Tag: Muhammad Ali Jinnah

  • ಸಿದ್ದರಾಮಯ್ಯ ಅವರು ಸ್ವತಂತ್ರ್ಯ ಭಾರತದ ಜಿನ್ಹಾ: ಬಿಜೆಪಿ ಕಿಡಿ

    ಸಿದ್ದರಾಮಯ್ಯ ಅವರು ಸ್ವತಂತ್ರ್ಯ ಭಾರತದ ಜಿನ್ಹಾ: ಬಿಜೆಪಿ ಕಿಡಿ

    ಬೆಂಗಳೂರು: ಟಿಪ್ಪು ವರ್ಸಸ್‌ ಸಾವರ್ಕರ್‌ ವಿವಾದ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ, ಸಿದ್ದರಾಮಯ್ಯ ಅವರು ಸ್ವತಂತ್ರ್ಯ ಭಾರತದ ಜಿನ್ಹಾ ಎಂದು ಕಿಡಿಕಾರಿದೆ.

    ಈ ಕುರಿತು ಟ್ವೀಟ್‌ ಮಾಡಿರುವ ಬಿಜೆಪಿ, ಟಿಪ್ಪುವಿನ ಫೋಟೋ ಎಲ್ಲಿ ಬೇಕಾದರೂ ಹಾಕಬಹುದು. ಆದರೆ ಸಾವರ್ಕರ್ ಫೋಟೋ ಹಾಕಲು ಮಾತ್ರ ಸಿದ್ದರಾಮಯ್ಯ ಅವರಿಗೆ ಧರ್ಮ ಅಡ್ಡ ಬರುತ್ತದೆ. ಓಲೈಕೆ ರಾಜಕಾರಣದ ಪರಮಾವಧಿಯಿದು. ಜಿಹಾದಿ ಮಾನಸಿಕತೆಯನ್ನು ಕಾಂಗ್ರೆಸ್‌ ಪಕ್ಷ ಬೆಳೆಸುತ್ತಿರುವುದು ನಿಜಕ್ಕೂ ಆತಂಕಕಾರಿ ಸಂಗತಿ ಎಂದು ಟೀಕಿಸಿದೆ. ಇದನ್ನೂ ಓದಿ: ತಿಲಕ ಇಟ್ಟುಕೊಂಡಿದ್ದಕ್ಕೇ ಚಾಕು ಇರಿತ – ಶಿವಮೊಗ್ಗ ಪ್ರಕರಣಕ್ಕೆ ಟ್ವಿಸ್ಟ್

    ಸಿದ್ದರಾಮಯ್ಯ ಅವರು ಸ್ವತಂತ್ರ ಭಾರತದ ಜಿನ್ಹಾ! ಮುಸ್ಲಿಂ ಏರಿಯಾಗಳನ್ನು ಈ ದೇಶದ ಅಖಂಡತೆಯಿಂದ ಛಿದ್ರಗೊಳಿಸುವುದಕ್ಕೆ ಹೊರಟಿದ್ದೀರಾ? ಮತ್ತೊಮ್ಮೆ ದೇಶ ವಿಭಜಿಸುವ ಕಾಂಗ್ರೆಸ್ ಪಕ್ಷದ ಹಿಡನ್ ಅಜೆಂಡಾ ಸಿದ್ದರಾಮಯ್ಯ ಬಾಯಿಂದ ಬಹಿರಂಗವಾಗಿದೆ ಎಂದು ಕುಟುಕಿದೆ.

    ಸಿದ್ದರಾಮಯ್ಯ ಬೀದಿಗೆ ಬಿಟ್ಟ ರಕ್ತಬೀಜಾಸುರರೇ ಶಿವಮೊಗ್ಗದಲ್ಲಿ ಗಲಾಟೆ ಸೃಷ್ಟಿಸಿದ್ದು ಎಂಬ ಗುಮಾನಿ ಈಗ ಸತ್ಯವಾಗಿದೆ. ಜಿಹಾದಿ ಮಾನಸಿಕತೆಯ ಉಗ್ರರ ಪರವಾಗಿ ಸಿದ್ದರಾಮಯ್ಯ ವಕಾಲತ್ತು ವಹಿಸುವುದರಲ್ಲಿ ಅಚ್ಚರಿಯಿಲ್ಲ ಎಂದು ಬಿಜೆಪಿ ಟ್ವೀಟ್‌ ಮಾಡಿ ವಾಗ್ದಾಳಿ ನಡೆಸಿದೆ. ಇದನ್ನೂ ಓದಿ: ಮತ್ತೊಂದು ವಿವಾದ – ಮಾಣಿಕ್ ಷಾ ಮೈದಾನದ ದ್ವಾರಗಳ ಮೇಲಿದ್ದ ಟಿಪ್ಪು, ಚೆನ್ನಮ್ಮ ಹೆಸರಿಗೆ ಬಣ್ಣ!

