ್‌ಇಟಿ ನಾಯಕರು ಮತ್ತು ಇತರ ಸಹ ಸಂಚುಕೋರರನ್ನು ಭೇಟಿ ಮಾಡಲು ಪಾಕಿಸ್ತಾನಕ್ಕೆ ಹೋಗಿದ್ದ. ಈ ವೇಳೆ ಆತನಿಗೆ ತಾಜ್ ಮಹಲ್ ಹೋಟೆಲ್ ಸೇರಿದಂತೆ ಮುಂಬೈನ ಸಾಮಾನ್ಯ ವಿಡಿಯೋಗಳನ್ನು ತೆಗೆದುಕೊಂಡು ಬರುವಂತೆ ಸೂಚನೆ ಸಿಕ್ಕಿತ್ತು.

    ಈ ಸೂಚನೆಯಂತೆ ಸೆಪ್ಟೆಂಬರ್ 2006 ರಲ್ಲಿ ಹೆಡ್ಲಿ ಭಾರತಕ್ಕೆ ಆಗಮಿಸಿದ್ದ ಮತ್ತು ಪಾಕಿಸ್ತಾನ ಉಗ್ರರು ಕೇಳಿದ್ದ ವಿಡಿಯೋಗಳನ್ನು ಚಿತ್ರೀಕರಿಸಿದ್ದ. ಈ ಭೇಟಿಯ ಸಮಯದಲ್ಲಿ ರಾಣಾನ ಆಪ್ತ ವ್ಯಕ್ತಿಯೊಬ್ಬರು ಹೆಡ್ಲಿಯನ್ನು ಸ್ವಾಗತಿಸಿದ್ದರು. ಆ ವ್ಯಕ್ತಿಗೆ ರಾಣಾನಿಂದ ಕರೆ ಬಂದಿತ್ತು. ಈ ಕರೆಯ ನಂತರ ಆ ವ್ಯಕ್ತಿ ಹೆಡ್ಲಿ ಮತ್ತು ಇತರ ಇತರ ಲಾಜಿಸ್ಟಿಕ್ಸ್ ವ್ಯವಸ್ಥೆ ಮಾಡಿದ್ದರು.

    ಮುಂಬೈನಲ್ಲಿರುವ ರಾಣಾನ ವಲಸೆ ಕಾನೂನು ಕಚೇರಿಯೊಂದಿಗೆ ಸಂಬಂಧ ಹೊಂದಿದ್ದ ಇತರ ವ್ಯಕ್ತಿಗಳನ್ನು ಸಹ ಎನ್‌ಐಎ ಈ ಬಾರಿ ಪ್ರಶ್ನಿಸಲಿದೆ. ಇದನ್ನೂ ಓದಿ: ರಾಣಾ ಕರೆತಂದ ವಿಮಾನಕ್ಕೆ ನೀಡಲಾಗಿತ್ತು ಡಮ್ಮಿ ಕೋಡ್‌, ಮಧ್ಯೆ 11 ಗಂಟೆ ಪಿಟ್‌ ಸ್ಟಾಪ್‌!

    ರಾಣಾ ಶೀಘ್ರದಲ್ಲೇ ಸಾಕ್ಷಿಯೊಂದಿಗೆ ಭಾರತದಲ್ಲಿನ ಆತನ ಸಂಪರ್ಕಗಳು ಮತ್ತು ಹೆಡ್ಲಿ ಭೇಟಿ ನೀಡಿದ ಸ್ಥಳಗಳು ಮತ್ತು 2006 ಮತ್ತು 2009 ರ ನಡುವೆ ಭಾರತಕ್ಕೆ ಹಲವಾರು ಬಾರಿ ಭೇಟಿ ನೀಡಿದಾಗ ಆತ ಯಾರನ್ನು ಸಂಪರ್ಕ ಮಾಡಿದ್ದ? ಆ ವ್ಯಕ್ತಿಗಳನ್ನೂ ಎನ್‌ಐಎ ವಿಚಾರಣೆ ನಡೆಸಲಿದೆ.

    ರಾಣಾ ಪಾಕಿಸ್ತಾನದಲ್ಲಿದ್ದ ಹೆಡ್ಲಿಯ ದಾಳಿಯ ರೂವಾರಿಗಳ ಜೊತೆ ಕೆಲಸ ನೇರವಾಗಿ ಸಂವಹನ ಮಾಡುತ್ತಿದ್ದ. ಹೀಗಾಗಿ ಆರಂಭಿಕ ಹಂತದ ವಿಚಾರಣೆಯಲ್ಲಿ ರಾಣಾ ಮತ್ತು ಹೆಡ್ಲಿ ನಡುವಿನ ಸಂಬಂಧದ ಬಗ್ಗೆ ಕೇಳಲಾಗುತ್ತದೆ.

    ವಿಶೇಷ ನ್ಯಾಯಾಲಯ 18 ದಿನಗಳ ಕಾಲ ಕಸ್ಟಡಿಗೆ ನೀಡಿದ ಬಳಿಕ ಮುಂಬೈ ದಾಳಿ (Mumbai Attack) ಪ್ರಕರಣ ಆರೋಪಿ ಉಗ್ರ ತಹವ್ವೂರ್ ಹುಸೇನ್ ರಾಣಾನನ್ನು ದೆಹಲಿಯಲ್ಲಿರುವ ರಾಷ್ಟ್ರೀಯ ತನಿಖಾ ದಳದ (NIA) ಪ್ರಧಾನ ಕಚೇರಿಯಲ್ಲಿ ಬಂಧಿಸಿ ಇಡಲಾಗಿದೆ.

    ಎನ್‌ಐಎ ಕಟ್ಟಡದ ನೆಲ ಮಹಡಿಯಲ್ಲಿರುವ 14*14 ಅಡಿ ಅಳತೆಯ ಕೋಣೆಗೆ ಸಿಸಿಟಿವಿ (CCTV) ಹಾಕಲಾಗಿದ್ದು ಪ್ರತಿಯೊಂದು ಚಲನವಲನಗಳನ್ನು ಗಮನಿಸಲಾಗುತ್ತದೆ. ಈ ಕೊಠಡಿಯಲ್ಲೇ ಎಲ್ಲಾ ತನಿಖಾ ಸಂಸ್ಥೆಗಳು ರಾಣಾನನ್ನು ವಿಚಾರಣೆಗೆ ಒಳಪಡಿಸಲಿವೆ.

