Tag: mujarai department

  • ಖಾಸಗಿ ದೇವಾಲಯಗಳನ್ನು ಯಾವುದೇ ಕಾರಣಕ್ಕೂ ಮುಜರಾಯಿ ಇಲಾಖೆಗೆ ತೆಗೆದುಕೊಳ್ಳಲ್ಲ: ರಾಮಲಿಂಗಾ ರೆಡ್ಡಿ ಸ್ಪಷ್ಟನೆ

    ಖಾಸಗಿ ದೇವಾಲಯಗಳನ್ನು ಯಾವುದೇ ಕಾರಣಕ್ಕೂ ಮುಜರಾಯಿ ಇಲಾಖೆಗೆ ತೆಗೆದುಕೊಳ್ಳಲ್ಲ: ರಾಮಲಿಂಗಾ ರೆಡ್ಡಿ ಸ್ಪಷ್ಟನೆ

    ಬೆಂಗಳೂರು: ನಮ್ಮ ಸರ್ಕಾರ ಯಾವುದೇ ಖಾಸಗಿ ದೇವಾಲಯಗಳನ್ನು (Private Temple) ಯಾವುದೇ ಕಾರಣಕ್ಕೂ ಮುಜರಾಯಿ ಇಲಾಖೆಗೆ (Mujarai Department) ತೆಗೆದುಕೊಳ್ಳುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಸ್ಪಷ್ಟನೆ ನೀಡಿದ್ದಾರೆ.

    ಖಾಸಗಿ ದೇಗುಲವನ್ನು ಮುಜರಾಯಿ ವ್ಯಾಪ್ತಿಗೆ ತರಲು ಟಾರ್ಗೆಟ್ ಮಾಡಿ ನೋಟಿಸ್ ಕೊಡಲಾಗುತ್ತಿದೆ ಎಂದು ಹಿಂದೂ ಸಂಘಟನೆಗಳಿಂದ ಸಮಾವೇಶದಲ್ಲಿ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕೆಲ ಹಿಂದೂ ಸಂಘಟನೆಗಳಿಗೆ ಮಾಹಿತಿ ಕೊರತೆಯಿಂದ ತಪ್ಪು ತಿಳುವಳಿಕೆ ಕೊಟ್ಟಿದ್ದಾರೆ. ನಮ್ಮ ಸರ್ಕಾರ ಯಾವುದೇ ಖಾಸಗಿ ದೇವಾಲಯಗಳನ್ನು ಯಾವುದೇ ಕಾರಣಕ್ಕೂ ತೆಗೆದುಕೊಳ್ಳುವುದಿಲ್ಲ. ನಮ್ಮ ಸರ್ಕಾರ ಬಂದ ಮೇಲಂತೂ ಒಂದೂ ತೊಗೊಂಡಿಲ್ಲ ಎಂದು ತಿಳಿಸಿದ್ದಾರೆ.

    ಕೆಲವು ಸಂದರ್ಭದಲ್ಲಿ ಹಣ ದುರಪಯೋಗ ಆಗುತ್ತಿದೆ. ಟ್ರಸ್ಟಿಗಳಲ್ಲಿ ಜಗಳಗಳು ಬಂದಾಗ ಅವರು ಕೋರ್ಟ್ಗೆ ಹೋಗ್ತಾರೆ. ಈ ರೀತಿಯ ಸಂದರ್ಭಗಳಲ್ಲಿ ಹಿಂದೆ ಕೆಲವು ದೇವಾಲಯಗಳನ್ನು ತೆಗೆದುಕೊಂಡಿದ್ದಾರೆ. ಆದರೆ ನಮ್ಮ ಸರ್ಕಾರ ಬಂದ ಮೇಲೆ ಯಾವ ದೇವಾಲಯವನ್ನೂ ತೆಗೆದುಕೊಂಡಿಲ್ಲ, ತೆಗೆದುಕೊಳ್ಳೋ ಉದ್ದೇಶವಿಲ್ಲ ಎಂದು ಹೇಳಿದರು.

