ವಿಜಯಪುರ: ಅಮವಾಸ್ಯೆ ಹಿನ್ನೆಲೆ ಎತ್ತಿನ ಮೈ ತೊಳೆಯಲು ಕೃಷ್ಣಾ ನದಿ (Krishna River) ತೀರಕ್ಕೆ ಹೋಗಿದ್ದ ರೈತನನ್ನು ಮೊಸಳೆ ಎಳೆದೊಯ್ದಿರುವ ಘಟನೆ ಮುದ್ದೇಬಿಹಾಳದ (Muddebihal) ತಂಗಡಗಿ ಗ್ರಾ.ಪಂ ವ್ಯಾಪ್ತಿಯ ಕುಂಚಗನೂರ ಗ್ರಾಮದಲ್ಲಿ ನಡೆದಿದೆ
ಕುಂಚಗನೂರ ಗ್ರಾಮದ ಕಾಶೀನಾಥ ಹಣಮಂತ ಕಂಬಳಿ (38) ಮೊಸಳೆ ದಾಳಿಗೆ ಒಳಗಾದ ರೈತ. ಕಾಶಿನಾಥನನ್ನು ಮೊಸಳೆ ಹೊತ್ತೊಯ್ದಿದ್ದನ್ನು ನೋಡಿರುವುದಾಗಿ ಕುಂಚಗನೂರ ಗ್ರಾಮದ ಧರೆಪ್ಪ ಬಟಕುರ್ಕಿ ಅವರು ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ಧರ್ಮ ವಿಜಯ – ಧರ್ಮಸ್ಥಳ ದೇಗುಲದಿಂದ ಶಿವ ರುದ್ರತಾಂಡವದ ಫೋಟೋ ಅಪ್ಲೋಡ್
ಶನಿವಾರ (ಆ.23) ಅಮವಾಸ್ಯೆಯ ಹಿನ್ನೆಲೆ ಕಾಶೀನಾಥ ಅವರು ಎತ್ತುಗಳ ಮೈ ತೊಳೆಯಲು ಕೃಷ್ಣಾ ನದಿ ತೀರಕ್ಕೆ ತೆರಳಿದ್ದರು. ಈ ವೇಳೆ ರೈತನನ್ನು ಮೊಸಳೆ ಎಳದುಕೊಂಡು ಹೋಗಿದೆ. ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ನಾಪತ್ತೆಯಾದ ರೈತನನ್ನು ಹುಡುಕುತ್ತಿದ್ದಾರೆ. ಕೂಡಲಸಂಗಮದಿಂದ ಬೋಟ್ ತರಿಸಿ ಶೋಧ ನಡೆಸಲಾಗುತ್ತಿದೆ.ಇದನ್ನೂ ಓದಿ: ಅಂಕೋಲದಲ್ಲಿ ಕೇಣಿ ವಾಣಿಜ್ಯ ಬಂದರು ಯೋಜನೆ; ಹೇಗಿದೆ ನೀಲ ನಕ್ಷೆ – ಸಾಧಕ ಬಾಧಕಗಳೇನು?











