ಬೆಂಗಳೂರು/ಮೈಸೂರು: ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಹಗರಣ (MUDA Scam)ಕ್ಕೆ ಸಂಬಂಧಿಸಿದಂತೆ ಜಾರಿನಿರ್ದೇಶನಾಲಯ (ED) ದಾಳಿ ನಡೆಸಿದ ವೇಳೆ ನಾಪತ್ತೆಯಾಗಿದ್ದ ಮುಡಾದ ಮಾಜಿ ಆಯುಕ್ತ, ಐಎಎಸ್ ಅಧಿಕಾರಿ ದಿನೇಶ್‌ಕುಮಾರ್ (Dinesh Kumar) ಕೊನೆಗೂ ಪತ್ತೆಯಾಗಿದ್ದಾರೆ. ಶನಿವಾರವಾದ ಇಂದು ಇಡಿ ಅಧಿಕಾರಿಗಳ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ.
ಕಳೆದ ಅಕ್ಟೋಬರ್ 28ರಂದು ದಿನೇಶ್ ಕುಮಾರ್ ನೆಲೆಸಿದ್ದ ಬಾಣಸವಾಡಿಯ ದೀಪಿಕಾ ರಾಯಲ್ ಅಪಾರ್ಟ್‌ಮೆಂಟ್ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇಡಿ ಅಧಿಕಾರಿಗಳ ದಾಳಿಯ ವೇಳೆ ವಾಕಿಂಗ್‌ಗೆ ತೆರಳಿದ್ದ ದಿನೇಶ್ ಕುಮಾರ್ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಈ ಸಂಬಂಧ ಇಡಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿತ್ತು. ಅದರಂತೆ ಶನಿವಾರ ಸಂಜೆ ವಿಚಾರಣೆ ಎದುರಿಸಿ ಮನೆಗೆ ಹೊರಟಿದ್ದಾರೆ. ಸದ್ಯ ಬಂಧನದ ಭೀತಿಯಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಕಡ್ಲೇಪುರಿಯಂತೆ ಮುಡಾ ಸೈಟ್ ಹಂಚಿಕೆ – 1962ರಲ್ಲಿ ವಶಪಡಿಸಿಕೊಂಡ ಭೂಮಿಗೆ 2023ರಲ್ಲಿ ಪರಿಹಾರ!
2022ರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಜಿ.ಟಿ.ದಿನೇಶ್ ಕುಮಾರ್ ಅಧಿಕಾರ ಸ್ವೀಕರಿಸಿದ್ದರು. ದಿನೇಶ್ ಕುಮಾರ್ ವಿರುದ್ಧ ಮುಡಾದಲ್ಲಿ 50:50 ಅನುಪಾತದಡಿ ಸೈಟ್ ಹಂಚಿಕೆಯಲ್ಲಿ ಅಕ್ರಮ ಆರೋಪ ಕೇಳಿ ಬಂದ ಹಿನ್ನೆಲೆ ಸರ್ಕಾರ ಅವರನ್ನು ವರ್ಗಾವಣೆ ಮಾಡಿತ್ತು. ಯಾವುದೇ ಸ್ಥಳ ತೋರಿಸದೇ ದಿನೇಶ್ ಕುಮಾರ್ ಅವರನ್ನು ವರ್ಗಾವಣೆ ಮಾಡಿದ್ದ ಸರ್ಕಾರ ನಂತರ ಹಾವೇರಿ ವಿವಿಯ ಕುಲಸಚಿವ ಹುದ್ದೆಯನ್ನು ನೀಡಿತ್ತು. ಕುಲಸಚಿವ ಹುದ್ದೆಯನ್ನು ನೀಡಿದ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಸರ್ಕಾರ ಕೊನೆಗೆ ಆ ಆದೇಶವನ್ನೇ ರದ್ದು ಮಾಡಿತ್ತು. ಇದನ್ನೂ ಓದಿ: ಮುಡಾದ 50:50 ಅನುಪಾತದ ಫಲಾನುಭವಿಗಳ ಮೊದಲ ಲಿಸ್ಟ್ ಬಿಡುಗಡೆ – ಒಬ್ಬೊಬ್ಬರಿಗೆ 20ರಿಂದ 25 ಸೈಟ್ ಹಂಚಿಕೆ
– ‘ಪಬ್ಲಿಕ್ ಟಿವಿ’ಗೆ ಸೈಟ್ ಹಂಚಿಕೆ ಫಲಾನುಭವಿಗಳ ಪಟ್ಟಿ ಲಭ್ಯ
ಮೈಸೂರು: ಮುಡಾ 50:50 ಅನುಪಾತದ ಫಲಾನುಭವಿಗಳ ಮೊದಲ ಲಿಸ್ಟ್ ಹೊರಬಂದಿದೆ. ಒಬ್ಬ ವ್ಯಕ್ತಿಗೆ ಮುಡಾದಿಂದ ಪರಿಹಾರ ರೂಪದಲ್ಲಿ ಸಿಕ್ಕಿರೋದು ಹತ್ತಲ್ಲ, ಹದಿನೈದಲ್ಲ ಬರೋಬರಿ 20ರಿಂದ 25 ಸೈಟ್ ಎಂಬುದು ಲಿಸ್ಟ್ನಿಂದ ಬಹಿರಂಗವಾಗಿದೆ.
50:50 ಅನುಪಾತದ ಮೊದಲ ಲಿಸ್ಟ್ನ ಟಾಪ್ ರ‍್ಯಾಂಕಿಂಗ್‌ನಲ್ಲಿ ಇರೋದು ಅಬ್ದುಲ್ ವ್ಹಾಜಿದ್. ಈ ವ್ಯಕ್ತಿಗೆ 25 ಸೈಟ್ ಸಿಕ್ಕಿದೆ. ಸೈಯದ್ ಯೂಸೂಫ್ಹ್ಗೆ 22 ಸೈಟ್, ಮಲ್ಲಪ್ಪಗೆ 20 ಸೈಟ್ ಮತ್ತು ವೈರಮುಡು ಎಂಬವವರಿಗೆ 10 ಸೈಟ್ ನೀಡಲಾಗಿದೆ. ಮೊದಲ ಪಟ್ಟಿಯಲ್ಲಿ 300 ಸೈಟ್‌ಗಳ ಬಗ್ಗೆ ಮಾಹಿತಿ ಸಿಕ್ಕಿದೆ.
