Tag: Muddebihala

  • Vijayapura | ತೆರೆದ ಬಾವಿಗೆ ಬಿದ್ದು ಮಗು ಸಾವು

    Vijayapura | ತೆರೆದ ಬಾವಿಗೆ ಬಿದ್ದು ಮಗು ಸಾವು

    ವಿಜಯಪುರ: ಆಟವಾಡುತ್ತಿದ್ದ ಮಗು ತೆರೆದ ಬಾವಿಗೆ (Open Well) ಬಿದ್ದು ಸಾವನ್ನಪ್ಪಿದ ಘಟನೆ ವಿಜಯಪುರ (Vijayapura) ಜಿಲ್ಲೆಯ ಮುದ್ದೇಬಿಹಾಳ (Muddebihala) ಪಟ್ಟಣದಲ್ಲಿ ನಡೆದಿದೆ.

    ಮೂರು ವರ್ಷದ ಹರ್ಷಿತ್ ಪಾಟೀಲ್ ಬಾವಿಗೆ ಬಿದ್ದು ಸಾವನ್ನಪ್ಪಿರುವ ಮಗು. ಶುಕ್ರವಾರ ಮಗು ಮನೆಯಿಂದ ನಾಪತ್ತೆಯಾಗಿತ್ತು. ಮಗು ಎಲ್ಲಿದೆ ಎನ್ನುವ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ಕಂಗಾಲಾದ ಕುಟುಂಬಸ್ಥರು ಹರ್ಷಿತ್ ಹುಡುಕಾಟದಲ್ಲಿ ತೊಡಗಿದ್ದರು. ಇಂದು ಸ್ಥಳೀಯರು ಬಾವಿಯಲ್ಲಿ ಇಳಿದು ನೋಡಿದಾಗ ಮಗುವಿನ ಮೃತದೇಹ ಪತ್ತೆಯಾಗಿದೆ. ಇದನ್ನೂ ಓದಿ: ಬೆಂಗಳೂರು ಪೋರ್ಟ್‌ ಧ್ವಂಸ ಮಾಡಿದ್ದೇವೆ – ಮತ್ತೆ ಪಾಕ್‌ ಫುಲ್‌ ಟ್ರೋಲ್‌

    ಕುಟುಂಬಸ್ಥರು ಮಗುವನ್ನು ತೆರೆದ ಬಾವಿಯ ಆಸುಪಾಸಲ್ಲಿ ಆಡಲು ಬಿಟ್ಟಾಗ ಅನಾಹುತ ನಡೆದಿದೆ ಎನ್ನಲಾಗಿದೆ. ಘಟನೆ ಸಂಬಂಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಆಪರೇಷನ್ ಸಿಂಧೂರದಲ್ಲಿ ಭಾರತಕ್ಕೆ ಬೇಕಿದ್ದ 5 ಉಗ್ರರು ಮಟಾಶ್

  • ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಸ್ಥಳಾಂತರಕ್ಕೆ ಯತ್ನ – ನಡಹಳ್ಳಿ ವಿರುದ್ಧ ದೇವಾನಂದ ಚವ್ಹಾಣ್ ಗರಂ

    ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಸ್ಥಳಾಂತರಕ್ಕೆ ಯತ್ನ – ನಡಹಳ್ಳಿ ವಿರುದ್ಧ ದೇವಾನಂದ ಚವ್ಹಾಣ್ ಗರಂ

    ವಿಜಯಪುರ: ನಾಗಠಾಣ ಮತಕ್ಷೇತ್ರದಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. ಆದರೆ ಇದರ ಸ್ಥಳಾಂತರಕ್ಕೀಗ ಹುನ್ನಾರ ನಡೆದಿದೆ ಎಂದು ನಾಗಠಾಣ ಶಾಸಕ ದೇವಾನಂದ್ ಚವ್ಹಾಣ್ ಆರೋಪಿಸಿದ್ದಾರೆ.

