Tag: mukesh

  • ಲೈಂಗಿಕ ಕಿರುಕುಳ ಆರೋಪ: ನಟ, ರಾಜಕಾರಣಿ ಮುಕೇಶ್ ಬಂಧನ

    ಲೈಂಗಿಕ ಕಿರುಕುಳ ಆರೋಪ: ನಟ, ರಾಜಕಾರಣಿ ಮುಕೇಶ್ ಬಂಧನ

    ಲಯಾಳಂ (Malayalam) ಸಿನಿಮಾ ರಂಗದಲ್ಲಿ ಸಂಚಲನ ಮೂಡಿಸಿರೋ ಜಸ್ಟಿಸ್ ಹೇಮಾ ವರದಿ ಒಬ್ಬೊಬ್ಬರ ತಲೆದಂಡಕ್ಕೆ  ಕಾರಣವಾಗಿತ್ತು. ಈಗ ಮತ್ತೊಂದು ಹಂತ ತಲುಪಿದ್ದು, ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗಿದೆ (Arrest). ಖ್ಯಾತ ನಟ ಹಾಗೂ ರಾಜಕಾರಣಿ ಮುಕೇಶ್ (Mukesh) ಅವರನ್ನು ಬಂಧಿಸಲಾಗಿದೆ.

    ಕೊಚ್ಚಿಯ ಕೋಸ್ಟಲ್ ಪೊಲೀಸ್ ಆಫೀಸಿನಲ್ಲಿ ಮುಕೇಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಎಐಜಿ ಪೂಂಗಾಝಾಲಿ ನೇತೃತ್ವದಲ್ಲಿ ನಡೆದ ವಿಚಾರಣೆಯ ನಂತರ ಮುಕೇಶ್ ಬಂಧನವಾಗಿದೆ.

    ಲೈಂಗಿಕ ದೌರ್ಜನ್ಯ (Sexual Harassment) ಪ್ರಕರಣದಲ್ಲಿ ಹೈಕೋರ್ಟ್ ನಿಂದ ನಿರೀಕ್ಷಣಾ ಜಾಮೀನು ಪಡೆದಿರೋ ಮುಕೇಶ್ ಅವರ ಬಂಧನ ಹಲವು ಚರ್ಚೆಗೆ ಕಾರಣವಾಗಿದೆ. ಬಂಧಿಸಿ ನಂತರ ಬಿಡುಗಡೆ ಮಾಡುವ ಮಾಹಿತಿಯೂ ಇದೆ.  ಒಟ್ಟಿನಲ್ಲಿ ಮುಕೇಶ್ ಬಂಧನ ಇತರರಲ್ಲಿ ಆತಂಕ ಸೃಷ್ಟಿ ಮಾಡಿದೆ.

  • ಕಾರು ಡಿಕ್ಕಿ ಹೊಡೆದ ರಭಸಕ್ಕೆ ಮೇಲಕ್ಕೆ ಹಾರಿದ ಪಾದಚಾರಿಗಳು – ಓರ್ವ ಸಾವು, ನಿರ್ದೇಶಕ ಅರೆಸ್ಟ್

    ಕಾರು ಡಿಕ್ಕಿ ಹೊಡೆದ ರಭಸಕ್ಕೆ ಮೇಲಕ್ಕೆ ಹಾರಿದ ಪಾದಚಾರಿಗಳು – ಓರ್ವ ಸಾವು, ನಿರ್ದೇಶಕ ಅರೆಸ್ಟ್

    ಬೆಂಗಳೂರು: ಕಿರುತೆರೆ ಅಸಿಸ್ಟೆಂಟ್ ಡೈರೆಕ್ಟರ್ ಒಬ್ಬ ಕಾರಿನಲ್ಲಿ ವೇಗವಾಗಿ ಬಂದು ನಾಲ್ವರು ಪಾದಾಚಾರಿಗಳಿಗೆ ಡಿಕ್ಕಿ ಹೊಡೆದಿರುವ ಘಟನೆ ಕತ್ರಿಗುಪ್ಪೆ ಬಳಿ ನಡೆದಿದೆ. ಘಟನೆಯಲ್ಲಿ ಒಬ್ಬ ಪಾದಾಚಾರಿ ನಾವನ್ನಪ್ಪಿದ್ದಾನೆ.

