Tag: mumabai

  • ಕೊಹ್ಲಿ ಪುತ್ರಿಯ ಮೊದಲ ಫೋಟೋ ವೈರಲ್

    ಕೊಹ್ಲಿ ಪುತ್ರಿಯ ಮೊದಲ ಫೋಟೋ ವೈರಲ್

    ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಹೆಣ್ಣು ಮಗುವನ್ನ ಬರಮಾಡಿಕೊಂಡಿದ್ದಾರೆ. ವಿರಾಟ್ ಈ ಸಂಭ್ರಮವನ್ನು ಹಂಚಿಕೊಂಡಾಗ ಅಭಿಮಾನಿಗಳಲ್ಲಿ ಮಗುವನ್ನು ನೋಡುವ ತವಕ ಹೆಚ್ಚಿತ್ತು. ಆದ್ರೆ ವಿರಾಟ್ ಮಾತ್ರ ಯಾವುದೇ ಫೋಟೋ ಹಂಚಿಕೊಳ್ಳದೆ ಗೌಪ್ಯತೆ ಕಾಪಾಡಿಕೊಂಡಿದ್ದರು. ಆದರೆ ಅವರ ಸಹೋದರ ಸಾಮಾಜಿಕ ಜಾಲತಾಣದಲ್ಲಿ ಮಗುವಿನ ಕೋಮಲ ಪಾದದ ಫೋಟೋ ಹಂಚಿಕೊಳ್ಳುವ ಮೂಲಕ ಖುಷಿ ಹೊರಹಾಕಿದ್ದಾರೆ.

    ವಿರಾಟ್ ಕೊಹ್ಲಿ ಸಹೋದರ ವಿಕಾಸ್ ಕೊಹ್ಲಿ ತನ್ನ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ವಿರಾಟ್ ಮಗಳ ಪಾದದ ಪೋಟೋ ಹಂಚಿಕೊಂಡು ಸಂತೋಷ ತುಂಬಿ ತುಳುಕುತ್ತಿದೆ. ನಮ್ಮ ಮನೆಗ ದೇವತೆಯ ಆಗಮನವಾಗಿದೆ ಎಂದು ಬರೆದುಕೊಂಡಿದ್ದಾರೆ. ಇದು ತಿಳಿಯುತ್ತಿದ್ದಂತೆ ವಿರಾಟ್ ಅಭಿಮಾನಿಗಳು ಮಗುವಿನ ಪಾದದ ಚಿತ್ರವನ್ನು ವೈರಲ್ ಮಾಡಿದ್ದಾರೆ. ಜೊತೆಗೆ ಹಲವು ಉತ್ತಮ ಅಡಿಬರಹಗಳನ್ನು ಹಾಕಿಕೊಂಡು ಖುಷಿ ಪಟ್ಟಿದ್ದಾರೆ.

    ಇನ್ನೂ ವಿರಾಟ್ ಕೊಹ್ಲಿಯ ಸಹೋದರಿ ಭಾವನ ತನ್ನ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಂತೋಷವಾಗಿದೆ. ನಮಗೆ ಸಣ್ಣ ದೇವತೆಯನ್ನು ಕರುಣಿಸಿದ್ದಕ್ಕೆ ಎಂದು ವಿರಾಟ್ ದಂಪತಿಗೆ ಧನ್ಯವಾದ ತಿಳಿಸಿ, ಹೆಣ್ಣು ಮಗು ದೇವರ ಆಶೀರ್ವಾದದಿಂದ ಸಿಕ್ಕ ಕಾಣಿಕೆಯಾಗಿದೆ. ಈ ಮುದ್ದಾದ ದೇವತೆಗೆ ಯಾವತ್ತು ಪ್ರೀತಿ ಪಾತ್ರಳಾಗಿರುತ್ತೇನೆ ಎಂದು ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Vikas Kohli (@vk0681)

