Tag: MUDA Scam

  • ಇವತ್ತಿಲ್ಲಾ ನಾಳೆ ಸಿದ್ದರಾಮಯ್ಯ ರಾಜೀನಾಮೆ ಕೊಡಲೇಬೇಕು: ಜಗದೀಶ್ ಶೆಟ್ಟರ್

    ಇವತ್ತಿಲ್ಲಾ ನಾಳೆ ಸಿದ್ದರಾಮಯ್ಯ ರಾಜೀನಾಮೆ ಕೊಡಲೇಬೇಕು: ಜಗದೀಶ್ ಶೆಟ್ಟರ್

    ಬೆಳಗಾವಿ: ರಾಜಕೀಯವಾಗಿ ನಾಲ್ಕು ದಿನ ವಿಳಂಬ ಆಗಬಹುದು. ಇವತ್ತಿಲ್ಲಾ ನಾಳೆ ಸಿದ್ದರಾಮಯ್ಯ ರಾಜೀನಾಮೆ ಕೊಡಲೇಬೇಕು. ಹೊಸ ಸಿಎಂ ಯಾರು ಅನ್ನೋದು ಕಾಂಗ್ರೆಸ್‌ಗೆ ಬಿಟ್ಟ ವಿಚಾರ ಎಂದು ಸಂಸದ ಜಗದೀಶ್ ಶೆಟ್ಟರ್ (jagadish Shettar) ಹೇಳಿಕೆ ನೀಡಿದ್ದಾರೆ.

    ಬೆಳಗಾವಿಯ (Belagavi) ತಮ್ಮ ನೂತನ ಕಚೇರಿಯಲ್ಲಿ ಪೂಜೆ ನೆರವೇರಿಸಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಈ ಸರ್ಕಾರ ಬೀಳಿಸಲು ಬಿಜೆಪಿ ಯಾವುದೇ ರೀತಿಯ ಆಪರೇಷನ್ ಕಮಲ ಮಾಡುತ್ತಿಲ್ಲ. ಅವರ ಸ್ವಯಂಕೃತ ಅಪರಾಧದಿಂದ ಸರ್ಕಾರ ಬಿದ್ದು ಹೋಗಲಿದೆ. ಈಗಾಗಲೇ 8 ಜನ ಸಿಎಂ ಆಗಲೂ ತಯಾರಿದ್ದಾರೆ. ಅವರಲ್ಲಿ ಆಂತರಿಕ ಪೈಪೋಟಿ ನಡೆಯುತ್ತಿದೆ. ಸಿದ್ದರಾಮಯ್ಯ ಸಿಎಂ, ಡಿ.ಕೆ.ಶಿವಕುಮಾರ್ ಡಿಸಿಎಂ ಆದ ದಿನದಿಂದಲೇ ಒಳ ಜಗಳ ಇದೆ. ಆ ಒಳಜಗಳದಿಂದಲೇ ಈ ಸರ್ಕಾರ ಬಿದ್ದು ಹೋಗಲಿದೆ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: ಉತ್ತರ ಪ್ರದೇಶ| ಮಗಳನ್ನು ಹಗ್ಗದಲ್ಲಿ ತಲೆಕೆಳಗಾಗಿ ನೇತುಹಾಕಿ ಮನಬಂದಂತೆ ಥಳಿಸಿದ ತಂದೆ

    ಚಳಿಗಾಲದ ಅಧಿವೇಶನಕ್ಕೆ ಹೊಸ ಸಿಎಂ ಬರ್ತಾರೆ ಎಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಜ್ಯಾಧ್ಯಕ್ಷರು ಯಾವ ಹಿನ್ನೆಲೆಯಲ್ಲಿ ಹೇಳಿದ್ದಾರೆ ಅವರಿಗೆ ಬಿಟ್ಟ ವಿಚಾರ. ನನ್ನ ರಾಜಕೀಯ ಅನುಭವದ ಮೇಲೆ ಹೇಳುವುದಾದರೆ, ಮುಡಾ ಪ್ರಕರಣ ರಾಷ್ಟ್ರಮಟ್ಟದಲ್ಲಿ ಚರ್ಚೆ ಆಗುತ್ತಿದೆ. ತಪ್ಪು ಮಾಡಿರೋದು ಗೊತ್ತಿದೆ. ಲೋಕಾಯುಕ್ತ ತನಿಖೆ ಆಗ್ತಿದೆ. ಇಷ್ಟಾದ್ರು ಸಿಎಂ ಆಗಿ ಮುಂದುವರೆದಿರೋ ಸಿದ್ದರಾಮಯ್ಯ ಅವರಿಗೆ ನೈತಿಕತೆ ಇಲ್ಲ. ಇದು ಬಂಡತನದ ಪರಮಾವಧಿ ಎಂದು ಕಿಡಿಕಾರಿದರು. ಇದನ್ನೂ ಓದಿ: ದಸರಾ ಸಂಭ್ರಮದ ನಡುವೆ ವರುಣ ಎಂಟ್ರಿ – ಮಳೆಯ ನಡುವೆಯೂ ಜನರ ಸಂಭ್ರಮ

    ಮುಡಾ ಹಗರಣದಲ್ಲಿ (MUDA Scam) ರಾಜೀನಾಮೆ ಕೊಡುವಂತೆ ಹೇಳಿದರೆ ಸಿದ್ದರಾಮಯ್ಯ ಭಂಡತನ ಪ್ರದರ್ಶಿಸುತ್ತಿದ್ದಾರೆ. ಜನರ ಗಮನವನ್ನು ಬೇರೆ ಕಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ರಾಜೀನಾಮೆ ವಿಚಾರ ಚರ್ಚೆ ನಡೆಯುತ್ತಿದೆ. ಒಂದೊಂದೇ ವಿಷಯಗಳನ್ನ ತೆಗೆದುಕೊಂಡು ಬರುತ್ತಿದ್ದಾರೆ. ಜಾತಿಗಣತಿಯ ವರದಿ ಕ್ಯಾಬಿನೆಟ್‌ನಲ್ಲಿ ಸಲ್ಲಿಸುತ್ತೇವೆ ಎಂದರು. ಈಗ ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಹೋರಾಟದ ಹಿನ್ನೆಲೆ ಇರುವ ಕೇಸ್ ನಾವು ವಾಪಸ್ ಪಡೆದಿದ್ದೇವೆ. ರೈತರ ಮಹದಾಯಿ ಹೋರಾಟ ಕೇಸ್ ಯಾಕೆ ವಾಪಸ್ ತೆಗೆದುಕೊಳ್ಳಲಿಲ್ಲ. ಮಹದಾಯಿ ವಿಚಾರದಲ್ಲಿ ಯಾಕೆ ವಿಳಂಬ ಆಗುತ್ತಿದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮಡಿಕೇರಿ ದಸರಾಕ್ಕೆ ಕ್ಷಣಗಣನೆ – ದಶಮಂಟಪಗಳ ಪ್ರದರ್ಶನದ ವೀಕ್ಷಣೆಗೆ ದೂರದ ಊರುಗಳಿಂದ ಜನರು

  • ಬಿಜೆಪಿ ವಿರುದ್ಧ ಹಗರಣ ಅಸ್ತ್ರ – ಮೊದಲ ಹಂತದಲ್ಲಿ 7,223.64 ಕೋಟಿ ಅಕ್ರಮದ ತನಿಖೆ ಹೊಣೆ ಎಸ್‌ಐಟಿಗೆ?

    ಬಿಜೆಪಿ ವಿರುದ್ಧ ಹಗರಣ ಅಸ್ತ್ರ – ಮೊದಲ ಹಂತದಲ್ಲಿ 7,223.64 ಕೋಟಿ ಅಕ್ರಮದ ತನಿಖೆ ಹೊಣೆ ಎಸ್‌ಐಟಿಗೆ?

    – ಕೋವಿಡ್ ಹಗರಣ ತನಿಖೆಗೆ ಎಸ್‌ಐಟಿ ರಚನೆಗೆ ನಿರ್ಧಾರ

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಮೇಲೆ ಮುಡಾಸ್ತ್ರ ಪ್ರಯೋಗಿಸಿದ್ದ ಬಿಜೆಪಿ ವಿರುದ್ಧ ಕಾಂಗ್ರೆಸ್ ಸಮರ ಸಾರಿದೆ. ಬಿಜೆಪಿ ಅವಧಿಯಲ್ಲಿನ ಅಕ್ರಮ ಆರೋಪಗಳ ಬಗ್ಗೆ ಕಾಂಗ್ರೆಸ್ ಸರ್ಕಾರ ಬ್ರಹ್ಮಾಸ್ತ್ರ ಪ್ರಯೋಗಿಸ್ತಿದೆ.