50:50 ಅನುಪಾತದ ಸೈಟ್ ಹಂಚುವಲ್ಲಿ ಆಯುಕ್ತರು ಶರವೇಗ ತೋರಿದ್ದಾರೆ. 1962 ರಲ್ಲಿ ವಶಪಡಿಸಿಕೊಂಡ ಭೂಮಿಗೆ 2023 ರಲ್ಲಿ ಪರಿಹಾರ ನೀಡಲಾಗಿದೆ. ಅರ್ಜಿ ಕೊಟ್ಟ 2 ತಿಂಗಳಿಗೆ ಮುಡಾ 25 ಸೈಟ್ ಕೊಟ್ಟಿದೆ. ಅಬ್ದುಲ್ ವಾಜಿದ್‌ನ ಭೂಮಿಗೆ ಪರಿಹಾರ ಕೊಡಿ ಎಂದು 61 ವರ್ಷಗಳ ಬಳಿಕ 2022ರ ಡಿಸೆಂಬರ್‌ನಲ್ಲಿ ಮುಡಾಗೆ ಅರ್ಜಿ ಹಾಕುತ್ತಾರೆ. ಮುಡಾದ ಆಯುಕ್ತರು 2023ರ ಫೆಬ್ರವರಿ ಯಲ್ಲಿ ಅಂದರೆ ಅರ್ಜಿ ಕೊಟ್ಟ ಎರಡೇ ತಿಂಗಳಿಗೆ 25 ಸೈಟ್ ಮಂಜೂರು ಮಾಡ್ತಾರೆ. ಅಬ್ದುಲ್ ವಾಜಿದ್ ವಂಶಸ್ಥರ ಜಮೀನನ್ನು 1962 ರಲ್ಲಿ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು.
ಸರ್ಕಾರವೇ ಹೇಳುವಂತೆ 50:50 ಕಾನೂನು ಏನೂ ಹೇಳುತ್ತೆ ಗೊತ್ತಾ? 2009ರ ಹಿಂದಿನ ಬಡಾವಣೆಗಳಿಗೆ 50:50 ಅನುಪಾತ ಅನ್ವಯವಾಗಲ್ಲ. 2009 ರ ಹಿಂದಿನ ಸ್ವಾಧೀನ ಪ್ರಕ್ರಿಯೆಗೆ 50:50 ಅನುಪಾತ ಅನುಸರಿಸಿದರೆ ಅದು ಅಕ್ರಮ. ಆದರೆ 25 ಸೈಟ್ ಪಡೆದ ಅಬ್ದುಲ್ ವಾಜಿದ್ ವಂಶದ ಜಮೀನನ್ನು ಪ್ರಾಧಿಕಾರ ವಶಪಡಿಸಿಕೊಂಡಿರುವುದು 1962 ರಲ್ಲಿ. ಅಂದರೆ ಬರೋಬರಿ 61 ವರ್ಷಗಳ ನಂತರ 50:50 ಅನುಪಾತದಲ್ಲಿ ಪರಿಹಾರ ಕೊಟ್ಟಿದೆ. ಅಲ್ಲಿಗೆ ಇದು ಸ್ಪಷ್ಟವಾಗಿ ಅಕ್ರಮ. ಹೀಗೆ ಬಹುತೇಕ ಎಲ್ಲಾ ಸೈಟ್‌ಗಳನ್ನು ಕೊಟ್ಟಿರುವುದು 30-40 ವರ್ಷಗಳ ಹಿಂದಿನ ಪ್ರಕರಣಗಳಿಗೆ. ಅಲ್ಲಿಗೆ ಕಾನೂನು ಪ್ರಕಾರ ಇವು ಅಕ್ರಮ.
ಸಿಎಂ ಪತ್ನಿಗೆ ನೀಡಿದ 14 ಸೈಟ್‌ಗಳೇ ಅಧಿಕಾರಿಗಳ ಪಾಲಿಗೆ ಶ್ರೀರಕ್ಷೆ!
ಸಿಎಂ ಪತ್ನಿಗೆ 50:50 ಅನುಪಾತದಲ್ಲಿ ಸೈಟ್ ಕೊಟ್ಟ ಮೇಲೆಯೆ ಉಳಿದ ಎಲ್ಲರಿಗೂ ಸೈಟ್ ಹಂಚಲು ಪ್ಲಾö್ಯನ್ ನಡೆದಿತ್ತು. ಅದೇ ಪ್ಲಾö್ಯನ್‌ನಂತೆ ಮುಡಾ ಆ ಎಲ್ಲರಿಗೂ ಸೈಟ್ ಹಂಚಿಕೆ ಮಾಡಿದ್ದಾರೆ.
ಯರ‍್ಯಾರಿಗೆ ಎಷ್ಟು ಸೈಟ್ ಹಂಚಿಕೆ?
ಅಬ್ದುಲ್ ವಾಜೀದ್- 26 ಸೈಟ್
ಸೈಯದ್ ಯೂಸಫ್- 21 ಸೈಟ್
ಮಲ್ಲಪ್ಪ- 19 ಸೈಟ್
ಎಸ್.ವಿ.ವೆಂಕಟಪ್ಪ – 17
ದೇವಮ್ಮ – 16
ಮಹದೇವು ಮತ್ತು ಗೀತಾ – 12
ಸುರೇಶಮ್ಮ – 11
ವೈರಮುಡಿ- 10 ಸೈಟ್
ಚೌಡಯ್ಯ – 07
ಕೊಪ್ಪಳ/ಬಳ್ಳಾರಿ: ಸಿಎಂ ಸಿದ್ದರಾಮಯ್ಯ (CM Siddaramaiah) ಮುಡಾ ಹಗರಣದಲ್ಲಿ (MUDA Scam) ಭಾಗಿಯಾಗಿದ್ದು ನೂರರಷ್ಟು ಸತ್ಯ. ಶೀಘ್ರವೇ ಇದೇ ಪ್ರಕರಣ ಸಂಬಂಧ 15 ದಿನದಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾನೂನು ಶಿಕ್ಷೆ ಅನುಭವಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS Yediyurappa) ಹೇಳಿದರು.