  • ರಾಣಾ ಇರೋ ಸೆಲ್‌ಗೆ 12 ಅಧಿಕಾರಿಗಳಿಗೆ ಮಾತ್ರ ಪ್ರವೇಶ – ಕೋಟೆಯಾಗಿ ಬದಲಾದ NIA ಕಚೇರಿ

    ರಾಣಾ ಇರೋ ಸೆಲ್‌ಗೆ 12 ಅಧಿಕಾರಿಗಳಿಗೆ ಮಾತ್ರ ಪ್ರವೇಶ – ಕೋಟೆಯಾಗಿ ಬದಲಾದ NIA ಕಚೇರಿ

    ನವದೆಹಲಿ: ವಿಶೇಷ ನ್ಯಾಯಾಲಯ 18 ದಿನಗಳ ಕಾಲ ಕಸ್ಟಡಿಗೆ ನೀಡಿದ ಬಳಿಕ ಮುಂಬೈ ದಾಳಿ (Mumbai Attack) ಪ್ರಕರಣ ಆರೋಪಿ ಉಗ್ರ ತಹವ್ವೂರ್ ಹುಸೇನ್ ರಾಣಾನನ್ನು (Tahawwur Rana) ದೆಹಲಿಯಲ್ಲಿರುವ ರಾಷ್ಟ್ರೀಯ ತನಿಖಾ ದಳದ (NIA) ಪ್ರಧಾನ ಕಚೇರಿಯಲ್ಲಿ ಬಂಧಿಸಿ ಇಡಲಾಗಿದೆ.

    ಎನ್‌ಐಎ ಕಟ್ಟಡದ ನೆಲ ಮಹಡಿಯಲ್ಲಿರುವ 14*14 ಅಡಿ ಅಳತೆಯ ಕೋಣೆಗೆ ಸಿಸಿಟಿವಿ (CCTV) ಹಾಕಲಾಗಿದ್ದು ಪ್ರತಿಯೊಂದು ಚಲನವಲನಗಳನ್ನು ಗಮನಿಸಲಾಗುತ್ತದೆ. ಈ ಕೊಠಡಿಯಲ್ಲೇ ಎಲ್ಲಾ ತನಿಖಾ ಸಂಸ್ಥೆಗಳು ರಾಣಾನನ್ನು ವಿಚಾರಣೆಗೆ ಒಳಪಡಿಸಲಿವೆ.

    ರಾಣಾ ಆಗಮನದ ನಂತರ ಎನ್‌ಐಎ ಪ್ರಧಾನ ಕಚೇರಿ ಕೋಟೆಯಾಗಿ ಬದಲಾಗಿದೆ. ಹೆಚ್ಚುವರಿ ದೆಹಲಿ ಪೊಲೀಸರು ಮತ್ತು ಅರೆಸೈನಿಕ ಸಿಬ್ಬಂದಿಯನ್ನು ಹೊರಗಡೆ ಭದ್ರತೆಗೆ ನಿಯೋಜಿಸಲಾಗಿದೆ. ಇದನ್ನೂ ಓದಿ: ರಾಣಾ ಕರೆತಂದ ವಿಮಾನಕ್ಕೆ ನೀಡಲಾಗಿತ್ತು ಡಮ್ಮಿ ಕೋಡ್‌, ಮಧ್ಯೆ 11 ಗಂಟೆ ಪಿಟ್‌ ಸ್ಟಾಪ್‌!

     

    ಪ್ರತಿ ಇಂಚಿನಲ್ಲೂ ಸಿಸಿಟಿವಿ ಕ್ಯಾಮೆರಾಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ ಮತ್ತು 12 ಎನ್‌ಐಎ ಅಧಿಕಾರಿಗಳಿಗೆ ಮಾತ್ರ ಈ ಕೊಠಡಿ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.

    ನೆಲದ ಮೇಲೆ ಹಾಸಿಗೆ ಹಾಸಲಾಗಿದೆ. ಸೆಲ್‌ ಒಳಗಡೆಯೇ ಸ್ನಾನ ಗೃಹ ಮತ್ತು ಶೌಚಾಲಯವಿದೆ. ಊಟ, ಕುಡಿಯುವ ನೀರು, ವೈದ್ಯಕೀಯ ಸರಬರಾಜು ಎಲ್ಲವನ್ನೂ ಒಳಗಡೆಗೆ ತಲುಪಿಸಲಾಗುತ್ತದೆ. ಇದನ್ನೂ ಓದಿ: ಅಮೆರಿಕದಲ್ಲಿ ಕಾಲಿಗೆ, ಸೊಂಟಕ್ಕೆ ಚೈನ್‌ – ಭಾರತದಲ್ಲಿ ರಾಣಾನಿಗೆ ಕಟ್ಟಿದ್ದ ಚೈನ್‌ ತೆಗೆದಿದ್ದು ಯಾಕೆ?

    ಮೂಲಗಳ ಪ್ರಕಾರ ಶುಕ್ರವಾರ ವಿಚಾರಣೆ ಆರಂಭವಾಗಿದ್ದು ಇಂದಿನಿಂದ ರಾಣಾನನ್ನು ತೀವ್ರವಾಗಿ ವಿಚಾರಣೆ ನಡೆಸಲಾಗುತ್ತದೆ. ಡ್ಯುಯಲ್ ಕ್ಯಾಮೆರಾ ಕಣ್ಗಾವಲಿನಲ್ಲಿ ಬಂಧಿಯಾಗಿರುವ ಕೊಠಡಿಯಲ್ಲೇ ವಿಚಾರಣೆ ನಡೆಯಲಿದೆ. ಎಂಟು ಕೇಂದ್ರ ತನಿಖಾ ಮತ್ತು ಗುಪ್ತಚರ ಸಂಸ್ಥೆಗಳು ರಾಣಾನನ್ನು ವಿಚಾರಣೆಗೆ ಒಳಪಡಿಸಲು ಅವಕಾಶ ಕೋರಿವೆ ಎಂದು ವರದಿಯಾಗಿದೆ.

    ಅಮೆರಿಕದಿಂದ ವಿಶೇಷ ವಿಮಾನದಲ್ಲಿ ದೆಹಲಿಗೆ ಕರೆ ತಂದ ನಂತರ ರಾಣಾನನ್ನು ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಕೋರ್ಟ್‌ 18 ದಿನಗಳ ಕಾಲ ಎನ್‌ಐಎ ಕಸ್ಟಡಿಗೆ ನೀಡಿದ ಬಳಿಕ ರಾಣಾನನ್ನು ಈ ವಿಶೇಷ ಸೆಲ್‌ನಲ್ಲಿ ಬಂಧಿಸಿ ಇಡಲಾಗಿದೆ.

  • ಮುಂಬೈ ದಾಳಿಕೋರ ರಾಣಾ ತನ್ನ ಪ್ರಜೆಯಲ್ಲ – ದಿಢೀರ್‌ ಪಾಕ್‌ ಸ್ಪಷ್ಟನೆ

    ಮುಂಬೈ ದಾಳಿಕೋರ ರಾಣಾ ತನ್ನ ಪ್ರಜೆಯಲ್ಲ – ದಿಢೀರ್‌ ಪಾಕ್‌ ಸ್ಪಷ್ಟನೆ

    ಇಸ್ಲಾಮಾಬಾದ್‌: ಮುಂಬೈ ದಾಳಿಯ (Mumbai Attack) ಉಗ್ರ ತಹವ್ವೂರ್ ರಾಣಾ (Tahawwur Rana) ತನ್ನ ಪ್ರಜೆಯಲ್ಲ, ಆತ ಕೆನಡಾದ (Canada) ಪ್ರಜೆ ಎಂದು ಪಾಕಿಸ್ತಾನ (Pakistan) ಹೇಳಿದೆ.