    ಕೋವಿಡ್ ಹಗರಣದ (Covid Scam) ತನಿಖೆಗೆ ಎಸ್‌ಐಟಿ ರಚಿಸಲು ಕ್ಯಾಬಿನೆಟ್ (Cabinet Meet) ತೀರ್ಮಾನಿಸಿದೆ. ಈ ಮೂಲಕ 7,223.64 ಕೋಟಿ ಅಕ್ರಮ ಆರೋಪದ ತನಿಖೆಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಇದು ಮತ್ತೊಂದು ಸುತ್ತಿನ ರಾಜಕೀಯ ಸಂಘರ್ಷಕ್ಕೆ ಮುನ್ನುಡಿ ಬರೆದಿದೆ. ಇದನ್ನೂ ಓದಿ: 26 ವರ್ಷಗಳ ಬಳಿಕ ಕೋಡಿ ಬಿದ್ದ ಹಿರೇಮಲ್ಲನಹೊಳೆ ಕೆರೆ – 30ಕ್ಕೂ ಹೆಚ್ಚು ಮನೆಗಳು ಜಲಾವೃತ

    ಕೋವಿಡ್ ಹಗರಣದ ತನಿಖೆ ನಡೆಸಿದ್ದ ಕುನ್ಹಾ ಆಯೋಗದ ಮಧ್ಯಂತರ ವರದಿಯ ಮೇಲೆ ಕ್ರಮ ಕೈಗೊಳ್ಳಲು ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಈ ಮೂಲಕ ಮುಡಾ ಹಗರಣ ಪ್ರಸ್ತಾಪ ಮಾಡುತ್ತಿರೋ ಬಿಜೆಪಿಗೆ ಕೋವಿಡ್ ಹಗರಣದ ಟಕ್ಕರ್ ಕೊಡುತ್ತಾ ಸರ್ಕಾರ ಎಂಬುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ ಹೂ ಬೆಳೆಗಾರರಿಗೆ ಬಂಪರ್ – ಇತಿಹಾಸದಲ್ಲೇ ಮೊದಲ ಬಾರಿಗೆ 400ರ ಗಡಿ ದಾಟಿದ ಗುಲಾಬಿ

    ಸಂಪುಟದಲ್ಲಿ ಚರ್ಚೆ ಆಗಿದ್ದೇನು?
    * ಜಸ್ಟೀಸ್ ಕುನ್ನಾ ಆಯೋಗದ ವರದಿ ಜಾರಿ ಆಗಲೇಬೇಕು
    * ವರದಿ ಪ್ರಕಾರ 7223.64 ಕೋಟಿಯ ಅಕ್ರಮ ನಡೆದಿದೆ
    * 500 ಕೋಟಿಯನ್ನ ಕಂಪನಿಗಳಿಂದ ವಸೂಲಿ ಮಾಡಬೇಕು
    * ಅಕ್ರಮದ ಪಾಲುದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ತೀರ್ಮಾನ
    * ಉಪ್ಪು ತಿಂದವರು ನೀರು ಕುಡಿಯುತ್ತಾರೆ.. ಅನುಭವಿಸಲಿ
    * ಮಧ್ಯಂತರ ವರದಿ ಶಿಫಾರಸು ಅನ್ವಯ ಎಸ್‌ಐಟಿ ತನಿಖೆ
    * ಕೋವಿಡ್ ಅಕ್ರಮದ ತನಿಖೆ ನಡೆಸಲು ಎಸ್‌ಐಟಿ ರಚನೆ
    * ಸಂಪುಟ ಉಪಸಮಿತಿ ಮೂಲಕವೂ ತನಿಖೆ, ವಿಚಾರಣೆ

  • ಮುಡಾ, ವಾಲ್ಮೀಕಿ ಎರಡು ಕೇಸ್‌ನಲ್ಲಿ ಸಿಎಂ ಅಪರಾಧಿ – ಶೋಭಾ ಕರಂದ್ಲಾಜೆ

    ಮುಡಾ, ವಾಲ್ಮೀಕಿ ಎರಡು ಕೇಸ್‌ನಲ್ಲಿ ಸಿಎಂ ಅಪರಾಧಿ – ಶೋಭಾ ಕರಂದ್ಲಾಜೆ

    ಮೈಸೂರು: ಮುಡಾ, ವಾಲ್ಮೀಕಿ ಎರಡು ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯನವರೇ (CM Siddaramaiah) ಅಪರಾಧಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಹೇಳಿದರು.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅನೈತಿಕವಾಗಿ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿದ್ದಾರೆ. ಮುಡಾ, ವಾಲ್ಮೀಕಿ ಎರಡು ಕೇಸ್‌ನಲ್ಲಿ ಅವರೇ ಅಪರಾಧಿ. ಮುಡಾ (MUDA Scam) ವಿಚಾರದಲ್ಲಿ ಸೈಟ್ ವಾಪಸ್ ಕೊಟ್ಟು ಸಿಕ್ಕಿಕೊಂಡಿದ್ದಾರೆ. ಇನ್ನೂ ವಾಲ್ಮೀಕಿ ಹಗರಣ (Valmiki Scam) ಸಂಬಂಧ ಇಡಿ ಕೂಡ ಜನರ ದುಡ್ಡು ಚುನಾವಣೆಗೆ ಬಳಕೆಯಾಗಿರುವ ಬಗ್ಗೆ ಪ್ರೆಸ್ ರಿಲೀಸ್ ಮಾಡಿದೆ. ಅಧಿಕಾರಿ ಸೂಸೈಡ್ ಆಗಿದೆ, ಮಂತ್ರಿ ರಾಜೀನಾಮೆ ಆಗಿದೆ. ಇದರ ನೇರ ಹೊಣೆ ಸಿದ್ದರಾಮಯ್ಯ ಅವರೇ ಕಿಡಿಕಾರಿದ್ದಾರೆ.

    ಇಲ್ಲಿ ಸಿದ್ದರಾಮಯ್ಯರೇ ಹಣಕಾಸು ಸಚಿವ, ಮುಖ್ಯಮಂತ್ರಿಯಾಗಿದ್ದಾರೆ. ನಮ್ಮ ದುಡ್ಡು ಆಂಧ್ರ, ಬಳ್ಳಾರಿ ಚುನಾವಣೆಗೆ ಹೋಗಿದೆ. ಇದನ್ನು ಇಡಿ ಹಾಗೂ ಬೇರೆ ಸಂಸ್ಥೆಗಳು ಕೂಡ ಹೇಳಿವೆ. ಮುಖ್ಯಮಂತ್ರಿ ಸ್ಥಾನದಲ್ಲಿರಲು ಸಿಎಂಗೆ ನೈತಿಕತೆ ಇಲ್ಲ. ಹಾಗಾಗಿ ತಕ್ಷಣ ರಾಜೀನಾಮೆ ನೀಡಬೇಕು. ಲೋಕಾಯುಕ್ತವನ್ನೆ ತೆಗೆದುಹಾಕಿದ್ದರು. ಈ ಬಾರಿ ಕೂಡ ಪ್ರಕರಣದಲ್ಲಿ ಪ್ರಭಾವ ಬೀರುತ್ತಿದೆ ಅನ್ನಿಸುತ್ತಿದೆ. ಸೈಟ್ ವಾಪಸ್ ಮಾಡಿದ್ದು ಕಣ್ಮುಂದೆ ಇದೆ. ಅವರ ಕುಟುಂಬದವರೇ ಪತ್ರ ಬರೆದು ವಾಪಸ್ ಕೊಟ್ಟಿದ್ದಾರೆ, ಇದು ಯಾರ ತಪ್ಪು. 1992 ರಿಂದ ಸಿದ್ದರಾಮಯ್ಯ ಒಂದಲ್ಲ ಒಂದು ಸಾಂವಿಧಾನಿಕ ಹುದ್ದೆಯಲ್ಲಿದ್ದಾರೆ. ಹೀಗಿರುವಾಗ ಇವರಿಗೆ ಗೊತ್ತಿಲ್ಲದೆ ಈ ರೀತಿ ಆಗಿದೆ ಅನ್ನೋದನ್ನು ಊಹೆ ಮಾಡಲು ಆಗುವುದಿಲ್ಲ. ಹಾಗಾಗಿದ್ದರೆ ರಾಜಕೀಯದಲ್ಲಿ ಇರಲು ಅವರಿಗೆ ಲಾಯಕ್ಕಿಲ್ಲ ಎಂದು ಹೇಳಿದರು.

    ಈ ಬಾರಿಯ ಮೈಸೂರು ದಸರಾ ನವರಾತ್ರಿ ಹಿನ್ನೆಲೆ ಪ್ರತಿ ವರ್ಷದಂತೆ ಈ ವರ್ಷ ಕೂಡ ಮೆಟ್ಟಿಲು ಹತ್ತಿ ಚಾಮುಂಡೇಶ್ವರಿ ತಾಯಿ ದರ್ಶನ ಮಾಡಿದ್ದು, ಸಾವಿರದ ಒಂದು ಮೆಟ್ಟಿಲು ಹತ್ತಿ ದರ್ಶನ ಪಡೆದುಕೊಂಡಿದ್ದಾರೆ.

