Tag: Mudigere

  • ಹೋಂ ಸ್ಟೇ ಬಾತ್‌ ರೂಮ್‌ನಲ್ಲಿ ಯುವತಿ ಅನುಮಾನಾಸ್ಪದ ಸಾವು

    ಹೋಂ ಸ್ಟೇ ಬಾತ್‌ ರೂಮ್‌ನಲ್ಲಿ ಯುವತಿ ಅನುಮಾನಾಸ್ಪದ ಸಾವು

    ಚಿಕ್ಕಮಗಳೂರು: ಹೋಂ ಸ್ಟೇ (Homestay) ಬಾತ್ ರೂಂನಲ್ಲಿ ಸ್ನಾನಕ್ಕೆಂದು ತೆರಳಿದ್ದ ಯುವತಿ ಕುಸಿದು ಬಿದ್ದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೂಡಿಗೆರೆ (Mudigere) ತಾಲೂಕಿನ ಹಾಂದಿ ಗ್ರಾಮದಲ್ಲಿ ನಡೆದಿದೆ.

    ಮೃತಳನ್ನ ಹಾಸನ (Hassan) ಜಿಲ್ಲೆಯ ಬೇಲೂರು ತಾಲೂಕಿನ ದೇವಾಲಾಪುರ ಗ್ರಾಮದ ರಂಜಿತಾ (27) ಎಂದು ಗುರುತಿಸಲಾಗಿದೆ. ಮೃತ ರಂಜಿತಾ ದಾವಣಗೆರೆ ಮೂಲದ ಗೆಳತಿ ರೇಖಾ ಅವರೊಂದಿಗೆ ಶುಕ್ರವಾರ ಸಂಜೆ ಹೋಂ ಸ್ಟೇನಲ್ಲಿ ತಂಗಿದ್ದರು. ಸ್ನೇಹಿತೆಯೊಬ್ಬಳ ನಿಶ್ಚಿತಾರ್ಥಕ್ಕಾಗಿ ರಂಜಿತಾ ಮತ್ತು ರೇಖಾ ಬೆಂಗಳೂರಿನಿಂದ ಬಂದಿದ್ದರು. ಇದನ್ನೂ ಓದಿ: ಜಗಳವಾಡಿ ನಾಲ್ಕು ಮಕ್ಕಳ ತಾಯಿಯ ಹತ್ಯೆಗೈದ ಲವ್ವರ್ – ಕೆಟ್ಟು ನಿಂತಿರೋ ಆಟೋದಲ್ಲಿ ಹೆಣ ಬಿಸಾಕಿ ಎಸ್ಕೇಪ್

    ಶನಿವಾರ (ಅ.25) ಬೆಳಗ್ಗೆ ರೇಖಾ ಸ್ನಾನ ಮಾಡಿ ಬಂದ ನಂತರ ರಂಜಿತಾ ಸ್ನಾನಕ್ಕೆ ತೆರಳಿದ್ದರು. ತುಂಬಾ ಹೊತ್ತಾದರೂ ಅವರು ಹೊರ ಬಾರದಿದ್ದಾಗ ಮತ್ತು ನಲ್ಲಿಯ ನೀರು ಹರಿಯುವ ಶಬ್ದ ನಿರಂತರವಾಗಿ ಕೇಳುತ್ತಿದ್ದಾಗ ರೇಖಾ ಅವರು ಬಾಗಿಲು ಬಡಿದಿದ್ದಾರೆ. ಆದರೆ, ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಕಿಟಕಿಯಿಂದ ನೋಡಿದಾಗ ರಂಜಿತಾ ಸ್ನಾನಗೃಹದಲ್ಲಿ ಕುಸಿದು ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಹೋಂ ಸ್ಟೇ ಸಿಬ್ಬಂದಿಗೆ ಮಾಹಿತಿ ನೀಡಿ ಬಾಗಿಲು ಒಡೆದು ನೋಡಿದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರಂಜಿತಾರನ್ನು ಮೂಡಿಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ವೈದ್ಯರು ಯುವತಿ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.

