Tag: Mullayyanagiri

  • ಗಾಳಿ-ಮಳೆಗೆ ಧರೆಗುರುಳಿದ ಮರ; ಮುಳ್ಳಯ್ಯನಗಿರಿ-ದತ್ತಪೀಠ ಮಾರ್ಗ ಬಂದ್

    ಗಾಳಿ-ಮಳೆಗೆ ಧರೆಗುರುಳಿದ ಮರ; ಮುಳ್ಳಯ್ಯನಗಿರಿ-ದತ್ತಪೀಠ ಮಾರ್ಗ ಬಂದ್

    ಚಿಕ್ಕಮಗಳೂರು: ಕಾಫಿನಾಡ ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಭಾರೀ ಗಾಳಿ-ಮಳೆಗೆ ಬೃಹತ್ ಮರ ರಸ್ತೆಗೆ ಉರುಳಿ ಬಿದ್ದ ಪರಿಣಾಮ ಚಿಕ್ಕಮಗಳೂರು-ಮುಳ್ಳಯ್ಯನಗಿರಿ-ದತ್ತಪೀಠ ಮಾರ್ಗದ ರಸ್ತೆ ಸಂಪೂರ್ಣ ಬಂದ್ ಆಗಿದೆ.

    ಬೆಳ್ಳಂ ಬೆಳಗ್ಗೆಯೇ ಬೃಹತ್ ಮರ ರಸ್ತೆಗೆ ಬಿದ್ದ ಪರಿಣಾಮ ಪ್ರವಾಸಿಗರು ಹಾಗೂ ಸ್ಥಳೀಯರು ಪರದಾಟ ಅನುಭವಿಸುವಂತಾಗಿದೆ. ಕೈಮರದಿಂದ 4 ಕಿ.ಮೀ. ದೂರದಲ್ಲಿ ದತ್ತಪೀಠ (Datta Peetha) ಹಾಗೂ ಮುಳ್ಳಯ್ಯನಗಿರಿ (Mullayyanagiri) ಹೋಗುವ ಸರ್ಕಲ್ ಬಳಿಯೇ ಮರ ಬಿದ್ದಿದ್ದು, ಎರಡು ಸ್ಥಳಗಳಿಗೆ ಸಂಪರ್ಕ ಸಂಪೂರ್ಣ ಕಟ್ ಆಗಿದೆ. ಕಿರಿದಾದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾದ ಕಾರಣ ಸ್ಥಳೀಯರು-ಗ್ರಾಮಾಂತರ ಪೊಲೀಸರು ಮರ ತೆರವು ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇದನ್ನೂ ಓದಿ: ಮಹಿಳೆಯ ನಗ್ನ ವಿಡಿಯೋ ರೆಕಾರ್ಡ್‌ ಮಾಡ್ಕೊಂಡು ಬ್ಲ್ಯಾಕ್‌ಮೇಲ್‌ – ಪ್ರತಿಷ್ಠಿತ ದೇವಸ್ಥಾನದ ಅರ್ಚಕ ಅರೆಸ್ಟ್‌

    ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಪ್ರವಾಸಿಗರು ಎಚ್ಚರಿಕೆಯಿಂದ ಸಂಚರಿಸುವಂತೆ ಪ್ರವಾಸಿಗರಿಗೆ ಮನವಿ ಮಾಡಿದ್ದಾರೆ. ಇನ್ನು ಕೊಪ್ಪ ತಾಲೂಕಿನ ಮೇಗುಂದಾ ಸಮೀಪದ ವೆಂಕಟರಮಣ ದೇವಸ್ಥಾನದ ಬಳಿ ಕೊಗ್ರೆ ಗ್ರಾಮಕ್ಕೆ ಹೋಗುವ ಮಾರ್ಗದಲ್ಲೂ ಬೃಹತ್ ಮರ ರಸ್ತೆಗೆ ಉರುಳಿದ್ದು, ನಾಲ್ಕೈದು ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ. ಬೃಹತ್ ಮರ ಬುಡಸಮೇತ ಬಿದ್ದ ಪರಿಣಾಮ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಜಯಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮರ ತೆರವು ಮಾಡಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದನ್ನೂ ಓದಿ: ಇರಾನ್‌-ಇಸ್ರೇಲ್‌ ಸಂಘರ್ಷ ತೀವ್ರ – ಇಸ್ರೇಲ್‌ ಮಿಸೈಲ್‌ ದಾಳಿಗೆ ಇರಾನ್‌ನ 14 ಅಧಿಕಾರಿಗಳು ಬಲಿ