    ಮೈಸೂರು ದಸರಾ (Mysuru Dasara) ವಿಚಾರವಾಗಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷ ಕೂಡ ಚಾಮುಂಡೇಶ್ವರಿ ದರ್ಶನ ಮಾಡಿದ್ದೇನೆ. ರಾಜ್ಯ, ದೇಶಕ್ಕೆ ಒಳ್ಳೆಯದಾಗಬೇಕು. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ದೇಶದಲ್ಲಿ ಅಭಿವೃದ್ಧಿ ರಕ್ಷಣೆ ಆಗುತ್ತಿದೆ. ಈ ತಂಡದಲ್ಲಿ ನನಗೂ ಕೆಲಸ ಮಾಡಲು ಮತ್ತೊಂದು ಅವಕಾಶ ಸಿಕ್ಕಿದೆ. ಮೋದಿಯವರು ಉಪವಾಸ ಇದ್ದಾರೆ. ತುಂಬಾ ಜನ ಉಪವಾಸ ಮಾಡಿ ಇಲ್ಲಿಗೆ ಬಂದು ತಾಯಿ ದರ್ಶನ ಮಾಡ್ತಾರೆ. ನಾನು ಎಲ್ಲ ಭಕ್ತರಂತೆ ಬಂದಿದ್ದೇನೆ. ನಾಳೆ ಪ್ರತಿ ವರ್ಷದಂತೆ ಕಾವಾಡಿಗರು, ಮಾವುತರಿಗೆ ಉಪಹಾರ ವ್ಯವಸ್ಥೆ ಮಾಡಲಿದ್ದೇವೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.

    ನಾನು ಉಸ್ತುವರಿ ಇದ್ದಾಗ ವೈಭವದ ದಸರಾ ಆಗಿತ್ತು. ಮೊದಲ ಬಾರಿಗೆ ರೈತ, ಮಾಹಿಳಾ ದಸರಾ ಮಾಡಿದ್ದೆ. ಹಳ್ಳಿಯವರಿಗೆ ಮೈಸೂರು ತೋರಿಸುವ ಕೆಲಸ ಮಾಡಿದ್ದೆವು. ಇದನ್ನ ಎಲ್ಲಾ ಸರ್ಕಾರ ಮುಂದುವರೆಸಬೇಕು. ದಸರಾ ಜನರ ದಸರಾ ಆಗಬೇಕು. ಸರ್ಕಾರದ ದಸರಾ ಆಗಬಾರದು. ಹಿಂದೆ ಮಹರಾಜರ ದಸರಾ. ಈಗ ಜನರ ದರ್ಶನ ಆಗಬೇಕು ಎನ್ನುವುದು ಅಪೇಕ್ಷೆ ಇತ್ತು. ಈಗ ಕೆಲವನ್ನು ಸರ್ಕಾರದವರು ಇಟ್ಟುಕೊಂಡಿದ್ದಾರೆ, ಕೆಲವನ್ನ ಬಿಟ್ಟಿದ್ದಾರೆ. ಸರ್ಕಾರದ ಬಳಿ ನಾವು ಮನವಿ ಮಾಡುವುದು ಸಾಂಸ್ಕೃತಿಕವಾಗಿ ಉಳಿಸಕೊಳ್ಳಬೇಕು ಎಂಬ ಕಾರಣಕ್ಕೆ. ಬೆಟ್ಟದಲ್ಲಿ ಭಕ್ತರಿಗೆ ಇನ್ನಷ್ಟು ಯೋಜನೆ ಆಗಬೇಕಿದೆ. ಹೊಸ ಕಟ್ಟಡಗಳಿಂದ ಬೆಟ್ಟಕ್ಕೆ ಹಾನಿಯಾಗುವ ಭಯ ಇದೆ. ಬೆಟ್ಟವನ್ನ ಹಾಗೇ ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

  • ರಾಜಕೀಯಕ್ಕಾಗಿ ಕಾಂಗ್ರೆಸ್ ಪಕ್ಷ ದಲಿತ ಕಾರ್ಡ್ ಪ್ಲೇ ಮಾಡ್ತಿದೆ – ಛಲವಾದಿ ನಾರಾಯಣಸ್ವಾಮಿ

    ರಾಜಕೀಯಕ್ಕಾಗಿ ಕಾಂಗ್ರೆಸ್ ಪಕ್ಷ ದಲಿತ ಕಾರ್ಡ್ ಪ್ಲೇ ಮಾಡ್ತಿದೆ – ಛಲವಾದಿ ನಾರಾಯಣಸ್ವಾಮಿ

    ಬೆಂಗಳೂರು: ರಾಜಕೀಯಕ್ಕಾಗಿ ಕಾಂಗ್ರೆಸ್ ಪಕ್ಷ ದಲಿತ ಕಾರ್ಡ್ ಪ್ಲೇ ಮಾಡುತ್ತಿದೆ ಎಂದು ವಿಧಾನ್ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಹೇಳಿಕೆ ನೀಡಿದರು.

    ನಗರದಲ್ಲಿ ಮಾಧ್ಯಮದವರೊಂದಿಗೆ ದಲಿತ ಸಿಎಂ ಕೂಗು ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಕೆಲವರು ದಲಿತ ಸಿಎಂ ಆಗಲಿ ಎಂದಿದ್ದು, ಅಲ್ಲಿಗೆ ಸಿಎಂ ಬದಲಾವಣೆ ಖಚಿತವಾಗಿದೆ. ರಾಜಕೀಯಕ್ಕಾಗಿ ಕಾಂಗ್ರೆಸ್ (Congress) ಪಕ್ಷ ದಲಿತ ಕಾರ್ಡ್ ಪ್ಲೇ ಮಾಡುತ್ತಿದೆ. ಆದರೆ ದಲಿತರಿಗೆ ಅನ್ಯಾಯ ಆದಾಗ ಸುಮ್ಮನಿರುತ್ತದೆ. ಇವತ್ತು ದಲಿತ ಸಿಎಂ ಕೊಡೋದು ಅನಿವಾರ್ಯವಾಗಿದೆ. ಅದಕ್ಕಾಗಿ ಪರಮೇಶ್ವರ್ ಎದುರು ಸತೀಶ್ ಜಾರಕಿಹೊಳಿಯವರನ್ನು ಎತ್ತಿ ಕಟ್ಟುತ್ತಿದ್ದಾರೆ. ಇದುವರೆಗೆ ಪರಮೇಶ್ವರ್ ಹೆಸರಿತ್ತು. ಈಗ ಸತೀಶ್ ಜಾರಕಿಹೊಳಿಯವರ (Satish Jarkiholi) ಹೆಸರು ಮುನ್ನೆಲೆಗೆ ತಂದಿದ್ದಾರೆ. ಅವರಿಬ್ಬರು ದಲಿತರೇ, ದಲಿತರ ನಡುವೆ ಕಚ್ಚಾಟ ತಂದು ತಮಾಷೆ ನೋಡುವ ಕೆಲಸ ಮಾಡುತ್ತಿರುವವರು ಯಾರು? ಅದಕ್ಕಾಗಿ ಕಾಂಗ್ರೆಸ್‌ನ್ನು ದಲಿತ ವಿರೋಧಿ ಎಂದು ಕರೆಯಲಾಗುತ್ತದೆ ಎಂದರು.ಇದನ್ನೂ ಓದಿ: ಬೈಕ್ ಮೆಕಾನಿಕ್ ರಾತ್ರೋರಾತ್ರಿ ಕೋಟ್ಯಧಿಪತಿ – 25 ಕೋಟಿ ಬಹುಮಾನ ಗೆದ್ದ ಮಂಡ್ಯದ ಗಂಡು

    ವಾಲ್ಮೀಕಿ ಹಗರಣಕ್ಕೆ ವಿಚಾರ:
    ನಾಗೇಂದ್ರ ವಿರುದ್ಧ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಇಡಿಯಿಂದ ಪ್ರಾಸಿಕ್ಯೂಷನ್ ದೂರು ವಿಚಾರವಾಗಿ ಮಾತನಾಡಿ, ಇಡಿ ವರದಿಯಲ್ಲಿ ವಾಲ್ಮೀಕಿ ಹಗರಣಕ್ಕೆ (Valmiki Scam) ನಾಗೇಂದ್ರ ಕಾರಣ ಎಂದು ಇದೆ. ಅವರೇ ಮಾಸ್ಟರ್ ಮೈಂಡ್ ಅಂತಿದೆ. ಇಷ್ಟು ದಿನ ನಾಗೇಂದ್ರ ತಪ್ಪು ಮಾಡಿಲ್ಲ ಎಂದು ಸಿಎಂ ಸಮರ್ಥನೆ ಮಾಡುತ್ತಿದ್ದರು. ಜೊತೆಗೆ ಸಿಎಂ ಖುದ್ದು ಆರ್ಥಿಕ ಸಚಿವರು, ಇವರ ಸೂಚನೆ ಇಲ್ಲದೇ ಏನೂ ಆಗ್ತಿರಲಿಲ್ಲ ಅಂತನೂ ಇದೆ. ಸಿಎಂ ಅಕ್ರಮ ಮುಚ್ಚಿ ಹಾಕಲು ಪ್ರಕರಣ ಎಸ್‌ಐಟಿಗೆ ಕೊಟ್ಟಿದ್ದಾರೆ. ಈಗ ಇಡಿಯ ಈ ವರದಿಯಿಂದ ಎಸ್‌ಐಟಿ ರಚಿಸಿದ್ದು ಕ್ಲೀನ್‌ಚಿಟ್ ಪಡೆಯಲು ಎಂದು ಸಾಬೀತಾಗಿದೆ ಎಂದು ತಿಳಿಸಿದರು.