ಸಂಡೂರು (Sanduru) ಕ್ಷೇತ್ರದ ಬೊಮ್ಮಘಟ್ಟ, ಚೋರನೂರು, ಬಂಡ್ರಿ ಗ್ರಾಮಗಳಲ್ಲಿ ಪ್ರಚಾರ ನಡೆಸಿ ಮಾತನಾಡಿದರು. ಮುಡಾದಲ್ಲಿ ಭ್ರಷ್ಟಾಚಾರ ನಡೆದಿದ್ದಕ್ಕೆ ಸಿಎಂ 14 ಸೈಟುಗಳನ್ನು ವಾಪಸ್ಸು ನೀಡಿದರು. ಎಸ್‌ಐಟಿ ರಚಿಸಿರುವ ಲೋಕಾಯುಕ್ತ ತನಿಖೆ ಪಾರದರ್ಶಕವಾಗಿಲ್ಲ. ಇದಕ್ಕಾಗಿಯೇ ಶೀಘ್ರದಲ್ಲಿ ಇಡಿ, ಸಿಐಡಿಯವರು ಸಿದ್ದರಾಮಯ್ಯರನ್ನು ವಿಚಾರಣೆಗೆ ಕರೆಯಲಿದ್ದಾರೆ. ಇನ್ನು 10-15 ದಿನಗಳಲ್ಲಿ ಸಿಎಂ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಭವಿಷು ನುಡಿದರು.ಇದನ್ನೂ ಓದಿ: ಈ ಮೋದಿ ಇರೋವರೆಗೂ 370ನೇ ವಿಧಿ ಮರುಸ್ಥಾಪಿಸಲು ಸಾಧ್ಯವಿಲ್ಲ: ಗುಡುಗಿದ ಪ್ರಧಾನಿ
ರಾಜ್ಯದ ಮೂರು ಕ್ಷೇತ್ರಗಳಲ್ಲಿ ನಾನು ಪ್ರಚಾರ ಮಾಡಿದ್ದೇನೆ. ಮೂರು ಕ್ಷೇತ್ರದಲ್ಲೂ ಬಿಜೆಪಿ ಪರವಾದ ವಾತಾವರಣ ಇದೆ. ಸಂಡೂರಿನಲ್ಲೂ ಅಭೂತಪೂರ್ವ ಜನ ಬೆಂಬಲ ಸಿಗುತ್ತಿದೆ. ಜನರು ಕಾಂಗ್ರೆಸ್‌ನ್ನು ತಿರಸ್ಕಾರ ಮಾಡಲಿದ್ದಾರೆ. ಶ್ರೀರಾಮಲು, ಜನಾರ್ದನರೆಡ್ಡಿ ಜೋಡಿ ಇಲ್ಲಿ ಮೋಡಿ ಮಾಡುತ್ತಿದೆ. ಅವರು ಈ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲಿದ್ದಾರೆ. ನಾನು ಸಿಎಂ ಆಗಿದ್ದಾಗ ರೈತರು, ಬಡವರು ಯಾವುದೇ ಕಷ್ಟ ಅನುಭವಿಸದೇ ಸುಭದ್ರ ಜೀವನ ನಡೆಸುವ ಯೋಜನೆಗಳನ್ನು ಜಾರಿ ಮಾಡಿದ್ದೆ. ಕಾಂಗ್ರೆಸ್ ಸರಕಾರ ಭಾಗ್ಯ ಲಕ್ಷ್ಮಿ ಬಾಂಡ್, ಸೈಕಲ್ ಭಾಗ್ಯ ಸೇರಿ ಹಲವು ಯೋಜನೆಗಳನ್ನು ನಿಲ್ಲಿಸಿದೆ ಎಂದು ಟೀಕಿಸಿದರು.
ಮೋದಿಯನ್ನು ಅನಗತ್ಯವಾಗಿ ಟೀಕಿಸುವ ಸಿದ್ದರಾಮಯ್ಯ ಅವರೇ ಮೊದಲು ನಿಮ್ಮ ಮೇಲಿನ ಕೇಸ್ ಬಗ್ಗೆ ಯೋಚಿಸಿ, ನಿಮ್ಮ ಆಡಳಿತದ ಅವಧಿಯಲ್ಲಿ ಆರ್ಥಿಕ ಪರಿಸ್ಥಿತಿ ದಿವಾಳಿ ಹಂಚಿಗೆ ತಲುಪಿದೆ. ಯಾವ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುತ್ತಿಲ್ಲ. ನಿಮಗೆ ನಾಚಿಕೆ, ಮಾನ ಮರ್ಯಾದೆ ಇದ್ದರೆ ಕೂಡಲೇ ರಾಜೀನಾಮೆ ನೀಡಿ ಮನೆಗೆ ಹೋಗಿ ಎಂದರು.
ಮಾಜಿ ಸಚಿವ ಜನಾರ್ದನರೆಡ್ಡಿ (Janardhan Reddy) ಮಾತನಾಡಿ, ಬಳ್ಳಾರಿ ಜನರು ಪ್ರಜ್ಞಾವಂತರಿದ್ದಾರೆ. ಕಾಂಗ್ರೆಸ್‌ನ ಹಸಿ ಸುಳ್ಳುಗಳಿಗೆ ಮಾರುಹೋಗುವುದಿಲ್ಲ. ಸೇಡಿನ ರಾಜಕಾರಣ ಮಾಡಿ ನನ್ನನ್ನು 14 ವರ್ಷ ಬಳ್ಳಾರಿಯಿಂದ ದೂರ ಇಟ್ಟರು. ಈಗ ತಾಯಿ ಚಾಮುಂಡಿ ಸಿದ್ದರಾಮಯ್ಯ ಅವರನ್ನು ದೂರ ಇಡಲಿದ್ದಾರೆ. ಉಪಚುನಾವಣೆ ಮುಗಿದ ಬಳಿಕ ಸಿದ್ದರಾಮಯ್ಯ ಜೈಲಿಗೆ ಹೋಗಲಿದ್ದಾರೆ. ಒಬ್ಬ ಸಿಎಂ ಸೋಲುವ ಭೀತಿಯಿಂದ ತಮ್ಮ ಇಡೀ ಕ್ಯಾಬಿನೇಟ್‌ನ್ನು ಸಂಡೂರಿಗೆ ಕರೆತಂದು ಕೂತಿದ್ದಾರೆ. ಸಂಡೂರಿನಲ್ಲಿ ಸೋಲುವ ಆತಂಕ ಅವರಲ್ಲಿ ಮೂಡಿದೆ ಇದಕ್ಕಾಗಿ ಹಣ, ಅಧಿಕಾರ ಪ್ರದರ್ಶನ ಮಾಡುವ ಮೂಲಕ ಜನರ ಮತವನ್ನು ಖರೀದಿ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇದ್ಯಾವುದು ಸಂಡೂರಿನಲ್ಲಿ ನಡೆಯಲ್ಲ. ತುಕಾರಂ 20 ವರ್ಷಗಳಿಂದ ಕ್ಷೇತ್ರದಲ್ಲಿ ಯಾವ ಕೆಲಸವನ್ನು ಮಾಡಿಲ್ಲ. ಅವರನ್ನು ಜನರು ಹಳ್ಳಿಗಳಲ್ಲಿಯೇ ಸೇರಿಸುತ್ತಿಲ್ಲ ಇದಕ್ಕಾಗಿ ಮುಖ್ಯಮಂತ್ರಿಯನ್ನೇ ಇಲ್ಲೇ ಉಳಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.ಇದನ್ನೂ ಓದಿ: ಹಳಿಗೆ ಹಾರಿ ವ್ಯಕ್ತಿಯಿಂದ ಆತ್ಮಹತ್ಯೆಗೆ ಯತ್ನ – ಕೋಲ್ಕತ್ತಾ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ
ಮಾಜಿ ಸಚಿವ ಬಿ.ಶ್ರೀರಾಮುಲು (Sriramulu) ಮಾತನಾಡಿ, ಸರ್ಕಾರದ ಯಾವ ಗ್ಯಾರಂಟಿಗಳು ಇಲ್ಲಿ ಮೋಡಿ ಮಾಡುವುದಿಲ್ಲ. ಕಾಂಗ್ರೆಸ್ ಸರ್ಕಾರ ಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿರುವುದು ಜಗಜ್ಜಾಹೀರಾಗಿದೆ. ಮುಡಾ, ಬುಡಾ, ಅಬಕಾರಿ ಪ್ರಕರಣವೂ ಈಗ ಸೇರಿಕೊಂಡಿದೆ. ಇಷ್ಟೊಂದು ಭ್ರಷ್ಟಾಚಾರ ನಡೆಸಿ ಯಾವ ಮುಖದಿಂದ ಮತಯಾಚನೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಕೊಪ್ಪಳ: ಎಸ್ಟಿ ನಿಗಮದ ಹಣ ಲೂಟಿ ಹೊಡೆದ ಕಾಂಗ್ರೆಸ್ (Congress) ಸರ್ಕಾರ ಸಂಡೂರು ಎಸ್ಟಿ ಮೀಸಲು ಕ್ಷೇತ್ರದಲ್ಲಿ ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತಿದೆಯೋ ಗೊತ್ತಿಲ್ಲ. ಮಾನ, ಮರ್ಯಾದೆ ಇದ್ದಿದ್ದರೆ ಮತ ಕೇಳಲು ಸಂಡೂರಿಗೆ ಬರುತ್ತಿರಲಿಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಟೀಕಿಸಿದ್ದಾರೆ.
