Tag: multiplex

  • ಮಲ್ಟಿಪ್ಲೆಕ್ಸ್‌ಗಳಲ್ಲಿ ಏಕರೂಪ ದರ ನಿಗದಿ ವಿಚಾರ – ಮಧ್ಯಂತರ ಆದೇಶ ಕಾಯ್ದಿರಿಸಿದ ಹೈಕೋರ್ಟ್

    ಮಲ್ಟಿಪ್ಲೆಕ್ಸ್‌ಗಳಲ್ಲಿ ಏಕರೂಪ ದರ ನಿಗದಿ ವಿಚಾರ – ಮಧ್ಯಂತರ ಆದೇಶ ಕಾಯ್ದಿರಿಸಿದ ಹೈಕೋರ್ಟ್

    ಬೆಂಗಳೂರು:ಮಲ್ಟಿಪ್ಲೆಕ್ಸ್‌ಗಳಲ್ಲಿ ಏಕರೂಪ (Multiplex) ದರ ನಿಗದಿ ವಿಚಾರ ಸಂಬಂಧ ಮಧ್ಯಂತರ ಆದೇಶವನ್ನ ಹೈಕೋರ್ಟ್ (High Court) ಕಾಯ್ದಿರಿಸಿದೆ.

    200 ರೂ.ಗೆ ಚಿತ್ರ ಪ್ರದರ್ಶನ ಮಾಡಿದ್ರೆ ನಷ್ಟ ಉಂಟಾಗುತ್ತೆ ಎಂದು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯಿತು. ಮಲ್ಟಿಪ್ಲೆಕ್ಸ್‌ಗಳ ಪರವಾಗಿ ಮುಕುಲ್ ರೋಹ್ಟಗಿ ವಾದಿಸಿ, ಸಂವಿಧಾನದ ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ‍್ಯ ಉಲ್ಲಂಘನೆಯಾಗಿದೆ. 2017ರಲ್ಲಿಯೂ ಸರ್ಕಾರ ಇದೇ ರೀತಿಯ ಆದೇಶ ಹೊರಡಿಸಿದ್ದಾಗ ಹೈಕೋರ್ಟ್ ರದ್ದುಪಡಿಸಿತ್ತು. ಟಿಕೆಟ್ ಖರೀದಿಸಿ ಚಿತ್ರ ನೋಡುವುದು ಗ್ರಾಹಕನಿಗೆ ಬಿಟ್ಟದ್ದು, ಈ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶಿಸುವಂತಿಲ್ಲವೆಂದು ವಾದ ಮಂಡಿಸಿದರು. ಇದನ್ನೂ ಓದಿ: ಎಸ್‌ಟಿಗೆ ಕುರುಬ – ಮಹತ್ವದ ಸಭೆ ಕರೆದ ವಾಲ್ಮೀಕಿ ಸಮುದಾಯ

    ಹೊಂಬಾಳೆ ಫಿಲಂಸ್ ಪರ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ವಾದಿಸಿ, ಜಿಎಸ್‌ಟಿ ಹೊರತುಪಡಿಸಿದ ಟಿಕೆಟ್ ದರ 200 ರೂ. ನಿಗದಿಪಡಿಸಲಾಗಿದೆ. ಇದು ವಿವೇಚನೆಯಿಲ್ಲದೇ ಸರ್ಕಾರ ಕೈಗೊಂಡ ನಿರ್ಧಾರ. ಸಿನಿಮಾ ನಿರ್ಮಿಸಲು ಎಷ್ಟೆಲ್ಲಾ ಶ್ರಮ, ಬಂಡವಾಳ ಬೇಕಾಗುತ್ತದೆ. ಅಂಕಿ ಅಂಶ ಸಂಗ್ರಹಿಸದೇ ಸರ್ಕಾರದ ಸ್ವೇಚ್ಚೆಯ ನಿರ್ಧಾರವಾಗಿದೆ ಎಂದು ವಾದಿಸಿದ್ದಾರೆ. ಇದನ್ನೂ ಓದಿ: ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ, ಕೂಡಲೇ ಕೈಬಿಡಿ: ಆರ್.ಅಶೋಕ್

    ಈ ಮಧ್ಯೆ, 200 ರೂ. ನಿಗದಿ ಮಾಡಿರೋದು ಒಳ್ಳೆಯ ನಿರ್ಧಾರ ಅಂತ ನಿರ್ಮಾಪಕಿ ಪ್ರಿಯಾ ಹಾಸನ್, ನಿರ್ಮಾಪಕರಾದ ಎ ಗಣೇಶ್, ಚಿಂಗಾರಿ ಮಹದೇವ್ ಹೇಳಿದ್ದಾರೆ. ಅಲ್ಲದೇ ಕೋರ್ಟ್ ಮೆಟ್ಟಿಲೇರಿರುವವರು ಅರ್ಜಿ ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ನಾವೂ ಕಾನೂನು ಹೋರಾಟ ಮಾಡುತ್ತೇವೆ ಎಂದು ಫಿಲ್ಮ್ ಚೇಂಬರ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶ | ಎರಡು ಬಾರಿ ಕಚ್ಚಿದ್ರೆ ಬೀದಿ ನಾಯಿಗೆ ಜೀವಾವಧಿ ಶಿಕ್ಷೆ!