    ಶುಕ್ರವಾರ ಶೂಟಿಂಗ್ ಮುಗಿಸಿಕೊಂಡು ಬನಶಂಕರಿ ಕಡೆಯಿಂದ ಕಾರಿನಲ್ಲಿ ವೇಗವಾಗಿ ಬಂದ ಕಿರುತೆರೆ ಅಸಿಸ್ಟೆಂಟ್ ಡೈರೆಕ್ಟರ್ ಮುಖೇಶ್, ನಾಲ್ವರು ಪಾದಾಚಾರಿಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಪಾದಾಚಾರಿಗಳು ಮೇಲಕ್ಕೆ ಚಿಮ್ಮಿದ್ದಾರೆ. ಮಾತ್ರವಲ್ಲದೇ ಸ್ಥಳದಲ್ಲೇ ಇದ್ದ ಇನ್ನೊಂದು ಕಾರು ಹಾಗೂ ಬೈಕಿಗೂ ಡಿಕ್ಕಿಯಾಗಿದೆ. ಇದನ್ನೂ ಓದಿ: ಬಸ್‍ನಲ್ಲಿ ಕೊಡೆ ಹಿಡಿದು ಕುಳಿತ ಪ್ರಯಾಣಿಕರು

    ಇಟ್ಟಮಡು ಬಳಿ ಇಳಿಜಾರು ಇದ್ದ ಕಾರಣ ಕಾರು ವೇಗವಾಗಿ ಬಂದು ಪಾದಾಚಾರಿಗಳಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಸುರೇಶ್ ಮೃತಪಟ್ಟಿದ್ದು, ಕಾರು ಚಾಲಕ ಮುಖೇಶ್ ನಿರ್ಲಕ್ಷ್ಯ ಹಾಗೂ ವೇಗದ ಚಾಲನೆಯೇ ಕಾರಣ ಎಂದು ಪಶ್ಚಿಮ ವಿಭಾಗ ಸಂಚಾರಿ ಡಿಸಿಪಿ ಕುಲದೀಪ್ ಕುಮಾರ್ ಜೈನ್ ಹೇಳಿದ್ದಾರೆ. ಇದನ್ನೂ ಓದಿ: ಶಾಸಕರೇ ಉದ್ಘಾಟಿಸಬೇಕೆಂದು ರಸ್ತೆಗೆ ಬೇಲಿ- ಸ್ಥಳೀಯರಿಂದ ತೆರವು

    ಗಾಯಾಳುಗಳಲ್ಲಿ ಮೂವರು ಕ್ಯಾಟರಿಂಗ್‌ನಲ್ಲಿ ಕೆಲಸ ಮಾಡುತ್ತಿದ್ದು, ಒಬ್ಬ ವಿದ್ಯಾರ್ಥಿ ಎಂಬುದು ತಿಳಿದುಬಂದಿದೆ. ಬನಶಂಕರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಚಾಲಕ ಮುಖೇಶ್‌ನನ್ನು ಪೊಲೀಸರು ಬಂಧಿಸಿದ್ದು, ಆತನ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

  • ಅಜ್ಜನಾಗಿ ಬಡ್ತಿ ಪಡೆದ ಉದ್ಯಮಿ ಮುಖೇಶ್ ಅಂಬಾನಿ

    ಅಜ್ಜನಾಗಿ ಬಡ್ತಿ ಪಡೆದ ಉದ್ಯಮಿ ಮುಖೇಶ್ ಅಂಬಾನಿ

    -ಶ್ಲೋಕಾ, ಆಕಾಶ್ ದಂಪತಿಗೆ ಗಂಡು ಮಗು

    ನವದೆಹಲಿ: ಆಕಾಶ್ ಮತ್ತು ಶ್ಲೋಕಾ ದಂಪತಿಗೆ ಇಂದು ಗಂಡು ಮಗು ಜನಿಸಿದೆ. ಈ ಮೂಲಕ ಖ್ಯಾತ ಉದ್ಯಮಿ ರಿಲಾಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅಜ್ಜನಾಗಿ ಬಡ್ತಿ ಪಡೆದಿದ್ದಾರೆ.

