Tag: mufti film

  • ಧ್ರುವ ಸರ್ಜಾಗೆ ‘ಭೈರತಿ ರಣಗಲ್’ ಡೈರೆಕ್ಟರ್ ಆ್ಯಕ್ಷನ್ ಕಟ್

    ಧ್ರುವ ಸರ್ಜಾಗೆ ‘ಭೈರತಿ ರಣಗಲ್’ ಡೈರೆಕ್ಟರ್ ಆ್ಯಕ್ಷನ್ ಕಟ್

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ‘ಕೆಡಿ’ ಚಿತ್ರದ (KD Film) ಶೂಟಿಂಗ್‌ಗಾಗಿ ವಿದೇಶಕ್ಕೆ ತೆರಳಿದ್ದಾರೆ. ಈ ನಡುವೆ ಅವರ ಮುಂಬರುವ ಚಿತ್ರದ ಬಗ್ಗೆ ಹೊಸ ಅಪ್‌ಡೇಟ್‌ವೊಂದು ಸಿಕ್ಕಿದೆ. ‘ಭೈರತಿ ರಣಗಲ್’ (Bhairathi Rangal) ನಿರ್ದೇಶಕ ನರ್ತನ್ ಜೊತೆ ಧ್ರುವ ಹೊಸ ಚಿತ್ರಕ್ಕಾಗಿ ಕೈಜೋಡಿಸಿದ್ದಾರೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ. ಇದನ್ನೂ ಓದಿ: ಹಣ, ಅಧಿಕಾರದ ಸುತ್ತ ‘ಕುಬೇರ’- ಟೀಸರ್‌ನಲ್ಲಿ ಮಿಂಚಿದ ಧನುಷ್, ರಶ್ಮಿಕಾ

    ಕೆವಿಎನ್ ಪ್ರೊಡಕ್ಷನ್ ಸಾರಥ್ಯದಲ್ಲಿ ಧ್ರುವ ಮತ್ತು ನರ್ತನ್ ಕಾಂಬಿನೇಷನ್‌ನಲ್ಲಿ ಸಿನಿಮಾ ಮೂಡಿ ಬರಲಿದೆ ಎಂಬುದು ಸದ್ಯದ ಟಾಕ್. ಮಫ್ತಿ, ಭೈರತಿ ರಣಗಲ್ ಚಿತ್ರ ನಿರ್ದೇಶನ ಮಾಡಿ ಗೆದ್ದಿರುವ ನರ್ತನ್ ಈಗ ಧ್ರುವಗೆ ನಿರ್ದೇಶನ ಮಾಡಲು ತಯಾರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:‘ಅನಿಮಲ್’ ನಟಿಗೆ ಬಂಪರ್ ಆಫರ್- ಪ್ರಭಾಸ್‌ಗೆ ನಾಯಕಿಯಾದ ತೃಪ್ತಿ ದಿಮ್ರಿ

    ಮೂಲಗಳ ಪ್ರಕಾರ, ನರ್ತನ್ (Narthan) ಚಿತ್ರದ ಕಥೆ ಬರೆಯುತ್ತಿದ್ದು, ಪ್ರಾರಂಭಿಕ ಹಂತದಲ್ಲಿದೆ. ವಿದೇಶದಲ್ಲಿರುವ ಧ್ರುವ ವಾಪಸ್ ಬಂದ್ಮೇಲೆ ಹೊಸ ಸಿನಿಮಾದ ಬಗ್ಗೆ ಮಾತುಕತೆ ನಡೆಯಲಿದೆ. ಆ ನಂತರ ಚಿತ್ರದ ಬಗ್ಗೆ ಹೆಚ್ಚಿನ ಅಪ್‌ಡೇಟ್ ಸಿಗಲಿದೆ ಎಂಬುದು ಸದ್ಯದ ಅಪ್‌ಡೇಟ್.

    ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟಿರುವ ನಿರ್ದೇಶಕ ಮತ್ತು ಧ್ರುವ ಜೊತೆಯಾದ್ರೆ ಸಿನಿಮಾ ಸಖತ್ ಆಗಿರುತ್ತದೆ ಎಂಬುದು ಅಭಿಮಾನಿಗಳ ಲೆಕ್ಕಚಾರ. ಹೀಗಾಗಿ ಇಬ್ಬರೂ ಒಟ್ಟಿಗೆ ಚಿತ್ರ ಮಾಡಲಿ, ಬೇಗ ಚಿತ್ರದ ಬಗ್ಗೆ ಗುಡ್ ನ್ಯೂಸ್ ಕೊಡಲಿ ಎಂದು ಫ್ಯಾನ್ಸ್ ಕಾಯ್ತಿದ್ದಾರೆ.

  • ಶಿವಣ್ಣ ನಟನೆಯ ‘ಬೈರತಿ ರಣಗಲ್‌’ ಸಿನಿಮಾದ ಬಿಗ್‌ ಅಪ್‌ಡೇಟ್

    ಶಿವಣ್ಣ ನಟನೆಯ ‘ಬೈರತಿ ರಣಗಲ್‌’ ಸಿನಿಮಾದ ಬಿಗ್‌ ಅಪ್‌ಡೇಟ್

    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shivarajkumar) ಅವರು ‘ವೇದ’ (Vedha) ಸೂಪರ್ ಸಕ್ಸಸ್ ನಂತರ ಕನ್ನಡ- ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾದ್ರೆ ಇತ್ತೀಚಿಗೆ ಅನೌನ್ಸ್ ಮಾಡಿದ್ದ ‘ಬೈರತಿ ರಣಗಲ್’ (Bhairathi Rangal) ಸಿನಿಮಾ ಶೂಟಿಂಗ್ ಯಾವಾಗ? ಶಿವಣ್ಣ ಜೋಡಿಯಾಗೋ ಆ ಲಕ್ಕಿ ನಟಿ ಯಾರು.? ಈ ಕುರಿತ ಅಪ್‌ಡೇಟ್ ಇಲ್ಲಿದೆ.