  • ಮಲ್ಟಿಪ್ಲೆಕ್ಸ್‌ ಸೇರಿ ಎಲ್ಲಾ ಥಿಯೇಟರ್‌ಗಳಲ್ಲೂ ಏಕರೂಪ ದರ; 200 ರೂ. ಫಿಕ್ಸ್‌ – ಕರಡು ಅಧಿಸೂಚನೆ ಪ್ರಕಟ

    ಮಲ್ಟಿಪ್ಲೆಕ್ಸ್‌ ಸೇರಿ ಎಲ್ಲಾ ಥಿಯೇಟರ್‌ಗಳಲ್ಲೂ ಏಕರೂಪ ದರ; 200 ರೂ. ಫಿಕ್ಸ್‌ – ಕರಡು ಅಧಿಸೂಚನೆ ಪ್ರಕಟ

    ಬೆಂಗಳೂರು: ಮಲ್ಟಿಪ್ಲೆಕ್ಸ್ (Multiplex) ಸೇರಿದಂತೆ ಎಲ್ಲ ಚಿತ್ರಮಂದಿರಗಳಲ್ಲಿ ಏಕರೂಪ ದರ ಜಾರಿ ಸಂಬಂಧ ರಾಜ್ಯ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದೆ. ಅಧಿಸೂಚನೆ ಪ್ರಕಟವಾದ 15 ದಿನಗಳ ಒಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದೆ.

    ಮಲ್ಟಿಪ್ಲೆಕ್ಸ್‌ ಸೇರಿದಂತೆ ಎಲ್ಲ ಥಿಯೇಟರ್‌ಗಳಲ್ಲಿ ಟಿಕೆಟ್‌ ದರವನ್ನು 200 ರೂ.ಗೆ ಮಿತಿಗೊಳಿಸುವುದಾಗಿ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದರು. ಇದನ್ನೂ ಓದಿ: ಆನೆ-ಮಾನವ ಸಂಘರ್ಷ ನಿಯಂತ್ರಣಕ್ಕೆ ಮಹತ್ವದ ಹೆಜ್ಜೆ `ಆನೆಪಥ’: ಈಶ್ವರ್ ಖಂಡ್ರೆ

    ಕರ್ನಾಟಕ ಸಿನೆಮಾಸ್ (ನಿಯಂತ್ರಣ) ನಿಯಮಗಳನ್ನು ತಿದ್ದುಪಡಿ ಮಾಡಲು, ಕಾಯ್ದೆ 1964, 1964 (ಕರ್ನಾಟಕ ಕಾಯ್ದೆ 23) ಅಧಿಕೃತ ಗೆಜೆಟ್‌ನಲ್ಲಿ ಪ್ರಕಟವಾದ ದಿನಾಂಕದಿಂದ 15 ದಿನಗಳ ನಂತರ ಈ ಕರಡನ್ನು ಗಣನೆಗೆ ತೆಗೆದುಕೊಳ್ಳಲಾಗುವುದು ಸರ್ಕಾರ ತಿಳಿಸಿದೆ.

    ಮೇಲೆ ನಿರ್ದಿಷ್ಟಪಡಿಸಿದ ಅವಧಿ ಮುಗಿಯುವ ಮೊದಲು ಈ ಕರಡಿಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆ ಮತ್ತು ಸಲಹೆಯನ್ನು ರಾಜ್ಯ ಸರ್ಕಾರವು ಪರಿಗಣಿಸುತ್ತದೆ. ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ತಿಳಿಸಬಹುದು. ಇದನ್ನೂ ಓದಿ: ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದ ಸಚಿವ ರಾಮಲಿಂಗಾರೆಡ್ಡಿ

  • ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ರೀತಿ ಕ್ರಿಕೆಟ್ ಪ್ರದರ್ಶನ – ಬಿಸಿಸಿಐ ಜೊತೆ ಒಪ್ಪಂದಕ್ಕೆ ಮುಂದಾಗಿದ್ಯಾ ಪಿವಿಆರ್?

    ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ರೀತಿ ಕ್ರಿಕೆಟ್ ಪ್ರದರ್ಶನ – ಬಿಸಿಸಿಐ ಜೊತೆ ಒಪ್ಪಂದಕ್ಕೆ ಮುಂದಾಗಿದ್ಯಾ ಪಿವಿಆರ್?

    ಬೆಂಗಳೂರು: ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ರೀತಿ ಕ್ರಿಕೆಟ್ (Cricket) ಪ್ರದರ್ಶನ ಮಾಡಲು ಬಿಸಿಸಿಐ (BCCI) ಜೊತೆ ಒಪ್ಪಂದ ಮಾಡಿಕೊಳ್ಳಲು ಪಿವಿಆರ್ (PVR) ಮುಂದಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