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎಸ್ಟಿಗಳ ಹಣ ನುಂಗಿದವರು ಏನೆಂದು ಮತ ಕೇಳುತ್ತಾರೆ ಎಂದು ಆಶ್ಚರ್ಯ ಆಗುತ್ತಿದೆ. ಜನ ಪ್ರಶ್ನೆ ಕೇಳಿದರೆ ಏನು ಹೇಳುತ್ತಾರೆ? ಎಂಬುದು ಗೊತ್ತಾಗುತ್ತಿಲ್ಲ. ಈ ಪ್ರಕರಣದಲ್ಲಿ ಸ್ವತಃ ಮಂತ್ರಿಯೇ ಜೈಲಿಗೆ ಹೋಗಿ ಬಂದರು. ಎಸ್ಟಿ ವರ್ಗದ ಜನರ ಕಲ್ಯಾಣಕ್ಕೆ ಮೀಸಲಿಟ್ಟ ಬರೋಬ್ಬರಿ 187 ಕೋಟಿ ರೂ. ಹಣ ನುಂಗಿದ್ದಾರೆ. ಸಿಎಂ ಸಿದ್ದರಾಮಯ್ಯ ಮುಂದೆ ನಿಂತು ಎಸ್ಸಿ/ಎಸ್ಟಿಗಳ ಅನುದಾನವನ್ನು ಅದೇ ವರ್ಗದ ಮಂತ್ರಿಗಳ ಮೂಲಕ ಕೊಳ್ಳೆ ಹೊಡೆಸುತ್ತಿದ್ದಾರೆ. ಕಪ್ಪು ಚುಕ್ಕೆ ಇಲ್ಲ, ತೆರೆದ ಪುಸ್ತಕ ಅಂತಾರೆ, ಪುಸ್ತಕ ತೆರೆದರೆ ಕಪ್ಪು ಚುಕ್ಕೆಗಳೆ ಕಾಣುತ್ತಿವೆ ಎಂದು ಲೇವಡಿ ಮಾಡಿದರು.ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಮತ್ತೆ ಇಬ್ಬರು ಬಲಿ – ಸಿಎಂ ಒಮರ್ ಅಬ್ದುಲ್ಲಾ ಖಂಡನೆ
ರೈತರ ಭೂಮಿಯಲ್ಲಿ ವಕ್ಫ್ (Waqf Board) ಹೆಸರು ನಮೂದು ವಿಚಾರಕ್ಕೆ ಸಂಬಂಧಿಸಿ, ಇಂದು ಜಂಟಿ ಸದನ ಸಮಿತಿ ವರದಿ ತೆಗೆದುಕೊಂಡು ಹೋಗಿದೆ. ಸಮಿತಿಯನ್ನು ಭೇಟಿ ಮಾಡಿ, ಅನೇಕ ವಿಚಾರಗಳ ಚರ್ಚೆ ಮಾಡಿದ್ದೇನೆ. ವಕ್ಫ್ ಬೋರ್ಡ್ನಿಂದ ರೈತರಿಗೆ, ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಬಗ್ಗೆ ಗಮನಕ್ಕೆ ತಂದಿದ್ದೇವೆ ಎಂದು ತಿಳಿಸಿದರು.
ಕೇವಲ ಪಹಣಿಯಲ್ಲಿ ವಕ್ಫ್ ಹೆಸರು ತೆಗೆಯಬಾರದು. ವಕ್ಫ್ ಬೋರ್ಡನ ಪೂರ್ತಿ ರದ್ದು ಮಾಡಬೇಕು. ಇದೊಂದು ರಿಯಲ್ ಎಸ್ಟೇಟ್ ದಂಧೆಯಾಗಿದೆ. ಬೆಂಗಳೂರಲ್ಲಿ ಅತೀ ಹೆಚ್ಚು ಇಂತಹ ಪ್ರಕರಣಗಳಿವೆ. ಕಾಂಗ್ರೆಸ್‌ನಲ್ಲಿ ಮೊದಲು ಜೇಬುಗಳ್ಳರು ಮಾತ್ರ ಇದ್ದರು, ಈಗ ಭೂಗಳ್ಳರು ಸೇರಿಕೊಂಡಿದ್ದಾರೆ.
ಕಳೆದ 400 ರಿಂದ 500 ವರ್ಷದಿಂದ ಉಳುಮೆ ಮಾಡಿದ ಭೂಮಿಗೆ ವಕ್ಫ್ ಬೋರ್ಡ್ಗೆ ಸೇರಿಕೊಂಡಿದೆ. ಆಗ, ವಕ್ಫ್ ಬೋರ್ಡ್ ಇತ್ತಾ? ಮತ್ತೇ ಹೇಗೆ ವಕ್ಫ್ ಆಸ್ತಿ ಆಗುತ್ತೆ? ಜಮೀರ್ ಅಹ್ಮದ್ ಖಾನ್ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ. ಮುಂದೊಂದು ದಿನ ಇದನ್ನು ದೊಡ್ಡದಾಗಿ ಸಮಸ್ಯೆಯಾಗಿ ಅನುಭವಿಸಬೇಕಿತ್ತು. ಆದರೆ, ಏನೋ ಮಾಡಲು ಹೋಗಿ ಜಾರಿಬಿದ್ದಿದ್ದರಿಂದ ಜಮೀರ್ ಜಾಣ ಆಗಿದ್ದಾರೆ. ಇದು ಹಿಂದು ಮುಸ್ಲಿಂ ಅಲ್ಲ, ಇದು ರೈತರ ಜಮೀನು. ನಮ್ಮ ಹೋರಾಟ ಯಾರ ವಿರುದ್ಧವೂ ಇಲ್ಲ. ನಮ್ಮ ಹೋರಾಟ ಕಾಂಗ್ರೆಸ್ ಹಾಗೂ ವಕ್ಫ್ ವಿರುದ್ಧ ಮಾತ್ರ. ಇದಕ್ಕೆಲ್ಲ ಮೂಲ ಕಾರಣ ಕಾಂಗ್ರೆಸ್ ಸರ್ಕಾರ ಎಂದರು.
