Tag: Muharram

  • ಮೊಹರಂ ಆಚರಣೆ ವೇಳೆ ದುರಂತ – ಬೆಂಕಿಗೆ ಬಿದ್ದು ವ್ಯಕ್ತಿಗೆ ಗಂಭೀರ ಗಾಯ

    ಮೊಹರಂ ಆಚರಣೆ ವೇಳೆ ದುರಂತ – ಬೆಂಕಿಗೆ ಬಿದ್ದು ವ್ಯಕ್ತಿಗೆ ಗಂಭೀರ ಗಾಯ

    ರಾಯಚೂರು: ಮೊಹರಂ (Muharram) ಆಚರಣೆ ವೇಳೆ ಬೆಂಕಿಗೆ (Fire) ಬಿದ್ದು ವ್ಯಕ್ತಿಯೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಲಿಂಗಸುಗೂರು (Lingsugur) ತಾಲೂಕಿನ ಯರಗುಂಟಿಯಲ್ಲಿ ನಡೆದಿದೆ.

    ಗಾಯಗೊಂಡ ವ್ಯಕ್ತಿಯನ್ನು ಹನುಮಂತ (45) ಎಂದು ಗುರುತಿಸಲಾಗಿದೆ. ಹಬ್ಬದ ಸಡಗರದಲ್ಲಿದ್ದಾಗ ಅವರು ಹಲಾಯಿ ಕುಣಿಗೆ ಆಯತಪ್ಪಿ ಬಿದ್ದಿದ್ದಾರೆ. ಗಂಭೀರ ಗಾಯಗಳಾಗಿದ್ದು, ಅವರು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪುತ್ತೂರು | ವಿಹರಿಸುತ್ತಿದ್ದ ಜೋಡಿಗೆ ಕಿರುಕುಳ – ನಿಂದಿಸಿ ವಿಡಿಯೋ ಹರಿಬಿಟ್ಟ ಪುಂಡರು

    ಗಾಯಾಳುವನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಲಿಂಗಸುಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಜಾತ್ರೆಯಲ್ಲಿ ಗುಂಡು ಹಾರಿಸಿದ ಪ್ರಕರಣ – ರಮೇಶ್‌ ಜಾರಕಿಹೊಳಿ ಪುತ್ರನ ವಿರುದ್ಧ ಎಫ್‌ಐಆರ್‌

  • ಹರಕೆ ತೀರಿದ್ದಕ್ಕೆ ಮೊಹರಂ ಹಬ್ಬದಂದು ಹುಲಿ ವೇಷ ಧರಿಸಿ ಕುಣಿತ!

    ಹರಕೆ ತೀರಿದ್ದಕ್ಕೆ ಮೊಹರಂ ಹಬ್ಬದಂದು ಹುಲಿ ವೇಷ ಧರಿಸಿ ಕುಣಿತ!

    ಗದಗ: ಮೊಹರಂ ಹಬ್ಬದಂದು (Muharram Festival) ಹುಲಿ ವೇಷ ತೊಟ್ಟು (Tiger’s Attire Enthralls) ಕುಣಿದು ಹರಕೆ ತೀರಿಸುವ ವಿಶಿಷ್ಠವಾದ ಸಂಪ್ರದಾಯ ಜಿಲ್ಲೆಯ ಗಜೇಂದ್ರಗಡದಲ್ಲಿದೆ.

    ಜಿಲ್ಲೆಯ ಅನೇಕ ಕಡೆಗಳಲ್ಲಿ ಮೊಹರಂ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಅದೇ ರೀತಿ ಗಜೇಂದ್ರಗಡ (Gajendragarh) ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹುಲಿ ವೇಷ ತೊಟ್ಟು ಮುಸ್ಲಿಂ (Muslims) ಬಾಂಧವರು ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಇದನ್ನೂ ಓದಿ: ಎಕ್ಸ್‌ಪ್ರೆಸ್‌ವೇಯಲ್ಲಿ AI ಕ್ಯಾಮೆರಾ – ಇಷ್ಟಬಂದಂತೆ ವಾಹನ ಚಲಾಯಿಸಿದ್ರೆ ಬೀಳುತ್ತೆ ದಂಡ