    ರಂಜಿತಾ ಅವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ನಾನಗೃಹದಲ್ಲಿ ಗ್ಯಾಸ್ ಗೀಸರ್ ಇದ್ದಿದ್ದರಿಂದ ಗ್ಯಾಸ್ ಸೋರಿಕೆಯಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಸ್ನಾನಗೃಹದಲ್ಲಿ ಸೂಕ್ತ ವೆಂಟಿಲೇಟರ್ ವ್ಯವಸ್ಥೆ ಇದ್ದು, ಗ್ಯಾಸ್ ಸೋರಿಕೆಯ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.‌ ಯುವತಿ ಹೃದಯಾಘಾತದಿಂದ ಸಾವನ್ನಪ್ಪಿರಬಹುದಾ? ಅಥವಾ ಬೇರೇನು ಕಾರಣ ಎಂಬುದು ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಗೊತ್ತಾಗಬೇಕಿದೆ. ಈ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪತ್ನಿ ಜೊತೆ ಜಗಳ; ಅವಳಿ ಮಕ್ಕಳ ಕತ್ತು ಸೀಳಿ ಹತ್ಯೆ ಮಾಡಿದ ಪಾಪಿ

  • ಚಿಕ್ಕಮಗಳೂರು | ಮದ್ಯ ಕುಡಿದು ನನ್ನ ಬಳಿ ಬರಬೇಡಿ – ವಾಹನ ಸವಾರರಿಗೆ ಯಮರಾಜನ ಎಚ್ಚರಿಕೆ!

    ಚಿಕ್ಕಮಗಳೂರು | ಮದ್ಯ ಕುಡಿದು ನನ್ನ ಬಳಿ ಬರಬೇಡಿ – ವಾಹನ ಸವಾರರಿಗೆ ಯಮರಾಜನ ಎಚ್ಚರಿಕೆ!

    ಚಿಕ್ಕಮಗಳೂರು: ಕರ್ನಾಟಕದಲ್ಲಿ ರಸ್ತೆಗಳು ಚೆನ್ನಾಗಿವೆಯೋ ಇಲ್ಲವೋ, ಸರ್ಕಾರ ಬಡವರಿಗೆ ಒಳ್ಳೆಯ ಅಕ್ಕಿ ನೀಡುತ್ತಿದೆಯೋ ಇಲ್ಲವೋ ಎಂದು ದೇವಲೋಕದ ಯಮರಾಜ ಹಾಗೂ ಚಿತ್ರಗುಪ್ತ ಕಾಫಿನಾಡಿಗೆ (Chikkamagaluru) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ! ಅಲ್ಲದೇ ಕುಡಿದು ವಾಹನ ಚಾಲನೆ ಮಾಡುವವರು, ರಸ್ತೆಗುಂಡಿಗಳ ಬಗ್ಗೆಯೂ ಜಾಗೃತಿ ಮೂಡಿಸಿದ್ದಾರೆ.

    ಮೂಡಿಗೆರೆ (Mudigere) ತಾಲೂಕಿನ ನಿಡುವಾಳೆ ಗ್ರಾಮದ ರಸ್ತೆಗಳ ಪರಿಸ್ಥಿತಿ ಕಂಡು ನಿಡುವಾಳೆ ಗ್ರಾಮ ಪಂಚಾಯಿತಿ ಸದಸ್ಯ ನವೀನ್ ಹಾವಳಿ ಹಾಗೂ ಖಾಸಗಿ ವಾಹಿನಿಯ ʻಕಾಮಿಡಿ ಕಿಲಾಡಿಗಳುʼ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಮೇಶ್ ಯಾದವ್ ಈ ಪ್ರಯೋಗ ಮಾಡಿದ್ದಾರೆ. ಇಬ್ಬರೂ ಯಮರಾಜ ಹಾಗೂ ಚಿತ್ರಗುಪ್ತನ ವೇಷ ಧರಿಸಿ ಗುಂಡಿಗಳನ್ನ ಅಳತೆ ಮಾಡಿ ದಾಖಲು ಮಾಡಿಕೊಂಡಿದ್ದಾರೆ. ಈ ಮೂಲಕ ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ ಶಾಸಕ ಟಿ.ಡಿ.ರಾಜೇಗೌಡ ಮನೆ ಮೇಲೆ ಲೋಕಾಯುಕ್ತ ದಾಳಿ

    ರಾಜ್ಯಾದ್ಯಂತ ರಸ್ತೆಗಳು ತೀವ್ರ ಗುಂಡಿ ಬಿದ್ದು ಜನ ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಇದರಿಂದ ಈ ವಿನೂತನ ಪ್ರಯೋಗಕ್ಕೆ ಇಬ್ಬರು ಮುಂದಾಗಿದ್ದಾರೆ. ಜೊತೆಗೆ ಹಳ್ಳಿಗಳ ಸೊಸೈಟಿಗೆ ತೆರಳಿದ್ದ ಯಮರಾಜ-ಚಿತ್ರಗುಪ್ತರು ಸೊಸೈಟಿಯಲ್ಲಿ ಅಕ್ಕಿಯನ್ನೂ ಚೆಕ್ ಮಾಡಿದ್ದಾರೆ. ಸೊಸೈಟಿಯಲ್ಲಿ ಅಕ್ಕಿ ಚೀಲದ ಆಳಕ್ಕೆ ಕೈಹಾಕಿ ಅಕ್ಕಿ ಗುಣಮಟ್ಟದ ಬಗ್ಗೆಯೂ ತಪಾಸಣೆ ನಡೆಸಿದ್ದಾರೆ.