    ಹೌದು, ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ರೀತಿ ಕ್ರಿಕೆಟ್ ಪ್ರದರ್ಶನ ಮಾಡಲು ಪ್ಲ್ಯಾನ್‌ ನಡೆಯುತ್ತಿದ್ಯಂತೆ. ಭಾರತದ 30 ಸಿಟಿಗಳ ಪಿವಿಆರ್‌ಗಳು ಕ್ರಿಕೆಟ್ ಪ್ರದರ್ಶನಕ್ಕೆ ಅವಕಾಶ ಪಡೆದಿವೆ ಎಂದು ಮೂಲಗಳು ತಿಳಿಸಿದ್ದು, ಕರ್ನಾಟಕದ ಬೆಂಗಳೂರು, ಧಾರವಾಡ ಹಾಗೂ ಮಹಾರಾಷ್ಟ್ರ, ಗುಜರಾತ್, ಹೈದರಾಬಾದ್ ಸೇರಿದಂತೆ ಹಲವೆಡೆ ಪ್ರದರ್ಶನ ಸಾಧ್ಯತೆ ಎನ್ನಲಾಗುತ್ತಿದೆ.ಇದನ್ನೂ ಓದಿ:ನೈಜ ಘಟನೆ ‘ಕರಳೆ’ ಚಿತ್ರದ ಕಥೆ ಹೇಳೋಕೆ ಬಂದ ‘ಕನ್ನಡ ದೇಶದೊಳ್‌’ ನಿರ್ದೇಶಕ

    ಸಿನಿಮಾ ಆಕ್ಟ್ ಪ್ರಕಾರ ಸೆನ್ಸಾರ್ ಇಲ್ಲದೇ ಥಿಯೇಟರ್ ಹಾಗೂ ಪಿವಿಆರ್‌ನಲ್ಲಿ ಏನನ್ನೂ ಪ್ರದರ್ಶನ ಮಾಡುವ ಹಾಗಿಲ್ಲ. ಒಂದು ವೇಳೆ ಕ್ರಿಕೆಟ್ ಪ್ರದರ್ಶನಕ್ಕೆ ಅನುಮತಿ ಸಿಕ್ಕರೆ ಸಿನಿಮಾ ಕಥೆ ಅಷ್ಟೆ ಎನ್ನುವ ಪರಿಸ್ಥಿತಿ ಎದುರಾಗಲಿದೆ. ಈಗಾಗಲೇ ಜನರಿಲ್ಲದೇ ಥಿಯೇಟರ್, ಸಿಂಗಲ್ ಸ್ಕ್ರೀನ್‌ಗಳು ಸಮಸ್ಯೆ ಎದುರಿಸುತ್ತಿವೆ. ಈಗ ಕ್ರಿಕೆಟ್, ಮುಂದಿನ ದಿನಗಳಲ್ಲಿ ಬೇರೆ ಪ್ರದರ್ಶನಗಳಿಗೆ ಪಿವಿಆರ್ ಒಪ್ಪಿಕೊಂಡರೆ ಸಿನಿಮಾಗಳಿಗೆ ಕುತ್ತು ಬರುವುದು ಗ್ಯಾರಂಟಿಯಾಗಲಿದೆ.

    ಈಗಲೇ ಒಳ್ಳೆಯ ಸಿನಿಮಾಗಳಿಲ್ಲದೇ ಥಿಯೇಟರ್‌ಗಳು ಸಮಸ್ಯೆ ಎದುರಿಸುತ್ತಿದ್ದು, ಇದರಿಂದ ಸಿನಿಮಾ ಪ್ರದರ್ಶನದ ಸಂಸ್ಕೃತಿ ಏನಾಗುತ್ತದೆ ಎಂಬ ಪ್ರಶ್ನೆ ಮೂಡಿದೆ.ಇದನ್ನೂ ಓದಿ:2026ರ ಸಂಕ್ರಾಂತಿಯಂದು ರಿಲೀಸ್‌ ಆಗಲಿದೆ ವಿಜಯ್‌ ನಟನೆಯ ಕೊನೆಯ ಸಿನಿಮಾ

  • ಬೆಂಗಳೂರು| ನಂದಿನಿ ಲೇಔಟ್‌ನ 2.5 ಎಕರೆ ಜಾಗದಲ್ಲಿ ಮಲ್ಟಿಪ್ಲೆಕ್ಸ್‌ ಅಭಿವೃದ್ಧಿ

    ಬೆಂಗಳೂರು| ನಂದಿನಿ ಲೇಔಟ್‌ನ 2.5 ಎಕರೆ ಜಾಗದಲ್ಲಿ ಮಲ್ಟಿಪ್ಲೆಕ್ಸ್‌ ಅಭಿವೃದ್ಧಿ

    ಬೆಂಗಳೂರು: ರಾಜ್ಯ ಬಜೆಟ್‌ನಲ್ಲಿ ಈ ಬಾರಿ ಕನ್ನಡ ಚಿತ್ರರಂಗಕ್ಕಾಗಿ ಸಿಎಂ ಸಿದ್ದರಾಮಯ್ಯ ಅವರು ಒಂದಷ್ಟು ಘೋಷಣೆಗಳನ್ನು ಮಾಡಿದ್ದಾರೆ.

    ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿ ಒಡೆತನದ 2.5 ಎಕರೆ ಜಾಗದಲ್ಲಿ ಪಿಪಿಪಿ ಅಡಿಯಲ್ಲಿ (ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ) ಮಲ್ಟಿಪ್ಲೆಕ್ಸ್‌ ಅನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ.

    ಸಿನಿಮಾ ಕ್ಷೇತ್ರವನ್ನು ಉದ್ಯಮವೆಂದು ಪರಿಗಣಿಸಿ, ಕೈಗಾರಿಕಾ ನೀತಿಯಡಿ ಒದಗಿಸಲಾಗುವ ಸೌಲಭ್ಯ ಕಲ್ಪಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

    ಅಲ್ಲದೇ, ಎಲ್ಲಾ ಮಲ್ಟಿಫ್ಲೆಕ್ಸ್‌ಗಳಲ್ಲಿ ಟಿಕೆಟ್‌ ದರವನ್ನು 200 ರೂ. ಫಿಕ್ಸ್‌ ಮಾಡಲಾಗಿದೆ ಎಂದು ಬಜೆಟ್‌ನಲ್ಲಿ ಸಿಎಂ ಘೋಷಿಸಿದ್ದಾರೆ.