    ಮೊಹರಂ ಹಬ್ಬದ ಕತ್ತಲು ರಾತ್ರಿ ದಿನದಂದು ಪಟ್ಟಣದ ತೆಕ್ಕದ ಮೊಲಾಲಿ ಮಸೀದಿಯಿಂದ ಆರಂಭಗೊಂಡ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಘೋರ್ಪಡೆ ವಾಡೆಯಲ್ಲಿ ಮುಕ್ತಾಯವಾಯಿತು. ಈ ವೇಳೆ ಹರಕೆ ಹೊತ್ತು ನೂರಾರು ಮಕ್ಕಳು, ಯುವಕರು ಹುಲಿ ವೇಷ ಹಾಕಿಕೊಂಡು ಕುಣಿದು ಹರಕೆ ತೀರಿಸಿದರು. ಹುಲಿ ವೇಷ ಕುಣಿತ ನೋಡಲು ಜನ ಸಾಗರವೇ ಸೇರಿತ್ತು. ಹರಕೆ ಹೊತ್ತ ನೂರಾರು ಹುಲಿ ವೇಷಧಾರಿಗಳು ಈ ಮೆರವಣಿಗೆಯಲ್ಲಿ ಭಾಗಿಯಾಗಿದರು.

    ನಮಗೆ ಕಷ್ಟಗಳು ಬಂದಾಗ ಬೇಡಿಕೊಂಡು ಹರಕೆ ಹೇಳಿದ್ದೆವು. ಕಷ್ಟಗಳು ದೂರವಾಗಿ ನಮ್ಮ ಬೇಡಿಕೆ, ಇಷ್ಟಾರ್ಥಗಳು ಈಡೇರಿದ್ದರಿಂದ ಪ್ರತಿ ವರ್ಷ ಹುಲಿ ವೇಷ ಹಾಕಿ ಕುಣಿದು ನಮ್ಮ ಹರಕೆ ತೀರಿಸುತ್ತೇವೆ ಎನ್ನುತ್ತಾರೆ ಹುಲಿ ವೇಷಧಾರಿಗಳು. ಹಿಂದೂ-ಮುಸ್ಲಿಂ ಬಾಂಧವರು ಭಾವೈಕ್ಯತೆಯಿಂದ ಮೊಹರಂ ಹಬ್ಬವನ್ನು ವಿಜೃಂಭಣೆಯಿಂದ ಈ ಭಾಗದಲ್ಲಿ ಆಚರಿಸಿಕೊಂಡು ಬರುತ್ತಿದ್ದಾರೆ.

     
    Web Stories

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಕ್ತ ಚೆಲ್ಲಿದ ಇರಾನಿ ಜನ – ಧಾರವಾಡದಲ್ಲಿ ವಿಶಿಷ್ಟವಾಗಿ ಮೊಹರಂ ಆಚರಣೆ

    ರಕ್ತ ಚೆಲ್ಲಿದ ಇರಾನಿ ಜನ – ಧಾರವಾಡದಲ್ಲಿ ವಿಶಿಷ್ಟವಾಗಿ ಮೊಹರಂ ಆಚರಣೆ

    ಧಾರವಾಡ: ಭಾವೈಕ್ಯತೆ ಹಾಗೂ ತ್ಯಾಗದ ಪ್ರತೀಕ ಈ ಮೊಹರಂ ಹಬ್ಬ. ಹಸೇನ್ ಹುಸೇನ್‌ರ ತ್ಯಾಗವನ್ನು ನೆನಪಿಸುವ ಹಬ್ಬವೂ ಹೌದು. ಅದರಲ್ಲೂ ಧಾರವಾಡದಲ್ಲಿ ನಡೆಯುವ ಈ ವಿಶಿಷ್ಟ ಆಚರಣೆ ಗಮನಸೆಳೆದಂತೆ ಭಯವೂ ಹುಟ್ಟಿಸಿದೆ.

    ಹೌದು ಹಸೇನ್ ಹುಸೇನ್‌ರ ತ್ಯಾಗವನ್ನು ನೆನಪಿಸುವುದಕ್ಕೋಸ್ಕರ ಧಾರವಾಡದ ಇರಾನಿ ಸಮುದಾಯದ ಜನ ತಮ್ಮ ರಕ್ತವನ್ನೇ ಚೆಲ್ಲಿದ್ದಾರೆ. ಪ್ರತಿವರ್ಷ ಮೊಹರಂ ಹಬ್ಬದಂದು ಇವರು ತಮ್ಮ ಎದೆಗೆ ಬ್ಲೇಡ್‌ನಿಂದ ಹೊಡೆದುಕೊಳ್ಳುವ ಮೂಲಕ ರಕ್ತ ಚೆಲ್ಲಿ ಮೊಹರಂ ಹಬ್ಬವನ್ನು ಆಚರಿಸಿ, ತ್ಯಾಗದ ಸಂದೇಶ ಸಾರುತ್ತಾರೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಗಟ್ಟಿಯಾಯ್ತು ಡಿಕೆ, ಸಿದ್ದು ಜೋಡಿ- ಪರಸ್ಪರ ಟೋಪಿ ಹಾಕಿಕೊಂಡ ನಾಯಕರು