    ವಾಹನಗಳನ್ನ ಚಾಲನೆ ಮಾಡುವಾಗ ಮದ್ಯ ಕುಡಿದು ಚಾಲನೆ ಮಾಡುವುದರಿಂದ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ. ಯುವಜನತೆ ಪ್ರಾಣ ಕೂಡ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕಾಗಿ ಮದ್ಯ ಸೇವಿಸಿ ವಾಹನ ಚಾಲನೆ ಮಾಡಿ ಯಾರೂ ನನ್ನ ಬಳಿ ಬರಬೇಡಿ ಎಂದು ʻಯಮʼ ಎಚ್ಚರಿಕೆ ನೀಡಿದ್ದಾನೆ.

    ಆಗ ನಿಡುವಾಳೆ ಗ್ರಾಮದ ಜನ ರಸ್ತೆ ತುಂಬಾ ಹಾಳಾಗಿದೆ. ನಾವು ಮದ್ಯಸೇವಿಸದೆ ವಾಹನ ಚಾಲನೆ ಮಾಡಿದರೂ ಗುಂಡಿಗಳಿಗೆ ಬಿದ್ದು ಜನ ಸಾಯ್ತಿದ್ದಾರೆ. ಕೆಲವರು ಕೈಕಾಲು ಮುರಿದುಕೊಳ್ಳುತ್ತಿದ್ದಾರೆ ಎಂದು ಯಮರಾಜನಿಗೆ ತಮ್ಮೂರಿನ ರಸ್ತೆ ಬಗ್ಗೆ ತಮಾಷೆಯಾಗಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರು | ಮಲೆನಾಡಿಗರ ಸ್ಪೆಷಲ್‌ ಬರಗಾಪಿಗೆ ಮನಸೋತ ಪ್ರವಾಸಿಗರು!

  • ಚಿಕ್ಕಮಗಳೂರು |  ಬ್ರೆಡ್‌ ಜೊತೆ ಮತ್ತು ಬರೋ ಔಷಧಿ ತಿನ್ನಿಸಿ ದನ ಕದ್ದೊಯ್ದ ಕಳ್ಳರು

    ಚಿಕ್ಕಮಗಳೂರು | ಬ್ರೆಡ್‌ ಜೊತೆ ಮತ್ತು ಬರೋ ಔಷಧಿ ತಿನ್ನಿಸಿ ದನ ಕದ್ದೊಯ್ದ ಕಳ್ಳರು

    ಚಿಕ್ಕಮಗಳೂರು: ಬ್ರೆಡ್‌ಗೆ ಮತ್ತು ಬರೋ ಔಷಧಿ ಬೆರಸಿ ತಿನ್ನಿಸಿ, ದನಗಳನ್ನು ಕದ್ದು ಸಾಗಿಸಿದ ಘಟನೆ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಆಸ್ಪತ್ರೆ ಮುಂಭಾಗ ಕಳ್ಳತನ ನಡೆದಿದ್ದು, ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಕಳ್ಳರು ಹಸುಗಳಿಗೆ ಬ್ರೆಡ್‌ನಲ್ಲಿ ಮತ್ತು ತರಿಸುವ ವಸ್ತು ಹಾಕಿ ತಿನ್ನಿಸಿದ್ದಾರೆ. ಬಳಿಕ ಅವು ಮಂಕಾದ ಬಳಿಕ ಅವುಗಳನ್ನು ರಿಟ್ಜ್‌ ಕಾರಿನಲ್ಲಿ ತುಂಬಿದ್ದಾರೆ. ಬಳಿಕ ಕಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ. ಚಿಕ್ಕಮಗಳೂರಿನ ಭಾಗದಲ್ಲಿ ದನಗಳ ಕಳ್ಳತನ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. ಅದರಲ್ಲೂ ವಿಶೇಷವಾಗಿ ರಸ್ತೆ ಬದಿ ಮಲಗುವ ಬಿಡಾಡಿ ದನಗಳೇ ಕಳ್ಳರ ಪ್ರಮುಖ ಟಾರ್ಗೆಟ್ ಆಗಿವೆ. ಇದನ್ನೂ ಓದಿ: ತೀರ್ಪಿಗೂ ಹಿಂದಿನ ದಿನ ಬನ್ನಾರಿಗೆ ದರ್ಶನ್ ಭೇಟಿ