    ಈ ಪ್ರಕರಣದಲ್ಲಿ ಇಡಿ ಯಾಕೆ ಪ್ರವೇಶ ಆಯ್ತು ಎಂದು ಗೊತ್ತಾಗಿದೆ. ಈಗಾಗಲೇ ಸಿದ್ದರಾಮಯ್ಯ ವಾಲ್ಮೀಕಿ ನಿಗಮದಲ್ಲಿ ಅಕ್ರಮ ಆಗಿದೆ ಎಂದು ಒಪ್ಪಿದ್ದಾರೆ. ಆದರೆ ಇದರಿಂದ ಕ್ಲೀನ್‌ಚಿಟ್ ಕೊಡಿಸಲು ಪ್ರಯತ್ನ ನಡೆಸಲಾಗುತ್ತಿದೆ. ಬಳ್ಳಾರಿ ಲೋಕಸಭಾ ಚುನಾವಣೆಗೆ ವಾಲ್ಮೀಕಿ ನಿಗಮದ 20 ಕೋಟಿ ರೂ. ಕೊಡಲಾಗಿತ್ತು. ಜೊತೆಗೆ ನಾಗೇಂದ್ರ ತಮ್ಮ ವೈಯಕ್ತಿಕ ಖರ್ಚುಗಳಿಗೂ ನಿಗಮದ ಹಣ ಬಳಸಿದ್ದ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಈಗ ಸಿಎಂ ಏನು ಮಾಡುತ್ತಾರೆ? ಸಿಎಂಗೆ ಕಿಂಚಿತ್ ಆತ್ಮ ಗೌರವ, ಸಂವಿಧಾನದ ಮೇಲೆ ಗೌರವ ಇದ್ದರೆ ರಾಜೀನಾಮೆ ಕೊಡುತ್ತಿದ್ದರು ಎಂದು ಕಿಡಿಕಾರಿದರು.

    ಮುಡಾದಲ್ಲಿ ( MUDA Scam)ಸೈಟ್ ವಾಪಸ್ ನೀಡಿದ್ದಾರೆ. ವಾಲ್ಮೀಕಿ ನಿಗಮದಲ್ಲಿ ಇಡಿಯವರು ಹಣ ರಿಕವರಿ ಮಾಡಿದ್ದಾರೆ. ಅಲ್ಲಿಗೆ ಎರಡೂ ಕಡೆಯೂ ಅಕ್ರಮವಾಗಿದೆ. ಸಿಎಂ ಹೇಳಿಸಿಕೊಳ್ಳದೇ ರಾಜೀನಾಮೆ ಕೊಡಲಿ. ಈಗ ಸಿಎಂ ಬಾಮೈದ ಅವರ ವಿಚಾರಣೆ ನಡಿಯುತ್ತಿದೆ. ನಂತರ ಸಿಎಂ ಪತ್ನಿಯವರನ್ನು ವಿಚಾರಣೆಗೆ ಕರೆಯುತ್ತಾರೆ. ನಂತರ ಸಿಎಂಗೂ ಲೋಕಾಯುಕ್ತ ಪೊಲೀಸರು ವಿಚಾರಣೆಗೆ ಕರೆಯುತ್ತಾರೆ. ಸಿಎಂ ಆಗಿರುವಾಗ ಹೇಗೆ ವಿಚಾರಣೆಗೆ ಹೋಗುತ್ತಾರೆ. ಹಾಗಾಗಿ ಸಿದ್ದರಾಮಯ್ಯನವರು ಈಗಲೇ ರಾಜೀನಾಮೆ ಕೊಡಬೇಕು ಎಂದು ಹೇಳಿದರು.

    ಕೆಆರ್‌ಡಿಎಲ್ ವಿಚಾರ:
    ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತದಲ್ಲಿ (KRDL) ಟೆಂಡರ್ ಇಲ್ಲದೇ ಕಾಮಗಾರಿ ಕೊಡುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಭಾಗಕ್ಕೆ 5 ಸಾವಿರ ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ಮಂಜೂರು ಮಾಡಲಾಗಿದೆ. ಕೆಆರ್‌ಡಿಎಲ್‌ನಲ್ಲಿ 40% ಕಮಿಷನ್ ಪಡೆದಿರುವ ಆರೋಪ ಇದೆ. ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಅಜಯ್ ಸಿಂಗ್ ಅವರು 40% ಕಮಿಷನ್ ಪಡೆದು 500 ಕೋಟಿ ರೂ. ತೆಲಂಗಾಣಕ್ಕೆ ಕಳಿಸಿದ್ದಾರೆ. ಈ ಕಮಿಷನ್ ಹಣವನ್ನು ತೆಲಂಗಾಣ ಚುನಾವಣೆಗೂ ಬಳಸಲಾಗಿದೆ. ಇದರಿಂದ ಮಣ್ಣ ಚೆಲ್ಲು ಬಿಲ್ ಪಡೆ ಎಂಬ ಪರಿಸ್ಥಿತಿ ಹುಟ್ಟಿಕೊಂಡಿದೆ. ಇದಕ್ಕೆಲ್ಲಾ ಪ್ರಿಯಾಂಕ್ ಖರ್ಗೆಯವರು ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.ಇದನ್ನೂ ಓದಿ: ಟೆನಿಸ್‌ಗೆ ರಫೆಲ್‌ ನಡಾಲ್‌ ವಿದಾಯ

  • ಮುಖ್ಯಮಂತ್ರಿ ಬದಲಾವಣೆ ಇಲ್ಲ, ಸಿಎಂ ಬದಲಾವಣೆ ಕೇವಲ ಊಹಾಪೋಹ: ಸತೀಶ್ ಜಾರಕಿಹೊಳಿ

    ಮುಖ್ಯಮಂತ್ರಿ ಬದಲಾವಣೆ ಇಲ್ಲ, ಸಿಎಂ ಬದಲಾವಣೆ ಕೇವಲ ಊಹಾಪೋಹ: ಸತೀಶ್ ಜಾರಕಿಹೊಳಿ

    – ನಾನು 2028ಕ್ಕೆ ಸಿಎಂ ಆಗಬೇಕೆಂಬ ಬಯಕೆ ಹೊಂದಿದ್ದೇನೆ

    ಹಾಸನ: ಮುಖ್ಯಮಂತ್ರಿ ಬದಲಾವಣೆ ಇಲ್ಲ, ಸಿಎಂ ಬದಲಾವಣೆ ಕೇವಲ ಊಹಾಪೋಹ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದರು.

    ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಸ್ವತಃ ಹೈಕಮಾಂಡ್ ಹೇಳಿದ್ದು, ಸಿದ್ದರಾಮಯ್ಯ (CM Siddaramaiah) ಅವರ ಬದಲಾವಣೆ ಯಾವುದೇ ಕಾರಣಕ್ಕೂ ಇಲ್ಲ. ಅದು ಕೇವಲ ಊಹಾಪೋಹ. ಸಿಎಂ ಬದಲಾವಣೆ ಚರ್ಚೆ ಏನೇ ಇದ್ದರೂ, ಅದು ಸದ್ಯಕ್ಕೆ ಇಲ್ಲ ಎಂದು ತಿಳಿಸಿದರು.ಇದನ್ನೂ ಓದಿ: ಕೈ ಬೀಸಿ ಕರೆಯುತ್ತಿದೆ ಮಂಗಳೂರು ದಸರಾ – ಬರೋಬ್ಬರಿ 22 ಲಕ್ಷ ಬಲ್ಬುಗಳಿಂದ ಅಲಂಕಾರ

    ಯಾರು ಏನೇ ಹೇಳಿದರೂ ಸಿಎಂ ಬದಲಾವಣೆ ಚರ್ಚೆ ಪಕ್ಷದೊಳಗೆ ನಡೆದಿಲ್ಲ. ಹಾಗಾಗಿ ಆ ಪ್ರಶ್ನೆ ಉದ್ಭವಿಸದು. ಸಿಎಂ ಹಾಲಿ ಇದ್ದಾರೆ. ನಾನು 2028ಕ್ಕೆ ಸಿಎಂ ಆಗಬೇಕೆಂಬ ಬಯಕೆ ಹೊಂದಿದ್ದೇನೆ. ಅದೇ ಕಾರಣಕ್ಕೆ ನನ್ನ ಮಗಳೂ ಕೂಡ ಅಭಿಪ್ರಾಯ ವ್ಯಕ್ತಪಡಿಸಿರಬಹುದು. ಅಲ್ಲಯವರೆಗೂ ಕಾಯೋಣ ಎಂದರು.

    ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಎಂಬ ಹೊರಗಿನ ಚರ್ಚೆಗೆ ನಾನು ಉತ್ತರಿಸುವುದಿಲ್ಲ. ನನ್ನ ಹಲವು ಹಿತೈಷಿಗಳು ನಾನೇ ಸಿಎಂ ಎಂದು ಹೇಳಿದ್ದರೂ, ಅದು ಸಿಎಂ ಸಿದ್ದರಾಮಯ್ಯ ಅವರ ಅವಧಿ ಮುಗಿದ ಮೇಲೆ ಅಷ್ಟೇ. ನಾನು ಮುಂದೆ ಸಿಎಂ ಆದರೆ ಅದು ಸಿದ್ದರಾಮಯ್ಯ ಅವರ ಸಹಕಾರದಿಂದಲೇ ಆಗುತ್ತೇನೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವ ವಿಚಾರವಾಗಿ ಕೆಬಿ ಕೋಳಿವಾಡ (KB Koliwada) ಅವರು ನೀಡಿರುವ ಹೇಳಿಕೆ ಅವರ ವೈಯಕ್ತಿಕ ಎಂದು ತಿಳಿಸಿದರು.

    ಮುಡಾ ಹಗರಣ ವಿಚಾರ:
    ಮೈಸೂರು ಲೋಕಾಯುಕ್ತದಲ್ಲಿ ನಡೆಯುತ್ತಿರುವ ತನಿಖೆಗೆ ಸಿಎಂ ಅವರು ಎಲ್ಲಾ ರೀತಿಯ ಸಹಕಾರ ನೀಡಲಿದ್ದಾರೆ. ಅದರಲ್ಲಿ ಯಾವುದೇ ಮುಜುಗರದ ಪ್ರಶ್ನೆ ಇಲ್ಲ. ಸಿಎಂ ರಾಜೀನಾಮೆ ಕೊಡುತ್ತಾರಾ ಎಂದು ರಾಜೀನಾಮೆಗೆ ಒತ್ತಾಯಿಸುತ್ತಿರುವ ಬಿಜೆಪಿಯ ಹಲವು ನಾಯಕರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಆರೋಪ ಇದೆ ಎಂದು ಹೇಳಿದರು.

    ಜಾತಿ ಜನಗಣತಿ ವಿಚಾರ:
    ರಾಜ್ಯದಲ್ಲಿ ಜಾತಿಗಣತಿ ವರದಿ ಜಾರಿ ವಿಚಾರದಲ್ಲಿ ಬೇಕು-ಬೇಡ ಎಂಬ ಚರ್ಚೆ ನಡೆಯುತ್ತಿದ್ದು, ಈ ಪ್ರಶ್ನೆ ಇನ್ನೂ ಸಂಪುಟದಲ್ಲಿ ಚರ್ಚೆಗೇ ಬಂದಿಲ್ಲ. ಬಂದ ಮೇಲೆ ನೋಡೋಣ ಎಂದರು. ಜೊತೆಗೆ ರಾಜ್ಯದಲ್ಲಿ ಒಳ ಮೀಸಲಾತಿ ಜಾರಿ ಆಗಬೇಕು ಎಂಬ ಕೂಗಿದೆ. ಈ ಸಂಬಂಧ ಪ್ರತಿಭಟನೆ ನಡೆಯುತ್ತಿದೆ. ಚುನಾವಣಾ ಪ್ರಣಾಳಿಕೆಯಲ್ಲೇ ಜಾರಿ ಮಾಡುವ ಭರವಸೆ ನೀಡಿದ್ದು, ಅದನ್ನು ಮಾಡುತ್ತೇವೆ.

    ಇದೇ ವೇಳೆ ನಿಧನರಾದ ವಾಲ್ಮೀಕಿ ಸಮುದಾಯದ ಮುಖಂಡ ಮಹಾಂತಪ್ಪ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಂತಾಪ ಸೂಚಿಸಿದರು.ಇದನ್ನೂ ಓದಿ: BBK 11: ಕಂಟೆಂಟ್‌ಗೋಸ್ಕರ ಲವ್ ಆಗುತ್ತಾ?: ಚೈತ್ರಾಗೆ ಅನುಷಾ ಪ್ರಶ್ನೆ

  • ಸಿಎಂ ಸ್ವಾಭಿಮಾನಿ ಸಮಾವೇಶ ಬಳಿಕ ಖರ್ಗೆ ಭೇಟಿ ಮಾಡಿದ ಬೋಸರಾಜು

    ಸಿಎಂ ಸ್ವಾಭಿಮಾನಿ ಸಮಾವೇಶ ಬಳಿಕ ಖರ್ಗೆ ಭೇಟಿ ಮಾಡಿದ ಬೋಸರಾಜು

    ರಾಯಚೂರು: ರಾಯಚೂರು (Raichuru) ಜಿಲ್ಲೆಯ ಮಾನ್ವಿಯಲ್ಲಿ ನಡೆದ ಸಿಎಂ ಸ್ವಾಭಿಮಾನಿ ಸಮಾವೇಶ ಬಳಿಕ ಖರ್ಗೆಯವರನ್ನು ಸಚಿವ ಎನ್.ಎಸ್.ಬೋಸರಾಜು (NS Bosaraju) ಭೇಟಿ ಮಾಡಿದರು.

    ಮುಡಾ ಪ್ರಕರಣದಲ್ಲಿ (MUDA Scam) ಬಿಜೆಪಿ (BJP), ಜೆಡಿಎಸ್ (JDS) ಆರೋಪಗಳಿಗೆ ಉತ್ತರ ನೀಡಬೇಕೆಂದೇ ಮಾನ್ವಿಯಲ್ಲಿ (Manvi) ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಬೆಂಬಲಿಗರು ಆಯೋಜಿಸಿದ್ದ ಸಮಾವೇಶದಲ್ಲಿ ಎನ್.ಎಸ್.ಬೋಸರಾಜು ಮಾತನಾಡಿದರು. ಬಳಿಕ ಬೆಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು (Mallikarjun Kharge) ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.ಇದನ್ನೂ ಓದಿ:

    ಸಿಎಂ ಸಿದ್ದರಾಮಯ್ಯಗೆ ಬೆಂಬಲ ಸೂಚಿಸಲು ಬೃಹತ್ ಸಮಾವೇಶ ಆಯೋಜಿಸಲಾಗಿತ್ತು. ಸಮಾವೇಶದ ಮೂಲಕ ವಿರೋಧ ಪಕ್ಷದ ನಾಯಕರಿಗೆ ಸಿಎಂ ಬೆಂಬಲಿಗರು ಠಕ್ಕರ್ ಕೊಟ್ಟರು. ಸಿದ್ದರಾಮಯ್ಯ ಜೊತೆ ನಾವೆಲ್ಲ ಇದ್ದೀವಿ ಎಂದು ಹೇಳಿ ಸಂದೇಶ ರವಾನಿಸಿದರು. ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಲ್ಲ ಎಂದು ಸಿಎಂ ಭಾವನಾತ್ಮಕವಾಗಿ ಹೇಳಿದರು.

    ಬೃಹತ್ ಸಮಾವೇಶ ಬಳಿಕ ಮಲ್ಲಿಕಾರ್ಜುನ ಖರ್ಗೆಯನ್ನು ಬೆಂಗಳೂರಿನ ಖರ್ಗೆ ನಿವಾಸದಲ್ಲಿ ಭೇಟಿಯಾದರು. ಭೇಟಿ ಮಾಡಿ ಉಭಯ ಕುಶಲೋಪರಿಯನ್ನು ವಿಚಾರಿಸಿದರು. ಪಕ್ಷದ ಕಾರ್ಯ ಚಟುವಟಿಕೆಗಳು ಹಾಗೂ ಕೈಗೊಳ್ಳಬೇಕಾದ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚಿಸಲಾಯಿತು ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.ಇದನ್ನೂ ಓದಿ:

  • ಸಿಎಂ ಹುದ್ದೆ ಕನಸು ಕಂಡರೆ ಹೇಳುವೆ, ಸದ್ಯಕ್ಕೆ ಬೇಡ – ಸಿಎಂ ರಾಜೀನಾಮೆ ಕೊಡುವ ಕಾಲ ಸನ್ನಿಹಿತ: ವಿಜಯೇಂದ್ರ

    ಸಿಎಂ ಹುದ್ದೆ ಕನಸು ಕಂಡರೆ ಹೇಳುವೆ, ಸದ್ಯಕ್ಕೆ ಬೇಡ – ಸಿಎಂ ರಾಜೀನಾಮೆ ಕೊಡುವ ಕಾಲ ಸನ್ನಿಹಿತ: ವಿಜಯೇಂದ್ರ

    ಬೆಂಗಳೂರು: ಸಿಎಂ ರಾಜೀನಾಮೆ ಕೊಡುವ ಕಾಲ ಸನ್ನಿಹಿತವಾಗಿದೆ. ಯಾವ ಸಂದರ್ಭದಲ್ಲಿ ಬೇಕಾದರೂ ರಾಜೀನಾಮೆ ಕೊಟ್ಟೇ ಕೊಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ (BY Vijayendra) ಅವರು ವಿಶ್ವಾಸ ವ್ಯಕ್ತಪಡಿಸಿದರು.

