Tag: Mukyamanthri Chandru

  • ರಾಜ್ಯದ 3 ಪಾರ್ಟಿಗಳಲ್ಲಿ ದರೋಡೆಕೋರರು, ಅತ್ಯಾಚಾರಿಗಳು, ಸುಳ್ಳುಗಾರರಿದ್ದಾರೆ: ಮುಖ್ಯಮಂತ್ರಿ ಚಂದ್ರು

    ರಾಜ್ಯದ 3 ಪಾರ್ಟಿಗಳಲ್ಲಿ ದರೋಡೆಕೋರರು, ಅತ್ಯಾಚಾರಿಗಳು, ಸುಳ್ಳುಗಾರರಿದ್ದಾರೆ: ಮುಖ್ಯಮಂತ್ರಿ ಚಂದ್ರು

    ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರು ಪಕ್ಷಗಳು 75 ವರ್ಷಗಳಿಂದ ಆಡಳಿತ ಮಾಡಿವೆ. ಮೂರು ಪಾರ್ಟಿಗಳಲ್ಲಿ ದರೋಡೆಕೋರರು, ಅತ್ಯಾಚಾರಿಗಳು , ಸುಳ್ಳುಗಾರರಿದ್ದಾರೆ, ಇವರೆಲ್ಲರೂ ತೊಲಗಬೇಕಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ತೊಲಗಲು ಆಪ್ ಗೆಲ್ಲಬೇಕಿದೆ ಎಂದು ಆಪ್ ಪಕ್ಷದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು (Mukyamanthri Chandru) ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ (JDS), ಬಿಜೆಪಿ (BJP), ಕಾಂಗ್ರೆಸ್ (Congress) ರಾಜ್ಯದಲ್ಲಿ ಭ್ರಷ್ಟಾಚಾರವನ್ನು ಕರಗತ ಮಾಡಿವೆ. ಒಂದು ಕಡೆ ಜೆಡಿಎಸ್ ಅನೈತಿಕವಾಗಿ ಅಧಿಕಾರ ಹಿಡಿಯುತ್ತಿದೆ. ಮತ್ತೊಂದು ಕಡೆ ಸರ್ವಾಧಿಕಾರಿ ಧೋರಣೆ, ಭ್ರಷ್ಟಾಚಾರ, ದುರಾಡಳಿ ಜೊತೆಗೆ ಅಘೋಷಿತ ತುರ್ತು ಪರಿಸ್ಥಿತಿಯನ್ನು ಬಿಜೆಪಿ ಹುಟ್ಟುಹಾಕಿದೆ. ಇಷ್ಟು ವರ್ಷ ದೇಶವನ್ನು ಆಳಿದ ಕಾಂಗ್ರೆಸ್ ಈಗ ಗ್ಯಾರಂಟಿ ಕಾರ್ಡ್ ಕೊಡುತ್ತಿದೆ. ಇದು ಸಹ ನಮ್ಮ ಯೋಜನೆಗಳ ಕಾಪಿಯಾಗಿದೆ ಎಂದು ಆರೋಪಿದರು.

    ಚುನಾವಣೆ (Election) ದೃಷ್ಟಿಯಿಂದ ಬಿಜೆಪಿ ಒಳಮೀಸಲಾತಿ ಘೋಷಣೆ ಮಾಡಿದೆ ಇದು ಖಂಡನೀಯ. ಜನಗಣತಿ ಆಧಾರ ಮೇಲೆ ಮತ್ತು ಕಾಂತರಾಜ ಆಯೋಗದ ಆಧಾರದ ಮೇಲೆ‌ ಮೀಸಲಾತಿ ನೀಡಬೇಕು. ಇದಕ್ಕೂ ಮೊದಲು ಜಯಪ್ರಕಾಶ ಹೆಗಡೆ ಅವರು ನೀಡಿದ ಮಧ್ಯಂತರ ವರದಿ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು. ದೇಶವನ್ನು ಭ್ರಷ್ಟಾಚಾರ ಮುಕ್ತ ಮಾಡುವುದೇ ಆಪ್‌ ಸರ್ಕಾರದ ಗುರಿಯಾಗಿದೆ ಎಂದರು. ಇದನ್ನೂ ಓದಿ: ಕಲಾಪದ ವೇಳೆ ತ್ರಿಪುರ ಬಿಜೆಪಿ ಶಾಸಕನಿಂದ ಅಶ್ಲೀಲ ದೃಶ್ಯ ವೀಕ್ಷಣೆ – ವಿಡಿಯೋ ವೈರಲ್