    ಹಾಗೆಯೇ ಇಂದು ನಡೆದ ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಇರಾನಿ ಸಮುದಾಯದ ಜನ ನಗರದ ಜನ್ನತನಗರದಿಂದ ಹೊಸಯಲ್ಲಾಪುರದವರೆಗೆ ಪಾಂಜಾಗಳ ಮೆರವಣಿಗೆ ಮಾಡಿದರು. ಈ ಮೆರವಣಿಗೆಯಲ್ಲಿ ಇವರು ಬ್ಲೇಡ್‌ನಿಂದ ತಮ್ಮ ಎದೆಗೆ ಹೊಡೆದುಕೊಂಡು ರಕ್ತ ಚೆಲ್ಲುವ ಮೂಲಕ ಹಬ್ಬವನ್ನು ಆಚರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮೊಹರಂ ಹಬ್ಬದಲ್ಲೂ ಅಪ್ಪು – ಹೊಂಡದಲ್ಲಿ ಪುನೀತ್ ಫೋಟೋ ಹಿಡಿದು ಬಂದ ಬಾಲಕ

    ಮೊಹರಂ ಹಬ್ಬದಲ್ಲೂ ಅಪ್ಪು – ಹೊಂಡದಲ್ಲಿ ಪುನೀತ್ ಫೋಟೋ ಹಿಡಿದು ಬಂದ ಬಾಲಕ

    ಕೊಪ್ಪಳ: ಕರ್ನಾಟಕ ರತ್ನ ಪುನೀತ್ ರಾಜ್‍ಕುಮಾರ್ ಎಲ್ಲರನ್ನು ಅಗಲಿ 10 ತಿಂಗಳು ಕಳೆಯುತ್ತಿದ್ದರೂ ಅವರ ಮೇಲಿನ ಅಭಿಮಾನ ಮಾತ್ರ ಅಭಿಮಾನಿಗಳಿಗೆ ಹೆಚ್ಚಾಗುತ್ತಿದೆ. ಅದರಲ್ಲಿಯೂ ಚಿಕ್ಕ-ಚಿಕ್ಕ ಮಕ್ಕಳಿಗೆ ಅಪ್ಪು ಮೇಲಿನ ಅಭಿಮಾನ ಮತ್ತು ಪ್ರೀತಿ ಹೆಚ್ಚಾಗುತ್ತ ಹೋಗುತ್ತಿದೆ. ಅದಕ್ಕೆ ಇಲ್ಲೊಬ್ಬ ಬಾಲಕ ಉದಾಹರಣೆಯಾಗಿದ್ದಾನೆ.

    ಇಂದು ಮೊಹರಂ ಹಬ್ಬ. ಈ ಹಬ್ಬ ಹಿಂದೂ ಮತ್ತು ಮುಸ್ಲಿಮರ ಭಾವೈಕ್ಯತೆ ಸಾರುವ ಹಬ್ಬವಾಗಿದೆ. ಈ ಹಬ್ಬವನ್ನು ಹಿಂದೂ ಮತ್ತು ಮುಸ್ಲಿಮರು ಒಟ್ಟಿಗೆ ಮಾಡುತ್ತಾರೆ. ಅದಕ್ಕೆ ಈ ಹಬ್ಬಕ್ಕೆ ತುಂಬಾ ವಿಶೇಷ ಸ್ಥಾನವಿದೆ. ಈ ವಿಶೇಷ ಸಂದರ್ಭದಲ್ಲಿ ಇಲ್ಲೊಬ್ಬ ಪುಟಾಣಿ ಕೊಪ್ಪಳ ತಾಲೂಕಿನ ಹೂವಿನಾಳ ಗ್ರಾಮದಲ್ಲಿ ಎಲ್ಲರ ಗಮನ ಸೆಳೆದಿದ್ದಾನೆ. ಇದನ್ನೂ ಓದಿ: ಮದುವೆಗೆ ಮುಸ್ಲಿಂ ವಧು ಹಾಜರ್ – ಮಹಲ್ ಸಮಿತಿಯ ಕ್ಷಮೆಗೆ ಆಗ್ರಹ 

    ಮೋಹರಂ ಆಚರಣೆ ವೇಳೆ ಪುಟ್ಟ ಬಾಲಕನೊಬ್ಬ ಪುನೀತ್ ರಾಜಕುಮಾರ್ ಫೋಟೋ ಹಿಡಿದು ಬೆಂಕಿ ತುಂಬಿದ ಹೊಂಡವನ್ನು ದಾಟಿದ್ದಾನೆ. ಅಲಾಯಿ ದೇವರ ಜೊತೆಗೆಯೇ ಬಾಲಕ ಪುನೀತ್ ಫೋಟೋ ಹಿಡಿದು ಅಗ್ನಿ ಹೊಂಡ ದಾಟಿದನ್ನು ನೋಡಿದ ನೋಡುಗರು ಅಚ್ಚರಿ ವ್ಯಕ್ತಪಡಿಸಿದರು.