    ಮುಂಬೈನ ಆಸ್ಪತ್ರೆಯಲ್ಲಿ ಶ್ಲೋಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ. ಧೀರೂಬಾಯಿ ಹಾಗೂ ಕೋಕಿಲಾಬೆನ್ ಅಂಬಾನಿ ಕುಟುಂಬದ ಮರಿಮೊಮ್ಮಗನನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಈ ಮೂಲಕ ನೀತಾ ಮತ್ತು ಮುಕೇಶ್ ಅಂಬಾನಿ ಅಜ್ಜ, ಅಜ್ಜಿಯಾಗಿದ್ದಾರೆ.

    ಕೃಷ್ಣ ಪರಮಾತ್ಮನ ದಯೆ ಮತ್ತು ಆಶೀರ್ವಾದದಿಂದ ಶ್ಲೋಕಾ ಹಾಗೂ ಆಕಾಶ್ ಅಂಬಾನಿ ಅವರಿಗೆ ಗಂಡು ಸಂತಾನವಾಗಿದೆ. ನೀತಾ ಮತ್ತು ಮುಕೇಶ್ ಅಂಬಾನಿ ಅವರು ಮೊದಲ ಬಾರಿ ಅಜ್ಜ-ಅಜ್ಜಿಯಾದ ಬಗ್ಗೆ ಸಂತಸ ಪಟ್ಟಿದ್ದಾರೆ ಎಂದು ವರದಿಯಾಗಿದೆ.

    2019 ಮಾರ್ಚ್‍ನಲ್ಲಿ ಹಸೆಮಣೆ ಏರಿದ್ದ ಮುಕೇಶ್ ಅಂಬಾನಿ ಪುತ್ರ ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೇಹ್ತಾ ವಿವಾಹ ಅದ್ದೂರಿಯಾಗಿ ನೆರವೆರಿತ್ತು. ಮದುವೆ ಸಮಾರಂಭದಲ್ಲಿ ಟೋನಿ ಬ್ಲೇರ್, ಸಚಿನ್ ತೆಂಡೂಲ್ಕರ್, ಅಮಿರ್ ಖಾನ್ ಹೀಗೆ ಹಲವಾರು ಗಣ್ಯಾತೀಗಣ್ಯರು ಭಾಗವಹಿಸಿದ್ದರು. ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ವಿವಾಹವಾಗಿದ್ದ ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹತಾ ಇದೀಗ ಸಂತಾನ ಪಡೆದಿದ್ದಾರೆ.

  • ನಿರ್ಭಯಾ ಪ್ರಕರಣದ ಅಪರಾಧಿ ಮುಖೇಶ್ ಅರ್ಜಿ ವಜಾ

    ನಿರ್ಭಯಾ ಪ್ರಕರಣದ ಅಪರಾಧಿ ಮುಖೇಶ್ ಅರ್ಜಿ ವಜಾ

    ನವದೆಹಲಿ: ನಿರ್ಭಯಾ ಪ್ರಕರಣದ ಅಪರಾಧಿ ಮುಖೇಶ್ ಅರ್ಜಿಯನ್ನು ಸುಪ್ರೀಂಕೋರ್ಟಿನ ತ್ರಿ ಸದಸ್ಯ ಪೀಠ ವಜಾಗೊಳಿಸಿದೆ. ಫೆಬ್ರವರಿ 1ರಂದು ಪ್ರಕರಣ ನಾಲ್ವರು ಕಾಮುಕರಿಗೆ ಗಲ್ಲು ಶಿಕ್ಷೆ ಖಾಯಂ ಆಗಿದೆ.

    ರಾಷ್ಟ್ರಪತಿಗಳ ಕ್ಷಮಾದಾನದ ತೀರ್ಪಿನ ವಿರುದ್ಧ ಮುಖೇಶ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದನು. ಇಂದು ಸುಪ್ರೀಂಕೋರ್ಟ್ ಮುಖೇಶ್ ಅರ್ಜಿಯನ್ನು ವಜಾಗೊಳಿಸಿದೆ. ಎಲ್ಲ ಕಾನೂನು ಹೋರಾಟದ ಅವಕಾಶಗಳು ಅಂತ್ಯಗೊಂಡಿದ್ದು, ಫೆಬ್ರವರಿ 1ರಂದು ಗಲ್ಲು ಶಿಕ್ಷೆಗೆ ಒಳಗಾಗೋದು ಖಚಿತವಾಗಿದೆ.

