Tag: mugilpete film

  • ‘ಡ್ರ್ಯಾಗನ್’ ಚಿತ್ರದ ಬಳಿಕ ಹೆಚ್ಚಿದ ಬೇಡಿಕೆ- ‘ಮುಗಿಲ್‌ಪೇಟೆ’ ನಟಿಗೆ ಬಂಪರ್ ಆಫರ್

    ‘ಡ್ರ್ಯಾಗನ್’ ಚಿತ್ರದ ಬಳಿಕ ಹೆಚ್ಚಿದ ಬೇಡಿಕೆ- ‘ಮುಗಿಲ್‌ಪೇಟೆ’ ನಟಿಗೆ ಬಂಪರ್ ಆಫರ್

    ನ್ನಡದ ‘ಮುಗಿಲ್‌ಪೇಟೆ’ (Mugilpete Kannada) ಚಿತ್ರದ ನಟಿ ಕಯಾದು ಲೋಹರ್ (Kayadu Lohar) ಇದೀಗ ಸೌತ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಕಯಾದು ನಟಿಸಿದ ತಮಿಳಿನ ‘ಡ್ರ್ಯಾಗನ್’ (Dragon Film) ಸಿನಿಮಾ ಸಕ್ಸಸ್ ಕಂಡಿದೆ. ಈ ಬೆನ್ನಲ್ಲೇ ಹಲವಾರು ಸಿನಿಮಾ ಅವಕಾಶಗಳು ಅವರನ್ನು ಅರಸಿ ಬಂದಿವೆ. ಸ್ಟಾರ್ ನಟನ ಜೊತೆ ನಟಿಸುವ ಚಾನ್ಸ್ ಸಿಕ್ಕಿದೆ. ಇದನ್ನೂ ಓದಿ:ಜಾನ್ವಿ ಕಪೂರ್‌ಗೆ ವಿಶೇಷ ಉಡುಗೊರೆ ನೀಡಿದ ರಾಮ್ ಚರಣ್ ಪತ್ನಿ

    ಫೆ.21ರಂದು ರಿಲೀಸ್ ಆದ ತಮಿಳಿನ ‘‌ಡ್ರ್ಯಾಗನ್’ ಸಿನಿಮಾದಲ್ಲಿ ಪ್ರದೀಪ್ ರಂಗನಾಥನ್‌ಗೆ ನಾಯಕಿಯಾಗಿ ಗಮನ ಸೆಳೆದಿದ್ದಾರೆ. ಈ ಸಿನಿಮಾ ಯಶಸ್ವಿಯಾಗಿದೆ. ಈ ಬೆನ್ನಲ್ಲೇ ತಮಿಳಿನ ಖ್ಯಾತ ನಟ ಸಿಂಬು (Simbu) ನಟನೆಯ ಹೊಸ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನಲಾದ ವಿಚಾರವೊಂದು ಚರ್ಚೆಗೆ ಗ್ರಾಸವಾಗಿದೆ. ಈ ಚಿತ್ರವನ್ನು ರಾಮ್ ಕುಮಾರ್ ಎಂಬುವವರು ನಿರ್ದೇಶನ ಮಾಡ್ತಿದ್ದಾರೆ.

    ಇನ್ನೂ ತೆಲುಗಿನ ನಟ ವಿಶ್ವಕ್ ಸೇನ್ ನಟನೆಯ ‘ಫಂಕಿ’ ಚಿತ್ರಕ್ಕೂ ಕಯಾದು ಅವರನ್ನೇ ನಾಯಕಿಯಾಗಿ ಸೆಲೆಕ್ಟ್ ಮಾಡಿದ್ದಾರೆ ಎನ್ನಲಾಗಿದೆ. ಈ ಎರಡು ಪ್ರಾಜೆಕ್ಟ್‌ಗಳ ಬಗ್ಗೆ ಅಧಿಕೃತವಾಗಿ ಘೋಷಣೆ ಆಗುವವರೆಗೂ ಕಾದುನೋಡಬೇಕಿದೆ.

    ಸದ್ಯ ಕಯಾದು ತಮಿಳಿನ ‘ಹೃದಯಂ ಮುರಳಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಥರ್ವಗೆ ನಾಯಕಿಯಾಗಿ ಸಾಥ್ ನೀಡುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಭರದಿಂದ ನಡೆಯುತ್ತಿದೆ.

    2021ರಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ನಟನೆಯ ‘ಮುಗಿಲ್‌ಪೇಟೆ’ ಚಿತ್ರಕ್ಕೆ ನಾಯಕಿಯಾಗಿ ಕಯಾದು ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು. ಆ ನಂತರ ಮಲಯಾಳಂ, ತೆಲುಗು, ಮರಾಠಿ ಸಿನಿಮಾಗಳಲ್ಲಿ ನಟಿಸಿದರು. ಈಗ ತೆಲುಗಿನಿಂದಲೂ ಅವಕಾಶಗಳು ಸಿಗುತ್ತಿವೆ.