    ನಮ್ಮ ಮುಜರಾಯಿ ಇಲಾಖೆಯ 34 ಸಾವಿರ ದೇವಾಲಯಗಳಿವೆ. ಆರೋಪ ಮಾಡೋ ಹಿಂದೂ ಸಂಘಟನೆಗಳು ಬೇಕಿದ್ರೆ ಮುಜರಾಯಿ ದೇವಸ್ಥಾನಗಳನ್ನು ದತ್ತು ತೆಗೆದುಕೊಳ್ಳಲಿ, ಅಭಿವೃದ್ಧಿ ಮಾಡಲಿ. ಪ್ರೈವೆಟ್ ದೇವಸ್ಥಾನಗಳನ್ನು ಯಾವುದೇ ಕಾರಣಕ್ಕೂ ಮುಜರಾಯಿ ಇಲಾಖೆಗೆ ತೆಗೆದುಕೊಳ್ಳಲ್ಲ ಅಂತ ಕರ್ನಾಟಕ ಜನತೆಗೆ ಸ್ಪಷ್ಟಪಡಿಸುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛತೆ – ಪ್ರಿನ್ಸಿಪಾಲ್, ವಾರ್ಡನ್‌, ಡಿ-ಗ್ರೂಪ್‌ ನೌಕರರ ಅಮಾನತಿಗೆ ಸೂಚನೆ

    ಬಳ್ಳಾರಿಯ ಕನ್ನಿಕಾ ಪರಮೇಶ್ವರಿ ದೇವಾಲಯಕ್ಕೆ ನೋಟಿಸ್ ವಿಚಾರವಾಗಿ ಮಾತನಾಡಿದ ಅವರು, ಕೋರ್ಟ್‌ಗೆ ಹೋದಾಗ ಜಿಲ್ಲಾಧಿಕಾರಿ ನೋಟಿಸ್ ಕೊಟ್ಟಿರಬಹುದು ಎಂದರು. ಹಿಂದೂ ದೇಗುಲಗಳನ್ನು ಮುಜರಾಯಿ ವ್ಯಾಪ್ತಿಯಿಂದಲೇ ಕೈಬಿಟ್ಟು ಸ್ವತಂತ್ರಗೊಳಿಸಬೇಕು ಎಂಬ ಹಿಂದೂ ಸಂಘಟನೆ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯಿಸಿ, 35 ಸಾವಿರ ಮುಜರಾಯಿ ದೇವಸ್ಥಾನಗಳಿವೆ. ಅದ್ರಲ್ಲಿ 34 ಸಾವಿರ ಸಿ ದರ್ಜೆ ದೇವಾಲಯಗಳಿವೆ. ಆ ದೇವಾಲಯಗಳನ್ನು ತೆಗೆದುಕೊಂಡು ಅಭಿವೃದ್ಧಿ ಮಾಡಲಿ. ನಮ್ಮ ಇಲಾಖೆ ಪ್ರೈವೆಟ್‌ನವರು ಬಂದು ದೇವಾಲಯಗಳನ್ನು ಅಭಿವೃದ್ಧಿ ಮಾಡುತ್ತಾರೆ ಅಂದರೆ ಹೃದಯಪೂರ್ವಕವಾಗಿ ಸ್ವಾಗತಿಸುತ್ತೇವೆ ಎಂದರು.