    Live Tv
    [brid partner=56869869 player=32851 video=960834 autoplay=true]

  • ಜಿನ್ನಾಗೂ ಭಾರತೀಯ ಮುಸ್ಲಿಮರಿಗೂ ಸಂಬಂಧವಿಲ್ಲ : ಓವೈಸಿ

    ಜಿನ್ನಾಗೂ ಭಾರತೀಯ ಮುಸ್ಲಿಮರಿಗೂ ಸಂಬಂಧವಿಲ್ಲ : ಓವೈಸಿ

    ಲಕ್ನೋ: ಮುಹಮ್ಮದ್ ಅಲಿ ಜಿನ್ನಾ ಭಾರತದ ಸ್ವಾತಂತ್ರ್ಯ ಹೋರಾಟದ ನಾಯಕ ಎಂದು ಹೇಳಿಕೆ ನೀಡಿದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರಿಗೆ ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ತಿರುಗೇಟು ನೀಡಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಓವೈಸಿ, ಮುಹಮ್ಮದ್ ಅಲಿ ಜಿನ್ನಾಗೂ ಭಾರತೀಯ ಮುಸ್ಲಿಮರಿಗೂ ಯಾವುದೇ ಸಂಬಂಧವಿಲ್ಲ. ಅಖಿಲೇಶ್ ಯಾವದ್ ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ನಮ್ಮ ಹಿರಿಯರು ಎರಡು ರಾಷ್ಟ್ರಗಳ ಸಿದ್ಧಾಂತವನ್ನು ತಿರಸ್ಕರಿಸಿ ಭಾರತವನ್ನು ತಮ್ಮ ದೇಶವನ್ನಾಗಿ ಆರಿಸಿಕೊಂಡಿದ್ದರು ಎಂದಿದ್ದಾರೆ.

    ಅಖಿಲೇಶ್ ತಕ್ಷಣ ದೇಶದ ಜನರಲ್ಲಿ ಕ್ಷಮೆಯಾಚನೆ ಮಾಡಬೇಕು. ಉಕ್ಕಿನ ಮನುಷ್ಯ ಸರ್ದಾರ ಪಟೇಲ್ ಅವರಿಗೆ ಜಿನ್ನಾ ಹೋಲಿಕೆ ಯಾವ ಅರ್ಥದಲ್ಲಿ ಸರಿ ಎಂದು ಉತ್ತರ ಪ್ರದೇಶ ಮುಖ್ಯಂತ್ರಿ ಯೋಗಿ ಆದಿತ್ಯನಾಥ್ ಅವರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಪುನೀತ್ ರಾಜ್‍ಕುಮಾರ್ ಸ್ಮರಣಾರ್ಥ – ಅಭಿಮಾನಿಗಳಿಗಾಗಿ ಥಿಯೇಟರ್‌ಗೆ ಬಂದ `ರಾಜಕುಮಾರ’

    Akhilesh Yadav

    ಅಖಿಲೇಶ್ ಯಾದವ್ ಅವರು ಸಮಾಜವಾದಿ ಪಕ್ಷದ ಸಮಾವೇಶದಲ್ಲಿ ಸರ್ದಾರ್ ಪಟೇಲ್, ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಜಿನ್ನಾ ಸೇರಿದಂತೆ ಬಹುತೇಕರು ಒಂದೇ ಸಂಸ್ಥೆಯಿಂದ ಹೊರಬಂದವರು. ಅವರೆಲ್ಲಾ ಒಂದೇ ಶಿಕ್ಷಣ ಸಂಸ್ಥೆಯಲ್ಲಿ ಬ್ಯಾರಿಸ್ಟರ್ ಪದವಿ ಪಡೆದು ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಚಿನ್ನಾ ಭಾರತದ ಸ್ವಾತಂತ್ರ್ಯ ಚಳವಳಿಯ ನಾಯಕ ಎಂದು ಹೇಳಿ ವಿವಾದಕ್ಕೆ ಗುರಿಯಾಗಿದ್ದಾರೆ. ಇದನ್ನೂ ಓದಿ: ಪುನೀತ್ ಓದಿಸುತ್ತಿದ್ದ 1,800 ಮಕ್ಕಳ ಜವಾಬ್ದಾರಿ ಹೊತ್ತ ನಟ ವಿಶಾಲ್

