Tag: mumabi

  • ತವರು ಸೇರಿದ ಪತ್ನಿ – ಮಕ್ಕಳು ಸತ್ತಂತೆ ಫೋಟೋ ಕ್ಲಿಕ್ಕಿಸಿ ಹೆಂಡ್ತಿಗೆ ಕಳಿಸಿದ!

    ತವರು ಸೇರಿದ ಪತ್ನಿ – ಮಕ್ಕಳು ಸತ್ತಂತೆ ಫೋಟೋ ಕ್ಲಿಕ್ಕಿಸಿ ಹೆಂಡ್ತಿಗೆ ಕಳಿಸಿದ!

    ಮುಂಬೈ: ಮುನಿಸಿಕೊಂಡು ತವರು ಸೇರಿದ್ದ ಪತ್ನಿಯನ್ನು ಕರೆ ತರಲು ಮಕ್ಕಳು ಸತ್ತಂತೆ ಫೋಟೋ ಕ್ಲಿಕ್ಕಿಸಿದ ಪತಿ ಜೈಲು ಸೇರಿದ್ದಾನೆ. ಈ ಘಟನೆ ಮುಂಬೈನ ಕುರಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    33 ವರ್ಷದ ಸುಚಿತ್ ಗೌಡ ಜೈಲು ಸೇರಿದ ವ್ಯಕ್ತಿ. ಎರಡು ವರ್ಷಗಳ ಹಿಂದೆ ಸುಚಿತ್ ಪತ್ನಿ ಮುನಿಸಿಕೊಂಡು ತವರು ಸೇರಿದ್ದಳು. ಪತ್ನಿಯನ್ನ ಕರೆತರಲು ಮಗನನ್ನು ಶವದಂತೆ ಮಲಗಿಸಿದ್ದಾನೆ. ಆತನ ಮೇಲೆ ಹೂವಿನ ಹಾರ ಹಾಕಿ, ಹಣೆಗೆ ದೊಡ್ಡದಾದ ತಿಲಕವಿಟ್ಟು, ಪಕ್ಕದಲ್ಲಿ ಅಗರಬತ್ತಿ ಬೆಳಗಿ ಫೋಟೋ ಕ್ಲಿಕ್ ಮಾಡಿ, ಪತ್ನಿಗೆ ಕಳುಹಿಸಿದ್ದಾನೆ. ಎಂಟು ವರ್ಷದ ಮಗ ತಂದೆ ಹೇಳಿದಂತೆಯೇ ಕೇಳಿದ್ದಾನೆ.

    ಇದೆಲ್ಲ ನೋಡಿದ 13 ವರ್ಷದ ಮಗಳು ಭಯಗೊಂಡಿದ್ದಳು. ಆಕೆಯ ಕುತ್ತಿಗೆ ಹಗ್ಗ ಬಿಗಿದು ಫ್ಯಾನ್ ಗೆ ಕಟ್ಟಿದ್ದಾನೆ. ಹಗ್ಗ ಬಿಗಿಯಾಗುತ್ತಿದ್ದಂತೆ ಭಯಗೊಂಡ ಮಗಳು ಜೋರಾಗಿ ಕಿರುಚಿದ ಕೂಡಲೇ ಸುಚಿತ್ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಮಗು ಧ್ವನಿ ಕೇಳಿ ಬಂದ ನೆರೆ ಮನೆಯವರು ಆಕೆಯನ್ನು ರಕ್ಷಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಸುಚಿತ್ ಗೌಡ ಮದ್ಯದ ನಶೆಯಲ್ಲಿ ಈ ರೀತಿ ಮಾಡಿದ್ದಾನೆ. ವಾರದ ಹಿಂದೆ ಊರಿಗೆ ಹೋಗಿದ್ದ ಸುಚಿತ್, ಜೊತೆಯಲ್ಲಿ ಮಗ ಮತ್ತು ಮಗಳನ್ನು ಮುಂಬೈಗೆ ಕರೆದುಕೊಂಡು ಬಂದಿದ್ದನು. ಆರೋಪಿ ನಶೆಯಲ್ಲಿ ಮಕ್ಕಳ ಮೇಲೆ ಹಲ್ಲೆ ಸಹ ನಡೆಸುತ್ತಿರುವ ವಿಚಾರ ನೆರೆಹೊರೆಯವರಿಂದ ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದರು. ಇದನ್ನೂ ಓದಿ: ಕಾಜಲ್, ಸಮಂತಾ, ವಿಜಯ್ ದೇವರಕೊಂಡ ಹಿಂದಿಕ್ಕಿದ ರಶ್ಮಿಕಾ