    ರಾಜ್ಯದ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ, ಶೂನ್ಯ ಭ್ರಷ್ಟಾಚಾರ ಗ್ಯಾರಂಟಿ, ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರ, ಪ್ರತಿ ಮನೆಗೆ 300 ಯುನಿಟ್ 24/7 ಉಚಿತ ವಿದ್ಯುತ್, ಉಚಿತ ಉತ್ತಮ ಶಿಕ್ಷಣ, ಉಚಿತ ಬಸ್ ಸೌಲಭ್ಯ, ಮೊಹಲಾ ಕ್ಲಿನಿಕ್, ಯುವಕರಿಗೆ ವರ್ಷ 2 ಲಕ್ಷ ಭತ್ಯೆ, ಮಹಿಳೆಯರಿಗೆ ಗ್ಯಾರಂಟಿ ಉದ್ಯೋಗ ಮೀಸಲು, ಕೇಂದ್ರದ ವಿವಾದಿತ ಮೂರು ಕೃಷಿ ಕಾನೂನು ರದ್ದುಗೊಳಿಸುವುದು, ಬೆಂಬಲ ಬೆಲೆ, ಸಣ್ಣ ರೈತರಿಗೆ ಒಂದು ಬಾರಿ‌ ಸಾಲಮನ್ನಾ, ಸರ್ಕಾರಿ ಉದ್ಯೋಗಕ್ಕೆ ಕನ್ನಡ ಕಡ್ಡಾಯ ಎಂಬ ಅಂಶಗಳನ್ನು ನಮ್ಮ ಪಕ್ಷದ ಪ್ರಣಾಳಿಕೆ ಹೊಂದಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮೋದಿಯನ್ನು ಪ್ರಕರಣದಲ್ಲಿ ಸಿಲುಕಿಸುವಂತೆ ನನ್ನ ಮೇಲೆ ಸಿಬಿಐ ಒತ್ತಡ ಹೇರಿತ್ತು: ಅಮಿತ್ ಶಾ

  • ನಾನು ಖಾಯಂ ಮುಖ್ಯಮಂತ್ರಿ, ಯಾರು ಏನೇ ಅಂದ್ರು ನನ್ನ ಪದವಿಗೆ ಧಕ್ಕೆ ಆಗಲ್ಲ-ಮುಖ್ಯಮಂತ್ರಿ ಚಂದ್ರು

    ನಾನು ಖಾಯಂ ಮುಖ್ಯಮಂತ್ರಿ, ಯಾರು ಏನೇ ಅಂದ್ರು ನನ್ನ ಪದವಿಗೆ ಧಕ್ಕೆ ಆಗಲ್ಲ-ಮುಖ್ಯಮಂತ್ರಿ ಚಂದ್ರು

    ಚಿತ್ರದುರ್ಗ: ನಾನು ಖಾಯಂ ಮುಖ್ಯಮಂತ್ರಿ, ಯಾರು ಏನೇ ಹೇಳಿದ್ರು ನನ್ನ ಪದವಿಗೆ ಧಕ್ಕೆ ಆಗಲ್ಲವೆಂದು ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಗೌರವಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.

    ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ವಿಜಯಾನಂದ ಕಾಶಪ್ಪನವರ್ ಬಗ್ಗೆ ಅಪಾರವಾದ ಗೌರವವಿದೆ ಅವರು ಅವರ ಹಕ್ಕನ್ನು ಸರ್ಕಾರದೊಂದಿಗೆ ಕೇಳಬಹುದು. ನಾನು, ಅವರು ಏಕವಚನದಲ್ಲಿ ಮಾತನಾಡಿದರು ಅಗೌರವದಿಂದ ಮಾತನಾಡಿದರೆಂದು ನಾನು ಆ ತಪ್ಪು ಮಾಡುವುದಿಲ್ಲ. ನಾನು ಖಾಯಂ ಮುಖ್ಯಮಂತ್ರಿ, ಯಾರು ಏನೇ ಹೇಳಿದ್ರು ನನ್ನ ಪದವಿಗೆ ಧಕ್ಕೆ ಆಗಲ್ಲ. ಅವರ ಹಕ್ಕು ಅವರು ಕೇಳುತ್ತಿದ್ದಾರೆ. ನಮ್ಮ ಹಕ್ಕು ನಾವು ಕೇಳುತ್ತಿದ್ದೇವೆ. ಕಾಶಪ್ಪನವರ್ ದೊಡ್ಡವರು ಏನು ಹೇಳಿದ್ರು ಆಶೀರ್ವಾದ ಅಂತ ತಿಳಿದುಕೊಳ್ಳುತ್ತೇನೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಮುಖ್ಯಮಂತ್ರಿ ಚಂದ್ರು ಅವನೇನು ಮುಖ್ಯಮಂತ್ರಿಯೋ, ಪ್ರಧಾನ ಮಂತ್ರಿಯೋ: ಕಾಶಪ್ಪನವರ್