  • ಪತ್ನಿಯನ್ನು ಕೊಂದು ನಾಪತ್ತೆಯಾಗಿದ್ದ ಪತಿ, ಮುಳ್ಳಯ್ಯನಗಿರಿ ಕಾಡಿನಲ್ಲಿ ಬಂಧನ

    ಪತ್ನಿಯನ್ನು ಕೊಂದು ನಾಪತ್ತೆಯಾಗಿದ್ದ ಪತಿ, ಮುಳ್ಳಯ್ಯನಗಿರಿ ಕಾಡಿನಲ್ಲಿ ಬಂಧನ

    ಚಿಕ್ಕಮಗಳೂರು: ಇಲ್ಲಿನ ಕೈಮರ ಚೆಕ್‌ಪೋಸ್ಟ್ (Kaimara check post) ಬಳಿ ಪತ್ನಿಯನ್ನ ಕೊಂದು ನಾಪತ್ತೆಯಾಗಿದ್ದ ಪತಿಯನ್ನು ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಅವಿನಾಶ್(32) ಬಂಧಿತ ಆರೋಪಿ. ಅವಿನಾಶ್, ಕೀರ್ತಿ(26)ಯನ್ನು 4 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ. ಬುಧವಾರ ಬೆಳಗ್ಗೆ ಇವರಿಬ್ಬರ ಮಧ್ಯೆ ಜಗಳ ಏರ್ಪಟ್ಟು, ಪತ್ನಿ ಕೀರ್ತಿಯನ್ನ ಅವಿನಾಶ್ ಚಾಕುವಿನಿಂದ ಹತ್ತಕ್ಕೂ ಹೆಚ್ಚು ಬಾರಿ ಇರಿದಿದ್ದ. ಇದನ್ನೂ ಓದಿ: ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನು 10 ಬಾರಿ ಇರಿದು ಕೊಂದ ಪತಿ

    ಪತಿಯಿಂದ ಚಾಕು ಇರಿತಕ್ಕೊಳಗಾದ ಕೀರ್ತಿ ರಕ್ತದ ಮಡುವಿನಲ್ಲೇ ಮನೆಯಿಂದ ಓಡಿ ಬಂದು ನಡು ರಸ್ತೆಯಲ್ಲಿ ಕೂಗಿಕೊಂಡು ಬಿದ್ದಿದ್ದಳು. ಕೂಡಲೇ ಆಕೆಯನ್ನು ಪೋಷಕರು ಹಾಗೂ ಸ್ಥಳೀಯರು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದ್ದರು. ಆದರೆ ಅವಿನಾಶ್, ಮನಸೋ ಇಚ್ಛೆ ಚಾಕುವಿನಿಂದ ಹಲ್ಲೆ ಮಾಡಿದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಆಕೆ ಸಾವನ್ನಪ್ಪಿದ್ದಳು. ಇದನ್ನೂ ಓದಿ: ಮನೆ ಮದ್ದು | ಮೊಡವೆಯ ಸಮಸ್ಯೆ ಕಾಡ್ತಿದ್ಯಾ? ಇಲ್ಲಿದೆ ಸುಲಭ ಪರಿಹಾರ

    ಕೀರ್ತಿಗೆ ಚಾಕುವಿನಿಂದ ಇರಿದ ಅವಿನಾಶ್, ಬಳಿಕ ಮುಳ್ಳಯ್ಯನಗಿರಿ (Mullayanagiri) ಕಾಡಿನಲ್ಲಿ ನಾಪತ್ತೆಯಾಗಿದ್ದ. ಆತನ ಬಂಧನಕ್ಕಾಗಿ ಚಿಕ್ಕಮಗಳೂರು ಎಸ್ಪಿ ವಿಕ್ರಂ ಆಮ್ಟೆ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಸಚಿನ್ ಹಾಗೂ ಸಬ್ ಇನ್ಸ್ಪೆಕ್ಟರ್, ರಾಜೇಶ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿದ್ದರು. ಇದನ್ನೂ ಓದಿ: ಕನ್ನಡದ ಬಗ್ಗೆ ಕಮಲ್ ಹಾಸನ್‌ಗೆ ಪ್ರೀತಿಯಿದೆ, ಯಾಕೆ ಅದನ್ನ ದೊಡ್ಡ ವಿಷಯ ಮಾಡ್ತೀರಾ?: ಶಿವಣ್ಣ