    ನಾನು ಮುಜರಾಯಿ ಸಚಿವನಾದಮೇಲೆ ಕೆಲ ಅಭಿವೃದ್ಧಿ ಕೆಲಸಗಳು ಆಗಿವೆ. 40 ಸಾವಿರ ಅರ್ಚಕರು ಇದ್ದಾರೆ. ಅರ್ಚಕರ ಮಕ್ಕಳಿಗೆ ಈ ವರ್ಷದಿಂದ 5 ಸಾವಿರದಿಂದ 1 ಲಕ್ಷ ರೂ. ವರೆಗೆ ಸ್ಕಾಲರ್‌ಶಿಪ್ ಕೊಡುತ್ತೇವೆ. ಇದನ್ನು ಜನವರಿಯಿಂದ ಪ್ರಾರಂಭ ಮಾಡುತ್ತೇವೆ. ಈ ಹಿಂದೆ ಅರ್ಚಕರು ಸಾವನ್ನಪ್ಪಿದರೆ 35 ಸಾವಿರ ರೂ. ಕೊಡುತ್ತಿದ್ದರು. ಅದನ್ನು 2 ಲಕ್ಷ ರೂ.ಗೆ ಏರಿಸಿದ್ದೇನೆ. ಕಾಶಿ ಯಾತ್ರೆಗೆ ಅರ್ಚಕರು ಹಾಗೂ ಅವರ ಮನೆಯವರು 1,200 ಜನ ಉಚಿತವಾಗಿ ಕರೆದುಕೊಂಡು ಹೋಗಬಹುದು. ಆನುವಂಶಿಕವಾಗಿ ಅರ್ಚಕರ ಹಕ್ಕುದಾರರು ಪೂಜೆ ಮಾಡಲು ಅವಕಾಶ ಮಾಡಿದ್ದೇನೆ. ದೇವಾಲಯಗಳಲ್ಲಿ 65 ವರ್ಷಕ್ಕಿಂತ ಮೇಲ್ಪಟ್ಟವರು ನೇರವಾಗಿ ಹೋಗೋದು, ಸಿಸಿಟಿವಿ ಅಳವಡಿಕೆ, ಮೊಬೈಲ್ ಬ್ಯಾನ್ ಹಲವು ಕ್ರಮಗಳನ್ನು ಕೈಗೊಂಡಿದ್ದೇನೆ. ಕುಡಿಯುವ ನೀರು, ಸ್ವಚ್ಛತೆಗೆ ಆದ್ಯತೆ ನೀಡಿದ್ದೇನೆ. ಯಲ್ಲಮ್ಮ ದೇವಾಲಯ, ಚಾಮುಂಡಿ ದೇವಾಲಯಕ್ಕೆ ಹೋಗೋ ಭಕ್ತಾದಿಗಳಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲು ವಿಶೇಷ ಪ್ರಾಧಿಕಾರ ಮಾಡೋ ಪ್ಲಾನ್ ಮಾಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಅಂತ್ಯಸಂಸ್ಕಾರವಾದ ಸ್ಥಳದಲ್ಲಿ ವಿಷ್ಣು ಅಪ್ಪಾಜಿ ಪುಣ್ಯಭೂಮಿ ಆಗಬೇಕು: ತಡರಾತ್ರಿ ಕಿಚ್ಚ ಸುದೀಪ್ ಟ್ವೀಟ್

  • ಅಯೋಧ್ಯೆಯಲ್ಲೂ ಕರ್ನಾಟಕ ಛತ್ರ ನಿರ್ಮಾಣ: ಸಚಿವೆ ಶಶಿಕಲಾ ಜೊಲ್ಲೆ

    ಅಯೋಧ್ಯೆಯಲ್ಲೂ ಕರ್ನಾಟಕ ಛತ್ರ ನಿರ್ಮಾಣ: ಸಚಿವೆ ಶಶಿಕಲಾ ಜೊಲ್ಲೆ

    ಬೆಂಗಳೂರು: ಕರ್ನಾಟಕ ರಾಜ್ಯದ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಅಯೋಧ್ಯೆಯಲ್ಲಿ ಕರ್ನಾಟಕ ಛತ್ರ ನಿರ್ಮಾಣಕ್ಕೆ ಸ್ಥಳಾವಕಾಶ ನೀಡುವಂತೆ ಉತ್ತರ ಪ್ರದೇಶ ರಾಜ್ಯದೊಂದಿಗೆ ಪತ್ರ ವ್ಯವಹಾರ ನಡೆಸಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಚರ್ಚಿಸಲಾಗುವುದು ಎಂದು ಮುಜರಾಯಿ ಹಜ್‌ ಮತ್ತು ವಕ್ಫ್‌ ಸಚಿವರಾದ ಶಶಿಕಲಾ ಜೊಲ್ಲೆ ಹೇಳಿದರು.