    ಈ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಅಲ್ಲದೇ ರಾತ್ರಿ ವೇಳೆ ಪೊಲೀಸರು ಅನುಮಾನಾಸ್ಪದ ವಾಹನಗಳನ್ನು ತಡೆದು ತಪಾಸಣೆ ನಡೆಸಬೇಕು ಎಂದು ಆಗ್ರಸಿದ್ದಾರೆ. ಇದನ್ನೂ ಓದಿ: ಜಾಮೀನು ರದ್ದು ಬೆನ್ನಲ್ಲೇ ದರ್ಶನ್‌ ಆಪ್ತ ಪ್ರದೂಷ್ ಅರೆಸ್ಟ್‌

  • ಅನ್ಯಕೋಮಿನ ಯುವಕನ ಜೊತೆ ವಿವಾಹಿತೆ ಪರಾರಿ – ಹಿಂದೂ ಮುಖಂಡರಿಂದ ಪ್ರತಿಭಟನೆ

    ಅನ್ಯಕೋಮಿನ ಯುವಕನ ಜೊತೆ ವಿವಾಹಿತೆ ಪರಾರಿ – ಹಿಂದೂ ಮುಖಂಡರಿಂದ ಪ್ರತಿಭಟನೆ

    ಚಿಕ್ಕಮಗಳೂರು: ಮೂಡಿಗೆರೆಯ (Mudigere) ಬಣಕಲ್ ಪೊಲೀಸ್ (Banakal Police) ಠಾಣೆ ವ್ಯಾಪ್ತಿಯಲ್ಲಿ ವಿವಾಹಿತ ಮಹಿಳೆಯೊಬ್ಬಳು ಅನ್ಯಕೋಮಿನ ಯುವಕನ ಜೊತೆ ಪರಾರಿಯಾಗಿದ್ದು, ಹಿಂದೂ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ.

    2 ವರ್ಷದ ಹಿಂದೆ ಮದುವೆಯಾಗಿದ್ದ 22 ವರ್ಷದ ಮಹಿಳೆ ಅನ್ಯಕೋಮಿನ ಯುವಕನ ಜೊತೆ ಪರಾರಿಯಾಗಿದ್ದಳು. ಈ ಸಂಬಂಧ ಮಹಿಳೆಯ ಪತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನನ್ವಯ ಬಣಕಲ್ ಪೊಲೀಸರು ಮಹಿಳೆಯನ್ನು ಪತ್ತೆ ಮಾಡಿ, ಪೊಲೀಸ್ ಠಾಣೆಗೆ ಕರೆತಂದಿದ್ದರು. ಇದನ್ನೂ ಓದಿ: ಮನೆಯವರಿಂದ ನನ್ನನ್ನು ಕಾಪಾಡು – ಬಾಯ್‌ಫ್ರೆಂಡ್‌ಗೆ ಮೆಸೇಜ್‌ ಕಳಿಸಿದವಳು ಶವವಾಗಿ ಪತ್ತೆ

    ಈ ವಿಚಾರ ಗೊತ್ತಾಗುತ್ತಿದ್ದಂತೆ ಪೊಲೀಸ್ ಠಾಣೆಯ ಮುಂದೆ ಹಿಂದೂ ಮುಖಂಡರು ಜಮಾಯಿಸಿದ್ದರು. ಈ ವೇಳೆ ಹಿಂದೂ ಮುಖಂಡರಿಗೆ ಠಾಣೆಯ ಒಳಗೆ ಬರದಂತೆ ತಡೆಯಲು ಗೇಟ್ ಬಂದ್ ಮಾಡಲಾಗಿದೆ. ಇದರಿಂದ ಹಿಂದೂ ಸಂಘಟನೆಯ ಮುಖಂಡರು ರಸ್ತೆ ತಡೆದು ಪ್ರತಿಭಟನೆ (Protest) ನಡೆಸಿದ್ದಾರೆ. ಸಂಘಟಕರು- ಗ್ರಾಮಸ್ಥರ ಮನವೊಲಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ. ಠಾಣೆ ಮುಂಭಾಗಕ್ಕೆ ಬಿಡುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಟ್ಟಿದ್ದಾರೆ.