    ವಿಜಯಪುರದಲ್ಲಿ ಮಾತನಾಡಿದ ದೇವಾನಂದ್ ಚವ್ಹಾಣ್ , ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಕಳೆದ 32 ವರ್ಷಗಳಿಂದ ವಿಜಯಪುರದ ಹಿಟ್ನಳ್ಳಿ ಫಾರ್ಮ್ ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇದನ್ನೀಗ ಮುದ್ದೇಬಿಹಾಳ ತಾಲೂಕಿಗೆ ಸ್ಥಳಾಂತರಿಸಲು ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಕೃಷಿ ಸಚಿವ ಬಿ ಸಿ ಪಾಟೀಲರಿಗೆ ಮನವಿ ಮಾಡಿದ್ದಾರೆ.

    ಸದ್ಯ ಕೇಂದ್ರ ಸ್ಥಾನದಲ್ಲಿರುವುದರಿಂದ ಜಿಲ್ಲೆಯ ಎಲ್ಲ ಭಾಗದ ಜನರಿಗೆ ಅನುಕೂಲ ಆಗಿದೆ. ಮುದ್ದೇಬಿಹಾಳದಲ್ಲಿ ಸ್ಥಳಾಂತರ ಆಗುವುದರಿಂದ ಜಿಲ್ಲೆಯ ಉಳಿದ ಭಾಗದ ರೈತರಿಗೆ ತೊಂದರೆ ಆಗಲಿದೆ ಎಂದರು. ಅಲ್ಲದೆ ಒಂದು ವೇಳೆ ಕೃಷಿ ಸಚಿವರು ಸ್ಥಳಾಂತರಕ್ಕೆ ಆದೇಶಿಸಿದ್ರೆ ರೈತರೊಂದಿಗೆ ಬೀದಿಗಿಳಿದು ಉಗ್ರ ಹೋರಾಟ ಮಾಡೋದಾಗಿ ಶಾಸಕ ದೇವಾನಂದ್ ಎಚ್ಚರಿಕೆ ನೀಡಿದ್ದಾರೆ.

  • ನೀತಿ ಸಂಹಿತೆ ಜಾರಿಯಾದ್ರೂ ಮತದಾರರಿಗೆ ಸೀರೆ ಹಂಚಿದ ಶಾಸಕ ಎ.ಎಸ್ ಪಾಟೀಲ್!

    ನೀತಿ ಸಂಹಿತೆ ಜಾರಿಯಾದ್ರೂ ಮತದಾರರಿಗೆ ಸೀರೆ ಹಂಚಿದ ಶಾಸಕ ಎ.ಎಸ್ ಪಾಟೀಲ್!

    ವಿಜಯಪುರ: ನೀತಿ ಸಂಹಿತೆ ಜಾರಿಯಾಗಿದ್ದರೂ ಮತದಾರರಿಗೆ ದೇವರಹಿಪ್ಪರಗಿ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ಸೀರೆ ಹಂಚಿರುವ ಘಟನೆ ಮುದ್ದೆಬಿಹಾಳ ಪಟ್ಟಣದ ದಾಸೋಹ ಭವನದಲ್ಲಿ ನಡೆದಿದೆ.

    ಚುನಾವಣೆ ಆಯೋಗವು ಇಂದು 11 ಗಂಟೆಗೆ ಮತದಾನ ನಡೆಯುವ ದಿನ ಮತ್ತು ಮತದಾನ ಎಣಿಸುವ ದಿನವನ್ನು ಇಂದು ಘೋಷಣೆ ಮಾಡಿ ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ತಿಳಿಸಿತ್ತು. ಎ.ಎಸ್ ಪಾಟೀಲ್ ಮಹಿಳೆಯರಿಗೆ ಸೀರೆಯನ್ನ ಹಂಚಿದ್ದಾರೆ.