    ನನಗೆ ಎಲ್ಲಾ ಸಮುದಾಯಗಳ ಬಗ್ಗೆ ಗೌರವವಿದೆ. ತಳ ಸಮುದಾಯಗಳಿಗಾದ ಅನ್ಯಾಯವನ್ನು ಅವರು ಗಮನಿಸಬೇಕಿದೆ. ಮುಂದುವರೆದ ಶ್ರೀಮಂತರೆನಿಸಿರುವ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಿದರೆ ನಮಗೆ ಅನ್ಯಾಯವಾಗುತ್ತದೆ. ಹೀಗಾಗಿ ನಮ್ಮ ಅನ್ನ ಬೇರೆಯವರು ತೆಗೆದುಕೊಂಡು ಹೋದರೆ ನಾವು ಎಲ್ಲಿಗೆ ಹೋಗಬೇಕು ಎಂದು ಕಿಡಿಕಾರಿದರು.

    ಸಾಮಾಜಿಕ ಹಾಗೂ ಶೈಕ್ಷಣಿಕ ಮಾನದಂಡದ ಮೇಲೆ ಪಂಚಮಸಾಲಿಗಳಿಗೆ ಮೀಸಲಾತಿ ನೀಡಲು ಆಗುವುದಿಲ್ಲ. ಈ ಬಗ್ಗೆ ಸರ್ಕಾರ ನ್ಯಾಯಯುತವಾಗಿ ಯೋಚಿಸಬೇಕು ಪಂಚಮಸಾಲಿ ಮಾತ್ರ ಅಲ್ಲ 2ಎ ಗೆ ಅರ್ಹತೆ ಇಲ್ಲದವರು ಯಾರೇ ಬಂದರು ವಿರೋಧ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಬಲಿಷ್ಠ ಸಮುದಾಯವನ್ನು ಪ್ರವರ್ಗ 2ಎ ಗೆ ಸೇರಿಸದಂತೆ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಆಗ್ರಹ

  • ಪುಟಗೋಸಿ ಬಹಳ ಮರ್ಯಾದೆ ಕಾಪಾಡುವ ವಸ್ತು, ಬಿಜೆಪಿಯಿಂದ ಅಗೌರವವಾಗಿದೆ- ಮುಖ್ಯಮಂತ್ರಿ ಚಂದ್ರು

    ಪುಟಗೋಸಿ ಬಹಳ ಮರ್ಯಾದೆ ಕಾಪಾಡುವ ವಸ್ತು, ಬಿಜೆಪಿಯಿಂದ ಅಗೌರವವಾಗಿದೆ- ಮುಖ್ಯಮಂತ್ರಿ ಚಂದ್ರು

    ತುಮಕೂರು: ಪುಟಗೋಸಿಗೆ ಬಹಳ ಮರ್ಯಾದೆ ಕಾಪಾಡುವ ವಸ್ತುವಾಗಿದ್ದು, ಬಿಜೆಪಿಯಿಂದ ಅಗೌರವವಾಗಿದೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.

    ಜೆಡಿಎಸ್ ಪಕ್ಷವನ್ನು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಪುಟಗೋಸಿಗೆ ಹೋಲಿಕೆ ಮಾಡಿ ಲೇವಡಿ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಂಸ್ಕೃತಿಯನ್ನ ಎತ್ತಿಹಿಡಿಯುವ ಪಕ್ಷದ ಬಾಯಿಯಲ್ಲಿ ಪುಟಗೋಸಿ ಪದ ಬರಬಾರದು. ಪುಟಗೋಸಿ ಕೆಟ್ಟದಲ್ಲ ಅವರ ಬಾಯಿಯಿಂದ ಬಂದಂತಹ ರೀತಿ ಕೆಟ್ಟದ್ದು ಎಂದು ಕಿಡಿಕಾರಿದರು.

    ಅಂಗಾಂಗ ಮುಚ್ಚಿಕೊಳ್ಳಲು ಪುಟಗೋಸಿ ಮಹತ್ವದ ಬಗ್ಗೆ ಈಗಾಗಲೇ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಪುಟಗೋಸಿ, ಉಡುದಾರ, ಲಂಗೋಟಿ, ತುಂಡುಬಟ್ಟೆಗೆ ಅದರದ್ದೆ ಆದ ಅರ್ಥವಿದೆ ಎಂದರು. ಇದನ್ನೂ ಓದಿ: ಅನಂತಕುಮಾರ್ ಹೆಗಡೆಗೆ ಪುಟಗೋಸಿ ರವಾನಿಸಿದ ಜೆಡಿಎಸ್ ಕಾರ್ಯಕರ್ತರು