    Live Tv
    [brid partner=56869869 player=32851 video=960834 autoplay=true]

  • ಹನುಮನಿಂದ ಪ್ರಸಾದ ಪಡೆಯುವ ಅಲಾಯಿ ದೇವರು – ಕೊಪ್ಪಳದಲ್ಲಿ ವಿಶೇಷ ಆಚರಣೆ

    ಹನುಮನಿಂದ ಪ್ರಸಾದ ಪಡೆಯುವ ಅಲಾಯಿ ದೇವರು – ಕೊಪ್ಪಳದಲ್ಲಿ ವಿಶೇಷ ಆಚರಣೆ

    ಕೊಪ್ಪಳ: ಮೊಹರಂ ಹಿಂದೂ ಮುಸ್ಲಿಮರು ಸೇರಿ ಆಚರಿಸುವ ಏಕೈಕ ಹಬ್ಬವಾಗಿದ್ದು, ಕೊಪ್ಪಳ ಜಿಲ್ಲೆಯ ವಿವಿಧ ಗ್ರಾಮದಲ್ಲಿ ಅತ್ಯಂತ ವಿಭಿನ್ನವಾಗಿ ಭಾವೈಕ್ಯತೆಯಿಂದ ಮೊಹರಂ ಆಚರಣೆ ಮಾಡಲಾಗುತ್ತಿದೆ.

    ಕೊಪ್ಪಳ ತಾಲೂಕಿನ ಮತ್ತೂರು ಗ್ರಾಮದಲ್ಲಿ ಹಿಂದೂಗಳ ಮನೆಯಲ್ಲೇ ಅಲಾಯಿ ದೇವರಿಗೆ ಪೂಜೆ ಮಾಡುತ್ತಿದ್ದು, ಈ ಗ್ರಾಮದಲ್ಲಿ ದೇವರನ್ನು ಅಂದಪ್ಪ ಬಡಿಗೇರ ಎಂಬುವರ ಮನೆಗೆ ಗ್ರಾಮಸ್ಥರು ಕರೆ ತಂದು ಸ್ಥಾಪನೆ ಮಾಡುತ್ತಾರೆ. ಮೊಹರಂನ 7 ದಿನದ ಸವಾರಿ ಭಾಗವಾಗಿ ಅಂದಪ್ಪ ಮನೆಗೆ ಬರುವ ದೇವರಿಗೆ ಭಕ್ತರು ಇಡೀ ದಿನ ಅಲ್ಲೇ ಪೂಜೆ ಮಾಡುತ್ತಾರೆ. ನಂತರ ಅಂದಪ್ಪ ಕುಟುಂಬ ಅನ್ನ ಸಂತರ್ಪಣೆ ಮಾಡುತ್ತಾರೆ. ಇದನ್ನೂ ಓದಿ: ಲಾಲ್‍ಬಾಗ್‍ನಲ್ಲಿ ಈಗ ಎಲ್ಲೆಲ್ಲೂ ಅಪ್ಪು – ನಗುವಿನ ಒಡೆಯನನ್ನು ನೋಡಲು ಮುಗಿಬಿದ್ದ ಜನ

    ಮತ್ತೊಂದು ಕಡೆ ಅಲಾಯಿ ದೇವರು ಹನುಮಂತನಿಂದ ಪ್ರಸಾದ ಪಡೆಯುತ್ತದೆ. ಕೊಪ್ಪಳ ತಾಲೂಕಿನ ಕವಲೂರಿನಲ್ಲಿ ಈ ಆಚರಣೆ ನಡೆಯುತ್ತಿದೆ. ಶನಿವಾರ 7 ದಿನದ ಸವಾರಿಯಂದು ಹನುಮಂತ ದೇವರ ಗುಡಿಗೆ ಅಲಾಯಿ ದೇವರು ಭೇಟಿ ನೀಡುತ್ತಾನೆ. ಹನುಮಂತನಿಂದ ಪ್ರಸಾದ ಕೇಳುವ ಅಲಾಯಿ ದೇವರು, ಹನುಮಂತ ದೇವರ ಮುಡಿಯಲ್ಲಿದ್ದ ಹೂವಿನ ಪ್ರಸಾದ ಪಡೆಯುತ್ತಾನೆ. ಈ ದೃಶ್ಯ ವೈರಲ್ ಆಗಿದೆ. ಒಟ್ಟಾರೆ ಮೊಹರಂ ಹಬ್ಬ ಸೂಫಿ ಶರಣರ ನಾಡಿನಲ್ಲಿ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಇನ್ನೂ ನಾಲ್ಕೈದು ದಿನ ಮಳೆ ಸಂಭವ – ಉಡುಪಿ, ದಕ್ಷಿಣ ಕನ್ನಡದಲ್ಲಿ ರೆಡ್ ಅಲರ್ಟ್

