Tag: Mujarayi Department

  • ಶಿವಮೊಗ್ಗ | ದೇವರ ಹುಂಡಿ ಹಣಕ್ಕೂ ಖನ್ನಾ ಹಾಕಿದ್ರಾ ಅಧಿಕಾರಿಗಳು?

    ಶಿವಮೊಗ್ಗ | ದೇವರ ಹುಂಡಿ ಹಣಕ್ಕೂ ಖನ್ನಾ ಹಾಕಿದ್ರಾ ಅಧಿಕಾರಿಗಳು?

    ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ (Thirthahalli) ತಾಲೂಕಿನ ಭಾವೈಕ್ಯತೆ ಕೇಂದ್ರವಾಗಿರುವ ಹಣಗೆರೆಕಟ್ಟೆಯ ಹಜರತ್ ಸೈಯದ್ ಸಾದತ್ ದರ್ಗಾ ಮತ್ತು ಭೂತರಾಯ ಚೌಡೇಶ್ವರಿ ದೇವಸ್ಥಾನದ ಹುಂಡಿ ಎಣಿಕೆಯ ಹಣಕ್ಕೂ ಅಧಿಕಾರಿಗಳು ಖನ್ನಾ ಹಾಕಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ಗುರುವಾರ (ನ.7) ರಂದು ನಡೆದ ಹುಂಡಿ ಎಣಿಕೆಯಲ್ಲಿ ದೋಖಾ ನಡೆದಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಶುಕ್ರವಾರ ಮತ್ತೊಮ್ಮೆ ಮರು ಎಣಿಕೆ ಮಾಡಲಾಯಿತು. ಮರು ಎಣಿಕೆ ವೇಳೆ 77,000 ರೂ. ಹಣ ವ್ಯತ್ಯಾಸ ಕಂಡುಬಂದಿದೆ.ಇದನ್ನೂ ಓದಿ: ಅಬಕಾರಿ ಪೊಲೀಸರ ಭರ್ಜರಿ ಬೇಟೆ – 40,000ಕ್ಕೂ ಅಧಿಕ ಕಲಬೆರಕೆ ಮದ್ಯ ಜಪ್ತಿ

    ಹುಂಡಿಯ ಹಣ ಎಣಿಕೆಯಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಹಣಗೆರೆಕಟ್ಟೆ ದೇವಸ್ಥಾನದ ಆಡಳಿತ ಮಂಡಳಿ ತಹಶೀಲ್ದಾರ್‌ಗೆ ದೂರು ಸಲ್ಲಿಸಿದ್ದರು. ದೂರು ಆಧರಿಸಿ ಗುರುವಾರವೇ ಮೇಲ್ನೋಟಕ್ಕೆ ಹಣದ ಕಂತುಗಳನ್ನು ಎಣಿಸಿದಾಗ ಹೆಚ್ಚುವರಿ ನೋಟುಗಳು ಕಂಡು ಬಂದಿದ್ದವು. ನಂತರ ಆ ಹಣವನ್ನು ತಾಲ್ಲೂಕು ಕಚೇರಿಯ ಖಜಾನೆಯಲ್ಲಿ ಇಡಲಾಗಿತ್ತು.

    ಶುಕ್ರವಾರ ಬೆಳಗ್ಗೆ ತಹಶೀಲ್ದಾರ್, ಡಿವೈಎಸ್‌ಪಿ ಸಮ್ಮುಖದಲ್ಲಿ ಬಿಗಿ ಬಂದೋಬಸ್ತ್ ಮೂಲಕ ಹಣವನ್ನು ಹಣಗೆರೆಕಟ್ಟೆಯ ದೇವಸ್ಥಾನಕ್ಕೆ ಸಾಗಿಸಿ ಮರುಎಣಿಕೆ ನಡೆಸಲಾಯಿತು. ಒಟ್ಟು 66 ಲಕ್ಷದ 4 ಸಾವಿರದ 950 ರೂ. ಹಣ ಕಾಣಿಕೆ ರೂಪದಲ್ಲಿ ದೇವಸ್ಥಾನಕ್ಕೆ ಸಂದಾಯವಾಗಿದೆ. ಹಣದ ಕಂತೆಯಲ್ಲಿ ಸರಿಯಾಗಿ ಎಣಿಕೆ ಮಾಡದ ಹಿನ್ನೆಲೆಯಲ್ಲಿ ಮೊದಲು ಎಣಿಸಿದ ಹಣಕ್ಕಿಂತ 77,930 ರೂಪಾಯಿ ಹಣ ಜಾಸ್ತಿ ಬಂದಿದೆ. ಈ ಸಂಬಂಧ ತಹಶೀಲ್ದಾರ್ ಅವರ ಮುಂದಿನ ನಡೆ ಏನಾಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