    ಸ್ವತಃ ವಿರಾಟ್ ಕೊಹ್ಲಿ ತಮಗೆ ಹೆಣ್ಣು ಮಗುವಾದ ಸಂತೋಷವನ್ನು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ನಮಗೆ ತುಂಬಾ ರೋಮಾಂಚನವಾಗುತ್ತಿದ್ದು, ಈ ದಿನ ಮಧ್ಯಾಹ್ನ ನಮಗೆ ಹೆಣ್ಣು ಮಗುವಾಗಿದೆ. ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಮತ್ತು ಶುಭ ಹಾರೈಕೆಗಾಗಿ ತುಂಬಾ ಧನ್ಯವಾದಗಳು. ಅನುಷ್ಕಾ ಮತ್ತು ಮಗು ಇಬ್ಬರು ಕ್ಷೇಮವಾಗಿದ್ದಾರೆ. ಇಂದಿನಿಂದ ನಮ್ಮ ಬಾಳಲ್ಲಿ ಹೊಸ ಬೆಳಕು ಮೂಡಿದೆ. ಈ ಸಂದರ್ಭದಲ್ಲಿ ನಾನು ಮಾಡುತ್ತಿರುವ ಗೌಪ್ಯತೆಗಳು ನಿಮಗೆ ಅರ್ಥವಾಗಬಹುದು ಎಂದು ಬರೆದುಕೊಂಡು ಅಭಿಮಾನಿಗಳಿಗೆ ತಂದೆಯಾದ ಖುಷಿ ಹಂಚಿಕೊಂಡಿದ್ದರು.

  • ಬಡ್ಡಿರಹಿತವಾಗಿ ಮಹಾರಾಷ್ಟ್ರ ಸರ್ಕಾರಕ್ಕೆ 500 ಕೋಟಿ ರೂ. ಸಾಲಕೊಟ್ಟ ಶಿರಡಿ ದೇವಾಲಯ

    ಬಡ್ಡಿರಹಿತವಾಗಿ ಮಹಾರಾಷ್ಟ್ರ ಸರ್ಕಾರಕ್ಕೆ 500 ಕೋಟಿ ರೂ. ಸಾಲಕೊಟ್ಟ ಶಿರಡಿ ದೇವಾಲಯ

    ಮುಂಬೈ: ಕುಡಿಯುವ ನೀರು ಯೋಜನೆಗಾಗಿ ಶಿರಡಿ ದೇವಾಲಯ ಸಮಿತಿ ಮಹಾರಾಷ್ಟ್ರ ಸರ್ಕಾರಕ್ಕೆ ಬಡ್ಡಿ ರಹಿತವಾಗಿ 500 ಕೋಟಿ ರೂಪಾಯಿ ಸಾಲವನ್ನು ನೀಡಿದೆ.

    ಮಹಾರಾಷ್ಟ್ರದ ಅಹಮದ್‍ನಗರ ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆಗಾಗಿ ನೀರಾವರಿ ಯೋಜನೆಯನ್ನು ಮಹಾರಾಷ್ಟ್ರ ಸರ್ಕಾರ ಕೈಗೆತ್ತಿಕೊಂಡಿತ್ತು. ಆದರೆ ಹಣದ ಕೊರತೆಯಿಂದಾಗಿ ಯೋಜನೆಯನ್ನು ಅರ್ಧಕ್ಕೆ ಕೈ ಬಿಟ್ಟಿತ್ತು. ಯೋಜನೆಯನ್ನು ಪೂರ್ಣಗೊಳಿಸುವುದಕ್ಕಾಗಿ ಬಿಜೆಪಿ ಶಿರಡಿ ದೇವಾಲಯದಿಂದ ಆರ್ಥಿಕ ಸಹಾಯ ಕೇಳಲು ನಿರ್ಧರಿಸುತ್ತು.

    ಸರ್ಕಾರದ ಪ್ರತಿನಿಧಿಗಳು ಶಿರಡಿ ದೇವಾಲಯದ ಸಮಿತಿಯ ಅಧ್ಯಕ್ಷರಾಗಿರುವ ಬಿಜೆಪಿಯ ಸುರೇಶ್ ಹವಾರೆಯನ್ನು ಭೇಟಿ ಮಾಡಿ ಚರ್ಚಿಸಿದ್ದರು. ಸರ್ಕಾರದ ಕೋರಿಕೆಯನ್ನು ಈಡೇರಿಸಿದ ಶಿರಡಿ ದೇವಾಲಯ ಸರ್ಕಾರಕ್ಕೆ ಬಡ್ಡಿರಹಿತವಾಗಿ 500 ಕೋಟಿ ರೂಪಾಯಿಯನ್ನು ನೀಡಲು ಒಪ್ಪಿಗೆ ಸೂಚಿಸಿದೆ.