    ಆರೋಪಿ ವಿರುದ್ಧ ಮಕ್ಕಳಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ಹಾಗೂ ಕೊಲೆ ಯತ್ನದಡಿ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಆರೋಪಿಯನ್ನು ಮೂರು ದಿನ ಪೊಲೀಸ್ ಕಸ್ಟಡಿಗೆ ನೀಡಿದೆ. ಸದ್ಯ ಮಕ್ಕಳನ್ನು ತಾಯಿಯ ವಶಕ್ಕೆ ನೀಡಲಾಗಿದೆ. ಇದನ್ನೂ ಓದಿ: ನಾನೇನು ಕಿಂಗ್ ಮೇಕರ್ ಅಲ್ಲ, ಗೇಮ್ ಬ್ರೇಕರ್ ಅಂತೂ ಅಲ್ಲ: ಅಸಾದುದ್ದೀನ್ ಓವೈಸಿ

  • ಬಾಲಿವುಡ್ ಬಾದ್ ಶಾ ನಿಂದ ಗಂಭೀರ್‌ಗೆ ಪ್ರೀತಿಯ ಸಂದೇಶ

    ಬಾಲಿವುಡ್ ಬಾದ್ ಶಾ ನಿಂದ ಗಂಭೀರ್‌ಗೆ ಪ್ರೀತಿಯ ಸಂದೇಶ

    ಮುಂಬೈ: ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ಗೌತಮ್ ಗಂಭೀರ್ ಅವರಿಗೆ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಪ್ರೀತಿಯ ಸಂದೇಶ ರವಾನಿಸಿದ್ದಾರೆ.

    ಭಾರತ ಕ್ರಿಕೆಟ್ ತಂಡದ ಮಾಜಿ ಓಪನಿಂಗ್ ಬ್ಯಾಟ್ಸ್‌ಮನ್ ಗಂಭೀರ್ ಮಂಗಳವಾರ ಎಲ್ಲಾ ಮಾದರಿಯ ಕ್ರಿಕೆಟ್‍ನಿಂದ ನಿವೃತ್ತಿ ಘೋಷಿಸಿದ್ದರು. ಈ ಬಗ್ಗೆ ತಮ್ಮ ಮನದಾಳದ ಮಾತನ್ನಾಡಿರುವ ಶಾರುಖ್ ಖಾನ್ ರವರ ಸಂದೇಶ ಸೋಶಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿದೆ.

    ಬಾಲಿವುಡ್ ಸೂಪರ್ ಸ್ಟಾರ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಲೀಕ ಶಾರೂಖ್, ಕ್ರಿಕೆಟ್‍ಗೆ ವಿದಾಯ ಹೇಳಿದ ಗಂಭೀರ್ ಅವರಿಗೆ ಬರೀ ಅಭಿನಂದಿಸಿ ಶುಭ ಕೋರಿಲ್ಲ, ಬದಲಿಗೆ ಗಂಭೀರ್ ಅವರನ್ನು ವಿಶೇಷ ವ್ಯಕ್ತಿಯನ್ನಾಗಿ ಪರಿಗಣಿಸಿದ್ದಾರೆ.

