Tag: Mulbagal

  • ಮುಳಬಾಗಿಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀಲಕಂಠೇಗೌಡ ಹೃದಯಾಘಾತದಿಂದ ನಿಧನ

    ಮುಳಬಾಗಿಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀಲಕಂಠೇಗೌಡ ಹೃದಯಾಘಾತದಿಂದ ನಿಧನ

    ಕೋಲಾರ: ಶಾಸಕ ಕೊತ್ತೂರು ಮಂಜುನಾಥ್ (Kothur Manjunath) ಆಪ್ತ ಹಾಗೂ ಮುಳಬಾಗಿಲು (Mulbagal) ಬ್ಲಾಕ್ ಕಾಂಗ್ರೆಸ್ (Congress) ಅಧ್ಯಕ್ಷ ಎಂ.ಸಿ.ನೀಲಕಂಠೇಗೌಡ ಹೃದಯಾಘಾತದಿಂದ  (Heart Attack)ನಿಧನರಾಗಿದ್ದಾರೆ.

    ಕಳೆದ ರಾತ್ರಿ ಅವರಿಗೆ ತೀವ್ರ ಹೃದಯಾಘಾತವಾಗಿದೆ. ಅವರನ್ನು ಕೂಡಲೇ ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಾವನ್ನಪ್ಪಿದ್ದಾರೆ.

    ನೀಲಕಂಠೇಗೌಡರು ಈ ಹಿಂದೆ ಮುಳಬಾಗಿಲು ತಾಲೂಕು ಪಂಚಾಯತಿ ಅಧ್ಯಕ್ಷರಾಗಿದ್ದರು. ಸದ್ಯ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ, ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿದ್ದರು. ಮುಳಬಾಗಿಲು ಕಾಂಗ್ರೆಸ್‌ನಲ್ಲಿ ಅವರು ಹಿರಿಯ ನಾಯಕರಾಗಿದ್ದರು. ತಾಲೂಕಿನ ಕಾಂಗ್ರೆಸ್ ನಾಯಕರಲ್ಲಿ ತಮ್ಮ ನಾಯಕನನ್ನು ಕಳೆದುಕೊಂಡ ಶೋಕ ಮನೆಮಾಡಿದೆ.

  • ಸಹಾಯ ಮಾಡುವ ನೆಪದಲ್ಲಿ ಎಟಿಎಂ ಪಿನ್ ಪಡೆದು ವಂಚನೆ – ಅಂತರಾಜ್ಯ ಕಳ್ಳರ ಬಂಧನ

    ಸಹಾಯ ಮಾಡುವ ನೆಪದಲ್ಲಿ ಎಟಿಎಂ ಪಿನ್ ಪಡೆದು ವಂಚನೆ – ಅಂತರಾಜ್ಯ ಕಳ್ಳರ ಬಂಧನ

    ಕೋಲಾರ: ಸಹಾಯ ಮಾಡುವ ಸೋಗಿನಲ್ಲಿ ಅಮಾಯಕರ ಬಳಿ ಎಟಿಎಂ (ATM) ಪಿನ್ ಪಡೆದು ಹಣ ಎಗರಿಸುತ್ತಿದ್ದ ಮೂವರು ಅಂತರಾಜ್ಯ ಕಳ್ಳರನ್ನು ಮುಳಬಾಗಿಲು (Mulbagal) ಪೊಲೀಸರು (Police) ಬಂಧಿಸಿದ್ದಾರೆ.

    ಆರೋಪಿಗಳನ್ನು ತಮಿಳುನಾಡಿನ ಹೊಸೂರು ಮೂಲದ ಮಂಜುನಾಥ್, ಚಿನ್ನದೊರೈ ಹಾಗೂ ಮಂಜುನಾಥ್ ಎಂದು ಗುರುತಿಸಲಾಗಿದೆ. ಬಂಧಿತರಿಂದ 13 ಸಾವಿರ ನಗದು, ನಾಲ್ಕು ಎಟಿಎಂ ಕಾರ್ಡ್‍ಗಳು, ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಎಟಿಎಂ ಬಳಿ ಹಣ ಡ್ರಾ ಮಾಡಲು ಸಹಾಯ ಕೇಳಿದವರ ಪಿನ್ ಪಡೆದು ವಂಚಿಸುತ್ತಿದ್ದರು ಎಂದು ತಿಳಿದು ಬಂದಿದೆ. ಆರೋಪಿಗಳು ಬೆಂಗಳೂರು ಸೇರಿದಂತೆ ಕೋಲಾರ, ಆಂದ್ರ ಪ್ರದೇಶ ಹಾಗೂ ತಮಿಳುನಾಡಿನಲ್ಲೂ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಕೇರಳ ಬ್ಲಾಸ್ಟ್- ತೀವ್ರವಾಗಿ ಗಾಯಗೊಂಡಿದ್ದ 61 ವರ್ಷದ ಮಹಿಳೆ ಸಾವು

    ಹಲವು ವರ್ಷಗಳಿಂದ ಕೊಲೆ, ಸುಲಿಗೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿದ್ದಾರೆ. ಮೂರು ರಾಜ್ಯಗಳ ಪೊಲೀಸರಿಗೂ ಆರೋಪಿಗಳು ಹಲವಾರು ಪ್ರಕರಣದಲ್ಲಿ ಬೇಕಾಗಿದ್ದಾರೆ. ಆರೋಪಿಗಳ ವಿರುದ್ಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸತತ 4ನೇ ದಿನ ವಾಯುಗುಣಮಟ್ಟ ಕುಸಿತ – ದೆಹಲಿಯಲ್ಲಿ ಹೈವೋಲ್ಟೇಜ್‌ ಸಭೆ ಕರೆದ ಸಿಎಂ