    ಮಾಧ್ಯಮ ಪ್ರತಿನಿಧಿಗಳೊಂದಿಗಿಂದು ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ (Siddaramaiah) ರಾಜೀನಾಮೆಗೆ ಕ್ಷಣಗಣನೆ ಎಂಬ ಹೇಳಿಕೆ ಹಿನ್ನೆಲೆ ಕುರಿತ ಪ್ರಶ್ನೆಗೆ ಉತ್ತರಿಸಿದರು. ಸಾಕಷ್ಟು ಜನ ಸಚಿವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡುತ್ತಿದ್ದಾರೆ. ಡಿ.ಕೆ ಶಿವಕುಮಾರ್ (DK Shivakumar) ಅವರು ಪಾಪ ಏನೋ ಪ್ಲಾನ್ ಜೊತೆ ಖರ್ಗೆಯವರ ಮನೆಗೆ ಹೋಗಿದ್ದರು. ಬರೇ ಬಿಲ್ಡಿಂಗ್ ಫೋಟೊ ಕಾಣುತ್ತಿತ್ತು. ಅದೇನು ಪ್ಲಾನ್ ಎಂದು ಗೊತ್ತಾಗಿಲ್ಲ ಎಂದು ವ್ಯಂಗ್ಯವಾಡಿದರು.

    ವಿಜಯೇಂದ್ರ ಅವರು ಸಿಎಂ ಕನಸು ಕಾಣುತ್ತಿದ್ದಾರೆ. ಹಾಗಾಗಿ ಸರ್ಕಾರ ಪತನಕ್ಕೆ ಷಡ್ಯಂತ್ರ ನಡೆಸುತ್ತಿದ್ದಾರೆ ಎಂಬ ಮಾತುಗಳಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕನಸು ಕಾಣುವ ಸಂದರ್ಭ ಬಂದರೆ ಹೇಳುವೆ, ಸದ್ಯಕ್ಕೆ ಬೇಡ ಎಂದು ನಗುತ್ತಾ ತಿಳಿಸಿದರು.

    ಆರೋಪಿ ಸ್ಥಾನದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಒಂದು ಪಾರದರ್ಶಕ ತನಿಖೆಗೆ ಅವಕಾಶ ಮಾಡಿಕೊಡಬೇಕು ಎಂಬ ಆಗ್ರಹವನ್ನು ಬಿಜೆಪಿ ನಿರಂತರವಾಗಿ ಮಾಡುತ್ತ ಬಂದಿದೆ. ನಮ್ಮ ವಿಚಾರಗಳು ಸ್ಪಷ್ಟ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ರಾಜೀನಾಮೆ ಕೇಳೋ ಮೊದಲು ವಿಜಯೇಂದ್ರ ನೀಡಲಿ: ಈಶ್ವರ್ ಖಂಡ್ರೆ

    ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಈ ಸರಕಾರ ಬಂದ ಮೇಲೆ ಅಭಿವೃದ್ಧಿ ಎಂಬುದು ಸ್ಥಗಿತ ಎಂಬುದಕ್ಕಿಂತ ಶುರುವೇ ಆಗಿಲ್ಲ. ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಇದರ ನಡುವೆ ಜನರೂ ಈ ಸರಕಾರದ ಬಗ್ಗೆ ವಿಶ್ವಾಸ ಕಳಕೊಂಡಿದ್ದಾರೆ. ಮುಡಾ, ವಾಲ್ಮೀಕಿ ನಿಗಮದ ಹಗರಣಗಳ ಪಾರದರ್ಶಕ ತನಿಖೆಯ ದೃಷ್ಟಿಯಿಂದ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕಿದೆ. ಭಂಡತನ ಮಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ವಿಜಯೇಂದ್ರ ಹೇಳಿದರು. ಇದನ್ನೂ ಓದಿ: ಪ್ರತಿಯೊಬ್ಬರಿಗೂ ಮುಖ್ಯಮಂತ್ರಿ ಆಗಬೇಕು ಅಂತಾ ಆಸೆ ಇರುತ್ತೆ: ಸತೀಶ್‌ ಜಾರಕಿಹೊಳಿ

    ಜಾತಿ‌ ಗಣತಿ ವಿಷಯದಲ್ಲಿ ಪ್ರಾಮಾಣಿಕತೆಯ ಕೊರತೆ
    ಪ್ರಶ್ನೆಗೆ ಉತ್ತರ ಕೊಟ್ಟ ಬಿ.ವೈ.ವಿಜಯೇಂದ್ರ ಅವರು, ಜಾತಿ ಜನಗಣತಿ ಬಗ್ಗೆ ಸಿದ್ದರಾಮಯ್ಯನವರು ಮಾತನಾಡುತ್ತಿದ್ದಾರೆ. ಎಲ್ಲೋ ಒಂದು ಕಡೆ ಪ್ರಾಮಾಣಿಕತೆಯ ಕೊರತೆ ಎದ್ದು ಕಾಣುತ್ತಿದೆ. ಮುಖ್ಯಮಂತ್ರಿಗಳಿಗೆ ಜಾತಿಗಣತಿ ವಿಚಾರದಲ್ಲಿ ಪ್ರಾಮಾಣಿಕತೆ ಇದ್ದಿದ್ದೇ ಆದರೆ, ಹಿಂದಿನ ಅವಧಿಯಲ್ಲಿ ಕೈಸೇರಿದ್ದ ವರದಿಯನ್ನು ಅವತ್ತೇ ಅನುಷ್ಠಾನ ಮಾಡಬಹುದಿತ್ತು. ಅವತ್ಯಾಕೆ ಮಾಡಿಲ್ಲ? ಈಗ ಸಿಎಂ ಕುರ್ಚಿ ಅಲ್ಲಾಡುತ್ತಿರುವಾಗ ತಕ್ಷಣ ಅವರಿಗೆ ಜ್ಞಾನೋದಯ ಆಗಿದೆ. ನೆನಪು ಕೂಡ ಆಗಿದೆ. ಕ್ಯಾಬಿನೆಟ್‍ಗೆ ತಂದು ಅನುಷ್ಠಾನ ಮಾಡುವುದಾಗಿ ಹೇಳಿದ್ದಾರೆ ಎಂದು ವಿಜಯೇಂದ್ರ ಆಕ್ಷೇಪಿಸಿದರು.

    ಇವತ್ತು ಡಿ.ಕೆ ಶಿವಕುಮಾರ್ ಅವರೇನು ಹೇಳಿದ್ದಾರೆ? ಒಕ್ಕಲಿಗರ ಸಂಘದ ಅಧ್ಯಕ್ಷ ಬಾಲಕೃಷ್ಣ ಅವರೇನು ಹೇಳಿದ್ದಾರೆ? ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಏನು ಹೇಳಿದ್ದಾರೆ? ಎಲ್ಲವನ್ನೂ ತಾವು ಗಮನಿಸಬೇಕು. ರಾಜಕೀಯ ಬೇರೆ, ಆದರೆ, ರಾಜಕೀಯದ ಹೊರತಾಗಿ ಮುಖ್ಯಮಂತ್ರಿಗಳು ನಡೆದುಕೊಳ್ಳಬೇಕಿದೆ. ಮುಖ್ಯಮಂತ್ರಿಗಳು ರಾಜ್ಯದ ಎಲ್ಲ ವರ್ಗ, ಸಮುದಾಯಗಳಿಗೆ ನ್ಯಾಯ ಕೊಡಬೇಕು. ಇವತ್ತು ಹಿಂದುಳಿದ ವರ್ಗಗಳು, ಶೋಷಿತ ಸಮುದಾಯಗಳಿಗೆ ನ್ಯಾಯ ಕೊಡಬೇಕೆಂಬುದರಲ್ಲಿ ಎರಡು ಮಾತಿಲ್ಲ. ಅದರಿಂದ ಮತ್ತೊಬ್ಬರಿಗೆ ಅನ್ಯಾಯ ಆಗಬಾರದು. ನ್ಯಾಯಯುತವಾಗಿ ನಡೆದುಕೊಳ್ಳಬೇಕಿದೆ. ಜಾತಿಗಣತಿ ಅವೈಜ್ಞಾನಿಕ ಎಂಬುದು ಎಲ್ಲರ ಅಭಿಪ್ರಾಯ ಎಂದು ವಿಶ್ಲೇಷಿಸಿದರು. ತಮ್ಮ ಸ್ಥಾನಕ್ಕೆ ಕುತ್ತು ಬಂದಾಗ ಮುಖ್ಯಮಂತ್ರಿಗಳು ಭಾವನಾತ್ಮಕ ರಾಜಕಾರಣ ಮಾಡುತ್ತಿರುವ ಪ್ರಯತ್ನ ಎಂಬ ಭಾವನೆ ಎಲ್ಲರದೂ ಕೂಡ ಎಂದು ತಿಳಿಸಿದರು.