    Live Tv
    [brid partner=56869869 player=32851 video=960834 autoplay=true]

  • ಮೊಹರಂ- ಕೆಂಡ ಹಾಯುವ ಮುನ್ನ ಕೆರೆಯಲ್ಲಿ ಮುಳುಗಿ ಯುವಕರು ಸಾವು

    ಮೊಹರಂ- ಕೆಂಡ ಹಾಯುವ ಮುನ್ನ ಕೆರೆಯಲ್ಲಿ ಮುಳುಗಿ ಯುವಕರು ಸಾವು

    ಧಾರವಾಡ: ಕೆರೆಯಲ್ಲಿ ಮುಳುಗಿ ಇಬ್ಬರು ಯುವಕರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಮುಳಮುತ್ತಲ ಗ್ರಾಮದಲ್ಲಿ ನಡೆದಿದೆ.

    ಕಾಶೀಂ ನದಾಫ(24) ಹಾಗೂ ಶರೀಫ ನದಾಫ(20) ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ದುರ್ದೈವಿಗಳು. ಮೊಹರಂ ಹಬ್ಬ ಹಿನ್ನೆಲೆಯಲ್ಲಿ ಕಾಶೀಂ ಹಾಗೂ ಇನ್ನಿಬ್ಬರು ಮುಳಮುತ್ತಲ ಗ್ರಾಮದ ಕೆರೆಗೆ ಸ್ನಾನಕ್ಕೆ ಹೋಗಿದ್ದರು. ಸ್ನಾನ ಮುಗಿಸಿ ಮೊಹರಂ ಹಬ್ಬದ ಕೆಂಡ ಹಾಯಲು ಹೋಗಬೇಕಿದ್ದ ಈ ಯುವಕರು, ಕೆರೆಗೆ ಬಂದು ಈಜಲು ಇಳಿದಿದ್ದಾರೆ. ಇದನ್ನೂ ಓದಿ: ಕೇಂದ್ರ ಸಚಿವರ ಎಡವಟ್ಟು- ಹುತಾತ್ಮ ಯೋಧನ ಬದಲು, ಕರ್ತವ್ಯ ನಿರತ ಯೋಧನ ಕುಟುಂಬಕ್ಕೆ ಸಾಂತ್ವನ

    ಈ ವೇಳೆ ಕೆರೆಯ ಪಕ್ಕದಲ್ಲೇ ಇದ್ದ ಶರೀಫ್ ಕೆರೆಯಲ್ಲಿ ಮುಳುಗುತಿದ್ದ ಇಬ್ಬರನ್ನು ಹೊರ ತೆಗೆದಿದ್ದಾನೆ. ನಂತರ ಶರೀಫ್ ಕಾಶೀಂ ನನ್ನು ಉಳಿಸಲು ಹೋದಾಗ ಕಾಶೀಂ ಹಾಗೂ ಶರೀಫ್ ಇಬ್ಬರೂ ಮುಳುಗಿ ಸಾವನ್ನಪ್ಪಿದಾರೆ. ಸ್ಥಳದಲ್ಲಿದ್ದ ಗ್ರಾಮಸ್ಥರು ಸಾವನ್ನಪ್ಪಿದ ಯುವಕರ ಶವಗಳನ್ನು ಕೆರೆಯಿಂದ ಹೊರ ತೆಗೆದಿದ್ದು, ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನಿಷೇಧದ ಮಧ್ಯೆಯೂ ವಿಜಯಪುರದಲ್ಲಿ ಅದ್ದೂರಿ ಮೊಹರಂ

    ನಿಷೇಧದ ಮಧ್ಯೆಯೂ ವಿಜಯಪುರದಲ್ಲಿ ಅದ್ದೂರಿ ಮೊಹರಂ

    ವಿಜಯಪುರ: ಮಹಾರಾಷ್ಟ್ರದಲ್ಲಿ ಕೊರೊನಾ ಮೂರನೇ ಅಲೆ ತಾಂಡವ ಆಡುತ್ತಿದೆ. ಇದರಿಂದ ಮಹಾರಾಷ್ಟ್ರಕ್ಕೆ ಗಡಿ ಹಂಚಿಕೊಂಡಿರುವ ವಿಜಯಪುರದಲ್ಲಿ ಆತಂಕ ಮನೆ ಮಾಡಿದೆ.