    ಅಮೆರಿಕದಿಂದ ರಾಣಾನನ್ನು ಭಾರತ ಕರೆ ತರುತ್ತಿದ್ದಂತೆ ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಅಂತರ ಕಾಯ್ದುಕೊಳ್ಳಲು ಮುಂದಾಗಿದೆ. ಆತ ತನ್ನ ಹೆಸರನ್ನು ಹೇಳಬಹುದು ಎಂಬ ಭಯದಿಂದ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡದ ಪಾಕ್‌ ಈಗ ದಿಢೀರ್‌ ಸ್ಪಷ್ಟೀಕರಣ ನೀಡಿದೆ.

    ಈ ಸಂಬಂಧ ವಾರದ ಮಾಧ್ಯಮ ಸುದ್ದಿಗೋಷ್ಠಿಯಲ್ಲಿ ವಿದೇಶಾಂಗ ಇಲಾಖೆ, ರಾಣಾ ಎರಡು ದಶಕಗಳಿಗೂ ಹೆಚ್ಚು ಕಾಲ ತನ್ನ ಪೌರತ್ವವನ್ನು ನವೀಕರಿಸದ ಕಾರಣ ಆತ ಪಾಕಿಸ್ತಾನಿ ಪ್ರಜೆಯಲ್ಲ ಎಂದು ಹೇಳಿದೆ. ಇದನ್ನೂ ಓದಿ: ಬಾಂಬ್‌ ದಾಳಿಗೂ ಜಗ್ಗಲ್ಲ – ಮುಂಬೈ ದಾಳಿಕೋರನನ್ನ ಕರೆತರಲು ಸಿದ್ಧವಾಯ್ತು NIA ಬುಲೆಟ್ ಪ್ರೂಫ್ ಕಾರು

    ಕಳೆದ ಎರಡು ದಶಕಗಳಿಂದ ತಹವ್ವೂರ್ ರಾಣಾ ತನ್ನ ಪಾಕಿಸ್ತಾನಿ ದಾಖಲೆಗಳನ್ನು ನವೀಕರಿಸಿಲ್ಲ. ಇದರಿಂದ ಆತ ಕೆನಡಾ ಪ್ರಜೆ ಎನ್ನುವುದು ಸ್ಪಷ್ಟವಾಗಿದೆ ಎಂದು ತಿಳಿಸಿದೆ.

    ಗುಪ್ತಚರ ವರದಿಗಳ ಪ್ರಕಾರ, ರಾಣಾ ಪಾಕಿಸ್ತಾನದ ಐಎಸ್‌ಐ ಜೊತೆ ಆಳವಾದ ಸಂಪರ್ಕ ಹೊಂದಿದ್ದ ಮತ್ತು ಪಾಕ್‌ ಸೇನೆಗೆ ಬೆಂಬಲ ನೀಡಿದ್ದ. ಮುಂಬೈ ದಾಳಿಯ ಸಂಚು ರೂಪಿಸುವಲ್ಲಿ ಪಾಕಿಸ್ತಾನದ ನೇರ ಪಾತ್ರದ ಬಗ್ಗೆ ರಾಣಾ ಬಹಿರಂಗ ಪಡಿಸುವ ಸಾಧ್ಯತೆಯಿದೆ.

    ಐಎಸ್‌ಐ ಭಾಗಿಯಿಂದ ಹಿಡಿದು ಲಷ್ಕರ್-ಎ-ತೊಯ್ಬಾದ ಜೊತೆಗಿನ ಸಮನ್ವಯದವರೆಗಿನ ಸಂಪೂರ್ಣ ಜಾಲವನ್ನು ರಾಣಾ ಬಹಿರಂಗಪಡಿಸುವ ಸಾಧ್ಯತೆಯಿದೆ.

    ಹೆಡ್ಲಿ ಮತ್ತು ಲಷ್ಕರ್ ಜೊತೆ ರಾಣಾ ಸಂಪರ್ಕ
    ದಾಳಿಯ ಮೊದಲು ಮುಂಬೈ ಸ್ಥಳಗಳ ಮೇಲೆ ದಾಳಿ ನಡೆಸಿದ್ದ ಪಾಕಿಸ್ತಾನಿ-ಅಮೆರಿಕನ್ ಭಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿಯೊಂದಿಗಿನ ನಿಕಟ ಸಂಬಂಧದಿಂದಾಗಿ ರಾಣಾ ಹೆಸರು ಮುನ್ನೆಲೆಗೆ ಬಂದಿತ್ತು.

    ತಹಾವೂರ್ ರಾಣಾ ಯಾರು?
    ತಹಾವೂರ್ ರಾಣಾ ಪಾಕಿಸ್ತಾನ ಮೂಲದ ಕೆನಡಾದ ಉದ್ಯಮಿ. ತನ್ನ ಬಾಲ್ಯದ ಗೆಳೆಯ ಡೇವಿಡ್ ಕೋಲ್ಮನ್ ಹೆಡ್ಲಿ, ದಾವೂದ್ ಗಿಲಾನಿ ಮತ್ತು ಇತರರಿಗೆ ಸಹಕರಿಸಿದ್ದ. ಈ ಮೂಲಕ ಮುಂಬೈನಲ್ಲಿ ಲಷ್ಕರ್ ಭಯೋತ್ಪಾದಕ ದಾಳಿಯ ಯೋಜನೆ ಮತ್ತು ಕಾರ್ಯಗತಗೊಳಿಸಿದ್ದ.

    ರಾಣಾ ನವೆಂಬರ್ 11 ಮತ್ತು 21, 2008 ರ ನಡುವೆ ದುಬೈ ಮೂಲಕ ಮುಂಬೈಗೆ ಬಂದಿದ್ದ. ಪೊವೈನಲ್ಲಿರುವ ಹೋಟೆಲ್ ರಿನೈಸಾನ್ಸ್‌ನಲ್ಲಿ ತಂಗಿ ದಾಳಿಗೆ ಬೇಕಾದ ಸಿದ್ಧತೆ ಪರಿಶೀಲಿಸಿದ್ದ. ಈತ ದುಬೈಗೆ ಹೋದ 5 ದಿನಗಳ ಬಳಿಕ ದಾಳಿ ನಡೆದಿತ್ತು.

    ಭಾರತವು ಜೂನ್ 2020 ರಲ್ಲಿ ರಾಣಾನನ್ನು ಗಡೀಪಾರುಗಾಗಿ ಕಾನೂನು ಪ್ರಕ್ರಿಯೆಯನ್ನು ಪ್ರಾರಂಭಿಸಿತು. ಈ ವರ್ಷದ ಫೆಬ್ರವರಿಯಲ್ಲಿ, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಣಾನನ್ನು ಗಡೀಪಾರು ಮಾಡಲಾಗುವುದು ಎಂದು ದೃಢಪಡಿಸಿದ್ದರು.