    ಘಟನೆ ನಡೆದ ಏಳರಿಂದ ಎಂಟು ಗಂಟೆಗಳ ಕಾಲ ಮುಳ್ಳಯ್ಯನಗಿರಿ ಕಾಡಿನಲ್ಲಿ ಅವಿತು ಕೂತಿದ್ದ ಆರೋಪಿ ಅವಿನಾಶ್‌ನನ್ನ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಗಳೂರು (Chikkamagaluru) ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪ್ರವಾಸಿಗರೇ ಗಮನಿಸಿ; ಕಾಫಿನಾಡ ಮುಳ್ಳಯ್ಯನಗಿರಿ-ದತ್ತಪೀಠ 3 ದಿನ ಬಂದ್!

    ಪ್ರವಾಸಿಗರೇ ಗಮನಿಸಿ; ಕಾಫಿನಾಡ ಮುಳ್ಳಯ್ಯನಗಿರಿ-ದತ್ತಪೀಠ 3 ದಿನ ಬಂದ್!

    ಚಿಕ್ಕಮಗಳೂರು: ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ 3 ದಿನಗಳ ಕಾಲ ಉರುಸ್ (Urus) ನಡೆಯುವುದರಿಂದ ಚಿಕ್ಕಮಗಳೂರು (Chikkamagaluru) ಜಿಲ್ಲಾಡಳಿತ ಪ್ರವಾಸಿಗರಿಗೆ (Tourists) ಸಂಪೂರ್ಣ ನಿರ್ಬಂಧ ಹೇರಿದೆ.

    ಉರುಸ್ ಅಂಗವಾಗಿ ಜಿಲ್ಲಾಡಳಿತ 3 ದಿನಗಳ ಕಾಲ ಪಶ್ಚಿಮ ಘಟ್ಟಗಳ ತಪ್ಪಲು ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠ, ಮಾಣಿಕ್ಯಾಧಾರ, ಗಾಳಿಕೆರೆ ಸೇರಿ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಿದೆ. ಇದೇ ಮಾರ್ಚ್ 15ರಿಂದ 17ರವರೆಗೆ 3 ದಿನಗಳ ಕಾಲ ಜಿಲ್ಲಾಡಳಿತ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ-ದತ್ತಪೀಠ ಭಾಗಕ್ಕೆ ಪ್ರವಾಸಿಗರಿಗೆ ಸಂಪೂರ್ಣ ನಿಷೇಧ ಹೇರಿದೆ. ಚಿಕ್ಕಮಗಳೂರು ತಾಲೂಕಿನ ದತ್ತಪೀಠದಲ್ಲಿ ಮಾರ್ಚ್ 15 ರಿಂದ 17ವರೆಗೆ 3 ದಿನ ಉರುಸ್ ನಡೆಯುವ ಹಿನ್ನೆಲೆ ಮುಂಜಾಗೃತ ಕ್ರಮವಾಗಿ ಜಿಲ್ಲಾಡಳಿತ ಪ್ರವಾಸಿ ತಾಣಗಳಿಗೆ ನಿರ್ಬಂಧಿಸಿದೆ. ಇದನ್ನೂ ಓದಿ: ಮತಾಂತರ ಆಗುವಂತೆ ನನಗೆ ಒತ್ತಡ ಹೇರುತ್ತಿದ್ದರು: ಮಾಜಿ ಪಾಕ್ ಕ್ರಿಕೆಟಿಗ ಕನೇರಿಯಾ