    ನರ್ತನ್ ನಿರ್ದೇಶನದ ‘ಮಫ್ತಿ’ (Mufti) ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಶೇಕ್ ಆಗಿತ್ತು. ಈ ಚಿತ್ರದ ಪ್ರೀಕ್ವೆಲ್‌ಗೆ ಸಿದ್ಧತೆ ಭರದಿಂದ ಸಾಗುತ್ತಿದೆ. 5 ವರ್ಷಗಳ ನಂತರ ಈ ಚಿತ್ರದ ಮೂಲಕ ಮತ್ತೆ ನರ್ತನ್- ಶಿವಣ್ಣ ಕಾಂಬೋ ಒಂದಾಗುತ್ತಿದೆ. ‘ಮಫ್ತಿ’ ಚಿತ್ರದಲ್ಲಿ ಮಾಫಿಯಾ ಡಾನ್ ‘ಬೈರತಿ ರಣಗಲ್ ಅವತಾರದಲ್ಲಿ ಶಿವಣ್ಣ ಅಬ್ಬರಿಸಿದ್ದರು. ರಾಕ್ಷಸನಂತಹ ಆತ ಪಾತ್ರ ಕುತೂಹಲ ಕೆರಳಿಸಿತ್ತು. ಆದರೆ ಆತ ನಿಜಕ್ಕೂ ಅಷ್ಟು ಕ್ರೂರಿ ಆಗಿದ್ದು ಯಾಕೆ? ಆತನ ಹಿನ್ನೆಲೆ ಏನು ಎನ್ನುವ ಕಥೆ ಈ ಭಾಗದಲ್ಲಿ ರಿವೀಲ್ ಆಗಲಿದೆ. ಸದ್ಯ ಚಿತ್ರತಂಡ ನಾಯಕಿಯ ಹುಡುಕಾಟ ನಡೆಸುತ್ತಿರುವುದಾಗಿ ನಿರ್ದೇಶಕರು ಹೇಳಿದ್ದಾರೆ. ನಾಯಕಿ (Heroine)  ಸಿಕ್ಕಿದ ಕೂಡಲೇ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ. ಬೈರತಿ ರಣಗಲ್ ಜೋಡಿ ಯಾರಾಗ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಇದನ್ನೂ ಓದಿ:ಪತಿ- ಮಗುವಿನೊಂದಿಗೆ ಮೆಕ್ಕಾ ಮದೀನಾಗೆ ಸಂಜನಾ ಗಲ್ರಾನಿ ಭೇಟಿ

    ನಾಯಕಿಯ ಹುಡುಕಾಟ ನಡೆಸುತ್ತಿರುವ ಚಿತ್ರತಂಡ, ಮತ್ತೊಂದು ಕಡೆ ಚಿತ್ರೀಕರಣಕ್ಕೆ ಬೇಕಾದ ತಯಾರಿ ಆರಂಭಿಸಿದೆ. ಜೂನ್ 16ರಿಂದ ಶೂಟಿಂಗ್ ಶುರುವಾಗುವ ಸಾಧ್ಯತೆಯಿದೆ ಎಂದು ನರ್ತನ್ ಮಾಹಿತಿ ನೀಡಿದ್ದಾರೆ. ‘ಮಫ್ತಿ’ ಚಿತ್ರಕ್ಕೆ ಕೆಲಸ ಮಾಡಿದ ಬಹುತೇಕ ತಂಡ ಈ ಚಿತ್ರಕ್ಕೂ ಕೆಲಸ ಮಾಡಲಿದೆ. ‘ವೇದ’ (Vedha) ಸಿನಿಮಾ ಗೆದ್ದಿರುವ ಗೀತಾ ಶಿವರಾಜ್‌ಕುಮಾರ್ ‘ಬೈರತಿ ರಣಗಲ್’ ಚಿತ್ರಕ್ಕೂ ಬಂಡವಾಳ ಹೂಡುತ್ತಿದ್ದಾರೆ.

    ಶಿವಣ್ಣ ಆರೇಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನರ್ತನ್ ರಾಮ್ ಚರಣ್ ಜೊತೆ ಸಿನಿಮಾ ಮಾಡಲು ತಯಾರಿ ನಡೆಸುತ್ತಿದ್ದಾರೆ. ಇದರ ನಡುವೆ ಬೈರತಿ ರಣಗಲ್ ಕೆಲಸ ಕೂಡ ನಡೆಯುತ್ತಿದೆ. ಒಟ್ನಲ್ಲಿ ಶಿವಣ್ಣ- ನರ್ತನ್ ಕಾಂಬೋ ಸಿನಿಮಾ ನೋಡಲು ಫ್ಯಾನ್ಸ್ ಎದುರು ನೋಡ್ತಿದ್ದಾರೆ.