    ಮುಂಬೈ ದಾಳಿ:
    2008 ರ ನವೆಂಬರ್ 26 ರಂದು ಪಾಕಿಸ್ತಾನದಿಂದ ಸಮುದ್ರ ಮಾರ್ಗದ ಮೂಲಕ ಭಾರತದ ಆರ್ಥಿಕ ರಾಜಧಾನಿ ಮುಂಬೈಗೆ 10 ಲಷ್ಕರ್-ಎ-ತೈಬಾ ಭಯೋತ್ಪಾದಕರು ಪ್ರವೇಶಿಸಿದ್ದರು. ಭಯೋತ್ಪಾದಕರು ಸರಣಿ ಗುಂಡಿನ ದಾಳಿ ಮತ್ತು ಬಾಂಬ್ ಸ್ಫೋಟಗಳನ್ನು ನಡೆಸಿ 166 ಜನರನ್ನು ಕೊಂದಿದ್ದರು. 300 ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದ್ದರು. ಛತ್ರಪತಿ ಶಿವಾಜಿ ಟರ್ಮಿನಸ್ ರೈಲು ನಿಲ್ದಾಣ, ಕಾಮಾ ಆಸ್ಪತ್ರೆ, ನಾರಿಮನ್ ಹೌಸ್ ವ್ಯಾಪಾರ ಮತ್ತು ವಸತಿ ಸಂಕೀರ್ಣ, ಲಿಯೋಪೋಲ್ಡ್ ಕೆಫೆ, ತಾಜ್ ಹೋಟೆಲ್ ಮತ್ತು ಒಬೆರಾಯ್ ಟ್ರೈಡೆಂಟ್ ಹೋಟೆಲ್‌ಗಳಲ್ಲಿ ದಾಳಿ ನಡೆಸಲಾಗಿತ್ತು.

  • ಬಾಂಬ್‌ ದಾಳಿಗೂ ಜಗ್ಗಲ್ಲ – ಮುಂಬೈ ದಾಳಿಕೋರನನ್ನ ಕರೆತರಲು ಸಿದ್ಧವಾಯ್ತು NIA ಬುಲೆಟ್ ಪ್ರೂಫ್ ಕಾರು

    ಬಾಂಬ್‌ ದಾಳಿಗೂ ಜಗ್ಗಲ್ಲ – ಮುಂಬೈ ದಾಳಿಕೋರನನ್ನ ಕರೆತರಲು ಸಿದ್ಧವಾಯ್ತು NIA ಬುಲೆಟ್ ಪ್ರೂಫ್ ಕಾರು

    – ರಾಣಾನನ್ನ ತಿಹಾರ್‌ ಜೈಲಲ್ಲಿಡಲು ವ್ಯವಸ್ಥೆ – ದೆಹಲಿಯಲ್ಲೇ ನಡೆಯಲಿದೆ ವಿಚಾರಣೆ

    ಮುಂಬೈ: 2008ರ ಮುಂಬೈ ಭಯೋತ್ಪಾದಕ ದಾಳಿಯ (Mumbai Attack) ಸಂಚುಕೋರ ತಹವ್ವೂರ್ ರಾಣಾನನ್ನು (Tahawwur Rana) ಅಮೆರಿಕದಿಂದ ಗಡಿಪಾರು ಮಾಡಲಾಗಿದ್ದು ಇಂದು ಮಧ್ಯಾಹ್ನದ ಬಳಿಕ ಭಾರತಕ್ಕೆ ಬಂದಿಳಿಯಲಿದ್ದಾನೆ.

    ಎನ್‌ಐಎ ಮತ್ತು ರಾ ಅಧಿಕಾರಿ ತಂಡಗಳ ಬಿಗಿ ಭದ್ರತೆಯೊಂದಿಗೆ ವಿಶೇಷ ವಿಮಾನದಲ್ಲಿ ದೆಹಲಿಯ ಪಾಲಂ ಏರ್‌ಪೋರ್ಟ್‌ನ ಟರ್ಮಿನಲ್‌ 1ನಲ್ಲಿ ಬಂದಿಳಿಯಲಿದ್ದಾನೆ. ಇಲ್ಲಿಂದ ಅವನನ್ನ ಎನ್‌ಐಎ ಕೇಂದ್ರ ಕಚೇರಿಗೆ ಕರೆದೊಯ್ಯಲು ವಿಶೇಷ ಬುಲೆಟ್‌ ಪ್ರೂಫ್‌ ವಾಹನ ಸಿದ್ಧವಾಗಿದೆ. ಅದಕ್ಕಾಗಿ ಎನ್‌ಐಎ ಕಚೇರಿ ಹೊರಗಿನ ಭದ್ರತೆ ಪರಿಶೀಲಿಸಲು ದಕ್ಷಿಣ ಡಿಸಿಪಿ ಸ್ಥಳಕ್ಕೆ ತೆರಳಿದ್ದಾರೆ.

    MUMBAI ATTACK

    ಎನ್‌ಐಎ ಮೂಲಗಳ ಪ್ರಕಾರ, ಈಗಾಗಲೇ ರಾಣಾನನ್ನ ಸೇಫಾಗಿ ಎನ್‌ಐಎ ಕಚೇರಿಗೆ ಕರೆತರಲು ಮಾರ್ಕ್ಸ್‌ಮನ್‌ (Marksman) ವಿಶೇಷ ಬುಲೆಟ್‌ ಪ್ರೂಫ್‌ ವಾಹನವನ್ನ ಪಾಲಂ ಏರ್‌ಪೋರ್ಟ್‌ನಲ್ಲಿ ಇರಿಸಲಾಗಿದೆ. ದೆಹಲಿ ಪೊಲೀಸರ ವಿಶೇಷ ವಿಭಾಗದ SWAT (ಸ್ವಾಟ್‌) ಕಾಂಡೋಗಳನ್ನೂ ಸಹ ಸ್ಥಳದಲ್ಲಿ ನಿಯೋಜಿಸಲಾಗಿದೆ. ಜೊತೆಗೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ಭದ್ರತಾ ವಿಭಾಗ ಮತ್ತು ಸ್ಥಳೀಯ ಪೊಲೀಸರು ವಿಮಾನ ನಿಲ್ದಾಣದ ಹೊರಭಾಗದಲ್ಲಿ ಅಲರ್ಟ್ ಆಗಿದ್ದಾರೆ.

    ಮಾರ್ಕ್ಸ್‌ಮನ್‌ ಬುಲೆಟ್‌ಪ್ರೂಫ್‌ ಕಾರು ಎಷ್ಟು ಸೇಫ್‌?
    ಮಾರ್ಕ್ಸ್‌ಮನ್‌ (Marksman) ಅತ್ಯಂತ ಸುರಕ್ಷಿತವಾದ ಕಾರು, ಬುಲೆಟ್‌ ನಿಂದ ಮಾತ್ರವಲ್ಲದೇ ಗ್ರೆನೇಡ್‌ ದಾಳಿ ನಡೆದರೂ ಸಹ ಇದರ ಒಳಗಿರುವವರಿಗೆ ಯಾವುದೇ ಪರಿಣಾಮ ಬೀರುವುದಿಲ್ಲ. ದೊಡ್ಡ ದೊಡ್ಡ ಭಯೋತ್ಪಾದಕರು, ದರೋಡೆಕೋರರನ್ನು ಸಂಬಂಧ ಪಟ್ಟ ಸ್ಥಳಗಳಿಗೆ ಸುರಕ್ಷಿತವಾಗಿ ಕರೆದೊಯ್ಯಲು ಈ ವಾಹನವನ್ನ ಬಳಸಲಾಗುತ್ತದೆ.