    ಈ ಕುರಿತು ಸರ್ಕಾರದ ಅಧಿಕಾರಿಗಳು ಮಾತನಾಡಿ, ಶಿರಡಿ ಸಾಯಿಬಾಬಾ ದೇವಾಲಯ ಗೋದಾವರಿ ಹಾಗೂ ಮರಾಠವಾಡದ ನೀರಾವರಿ ಅಭಿವೃದ್ಧಿ ಕಾರ್ಪೋರೇಷನ್ ಯೋಜನೆಗೆ ಆರ್ಥಿಕ ನೆರವನ್ನು ನೀಡುವ ಬಗ್ಗೆ ಒಪ್ಪಿಕೊಂಡಿದೆ. ದೇವಾಲಯದ ಇತಿಹಾಸದಲ್ಲೇ ಇದೊಂದು ಮಹತ್ವದ ಬೆಳವಣಿಗೆಯಾಗಿದೆ ಎಂದು ಹೇಳಿದ್ದಾರೆ.

    ಗೋದಾವರಿ ಹಾಗೂ ಮರಾಠವಾಡದ ನೀರಾವರಿ ಯೋಜನೆಗೆ ಒಟ್ಟು 1,200 ಕೋಟಿ ರೂಪಾಯಿಗಳ ಅವಶ್ಯಕತೆಯಿದೆ. ಇದರಲ್ಲಿ 500 ಕೋಟಿ ರೂಪಾಯಿಯನ್ನು ಶಿರಡಿ ದೇವಾಲಯ ಸಮಿತಿ ನೀಡಿದರೆ ಉಳಿದ 700 ಕೋಟಿ ರೂಪಾಯಿಯನ್ನು ಸರ್ಕಾರ ನೀಡಲಿದೆ. ಅಲ್ಲದೇ ಸಾಲ ಮರುಪಾವತಿಗೆ ಶಿರಡಿ ದೇವಾಲಯ ಯಾವುದೇ ವಾಯಿದೆಯನ್ನು ಸಹ ನೀಡಿಲ್ಲ.

    ಮಾಹಿತಿಗಳ ಪ್ರಕಾರ ಶಿರಡಿ ದೇವಾಲಯ ಒಟ್ಟು 2,100 ಕೋಟಿ ರೂ ಹಣವನ್ನು ಠೇವಣಿಯಾಗಿ ಇಟ್ಟಿದೆ. ದೇವಾಲಯಕ್ಕೆ ಪ್ರತಿನಿತ್ಯ 2 ಕೋಟಿ ರೂಪಾಯಿ ಆದಾಯ ಬರುತ್ತದೆ. ವಾರ್ಷಿಕವಾಗಿ 700 ಕೋಟಿ ಆದಾಯ ಗಳಿಸುತ್ತದೆ. ಪ್ರತಿನಿತ್ಯ 70,000 ಭಕ್ತರು ಸಾಯಿಬಾಬಾರ ದರ್ಶನವನ್ನು ಪಡೆದುಕೊಳ್ಳುತ್ತಾರೆ. ವಿಶೇಷ ದಿನಗಳಂದು 3.5 ಲಕ್ಷಕ್ಕೂ ಹೆಚ್ಚಿನ ಭಕ್ತರು ದೇವಾಲಯಕ್ಕೆ ಬರುತ್ತಾರೆ. ದೇಶದಲ್ಲಿಯೇ ಅತ್ಯಂತ ಶ್ರೀಮಂತ ದೇಗುಲಗಳಲ್ಲಿ ಶಿರಡಿ ದೇವಾಲಯವು ಸಹ ಒಂದಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಾರೀ ಮಳೆಯಿಂದ ತುಂಬಿ ಹರಿಯುತ್ತಿದ್ದ ಧರಣಿ ನದಿ- ಹುಚ್ಚು ಸಾಹಸಕ್ಕಿಳಿದ ವ್ಯಕ್ತಿ ನೀರುಪಾಲು

    ಭಾರೀ ಮಳೆಯಿಂದ ತುಂಬಿ ಹರಿಯುತ್ತಿದ್ದ ಧರಣಿ ನದಿ- ಹುಚ್ಚು ಸಾಹಸಕ್ಕಿಳಿದ ವ್ಯಕ್ತಿ ನೀರುಪಾಲು

    ಮುಂಬೈ/ಚಿಕ್ಕೋಡಿ: ಧಾರಾಕಾರ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಉಕ್ಕಿ ಹರಿಯುತ್ತಿರುವ ನದಿ ಪ್ರವಾಹಕ್ಕೆ ಸಿಲುಕಿ ವ್ಯಕ್ತಿಯೊರ್ವ ನೀರಿನಲ್ಲಿ ಕೊಚ್ಚಿ ಹೋದ ಘಟನೆ ನಡೆದಿದೆ.