  • ಜಿನ್ನಾ ದೇಶದ ಸ್ವಾತಂತ್ರ್ಯ, ಅಭಿವೃದ್ಧಿಯಲ್ಲಿ ಪಾತ್ರ ವಹಿಸಿದ್ದರು : ಶತ್ರುಘ್ನ ಸಿನ್ಹಾ

    ಜಿನ್ನಾ ದೇಶದ ಸ್ವಾತಂತ್ರ್ಯ, ಅಭಿವೃದ್ಧಿಯಲ್ಲಿ ಪಾತ್ರ ವಹಿಸಿದ್ದರು : ಶತ್ರುಘ್ನ ಸಿನ್ಹಾ

    ಭೋಪಾಲ್: ಮೊಹಮ್ಮದ್ ಅಲಿ ಜಿನ್ನಾ ಅವರು ದೇಶದ ಸ್ವಾತಂತ್ರ್ಯ ಹಾಗೂ ಅಭಿವೃದ್ಧಿಯಲ್ಲಿ ಪಾತ್ರ ವಹಿಸಿದ್ದರು ಎಂದು ನಟ, ಕಾಂಗ್ರೆಸ್ ಮುಖಂಡ ಶತ್ರಘ್ನ ಸಿನ್ಹಾ ಹೇಳಿದ್ದಾರೆ.

    ಮಧ್ಯಪ್ರದೇಶದ ಚಿಂದ್ವಾರಾ ಜಿಲ್ಲೆಯ ಸೌಸರ್ ನಲ್ಲಿ ನಡೆದ ಪ್ರಚಾರ ವೇಳೆ ಮಾತನಾಡಿ ಅವರು, ಕಾಂಗ್ರೆಸ್ ಪರಿವಾರವನ್ನು ಮಹಾತ್ಮ ಗಾಂಧಿ ನಡೆಸಿದರು. ಅವರ ಬಳಿಕ ಸರ್ದಾರ್ ವಲ್ಲಭಭಾಯಿ ಪಟೇಲ್, ಮೊಹಮ್ಮದ್ ಅಲಿ ಜಿನ್ನಾ, ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹಾಗೂ ಈಗ ರಾಹುಲ್ ಗಾಂಧಿ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ದೇಶದ ಸ್ವಾತಂತ್ರ್ಯ ಹಾಗೂ ಅಭಿವೃದ್ಧಿ ಶ್ರಮಿಸಿದ್ದಾರೆ. ಹೀಗಾಗಿ ನಾನು ಕಾಂಗ್ರೆಸ್ ಪಕ್ಷವನ್ನು ಸೇರಿದ್ದೇನೆ ಎಂದರು.

    ಮೊಹಮ್ಮದ್ ಅಲಿ ಜಿನ್ನಾ ಫೋಟೋ ವಿಚಾರವಾಗಿ ಉತ್ತರ ಪ್ರದೇಶದ ಅಲಿಘಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಗಲಾಟೆ ನಡೆದಿತ್ತು.

    ಅಲಿಘಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಜಿನ್ನಾ ಫೋಟೋವನ್ನು 2018ರ ಮೇನಲ್ಲಿ ಪ್ರದರ್ಶಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಆದರೆ ಇದನ್ನು ಸಮರ್ಥಿಸಿಕೊಂಡಿದ್ದ ವಿವಿ ವಕ್ತಾರ ಶಫಿ ಕಿದ್ವಾಯಿ, ಜಿನ್ನಾ ಫೋಟೋ ದಶಕಗಳಿಂದಲೂ ವಿಶ್ವವಿದ್ಯಾಲಯಲ್ಲಿದೆ. ಜಿನ್ನಾ ಈ ವಿಶ್ವವಿದ್ಯಾಲಯದ ಸಂಸ್ಥಾಪಕರು ಮತ್ತು ವಿದ್ಯಾರ್ಥಿ ಸಂಘಟನೆಯ ಖಾಯಂ ಸದಸ್ಯರು. ಹೀಗಾಗಿ ಖಾಯಂ ಸದಸ್ಯತ್ವ ಹೊಂದಿದ ಮಹಾತ್ಮ ಗಾಂಧಿ, ಮೌಲಾನಾ ಅಬ್ದುಲ್ ಕಲಾಂ ಆಜಾದ್, ಜಿನ್ನಾ ಸೇರಿದಂತೆ ಅನೇಕ ಫೋಟೋ ಪ್ರದರ್ಶನ ಮಾಡಲಾಗಿದೆ ಎಂದು ತಿಳಿಸಿದ್ದರು.