    ಮಹಾರಾಷ್ಟ್ರ ಗಡಿಯ ವಿಜಯಪುರದ ಹಳ್ಳಿಗಳಲ್ಲಿ ಈ ಬಾರಿ ಅದ್ಧೂರಿಯಾಗಿ ಮೊಹರಂ ಆಚರಣೆ ನಡೆದಿದೆ. ಜಿಲ್ಲಾಡಳಿತದ ನಿಷೇಧದ ಮಧ್ಯವೇ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಚವಡಿಹಾಳ ಗ್ರಾಮದಲ್ಲಿ ಅದ್ಧೂರಿ ಮೊಹರಂ ಆಚರಣೆ ಮಾಡಲಾಗಿದೆ. ಕೊರೊನಾ ಮೂರನೇ ಅಲೆ ತಡೆಯಲು ಜಿಲ್ಲಾಡಳಿತ ಮೊಹರಂ ಹಾಗೂ ಇತರೆ ಆಚರಣೆಗೆ ನಿಷೇಧಿಸಿದೆ. ಆದರೂ ನಿಷೇಧಕ್ಕೆ ಕ್ಯಾರೆ ಅನ್ನದ ಅದ್ದೂರಿಯಾಗಿ ಜನರು ಮೊಹರಂ ಆಚರಿಸಿದ್ದಾರೆ. ಇದನ್ನೂ ಓದಿ:ಕಾರು, ಬೈಕ್ ಮಧ್ಯೆ ಅಪಘಾತ- ಮೂವರು ಸ್ಥಳದಲ್ಲೇ ಸಾವು

    ಅಧಿಕ ಸಂಖ್ಯೆಯಲ್ಲಿ ಜನರು ಜಮಾಯಿಸಿ, ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಪಾಡದೇ ಬೇಕಾಬಿಟ್ಟಿ ವರ್ತನೆ ಮಾಡಿದ್ದಾರೆ. ಕೊರೊವೆ. ನಿಷೇಧದ ಮಧ್ಯೆಯೇ ಈ ರೀತಿ ಅದ್ದೂರಿಯಾಗಿ ಮೊಹರಂ ಆಚರಣೆ ಮಾಡುತ್ತಿದ್ದರೂ ಕಂದಾಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ ಯಾಕೆ ಎಂಬ ಪ್ರಶ್ನೆ ಎದ್ದಿದೆ. ಇದನ್ನೂ ಓದಿ:ವಿಚಾರಣಾಧೀನ ಖೈದಿ ಜೈಲಿನಲ್ಲಿ ಸಾವು

  • ಗಣೇಶ ಚತುರ್ಥಿ, ಮೊಹರಂ ಹಬ್ಬ ಆಚರಣೆಗೆ ಮಾರ್ಗಸೂಚಿ ಪ್ರಕಟ

    ಗಣೇಶ ಚತುರ್ಥಿ, ಮೊಹರಂ ಹಬ್ಬ ಆಚರಣೆಗೆ ಮಾರ್ಗಸೂಚಿ ಪ್ರಕಟ

    ಬೆಂಗಳೂರು: ಗೌರಿ ಗಣೇಶ, ಮೊಹರಂ ಸೇರಿದಂತೆ ಧಾರ್ಮಿಕ ಹಬ್ಬ ಆಚರಣೆಗೆ ಮಾರ್ಗಸೂಚಿ ಪ್ರಕಟ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

    ಮೊಹರಂ, ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ದುರ್ಗಾ ಪೂಜೆ, ಮೊದಲಾದ ಹಬ್ಬಗಳನ್ನು ಆಚರಿಸುವಾಗ ಜನದಟ್ಟಣೆ ತಡೆಗಟ್ಟಲು ಕೆಲ ನಿರ್ಬಂಧಗಳನ್ನು ಜಾರಿ ಮಾಡಲಾಗಿದೆ. ಈ ಆದೇಶದ ಜೊತೆ ರಾಜ್ಯದಲ್ಲಿ ಸಾಮಾಜಿಕ, ಕ್ರೀಡಾ, ರಾಜಕೀಯ, ಶೈಕ್ಷಣಿಕ, ಸಾಂಸ್ಕೃತಿಕ ಜನ ಗುಂಪುಗೂಡುವ ಕಾರ್ಯಕ್ರಮ ನಿಷೇಧಿಸಲಾಗಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದ ರೇಷ್ಮೆ ಸೀರೆ- ಕುಗ್ರಾಮದ ನೇಕಾರನಿಗೆ ಒಲಿಯಿತು ರಾಜ್ಯ ಮಟ್ಟದ ಪ್ರಶಸ್ತಿ