  • ಬೆಂಗಳೂರಿನಲ್ಲಿ ಹೂಡಿಕೆ ಮಾಡಿದ ತೆಲುಗಿನ ಸ್ಟಾರ್ ನಟ

    ಬೆಂಗಳೂರಿನಲ್ಲಿ ಹೂಡಿಕೆ ಮಾಡಿದ ತೆಲುಗಿನ ಸ್ಟಾರ್ ನಟ

    ತೆಲುಗಿನ ಬಹುತೇಕ ಖ್ಯಾತ ನಟರು ತಾವು ದುಡಿದು ಬಂದ ಹಣವನ್ನು ಸಿನಿಮಾ ರಂಗದಲ್ಲೇ ವಿನಿಯೋಗಿಸುವ ಮೂಲಕ ಮಾದರಿಯಾಗಿದ್ದಾರೆ. ಕೇವಲ ತಮ್ಮ ರಾಜ್ಯದಲ್ಲಿ ಹೂಡಿಕೆ ಮಾಡುತ್ತಿದ್ದವರು, ಇದೀಗ ಗಡಿ ದಾಟಿ ಕರ್ನಾಟಕಕ್ಕೂ ಹೆಜ್ಜೆ ಇಟ್ಟಿದ್ದಾರೆ. ತೆಲುಗಿನ ಖ್ಯಾತ ನಟ ಮಹೇಶ್ ಬಾಬು ಕನ್ನಡ ಚಿತ್ರೋದ್ಯಮದಲ್ಲಿ ಹಣ ಹೂಡಿದ್ದಾರೆ.

    ಬೆಂಗಳೂರಿನ ಸಿನಿಮಾದ ಏರಿಯಾ ಎಂದೇ ಖ್ಯಾತವಾಗಿರುವ ಗಾಂಧಿನಗರದ ಪ್ರಮುಖ ರಸ್ತೆಯಲ್ಲಿ ಮಾಲ್ ವೊಂದನ್ನು ನಿರ್ಮಾಣ ಮಾಡಿದ್ದು, ಅಲ್ಲಿ ಮಲ್ಟಿಪ್ಲೆಕ್ಸ್ ಥಿಯೇಟರ್ ನಲ್ಲಿ ಮಹೇಶ್ ಬಾಬು ಹಣ ಹೂಡಿದ್ದಾರೆ. ಈಗಾಗಲೇ ಮಹೇಶ್ ಬಾಬು ಹೈದರಾಬಾದ್ ನಲ್ಲೂ ಈ ಬ್ಯುಸಿನೆಸ್ ಆರಂಭಿಸಿದ್ದಾರೆ.

     

    ನಿನ್ನೆಯಷ್ಟೇ ಥಿಯೇಟರ್ ಪೂಜೆಯನ್ನು ಮಾಡಿದ್ದು, ಕನ್ನಡದ ಹೆಸರಾಂತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಈ ಹಿಂದೆ ಕಪಾಲಿ ಚಿತ್ರಮಂದಿರವಿದ್ದ ಜಾಗದಲ್ಲೇ ಈ ಕಟ್ಟಡ ತಲೆಯೆತ್ತಿದೆ. ಇನ್ನೂ ಕೆಲವೇ ತಿಂಗಳಲ್ಲಿ ಮಲ್ಟಿಪ್ಲೆಕ್ಸ್ ತನ್ನ ಕಾರ್ಯಾರಂಭ ಮಾಡಲಿದೆ.

  • ಕನ್ನಡ ಚಿತ್ರೋದ್ಯಮದಲ್ಲಿ ಹಣ ತೊಡಗಿಸಿದ ಪ್ರಿನ್ಸ್ ಮಹೇಶ್ ಬಾಬು

    ಕನ್ನಡ ಚಿತ್ರೋದ್ಯಮದಲ್ಲಿ ಹಣ ತೊಡಗಿಸಿದ ಪ್ರಿನ್ಸ್ ಮಹೇಶ್ ಬಾಬು

    ತೆಲುಗು ಸಿನಿಮಾ ರಂಗದ ಖ್ಯಾತ ನಟ ಮಹೇಶ್ ಬಾಬು (Mahesh Babu), ಕನ್ನಡ ಚಿತ್ರೋದ್ಯಮದಲ್ಲಿ ಹಣ ಹೂಡಲಿದ್ದಾರೆ. ಈಗಾಗಲೇ ತೆಲುಗು ಚಿತ್ರೋದ್ಯಮದಲ್ಲಿ ಮಲ್ಟಿಪ್ಲೆಕ್ಸ್ (Multiplex) ಚಿತ್ರಮಂದಿರಗಳಿಗೆ ಬಂಡವಾಳ ಹಾಕಿರುವ ಮಹೇಶ್ ಬಾಬು, ಈಗ ಆ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳನ್ನು ಕರ್ನಾಟಕದಲ್ಲೂ ತೆರೆಯಲಿದ್ದಾರೆ.