    ಪುಟಗೋಸಿಗೆ ಇವರು ಅಗೌರವ ತಂದಿದ್ದಾರೆ. ಅದು ಬಹಳ ಮರ್ಯಾದೆ ಕಾಪಾಡುವ ವಸ್ತು. ಬಿಜೆಪಿಯಿಂದ ಪುಟಗೋಸಿಗೆ ಅಗೌರವವಾಗಿದೆ. ಲಂಗೋಟಿ ಬಲು ಒಳ್ಳೇಯದಣ್ಣ ಅಂಗಾಂಗ ಮುಚ್ಚಲು ಲಂಗೋಟಿ ಬೇಕಣ್ಣ ಎಂದು ದಾಸರ ಪದ ಹಾಡಿ ಮುಖ್ಯಮಂತ್ರಿ ಚಂದ್ರು ಹಾಡಿದರು.

    ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಮಪ್ಪ ಪರ ಚುನಾವಣಾ ಪ್ರಚಾರಕ್ಕೆ ತುಮಕೂರಿಗೆ ಆಗಮಿಸಿದ್ದ ವೇಳೆ ಮುಖ್ಯಮಂತ್ರಿ ಚಂದ್ರು ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದರು.

  • ಪ್ರಕಾಶ್ ರೈ ಬಾಯಿ ಬಚ್ಚಲು -ಮುಖ್ಯಮಂತ್ರಿ ಚಂದ್ರು

    ಪ್ರಕಾಶ್ ರೈ ಬಾಯಿ ಬಚ್ಚಲು -ಮುಖ್ಯಮಂತ್ರಿ ಚಂದ್ರು

    ತುಮಕೂರು: ರಜನಿಕಾಂತ್ ಅಭಿನಯದ ಕಾಲ ಸಿನಿಮಾವನ್ನು ಬೆಂಬಲಿಸಿ ಮಾತನಾಡಿದ ಪ್ರಕಾಶ್ ರೈ ಬಾಯಿ ಬಚ್ಚಲು ಎಂದು ನಟ, ಮುಖ್ಯಮಂತ್ರಿ ಚಂದ್ರು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

    ನಾಡು, ನುಡಿ, ಗಡಿ ವಿಚಾರ ಬಂದಾಗ ನಾನು ಕಠಿಣ ಹೃದಯಿ. ಎಂತಹ ಸ್ನೇಹಿತರಾದರು ಕೂಡ ಅಂತಹವರ ವಿರುದ್ಧ ಧ್ವನಿ ಎತ್ತುತ್ತೇನೆ. ರಾಜ್ಯದ ಭಾಷೆಗೆ ಧಕ್ಕೆ ಬಂದರೆ ರಜನಿಕಾಂತ್ ಆಗಲಿ, ಕಮಲಹಾಸನ್ ಆಗಲಿ, ಪ್ರಕಾಶ್ ರೈಯನ್ನು ಧಿಕ್ಕರಿಸುತ್ತೇನೆ ಎಂದು ಚಂದ್ರು ಖಡಕ್ ಹೇಳಿಕೆ ನೀಡಿದ್ದಾರೆ.

    ಕಾಲ ಸಿನಿಮಾ ಬಿಡುಗಡೆ ಮಾಡದಂತೆ ಕಾನೂನು ಪ್ರಕಾರ ಹೇಳಲಿಕ್ಕೆ ಆಗದಿದ್ದರೂ ವಿತರಿಕರಿಗೆ ಮತ್ತು ಪ್ರದರ್ಶಕರಿಗೆ ಅರಿವು ಮೂಡಿಸುತ್ತೇವೆ. ಒಂದು ವೇಳೆ ಪ್ರದರ್ಶನ ಮಾಡಿದರೆ ನಾವು ದಂಗೆ ಏಳುತ್ತೇವೆ ಎಂದು ಮುಖ್ಯಮಂತ್ರಿ ಚಂದ್ರು ಎಚ್ಚರಿಕೆ ನೀಡಿದ್ದಾರೆ.

    ರಾಜ್ಯದ ಹಿತ ಮುಖ್ಯವಾದರೆ, ಪ್ರದರ್ಶಕರು ವಿತರಕರು ಈ ಸಿನಿಮಾ ತೆಗೆದುಕೊಳ್ಳಬಾರದು. ಈ ಚಿತ್ರ ತೆಗೆದುಕೊಂಡರೆ ಅನಾಹುತಕ್ಕೆ ತಯಾರಾಗಿ. ಪ್ರಕಾಶ್ ರೈ ಬಾಯಿ ಕೂಡ ಬಚ್ಚಲೇ. ಪ್ರಚಾರ ಗಿಟ್ಟಿಸಿಕೊಳ್ಳಲು ಸಂದರ್ಭಕ್ಕೆ ಅನುಗುಣವಾಗಿ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.