    ಈ ಘಟನೆ ಮಹಾರಾಷ್ಟ್ರ ರಾಜ್ಯದ ಲಾತೂರ್ ಜಿಲ್ಲೆಯ ಶಿರೂರ ಅನಂತಪಾಲ ತಾಲೂಕಿನ ನಾಗೇವಾಡಿ ಗ್ರಾಮದ ಬಳಿಯ ಧರಣಿ ನದಿಯಲ್ಲಿ ನಡೆದಿದೆ. ಪ್ರಕಾಶ್ ಜಲಕೋಟೆ(32) ಮೃತಪಟ್ಟ ದುರ್ದೈವಿ.

    ಶನಿವಾರ ಸಂಜೆ ಉಕ್ಕಿ ಹರಿಯುತ್ತಿದ್ದ ಧರಣಿ ನದಿ ದಾಟುವ ಹುಚ್ಚು ಸಾಹಸಕ್ಕೆ ಇಳಿದು ಪ್ರಕಾಶ್ ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾರೆ. ನೀರಿನಲ್ಲಿ ಇಳಿಯಬೇಡ ಎಂಬ ಸಲಹೆಯನ್ನು ಕೇಳದೆ ಪ್ರವಾಹದಲ್ಲಿ ಇಳಿದಿದ್ದರು. ಪ್ರವಾಹಕ್ಕೆ ಸಿಲುಕಿ ನಾಗೇವಾಡಿ ಗ್ರಾಮದ ಪ್ರಕಾಶ್ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ.

    ಬಳಿಕ ಅಗ್ನಿ ಶಾಮಕ ದಳ ಹಾಗೂ ಪೊಲೀಸರ ಶೋಧ ಕಾರ್ಯಾಚರಣೆ ನಡೆಸಿದ್ದು, ಸದ್ಯ ಕೊಚ್ಚಿ ಹೋದಲ್ಲಿಂದ ಸಮೀಪದಲ್ಲಿಯೇ ಪ್ರಕಾಶ್ ಶವ ಪತ್ತೆಯಾಗಿದೆ.

    ಈ ಕುರಿತು ಮಹಾರಾಷ್ಟ್ರದ ಶಿರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಲಾಗಿದೆ.

  • ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ವ್ಯಕ್ತಿಯನ್ನು ಪಾರು ಮಾಡಿತು ಒಂದು ಕರೆ!

    ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ವ್ಯಕ್ತಿಯನ್ನು ಪಾರು ಮಾಡಿತು ಒಂದು ಕರೆ!

    ಮುಂಬೈ: ಇಲ್ಲಿನ ಘಾಟ್ಕೋಪರ್ ನಲ್ಲಿ 4 ಅಂತಸ್ತಿನ ಕಟ್ಟಡವೊಂದು ಮಂಗಳವಾರ ಬೆಳಗ್ಗೆ ಕುಸಿದು ಬಿದ್ದಿತ್ತು. ಘಟನೆಯಿಂದಾಗಿ ಕಟ್ಟಡದ ಅವಶೇಷಗಳಡಿ ಸಿಲುಕಿದ ವ್ಯಕ್ತಿಯೊಬ್ಬರನ್ನು ಬರೋಬ್ಬರಿ 15 ಗಂಟೆಗಳ ಬಳಿಕ ರಕ್ಷಣೆ ಮಾಡಲಾಗಿದೆ.

    57 ವರ್ಷದ ರಾಜೇಶ್ ಧೋಶಿ ಅಪಾಯದಿಂದ ಪಾರಾದ ವ್ಯಕ್ತಿ. ಘಟನೆ ನಡೆದ ವೇಳೆ ರಾಜೇಶ್ ಒಬ್ಬರೇ ಮನೆಯಲ್ಲಿದ್ದರು.