    ಈ ಘಟನೆಯಿಂದ ಬಣಕಲ್ ಗ್ರಾಮದಲ್ಲಿ ಬೂದಿಮುಚ್ಚಿದ ಕೆಂಡದಂತಹ ವಾತಾವರಣ ನಿರ್ಮಾಣವಾಗಿದೆ. ಇದನ್ನೂ ಓದಿ: ಜಾಮೀನು ರದ್ದು ಬೆನ್ನಲ್ಲೇ ದರ್ಶನ್‌ ಆಪ್ತ ಪ್ರದೂಷ್ ಅರೆಸ್ಟ್‌

  • ಟ್ರಾನ್ಸ್‌ಫಾರ್ಮರ್ ದುರಸ್ಥಿ ವೇಳೆ ವಿದ್ಯುತ್ ಶಾಕ್ – 20 ಅಡಿ ಎತ್ತರದಿಂದ ಬಿದ್ದ ಲೈನ್ ಮ್ಯಾನ್

    ಟ್ರಾನ್ಸ್‌ಫಾರ್ಮರ್ ದುರಸ್ಥಿ ವೇಳೆ ವಿದ್ಯುತ್ ಶಾಕ್ – 20 ಅಡಿ ಎತ್ತರದಿಂದ ಬಿದ್ದ ಲೈನ್ ಮ್ಯಾನ್

    – ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ಚಿಕ್ಕಮಗಳೂರು:  ಟ್ರಾನ್ಸ್‌ಫಾರ್ಮರ್ ದುರಸ್ಥಿ ವೇಳೆ ವಿದ್ಯುತ್ ಶಾಕ್ ಹೊಡೆದು (Electric Shock), 20 ಅಡಿ ಎತ್ತರದ ಕಂಬದಿಂದ ಲೈನ್ ಮ್ಯಾನ್ ಬಿದ್ದು ಗಾಯಗೊಂಡ ಘಟನೆ ಮೂಡಿಗೆರೆ (Mudigere) ತಾಲೂಕಿನ ಜನ್ನಾಪುರ ಗ್ರಾಮದಲ್ಲಿ ನಡೆದಿದೆ.

    ಗಾಯಗೊಂಡ ಲೈನ್ ಮ್ಯಾನ್‍ನ್ನು ಬಳ್ಳಾರಿ (Ballari) ಮೂಲದ ಪ್ರಕಾಶ್ ಎಂದು ಗುರುತಿಸಲಾಗಿದೆ. ಪ್ರಕಾಶ್ ಅವರು ಕಂಬದಿಂದ ಬೀಳುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಂಬ ಹತ್ತಿ ಲೈನ್ ಸರಿಪಡಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.‌ ಇದನ್ನೂ ಓದಿ: ಬಾಗಲಕೋಟೆ ನಡುರಸ್ತೆಯಲ್ಲಿ ಗೂಳಿಗಳ ಕಾದಾಟ – ವಾಹನಗಳು ಜಖಂ

    ಗಾಯಾಳುವನ್ನು ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಗೋಣಿಬೀಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ಮೂಡಿಗೆರೆ | ಹೆಚ್ಚಿದ ಕಾಡಾನೆ ಉಪಟಳ – ಓಡಿಸಲು ಅನುಮತಿ ಇಲ್ಲ ಎಂದ ಅಧಿಕಾರಿಗಳು!

  • ಮೂಡಿಗೆರೆ | ಹೆಚ್ಚಿದ ಕಾಡಾನೆ ಉಪಟಳ – ಓಡಿಸಲು ಅನುಮತಿ ಇಲ್ಲ ಎಂದ ಅಧಿಕಾರಿಗಳು!

    ಮೂಡಿಗೆರೆ | ಹೆಚ್ಚಿದ ಕಾಡಾನೆ ಉಪಟಳ – ಓಡಿಸಲು ಅನುಮತಿ ಇಲ್ಲ ಎಂದ ಅಧಿಕಾರಿಗಳು!

    ಚಿಕ್ಕಮಗಳೂರು: ಮೂಡಿಗೆರೆ (Mudigere) ತಾಲೂಕಿನ ಕುನ್ನಳ್ಳಿ ಗ್ರಾಮದಲ್ಲಿ ಕಾಡಾನೆಗಳ (Elephan) ಉಪಟಳ ಮಿತಿ ಮೀರಿದೆ. ಕಾಫಿತೋಟದಲ್ಲಿ ಕಾಡಾನೆಗಳ ಓಡಾಡಿ ಧ್ವಂಸ ಮಾಡಿವೆ. ಈ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ತರಲಾಗಿದ್ದು, ಅರಣ್ಯ ಇಲಾಖೆ (Forest Department) ಅಧಿಕಾರಿಗಳು ಕಾಡಾನೆ ಓಡಿಸಲು ಅನುಮತಿ ಇಲ್ಲ ಎಂದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ಕಾಡಾನೆಗಳು ಧರ್ಮಪಾಲ್, ರವೀಂದ್ರ, ಶ್ರೀಕಾಂತ್ ಹಾಗೂ ರವಿ ಎಂಬವರ ಕಾಫಿತೋಟಗಳನ್ನು ಧ್ವಂಸಗೊಳಿಸಿವೆ. ಗ್ರಾಮ ಹಾಗೂ ರಾಜ್ಯ ಹೆದ್ದಾರಿಯಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ಹಿಂದೆ ವ್ಯಕ್ತಿಯೊಬ್ಬರ ಮೇಲೆ ದಾಳಿಯಾಗಿತ್ತು. ಇಷ್ಟಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರು | ಕಾಡಾನೆ ದಾಳಿಗೆ ಮಹಿಳೆ ಬಲಿ