ಇನ್ನೂ ಸಿಎಂ (CM Siddaramaiah) ಲೋಕಾಯುಕ್ತ ವಿಚಾರಣೆಗೆ ಸಂಬಂಧಿಸಿದಂತೆ ಮಾತನಾಡಿ, ಮುಡಾ ಹಗರಣದಲ್ಲಿ ಸಿಎಂ ಸಿಕ್ಕಿಹಾಕಿಕೊಂಡರು. ಕೋರ್ಟ್ ಆದೇಶದಂತೆ ವಿಚಾರಣೆ ಎದುರಿಸುತ್ತಿದ್ದಾರೆ. ಬಿಜೆಪಿಗೆ ಜಗ್ಗಲ್ಲ ಅಂದು ರಾತ್ರೋರಾತ್ರಿ ಸೈಟ್ ವಾಪಸ್ ಕೊಟ್ಟರು. ಸಿಎಂ ಟಿಪಿ ನೋಡಿದರೆ ಎಲ್ಲವೂ ಪ್ರೀಪ್ಲ್ಯಾನ್. ನಾಟಕದ ಸ್ಕ್ರಿಪ್ಟ್ ಬರೆದು ನೀವೆ ಪಾತ್ರ ಮಾಡಿ, ಪ್ರಶ್ನೆ ಕೇಳುವುದು ಏನು ಎಂದು ಫಿಕ್ಸ್ ಆಗಿತ್ತಾ? ಎರಡೇ ಗಂಟೆಗಳಲ್ಲಿ ವಿಚಾರಣೆ ಮುಗಿಯುತ್ತದೆ ಎಂದು ನಿಮಗೆ ಹೇಗೆ ಗೊತ್ತು? ಲೋಕಾಯುಕ್ತ ಇದೆಲ್ಲ ಮಾಡತ್ತಾ? ತೊಟ್ಟಿಲು ತೂಗೋದು ತಾವೇ? ಮಗು ಚುಟೋದು ತಾವೇ ಎನ್ನುವಂತಾಗಿದೆ. ಸಿಎಂ ಪಟಾಲಂ ನೇಮಕ ಮಾಡಿರುವ ಅಧಿಕಾರಿಗಳು ಏನೂ ವಿಚಾರಣೆ ಮಾಡುತ್ತಾರೆ? ಯಾವ ರೀತಿ ಪ್ರಶ್ನೆ ಕೇಳುತ್ತಾರೆ? ಇದು ಕ್ಲೀನ್‌ಚಿಟ್ ಕೊಡುವ ಕೆಲಸ ನಡೀತಿದೆ ಎಂದು ಅನುಮಾನ ವ್ಯಕ್ತಪಡಿಸಿದರು.ಇದನ್ನೂ ಓದಿ:
ಸಿಎಂ ಕೂಡಲೆ ರಾಜೀನಾಮೆ ನೀಡಬೇಕು. ಇದು ರಾಜ್ಯದ ಜನತೆಗೆ ಅವಮಾನ. ನಾಗೇಂದ್ರ ಅವರ ಮೇಲೆ ಆಪಾದನೆ ಬಂದಾಗ ರಾಜೀನಾಮೆ ಪಡೆದು ನೀವ್ಯಾಕೆ ರಾಜೀನಾಮೆ ಕೊಡುತ್ತಿಲ್ಲ. ದಲಿತರಿಗೊಂದು ನ್ಯಾಯ ನಿಮಗೊಂದು ನ್ಯಾಯವೇ? ಎಂದು ಪ್ರಶ್ನಿಸಿದರು.ಇದನ್ನೂ ಓದಿ: ಮನೆಯ ಮುಂದೆ ಆಡುತ್ತಿದ್ದ ಎರಡೂವರೆ ವರ್ಷದ ಮಗುವನ್ನು ಅಪಹರಿಸಿದ ಮಹಿಳೆ
ಬಳ್ಳಾರಿ: ನಿಮಗೆ ಗೊತ್ತಿದೆಯಾ? ಜಾರಿ ನಿರ್ದೇಶನಾಲಯ (ED) ಇಡಿ ನೋಟಿಸ್ ನೀಡಿದೆ ಎಂದು ಹೇಳಿದವರು ಯಾರು ಎಂದು ಸಿಎಂ ಸಿದ್ದರಾಮ್ಯಯ (CM Siddaramaiah) ಪ್ರಶ್ನಿಸಿದ್ದಾರೆ.
ಮಡಾ ಹಗರಣಕ್ಕೆ (MUDA Scam) ಸಂಬಂಧಿಸಿದಂತೆ ಇಡಿ ನೋಟಿಸ್ ನೀಡಿದೆ ಎಂಬ ಸುದ್ದಿಗೆ ಸಂಬಂಧಿಸಿದಂತೆ ಸಂಡೂರಿನಲ್ಲಿ (Sanduru) ಪ್ರತಿಕ್ರಿಯಿಸಿದ ಅವರು, ನಿಮಗೆ ಹೇಳಿದವರು ಯಾರು ಎಂದು ಪ್ರಶ್ನಿ ಗರಂ ಆದರು. ಇದನ್ನೂ ಓದಿ: ವಕ್ಫ್ ವಿವಾದಕ್ಕೆ ಬೇಸತ್ತು ಯುವ ರೈತ ಆತ್ಮಹತ್ಯೆ!
ಸಂಡೂರು ಕ್ಷೇತ್ರದಲ್ಲಿ ನಮ್ಮ ನಿರೀಕ್ಷೆಗೆ ಮೀರಿ ಸ್ಪಂದನೆ ಸಿಕ್ಕಿದೆ. ನೂರಕ್ಕೆ ಇನ್ನೂರುಷ್ಟು ಸಂಡೂರು ಗೆಲ್ಲುತ್ತೇವೆ. ಚನ್ನಪಟ್ಟಣ , ಶಿಗ್ಗಾವಿಯಲ್ಲೂ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜಕೀಯ ಕಾರಣಕ್ಕೆ ಪ್ರತಿಭಟನೆ ಮಾಡುತ್ತಿದ್ದಾರೆ. ದಾಖಲೆ ತಿದ್ದುಪಡಿಯನ್ನು ಸರಿಪಡಿಸಲು ಹೇಳಿರುವೆ. ಬಿಜೆಪಿ ಇದನ್ನೇ ಚುನಾವಣಾ ಅಸ್ತ್ರವನ್ನಾಗಿ ಬಳಕೆ ಮಾಡುತ್ತಿದೆ. ವಕ್ಫ್ ಮಸೂದೆಗೆ ಸಂಬಂಧಿಸಿದಂತೆ ರಚನೆಯಾದ ಜಂಟಿ ಸಂಸದೀಯ ಸಮಿತಿ ಬಂದಿದ್ದು ರಾಜಕೀಯಕ್ಕೆ ಎಂದು ವಾಗ್ದಾಳಿ ನಡೆಸಿದರು.