  • ಸಿದ್ದರಾಮಯ್ಯರನ್ನ ಕೇಳೋ ಮೊದಲು ವಿಜಯೇಂದ್ರ ರಾಜೀನಾಮೆ ನೀಡಲಿ: ಈಶ್ವರ್ ಖಂಡ್ರೆ

    ಸಿದ್ದರಾಮಯ್ಯರನ್ನ ಕೇಳೋ ಮೊದಲು ವಿಜಯೇಂದ್ರ ರಾಜೀನಾಮೆ ನೀಡಲಿ: ಈಶ್ವರ್ ಖಂಡ್ರೆ

    ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ಅವರ ರಾಜೀನಾಮೆ ಕೇಳುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (B.Y Vijayendra) ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ‌(Eshwara Khandre) ಆಗ್ರಹಿಸಿದ್ದಾರೆ.

    ಮುಡಾ ‌ಕೇಸ್‌ನಲ್ಲಿ (MUDA Scam) ಸಿಎಂ ರಾಜೀನಾಮೆಗೆ ಒತ್ತಾಯಿಸಿರುವ ವಿಜಯೇಂದ್ರ ಅವರಿಗೆ ತಿರುಗೇಟು ಕೊಟ್ಟ ಖಂಡ್ರೆ, ಅನಾವಶ್ಯಕವಾಗಿ ಬಿವೂವಿ ಮಾತಾಡ್ತಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ ಕೇಳೋ ನೈತಿಕತೆ ಇವರಿಗೆ ಇಲ್ಲ. ಸಿದ್ದರಾಮಯ್ಯ ರಾಜೀನಾಮೆ ಕೇಳ್ತಿರೋ ವಿಜಯೇಂದ್ರ ರಾಜೀನಾಮೆ ಯಾವಾಗ ಅಂತ ವಿಜಯಪುರ ಭಾಗದವರು ಕೇಳ್ತಿದ್ದಾರೆ. ನಿಮ್ಮ ಕುರ್ಚಿ ಅಲುಗಾಡುತ್ತಿದೆ. ಹೀಗಿರುವಾಗ ಸಿದ್ದರಾಮಯ್ಯ ರಾಜೀನಾಮೆ ಕೇಳ್ತೀರಾ? ಎಂದು ಪ್ರಶ್ನಿಸಿದ್ದಾರೆ.

    136 ಶಾಸಕರಿಂದ ಆಯ್ಕೆ ಆದ ಸಿಎಂ ಅವರ ರಾಜೀನಾಮೆಯನ್ನು ವಿಪಕ್ಷಗಳು ಕೇಳ್ತಿವೆ. ವಿಜಯೇಂದ್ರ ಅವರೇ ಶಾಸಕ ಮುನಿರತ್ನ, ಅಶೋಕ್, ಯಡಿಯೂರಪ್ಪ, ಸಿ.ಟಿ ರವಿ, ಜೆಡಿಎಸ್ ನಾಯಕ ಹೆಚ್.ಡಿ. ರೇವಣ್ಣ ಮೇಲೆ ಆರೋಪ ಇದೆ. ಅವರ ರಾಜೀನಾಮೆ ಪಡೆದಿದ್ದೀರಾ? ಯತ್ನಾಳ್ ನಿಮ್ಮ ಕುಟುಂಬ ಬಗ್ಗೆ ಏನೋನೋ ಮಾತಾಡಿದ್ದಾರೆ. ಅವರ ಮೇಲೆ ಕ್ರಮ ತೆಗೆದುಕೊಳ್ಳುವ ಧೈರ್ಯ ಇದೆಯೋ? ಎಂದು ಖಾರವಾಗಿ ಪ್ರಶ್ನಿದ್ದಾರೆ.

    ಸಿದ್ದರಾಮಯ್ಯ ಪತ್ನಿಯನ್ನು ಕೇಸ್‌ನಲ್ಲಿ ಎಳೆದು ತಂದಿದ್ದೀರಿ. ರಾಜಕೀಯಕ್ಕಾಗಿ ನೀವು ಯಾವ ಮಟ್ಟಿಗೆ ಬೇಕಾದ್ರೂ ಇಳಿಯುತ್ತೀರಿ.‌ ಬಿಜೆಪಿ ಅವರೇ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದ್ರಿ. ಬಿಜೆಪಿ-ಜೆಡಿಎಸ್ ಕುತಂತ್ರ ಮಾಡಿ ಇಂತಹ ಆರೋಪ ಮಾಡ್ತಿದ್ದೀರಿ. ಮುಡಾ ಪ್ರಕರಣ ಪೂರ್ವ ನಿಯೋಜಿತ ಪ್ರಕರಣ. ಇದೊಂದು ಬಿಜೆಪಿ-ಜೆಡಿಎಸ್ ಸಂಚು. ಬಿಜೆಪಿ-ಜೆಡಿಎಸ್ ಕುತಂತ್ರ ನಡೆಯೋದಿಲ್ಲ. 136 ಜನ ಒಗ್ಗಟ್ಟಾಗಿ ಇದ್ದೇವೆ. ಸಿದ್ದರಾಮಯ್ಯಗೆ ನಾವೆಲ್ಲ ಬಂಡೆಯಂತೆ ಜೊತೆಗೆ ಇರುತ್ತೇವೆ. ಸರ್ಕಾರ ಸುಭದ್ರವಾಗಿದೆ. ಉತ್ತಮವಾಗಿ ಆಡಳಿತ ಕೊಡುತ್ತೇವೆ ಎಂದಿದ್ದಾರೆ.

  • ಹೆಲಿಕಾಪ್ಟರ್‌ನಲ್ಲಿ ಬಂದು ಮುಡಾ ಕಡತ ತೆಗೆದುಕೊಂಡು ಹೋಗಿದ್ದಾರೆ: ಬೈರತಿ ವಿರುದ್ಧ ದೂರು

    ಹೆಲಿಕಾಪ್ಟರ್‌ನಲ್ಲಿ ಬಂದು ಮುಡಾ ಕಡತ ತೆಗೆದುಕೊಂಡು ಹೋಗಿದ್ದಾರೆ: ಬೈರತಿ ವಿರುದ್ಧ ದೂರು

    ಬೆಂಗಳೂರು: ಹೆಲಿಕಾಪ್ಟರ್‌ನಲ್ಲಿ(Helicopter) ಬಂದು ಮುಡಾ ಹಗರಣದ (MUDA Scam) ಕಡತಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ (Byrathi Suresh) ವಿರುದ್ಧ ಸ್ನೇಹಮಯಿ ಕೃಷ್ಣ (Snehamayi Krishna) ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದಾರೆ.

    ಭಾನುವಾರ ಇಮೇಲ್‌ ಮೂಲಕ ಬೈರತಿ ಸುರೇಶ್‌ ಮತ್ತು ಲೋಕಾಯುಕ್ತ ಎಸ್‌ಪಿ ಸುಜೀತ್‌ ವಿರುದ್ಧ ದೂರು ನೀಡಿದ್ದ ಸ್ನೇಹಮಯಿ ಕೃಷ್ಣ ಅವರು ಇಂದು ಖುದ್ದು ಡಿಜಿಪಿ ಅವರನ್ನು ಭೇಟಿಯಾಗಿ ದೂರು ನೀಡಲು ಸಮಯ ಕೇಳಿದ್ದಾರೆ.

    ದೂರುದಾರ ಸ್ನೇಹಮಯಿ ಕೃಷ್ಣ

    ಮುಡಾ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರೂ ಆ ದಾಖಲೆಗಳನ್ನು ವಶಕ್ಕೆ ಪಡೆಯದೇ ಸುಜೀತ್‌ ಅವರು ಸಚಿವರಿಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿಯ ಮೇರೆ ಬೈರತಿ ಸುರೇಶ್‌ ಅವರು ಹೆಲಿಕಾಪ್ಟರ್‌ನಲ್ಲಿ ಬಂದು ಕಡತಗಳನ್ನ ತೆಗೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಸ್ನೇಹಮಯಿ ಕೃಷ್ಣ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: Jammu Kashmir | ಫಲಿತಾಂಶಕ್ಕೆ ಮೊದಲೇ ಐವರು ಶಾಸಕರಾಗಿ ಆಯ್ಕೆ – LG ನಿರ್ಧಾರ ಸರಿಯೇ?