    ರಾಜ್ಯದ ನಾನಾ ಭಾಗಗಳಿಂದ ಆಗಮಿಸುವ ಸಾವಿರಾರು ಮುಸ್ಲಿಂ ಬಾಂಧವರು ಉರುಸ್ ಆಚರಣೆಯಲ್ಲಿ ಪಾಲ್ಗೊಳ್ಳುವುದರಿಂದ ಯಾವುದೇ ಅಹಿತಕರ ಘಟನೆ ನಡೆಯಬಾರದು. ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಗಬಾರದು ಎಂದು ಜಿಲ್ಲಾಡಳಿತ ಪ್ರವಾಸಿಗರಿಗೆ ಸಂಪೂರ್ಣ ನಿಷೇಧ ಹೇರಿದೆ. ಇದನ್ನೂ ಓದಿ: ಐಪಿಎಸ್ ಸೂಚನೆಯಂತೆ ರನ್ಯಾಗೆ ಗ್ರೀನ್‌ಚಾನಲ್ – ಡಿಆರ್‌ಐ ಮುಂದೆ ಶಿಷ್ಟಾಚಾರ ಅಧಿಕಾರಿ ಹೇಳಿಕೆ

    ಚಿಕ್ಕಮಗಳೂರಿನಿಂದ ದತ್ತಪೀಠದ ಮಾರ್ಗದ ರಸ್ತೆ ಅತ್ಯಂತ ಚಿಕ್ಕದಾಗಿರುವುದರಿಂದ ಟ್ರಾಫಿಕ್ ಜಾಮ್ ಉಂಟಾಗಬಾರದು ಜೊತೆಗೆ ಭದ್ರತೆಯ ದೃಷ್ಠಿಯಿಂದಲೂ ಪ್ರವಾಸಿಗರಿಗೆ ನಿರ್ಬಂಧ ಹಾಕಲಾಗಿದೆ. ಆದರೆ, ಹೋಂ ಸ್ಟೇ ಹಾಗೂ ರೆಸಾರ್ಟ್ಗಳಿಗೆ ಮೊದಲೇ ಬುಕ್ ಮಾಡಿರುವ ಪ್ರವಾಸಿಗರಿಗೆ ಯಾವುದೇ ನಿರ್ಬಂಧವಿಲ್ಲ. ಪ್ರವಾಸಿಗರು ಬುಕ್ಕಿಂಗ್ ತೋರಿಸಿ ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳಿಗೆ ಮಾತ್ರ ಹೋಗಬಹುದು. ಇದನ್ನೂ ಓದಿ: ಕಾಲಿಗೆ ಬ್ಯಾಂಡೇಜ್ ಕಟ್ಟಿಕೊಂಡೇ ಕೋಚಿಂಗ್‌ಗೆ ಬಂದ ರಾಹುಲ್ ದ್ರಾವಿಡ್

    ಇನ್ನು ಗಿರಿ ಭಾಗದ ಕಾಫಿ ತೋಟಗಳಿಗೆ ಓಡಾಡುವ ಸ್ಥಳೀಯರಿಗೂ ಯಾವುದೇ ನಿರ್ಬಂಧವಿಲ್ಲ. ಉರುಸ್ ಆಚರಣೆ ಹಿನ್ನೆಲೆ ಪೊಲೀಸ್ ಕೂಡ ಜಿಲ್ಲಾದ್ಯಂತ ಹದ್ದಿನ ಕಣ್ಣಿಟ್ಟಿದೆ. ಚಿಕ್ಕಮಗಳೂರು ನಗರ ಹಾಗೂ ದತ್ತಪೀಠದಲ್ಲಿ 800ಕ್ಕೂ ಅಧಿಕ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಇದನ್ನೂ ಓದಿ: 6 ಅಡಿ ಎತ್ತರದ ವ್ಯಕ್ತಿಯೊಬ್ಬ ಚಿನ್ನವಿದ್ದ ಎರಡು ಬಾಕ್ಸ್ ನೀಡಿದ್ದ: ರನ್ಯಾ ತಪ್ಪೊಪ್ಪಿಗೆ

  • ಪ್ರಕೃತಿಯೇ ನಾಚುವ ಮುಳ್ಳಯ್ಯನಗಿರಿ ಸೊಬಗಿಗೆ ಪ್ರವಾಸಿಗರು ಫಿದಾ

    ಪ್ರಕೃತಿಯೇ ನಾಚುವ ಮುಳ್ಳಯ್ಯನಗಿರಿ ಸೊಬಗಿಗೆ ಪ್ರವಾಸಿಗರು ಫಿದಾ

    ಚಿಕ್ಕಮಗಳೂರು: ಹಸಿರು ಮುತ್ತೈದೆ ಮುಡಿಗೆ ದುಂಡು ಮಲ್ಲಿಗೆ ಸೊಬಗು ಎನ್ನುವಂತೆ, ಮೋಡವೇ ಗಿರಿಗೆ ಮುತ್ತಿಕುತ್ತಿರುವಂತೆ, ಪಶ್ಚಿಮ ಘಟ್ಟದಲ್ಲಿ ಪ್ರಕೃತಿಯೇ ನಾಚುವ ಸೌಂದರ್ಯ ಹೊತ್ತು ಬೀಗುತ್ತಿರುವ ಮುಳ್ಳಯ್ಯನಗಿರಿ ಸೊಬಗಿಗೆ ಪ್ರವಾಸಿಗರು ಫಿದಾ ಆಗಿದ್ದಾರೆ.