    ಇಂತಹ ಕೃತ್ಯ ನಡೆಸಿದ ಹಾಗೂ ಅದಕ್ಕೆ ಸಹಕಾರ ನೀಡಿದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಆಡಳಿತ ಮಂಡಳಿಯಿಂದ ಧಾರ್ಮಿಕ ದತ್ತಿ ಇಲಾಖೆ ಆಯುಕ್ತಕರಿಗೆ ದೂರು ನೀಡಲು ತೀರ್ಮಾನಿಸಿದ್ದು, ಒಟ್ಟಿನಲ್ಲಿ ಹುಂಡಿ ಹಣದ ಮರು ಎಣಿಕೆ ಪ್ರಕರಣದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನಲೆಯಲ್ಲಿ ಇನ್ನು ಯಾವ ತಿರುವು ಪಡೆಯಲಿದೆ ಎಂದು ಕಾದು ನೋಡಬೇಕಿದೆ.ಇದನ್ನೂ ಓದಿ: ಬಲ್ಲಾಳದೇವ ರಾಣಾ ಜೊತೆ ಕಾಂತಾರದ ಶಿವ

  • ಕಳೆದ ವರ್ಷ ಕೋಟಿಗಟ್ಟಲೆ ಆದಾಯ ತಂದ ಕರ್ನಾಟಕದ ಟಾಪ್ 10 ದೇವಾಲಯಗಳ ಪಟ್ಟಿ ಬಿಡುಗಡೆ

    ಕಳೆದ ವರ್ಷ ಕೋಟಿಗಟ್ಟಲೆ ಆದಾಯ ತಂದ ಕರ್ನಾಟಕದ ಟಾಪ್ 10 ದೇವಾಲಯಗಳ ಪಟ್ಟಿ ಬಿಡುಗಡೆ

    ಬೆಂಗಳೂರು: ಸರ್ಕಾರಕ್ಕೆ ಅತಿ ಹೆಚ್ಚು ಆದಾಯ ತರುವ ರಾಜ್ಯದ ಟಾಪ್ 10 ದೇವಾಲಯಗಳ ಪಟ್ಟಿಯನ್ನು ಮುಜರಾಯಿ ಇಲಾಖೆ ಬಿಡುಗಡೆ ಮಾಡಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ದೇವಾಲಯ ಗಳಿಸಿರುವ ಆದಾಯದ ಎಷ್ಟು ಎಂಬ ಆಧಾರದಲ್ಲಿ ಈ ಪಟ್ಟಿ ಸಿದ್ಧಪಡಿಸಲಾಗಿದೆ.

    ಮೊದಲ ಸ್ಥಾನದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವಿದ್ದು, ಕಳೆದ ವರ್ಷ ಈ ದೇಗುವ ಬರೋಬ್ಬರಿ 100 ಕೋಟಿ ರೂ. ಆದಾಯ ಗಳಿಸಿದೆ. ಎರಡನೇ ಸ್ಥಾನದಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವಿದ್ದು, 90-92 ಕೋಟಿ ರೂ. ಆದಾಯವನ್ನು ಕಳೆದ ವರ್ಷ ದೇಗುಲ ಗಳಿಸಿದೆ.

    ಮೂರನೇ ಸ್ಥಾನದಲ್ಲಿ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನವಿದ್ದು, ಈ ದೇವಾಲಯ 40-42 ಕೋಟಿ ರೂ. ಆದಾಯ ಪಡೆದಿದೆ. ಮೈಸೂರು ಚಾಮುಂಡೇಶ್ವರಿ ದೇವಾಲಯ ನಾಲ್ಕನೇ ಸ್ಥಾನ ಪಡೆದಿದ್ದು, ಸುಮಾರು 30-33 ಕೋಟಿ ರೂ. ಆದಾಯ ಗಳಿಸಿದೆ. ನಂಜನಗೂಡು ಶ್ರೀಕಂಠೇಶ್ವರ ದೇವಾಲಯ 15-20 ಕೋಟಿ ರೂ. ಆದಾಯ ಗಳಿಸುವ ಮೂಲಕ ಐದನೇ ಸ್ಥಾನ ಪಡೆದುಕೊಂಡಿದೆ.

    ಬೆಳಗಾವಿಯ ಸವದತ್ತಿ ಯಲ್ಲಮ್ಮ ದೇವಾಲಯ ಆರನೇ ಸ್ಥಾನ ಪಡೆದಿದ್ದು, 15-17 ಕೋಟಿ ರೂ. ಆದಾಯ ಗಳಿಸಿದೆ. ಏಳನೇ ಸ್ಥಾನದಲ್ಲಿ ಮಂದರ್ತಿ ದೇವಾಲಯವಿದ್ದು, ಇದು ಕಳೆದ ವರ್ಷ 10-12 ಕೋಟಿ ರೂ. ಆದಾಯ ಪಡೆದಿದೆ. ಕೊಪ್ಪಳದ ಗುಳ್ಳಮ್ಮನ ದೇವಾಲಯ 08-10 ಕೋಟಿ ರೂ. ಆದಾಯಗಳಿಸಿ ಎಂಟನೇ ಸ್ಥಾನದಲ್ಲಿದೆ. 08-10 ಕೋಟಿ ಆದಾಯ ಗಳಿಸಿ ಬೆಂಗಳೂರಿನ ಬನಶಂಕರಿ ದೇವಾಲಯ ಒಂಭತ್ತನೇ ಸ್ಥಾನ ಪಡೆದಿದ್ದು, 08-10 ಕೋಟಿ ಆದಾಯದೊಂದಿಗೆ ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ ದೇವಾಲಯ ಹತ್ತನೇ ಸ್ಥಾನ ಪಡೆದುಕೊಂಡಿದೆ.