    ಗಣೇಶೋತ್ಸವ
    – ಗಣೇಶ ಚತುರ್ಥಿಯನ್ನು ಸರಳವಾಗಿ ದೇವಾಲಯದ ಒಳಗಡೆ ಮತ್ತು ಮನೆಯಲ್ಲಿ ಆಚರಿಸಬೇಕು.
    – ಗಣೇಶ ಮೂರ್ತಿಯನ್ನು ತರುವಾಗ ಮತ್ತು ವಿಸರ್ಜಿಸುವಾಗ ಯಾವುದೇ ಮೆರವಣಿಗೆ/ಮನೋರಂಜನಾ ಕಾರ್ಯಕ್ರಮಗಳನ್ನು ಮಾಡುವಂತಿಲ್ಲ.
    – ಗಣೇಶ ಮೂರ್ತಿಯನ್ನು ಮನೆಯಲ್ಲೇ ವಿಸರ್ಜಿಸುವುದು ಅಥವಾ ಸ್ಥಳೀಯ ಆಡಳಿತ ಸಂಸ್ಥೆ ಸೂಚಿಸುವ ಜಾಗದಲ್ಲಿ ವಿಸರ್ಜಿವುದು.

    ಮೊಹರಂ:
    – ಸಾರ್ವಜನಿಕ ಸ್ಥಳಗಳಲ್ಲಿ ಆಲಂಗಳನ್ನು/ ಪಂಜಾವನ್ನು ಸ್ಥಾಪಿಸುವುದನ್ನು ನಿರ್ಬಂಧಿಸಲಾಗಿದೆ.
    – 60 ವರ್ಷಕ್ಕಿಂತ ಮೇಲ್ಪಟ್ಟವರು 10 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮನೆಯಲ್ಲೇ ಪ್ರಾರ್ಥನೆ ಮಾಡಬೇಕು.
    – ಕೋವಿಡ್ 19 ನಿಯಮಗಳನ್ನು ಪಾಲಿಸಿಕೊಂಡು ಮಸೀದಿಯಲ್ಲಿ ಪಾರ್ಥನೆ ಮಾಡಬಹುದು. ಹೆಚ್ಚಿನ ಜನರು ಆಗಮಿಸಿದ್ದಲ್ಲಿ ಪಾಳಿಯಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಬಹುದು.

  • ಐತಿಹಾಸಿಕ ಪ್ರಸಿದ್ಧ ಮುದಗಲ್ ಮೊಹರಂಗೆ ಜನಸಾಗರ

    ಐತಿಹಾಸಿಕ ಪ್ರಸಿದ್ಧ ಮುದಗಲ್ ಮೊಹರಂಗೆ ಜನಸಾಗರ

    -ಆಚರಣೆ ರದ್ದಾದ್ರೂ ಹರಕೆ ತೀರಿಸುತ್ತಿರುವ ಭಕ್ತರು

    ರಾಯಚೂರು: ಕೊರೊನಾ ಹಿನ್ನೆಲೆ ಐತಿಹಾಸಿಕ ಪ್ರಸಿದ್ಧ ರಾಯಚೂರಿನ ಮುದಗಲ್ ಮೊಹರಂ ಆಚರಣೆಯನ್ನ ರದ್ದು ಮಾಡಿದ್ದರೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದರ್ಗಾಕ್ಕೆ ಬರುತ್ತಲೇ ಇದ್ದಾರೆ. ಇಂದು ಮೊಹರಂ ಒಂಬತ್ತನೆಯ ದಿನವಾದ್ದರಿಂದ ಸಾವಿರಾರು ಭಕ್ತರು ಆಗಮಿಸುತ್ತಲೇ ಇದ್ದಾರೆ. ರಾಜ್ಯದ ವಿವಿಧೆಡೆಯಿಂದ ಬಂದ ಭಕ್ತರು ದೀರ್ಘದಂಡ ನಮಸ್ಕಾರ ಹಾಕಿ ಹರಕೆ ಸಲ್ಲಿಸುತ್ತಿದ್ದಾರೆ. ಕೋವಿಡ್ ಭೀತಿಯನ್ನ ಮರೆತು ಭಕ್ತರು ತ್ಯಾಗಬಲಿದಾನದ ಸಂಕೇತವಾದ ಮೊಹರಂನ್ನ ಆಚರಿಸುತ್ತಿದ್ದಾರೆ.