    ತಮ್ಮ ದಾಸೋಹ ನಿಲಯದಲ್ಲಿ ನಡೆಸುತ್ತಿರುವ ಐದು ದಿನಗಳ ಮಹಾಲಕ್ಷ್ಮಿ ಕುಂಕುಮಾರ್ಚನೆ ಹೋಮ ಹವನ ಧಾರ್ಮಿಕ ಕಾರ್ಯಕ್ರಮ ಮೂರನೇ ದಿನ ನಡಹಳ್ಳಿ ಸೀರೆಯನ್ನು ವಿತರಿಸಿದ್ದಾರೆ.

    ಈ ಹಿಂದೆ ಕಾಂಗ್ರೆಸ್ ನಿಂದ ಉಚ್ಚಾಟಿತರಾಗಿದ್ದ ಪಾಟೀಲ್ ಅವರು ಬಳಿಕ ಜೆಡಿಎಸ್ ನಲ್ಲಿ ಗುರುತಿಸಿಕೊಂಡಿದ್ದರು. ಜೆಡಿಎಸ್‍ಗೆ ಸೇರಲಿದ್ದಾರೆ ಎನ್ನುವ ಮಾತುಗಳು ಬಂದಿದ್ದರೂ ಕಳೆದ ವಾರ ಬೆಂಗಳೂರಿನಲ್ಲಿ ಬಿಜೆಪಿ ಕಚೇರಿಯಲ್ಲಿ ಕಮಕ್ಕೆ ಸೇರ್ಪಡೆಯಾಗಿದ್ದರು.

  • ಮಧ್ಯರಾತ್ರಿ ಹೊತ್ತಿ ಉರಿದ ಅಟೋಮೊಬೈಲ್ ಅಂಗಡಿ!

    ಮಧ್ಯರಾತ್ರಿ ಹೊತ್ತಿ ಉರಿದ ಅಟೋಮೊಬೈಲ್ ಅಂಗಡಿ!

    ವಿಜಯಪುರ: ಜಿಲ್ಲೆಯಲ್ಲಿ ಅಟೋಮೊಬೈಲ್ ಅಂಗಡಿಯೊಂದು ಮಧ್ಯರಾತ್ರಿ ಹೊತ್ತಿ ಉರಿದಿದೆ.

    ವಿಜಯಪುರ ಜಿಲ್ಲೆ ನಾಲ್ವತವಾಡ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಸಂಗಣ್ಣ ಕುಂಬಾರ್ ಅವರಿಗೆ ಸೇರಿದ ಗುರುದೇವ ಸದಾನಂದ ಅಟೋ ಮೊಬೈಲ್ ಶಾಪ್ ಸುಟ್ಟು ಕರಕಲಾಗಿದೆ. ಘಟನೆಯಿಂದ 15 ಲಕ್ಷ ರೂ. ಅಧಿಕ ಹಾನಿಯಾಗಿದೆ ಎಂಬುದಾಗಿ ತಿಳಿದುಬಂದಿದೆ.

    ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅವಘಡ ಸಂಭವಿಸಿದೆ.