    ರಾಣಾ ಭಾರತಕ್ಕೆ ತಲುಪಿದ ಕೂಡಲೇ ಎನ್‌ಐಎ ತಂಡ ಅಧಿಕೃತವಾಗಿ ಕಸ್ಟಡಿಗೆ ತೆಗೆದುಕೊಳ್ಳಲಿದೆ. ಮೊದಲು ಎನ್‌ಐಎ ಕಚೇರಿಗೆ ಕರೆತರಲಿದ್ದು, ಕೆಲ ಕಾಲ ವಿಚಾರಣೆ ಬಳಿಕ ಪಟಿಯಾಲ ಹೌಸ್‌ ಕೋರ್ಟ್‌ಗೆ ಹಾಜರುಪಡಿಸುವ ಸಾಧ್ಯತೆಯಿದೆ. ಕೋರ್ಟ್‌ಗೆ ಹಾಜರುಪಡಿಸುವುದಕ್ಕೂ ಮುನ್ನ ಎನ್‌ಐಎ ಅಧಿಕಾರಿಗಳ ಭದ್ರತೆಯಲ್ಲೇ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ನಂತರ ದೆಹಲಿ ತಿಹಾರ್ ಜೈಲಿನ ಹೈಸೆಕ್ಯುರಿಟಿ ವಾರ್ಡ್‌ನಲ್ಲಿ ಇರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

    ತಹವ್ವೂರ್ ರಾಣಾ ಯಾರು?
    ತಹವ್ವೂರ್ ರಾಣಾ ಹುಟ್ಟಿದ್ದು ಪಾಕಿಸ್ತಾನದಲ್ಲಿ. ಆರ್ಮಿ ಮೆಡಿಕಲ್ ಕಾಲೇಜಿನಲ್ಲಿ (Medical College) ಅಧ್ಯಯನ ಮಾಡಿದ ರಾಣಾ, ಪಾಕಿಸ್ತಾನದ ಸೇನೆಯಲ್ಲಿ 10 ವರ್ಷಗಳ ಕಾಲ ವೈದ್ಯನಾಗಿ ಕೆಲಸ ಮಾಡಿದ್ದ. ಈ ಕೆಲಸ ಇಷ್ಟವಾಗದೇ ಸೇನೆ ತೊರೆದ ರಾಣಾ, ಭಾರತದ ವಿರುದ್ಧ ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿದ್ದ. ಸದ್ಯ ರಾಣಾ ಕೆನಡಾ ಮೂಲದ ಉದ್ಯಮಿ.

    Ajit Doval

    ರಾಣಾ ನವೆಂಬರ್ 11 ಮತ್ತು 21, 2008 ರ ನಡುವೆ ದುಬೈ ಮೂಲಕ ಮುಂಬೈಗೆ ಬಂದಿದ್ದ. ಪೊವೈನಲ್ಲಿರುವ ಹೋಟೆಲ್ ರಿನೈಸಾನ್ಸ್‌ನಲ್ಲಿ ತಂಗಿ ದಾಳಿಗೆ ಬೇಕಾದ ಸಿದ್ಧತೆ ಪರಿಶೀಲಿಸಿದ್ದ. ಈತ ದುಬೈಗೆ ಹೋದ 5 ದಿನಗಳ ಬಳಿಕ ದಾಳಿ ನಡೆದಿತ್ತು. ಭಾರತವು ಜೂನ್ 2020 ರಲ್ಲಿ ರಾಣಾನನ್ನು ಗಡಿಪಾರಿಗಾಗಿ ಕಾನೂನು ಪ್ರಕ್ರಿಯೆಯನ್ನು ಪ್ರಾರಂಭಿಸಿತು. ಈ ವರ್ಷದ ಫೆಬ್ರವರಿಯಲ್ಲಿ, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಣಾನನ್ನು ಗಡಿಪಾರು ಮಾಡಲಾಗುವುದು ಎಂದು ದೃಢಪಡಿಸಿದ್ದರು.

    ನೆನಪಿದೆಯಾ ಕರಾಳ ಮುಂಬೈ ದಾಳಿ
    2008 ರ ನವೆಂಬರ್ 26 ರಂದು ಪಾಕಿಸ್ತಾನದಿಂದ ಸಮುದ್ರ ಮಾರ್ಗದ ಮೂಲಕ ಭಾರತದ ಆರ್ಥಿಕ ರಾಜಧಾನಿ ಮುಂಬೈಗೆ 10 ಲಷ್ಕರ್-ಎ-ತೈಬಾ ಭಯೋತ್ಪಾದಕರು ಪ್ರವೇಶಿಸಿದ್ದರು. ಭಯೋತ್ಪಾದಕರು ಸರಣಿ ಗುಂಡಿನ ದಾಳಿ ಮತ್ತು ಬಾಂಬ್ ಸ್ಫೋಟಗಳನ್ನು ನಡೆಸಿ 166 ಜನರನ್ನು ಕೊಂದಿದ್ದರು. 300 ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದ್ದರು. ಛತ್ರಪತಿ ಶಿವಾಜಿ ಟರ್ಮಿನಸ್ ರೈಲು ನಿಲ್ದಾಣ, ಕಾಮಾ ಆಸ್ಪತ್ರೆ, ನಾರಿಮನ್ ಹೌಸ್ ವ್ಯಾಪಾರ ಮತ್ತು ವಸತಿ ಸಂಕೀರ್ಣ, ಲಿಯೋಪೋಲ್ಡ್ ಕೆಫೆ, ತಾಜ್ ಹೋಟೆಲ್ ಮತ್ತು ಒಬೆರಾಯ್ ಟ್ರೈಡೆಂಟ್ ಹೋಟೆಲ್‌ಗಳಲ್ಲಿ ದಾಳಿ ನಡೆಸಲಾಗಿತ್ತು.

  • ಮುಂಬೈ ದಾಳಿಕೋರ ಅಮೆರಿಕದಿಂದ ಗಡಿಪಾರು – ನಾಳೆ ಬೆಳಗ್ಗೆ ಭಾರತಕ್ಕೆ ರಾಣಾ

    ಮುಂಬೈ ದಾಳಿಕೋರ ಅಮೆರಿಕದಿಂದ ಗಡಿಪಾರು – ನಾಳೆ ಬೆಳಗ್ಗೆ ಭಾರತಕ್ಕೆ ರಾಣಾ

    ಮುಂಬೈ: 2008 ರ ಮುಂಬೈ ಭಯೋತ್ಪಾದಕ ದಾಳಿಯ (Mumbai Attack) ಸಂಚುಕೋರ ತಹವ್ವೂರ್ ರಾಣಾನನ್ನು (Tahawwur Rana) ಅಮೆರಿಕದಿಂದ ಗಡಿಪಾರು ಮಾಡಲಾಗಿದ್ದು ಗುರುವಾರ ಬೆಳಗ್ಗೆ ಭಾರತಕ್ಕೆ (India) ಬರಲಿದ್ದಾನೆ.