    ರಾಷ್ಟ್ರಪತಿಗಳ ಕ್ಷಮಾದಾನದ ತೀರ್ಪನ್ನು ನ್ಯಾಯಾಂಗ ಸಮೀಕ್ಷೆಗೆ ಒಳಪಡಿಸಬೇಕೆಂದು ಮುಖೇಶ್ ಪರ ವಕೀಲರಾದ ಅಂಜನಾ ಪ್ರಕಾಶ್ ಮಂಗಳವಾರ ಅರ್ಜಿ ಸಲ್ಲಿಸಿದ್ದರು. ರಾಷ್ಟ್ರಪತಿಗಳ ಮುಂದೆ ಎಲ್ಲ ದಾಖಲಾತಿಗಳನ್ನು ಇರಿಸಿಲ್ಲ. ಕ್ಷಮಾದಾನದ ಅರ್ಜಿಯನ್ನು ಅವಸರದಲ್ಲಿ ವಜಾಗೊಳಿಸಲಾಗಿದೆ. ಈ ಮೂಲಕ ನ್ಯಾಯವನ್ನೇ ಕೊನೆಗೊಳಿಸಲಾಗುತ್ತಿದೆ ಎಂದು ಅಂಜನಾ ಪ್ರಕಾಶ್ ತಮ್ಮ ವಾದದಲ್ಲಿ ಹೇಳಿದ್ದರು.

    ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಾಲಯ, ರಾಷ್ಟ್ರಪತಿಗಳ ಮುಂದೆ ಎಲ್ಲ ದಾಖಲೆಗಳನ್ನು ಇರಿಸಿಲ್ಲ ಎಂದು ನೀವು ಹೇಗೆ ಹೇಳುತ್ತೀರಿ? ರಾಷ್ಟ್ರಪತಿಗಳು ಸೂಕ್ತವಾದ ತೀರ್ಮಾನ ತೆಗೆದುಕೊಂಡಿಲ್ಲ ಹೇಗೆ ಹೇಳುತ್ತೀರಿ ಎಂದು ಪ್ರಶ್ನೆ ಮಾಡಿತ್ತು.

    ಸಾಲಿಸಿಟರ್ ಜನರ್ ತುಷಾರ್ ಮೆಹ್ತಾ, ಮುಖೇಶ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯ ಜೊತೆಗೆ ಎಲ್ಲ ದಾಖಲೆಗಳನ್ನು ರಾಷ್ಟ್ರಪತಿಗಳಿಗೆ ಕಳುಹಿಸಲಾಗಿತ್ತು. ಯಾವ ದಾಖಲೆಗಳನ್ನು ನೋಡಬೇಕು ಎಂಬುವುದು ರಾಷ್ಟ್ರಪತಿಗಳ ವಿಶೇಷಾಧಿಕಾರ. ತಮ್ಮ ವಿಶೇಷಾಧಿಕಾರವನ್ನು ಬಳಸಿ ಕ್ಷಮಾದಾನದ ಅರ್ಜಿಯನ್ನು ವಜಾಗೊಳಿಸಿದ್ದಾರೆ ಎಂದು ವಾದ ಮಂಡಿಸಿದ್ದರು.

  • 3 ತಿಂಗ್ಳ ಹಿಂದೆ ಮೃತಪಟ್ಟ ಮಗನ ಮೃತದೇಹಕ್ಕಾಗಿ ಈಗ್ಲೂ ಕಾಯ್ತಿದ್ದಾರೆ ಅಮ್ಮ!

    3 ತಿಂಗ್ಳ ಹಿಂದೆ ಮೃತಪಟ್ಟ ಮಗನ ಮೃತದೇಹಕ್ಕಾಗಿ ಈಗ್ಲೂ ಕಾಯ್ತಿದ್ದಾರೆ ಅಮ್ಮ!

    ಲಕ್ನೋ: ತಮ್ಮ 25 ವರ್ಷದ ಮಗ ಮೂರು ತಿಂಗಳ ಹಿಂದೆ ಸೌದಿ ಅರೇಬಿಯಾದಲ್ಲಿ ಮೃತಪಟ್ಟಿದ್ದು, ಇನ್ನೂ ಆತನ ಮೃತದೇಹ ತವರಿಗೆ ವಾಪಸ್ಸಾಗಿಲ್ಲ. ಹೀಗಾಗಿ ಸೆಪ್ಟೆಂಬರ್ ತಿಂಗಳಿನಿಂದ ತಾಯಿ, ಮಗನ ಮೃತದೇಹಕ್ಕಾಗಿ ಕಾಯುತ್ತಿರುವ ಮನಕಲಕುವ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ.