    ತೋಟ-ಗ್ರಾಮಗಳಲ್ಲಿ ಕಾಡಾನೆ ಓಡಾಟದಿಂದ ಸ್ಥಳೀಯರು ಅತಂಕಕೊಳಗಾಗಿದ್ದಾರೆ. ಇದರಿಂದ ದಿನನಿತ್ಯದ ಕೆಲಸ ಕಾರ್ಯಗಳಿಗೆ ಸಮಸ್ಯೆಯಾಗುತ್ತಿದೆ. ಕಾಡಾನೆ ಸ್ಥಳಾಂತರಿಸಲು ಹಾಗೂ ಓಡಿಸಲು ಅನುಮತಿ ಇಲ್ಲವೆಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ.

    ಇತ್ತೀಚೆಗೆ ಜಿಲ್ಲೆಯ ಎನ್.ಆರ್ ಪುರದಲ್ಲಿ 4 ದಿನಗಳ ಅಂತರದಲ್ಲಿ ಇಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ದರು. ಇದನ್ನೂ ಓದಿ: ಚಿಕ್ಕಮಗಳೂರು | ಆನೆ ದಾಳಿಗೆ ವೃದ್ಧ ಬಲಿ – 4 ದಿನಗಳ ಅಂತರದಲ್ಲಿ ಇಬ್ಬರು ಸಾವು

  • ಚಿಕ್ಕಮಗಳೂರು | ಪ್ರವಾಸಿ ಬಸ್‌ ಪಲ್ಟಿ – 25 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

    ಚಿಕ್ಕಮಗಳೂರು | ಪ್ರವಾಸಿ ಬಸ್‌ ಪಲ್ಟಿ – 25 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

    ಚಿಕ್ಕಮಗಳೂರು: ಖಾಸಗಿ ಬಸ್ (Bus) ಪಲ್ಟಿಯಾಗಿ 25ಕ್ಕೂ ಹೆಚ್ಚು ಜನ ಗಾಯಗೊಂಡ ಘಟನೆ ಮೂಡಿಗೆರೆ (Mudigere) ತಾಲೂಕಿನ ದೇವನ ಗೂಲ್ ಗ್ರಾಮದ ಬಳಿ ನಡೆದಿದೆ.

    ಬೆಂಗಳೂರಿನಿಂದ (Bengaluru) ಕುದುರೆಮುಖಕ್ಕೆ ಪ್ರವಾಸಕ್ಕೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ವೀಕೆಂಡ್ ಹಿನ್ನೆಲೆ ಎಂ.ಎನ್.ಸಿ ಕಂಪನಿಯಲ್ಲಿ ಕೆಲಸ ಮಾಡುವ 40ಕ್ಕೂ ಹೆಚ್ಚು ಯುವಕ – ಯುವತಿಯರು ನೇತ್ರಾವತಿ ಪೀಕ್ ಟ್ರಕ್ಕಿಂಗ್‍ಗೆ ಬಂದಿದ್ದರು. ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ. ಅಪಘಾತದಲ್ಲಿ 25ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಇಬ್ಬರ ಸ್ಥಿತಿ ಗಂಭೀರವಾಗಿದೆ. ಇದನ್ನೂ ಓದಿ: ಕಂಡಕ್ಟರ್ ಯಡವಟ್ಟು, ಹೋಟೆಲ್‍ಗೆ ನುಗ್ಗಿದ ಬಿಎಂಟಿಸಿ ಬಸ್ – ಐವರಿಗೆ ಗಾಯ

    ಗಾಯಾಳುಗಳನ್ನು ಮೂಡಿಗೆರೆ ಹಾಗೂ ಚಿಕ್ಕಮಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ದೆಹಲಿಯ 50, ಬೆಂಗ್ಳೂರಿನ 40 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ

  • ಎತ್ತಿನಭುಜ ಚಾರಣಕ್ಕೆ ಪ್ರವಾಸಿಗರಿಗೆ ಬ್ರೇಕ್ – ಇಂದಿನಿಂದ 1 ತಿಂಗಳು ಸಂಪೂರ್ಣ ಬಂದ್

    ಎತ್ತಿನಭುಜ ಚಾರಣಕ್ಕೆ ಪ್ರವಾಸಿಗರಿಗೆ ಬ್ರೇಕ್ – ಇಂದಿನಿಂದ 1 ತಿಂಗಳು ಸಂಪೂರ್ಣ ಬಂದ್

    ಚಿಕ್ಕಮಗಳೂರು: ಜಿಲ್ಲೆಯ ಕೆಲವೆಡೆ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಇಂದಿನಿಂದ ಒಂದು ತಿಂಗಳು ಎತ್ತಿನಭುಜ (Ettina Bhuja) ಚಾರಣವನ್ನು ಬಂದ್ ಮಾಡಲಾಗಿದೆ.