ಮೈಸೂರು: ಮುಡಾ ಹಗರಣದ (MUDA Scam) ಗೊಂದಲ ನಡುವೆಯೆ ಗುರುವಾರ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) ಸಭೆ ನಡೆಯಿತು. 10 ತಿಂಗಳ ಬಳಿಕ ನಡೆದ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.
50:50 ಅನುಪಾತದಲ್ಲಿ ಹಂಚಿಕೆಯಾಗಿರುವ ಎಲ್ಲಾ ಸೈಟುಗಳನ್ನು (50:50 Site) ಜಪ್ತಿ ಮಾಡಲು ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು. 50:50 ಅನುಪಾತದಲ್ಲಿ ಅಕ್ರಮವಾಗಿ ಹಂಚಿಕೆಯಾಗಿರುವ ಸೈಟುಗಳನ್ನು ಜಪ್ತಿ ಮಾಡಲು ಸರ್ವ ಸದಸ್ಯರು ಒಮ್ಮದ ಅಭಿಪ್ರಾಯ ಸೂಚಿಸಿದರು. ನ್ಯಾಯಮೂರ್ತಿ ಪಿ.ಎನ್ ದೇಸಾಯಿ ವರದಿ ನಂತರ ಜಪ್ತಿಯ ವರದಿ ಅಂಗಕರಿಸಲು ತೀರ್ಮಾನಿಸಲಾಯಿತು. ಇದನ್ನೂ ಓದಿ: ರೋಹಿಣಿ ಸಿಂಧೂರಿ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ್ದ ಡಿ.ರೂಪಾಗೆ ಹಿನ್ನಡೆ
ಸಭೆಗೆ ಹೋಗುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ (Congress) ಶಾಸಕ ಹರೀಶ್ ಗೌಡ, 2020 ರಿಂದ 2024ರ ವರೆಗೂ ಕೊಟ್ಟಿರಿವ 50:50 ಅನುಪಾತದ ಎಲ್ಲಾ ಸೈಟ್‌ಗಳನ್ನ ಸರ್ಕಾರ ತಕ್ಷಣವೇ ಜಪ್ತಿ ಮಾಡಬೇಕು. ದೇಸಾಯಿ ಆಯೋಗದ ತನಿಖಾ ವರದಿ ಬಂದಮೇಲೆ ನ್ಯಾಯಸಮ್ಮತ ಸೈಟ್‌ಗಳನ್ನು ವಾಪಸ್ ಕೊಡಲಿ. ಅಕ್ರಮ ಸೈಟ್‌ಗಳನ್ನ ಸರ್ಕಾರವೇ ಮುಟ್ಟುಗೋಲು ಹಾಕಿಕೊಳ್ಳಲಿ. ನಾನು ಒಂದು ಇಂಚೂ ಜಾಗವನ್ನು 50:50 ಅನುಪಾತದಲ್ಲಿ ಪಡೆದಿಲ್ಲ. ಒಂದು ಇಂಚು ಜಾಗಕ್ಕೂ ನಾನು ಶಿಫಾರಸ್ಸು ಮಾಡಿಲ್ಲ. 50:50 ಅನುಪಾತದಲ್ಲಿ ನನ್ನದು ಯಾವುದಾದರೂ ಸೈಟ್ ಇದ್ದರೆ ಸರ್ಕಾರ ಅದನ್ನು ಮುಟ್ಟುಗೋಲು ಹಾಕಿಕೊಳ್ಳಲಿ ಎಂದರು. ಇದನ್ನೂ ಓದಿ: ಮೋದಿ ಸರ್ಕಾರದಿಂದ ರಾಜ್ಯಗಳಿಗೆ ಆಗುತ್ತಿರುವ ಆರ್ಥಿಕ ಅನ್ಯಾಯ ನಿಲ್ಲಬೇಕು: ಎಲ್.ಹನುಮಂತಯ್ಯ
ಶಾಸಕ ಜಿ.ಟಿ. ದೇವೇಗೌಡ ಮಾತ್ರ 50:50 ಅನುಪಾತ ರದ್ದು ಮಾಡಿ ಎಂದು ನಾನು ಹೇಳಲ್ಲ ಎಂದು ಅಚ್ಚರಿಯ ಹೇಳಿಕೆ ಕೊಟ್ಟರು. 50:50 ಅನುಪಾತದಲ್ಲಿ ಆಗಿರುವ ಅಕ್ರಮ ಸೈಟ್ ಗಳನ್ನ ರದ್ದು ಮಾಡಬೇಕು. ಸರ್ಕಾರ ಅಕ್ರಮವಾಗಿ ಪಡೆದಿರೋ ನಿವೇಶನಗಳನ್ನ ವಾಪಾಸ್ ಪಡೆಯಲಿ. ಆದರೆ ಪ್ರಾಧಿಕಾರದ ದೃಷ್ಟಿಯಿಂದ 50:50 ಅನುಪಾತ ಬೇಕು ಎಂದರು. ನಿಯಮಾನುಸಾರ 50:50 ಅನುಪಾದಡಿ ಅರ್ಹರಿಗೆ ನಿವೇಶನ ನೀಡಲಿ. ಕಾನೂನು ಬಾಹಿರವಾಗಿ ನೀಡಿದ್ದರೆ ಅದನ್ನ ವಾಪಸ್ ಪಡೆದುಕೊಳ್ಳಲಿ ಎಂದು ಹೇಳಿದರು.
ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಏನು ತಪ್ಪು ಮಾಡಿಲ್ಲ, ಕಾನೂನಿಗೆ ಗೌರವ ಕೊಟ್ಟು ಲೋಕಾಯುಕ್ತ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಡಿಸಿಎಂ ಡಿಕೆಶಿವಕುಮಾರ್ (DCM DK Shivakumar) ಸಿಎಂ ಪರ ಬ್ಯಾಟಿಂಗ್ ಮಾಡಿದ್ದಾರೆ.ಇದನ್ನೂ ಓದಿ: 132 ವರ್ಷ ದಾಖಲೆ ಸರಿಗಟ್ಟಿದ ಟ್ರಂಪ್ – ಗೆದ್ದಿದ್ದು ಹೇಗೆ?