    ಗುಪ್ತಚರ ಮತ್ತು ತನಿಖಾ ಅಧಿಕಾರಿಗಳ ವಿಶೇಷ ತಂಡ ಈಗಾಗಲೇ ಅಮೆರಿಕದಿಂದ (USA) ವಿಮಾನದಲ್ಲಿ ಕರೆದುಕೊಂಡು ಬರುತ್ತಿದ್ದು ನಾಳೆ ಬೆಳಗ್ಗೆ ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

    ಅಮೆರಿಕದ ನ್ಯಾಯಾಲಯದ ಶಿಫಾರಸುಗಳಿಗೆ ಅನುಗುಣವಾಗಿ, ದೆಹಲಿ ಮತ್ತು ಮುಂಬೈನ ಎರಡು ಜೈಲುಗಳಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆಗಳನ್ನು ಜಾರಿ ಮಾಡಲಾಗಿದೆ. ಭಾರತಕ್ಕೆ ಬಂದ ನಂತರ ರಾಣಾನನ್ನು ರಾಷ್ಟ್ರೀಯ ತನಿಖಾ ದಳ  (ಎನ್‌ಐಎ) ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಿದೆ.

    ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಎನ್‌ಐಎ ಮತ್ತು ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ಹಸ್ತಾಂತರ ಕಾರ್ಯಾಚರಣೆಯ ಮೇಲ್ವಿಚಾರಣೆ ನೋಡಿಕೊಂಡಿದ್ದಾರೆ.

    ತಹಾವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಅಮೆರಿಕ ಸುಪ್ರೀಂ ಕೋರ್ಟ್ ಆದೇಶ ಪ್ರಕಟಿಸಿತ್ತು. ಮುಂಬೈ ದಾಳಿ ಪ್ರಕರಣದಲ್ಲಿ ಬೇಕಾಗಿದ್ದ ಪಾಕಿಸ್ತಾನಿ ಮೂಲದ ಕೆನಡಾದ ಪ್ರಜೆ ರಾಣಾನನ್ನು ಹಸ್ತಾಂತರಿಸುವಂತೆ ಭಾರತ ಮನವಿ ಮಾಡಿತ್ತು. ಭಾರತಕ್ಕೆ ಗಡೀಪಾರು ಮಾಡದಿರಲು ರಾಣಾನಿಗೆ ಇದ್ದ ಕೊನೆಯ ಕಾನೂನು ಅವಕಾಶ ಕೈತಪ್ಪಿದ್ದು, ಭಾರತಕ್ಕೆ ಗಡೀಪಾರು ಮಾಡಲು ಅಮೆರಿಕ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿತ್ತು.  ಇದನ್ನೂ ಓದಿ: ಕಾನೂನು ಸ್ವರೂಪ ಪಡೆದ ʻವಕ್ಫ್ ಬಿಲ್ʼ – ಕೇಂದ್ರ ಅಧಿಸೂಚನೆ

    ಇದಕ್ಕೂ ಮೊದಲು, ಸ್ಯಾನ್ ಫ್ರಾನ್ಸಿಸ್ಕೋದ ಯುಎಸ್ ಕೋರ್ಟ್ ಆಫ್ ಅಪೀಲ್ಸ್ ಫಾರ್ ದಿ ನಾರ್ತ್ ಸರ್ಕ್ಯೂಟ್ ಸೇರಿದಂತೆ ಹಲವಾರು ಫೆಡರಲ್ ನ್ಯಾಯಾಲಯಗಳಲ್ಲಿ ಕಾನೂನು ಹೋರಾಟದಲ್ಲಿ ತಹಾವೂರ್ ರಾಣಾಗೆ ಸೋಲು ಉಂಟಾಗಿತ್ತು. ಕಳೆದ ವರ್ಷ ನವೆಂಬರ್ 13 ರಂದು ರಾಣಾ ಯುಎಸ್ ಸುಪ್ರೀಂ ಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದನು.

    ತಹಾವೂರ್ ರಾಣಾ ಯಾರು?
    ತಹಾವೂರ್ ರಾಣಾ ಪಾಕಿಸ್ತಾನ ಮೂಲದ ಕೆನಡಾದ ಉದ್ಯಮಿ. ತನ್ನ ಬಾಲ್ಯದ ಗೆಳೆಯ ಡೇವಿಡ್ ಕೋಲ್ಮನ್ ಹೆಡ್ಲಿ, ದಾವೂದ್ ಗಿಲಾನಿ ಮತ್ತು ಇತರರಿಗೆ ಸಹಕರಿಸಿದ್ದ. ಈ ಮೂಲಕ ಮುಂಬೈನಲ್ಲಿ ಲಷ್ಕರ್ ಭಯೋತ್ಪಾದಕ ದಾಳಿಯ ಯೋಜನೆ ಮತ್ತು ಕಾರ್ಯಗತಗೊಳಿಸಿದ್ದ.

    ರಾಣಾ ನವೆಂಬರ್ 11 ಮತ್ತು 21, 2008 ರ ನಡುವೆ ದುಬೈ ಮೂಲಕ ಮುಂಬೈಗೆ ಬಂದಿದ್ದ. ಪೊವೈನಲ್ಲಿರುವ ಹೋಟೆಲ್ ರಿನೈಸಾನ್ಸ್‌ನಲ್ಲಿ ತಂಗಿ ದಾಳಿಗೆ ಬೇಕಾದ ಸಿದ್ಧತೆ ಪರಿಶೀಲಿಸಿದ್ದ. ಈತ ದುಬೈಗೆ ಹೋದ 5 ದಿನಗಳ ಬಳಿಕ ದಾಳಿ ನಡೆದಿತ್ತು. ಇದನ್ನೂ ಓದಿ: ಭಾರತದ ಉದ್ಯಮಿಗೆ ಅಮೆರಿಕದಲ್ಲಿ ಕಹಿ ಅನುಭವ – ಏರ್‌ಪೋರ್ಟ್‌ನಲ್ಲಿ 8 ಗಂಟೆ ಕೂರಿಸಿದ ಆರೋಪ

    ಭಾರತವು ಜೂನ್ 2020 ರಲ್ಲಿ ರಾಣಾನನ್ನು ಗಡೀಪಾರುಗಾಗಿ ಕಾನೂನು ಪ್ರಕ್ರಿಯೆಯನ್ನು ಪ್ರಾರಂಭಿಸಿತು. ಈ ವರ್ಷದ ಫೆಬ್ರವರಿಯಲ್ಲಿ, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಣಾನನ್ನು  ಗಡೀಪಾರು ಮಾಡಲಾಗುವುದು ಎಂದು ದೃಢಪಡಿಸಿದ್ದರು.