  • ಮಳೆಗಾಗಿ ಗೊಂಬೆಗಳ ಮದುವೆ ಮಾಡಿಸಿದ್ರು ವಿಜಯಪುರ ಗ್ರಾಮದ ಜನತೆ

    ಮಳೆಗಾಗಿ ಗೊಂಬೆಗಳ ಮದುವೆ ಮಾಡಿಸಿದ್ರು ವಿಜಯಪುರ ಗ್ರಾಮದ ಜನತೆ

    ವಿಜಯಪುರ: ಅಲ್ಲಿ ಸುಂದರವಾಗಿ ಮದುವೆ ಸಮಾರಂಭ ಏರ್ಪಟ್ಟಿತ್ತು. ವಧುವರರ ಬಂಧುಗಳು, ವಾಲಗದವರು ರಾಗ ತಾಳದಲ್ಲಿ ತಲ್ಲಿನರಾಗಿ ಗಟ್ಟಿಮೇಳ ಬಾರಿಸುತ್ತಿದ್ದರೆ, ಬಾಣಸಿಗರು ನಾನಾ ಭಕ್ಷ್ಯಗಳ ತಯಾರಿಕೆಯಲ್ಲಿ ತೊಡಗಿದ್ದರು. ಹಿರಿಯರು ಇತರರ ಆಗಮನಕ್ಕಾಗಿ ಕೈಮುಗಿದು ಕರೆಯುತ್ತಿದ್ದರು. ಇಷ್ಟೆಲ್ಲಾ ನಡೆದಿದ್ದು ಗೊಂಬೆಗಳ ಮದುವೆ ಸಮಾರಂಭದಲ್ಲಿ.

    ಹೌದು. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹುಲ್ಲೂರ ಗ್ರಾಮದಲ್ಲಿರುವ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಗ್ರಾಮಸ್ಥರು ಮಳೆಗಾಗಿ ಪ್ರಾರ್ಥಿಸಿ ಸಡಗರ ಸಂಭ್ರಮದಿಂದ ಗೊಂಬೆಗಳ ಮದುವೆ ಮಾಡಿ ವರುಣ ದೇವನಲ್ಲಿ ಸಮೃದ್ಧವಾಗಿ ಮಳೆ ಸುರಿಯಲಿ ಎಂದು ಬೇಡಿಕೊಂಡರು.

    ನಿಜವಾದ ಮದುವೆ ಸಮಾರಂಭ ಹೇಗೆ ನಡೆಯುತ್ತೋ ಹಾಗೆ ಇಲ್ಲಿಯೂ ನಡೆಯಿತು. ಆ ಗ್ರಾಮದ ಮಾರುತೇಶ್ವರ ದೇವಸ್ಥಾನದಲ್ಲಿ ಎದಿರುಗೊಳ್ಳುವ ಶಾಸ್ತ್ರ ಮುಗಿದು ಮೆರವಣಿಗೆ ಮೂಲಕ ವಧುವನ್ನು ರಾಮಲಿಂಗೇಶ್ವರ ದೇವಸ್ಥಾನಕ್ಕೆ ತಂದು ವಧುವರರ ಅರಿಷಿನ ಹಚ್ಚುವ, ಸುರಿಗೆ ಸುತ್ತುವ ಕಾರ್ಯ ನಡೆಯಿತು. ನಂತರ ಗರ್ಭ ಗುಡಿಯಲ್ಲಿ ದೇವರ ಅಕ್ಷತಾ ಕಾರ್ಯ ನಂತರ ದೇವಸ್ಥಾನದ ಹೊರ ಪ್ರದೇಶದಲ್ಲಿ ದೈವದ ಅಕ್ಷತಾ ಕಾರ್ಯ ನೆರವೇರಿತು.

    ನಂತರ ಮದುವೆಗೆಂದು ಬಂದವೆರೆಲ್ಲ ಹುಗ್ಗಿ ಅನ್ನ ಸಾರು ಭೋಜನ ಸವಿದರು. ಮದುವೆಗೆ ಮಂಗಳ ಹಾಡಿದರು. ಅಶೋಕ ಬಾಲಪ್ಪಗೋಳ ವಧುವಿನ ತಂಡದ ಮುಖ್ಯಸ್ಥನಾಗಿದ್ದರೆ, ನೀಲಪ್ಪ ವರನ ತಂಡದ ಮುಖ್ಯಸ್ಥರಾಗಿದ್ದರು.

    ಗ್ರಾಮೀಣ ಪ್ರದೇಶದಲ್ಲಿ ಗೊಂಬೆ ಮದುವೆ ಸೇರಿದಂತೆ ಕತ್ತೆ, ಕಪ್ಪೆ, ಪನ್ನೊಳಿಗೆ, ಚಿಕ್ಕ ಮಕ್ಕಳ ಮದುವೆ ಹೀಗೆ ನಾನಾ ತರದಲ್ಲಿ ಮದುವೆಗಳನ್ನು ಮಾಡುತ್ತಾರಂತೆ.