    ಪ್ರತಿ ವರ್ಷ ಮುದಗಲ್ ಮೊಹರಂಗೆ ದಕ್ಷಿಣ ಭಾರತದ ಹಲವು ಕಡೆಯಿಂದ ಲಕ್ಷಾಂತರ ಜನ ಬರುತ್ತಿದ್ದರು. ಈ ಬಾರಿ ಮುನ್ನೆಚ್ಚರಿಕೆಯಾಗಿ ಆಚರಣೆಯನ್ನ ಹುಸೇನ ಭಾಷಾ ದರ್ಗಾ ಕಮಿಟಿ ರದ್ದು ಮಾಡಿದೆ. ಮೊಹರಂ ಹಬ್ಬವನ್ನು ರದ್ದು ಪಡಿಸಿದರೂ ದರ್ಗಾಕ್ಕೆ ಜನ ಬರುತ್ತಿದ್ದಾರೆ. ದರ್ಗಾದ ಹೊರಗಡೆಯೇ ಪೂಜೆ ಸಲ್ಲಿಸಿ ಹೋಗುತ್ತಿದ್ದಾರೆ. ಬೆಳಗ್ಗೆಯಿಂದಲೂ ಜನರನ್ನ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಪ್ರತಿ ವರ್ಷ ಹಿಂದೂ, ಮುಸ್ಲಿಮರು ಸೇರಿ ಭಾವೈಕ್ಯದಿಂದ ಹತ್ತು ದಿನಗಳ ಕಾಲ ಮೊಹರಂ ಆಚರಣೆ ಮಾಡುತ್ತಿದ್ದರು. ಮುದಗಲ್ ಮೊಹರಂ ದಕ್ಷಿಣ ಭಾರತದಲ್ಲಿಯೇ ವಿಶಿಷ್ಟ ಆಚರಣೆ ಮೂಲಕ ಪ್ರಸಿದ್ಧಿ ಪಡೆದಿದೆ. ಆದ್ರೆ ಈ ವರ್ಷ ತ್ಯಾಗ ಬಲಿದಾನಗಳ ಸಂಕೇತವಾದ ಮೊಹರಂ ಆಚಣೆಯನ್ನ ಭಕ್ತರು ಮನೆಯಲ್ಲೇ ಮಾಡಿಕೊಳ್ಳಬೇಕಾಗಿದೆ.

    ಮುದಗಲ್ ಮೊಹರಂ ಆಚರಣೆ ನೋಡಲು ರಾಜ್ಯ ಹಾಗೂ ಅಂತರಾಜ್ಯದಿಂದ ಸಾವಿರಾರು ಸಂಖ್ಯೆಯಲ್ಲಿ ಜನ ಪ್ರತೀ ವರ್ಷ ಆಗಮಿಸುತ್ತಾರೆ. ಈ ವರ್ಷ ಕೊರೊನಾ ವೈರಸ್ ಸೋಂಕು ಹರಡುವಿಕೆ ಭೀತಿ ಹಿನ್ನೆಲೆಯಲ್ಲಿ ಸರ್ಕಾರದ ನಿಯಮವನ್ನು ಪಾಲನೆ ಮಾಡುವ ಉದ್ದೇಶದಿಂದ ಮೊಹರಂ ಆಚರಣೆಯನ್ನು ದರ್ಗಾ ಕಮಿಟಿ ನಿರ್ಣಯದಂತೆ ರದ್ದು ಮಾಡಲಾಗಿದೆ. ಇನ್ನೂ ಪ್ರತಿ ವರ್ಷ ಬೇರೆ ಜಿಲ್ಲೆಗಳಿಂದ ಆಲಂಗಳನ್ನು ಹೊತ್ತು ತಂದು ದೇವರ ಬಾವಿಯಲ್ಲಿ ತೊಳೆದುಕೊಂಡು ಹೋಗುತ್ತಿದ್ದ ಕಾರ್ಯವನ್ನು ಸಹ ನಿಷೇಧ ಮಾಡಲಾಗಿದೆ. ಬೇರೆ ಜಿಲ್ಲೆಯಿಂದ ಭಕ್ತರು ಆಲಂ ತರದಂತೆ ದರ್ಗಾ ಕಮಿಟಿ ಈ ಮೊದಲೇ ಮನವಿ ಮಾಡಿದೆ. ಆದರೂ ಭಕ್ತರು ಮಾತ್ರ ದರ್ಗಾಕ್ಕೆ ಬಂದು ಹರಕೆ ತೀರಿಸುತ್ತಿದ್ದಾರೆ.