    ಇಂದು ಮಂತ್ರಾಲಯದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕರ್ನಾಟಕ ಛತ್ರದ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಬಿಜೆಪಿ ಸರ್ಕಾರ ರಾಜ್ಯದ ಧಾರ್ಮಿಕ ಕೇಂದ್ರಗಳನ್ನು ಅಭಿವೃದ್ದಿಗೊಳಿಸುವ ನಿಟ್ಟಿನಲ್ಲಿ ಹೆಚ್ಚಿನ ಮಹತ್ವ ನೀಡುತ್ತಿದೆ. ಕಳೆದ 10 ವರ್ಷಗಳಲ್ಲೇ ಅತಿ ಹೆಚ್ಚು ಅನುದಾನವನ್ನು ನಮ್ಮ ಇಲಾಖೆಗೆ ನೀಡಲಾಗಿದೆ. ರಾಜ್ಯದಿಂದ ಹೊರರಾಜ್ಯಕ್ಕೆ ತೆರಳುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಹೊರರಾಜ್ಯಗಳಲ್ಲೂ ಕರ್ನಾಟಕ ಛತ್ರಗಳ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಲಾಗಿದೆ. ಕೆಲವು ದಿನಗಳ ಹಿಂದೆ ಕೇರಳ ರಾಜ್ಯದ ಶಬರಿಮಲೆಯಲ್ಲಿ ಕರ್ನಾಟಕ ಛತ್ರ ನಿರ್ಮಾಣಕ್ಕಾಗಿ 5 ಕೋಟಿ, ಮಹಾರಾಷ್ಟ್ರ ರಾಜ್ಯದ ಪಂಡರಾಪುರದಲ್ಲಿ ಛತ್ರಕ್ಕಾಗಿ 3 ಕೋಟಿ, ಮಂತ್ರಾಲಯದಲ್ಲಿ ಛತ್ರಗಳ ಅಭಿವೃದ್ದಿಗಾಗಿ 4 ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಈ ಹಿಂದೆ ತಿರುಮಲದಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ 232 ಕೋಟಿ ರೂಪಾಯಿಗಳ ಬೃಹತ್‌ ಅನುದಾನ ನೀಡಲಾಗಿದ್ದು, ನಿರ್ಮಾಣ ಕಾರ್ಯ ಭರದಿಂದ ಸಾಗಿದೆ ಎಂದರು. ಇದನ್ನೂ ಓದಿ: ತಿರುಗೇಟು ನೀಡಿ ಕಾಂಗ್ರೆಸ್ ನಾಯಕರ ಕಾಲೆಳೆದ ಸಚಿವ ಸುಧಾಕರ್

    ಇಂದು ಮಂತ್ರಾಲಯದಲ್ಲಿ ನೂತನವಾಗಿ ನಿರ್ಮಿಸಲಾಗಿರುವ 50 ಕೊಠಡಿಗಳ ಛತ್ರವನ್ನು ಲೋಕಾರ್ಪಣೆಗೊಳಿಸಲಾಗಿದೆ. ಹಳೆಯ ಕಟ್ಟಡವನ್ನು ಅಭಿವೃದ್ದಿಗೊಳಿಸುವ ನಿಟ್ಟಿನಲ್ಲಿ 4 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಮಂತ್ರಾಲಯದಲ್ಲಿ ರಾಜ್ಯದ ಯಾತ್ರಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ವತಿಯಿಂದ ಇನ್ನೂ ಹೆಚ್ಚಿನ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

    ಅಯೋಧ್ಯೆಯಲ್ಲಿ ಕರ್ನಾಟಕ ಛತ್ರ
    ಕರ್ನಾಟಕ ರಾಜ್ಯದ ಯಾತ್ರಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅಯೋಧ್ಯೆಯಲ್ಲಿ ಕರ್ನಾಟಕ ಛತ್ರ ನಿರ್ಮಾಣಕ್ಕೆ ಸ್ಥಳಾವಕಾಶ ನೀಡುವಂತೆ ಕೋರಿ ಉತ್ತರ ಪ್ರದೇಶದ ಅಧಿಕಾರಿಗಳೊಂದಿಗೆ ಪತ್ರ ವ್ಯವಹಾರ ನಡೆಸಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಉತ್ತರಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್‌ ಅವರೊಂದಿಗೆ ಈ ಬಗ್ಗೆ ಚರ್ಚಿಸಲಾಗುವುದು. ಒಟ್ಟಾರೆಯಾಗಿ ಹೊರ ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲೂ ನಮ್ಮ ರಾಜ್ಯದ ಜನರಿಗೆ ಅನುಕೂಲ ಮಾಡಿಕೊಡಲು ಎಲ್ಲಾ ರೀತಿಯ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಮೊಹರಂ ಹಬ್ಬದಲ್ಲೂ ಅಪ್ಪು – ಹೊಂಡದಲ್ಲಿ ಪುನೀತ್ ಫೋಟೋ ಹಿಡಿದು ಬಂದ ಬಾಲಕ