    ಹೀಗೆ ಕೆಲ ಗ್ರಾಮಗಳಲ್ಲಿ ಸುಮಾರು ವರ್ಷಗಳವರೆಗೆ ಮಳೆ ಬೀಳದಿದ್ದರೆ ಎಷ್ಟು ವರ್ಷಗಳಿಂದ ಮಳೆ ಬಿದ್ದಿರುವುದಿಲ್ಲವೋ ಅಷ್ಟು ವರ್ಷಗಳವರೆಗೆ ಮರಣ ಹೊಂದಿದವರ ಶವಗಳಿಗೆ ನೀರುಣಿಸುವ ಪದ್ದತಿ ಇದೆ ಎಂದು ಗ್ರಾಮದ ಕೆಲ ಹಿರಿಯರು ಹೇಳಿದ್ದಾರೆ.

    ಗ್ರಾಮೀಣರ ನಾನಾ ಆಚರಣೆಗಳು ಇಂದಿಗೂ ಜೀವಂತಿಕೆ ಉಳಿಸಿಕೊಂಡಿವೆ ಎಂಬುದು ಹುಲ್ಲೂರು ಗ್ರಾಮದಲ್ಲಿ ಜರುಗಿದ ಗೊಂಬೆಗಳ ಮದುವೆ ಸಾಕ್ಷಿಯಾಗಿದೆ.

  • ತುಂಬಿ ಹರಿಯುತಿದೆ ಡೋಣಿ ನದಿ: ಸೇತುವೆಗಳು ಜಲಾವೃತ- 5 ಗ್ರಾಮಗಳ ಸಂಪರ್ಕ ಕಡಿತ

    ತುಂಬಿ ಹರಿಯುತಿದೆ ಡೋಣಿ ನದಿ: ಸೇತುವೆಗಳು ಜಲಾವೃತ- 5 ಗ್ರಾಮಗಳ ಸಂಪರ್ಕ ಕಡಿತ

    ವಿಜಯಪುರ: ಬುಧವಾರ ರಾತ್ರಿ ಸುರಿದ ಮಳೆಗೆ ಡೋಣಿ ನದಿ ತುಂಬಿ ಹರಿಯುತ್ತಿದ್ದು, ರಸ್ತೆಗಳು ಹಾಗೂ ಸೇತುವೆಗಳು ಜಲಾವೃತಗೊಂಡಿವೆ.

    ಸೇತುವೆಗಳು ಜಲವೃತಗೊಂಡ ಹಿನ್ನೆಲೆಯಲ್ಲಿ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಾಳಿಕೋಟೆ ಪಟ್ಟಣದಿಂದ ಒಟ್ಟು ಐದು ಗ್ರಾಮಗಳು ಸಂಪರ್ಕವನ್ನು ಕಳೆದುಕೊಂಡಿವೆ. ಜಿಲ್ಲೆಯ ಹಡಗಿನಾಳ, ಶಿವಪೂರ, ಕಲ್ಕದೇವನಹಳ್ಳಿ ಸೇರಿದಂತೆ ಐದು ಗ್ರಾಮಗಳ ಸಂಪರ್ಕ ಕಳೆದುಕೊಂಡಿವೆ.

    ಡೋಣಿ ನದಿಯ ದಡದಲ್ಲಿರುವ ಗ್ರಾಮಗಳ ರಸ್ತೆಗಳ ಮೇಲೆ ನೀರು ಉಕ್ಕಿ ಹರಿಯುತ್ತಿದೆ. ಇನ್ನೂ ಮಳೆ ಹೆಚ್ಚಾದರೆ ನದಿ ತೀರದ ಗ್ರಾಮಗಳು ಜಲಾವೃತಗಳ್ಳಬಹುದು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

    https://www.youtube.com/watch?v=M6-cTiZr02w