    ಹೌದು. ಪ್ರಕೃತಿ ಪ್ರಿಯರು, ಪ್ರವಾಸಿಗರ ಕಣ್ಣಿಗೆ ರಸದೌತಣ ನೀಡುವ ಕಾಫಿನಾಡ ಮುಳ್ಳಯ್ಯನಗಿರಿ ಸೌಂದರ್ಯದ ಬಗ್ಗೆ ಹೇಳಲು ಪದ ಸಾಲದು. ಬರೆಯಲು ಪುಟ ಸಾಲದು. ಪದಗಳಲ್ಲಿ ಪುಟದ ತುಂಬಾ ಬರೆದರೂ ಕಣ್ಣುಗಳು ಆನಂದಿಸುವ ವೈಭೋಗವೇ ಬೇರೆ. ಅರಬ್ಬಿ ಸಮುದ್ರದಲ್ಲಿನ ವಾಯುಭಾರ ಕುಸಿತ ಕಾಫಿನಾಡಲ್ಲಿ ಹೊಸದೊಂದು ಲೋಕವನ್ನೇ ಸೃಷ್ಟಿಸಿದೆ. ಮುಳ್ಳಯ್ಯನಗರಿಯಲ್ಲಿನ ಮೋಡಕವಿದ ವಾತವಾರಣದಲ್ಲಿ ಮೋಡದ ಕಣ್ಣಾಮುಚ್ಚಾಲೆ ಆಟಕ್ಕೆ ಪ್ರವಾಸಿಗರು ಮನಸೋತಿದ್ದಾರೆ.

    ಮುಳ್ಳಯ್ಯನಗಿರಿ ಸೊಬಗಿಗೆ ಕೆಲವೇ ಕೆಲವು ಪ್ರವಾಸಿಗರು ಸಾಕ್ಷಿಯಾಗಿದ್ದಾರೆ. ನಿಮಿಷಕ್ಕೊಮ್ಮೆ ಬದಲಾಗೋ ಇಲ್ಲಿನ ಪ್ರಕೃತಿ ಸೌಂದರ್ಯ ನೋಡನೋಡುತ್ತಿದ್ದಂತೆ ಮತ್ತೊಂದು ಲೋಕ ಸೃಷ್ಟಿಸುತ್ತದೆ. ಅದರಲ್ಲೂ ಭಾನುವಾರದಂದು ಪ್ರವಾಸಿಗರು ಕಂಡ ಮುಳ್ಳಯ್ಯನಗಿರಿಯಂತೂ ಅದ್ಭುತ, ಅತ್ಯದ್ಭುತ ಎನ್ನುವಂತಿತ್ತು. ಇಲ್ಲಿನ ನೈಜ ಪ್ರಕೃತಿಯ ಸೊಬಗನ್ನ ಅಲ್ಲೇ ನಿಂತು ಸವಿಯೋದು ಕೋಟಿ ಪುಣ್ಯವೇ ಸರಿ ಎಂದು ಪ್ರವಾಸಿಗರು ಹಾಡಿ ಹೊಗಳಿದ್ದಾರೆ.

    ಮುಳ್ಳಯ್ಯನಗಿರಿಯ ಸೌಂದರ್ಯಕ್ಕೆ ಸೋತು ಹೋದ ಪ್ರವಾಸಿಗರು ಅಲ್ಲಿನ ದೃಶ್ಯವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ಅದ್ಭುತ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದ್ದು, ಪ್ರಕೃತಿಯ ಅದ್ಭುತ ಸೊಬಗು ಹೊತ್ತು ಬೀಗುತ್ತಿರುವ ಮುಳ್ಳಯ್ಯನಗಿರಿ ಎಲ್ಲರ ಮನ ಗೆದ್ದಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರವಾಸಿಗರ ದಂಡೇ ಪ್ರಕೃತಿಯ ಸೊಬಗನ್ನು ಕಣ್ಣಾರೆ ಆನಂದಿಸಲು ಮುಳ್ಳಯ್ಯನಗಿರಿಯತ್ತ ಹರಿದು ಬರುತ್ತಿದೆ.