ಸಿಎಂ ಸಿದ್ದರಾಮಯ್ಯ ಲೋಕಾಯುಕ್ತ (Lokayuktha) ವಿಚಾರಣೆಗೆ ಹಾಜರಾದ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಅವರು ಕಾನೂನಿಗೆ ಗೌರವ ಕೊಟ್ಟಿದ್ದಾರೆ. ಸಿಎಂಗೆ ನೋಟಿಸ್ ಕೊಟ್ಟಿದ್ರು, ಚುನಾವಣೆ ಪ್ರಚಾರ ಇದ್ದರೂ ಕೂಡ ಅವರು ವಿಚಾರಣೆಗೆ ಹಾಜರಾಗಿದ್ದಾರೆ. ಕಾನೂನಿಗೆ ಗೌರವ ಕೊಡಬೇಕು ಎಂದು ಪ್ರಚಾರವನ್ನು ಕೈಬಿಟ್ಟು ವಿಚಾರಣೆಗೆ ಹಾಜರಾಗಿದ್ದಾರೆ. ಸಿಎಂ ಅವರು ಒಂದು ವಾರ ವಿನಾಯಿತಿ ಕೇಳಬಹುದಿತ್ತು. ಆದರೆ ಅಧಿಕಾರದಲ್ಲಿ ಇದ್ದುಕೊಂಡು ಅಧಿಕಾರ ದುರುಪಯೋಗ ಮಾಡಬಾರದು ಎಂದು ಹೇಳಿ ಕಾನೂನಿಗೆ ಗೌರವ ಕೊಟ್ಟು ಹೋಗಿದ್ದಾರೆ. ಸಿಎಂ ಏನು ತಪ್ಪು ಮಾಡಿಲ್ಲ. ಲೋಕಾಯುಕ್ತ ಏನು ಕೇಳುತ್ತಾರೋ ಅದಕ್ಕೆ ಉತ್ತರ ಕೊಡುತ್ತಾರೆ ಎಂದು ಪ್ರತಿಕ್ರಿಯೆ ನೀಡಿದರು.
ಸಿಎಂ ಸಿದ್ದರಾಮಯ್ಯ ಅವರ ವಿಚಾರಣೆ ಮುಗಿದ ಬಳಿಕ ಪ್ರತಿಕ್ರಿಯೆ ನೀಡಿದ ಅವರು, ಲೋಕಾಯುಕ್ತ ಕೇಳಿರುವ ಪ್ರಶ್ನೆಗಳ ಕುರಿತು ಮುಡಾದಲ್ಲಿ ಹಗರಣದಲ್ಲಿ ಏನಿದೆ? ಏನು ಇಲ್ಲ? ಮಂಜೂರು ಮಾಡಿಲ್ಲ, ಸಹಿಯೂ ಹಾಕಿಲ್ಲ ಎಂದು ನೀವು ಲೋಕಾಯುಕ್ತ ಅಧಿಕಾರಿಗಳಿಗೆ ಕೇಳಬೇಕು. ಲೋಕಾಯುಕ್ತದವರು ಕರೆದಿದ್ದರು. ಸಿಎಂ ಹೋಗಿದ್ದಾರೆ ಅಷ್ಟೇ ಎಂದು ತಿಳಿಸಿದರು.ಇದನ್ನೂ ಓದಿ: ‘ಜೈ ಹನುಮಾನ್’ ಸಿನಿಮಾದಲ್ಲಿ ರಾಮನಾಗಿ ರಾಣಾ ದಗ್ಗುಬಾಟಿ?
ಮೈಸೂರು: ಸಿಎಂಗೆ ಕೆಲವು ನಿರ್ದಿಷ್ಟ ಪ್ರಶ್ನೆಗಳನ್ನು ಕೇಳಲೇಬೇಕು. ಕೇಳದಿದ್ದರೆ ತನಿಖಾಧಿಕಾರಿ ವಿರುದ್ಧವೇ ಕಾನೂನು ಹೋರಾಟ ಮಾಡುತ್ತೇನೆ ಎಂದು ದೂರುದಾರ ಸ್ನೇಹಮಯಿ (Snehamayi Krishna) ಕೃಷ್ಣ ಎಚ್ಚರಿಕೆ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ (Siddaramaiah) ಲೋಕಾಯುಕ್ತ ವಿಚಾರಣೆ ಎದುರಿಸುತ್ತಿರುವ ಕುರಿತು ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಸಿಎಂಗೆ ನಿರ್ದಿಷ್ಟವಾಗಿ ಕೆಲವು ಪ್ರಶ್ನೆ ಕೇಳಲು ದೂರುದಾರನಾಗಿ ನಾನು ಒಂದು ಮನವಿಯನ್ನು ಲೋಕಾಯುಕ್ತರಿಗೆ ಕೊಟ್ಟಿದ್ದೇನೆ. ತನಿಖಾಧಿಕಾರಿ ಆ ಪ್ರಶ್ನೆಗಳನ್ನು ಆರೋಪಿ ಸ್ಥಾನದಲ್ಲಿ ಇರುವವರಿಗೆ ಕೇಳಬೇಕು. ಕೇಳದೆ ಇದ್ದರೆ ವಿಚಾರಣೆ ಪರಿಪೂರ್ಣ ಆಗಲ್ಲ. ಒಂದು ವೇಳೆ ಅವರು ಪ್ರಶ್ನೆ ಕೇಳದೆ ಇದ್ದರೆ ಲೋಕಾಯುಕ್ತ ತನಿಖಾಧಿಕಾರಿ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದರು. ಇದನ್ನೂ ಓದಿ: ಕಾರು, ಪಿಕಪ್ ವಾಹನ ಮುಖಾಮುಖಿ ಡಿಕ್ಕಿ- ಇಬ್ಬರು ಸಾವು