    ಮೂಡಿಗೆರೆ (Mudigere) ತಾಲೂಕಿನ ಸುಪ್ರಸಿದ್ಧ ಎತ್ತಿನಭುಜಕ್ಕೆ ಪ್ರವಾಸಿಗರು 7 ಕಿ.ಮೀ. ಚಾರಣ ಮಾಡಿ (Trekking) ಪ್ರಕೃತಿ ಸೌಂದರ್ಯ ಸವಿಯುತ್ತಿದ್ದರು. ಆದರೆ ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಭಾರೀ ಮಂಜು ಕವಿಯುತ್ತಿದ್ದು, ಪ್ರವಾಸಿಗರ ಹಿತದೃಷ್ಟಿಯಿಂದ ಅರಣ್ಯ ಇಲಾಖೆ ಚಾರಣಕ್ಕೆ ಬ್ರೇಕ್ ಹಾಕಿದೆ.ಇದನ್ನೂ ಓದಿ: ಬಾಸ್ ಜೊತೆ ಅಕ್ರಮ ಸಂಬಂಧದ ಶಂಕೆ – ಲಿವ್ ಇನ್ ಗೆಳತಿಯ ಹತ್ಯೆಗೈದು ಶವದೊಂದಿಗೆ ಮಲಗಿದ್ದ 2 ಮಕ್ಕಳ ತಂದೆ

    ಚಾರಣ ಮಾಡುವ ವೇಳೆ ಅನಾಹುತವಾದರೆ ರಕ್ಷಣೆ ಮಾಡೋದು ಭಾರೀ ಕಷ್ಟಸಾಧ್ಯ. ಜೊತೆಗೆ ಯಾವುದೇ ವಾಹನಗಳು ಹೋಗುವುದಿಲ್ಲ, ಹೊತ್ತೇ ತರಬೇಕು. ಅಲ್ಲದೇ ಕಾಡುಪ್ರಾಣಿಗಳ ಕಾಟ, ಮಳೆ, ಜಾರುವ ಪ್ರದೇಶವಾಗಿದ್ದು, ಸ್ಥಳೀಯರು ಚಾರಣವನ್ನ ಬಂದ್ ಮಾಡುವಂತೆ ಆಗ್ರಹಿಸಿದ್ದರು. ಹೀಗಾಗಿ ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಇಂದಿನಿಂದ ಒಂದು ತಿಂಗಳ ಕಾಲ ಸಂಪೂರ್ಣ ಬಂದ್ ಮಾಡಿದ್ದಾರೆ.

    ಸದ್ಯ ಎತ್ತಿನಭುಜದಲ್ಲಿ ಓರ್ವ ಕಾವಲುಗಾರನ ನೇಮಿಸಲು ಸೂಚಿಸಲಾಗಿದೆ.ಇದನ್ನೂ ಓದಿ: ರಾಮಾಯಣ ಫಸ್ಟ್ ಗ್ಲಿಮ್ಸ್ ನೋಡಲು ತಯಾರಾಗಿ ಎಂದ ಯಶ್

  • ಚಿಕ್ಕಮಗಳೂರಲ್ಲಿ ಗಾಳಿ ಮಳೆ ಅಬ್ಬರ – ಹಳ್ಳಕ್ಕೆ ಉರುಳಿದ ಕಾರುಗಳು!

    ಚಿಕ್ಕಮಗಳೂರಲ್ಲಿ ಗಾಳಿ ಮಳೆ ಅಬ್ಬರ – ಹಳ್ಳಕ್ಕೆ ಉರುಳಿದ ಕಾರುಗಳು!

    ಚಿಕ್ಕಮಗಳೂರು: ಭಾರೀ ಗಾಳಿ ಮಳೆಯ (Rain) ಪರಿಣಾಮ 2 ಕಾರುಗಳು (Car) ಹೇಮಾವತಿ ನದಿಯ ಉಪನದಿಗೆ ಬಿದ್ದ ಘಟನೆ ಮೂಡಿಗೆರೆಯಲ್ಲಿ  (Mudigere)  ನಡೆದಿದೆ.  ಒಂದು ಕಾರು ಚಕ್ಕಮಕ್ಕಿ ಗ್ರಾಮದ ಬಳಿ ನದಿಗೆ ಬಿದ್ದಿದೆ. ಇನ್ನೊಂದು ಕಾರು ಬಣಕಲ್‌ ಸಮೀಪದ ಹಳ್ಳಕ್ಕೆ ಬಿದ್ದಿದೆ.