    50 ಕೊಠಡಿಗಳ ನೂತನ ಕಟ್ಟಡ
    4 ಕೋಟಿ ರೂಪಾಯಿಗಳ ಅನುದಾನದಲ್ಲಿ 0.5 ಗುಂಟೆಯಲ್ಲಿ 50 ಕೊಠಡಿಗಳ ಕರ್ನಾಟಕ ಛತ್ರ ನಿರ್ಮಾಣವಾಗಿದೆ. 40 ಡಿಲಕ್ಸ್‌ ಹಾಗೂ 10 ವಿಐಪಿ ರೂಂಗಳಿದ್ದು, ಮುಜರಾಯಿ ಇಲಾಖೆಯ ವತಿಯಿಂದ ನೀಡಲಾಗಿರುವ 54 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಪೀಠೋಪಕರಣಗಳನ್ನು ಒದಗಿಸಲಾಗಿದೆ. ಛತ್ರಗಳ ಅಭಿವೃದ್ದಿಗೆ ಜುಲೈ 23, 2022 ರಂದು 4 ಕೋಟಿ ರೂಪಾಯಿಗಳ ಹೆಚ್ಚುವರಿ ಅನುದಾನ ಒದಗಿಸಲಾಗಿದ್ದು, ಸದ್ಯದಲ್ಲೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

    ಮಂತ್ರಾಲಯ ಅಭಿವೃದ್ದಿಗೆ ಕರ್ನಾಟಕ ರಾಜ್ಯದಿಂದ ಬಹಳಷ್ಟು ಸಹಕಾರ
    ಕರ್ನಾಟಕ ರಾಜ್ಯದಿಂದಲೇ ಅತಿ ಹೆಚ್ಚು ಯಾತ್ರಾರ್ಥಿಗಳು ಆಗಮಿಸುವ ಮಂತ್ರಾಲಯಕ್ಕೆ ಕರ್ನಾಟಕ ಸರ್ಕಾರ ಬಹಳಷ್ಟು ಸಹಕಾರ ನೀಡಿದೆ. 30 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಕರ್ನಾಟಕ ಛತ್ರ ಶಿಥಿಲವಾಗಿತ್ತು. ಇದನ್ನು ಮನಗೊಂಡ ಕರ್ನಾಟಕ ಸರ್ಕಾರ 4 ಕೋಟಿ ರೂಪಾಯಿಗಳ ವೆಚ್ಚದಲ್ಲಿ 50 ಕೊಠಡಿಗಳ ನೂತನ ಛತ್ರವನ್ನು ನಿರ್ಮಿಸಿದೆ. ಈ ಬಾರಿಯ ರಾಯರ ಆರಾಧನೆಯ ಸಂದರ್ಭದಲ್ಲಿ ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿದ್ದು, ನೂತನ ಕಟ್ಟಡದಿಂದ ಬಹಳಷ್ಟು ಅನುಕೂಲವಾಗಲಿದೆ ಎಂದು ಮಂತ್ರಾಲಯದ ಶ್ರೀ ಸುಭುದೇಂದ್ರ ತೀರ್ಥ ಪಾದಂಗಳವರು ಹೇಳಿದರು. ಇದನ್ನೂ ಓದಿ: 40 ಪರ್ಸೆಂಟ್‌ ಸರ್ಕಾರದಲ್ಲಿ 3ನೇ ಸಿಎಂ ಸೀಟು ಹತ್ತುವ ಕಾಲ ಬಂದಿದೆ: ಬೊಮ್ಮಾಯಿ ಕಾಲೆಳೆದ ಕಾಂಗ್ರೆಸ್‌

    ಈ ಸಂಧರ್ಭದಲ್ಲಿ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಾದ ರೋಹಿಣಿ ಸಿಂಧೂರಿ, ಮಂತ್ರಾಲಯ ಕರ್ನಾಟಕ ಛತ್ರದ ವ್ಯವಸ್ಥಾಪಕರಾದ ತ್ರಿವೇಣಿ ಉಪಸ್ಥಿತರಿದ್ದರು.

    Live Tv
    [brid partner=56869869 player=32851 video=960834 autoplay=true]