    ಬೆಂಗಳೂರಿನ ಗಾಂಧಿನಗರದಲ್ಲಿರುವ ಚಿತ್ರಮಂದಿರಗಳಿಗೆ ಸಾಕಷ್ಟು ಬೇಡಿಕೆ ಇದೆ. ಇವುಗಳನ್ನೇ ಪ್ರಮುಖ ಚಿತ್ರಮಂದಿರಗಳು ಎಂದು ಹೇಳಲಾಗುತ್ತಿದೆ. ಈ ಜಾಗದಲ್ಲೇ ಪ್ರಿನ್ಸ್ ಮಹೇಶ್ ಬಾಬು ಅವರ ಎ.ಎಂ.ಬಿ ಮಲ್ಟಿಪ್ಲೆಕ್ಸ್  ಚಿತ್ರಮಂದಿರಗಳು ಕಾರ್ಯರಂಭ ಮಾಡಲಿವೆ. ಈ ಹಿಂದೆ ಕಪಾಲಿ ಚಿತ್ರಮಂದಿರವಿದ್ದ ಜಾಗದಲ್ಲಿ ಐದು ಅಂತಸ್ತಿನ ಕಟ್ಟಡ ನಿರ್ಮಾಣವಾಗುತ್ತಿದೆ. ಇದೇ ಕಟ್ಟದಲ್ಲೇ ಚಿತ್ರಮಂದಿರಗಳು ಇರಲಿವೆ.

     

    ಕನ್ನಡ ಸಿನಿಮಾ ರಂಗದ ಅನೇಕ ನಟರು ಚಿತ್ರೋದ್ಯಮದಲ್ಲಿ ಹಣವನ್ನು ತೊಡಗಿಸಿಲ್ಲ. ಆದರೆ ತಮಿಳು ಮತ್ತು ತೆಲುಗಿನಲ್ಲಿ ಅನೇಕ ನಟರು ಬಂಡವಾಳವನ್ನು ನಾನಾ ರೂಪದಲ್ಲಿ ಚಿತ್ರೋದ್ಯಮದಲ್ಲೇ ತೊಡಗಿಸಿದ್ದಾರೆ. ಕರ್ನಾಟಕದಲ್ಲಿಯ ಈ ಕೊರತೆಯನ್ನು ಮನಗಂಡಿದ್ದ ಮಹೇಶ್ ಬಾಬು, ತಾವೇ ಹಣ ಹೂಡಲು ಮುಂದಾಗಿದ್ದಾರೆ. ಇನ್ನೂ ಕೆಲವೇ ತಿಂಗಳಲ್ಲಿ ಈ ಚಿತ್ರಮಂದಿರಗಳು ತಮ್ಮ ಪ್ರದರ್ಶನವನ್ನು ಶುರು ಮಾಡಲಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಲ್ಲು ಅರ್ಜುನ್ ಮಾಲೀಕತ್ವದ ಚಿತ್ರಮಂದಿರ ಉದ್ಘಾಟನೆ : ಆದಿಪುರುಷ ಫಸ್ಟ್ ಶೋ

    ಅಲ್ಲು ಅರ್ಜುನ್ ಮಾಲೀಕತ್ವದ ಚಿತ್ರಮಂದಿರ ಉದ್ಘಾಟನೆ : ಆದಿಪುರುಷ ಫಸ್ಟ್ ಶೋ

    ಪುಷ್ಪ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿರುವ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಹೊಸ ಉದ್ಯಮ ಪ್ರಾರಂಭಿಸಿದ್ದಾರೆ. ಸಿನಿಮಾ ನಿರ್ಮಾಣ, ತಂದೆ ಒಡೆತನದ Aha ಒಟಿಟಿಯಲ್ಲಿಯೂ ಪಾಲುದಾರಾಗಿರುವ ಅಲ್ಲು ಅರ್ಜುನ್, ಹೊಸ ಸ್ಟುಡಿಯೋ ಕೂಡ ಶುರು ಮಾಡಿದ್ದಾರೆ.