    ಮುಡಾ ಪ್ರಕರಣದ ಸುದ್ದಿ ಜೋರಾಗುತ್ತಿದ್ದ ಸಮಯದಲ್ಲಿ ಬೈರತಿ ಸುರೇಶ್‌ ಬೆಂಗಳೂರಿನಿಂದ ಮೈಸೂರಿನಲ್ಲಿ ವಿಶೇಷ ಹೆಲಿಕಾಪ್ಟರ್‌ನಲ್ಲಿ ತೆರಳಿದ್ದ ವಿಚಾರ ಈ ಜುಲೈನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

    ಈ ಸಂಬಂಧ ಮಾತನಾಡಿದ್ದ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಮುಡಾ ಹಗರಣವನ್ನು ಮುಚ್ಚಿಹಾಕಲು ಸರ್ಕಾರವೇ ಹೊರಟಿದೆ. ಇದು ಅರ್ಕಾವತಿ ರೀಡೂ ಹಗರಣದ್ದಂತೆ ಈ ಹಗರಣ ನಡೆದಿದೆ. ಭೈರತಿ ಸುರೇಶ್ ಅವರು ಹಗರಣವೇ ನಡೆದಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಮೈಸೂರಿಗೆ ವಿಶೇಷ ಹೆಲಿಕಾಪ್ಟರ್‌ನಲ್ಲಿ ಹೋಗಿ ಕಂತೆಗಟ್ಟಲೇ ಕಡತಗಳನ್ನು, ದಾಖಲೆಗಳನ್ನು ತುಂಬಿಕೊಂಡು ತಂದವರು ಯಾರು? ಹೆಲಿಕಾಪ್ಟರ್ ನಲ್ಲಿ ತಂದ ದಾಖಲೆಗಳನ್ನು ಸುರೇಶ್ ಎಲ್ಲೆಲ್ಲಿ ಇಟ್ಟಿದ್ದಾರೋ ಗೊತ್ತಿಲ್ಲ. ಆ ಬಗ್ಗೆ ಮಾಹಿತಿ ಜನರಿಗೆ ಗೊತ್ತಾಗಬೇಕು ಎಂದು ಆರೋಪಿಸಿದ್ದರು.

     

  • ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಆರೋಪ – 8 ಲಕ್ಷ ದಾಖಲಾತಿ ನೀಡುವಂತೆ ಜಸ್ಟಿಸ್ ದೇಸಾಯಿ ಆಯೋಗ ಸೂಚನೆ

    ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಆರೋಪ – 8 ಲಕ್ಷ ದಾಖಲಾತಿ ನೀಡುವಂತೆ ಜಸ್ಟಿಸ್ ದೇಸಾಯಿ ಆಯೋಗ ಸೂಚನೆ

    – 19 ಲಕ್ಷ ರೂ.ಗೆ ಜೆರಾಕ್ಸ್‌ ಮಿಷಿನ್‌ ಖರೀದಿಸಿದ ಮುಡಾ

    ಮೈಸೂರು: ಮುಡಾ (ಮೈಸೂರು ನರಾಭಿವೃದ್ಧಿ ಪ್ರಾಧಿಕಾರ – MUDA)ದಲ್ಲಿ ಬ್ರಂಹ್ಮಾಂಡ ಭ್ರಷ್ಟಾಚಾರ ಆರೋಪದ ಹಿನ್ನೆಲೆ 8 ಲಕ್ಷ ದಾಖಲಾತಿ ನೀಡುವಂತೆ ಜಸ್ಟಿಸ್ ದೇಸಾಯಿ ಆಯೋಗದಿಂದ ಮುಡಾಗೆ ಸೂಚನೆ ನೀಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. 8 ಲಕ್ಷ ದಾಖಲಾತಿ ನೀಡುವಂತೆ ಸೂಚಿಸಿರುವ ಜಸ್ಟಿಸ್ ದೇಸಾಯಿ ಆಯೋಗ, ಎಲ್ಲಾ ದಾಖಲೆಗಳು (MUDA Document) ಸರ್ಟಿಫೈಡ್ ಆಗಿರಬೇಕು ಎಂದು ತಾಕೀತು ಮಾಡಿದೆ.

    2005 ರಿಂದ 2024ರ ವರೆಗೆ 50:50 ಅನುಪಾತದಡಿ ಹಂಚಿಕೆಯಾದ ನಿವೇಶನಗಳಿಗೆ (50:50 Site) ಸಂಬಂಧಿಸಿದ ದಾಖಲೆಗಳು, ಪ್ರೋತ್ಸಾಹದಾಯಿಕ ನಿವೇಶನ ಹಾಗೂ ಬದಲಿ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದ ದಾಖಲೆಗಳನ್ನು ಸಮಗ್ರವಾಗಿ ನೀಡುವಂತೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಮುಡಾ 19 ಲಕ್ಷ ರೂ. ಮೌಲ್ಯದ 9 ಹೊಸ ಜೆರಾಕ್ಸ್ ಮೆಷಿನ್ ಖರೀದಿಸಿದೆ. ಇದನ್ನೂ ಓದಿ: ಬೀದರ್‌ ಪೊಲೀಸರ ಭರ್ಜರಿ ಕಾರ್ಯಾಚರಣೆ – 2 ಕೋಟಿಗೂ ಅಧಿಕ ಮೌಲ್ಯದ ಗಾಂಜಾ ಸೀಜ್‌

    ಈಗಾಗಲೇ ಮೂಡಾ ಬಳಿ 4 ಹಳೆಯ ಜೆರಾಕ್ಸ್ ಮೆಷಿನ್‌ಗಳಿದ್ದು, ಇದರೊಂದಿಗೆ ಹೆಚ್ಚುವರಿ 9 ಜೆರಾಕ್ಸ್‌ ಮಿಷನ್‌ಗಳನ್ನು ಖರೀದಿ ಮಾಡಿದೆ. ಒಟ್ಟು 13 ಜೆರಾಕ್ಸ್ ಮಿಷಿನ್‌ಗಳಲ್ಲಿ ದಾಖಲಾತಿ ತೆಗೆಯುವ ಕೆಲಸ ನಡೆಯುತ್ತಿದೆ. ಜೆರಾಕ್ಸ್‌ ಮಿಷಿನ್‌ ಖರೀದಿ ಮಾಡಿರುವ ಬಿಲ್‌ ಪ್ರತಿ ಪಬ್ಲಿಕ್‌ ಟಿವಿಗೆ ಲಭ್ಯವಾಗಿದೆ. ಜಸ್ಟೀಸ್‌ ದೇಸಾಯಿ ಆಯೋಗಕ್ಕೆ ಅಲ್ಲದೇ ಲೋಕಾಯುಕ್ತಕ್ಕೂ ದಾಖಲೆಗಳ 1 ಪ್ರತಿ ನೀಡಬೇಕಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಜಿದ್ದಾ ಜಿದ್ದಿ ಕಣದಲ್ಲಿ ಗೆದ್ದು ಬೀಗಿದ ಭಾರತ; ಪಾಕ್‌ ವಿರುದ್ಧ 6 ವಿಕೆಟ್‌ ಜಯ – ಸೆಮಿಸ್‌ ಕನಸು ಜೀವಂತ

    14 ನಿವೇಶನ ಮಹಜರು:
    ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನೀಡಿದ್ದ ವಿಜಯನಗರದ 3 ಮತ್ತು 4ನೇ ಹಂತದಲ್ಲಿ ನೀಡಿದ್ದ 14 ನಿವೇಶನಗಳನ್ನು ಈಗಾಗಲೇ ವಾಪಸ್ ನೀಡಿದ್ದಾರೆ. ಈ ನಡುವೆಯೆ ಅದರ ತನಿಖೆ ತೀವ್ರಗೊಳ್ಳುತ್ತಿದ್ದು, ಲೋಕಾಯುಕ್ತ ಪೊಲೀಸರು ಶುಕ್ರವಾರ 14 ಸೈಟುಗಳ ಮಹಜರು ನಡೆಸಿದ್ದಾರೆ. ಲೋಕಾಯುಕ್ತ ಎಸ್ಪಿ ಟಿ.ಜೆ ಉದೇಶ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದೂರುದಾರ ಸ್ನೇಹಮಹಿ ಕೃಷ್ಣ ಸಮಕ್ಷಮದಲ್ಲೇ ಸ್ಥಳ ಮಹಜರು ನಡೆಸಿದ್ದಾರೆ. ಈ ಸೈಟ್ ಗಳ ನಕ್ಷೆಯನ್ನು ಇಟ್ಟುಕೊಂಡು ಇವುಗಳ ಮಹಜರ್ ಮಾಡಲಾಗಿದೆ. ಇದನ್ನೂ ಓದಿ: ಮಾಜಿ ಶಾಸಕ ಮೊಯಿದ್ದೀನ್ ಬಾವ ಸಹೋದರ ಮಿಸ್ಸಿಂಗ್; ನಾಪತ್ತೆ ಹಿಂದಿದ್ಯಾ ಮಹಿಳೆ ಕೈವಾಡ? ಬ್ಲ್ಯಾಕ್‌ಮೇಲ್‌ಗೆ ಬಲಿಯಾದ್ರಾ?