ಮೈಸೂರು: ಸಿಎಂ (Siddaramaiah) ರಾಜೀನಾಮೆ ಕೊಟ್ಟು ವಿಚಾರಣೆಗೆ ಬರಬೇಕು. ಸಿಎಂ ಸ್ಥಾನದಲ್ಲಿ ಇರುವವರನ್ನು ಒಬ್ಬ ಜಿಲ್ಲಾ ಮಟ್ಟದ ಅಧಿಕಾರಿ ಪ್ರಶ್ನೆ ಮಾಡಲು ಸಾಧ್ಯನಾ? ಅಂತಹ ಧೈರ್ಯ ಅಧಿಕಾರಿಗಳಿಗೆ ಇರುತ್ತಾ? ಎಂದು ಮೈಸೂರಿನ (Mysuru) ಬಿಜೆಪಿ ಶಾಸಕ ಶ್ರೀವತ್ಸ (T. S. Srivatsa) ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಸಿಎಂರನ್ನು ಒಬ್ಬ ಜಿಲ್ಲಾ ಮಟ್ಟದ ಅಧಿಕಾರಿ ಕಠಿಣ ವಿಚಾರಣೆ ಮಾಡುತ್ತಾರೆ ಎಂದು ನಿರೀಕ್ಷೆ ಮಾಡುವುದೇ ತಪ್ಪು. ಸಿಎಂಗೆ ವಿಚಾರಣೆ ವೇಳೆ ಇರಿಸುಮುರಿಸು ಮಾಡಬೇಡಿ ಎಂದು ಲೋಕಾಯುಕ್ತ ಎಸ್ಪಿಗೆ ಗೃಹ ಇಲಾಖೆಯ ನಿರ್ದೇಶನ ಇರುತ್ತದೆ ಎಂದರು. ಇದನ್ನೂ ಓದಿ: ಅಮೆರಿಕ ಅಧ್ಯಕ್ಷೀಯ ಚುನಾವಣೆ; 10 ರಾಜ್ಯಗಳಲ್ಲಿ ಟ್ರಂಪ್ ಮುನ್ನಡೆ
ಮುಖ್ಯಮಂತ್ರಿಯವರನ್ನು ವಿಚಾರಣೆ ಮಾಡುವ ಎಸ್ಪಿ ಸಿಎಂ ಪತ್ನಿಯನ್ನು ಯಾಕೆ ಕಚೇರಿಗೆ ವಿಚಾರಣೆಗೆ ಕರೆದಿಲ್ಲ? ಕದ್ದುಮುಚ್ಚಿ ಯಾಕೆ ವಿಚಾರಣೆ ಮಾಡಿದ್ದಾರೆ? ಇದನ್ನೆಲ್ಲಾ ನೋಡಿದರೆ ನ್ಯಾಯಾಲದ ನಿರ್ದೇಶನಕ್ಕೋಸ್ಕರ ಮಾಡುತ್ತಿರುವ ಹಾಗಿದೆ. ಇದು ನಮಗೆ ಸಮಾಧಾನ ತಂದಿಲ್ಲ. ಹೀಗಾಗಿ ಬಿಜೆಪಿ ಬುಧವಾರ ಮೈಸೂರಿನಲ್ಲಿ ಬೆಳಗ್ಗೆ 9:30ರಿಂದ ‘ಗೋ ಬ್ಯಾಕ್ ಸಿಎಂ’ ಚಳವಳಿ ಮಾಡುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕುಡಿಯಲು ಹಣ ನೀಡದ್ದಕ್ಕೆ ಮನಬಂದಂತೆ ಥಳಿಸಿ ತಾಯಿಯನ್ನೇ ಕೊಂದ ಮಗ
ಮೈಸೂರು: ಮುಡಾದ ಇನ್ನೊಂದು ಮಹಾ ಗೋಲ್ಮಾಲ್ ಪ್ರಕರಣ (MUDA Case) 8 ತಿಂಗಳ ನಂತರ ಬೆಳಕಿಗೆ ಬಂದಿದೆ. ಜನರು ವಿವಿಧ ಸೇವೆಗಳಿಗಾಗಿ ಪ್ರಾಧಿಕಾರಕ್ಕೆ ಕಟ್ಟಿದ ಹಣವನ್ನ ಮುಡಾ ನೌಕರರು ಮತ್ತು ಬ್ಯಾಂಕ್ನ ಕೆಲ ನೌಕರರ ಜೇಬು ಸೇರಿದೆ. ಹೀಗೆ ಜೇಬು ಸೇರಿದ ಹಣದ ಪ್ರಮಾಣ ಕೋಟಿ ಮುಟ್ಟುತ್ತಿದೆ.
ಕಳೆದ ವರ್ಷ ಹೀಗೆ ಚಲನ್ ಕಟ್ಟಿ ಸೇವೆ ಪಡೆದ ಒಟ್ಟು 93 ಜನರ ಹಣ ಪ್ರಾಧಿಕಾರಕ್ಕೆ ಬಂದಿಲ್ಲ. ಇದರ ಮೊತ್ತ 1 ಕೋಟಿ ರು. ಇದೆ. ಹೀಗಾಗಿ ಪ್ರಾಧಿಕಾರದ ಹಣಕಾಸು ಶಾಖೆ ಅವರು ಬ್ಯಾಂಕ್ ಬರೋಡಾದ ವ್ಯವಸ್ಥಾಪಕರಿಗೆ ಪತ್ರ ಬರೆದು 93 ಜನರು ಕಟ್ಟಿರುವ ಹಣ ನಮಗೆ ಡೆಪಾಸಿಟ್ ಮಾಡಿ ಎಂದು ಕೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರು ಹೊರವಲಯದ ಹೆಮ್ಮಿಗೆಪುರದಲ್ಲಿ ಸ್ಕೈಡೆಕ್ ನಿರ್ಮಾಣಕ್ಕೆ ಜಾಗ ಅಂತಿಮ
ಈ ಪತ್ರಕ್ಕೆ ಬ್ಯಾಂಕ್ ಬರೋಡಾ ವ್ಯವಸ್ಥಾಪಕರು ಉತ್ತರ ನೀಡಿ ನೀವು ಕೇಳಿರುವ 93 ಜನರ ಹಣ ಬ್ಯಾಂಕ್ಗೆ ಸಂದಾಯವೇ ಆಗಿಲ್ಲ ಎಂದು ಉತ್ತರ ಕೊಟ್ಟಿದ್ದಾರೆ. ಅಲ್ಲಿಗೆ ಬ್ಯಾಂಕ್ ಚಲನ್ ಹಾಗೂ ಬ್ಯಾಂಕ್ ಸ್ಹೀಲ್ ಎರಡು ನಕಲಿ ಮಾಡಿಕೊಂಡು ಹಣ ವಂಚಿಸಿರುವುದು ಗೊತ್ತಾಗಿದೆ. ಬ್ಯಾಂಕ್ನ ಕೆಲ ಸಿಬ್ಬಂದಿ ಹಾಗೂ ಮೂಡಾ ಕೆಲ ನೌಕರರು ಸೇರಿ ಗ್ರಾಹಕರಿಂದ ಹಣ ಪಡೆದು ಅವರಿಗೆ ನಕಲಿ ಸ್ಹೀಲ್ ಹಾಕಿರುವ ಚಲನ್ ಕೊಟ್ಟು ನಿರ್ದಿಷ್ಟ ಸೇವೆಯನ್ನು ಗ್ರಾಹಕನಿಗೆ ನೀಡದೇ ಮೂಡಾ ಸೇರಬೇಕಾದ ಹಣವನ್ನು ತಮ್ಮ ಜೇಬಿಗೆ ಇಳಿಸಿದ್ದಾರೆ. ಇದನ್ನೂ ಓದಿ: ಸಿಗರೇಟ್ನಿಂದ ಸುಟ್ಟು ಚಿತ್ರಹಿಂಸೆ; ಅಪ್ರಾಪ್ತೆ ಕೊಂದು, ಶೌಚಾಲದಲ್ಲಿ ಶವ ಇಟ್ಟು ಗಂಡ-ಹೆಂಡ್ತಿ ಎಸ್ಕೇಪ್