    ಗಂಭೀರ್ ಗೆ ಪ್ರೀತಿಯಿಂದ ಟ್ವೀಟ್ ಮಾಡಿರುವ ಶಾರೂಖ್, ‘ತಂಡದ ಮುಂದಾಳತ್ವಕ್ಕೆ ಮತ್ತು ಪ್ರೀತಿಗೆ ಧನ್ಯವಾದಗಳು ನನ್ನ ನಾಯಕನೇ. ವಿಶೇಷ ವ್ಯಕ್ತಿಯಾದ ನಿನ್ನನ್ನು ಅಲ್ಲಾ ಖುಷಿಯಾಗಿಟ್ಟಿರಲಿ. ನೀನಿನ್ನೂ ನಗುವಂತಾಗಲಿ’ ಎಂದು ಬರೆದುಕೊಂಡಿದ್ದಾರೆ.

    ನಿವೃತ್ತಿ ಕುರಿತು ಆಂಗ್ಲ ಸುದ್ದಿವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿದ್ದ ಅವರು, ಸತತವಾಗಿ 15 ವರ್ಷ ಭಾರತ ದೇಶಕ್ಕಾಗಿ ನಾನು ಕ್ರಿಕೆಟ್ ಆಡಿದ್ದೇನೆ. ಈ ಸುಂದರವಾದ ಆಟದಿಂದ ಈಗ ನಿವೃತ್ತಿ ಬಯಸುತ್ತಿದ್ದೇನೆ. ನನ್ನ ಕೊನೆಯ ಪಂದ್ಯವನ್ನು ಡಿಸೆಂಬರ್ 6 ರಂದು ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆಯಲಿರುವ ಆಂಧ್ರ ವಿರುದ್ಧದ ರಣಜಿ ಪಂದ್ಯದಲ್ಲಿ ಆಡಲಿದ್ದೇನೆ. ಒಬ್ಬ ಬ್ಯಾಟ್ಸ್‍ಮನ್ ಆಗಿ ಸಮಯಕ್ಕೆ ತುಂಬಾ ಮಹತ್ವವನ್ನು ನೀಡಿದ್ದೇನೆ. ಈಗ ನನಗೆ ಸರಿಯಾದ ಸಮಯ ಬಂದಿದೆ ಎಂದು ಹೇಳಿದ್ದರು.

    37 ವರ್ಷದ ಗೌತಮ್ ಗಂಭೀರ್ ಇದುವರೆಗೂ ಒಟ್ಟು 147 ಏಕದಿನ ಪಂದ್ಯಗಳನ್ನಾಡಿದ್ದು, 39.68ರ ಸರಾಸರಿಯಲ್ಲಿ 5,238 ರನ್ ಗಳಿಸಿದ್ದರು. ಇದರಲ್ಲಿ 11 ಶತಕ ಹಾಗೂ 34 ಅರ್ಧ ಶತಕಗಳನ್ನು ಒಳಗೊಂಡಿದೆ. 52 ಟೆಸ್ಟ್ ಪಂದ್ಯಗಳಲ್ಲಿ 41.95 ಸರಾಸರಿಯಂತೆ 4,154 ರನ್ ಹೊಡೆದಿದ್ದರು. ಇದರಲ್ಲಿ 9 ಶತಕ ಸೇರಿದಂತೆ 22 ಅರ್ಧ ಶತಕಗಳು ದಾಖಲಾಗಿವೆ. ಇದಲ್ಲದೇ ಟಿ-20ಯಲ್ಲಿ 37 ಪಂದ್ಯಗಳನ್ನಾಡಿದ್ದ ಅವರು, 27.41ರ ಸರಾಸರಿಯಲ್ಲಿ 932 ರನ್ ಬಾರಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮುಂಬೈನ ಬಹುಮಹಡಿ ಕಟ್ಟಡದಲ್ಲಿ ಬೆಂಕಿ: ಇಬ್ಬರ ದುರ್ಮರಣ, 14 ಮಂದಿಗೆ ಗಾಯ

    ಮುಂಬೈನ ಬಹುಮಹಡಿ ಕಟ್ಟಡದಲ್ಲಿ ಬೆಂಕಿ: ಇಬ್ಬರ ದುರ್ಮರಣ, 14 ಮಂದಿಗೆ ಗಾಯ

    ಮುಂಬೈ: ಬಹುಮಹಡಿ ಕಟ್ಟಡಕ್ಕೆ ಬೆಂಕಿ ಬಿದ್ದು ಇಬ್ಬರು ಮೃತಪಟ್ಟು, 14 ಮಂದಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ರಾಜಧಾನಿ ದಾದರ್ ಪ್ರದೇಶದಲ್ಲಿ ಸಂಭವಿಸಿದೆ.