    ಮೃತನ ಕುಟುಂಬಸ್ಥರು ಅಮೇಥಿ ಜಿಲ್ಲೆಯ ಬಝಾರ್ ಶುಕುಲ್ ಪೊಲೀಸ್ ಠಾಣೆಗೆ ಮಗ ದಿನೇಶ್ ಕುಮಾರ್ ಸಿಂಗ್ ಮೃತದೇಹಕ್ಕಾಗಿ ಪತ್ರಗಳ ಮೇಲೆ ಪತ್ರ ಬರೆದು ಸುಸ್ತಾಗಿದ್ದಾರೆ. ತಾಯಿ ತನ್ನ ಇಬ್ಬರು ನಿರುದ್ಯೋಗಿಗಳಾಗಿರುವ ಗಂಡು ಮಕ್ಕಳ ಜೊತೆ ಮನೆಗೆ ಆಧಾರ ಸ್ತಂಭವಾಗಿದ್ದ ಮಗನ ಮೃತದೇಹವನ್ನು ಕಾಣಲು ನಿದ್ದೆಗೆಟ್ಟು ಕಾಯುತ್ತಿದ್ದಾರೆ.

    2018ರ ಜನವರಿ ತಿಂಗಳಿನಲ್ಲಿ ಸಿಂಗ್ ಉದ್ಯೋಗಕ್ಕಾಗಿ ಸೌದಿ ಅರೇಬಿಯಾಕ್ಕೆ ತೆರಳಿದ್ದನು. ಅಲ್ಲಿ ದಮ್ಮಾಮ್ ನಗರದಲ್ಲಿರುವ ಖಾಸಗಿ ಕಂಪನಿಯೊಂದರಲ್ಲಿ ಚಾಲಕನಾಗಿ ಕೆಲಸಕ್ಕೆ ಸೇರಿದ್ದನು. ಸೆಪ್ಟೆಂಬರ್ 23ರಂದು ಸಿಂಗ್ ಗೆಳೆಯನೊಬ್ಬ ಕರೆ ಮಾಡಿ, ಹೃದಯಾಘಾತವಾಗಿ ಮೃತಪಟ್ಟಿರುವುದಾಗಿ ಮಾಹಿತಿ ನಿಡಿದ್ದಾನೆ. ಅಲ್ಲದೇ ಆತನ ಮೃತದೇಹವನ್ನು ತವರಿಗೆ ಕಳುಹಿಸಲು ಎಲ್ಲಾ ಸಿದ್ಧತೆಗಳನ್ನು ನಡೆಸುತ್ತಿರುವುದಾಗಿಯೂ ಹೇಳಿದ್ದಾನೆ ಅಂತ ದಿನೇಶ್ ತಾಯಿ ಪ್ರಭಾ ದೇವಿ ಕಣ್ಣೀರು ಹಾಕುತ್ತಾ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

    ನನ್ನ ದುರಾದೃಷ್ಟವೋ ಏನೋ, ಇದೂವರೆಗೂ ನನ್ನ ಮಗನ ಶವವನ್ನು ಕಣ್ಣಾರೆ ನೋಡಲು ತವರಿಗೆ ವಾಪಸ್ಸಾಗಿಲ್ಲ ಅಂತ ಪ್ರಭಾ ಗದ್ಗದಿತರಾದ್ರು.

    ಆತ ಸೌದಿಯಲ್ಲಿ ತಿಂಗಳಿಗೆ 90 ಸಾವಿರ ಸಂಪಾದನೆ ಮಾಡುತ್ತಿದ್ದನು. ಅದರಲ್ಲಿ 50 ಸಾವಿರ ಮನೆಗೆ ಕಳುಹಿಸುತ್ತಿದ್ದನು. ಈ ಮೂಲಕ ಮನೆಗೆ ಆಧಾರಸ್ತಂಭವಾಗಿದ್ದನು. ನನ್ನ ದೊಡ್ಡ ಮಗ ನಿರುದ್ಯೋಗಿಯಾಗಿದ್ದಾನೆ. ಸಣ್ಣ ಮಗ ಇನ್ನೂ ಚಿಕ್ಕವನಾಗಿದ್ದು, ಓದುತ್ತಿದ್ದಾನೆ. ಪತಿ ಕೂಡ ಕೆಲ ವರ್ಷಗಳ ಹಿಂದೆಯೇ ತೀರಿಕೊಂಡಿದ್ದಾರೆ. ಇದೀಗ ಮಗನನ್ನು ಕಳೆದುಕೊಂಡ ನಾವು ನಿರ್ಗತಿಕರಾಗಿದ್ದೇವೆ ಅಂತ ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.