    ಈ ಉದ್ಯಮಗಳ ಜೊತೆಯಲ್ಲಿ ಬನ್ನಿ ಐಶಾರಾಮಿ ಮಲ್ಟಿಪ್ಲೆಕ್ಸ್ (Multiplex) ಪ್ರಾರಂಭಿಸಿದ್ದಾರೆ. ಈ ಚಿತ್ರಮಂದಿರಕ್ಕೆ ಎಎಎ ಸಿನಿಮಾಸ್ (AAA Cinemas) ಎಂದು ಹೆಸರಿಡಲಾಗಿದೆ. ಏಷ್ಯನ್ ಸಿನಿಮಾಸ್ ಸಹಭಾಗಿತ್ವದಲ್ಲಿ ಹೈದ್ರಾಬಾದ್ ನ ಅಮೀರ್ ಪೇಟೆಯಲ್ಲಿ ಎಎಸ್ ಸಿನಿಮಾಸ್ ನಿನ್ನೆ ಅದ್ಧೂರಿಯಾಗಿ ಶುಭರಾಂಭಗೊಂಡಿದೆ. ಅಲ್ಲು ಅರವಿಂದ್, ಸುನೀಲ್ ನಾರಂಗ್ ಹಾಗೂ ಅಲ್ಲು ಅರ್ಜುನ್ ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    ಎಎಎ ಸಿನಿಮಾಸ್ ಒಟ್ಟಾರೆಯಾಗಿ ‌ಮೂರು ಲಕ್ಷ ಚದರ ಅಡಿ ಇದ್ದು, ಮೂರನೇ ಮಹಡಿಯಲ್ಲಿ 35 ಸಾವಿರ ಚದರ ಅಡಿಯಲ್ಲಿ ಫುಡ್ ಕೋರ್ಟ್ ನಿರ್ಮಾಣ ಮಾಡಲಾಗಿದೆ. ನಾಲ್ಕನೇ ಫ್ಲೋರ್ನಲ್ಲಿ ಐದು ಸ್ಕ್ರೀನ್ಗಳ ಎಎಎ ಚಿತ್ರಮಂದಿರವಿದೆ. ಸ್ಕ್ರೀನ್ 2ರಲ್ಲಿ ಎಲ್ ಇಡಿ ಪರದೆಯನ್ನು ಒಳಗೊಂಡಿದೆ. ದಕ್ಷಿಣ ಭಾರತದದಲ್ಲಿ ಎಲ್ ಇಡಿ ಪರದೆಯನ್ನು ಒಳಗೊಂಡಿರುವ ಏಕೈಕ ಮಲ್ಟಿಪ್ಲೆಕ್ಸ್ ಇದಾಗಿದೆ‌. ಅತ್ಯುತ್ತಮ ಸೌಂಡ್ ಸಿಸ್ಟಂ, ಸ್ಕ್ರೀನ್ ಹಾಗೂ ಆಸನ ವ್ಯವಸ್ಥೆಯನ್ನೂ ಎಎಎ ಸಿನಿಮಾಸ್ ಕಲ್ಪಿಸಿದೆ. ವಿಶ್ವ ದರ್ಜೆಯ ವೈಶಿಷ್ಟ್ಯಗಳೊಂದಿಗೆ‌ ನಿರ್ಮಿಸಲಾಗಿರುವ ಎಎಎಸ್ ಮಲ್ಟಿಪ್ಲೆಕ್ಸ್ ನಲ್ಲಿ ಪ್ರಭಾಸ್ ಆದಿಪುರುಷ (Adipurusha) ಸಿನಿಮಾ ಮೊದಲು ಪ್ರದರ್ಶನಗೊಳ್ತಿದೆ.

  • ಪಿತೃಪಕ್ಷದಲ್ಲಿ ಥಿಯೇಟರ್ ಓಪನ್ ಮಾಡಲ್ಲ – ಉಡುಪಿ ಚಿತ್ರಮಂದಿರ ಮಾಲೀಕರ ತೀರ್ಮಾನ

    ಪಿತೃಪಕ್ಷದಲ್ಲಿ ಥಿಯೇಟರ್ ಓಪನ್ ಮಾಡಲ್ಲ – ಉಡುಪಿ ಚಿತ್ರಮಂದಿರ ಮಾಲೀಕರ ತೀರ್ಮಾನ

    ಉಡುಪಿ: ರಾಜ್ಯಾದ್ಯಂತ ಅಕ್ಟೋಬರ್ 1ರಿಂದ ಥಿಯೇಟರ್‌ಗಳು ಓಪನ್ ಆಗಿ ಚಿತ್ರಗಳು ಪ್ರದರ್ಶನಕಾಣಲಿದೆ. ಕರಾವಳಿ ಜಿಲ್ಲೆ ಉಡುಪಿಯಲ್ಲಿ ಇನ್ನೊಂದು ವಾರ ಚಿತ್ರಮಂದಿರ ಓಪನ್ ಆಗಲ್ಲ. ಪಿತೃಪಕ್ಷ ಇರುವುದರಿಂದ ಥಿಯೇಟರ್‌ಗಳನ್ನು ಮತ್ತೆ ಓಪನ್ ಮಾಡಲು ಆಡಳಿತ ಮಂಡಳಿ ಒಪ್ಪುತ್ತಿಲ್ಲ.

    ಉಡುಪಿ ಜಿಲ್ಲೆಯಲ್ಲಿ ಅಕ್ಟೋಬರ್ 1ರಂದು ಯಾವುದೇ ಚಿತ್ರಮಂದಿರಗಳನ್ನು ಓಪನ್ ಮಾಡದೆ ಇರಲು ತೀರ್ಮಾನಿಸಲಾಗಿದೆ. ಮಲ್ಟಿಪ್ಲೆಕ್ಸ್ ಗಳು ಈಗಾಗಲೇ ಆರಂಭವಾಗಿದ್ದು, ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳನ್ನು ಒಂದು ವಾರದ ನಂತರ ಓಪನ್ ಮಾಡಲು ತೀರ್ಮಾನಿಸಲಾಗಿದೆ. ಉಡುಪಿಯ ಕಲ್ಪನಾ, ಅಲಂಕಾರ, ಆಶೀರ್ವಾದ್ ಸೇರಿದಂತೆ ಕಾರ್ಕಳ ಮತ್ತು ಕುಂದಾಪುರ ತಾಲೂಕಿನ ಥಿಯೇಟರ್‌ಗಳು ಅಕ್ಟೋಬರ್ ಎಂಟರ ನಂತರ ತೆರೆದುಕೊಳ್ಳಲಿವೆ. ಇದನ್ನೂ ಓದಿ: ಸಾರಿ ಮಮ್ಮಿ, ಪಪ್ಪಾ – ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಿ: ಸೌಜನ್ಯ ಡೆತ್‍ನೋಟ್

    ಅಕ್ಟೋಬರ್ ಮೊದಲ ವಾರದಲ್ಲಿ ಪಿತೃಪಕ್ಷ ಇರುವುದರಿಂದ ಶುಭ ಕಾರ್ಯಗಳನ್ನು ಪಿತೃಪಕ್ಷದಲ್ಲಿ ಮಾಡೋದಿಲ್ಲ. 8 ನೇ ತಾರೀಖಿನಿಂದ ಥಿಯೇಟರ್‌ಗಳು ಓಪನ್ ಮಾಡಬೇಕು ಅಂದ್ರೆ ಸುಮಾರು 30 ಸಾವಿರ ರೂಪಾಯಿ ಖರ್ಚು ಇದೆ. 5 ತಿಂಗಳಿಂದ ಥಿಯೇಟರ್ ಬಂದ್ ಇರುವುದರಿಂದ ಸೀಟುಗಳು ಕಾರ್ಪೆಟ್ ಗಳು, ಹಾಲ್, ಜಗಲಿ ಸ್ಕ್ರೀನ್ ಸೇರಿದಂತೆ ಥಿಯೇಟರ್‌ರೊಳಗೆ ಸಂಪೂರ್ಣ ಶುಚಿತ್ವ ಮಾಡಬೇಕಾಗಿದೆ. ಕೊರೊನಾ ಮೊದಲ ಅಲೆಯ ಸಂದರ್ಭ 11 ತಿಂಗಳು ಥಿಯೇಟರ್ ಓಪನ್ ಆಗಿರಲಿಲ್ಲ ಈ ಸಂದರ್ಭದಲ್ಲಿ ಎಲ್ಲಾ ಚಿತ್ರಮಂದಿರಗಳಿಗೆ 40 ಸಾವಿರ ರುಪಾಯಿ ಖರ್ಚಾಗಿತ್ತು. ಇದನ್ನೂ ಓದಿ: ಪಾದಯಾತ್ರೆ ಶಾಪದಿಂದ ಬಿಎಸ್‍ವೈ ಅಧಿಕಾರ ಕಳೆದುಕೊಂಡರು: ಕಾಶಪ್ಪನವರ್

    ಅಕ್ಟೋಬರ್ 1ಕ್ಕೆ ಯಾವುದು ದೊಡ್ಡ ಬಜೆಟ್‍ನ ಚಿತ್ರಗಳು, ದೊಡ್ಡ ಸ್ಟಾರ್ ಕಾಸ್ಟ ಚಿತ್ರಗಳು ರಿಲೀಸ್ ಇಲ್ಲ. ಪಿತೃಪಕ್ಷ ಈಗ ನಡೆಯುತ್ತಿದೆ. ಮಹಾಲಯ ಅಮಾವಾಸ್ಯೆ ನಂತರ ಒಳ್ಳೆ ದಿನಗಳು ಇರುವುದರಿಂದ ಆನಂತರ ಥಿಯೇಟರ್‌ಗಳನ್ನು ಓಪನ್ ಮಾಡುತ್ತೇವೆ. ಅನಾದಿಕಾಲದಿಂದ ಜನ ನಂಬಿಕೊಂಡು ಬಂದಿರುವುದರಿಂದ ದಿನಗಳು ಒಳ್ಳೆಯದಲ್ಲ ಎಂಬ ನಂಬಿಕೆ ನಮ್ಮಲ್ಲಿದೆ. ಯಾವುದೇ ಸಮಸ್ಯೆಗಳು ಆಗದಿರಲಿ, ಒಳ್ಳೆ ಬ್ಯುಸಿನೆಸ್ ಆಗಲಿ ಎಂಬ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ವಿ.ಎಸ್ ಹೊಳ್ಳ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.

  • ಕೊನೆಗೂ ತನ್ನ ಆಸೆ ನೆರವೇರಿಸಿಕೊಂಡ ವಿಜಯ್ ದೇವರಕೊಂಡ

    ಕೊನೆಗೂ ತನ್ನ ಆಸೆ ನೆರವೇರಿಸಿಕೊಂಡ ವಿಜಯ್ ದೇವರಕೊಂಡ

    ಚೆನ್ನೈ: ಟಾಲಿವುಡ್ ನಟ ವಿಜಯ್ ದೇವರಕೊಂಡ ತಮ್ಮ ಕನಸನ್ನು ನನಸು ಮಾಡಿಕೊಂಡಿರುವ ವಿಷಯವನ್ನು ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಲ್ಲಿ ಸಂತೋಷ ಹಂಚಿಕೊಂಡಿದ್ದಾರೆ.

    ಏನಿದು ಕನಸು?
    ವಿಜಯ್ ಟ್ವಿಟ್ಟರ್‍ನಲ್ಲಿ, ನಟನಾಗುವ ಕನಸು ಕಂಡು ಬಂದಿದ್ದ ನಾನು ಈಗ ‘ಮಲ್ಟಿಪ್ಲೆಕ್ಸ್’ಗೆ ಬಡೆಯನಾಗಿದ್ದೇನೆ. ‘ಏಷ್ಯನ್ ವಿಜಯ್ ದೇವರಕೊಂಡ ಚಿತ್ರಮಂದಿರವನ್ನು(ಎವಿಡಿ) ಇಂದು ನಾನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇನೆ. ಮಹಬೂಬ್ ನಗರದಲ್ಲಿ ಇದು ಮೊದಲ ಎವಿಡಿ ಯಾಗಿದ್ದು, ಸೆ.24ರಿಂದ ಪ್ರಾರಂಭವಾಗುತ್ತೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:  ಮತ್ತೆ ನಾಗವಲ್ಲಿಯಾಗ್ತಾಳಾ ಸ್ವೀಟಿ?

    ಸೆಪ್ಟೆಂಬರ್ 24 ರಂದು ನಾಗಚೈತನ್ಯ ಹಾಗೂ ಸಾಯಿ ಪಲ್ಲವಿ ನಟಿಸಿರುವ ‘ಲವ್ ಸ್ಟೋರಿ’ ಸಿನಿಮಾವನ್ನು ಎವಿಡಿಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಈ ಹಿನ್ನೆಲೆ ಆ ಸಿನಿಮಾಗೆ ವಿಜಯ್ ಶುಭಕೋರಿದ್ದಾರೆ. ಇದನ್ನೂ ಓದಿ:  ಪೂಜಾ ಮೇಲೆ ಮುನಿಸಿಕೊಂಡ್ರಾ ಬಾಹುಬಲಿ?

  • ಬಾಂಬ್ ಸ್ಫೋಟಗೊಳಿಸುವುದಾಗಿ ಟ್ವೀಟ್ ಮಾಡಿದ್ದ ಹರಿಯಾಣ ವ್ಯಕ್ತಿ ಬಂಧನ

    ಬಾಂಬ್ ಸ್ಫೋಟಗೊಳಿಸುವುದಾಗಿ ಟ್ವೀಟ್ ಮಾಡಿದ್ದ ಹರಿಯಾಣ ವ್ಯಕ್ತಿ ಬಂಧನ

    ಮುಂಬೈ: ನಗರದ ಕೆಲವು ಮಲ್ಟಿಪ್ಲೆಕ್ಸ್ ಗಳಲ್ಲಿ ಬಾಂಬ್ ಸ್ಫೋಟಗೊಳಿಸುವುದಾಗಿ ಟ್ವೀಟ್ ಮಾಡಿದ 19 ವರ್ಷದ ಯುವಕನನ್ನು ಸೋಮವಾರ ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ.

    ಆರೋಪಿಯನ್ನು ಬನ್ವಾರಿ ಸಿಂಗ್ ಎಂದು ಗುರುತಿಸಲಾಗಿದ್ದು, ಜನವರಿ 22ರಂದು ತನ್ನ ಟ್ವಿಟ್ಟರ್ ಖಾತೆಯಲ್ಲಿ ಬಾಂಬ್ ಸ್ಫೋಟಗೊಳಿಸುವುದಾಗಿ ಟ್ಯಾಗ್ ಮಾಡಿಕೊಂಡಿದ್ದಾನೆ ಎಂದು ಮುಂಬೈ ಪೊಲೀಸರು ಮತ್ತು ಆಯುಕ್ತರು ತಿಳಿಸಿದ್ದಾರೆ.

    ಕಮಾಂಡೋ ಸಿಂಗ್ ಎಂಬ ಹೆಸರಿನಲ್ಲಿರುವ ಟ್ವಿಟ್ಟರ್ ಖಾತೆಯನ್ನು ಯುವಕ ಬಳಕೆ ಮಾಡುತ್ತಿದ್ದು, 7 ಮಲ್ಟಿಪ್ಲೆಕ್ಸ್ ಗಳಲ್ಲಿ ಬಾಂಬ್ ಸ್ಫೋಟವಾಗುತ್ತದೆ ಎಂದು ಹೇಳಿಕೊಂಡಿದ್ದಾನೆ.

    ಈ ಕುರಿತಂತೆ ಮಾಹಿತಿ ಬಂದ ಪೊಲೀಸರು ಕೂಡಲೇ ಹಲವು ಮಲ್ಟಿಪ್ಲೆಕ್ಸ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಇದು ವಂಚಿಸಲು ಹಾಕಿರುವ ಟ್ವೀಟ್ ಎಂದು ಪೊಲೀಸರು ತಿಳಿಸಿದ್ದಾರೆ. ಈ ಮಧ್ಯೆ ಆರೋಪಿ ತಾನು ಟ್ವೀಟ್ ಮಾಡಿದ್ದನ್ನು ಅಳಿಸಿ ಹಾಕಿದ್ದಾನೆ.

    ಘಟನೆ ವಿಚಾರವಾಗಿ ಸೈಬರ್ ಸೆಲ್ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಹರಿಯಾಣದಲ್ಲಿ ಬಂಧಿಸಲಾಗಿದ್ದು, ಆರೋಪಿ ಟ್ವೀಟ್ ಮಾಡಲು ಬಳಸಿದ್ದ ಮೊಬೈಲ್‍ನನ್ನು ವಶಪಡಿಕೊಳ್ಳಲಾಗಿದೆ ಎಂದು ಉಪ ಪೊಲೀಸ್ ಆಯುಕ್ತರಾದ ರಶ್ಮಿ ಕರಂದಿಕರ್ ಹೇಳಿದ್ದಾರೆ.

    ಇದೀಗ ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ಸಂಬಂಧಿಸಿದ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.