    ಮುಂಬೈನ ಕ್ರಿಸ್ಟಲ್ ಟವರ್ ಬಹುಮಹಡಿ ಕಟ್ಟಡದ 12ನೇ ಅಂತಸ್ಥಿನಲ್ಲಿ ಬುಧವಾರ ಬೆಳಗ್ಗೆ 8.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸುತ್ತಿದ್ದಂತೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬರುವ ವೇಳೆಗೆ ಬೆಂಕಿಯ ಕೆನ್ನಾಲಿಗೆಯು 12ನೇ ಮಹಡಿಯಿಂದ 13, 14 ಹಾಗೂ 15ನೇ ಮಹಡಿಗೆ ಹಬ್ಬಿದೆ.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ್ದು, ಸುಮಾರು 20ಕ್ಕೂ ಹೆಚ್ಚು ಅಗ್ನಿಶಾಮ ವಾಹನಗಳು ಹಾಗೂ 4 ನೀರಿನ ಟ್ಯಾಂಕ್‍ಗಳ ಮೂಲಕ ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ತೊಡಗಿದ್ದೇವೆ. ಬೆಂಕಿಯ ಕೆನ್ನಾಲಿಗೆಗೆ ಇಬ್ಬರು ಮೃತಪಟ್ಟಿದ್ದು, ಮೃತರಲ್ಲಿ ಓರ್ವ ಯುವಕ ಹಾಗೂ ವೃದ್ಧೆಯಾಗಿದ್ದಾರೆ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

    ಘಟನೆಯಿಂದಾಗಿ 14 ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಹತ್ತಿರದ ಕೆ.ಇ.ಎಂ. ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೇ ಕಟ್ಟಡದಲ್ಲಿ ಇನ್ನೂ ಅನೇಕ ಮಂದಿ ಸಿಲುಕಿದ್ದಾರೆಂದು ತಿಳಿದು ಬಂದಿದ್ದು, ಅವರನ್ನು ಕೂಡ ರಕ್ಷಣೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮುಂಬೈ ನಗರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕ್ರಿಕೆಟ್ ಬ್ಯಾಟಿನಿಂದ ಹೊಡೆದು ಅಣ್ಣನಿಂದಲೇ ತಮ್ಮನ ಕಗ್ಗೊಲೆ!

    ಕ್ರಿಕೆಟ್ ಬ್ಯಾಟಿನಿಂದ ಹೊಡೆದು ಅಣ್ಣನಿಂದಲೇ ತಮ್ಮನ ಕಗ್ಗೊಲೆ!

    ಮುಂಬೈ: ಕ್ರಿಕೆಟ್ ಬ್ಯಾಟ್‍ನಿಂದ ಹೊಡೆದು ತಮ್ಮನನ್ನು ಕೊಲೆ ಮಾಡಿದ ಆರೋಪದ ಮೇಲೆ 35 ವರ್ಷದ ಅಣ್ಣನನ್ನು ಪೊಲೀಸರು ಬಂಧಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.

    ಆರೋಪಿ ಅಜಯ್ ಮುಕ್ವಾನಾ ತನ್ನ ತಮ್ಮ ಮುಕೇಶ್ ಮುಕ್ವಾನನ್ನು ಕೊಲೆ ಮಾಡಿದ್ದಾನೆ. ಸದ್ಯ ಆರೋಪಿ ಅಜಯ್ ನ್ನು ಪೊಲಿಸರು ಬಂಧಿಸಿದ್ದು, ನ್ಯಾಯಾಂಗಬಂಧನಕ್ಕೆ ಒಪ್ಪಿಸಿದ್ದಾರೆ.