    ದಿನೇಶ್ ಮೃತದೇಹವನ್ನು ತವರಿಗೆ ತರುವಲ್ಲಿ ಪ್ರಯತ್ನಿಸುತ್ತಿದ್ದೆ. ಇದಕ್ಕಾಗಿ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರ ಹೆಚ್ಚುವರಿ ಖಾಸಗಿ ಕಾರ್ಯದರ್ಶಿಯ ಜೊತೆ ಸೆ. 26ರಂದು ಮನವಿ ಮಾಡಿಕೊಂಡಿದ್ದೇವೆ. ಆದ್ರೆ ಇದೂವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬಳಿಕ ನಾವು ಸೆ. 28ರಂದು ಸಂಸದ ವರುಣ್ ಗಾಂಧಿಯವರನ್ನು ಸಂಪರ್ಕಿಸಿದ್ದೇವೆ. ಅವರು ವಿದೇಶಾಂಗ ಸಚಿವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ ಅಂತ ಮುಕೇಶ್ ಹೇಳಿದ್ದಾರೆ.

    ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೂ ಈ ಬಗ್ಗೆ ತಿಳಿಸಿದ್ದೇವೆ. `ರಿಯಾದ್ ನಲ್ಲಿರುವ ವಿದೇಶಾಂಗ ಸಚಿವರಿಗೆ ಮಾಹಿತಿ ನೀಡಿದ್ದೇವೆ. ಅವರು ಈ ಬಗ್ಗೆ ಮಾಹಿತಿ ಪಡೆದು ತನಿಖೆ ನಡೆಸಿ ಬಳಿಕ ಕ್ರಮಕೈಗೊಳ್ಳಲಿದ್ದಾರೆ’ ಅಂತ ಅಕ್ಟೋಬರ್ 16ರಂದು ನಮಗೊಂದು ಪತ್ರ ಕಳುಹಿಸಿದ್ದಾರೆ. ಆದ್ರೆ ಆ ಬಳಿಕವೂ ದಿನೇಶ್ ಮೃತದೇಹ ತವರಿಗೆ ರವಾನೆಯಾಗುತ್ತಿರುವ ಬಗ್ಗೆ ಯಾವುದೇ ಸುಳೀವು ಸಿಕ್ಕಿರಲಿಲ್ಲ. ಹೀಗಾಗಿ ಮತ್ತೆ ನಾನು ನವೆಂಬರ್ 15ರಂದು ಪತ್ರ ಬರೆದೆ. ಮೃತದೇಹ ರವಾನೆಗೆ ಅವರು ಇನ್ನೂ ಎಷ್ಟು ದಿನ ತೆಗೆದುಕೊಳ್ಳುತ್ತಾರೆ ಎಂಬುದು ನನಗೆ ಗೊತ್ತಿಲ್ಲ. ಸಚಿವಾಲಯ ನಮಗೆ ಭರವಸೆ ನೀಡುತ್ತಲೇ ಇದೆ. ಆದ್ರೆ ಮೃತದೇಹ ಮಾತ್ರ ಇಂದೂ ಮನೆ ಸೇರಿಲ್ಲ. ನಮಗೆ ನಮ್ಮ ಅಣ್ಣನ ಶವ ಮಾತ್ರ ಬೇಕು. ಅಲ್ಲದೇ ಮೃತ ದೇಹ ಕಳುಹಿಸಲು ಯಾಕೆ ತಡಮಾಡುತ್ತಿದ್ದಾರೆ ಎಂಬುದಕ್ಕೆ ಉತ್ತರ ಕೂಡ ನೀಡಬೇಕು ಅಂತ ಮುಕೇಶ್ ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv