Tag: Muhurtha

  • ‘ಬಡವ ರಾಸ್ಕಲ್’ ಚಿತ್ರಕ್ಕೆ ಮುಹೂರ್ತ

    ‘ಬಡವ ರಾಸ್ಕಲ್’ ಚಿತ್ರಕ್ಕೆ ಮುಹೂರ್ತ

    ಬೆಂಗಳೂರು: ಗುಜ್ಜಲ್ ಟಾಕೀಸ್ ಹಾಗೂ ಡಾಲಿ ಪಿಕ್ಚರ್ಸ್ ಲಾಂಛನದಲ್ಲಿ ಗುಜ್ಜಲ್ ಪುರುಷೋತ್ತಮ್ ಹಾಗೂ ಡಾಲಿ ಧನಂಜಯ ಅವರು ನಿರ್ಮಿಸುತ್ತಿರುವ ‘ಬಡವ ರಾಸ್ಕಲ್` ಚಿತ್ರದ ಮುಹೂರ್ತ ಇತ್ತೀಚೆಗೆ ಗವಿಪುರದ ಶ್ರೀಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿತು. ರೇಣುಕಮ್ಮ ಅವರು ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ದುನಿಯಾ ವಿಜಯ್ ಚೊಚ್ಚಲ ದೃಶ್ಯವನ್ನು ನಿರ್ದೇಶನ ಮಾಡಿದರು.

    ಶಂಕರ್ ಗುರು ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಸೆಪ್ಟೆಂಬರ್‍ನಲ್ಲಿ ಆರಂಭವಾಗಲಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನೀಡುತ್ತಿದ್ದಾರೆ. ಪ್ರೀತಾ ಜಯರಾಮನ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

    ಧನಂಜಯ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ಅಮೃತ ಅಯ್ಯಂಗಾರ್. ರಂಗಾಯಣ ರಘು, ನಾಗಭೂಷಣ್, ಪೂರ್ಣಚಂದ್ರ ಮೈಸೂರು, ನಿರಂಜನ್, ಚಂದ್ರು, ಅಲ್ಲು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

  • ಬಜೆಟ್‍ಗೆ ಮುಹೂರ್ತ ಇಟ್ಟಿದ್ದು ನಾನು – ತಪ್ಪೋಕೆ ಸಾಧ್ಯವೇ ಇಲ್ಲ: ಎಚ್‍ಡಿ ರೇವಣ್ಣ

    ಬಜೆಟ್‍ಗೆ ಮುಹೂರ್ತ ಇಟ್ಟಿದ್ದು ನಾನು – ತಪ್ಪೋಕೆ ಸಾಧ್ಯವೇ ಇಲ್ಲ: ಎಚ್‍ಡಿ ರೇವಣ್ಣ

    ಬೆಂಗಳೂರು: ಆಪರೇಷನ್ ಕಮಲ ಆಡಿಯೋ ಬಿಡುಗಡೆ ಕುರಿತು ಸದನದಲ್ಲಿ ಗಂಭಿರ ಚರ್ಚೆ ನಡೆಯುತ್ತಿದ್ದಾಗ ಲೋಕೋಪಯೋಗಿ ಸಚಿವ ರೇವಣ್ಣ ಅವರು ಆಡಿದ ಕೆಲ ಮಾತುಗಳು ಸದನದಲ್ಲಿ ನಗುವಿನ ಅಲೆಯನ್ನು ಸೃಷ್ಟಿಸಿತ್ತು.

    ಆಡಿಯೋ ತನಿಖೆಯನ್ನ ಎಸ್‍ಐಟಿಗೆ ವಹಿಸಬೇಕು ಎಂಬ ಚರ್ಚೆ ಕುರಿತಂತೆ ರೇವಣ್ಣ ಅವರು ಸದನದಲ್ಲಿ ಮಾತನಾಡಲು ಸ್ಪೀಕರ್ ಅವಕಾಶ ನೀಡಿದರು. ಆದರೆ ಈ ವೇಳೆ ರೇವಣ್ಣರನ್ನು ಕಾಲೆಳೆದ ಸ್ಪೀಕರ್ ಅವರು, ರೇವಣ್ಣ ಅವರು ಈಗ ಮಾತನಾಡುತ್ತಾರೆ. 1 ನಿಮಿಷ ಲೇಟಾದರೆ ಅವರು ಮಾತಾಡಲ್ಲ ಎಂದು ಸ್ಪೀಕರ್ ಹೇಳಿದರು.

    ಈ ವೇಳೆ ಶಾಸಕ ಸಿಟಿ ರವಿ ಮಾತನಾಡಲು ಯತ್ನಿಸಿದರು. ಇದಕ್ಕೆ ರೇವಣ್ಣ ಅಡ್ಡಿಪಡಿಸಿ `ಏಯ್ ಕೂತ್ಕಳಪ್ಪಾ’ ಎಂದರು. ಇದಕ್ಕೆ ಗರಂ ಆದ ಸಿಟಿ ರವಿ ಅವರು, ನಾನೇನು ನಿಮ್ಮ ಮನೆ ಆಳಲ್ಲ ಎಂದು ಸಿಟ್ಟಾದರು. ಅಲ್ಲದೇ ನಾವು ಮೂರು ತಿಂಗಳು ಸುಮ್ಮನಿದ್ದಿದ್ದರೆ ಇದ್ಯಾವುದು ಬರುತ್ತಿರಲಿಲ್ಲ ಎಂದರು. ಈ ಮಾತು ಹೇಳುತ್ತಿದಂತೆ ಚಾಟಿ ಬೀಸಿದ ಸ್ಪೀಕರ್, ಹಾಗಾದರೆ ಏಕೆ ಆತುರ ಪಟ್ಟಿದ್ದೀರಾ ಎಂದರು.

    ಬಳಿಕ ಮಾತನಾಡಿದ ರೇವಣ್ಣ ಅವರು, ಸಮ್ಮಿಶ್ರ ಸರ್ಕಾರದಲ್ಲಿ ಈ ಬಾರಿ ಸಿಎಂ ಬಜೆಟ್ ಮಂಡಿಸಲ್ಲ ಎಂದು ಆರ್ ಅಶೋಕ್ ಹೇಳಿದ್ದರು. ಆದರೆ ಬಜೆಟ್‍ಗೆ ಮುಹೂರ್ತ ಇಟ್ಟಿದ್ದು ನಾನು. ತಮಿಳುನಾಡು ಜ್ಯೋತಿಷ್ಯ ನೋಡಿ ಮುಹೂರ್ತ ಇಟ್ಟಿದ್ದೇನೆ. ತಪ್ಪೋಕೆ ಸಾಧ್ಯವೇ ಇಲ್ಲ ಎಂದರು. ರೇವಣ್ಣ ಮಾತಿಗೆ ಸದನದಲ್ಲಿ ನಗೆ ಉಕ್ಕಿತು. ಅಂತಿಮವಾಗಿ ಸ್ಪೀಕರ್ ನಿರ್ಧಾರವನ್ನು ಮುಖ್ಯಮಂತ್ರಿಗಳು ಜಾರಿಗೆ ತರುತ್ತಾರೆ ಎಂದು ಹೇಳಿ ತಮ್ಮ ಮಾತನ್ನು ಪೂರ್ಣಗೊಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬನಶಂಕರಿಯ ಧರ್ಮಗಿರಿ ದೇವಸ್ಥಾನದಲ್ಲಿ ಸ್ಯಾಂಡಲ್‍ವುಡ್ ನಟನಿಗೆ ದರ್ಶನ್ ಸಾಥ್

    ಬನಶಂಕರಿಯ ಧರ್ಮಗಿರಿ ದೇವಸ್ಥಾನದಲ್ಲಿ ಸ್ಯಾಂಡಲ್‍ವುಡ್ ನಟನಿಗೆ ದರ್ಶನ್ ಸಾಥ್

    ಬೆಂಗಳೂರು: ಇತ್ತೀಚೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೇ ಸ್ಯಾಂಡಲ್ ವುಡ್ ನಟರನ್ನು ಪ್ರೋತ್ಸಾಹಿಸುತ್ತಿದ್ದಾರೆ.

    ದರ್ಶನ್ ಕೆಲವು ದಿನಗಳ ಹಿಂದೆ ತಮ್ಮ ಕಷ್ಟಕಾಲದಲ್ಲಿ ಸಹಾಯ ಮಾಡಿದ್ದ ಖ್ಯಾತ ನಿರ್ದೇಶಕ ಎಸ್.ನಾರಾಯಣ್ ಪುತ್ರ ಪಂಕಜ್ ರ ಹೊಸ ಪ್ರಯತ್ನಕ್ಕೆ ಸಾಥ್ ನೀಡಿದ್ದರು. ಈಗ ನಟ ದೇವರಾಜ್ ಪುತ್ರ ಪ್ರಜ್ವಲ್ ದೇವರಾಜ್ ಅವರಿಗೆ ಸಾಥ್ ನೀಡಿದ್ದಾರೆ. ಇದನ್ನೂ ಓದಿ: ಅಂದು ತನಗೆ ದಾರಿ ತೋರಿಸಿದ ನಿರ್ದೇಶಕರ ಪುತ್ರನಿಗೆ ದಚ್ಚು ಸಾಥ್!


    ಇಂದು ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬ. ಆದ್ದರಿಂದ ಅವರ ಬರ್ತ್ ಡೇ ಪ್ರಯುಕ್ತ `ಜಂಟಲ್ ಮೆನ್’ ಹೊಸ ಚಿತ್ರದ ಮುಹೂರ್ತ ನೆರವೇರಿದೆ. ಬನಶಂಕರಿಯ ಧರ್ಮಗಿರಿ ದೇವಸ್ಥಾನದಲ್ಲಿ ಮುಹೂರ್ತ ಕಾರ್ಯಕ್ರಮ ನಡೆದಿದ್ದು, ಈ ಸಿನಿಮಾ ಮುಹೂರ್ತಕ್ಕೆ ದರ್ಶನ್ ಸಾಥ್ ನೀಡಿದರು.

    ಮುಹೂರ್ತ ಕಾರ್ಯಕ್ರಮದಲ್ಲಿ ದೇವರಾಜ್ ಮತ್ತು ಕುಟುಂಬಸ್ಥರು ಭಾಗಿಯಾಗಿದ್ದರು. ಈ ಸಿನಿಮಾವನ್ನು ಗುರುದೇಶಪಾಂಡೆ ಅವರು ನಿರ್ಮಾಣ ಮಾಡುತ್ತಿದ್ದು, ರಾಜಹಂಸ ಖ್ಯಾತಿಯ ಜಡೇಶ್ ಕುಮಾರ್ ನಿರ್ದೇಶಿಸುತ್ತಿದ್ದಾರೆ.

    ಈ ಹಿಂದೆ ಪಂಕಜ್ ಒಡೆತನದ ಬ್ಯೂಟಿ ಸೆಲೂನ್ ಉದ್ಘಾಟನೆಗೆ ಅತಿಥಿಯಾಗಿ ಆಗಮಿಸಿ ಪಂಕಜ್ ಬೆನ್ನುತಟ್ಟಿದ್ದರು. ಬಿಡುವಿಲ್ಲದ ಚಿತ್ರೀಕರಣದ ನಡುವೆಯೂ ಫ್ರೀ ಮಾಡ್ಕೊಂಡು ಸಲೂನ್ ಉದ್ಘಾಟನೆ ಮಾಡಿದ್ದರು.

  • ಚುನಾವಣಾ ನಂತರದ ರಾಜಕೀಯದ ಬಗ್ಗೆ ಪತ್ರಿಕ್ರಿಯಿಸಿದ ಉಪೇಂದ್ರ!

    ಚುನಾವಣಾ ನಂತರದ ರಾಜಕೀಯದ ಬಗ್ಗೆ ಪತ್ರಿಕ್ರಿಯಿಸಿದ ಉಪೇಂದ್ರ!

    ಬೆಂಗಳೂರು: ರಾಜಕಾರಣ ಹೈಡ್ರಾಮಾ ನೋಡುತ್ತಿದ್ದೀರಿ. ಆದರೆ ಪ್ರಜಾಕೀಯದಿಂದ ಇದೆಲ್ಲವೂ ಬದಲಾಗಲಿದೆ ಎಂದು ರಿಯಲ್ ಸ್ಟಾರ್ ಉಪೇಂದ್ರ ಹೇಳಿದ್ದಾರೆ.

    ಐ ಲವ್ ಯು ಚಿತ್ರದ ಮುಹೂರ್ತದಲ್ಲಿ ಭಾಗವಹಿಸಿ ವಿಧಾನಸಭಾ ಚುನಾವಣಾ ನಂತರದ ರಾಜಕೀಯ ಬೆಳವಣಿಗೆಯ ಬಗ್ಗೆ ಉಪೇಂದ್ರ ಪ್ರತಿಕ್ರಿಯಿಸಿದ್ದಾರೆ.

    ಇದು ಯಾರದ್ದು ತಪ್ಪಲ್ಲ, ಯಾವುದೇ ಪಕ್ಷ ಮೆಜಾರಿಟಿ ಇಲ್ಲದಿರುವುದೇ ಇದಕ್ಕೆಲ್ಲಾ ಕಾರಣ. ಈಗ ದುಡ್ಡಿನ ರಾಜಕಾರಣ ಹೈಡ್ರಾಮಾ ನೋಡುತ್ತಿದ್ದೀರಿ. ಸದ್ಯ ಕುಮಾರಸ್ವಾಮಿ ಆಡಳಿತ ಹೇಗಿರಲಿದೆ ಎನ್ನುವುದನ್ನು ನೋಡಬೇಕು ಎಂದರು.

    ನಮ್ಮ ಪ್ರಜಾಕೀಯದ ಕೆಲಸಗಳು ನಿರಂತರವಾಗಿ ನಡೆಯಲಿವೆ. ಲೋಕಸಭೆ ಚುನಾವಣೆಯಲ್ಲಿ ಸ್ಫರ್ಧೆ ಮಾಡುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಉಪೇಂದ್ರ ತಿಳಿಸಿದರು.

  • ಪುನೀತ್, ಸುದೀಪ್ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು ‘ಪಡ್ಡೆಹುಲಿ’ ಮುಹೂರ್ತ!

    ಪುನೀತ್, ಸುದೀಪ್ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು ‘ಪಡ್ಡೆಹುಲಿ’ ಮುಹೂರ್ತ!

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಖ್ಯಾತ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಮೊದಲ ಬಾರಿಗೆ ನಾಯಕ ನಟನಾಗಿ ನಟಿಸುತ್ತಿರುವ `ಪಡ್ಡೆಹುಲಿ’ ಚಿತ್ರದ ಮುಹೂರ್ತ ಅದ್ಧೂರಿಯಾಗಿ ನೆರವೇರಿದೆ.

    ಬೆಂಗಳೂರಿನ ಬನಶಂಕರಿ ಬಳಿಯ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಾಲಯದಲ್ಲಿ `ಪಡ್ಡೆಹುಲಿ’ ಚಿತ್ರದ ಶುಭ ಮುಹೂರ್ತ ನಡೆಯಿತು. `ರಾಜಹುಲಿ’, `ಜಾನ್ ಜಾನಿ ಜನಾರ್ದನ್’ ಹಾಗೂ `ಸಂಹಾರ’ ಖ್ಯಾತಿಯ ಗುರು ದೇಶ್‍ಪಾಂಡೆ ಕಲ್ಪನೆಯಲ್ಲಿ ಚಿತ್ರ ಮೂಡಿಬರಲಿದೆ. ಚಿತ್ರದಲ್ಲಿ ಶ್ರೇಯಸ್ ಗೆ ಜೊತೆಯಾಗಿ ನಿಶ್ವಿಕಾ ನಟಿಸಲಿದ್ದಾರೆ. ಇದನ್ನೂ ಓದಿ: ಪಡ್ಡೆಹುಲಿ ನಾಯಕಿ ನಿಶ್ವಿಕಾ ಯಾರು ಗೊತ್ತೆ?

    ಮುಹೂರ್ತ ಸಮಾರಂಭದಲ್ಲಿ ಭಾಗಿಯಾದ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಹಾಗೂ ಕಿಚ್ಚ ಸುದೀಪ್ ಈ ಚಿತ್ರಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು. ಕಿಚ್ಚ ಸುದೀಪ್ ಕ್ಲಾಪ್ ಮಾಡಿ ಶುಭಾಶಯ ತಿಳಿಸಿದರೆ, ಪುನೀತ್ ರಾಜ್‍ಕುಮಾರ್ ಕ್ಯಾಮೆರಾ ಚಾಲನೆ ಮಾಡಿ ಶುಭ ಹಾರೈಸಿದ್ರು. ಇದನ್ನೂ ಓದಿ: ಪಡ್ಡೆ ಹುಲಿಯ ಫಸ್ಟ್ ಲುಕ್ ರಿಲೀಸ್ ಮಾಡಿದ ಹೆಬ್ಬುಲಿ ಹೀಗಂದ್ರು! 

    ನಿರ್ಮಾಪಕ ಕೆ. ಮಂಜು ಅವರ ಆರಾಧ್ಯ ದೈವ ಸಾಹಸ ಸಿಂಹ ವಿಷ್ಣುವರ್ಧನ್ ಮಡದಿ ಭಾರತಿ ವಿಷ್ಣುವರ್ಧನ್ ದೀಪ ಹಚ್ಚಿ ಚಿತ್ರತಂಡಕ್ಕೆ ಶುಭಸಂದೇಶ ಕೊಟ್ಟರು. ಚಿತ್ರರಂಗದ ಅನೇಕ ಗಣ್ಯರು ಪಡ್ಡೆಹುಲಿ ಚಿತ್ರದ ಮುಹೂರ್ತಕ್ಕೆ ಸಾಕ್ಷಿಯಾದರು. ಇದನ್ನೂ ಓದಿ: ಡ್ಯೂಪ್ ಗಳಿಲ್ಲದೇ ಬೆಂಕಿಯಲ್ಲಿ ಫೋಟೋ ಶೂಟ್ ಮಾಡಿದ ಪಡ್ಡೆ ಹುಲಿ ಶ್ರೇಯಸ್! ಫೋಟೋಗಳಲ್ಲಿ ನೋಡಿ 

     

     

     

  • ಹೊಸ ತಿರುಳಿನ `ಕರ್ಷಣಂ’ ಚಿತ್ರಕ್ಕೆ ಮುಹೂರ್ತ

    ಹೊಸ ತಿರುಳಿನ `ಕರ್ಷಣಂ’ ಚಿತ್ರಕ್ಕೆ ಮುಹೂರ್ತ

    ಬೆಂಗಳೂರು: ಕನ್ನಡ ಚಿತ್ರ ಅಭಿಮಾನಿಗಳಿಗೆ ಹೊಸತನದ ಅನುಭವ ನೀಡಲು ಡಿಜೆ ಎಂಟರ್‍ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ `ಕರ್ಷಣಂ’ ಚಿತ್ರದ ಮುಹೂರ್ತ ಭಾನುವಾರ ನಗರದ ದುರ್ಗಾ ಇಂದ್ರಾಕ್ಷಿ ದೇವಸ್ಥಾನದಲ್ಲಿ ಅದ್ಧೂರಿಯಾಗಿ ನಡೆಯಿತು.

    ಮೊದಲ ಬಾರಿಗೆ ಬೆಳ್ಳಿತೆರೆಯಲ್ಲಿ ಪೂರ್ಣ ಪ್ರಮಾಣದ ನಾಯಕರಾಗಿ ಧನಂಜಯ್ ಅತ್ರೆ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಮುಹೂರ್ತದ ನಂತರ ಮಾತನಾಡಿದ ಅವರು, ಉಪೇಂದ್ರ ಅವರ `ಬುದ್ಧಿವಂತ’ ಚಿತ್ರದಲ್ಲಿ ಸಣ್ಣ ಪಾತ್ರ ಮಾಡುವ ಮೂಲಕ ನಾನು ಚಿತ್ರರಂಗ ಪ್ರವೇಶ ಮಾಡಿದೆ. ಅನಂತರದಲ್ಲಿ ಯೋಧ, ಬೊಂಬಾಟ್, ದೇವ್ರು, ವೀರಪ್ಪನ್ ಅಟ್ಟಹಾಸ ಚಿತ್ರಗಳಲ್ಲಿ ನನ್ನ ಸಿನಿಮಾ ಪ್ರಯಾಣ ಮುಂದುವರೆಯಿತು. ಕಿರುತೆರೆಯಲ್ಲಿ `ಚಿತ್ರಲೇಖಾ’ ಧಾರವಾಹಿಯಲ್ಲಿ ನಟನೆ ಮಾಡಿದ್ದೇನೆ. ಅನಂತರ ಸ್ವಲ್ಪ ದಿನಗಳ ಕಾಲ ಬ್ರೇಕ್ ಪಡೆಯಬೇಕಾಯಿತು ಎಂದರು.

    ಮೊದಲ ಬಾರಿಗೆ ಚಂದನವನಕ್ಕೆ ಪೂರ್ಣ ಪ್ರಮಾಣದ ನಾಯಕನಾಗಿ ಹಾಗೂ ನಿರ್ಮಾಪಕನಾಗಿ ಪ್ರವೇಶಿಸುವ ಅವಕಾಶ ಲಭಿಸಿದೆ. ಈ ಮೂಲಕ ನನ್ನ ಮೇಲಿನ ಜವಾಬ್ದಾರಿ ಹೆಚ್ಚಾಗಿದೆ. ಕನ್ನಡ ಸಿನಿಮಾ ಅಭಿಮಾನಿಗಳಿಗೆ ಒಂದು ಉತ್ತಮ ಚಿತ್ರ ನೀಡುತ್ತಿದ್ದೇವೆ. ಚಿತ್ರ ಶೀರ್ಷಿಕೆ `ಕರ್ಷಣಂ’ ಮೂಲತಃ ಸಂಸ್ಕೃತ ಪದವಾಗಿದ್ದು, ಕನ್ನಡದಲ್ಲಿ ಸೆಳೆತ, ಸಂಕಷ್ಟ ಎಂಬ ಅರ್ಥಗಳನ್ನು ನೀಡುತ್ತದೆ. ಪ್ರೇಕ್ಷಕರು ಚಿತ್ರವನ್ನು ನೋಡಿ ಅದರ ಅರ್ಥವನ್ನು ನಿರ್ಧರಿಸಬಹುದು ಎಂದರು. ಚಿತ್ರದಲ್ಲಿ ಧನಂಜಯ್ ಒಬ್ಬ ವಿದ್ಯಾವಂತ ಸ್ಲಂ ಹುಡುಗನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರ ಸಸ್ಪೆನ್ಸ್ ಥ್ರಿಲ್ಲರ್ ಅಂಶಗಳೊಂದಿಗೆ ಕೂಡಿದೆ. ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡುವ ಉದ್ದೇಶ ಹೊಂದಿದ್ದೇವೆ. ಚಿತ್ರದ ನಿರ್ದೇಶಕರಾದ ಶರವಣ ಅವರಿಗೂ ಇದು ಮೊದಲ ಸಿನಿಮಾ. ಅವರು ಈ ಹಿಂದೆ ಮಹಾಭಾರತ, ಸೀತೆ ಧಾರವಾಹಿಗಳನ್ನು ನಿರ್ದೇಶಿಸಿ ಯಶಸ್ವಿಯಾಗಿದ್ದಾರೆ. ವಿಶೇಷ ಕಥೆಯ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದೇವೆ ಎಂದರು.

    ನಿರ್ದೇಶಕ ಶರವಣ ಅವರು ಮಾತನಾಡಿ, ಚಿತ್ರದಲ್ಲಿ ಹಿರಿಯ ಹಾಗೂ ಹೊಸ ಕಲಾವಿದರ ತಂಡವೇ ಇದೆ. ಚಿತ್ರದ ನಾಯಕರಾಗಿ ಧನಂಜಯ್ ಅತ್ರೆ, ನಾಯಕಿಯಾಗಿ ಅನುಷಾ ರಾಯ್ ಅಭಿನಯಿಸುತ್ತಿದ್ದಾರೆ. ಹಿರಿಯ ನಟ ಶ್ರೀನಿವಾಸ್ ಮೂರ್ತಿ ಅವರಿಗೆ ವಿಶೇಷ ಪಾತ್ರ ನೀಡುವ ಯೋಚನೆ ಮಾಡಲಾಗಿದೆ. ಉಳಿದಂತೆ ಗೌತಮ್, ಮನಮೋಹನ ರಾಯ್ ಹಾಗೂ ಹಾಸ್ಯ ಕಲಾವಿದರಾಗಿ ವಿಜಯ್ ಚಂದುರ್, ಕ್ಯಾಮೆರಾ ಮೆನ್ ಆಗಿ ಮೋಹನ್ ಎಂ. ಮುಗುಡೇಶ್ವರನ್ ಸೇರಿದಂತೆ ಚಿತ್ರದಲ್ಲಿ ಹೊಸ ಪ್ರತಿಭೆಗಳು ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.

    ಕಿರುತೆರೆಯಲ್ಲಿ ಯಶ್ವಸಿಯಾಗಿ ಕಾರ್ಯನಿರ್ವಹಿಸುವ ಮೂಲಕ ಈ ಬಾರಿ ಜನರ ಮನಸ್ಸಿಗೆ ಹತ್ತಿರವಾದ ಹಾಗೂ ಸಸ್ಪೆನ್ಸ್ ಹಿನ್ನೆಲೆ ಇರುವ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಪ್ರೇಕ್ಷಕರು ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸುವಾಗ ಸೀಟ್ ತುದಿಯಲ್ಲಿ ಕೂತು ನೋಡುತ್ತಾರೆ ಎಂಬ ಭರವಸೆಯನ್ನು ನೀಡುತ್ತೇನೆ. ಚಿತ್ರಕ್ಕೆ ಸಹಕಾರ ನೀಡುತ್ತಿರುವ ಎಲ್ಲರಿಗೂ ಈ ವೇಳೆ ಧನ್ಯವಾದ ತಿಳಿಸುತ್ತೇನೆ ಎಂದರು. ಮುಹೂರ್ತ ಸಮಾರಂಭದಲ್ಲಿ ಹಿರಿಯ ಕಲಾವಿದ ಶ್ರೀನಿವಾಸ್ ಮೂರ್ತಿ ಅವರು ಭಾಗವಹಿಸಿ ಶುಭ ಕೋರಿದರು.