  • ಮುಳ್ಳಯ್ಯನಗಿರಿ, ದತ್ತಪೀಠ, ಹೊನ್ನಮ್ಮನಹಳ್ಳ ರಸ್ತೆ ಸಂಚಾರಕ್ಕೆ ಜಿಲ್ಲಾಡಳಿತ ಬ್ರೇಕ್

    ಮುಳ್ಳಯ್ಯನಗಿರಿ, ದತ್ತಪೀಠ, ಹೊನ್ನಮ್ಮನಹಳ್ಳ ರಸ್ತೆ ಸಂಚಾರಕ್ಕೆ ಜಿಲ್ಲಾಡಳಿತ ಬ್ರೇಕ್

    ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಸುರಿಯುತ್ತಿರುವ ಮಳೆ ಭಾರೀ ಅವಾಂತರವನ್ನು ಸೃಷ್ಟಿಸುತ್ತಿದೆ. ಪದೇ ಪದೇ ಗುಡ್ಡ ಕುಸಿತ ಹಿನ್ನೆಲೆಯಲ್ಲಿ ಆಗಸ್ಟ್ 14 ರವರೆಗೆ ದತ್ತಪೀಠ, ಮುಳ್ಳಯ್ಯನಗಿರಿ, ಹೊನ್ನಮ್ಮನಹಳ್ಳ ರಸ್ತೆಗಳಲ್ಲಿ ಜಿಲ್ಲಾಡಳಿತ ವಾಹನ ಸಂಚಾರ ನಿಷೇಧಿಸಿದೆ.

    ಗಿರಿಪ್ರದೇಶದಲ್ಲಿ ನಿರಂತರವಾಗಿ ಗುಡ್ಡ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಆಗಸ್ಟ್ 14ರವರೆಗೆ ಮುಳ್ಳಯ್ಯನಗಿರಿ, ದತ್ತಪೀಠ, ಹೊನ್ನಮ್ಮನಹಳ್ಳ ರಸ್ತೆ ಸಂಚಾರ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಆದೇಶಿಸಿದ್ದಾರೆ. ಅತ್ತ ಮಳೆಯೂ ನಿಲ್ಲುತ್ತಿಲ್ಲ, ಇತ್ತ ಗುಡ್ಡ ಕುಸಿತವಾಗುವುದು ಕೂಡ ಹೆಚ್ಚಾಗುತ್ತಿರುವುದಕ್ಕೆ ಜಿಲ್ಲಾಧಿಕಾರಿ ಈ ಮೂರು ಮಾರ್ಗಗಳ ವಾಹನ ಸಂಚಾರಕ್ಕೆ ಬ್ರೇಕ್ ಹಾಕಿದ್ದಾರೆ.

    ಜಿಲ್ಲೆಯಲ್ಲಿ ಅಬ್ಬರಿಸುತ್ತಿರುವ ವರುಣ ಇಲ್ಲಿಯ ಜನರ ಜೀವನವನ್ನು ಅಪಾಯಕ್ಕೆ ಸಿಲುಕಿಸಿದ್ದಾನೆ. ಅಲ್ಲದೆ ಎಲ್ಲೆಂದರಲ್ಲಿ ಪದೇ ಪದೇ ಗುಡ್ಡಗಳು ಕುಸಿದು ಬೀಳುತ್ತಿವೆ. ಇದರಿಂದ ಜಿಲ್ಲೆಯ ಹಲವು ಮಾರ್ಗದ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ಗುಡ್ಡ ಕುಸಿತಕ್ಕೆ ಮನೆಗಳು, ಕಾಫಿ ತೋಟಗಳು ನೆಲಸಮವಾಗಿದೆ. ಇದರಿಂದ ಜನರು ಕಂಗಾಲಾಗಿದ್ದು, ಯಾವಾಗ ಏನಾಗತ್ತೋ ಎಂಬ ಭೀತಿ ಜನರಲ್ಲಿ ಮನೆ ಮಾಡಿದೆ.