    ಮುಂಬೈ ದಾಳಿ:
    2008 ರ ನವೆಂಬರ್ 26 ರಂದು ಪಾಕಿಸ್ತಾನದಿಂದ ಸಮುದ್ರ ಮಾರ್ಗದ ಮೂಲಕ ಭಾರತದ ಆರ್ಥಿಕ ರಾಜಧಾನಿ ಮುಂಬೈಗೆ 10 ಲಷ್ಕರ್-ಎ-ತೈಬಾ ಭಯೋತ್ಪಾದಕರು ಪ್ರವೇಶಿಸಿದ್ದರು. ಭಯೋತ್ಪಾದಕರು ಸರಣಿ ಗುಂಡಿನ ದಾಳಿ ಮತ್ತು ಬಾಂಬ್ ಸ್ಫೋಟಗಳನ್ನು ನಡೆಸಿ 166 ಜನರನ್ನು ಕೊಂದಿದ್ದರು. 300 ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದ್ದರು. ಛತ್ರಪತಿ ಶಿವಾಜಿ ಟರ್ಮಿನಸ್ ರೈಲು ನಿಲ್ದಾಣ, ಕಾಮಾ ಆಸ್ಪತ್ರೆ, ನಾರಿಮನ್ ಹೌಸ್ ವ್ಯಾಪಾರ ಮತ್ತು ವಸತಿ ಸಂಕೀರ್ಣ, ಲಿಯೋಪೋಲ್ಡ್ ಕೆಫೆ, ತಾಜ್ ಹೋಟೆಲ್ ಮತ್ತು ಒಬೆರಾಯ್ ಟ್ರೈಡೆಂಟ್ ಹೋಟೆಲ್‌ಗಳಲ್ಲಿ ದಾಳಿ ನಡೆಸಲಾಗಿತ್ತು.

  • ನಾನು ಪಾಕಿಸ್ತಾನದ ಮುಸ್ಲಿಂ, ಭಾರತದಲ್ಲಿ ಹಿಂಸೆಯಾಗುವ ಸಾಧ್ಯತೆ ಹೆಚ್ಚು: ಮುಂಬೈ ದಾಳಿ ಆರೋಪಿ ತಹವ್ವೂರ್‌

    ನಾನು ಪಾಕಿಸ್ತಾನದ ಮುಸ್ಲಿಂ, ಭಾರತದಲ್ಲಿ ಹಿಂಸೆಯಾಗುವ ಸಾಧ್ಯತೆ ಹೆಚ್ಚು: ಮುಂಬೈ ದಾಳಿ ಆರೋಪಿ ತಹವ್ವೂರ್‌

    – ಭಾರತಕ್ಕೆ ಹಸ್ತಾಂತರ ಮಾಡದಂತೆ ಅಮೆರಿಕದ ಸುಪ್ರೀಂ ಕೋರ್ಟ್‌ಗೆ ಮುಂಬೈ ದಾಳಿ ಆರೋಪಿ ತಹವ್ವೂರ್ ರಾಣಾ ಅರ್ಜಿ

    ನವದೆಹಲಿ: 26/11 ರ ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ ತಹವ್ವೂರ್ ರಾಣಾ (Tahawwur Rana) ತನ್ನನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗೆ ತುರ್ತು ತಡೆ ನೀಡುವಂತೆ ಕೋರಿ ಅಮೆರಿಕದ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ. ತಾನು ಪಾಕಿಸ್ತಾನಿ ಮೂಲದ ಮುಸ್ಲಿಂ ಆಗಿರುವುದರಿಂದ ಭಾರತದಲ್ಲಿ ತನಗೆ ಹಿಂಸೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ರಾಣಾ ಅರ್ಜಿಯಲ್ಲಿ ಹೇಳಿದ್ದಾನೆ.

    63 ವರ್ಷದ ತಹಾವೂರ್ ರಾಣಾ ಪ್ರಸ್ತುತ ಲಾಸ್ ಏಂಜಲೀಸ್‌ನ ಜೈಲಿನಲ್ಲಿದ್ದಾನೆ. ಸಲ್ಲಿಕೆಯಾಗಿರುವ ಅರ್ಜಿಯಲ್ಲಿ ಹೃದಯ ರಕ್ತನಾಳದ ಉರಿಯೂತ, ಅರಿವಿನ ದೌರ್ಬಲ್ಯದೊಂದಿಗೆ ಪಾರ್ಕಿನ್ಸನ್ ಕಾಯಿಲೆ ಮತ್ತು ಸಂಭವನೀಯ ಮೂತ್ರಕೋಶದ ಕ್ಯಾನ್ಸರ್ ಸೇರಿದಂತೆ ಹಲವು ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ರಾಣಾ ವಿಚಾರಣೆಯನ್ನು ಎದುರಿಸಲು ಅವರು ಹೆಚ್ಚು ಕಾಲ ಬದುಕಲಾರರು ಎಂದು ಅವರ ವಕೀಲರು ತಿಳಿಸಿದ್ದಾರೆ.

    ಅಲ್ಲದೇ ಭಾರತದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ವಿಶೇಷವಾಗಿ ಮುಸ್ಲಿಮರ ಮೇಲೆ ವ್ಯವಸ್ಥಿತ ತಾರತಮ್ಯ ಮತ್ತು ಕಳಂಕವನ್ನುಂಟು ಮಾಡುತ್ತಿದೆ. ಇದು ರಾಣಾ ಅವರ ನ್ಯಾಯಯುತ ವಿಚಾರಣೆಯ ಹಕ್ಕು ಅಪಾಯಕ್ಕೆ ಸಿಲುಕುತ್ತದೆ ಎಂದು ಅವರ ಪರ ವಕೀಲರು ವಾದಿಸಿದರು.

    ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ‘ತುಂಬಾ ದುಷ್ಟ’ ಎಂದು ಕರೆದು ರಾಣಾ ಗಡಿಪಾರು ಮಾಡಲು ತಮ್ಮ ಆಡಳಿತ ಅನುಮೋದನೆ ನೀಡಿದೆ ಎಂದು ಘೋಷಿಸಿದರು.

    ಎಲ್ಲಾ ಕಾನೂನು ದಾಖಲೆಗಳನ್ನು ಅಮೆರಿಕದ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾಗಿದೆ. ಹಸ್ತಾಂತರಕ್ಕೆ ಅನುಮತಿ ದೊರೆತ ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ ತಂಡವು ಅಮೆರಿಕಕ್ಕೆ ಪ್ರಯಾಣಿಸಲಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಸಂಚು ರೂಪಿಸಿ ಕಾರ್ಯಗತಗೊಳಿಸಿದ್ದಕ್ಕಾಗಿ ರಾಣಾ ಸೇರಿದಂತೆ ಒಂಬತ್ತು ಜನರ ವಿರುದ್ಧ ಎನ್‌ಐಎ 2011 ರಲ್ಲಿ ಆರೋಪಪಟ್ಟಿ ಸಲ್ಲಿಸಿತು.