    ರಾಜೇಶ್ ಕುಟುಂಬ ಕುಸಿದ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ವಾಸವಾಗಿದ್ದರು. ರಾಜೇಶ್ ಪತ್ನಿ ಹಾಗೂ ಮಗ ಮಂಗಳವಾರ ಬೆಳಗ್ಗೆ ದೇವಸ್ಥಾನಕ್ಕೆಂದು ಹೊರಗಡೆ ಹೋಗಿದ್ದರು. ಹೀಗಾಗಿ ರಾಜೇಶ್ ಒಬ್ಬರೇ ಮನೆಯಲ್ಲಿದ್ದರು. ಈ ವೇಳೆ ಕಟ್ಟಡ ಕುಸಿದಿದ್ದು, ಐವರು ದುರ್ಮರಣಕ್ಕೀಡಾಗಿ ಸುಮಾರು 30 ಕ್ಕೂ ಹೆಚ್ಚು ಮಂದಿ ಕಟ್ಟಡದೊಳಗೆ ಸಿಲುಕಿರುವ ಶಂಕೆ ವ್ಯಕ್ತವಾಗಿತ್ತು. ಇದರಲ್ಲಿ ರಾಜೇಶ್ ಕೂಡ ಒಬ್ಬರಾಗಿದ್ದರು. ಇನ್ನು ಘಟನೆಯಿಂದ 12 ಮಂದಿಯನ್ನು ಆ ಕೂಡಲೇ ರಕ್ಷಣೆ ಮಾಡಲಾಗಿತ್ತು.

    ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ರಾಜೇಶ್ ತನ್ನ ಕೈಯಲಿದ್ದ ಮೊಬೈಲ್ ನಿಂದ ಮಗನಿಗೆ ಕರೆ ಮಾಡಿ ತಾನು ಬದುಕಿದ್ದು, ಕಟ್ಟಡದೊಳಗೆ ಸಿಲುಕಿದ್ದೇನೆ. ನನ್ನ ಕಾಲಿನ ಮೇಲೆ ದೊಡ್ಡದಾದ ಸ್ಲಾಬ್ ತುಂಡೊಂದು ಬಿದ್ದಿದ್ದು, ಹೀಗಾಗಿ ಹೊರ ಬರಲು ಸಾಧ್ಯವಾಗುತ್ತಿಲ್ಲ ಅಂತ ಮಾಹಿತಿ ನಿಡಿದ್ದಾರೆ. ಕೂಡಲೇ ಕುಟುಂಬ ಎನ್ ಡಿಆರ್ ಎಫ್ ಸಿಬ್ಬಂದಿ ಅವರಿಗೆ ಮಾಹಿತಿ ರವಾನಿಸಿ ರಾಜೇಶ್ ಅವರನ್ನು ಅಪಾಯದಿಂದ ಪಾರು ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

    ಅಂತೆಯೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಕಟ್ಟಡದ ಅವಶೇಷಗಳಡಿ ಸಿಲುಕಿರುವ ರಾಜೇಶ್ ಅವರನ್ನು ಪತ್ತೆ ಹಚ್ಚಿ, ಬರೋಬ್ಬರಿ 15 ಗಂಟೆಗಳ ಬಳಿಕ ರಕ್ಷಿಸಿದ್ದಾರೆ. ಬಳಿಕ ಅವರನ್ನು ಸ್ಥಳೀಯ ಶಾಂತಿನಿಕೇತನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

    ಮುಂಬೈನ ಘಟ್ಕೋಪರ್ ನಲ್ಲಿ ಸ್ಥಳೀಯ ಶಿವಸೇನೆ ಮುಖಂಡರೊಬ್ಬರ ಮಾಲೀಕತ್ವದ ನಾಲ್ಕು ಅಂತಸ್ತಿನ ಕಟ್ಟಡವೊಂದು ಮಂಗಳವಾರ ಬೆಳಗ್ಗೆ ಕುಸಿದುಬಿದ್ದಿದೆ. ರಾತ್ರಿ 9 ಗಂಟೆಯವರೆಗೆ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ 12 ಮಂದಿ ಸಾವನಪ್ಪಿದ್ದು, 11 ಮಂದಿಗೆ ಗಾಯಗಳಾಗಿತ್ತು. 23 ಮಂದಿಯನ್ನು ರಕ್ಷಣೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನೆ ಮುಖಂಡ ಸುನಿಲ್ ಶಿತಾಪ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಕಟ್ಟಡದ ನೆಲ ಮಾಳಿಗೆಯಲ್ಲಿದ್ದ ನರ್ಸಿಂಗ್ ಹೋಂ ಅನ್ನು ದುರಸ್ತಿ ಮಾಡಲಾಗುತ್ತಿದ್ದು, ಇದೇ ಕಟ್ಟಡ ಕುಸಿದು ಬೀಳಲು ಕಾರಣವೆಂದು ಶಂಕಿಸಲಾಗಿದೆ.