    ಭಾರೀ ಮಳೆಯಿಂದ ಚಾಲಕರ ನಿಯಂತ್ರಣ ತಪ್ಪಿ ಕಾರುಗಳು ಪಲ್ಟಿಯಾಗಿವೆ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸಮಾಜ ಸೇವಕ ಆರೀಫ್ ಸೊಂಟಕ್ಕೆ ಹಗ್ಗ ಕಟ್ಟಿ ಹಳ್ಳಕ್ಕೆ ಇಳಿದು ಕಾರಿನಲ್ಲಿದ್ದವರನ್ನು ರಕ್ಷಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಮುಂಗಾರು ಆರಂಭದಲ್ಲೇ ಹೀಗಾದರೆ, ಮಳೆಯ ತೀವ್ರತೆ ಹೆಚ್ಚಾದರೆ ಪರಿಸ್ಥಿತಿ ಹೇಗೆ ಎಂಬ ಆತಂಕ ಎದುರಾಗಿದೆ.

  • ಗೂಗಲ್ ಮ್ಯಾಪ್ ನಂಬಿ ಗದ್ದೆಗೆ ಬಂದು ನಿಂತ ಟಿಟಿ!

    ಗೂಗಲ್ ಮ್ಯಾಪ್ ನಂಬಿ ಗದ್ದೆಗೆ ಬಂದು ನಿಂತ ಟಿಟಿ!

    ಚಿಕ್ಕಮಗಳೂರು: ಗೂಗಲ್ ಮ್ಯಾಪ್ (Google Map) ನಂಬಿ ಬಂದಿದ್ದ ಪ್ರವಾಸಿಗರು, ವಾಹನವನ್ನು ಗದ್ದೆಗೆ ಇಳಿಸಿಕೊಂಡು ಪರದಾಡಿದ ಘಟನೆ ಆಲ್ದೂರು ಬಳಿ ನಡೆದಿದೆ.

    ಬೆಂಗಳೂರು ಮೂಲದ ಪ್ರವಾಸಿಗರು ಬಾಳೆಹೊನ್ನೂರು ಕಡೆಯಿಂದ ಮೂಡಿಗೆರೆಗೆ (Mudigere) ತೆರಳುತ್ತಿದ್ದರು. ಈ ವೇಳೆ, ಗೂಗಲ್ ಮ್ಯಾಪ್ ಕೈ ಕೊಟ್ಟಿದ್ದು, ವಾಹನ ಗದ್ದೆ ಬಳಿ ಹೋಗಿ ಸಿಕ್ಕಿ ಹಾಕಿಕೊಂಡಿದೆ. ಇದರಿಂದ ವಾಹನ ವಾಪಸ್ ತೆಗೆಯಲಾಗದೆ ಪ್ರವಾಸಿಗರು ಕೆಲವು ಕಾಲ ಅಲ್ಲೇ ಪರದಾಡಿದ್ದಾರೆ. ಇದನ್ನೂ ಓದಿ: ರಾಜಸ್ಥಾನ ತಂಡಕ್ಕೆ ಸೇರಿಸೋದಾಗಿ ರಾಜ್ಯಮಟ್ಟದ ಕ್ರಿಕೆಟಿಗನಿಗೆ 24 ಲಕ್ಷ ವಂಚನೆ

    ಪ್ರವಾಸಿಗರ ಪರದಾಟ ನೋಡಿ, ಸ್ಥಳೀಯರು ಟ್ರ್ಯಾಕ್ಟರ್‌ಗೆ ಟಿಟಿಯನ್ನು ಕಟ್ಟಿ, ರಸ್ತೆಯ ಬಳಿ ತಂದು ಬಿಟ್ಟಿದ್ದಾರೆ. ಬಳಿಕ ಸ್ಥಳಿಯರಿಂದ ರಸ್ತೆಯ ಬಗ್ಗೆ ಮಾಹಿತಿ ಪಡೆದು, ಗೂಗಲ್ ಮ್ಯಾಪ್ ಆಫ್ ಮಾಡಿ ಪ್ರವಾಸಿಗರು ಅಲ್ಲಿಂದ ತೆರಳಿದ್ದಾರೆ. ಇದನ್ನೂ ಓದಿ: ದರ್ಶನ್‌ & ಗ್ಯಾಂಗ್‌ ಸದಸ್ಯರಿಗೆ 2 ತಿಂಗಳು ರಿಲೀಫ್‌