  • ಎಲ್ಲೂ ವೀಕ್‌ ಆಗದ ನಾನು, ಅಪ್ಪು ನೋಡಲು ಹೋದಾಗ ತುಂಬಾ ವೀಕ್‌ ಆದೆ: ರವಿಚಂದ್ರನ್‌ ಭಾವುಕ

    ಎಲ್ಲೂ ವೀಕ್‌ ಆಗದ ನಾನು, ಅಪ್ಪು ನೋಡಲು ಹೋದಾಗ ತುಂಬಾ ವೀಕ್‌ ಆದೆ: ರವಿಚಂದ್ರನ್‌ ಭಾವುಕ

    ಬೆಂಗಳೂರು: ಅಪ್ಪು ನೋಡಲು ವಿಕ್ರಂ ಆಸ್ಪತ್ರೆಗೆ ಹೋಗುತ್ತಿದ್ದಾಗ ಬಹಳ ವೀಕ್‌ ಆದೆ ಎಂದು ಪುನೀತ್‌ ರಾಜ್‌ಕುಮಾರ್‌ ನೆನೆದು ಹಿರಿಯ ನಟ ರವಿಚಂದ್ರನ್‌ ಭಾವುಕರಾದರು.

    ಮುಗಿಲುಪೇಟೆ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದುವರೆಗೂ ನಾನು ಎಲ್ಲೂ ವೀಕ್‌ ಆಗಿರಲಿಲ್ಲ. ಆದರೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಡಬ್ಬಿಂಗ್‌ ಮಾಡಿ ಪುನೀತ್‌ ನೋಡಲು ವಿಕ್ರಮ್‌ ಆಸ್ಪತ್ರೆಗೆ ಹೋಗುತ್ತಿದ್ದಾಗ ಜೀವನದಲ್ಲಿ ಬಹಳ ವೀಕ್‌ ಆದೆ ಎಂದರು. ಇದನ್ನೂ ಓದಿ: ರಾಜ್‍ಕುಮಾರ್ ಕುಟುಂಬ ನಮ್ಮ ಮನೆಗೆ ಊಟಕ್ಕೆ ಬಂದಿದ್ದರು: ಜಮೀರ್ ಪುತ್ರ ಝೈದ್ ಖಾನ್

    ನಾವು ಇರೋವರೆಗೂ ಅವರನ್ನು ಮರೆಯೊಲ್ಲ. ಆದರೆ ಈಗ ಅನ್ನಿಸ್ತಿದೆ ನಾವು ಸಾಯೋವರೆಗೂ ಆ ನೋವು ಮರೆಯೋಕಾಗಲ್ಲ ಅಂತ. ಅಪ್ಪು ಮಗುವಾಗಿ ಬಂದ ಮಗುವಾಗೇ ಹೋದ ಎಂದು ನೆನೆದು ರವಿಚಂದ್ರನ್‌ ಭಾವುಕರಾದರು. ಇದನ್ನೂ ಓದಿ: ರಾಜ್ ಕುಟುಂಬದಲ್ಲಿ 20-23 ವರ್ಷಕ್ಕೆ ಮತ್ತೊಬ್ಬ ಸೂಪರ್ ಸ್ಟಾರ್ ಹುಟ್ಟಿ ಬರ್ತಾನೆ: ಜಗ್ಗೇಶ್

    ಆವತ್ತು ನಾನು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಡಬ್ಬಿಂಗ್‌ನಲ್ಲಿದ್ದೆ. ಒಂದ್ಕಡೆ ತಾಯಿಗೆ ಹುಷಾರಿಲ್ಲ ಅಂತ ಫೋನ್ ಬರುತ್ತೆ. ಇನ್ನೊಂದ್ಕಡೆ ಅಪ್ಪು ಆಸ್ಪತ್ರೆ ಸೇರಿದ್ದಾರೆ ಅಂತ ಫೋನ್ ಬರುತ್ತೆ. ಆಗ ನನಗೆ ಏನ್ ಮಾಡ್ಲಿ ಗೊತ್ತಾಗ್ಲಿಲ್ಲ. ಹೆಂಡತಿಗೆ ಫೋನ್ ಮಾಡಿ ಹೇಳಿದೆ, ಅಮ್ಮನ್ನ ನೋಡ್ಕೊ ಅಂತ. ನಾನು ವಿಕ್ರಂ ಆಸ್ಪತ್ರೆಗೆ ಹೋದೆ. ಆಗ ನಾನು ವೀಕ್ ಆದೆ. ನನಗೆ ಹಿಂದಿನಿಂದಲೂ ರಾಜ್‌ಕುಮಾರ್ ಕುಟುಂಬ ತೀರಾ ಹತ್ತಿರದ್ದು. ಇನ್ನು ಏನೇನೋ ಸಾಧನೆ ಮಾಡ್ತಿದ್ದ ಅಪ್ಪು, ಆದರೆ ಹೀಗಾಗೋಯ್ತು ಎಂದು ದುಃಖಿಸಿದರು.