  • ದೊಡ್ಡ ಜಯ| ಮುಂಬೈ ದಾಳಿಕೋರನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಕೋರ್ಟ್‌ ಆದೇಶ

    ದೊಡ್ಡ ಜಯ| ಮುಂಬೈ ದಾಳಿಕೋರನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಕೋರ್ಟ್‌ ಆದೇಶ

    ನವದೆಹಲಿ: ಹೊಸ ವರ್ಷದಂದೇ ಭಾರತಕ್ಕೆ (India) ದೊಡ್ಡ ಯಶಸ್ಸು ಸಿಕ್ಕಿದೆ. ಮುಂಬೈ ಉಗ್ರ ದಾಳಿ (2008 Mumbai Attacks) ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಕಾಗಿದ್ದ ಪ್ರಮುಖ ಆರೋಪಿ ತಹವ್ವುರ್ ಹುಸೇನ್ ರಾಣಾನನ್ನು (Tahawwur Hussain Rana) ಭಾರತಕ್ಕೆ ಹಸ್ತಾಂತರಿಸಲು ಅಮೆರಿಕದ ನ್ಯಾಯಾಲಯ (US Court) ಆದೇಶ ಪ್ರಕಟಿಸಿದೆ.

    2008ರ ಭಯೋತ್ಪಾದನಾ ದಾಳಿಗೆ ಸಂಬಂಧಿಸಿದಂತೆ ಹುಸೇನ್ ರಾಣಾನನ್ನು ಸ್ಥಳಾಂತರ ಮಾಡುವಂತೆ ಭಾರತ ಬಹಳ ಪ್ರಯತ್ನ ನಡೆಸುತ್ತಿತ್ತು.

    ಈಗ ಅಮೆರಿಕದ ಮೇಲ್ಮನವಿ ನ್ಯಾಯಾಲಯದ ನ್ಯಾಯಾಧೀಶರ ಸಮಿತಿ ರಾಣಾನನ್ನು ಹಸ್ತಾಂತರಿಸುವಂತೆ ಆದೇಶಿಸಿರುವುದರಿಂದ ಸದ್ಯ ಜೈಲಿನಲ್ಲಿರುವ ಪಾಕಿಸ್ತಾನಿ (Pakistan) ಮೂಲದ ಕೆನಡಾ ಉದ್ಯಮಿ ತಹವ್ವುರ್ ರಾಣಾನನ್ನು ಶೀಘ್ರವೇ ಭಾರತಕ್ಕೆ ಕರೆ ತರುವ ಸಾಧ್ಯತೆಯಿದೆ. ಇದನ್ನೂ ಓದಿ: ಮೊದಲ ಕ್ಯಾಬಿನೆಟ್‌ ರೈತರಿಗೆ ಅರ್ಪಿಸಿದ ಮೋದಿ – ಡಿಎಪಿ ಗೊಬ್ಬರಕ್ಕೆ ಸಬ್ಸಿಡಿ

    ಕೋರ್ಟ್‌ ಆದೇಶ ಬಳಿಕ ಆತನನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕ ಭಾರತಕ್ಕೆ ಕರೆತರುವ ಪ್ರಕ್ರಿಯೆಯನ್ನು ರಾಷ್ಟ್ರೀಯ ತನಿಖಾ ದಳ (NIA) ಆರಂಭಿಸಿದೆ.

    2008 ರಲ್ಲಿ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರು ನಡೆಸಿದ 26/11 ಮುಂಬೈ ದಾಳಿಯಲ್ಲಿ ರಾಣಾನ ಪಾತ್ರದ ಬಗ್ಗೆ ಎನ್‌ಐಎ ತನಿಖೆ ನಡೆಸುತ್ತಿದೆ. ಉಭಯ ದೇಶಗಳ ನಡುವಿನ ಹಸ್ತಾಂತರ ಒಪ್ಪಂದದ ಅಡಿಯಲ್ಲಿ ರಾಣಾನನ್ನು ಭಾರತಕ್ಕೆ ಕಳುಹಿಸಬಹುದು ಎಂದು ಯುಎಸ್ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.

     

  • ಮುಂಬೈ ದಾಳಿಯ ಮಾಸ್ಟರ್‌ ಮೈಂಡ್‌ ಅಬ್ದುಲ್ ರಹಮಾನ್ ಮಕ್ಕಿ ಸಾವು

    ಮುಂಬೈ ದಾಳಿಯ ಮಾಸ್ಟರ್‌ ಮೈಂಡ್‌ ಅಬ್ದುಲ್ ರಹಮಾನ್ ಮಕ್ಕಿ ಸಾವು

    ಇಸ್ಲಾಮಾಬಾದ್‌: ಮುಂಬೈ ದಾಳಿಯ (Mumbai Attack) ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಸೋದರ ಮಾವ ಮತ್ತು ನಿಷೇಧಿತ ಜಮಾತ್-ಉದ್-ದವಾ ಉಪ ಮುಖ್ಯಸ್ಥ ಹಫೀಜ್ ಅಬ್ದುಲ್ ರಹಮಾನ್ ಮಕ್ಕಿ ( Abdul Rehman Makki) ಶುಕ್ರವಾರ ಲಾಹೋರ್‌ನಲ್ಲಿ ಹೃದಯಾಘಾತದಿಂದ (Heart Attack) ಸಾವನ್ನಪ್ಪಿದ್ದಾನೆ.

    ಕಳೆದ ಕೆಲವು ದಿನಗಳಿಂದ ಮಧುಮೇಹ, ಅನಾರೋಗ್ಯದಿಂದ ಬಳಲುತ್ತಿದ್ದ ಅಬ್ದುಲ್ ರಹಮಾನ್ ಮಕ್ಕಿ ಲಾಹೋರ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಇಂದು (ಡಿ.27) ಮುಂಜಾನೆ ಮಕ್ಕಿ ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ. ಇದನ್ನೂ ಓದಿ: ಅಫ್ಘಾನಿಸ್ತಾನದ ಮೇಲೆ ಪಾಕ್‌ ಏರ್‌ಸ್ಟ್ರೈಕ್‌, 15 ಮಂದಿ ಸಾವು

    ಭಯೋತ್ಪಾದನಾ ಕೃತ್ಯಗಳಿಗೆ ಹಣಕಾಸಿನ ನೆರವು ಒದಗಿಸುತ್ತಿದ್ದ ಈತನಿಗೆ 2020 ರಲ್ಲಿ ಭಯೋತ್ಪಾದನೆ ನಿಗ್ರಹ ನ್ಯಾಯಾಲಯವು ಆರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು.

    2023 ರಲ್ಲಿ ಮಕ್ಕಿಯನ್ನು ವಿಶ್ವಸಂಸ್ಥೆಯು ಜಾಗತಿಕ ಭಯೋತ್ಪಾದಕ ಘೋಷಿಸಿ ಆತನ ಸ್ವತ್ತುಗಳ ಜಪ್ತಿ ಮಾಡಿ ಪ್ರಯಾಣ ನಿಷೇಧ ಹೇರಿತ್ತು.