    ಏನಿದು ಪ್ರಕರಣ?: ಆರೋಪಿ ಅಜಯ್ ಮಕ್ವಾನಾ ಮತ್ತು ತಮ್ಮ ಮುಖೇಶ್ ಮಕ್ವಾನಾ ಮಧ್ಯೆ ಮನೆಯಲ್ಲಿ ವಾಗ್ದಾನ ನಡೆದಿದ್ದೇ ಮುಖೇಶ್ ಕೊಲೆಗೆ ಕಾರಣ ಅಂತ ಭೋವಾಡಾ ಪೊಲೀಸ್ ಠಾಣೆಯ ಮೂಲಗಳು ತಿಳಿಸಿವೆ.

    ಅಜಯ್ ಮದ್ಯವ್ಯಸನಿಯಾಗಿದ್ದು, ಕೆಇಎಂ ಆಸ್ಪತ್ರೆಯಲ್ಲಿ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದ. ಮುಕೇಶ್ ಅನಕ್ಷರಸ್ಥನಾಗಿದ್ದನು. ಹೀಗಾಗಿ ಆತ ಮನೆಯಲ್ಲೇ ಇದ್ದು ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದನು. ಇದರಿಂದ ತಾಯಿಗೂ ಮುಕೇಶ್ ಮೇಲೆ ಜಾಸ್ತಿ ಪ್ರೀತಿ ಇತ್ತು. ಈ ಹಿನ್ನೆಲೆಯಲ್ಲಿ ಮೊದಲೇ ಮದ್ಯ ವ್ಯಸನಿಯಾಗಿದ್ದ ಅಜಯ್ ಕುಡಿದು ಬಂದು ತನ್ನ 75 ವರ್ಷದ ತಾಯಿಯ ಜೊತೆ ಪ್ರತೀದಿನ ಜಗಳವಾಡುತ್ತಿದ್ದನು. ಇದೇ ಕಾರಣಕ್ಕೆ ಅಣ್ಣ- ತಮ್ಮನ ಜೊತೆ ಕೂಡ ಜಗಳವಾಗಿದ್ದು, ಈ ವೇಳೆ ತಾಯಿ ಮುಕೇಶ್ ಜೊತೆ ಸೇರಿ ಅಣ್ಣ ಅಜಯ್‍ಗೆ ಬೈದಿದ್ದಾರೆ.

    ಇದ್ರಿಂದ ಕೋಪೋದ್ರಿಕ್ತನಾದ ಅಣ್ಣ ಅಜಯ್ ಅಲ್ಲೇ ಇದ್ದ ಕ್ರಿಕೆಟ್ ಬ್ಯಾಟಿನಿಂದ ತಮ್ಮ ಮುಕೇಶ್ ತಲೆಗೆ ಹೊಡೆದಿದ್ದಾನೆ. ಪರಿಣಾಮ ಗಂಭೀರ ಗಾಯಗೊಂಡ ಮುಕೇಶ್ ಅಲ್ಲೇ ಕುಸಿದುಬಿದ್ದಿದ್ದಾನೆ. ಇದರಿಂದ ಭಯಗೊಂಡ ಆರೋಪಿ ಅಜಯ್ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಗಂಭೀರ ಗಾಯಗೊಂಡ ಮುಕೇಶ್‍ನನ್ನು ಕೂಡಲೇ ಕೆಇಎಂ ಆಸ್ಪತ್ರೆಗೆ ದಾಖಲಿಸಿದ್ದರೂ, ಅದಾಗಲೇ ಆತ ಮೃತಪಟ್ಟಿದ್ದಾನೆ ಅಂತಾ ಪೊಲೀಸರು ತಿಳಿಸಿದ್ದಾರೆ.

    ಘಟನೆಯಿಂದಾಗಿ ಅಜಯ್ ವಿರುದ್ಧ ಪೊಲಿಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಜಯ್ ನನ್ನು ಭಾನುವಾರ ಪೊಲೀಸರು ಬಂಧಿಸಿದ್ದು, ಜುಲೈ 7 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.