Tag: MUDA Scam

  • MUDA Case | ಮುಡಾ ಬ್ರಹ್ಮಾಂಡ ಭ್ರಷ್ಟಾಚಾರಕ್ಕಿತ್ತಾ ಐಎಎಸ್ ಅಧಿಕಾರಿಯ ಶ್ರೀರಕ್ಷೆ?

    MUDA Case | ಮುಡಾ ಬ್ರಹ್ಮಾಂಡ ಭ್ರಷ್ಟಾಚಾರಕ್ಕಿತ್ತಾ ಐಎಎಸ್ ಅಧಿಕಾರಿಯ ಶ್ರೀರಕ್ಷೆ?

    – 144 ಫೈಲ್‌ ತೆಗೆದುಕೊಂಡು ಹೋದದ್ದು ನಿಜವೇ?
    – ಲೋಕಾಯುಕ್ತ ಸರ್ಚ್‌ ವಾರೆಂಟ್‌ನಲ್ಲಿ ಸ್ಫೋಟಕ ಮಾಹಿತಿ

    ಮೈಸೂರು: ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ) ಸೈಟು ಹಂಚಿಕೆ ಅಕ್ರಮದ (MUDA Scam) ತನಿಖೆ ಚುರುಕು ಪಡೆದಿರುವ ಹೊತ್ತಿನಲ್ಲೇ ಮತ್ತೊಂದು ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ಇದರಿಂದ ಮುಡಾ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ನಗರಾಭಿವೃದ್ಧಿ ಇಲಾಖೆಯ ಐಎಎಸ್ ಅಧಿಕಾರಿಯ ಶ್ರೀರಕ್ಷೆ ಇತ್ತಾ? ಅನ್ನೂ ಅನುಮಾನಕ್ಕೆ ಲೋಕಾಯುಕ್ತದ (Lokayukta) ಅಧಿಕೃತ ದಾಖಲೆ ಎಡೆಮಾಡಿಕೊಟ್ಟಿದೆ.

    ಹೌದು. ಬ್ರಹ್ಮಾಂಡ ಭ್ರಷ್ಟಾಚಾರದ ಹಿನ್ನೆಲೆ ಮುಡಾ ಮೂಡಾದಲ್ಲಿನ ದಾಖಲೆ ಜಪ್ತಿಗೆ ಲೋಕಾಯುಕ್ತ ಸರ್ಚ್ ವಾರೆಂಟ್ (Search Warrant) ಸಿದ್ಧಪಡಿಸಿಕೊಂಡಿತ್ತು. ಜೂನ್ 28ರ ಸಂಜೆ ಸರ್ಚ್ ವಾರೆಂಟ್ ಸಿದ್ಧವಾಗಿತ್ತು. ಸರ್ಚ್ ವಾರೆಂಟ್ ಸಿದ್ಧವಾದ 12 ತಾಸಿನೊಳಗೆ (ಜೂನ್ 29ರ ಬೆಳಗ್ಗೆ ) ಸಿನಿಮೀಯ ರೀತಿಯಲ್ಲಿ ಮೈಸೂರು ಪ್ರಾಧಿಕಾರಕ್ಕೆ ಐಎಎಸ್‌ ಅಧಿಕಾರಿ ಬಂದಿದ್ದರು. ಒಟ್ಟು 144 ಕಡತಗಳನ್ನ ತೆಗೆದುಕೊಂಡು ಹೋಗಿದ್ದರು ಲೋಕಾಯುಕ್ತವೇ ತನ್ನ ರಿಪೋರ್ಟ್‌ನಲ್ಲಿ ಉಲ್ಲೇಖಿಸಿತ್ತು. ಇನ್ನೂ ನಾವು ದಾಳಿ ಮಾಡಿ ಪ್ರಯೋಜನ ಇಲ್ಲ ಎಂದು ಲಿಖಿತವಾಗಿ ಉಲ್ಲೇಖಿಸಿ ಲೋಕಾಯುಕ್ತ ಸರ್ಚ್ ವಾರೆಂಟ್ ರದ್ದು ಪಡಿಸಿಕೊಂಡಿತ್ತು ಎಂದು ದಾಖಲೆಯಲ್ಲಿ ತಿಳಿದುಬಂದಿದೆ. ಇದನ್ನೂ ಓದಿ: MUDA Scam| ನೋಟಿಸ್‌ ಇಲ್ಲದೇ ರಾತ್ರಿ ದಿಢೀರ್‌ ಲೋಕಾ ಎಸ್‌ಪಿ ಕಚೇರಿಗೆ ಭೇಟಿ ನೀಡಿದ ಸಿಎಂ ಬಾಮೈದ!

    ಸರ್ಚ್ ವಾರೆಂಟ್‌ನಲ್ಲಿ ಇದ್ದ ಅಂಶಗಳೇನು?
    ಜೂನ್ 28ರ ಸಂಜೆ ಲೋಕಾಯುಕ್ತ ಸರ್ಚ್‌ ವಾರಂಟ್‌ನಲ್ಲಿ ಹಲವು ಸ್ಫೋಟಕ ಮಾಹಿತಿ ಬೆಳಿಕಿಗೆ ಬಂದಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸೈಟ್ ಹಂಚಿಕೆಯಲ್ಲಿ ಗೋಲ್ ಮಾಲ್ ಆಗುತ್ತಿದೆ. ಬದಲಿ ನಿವೇಶ ಕೊಡುವ ವಿಚಾರದಲ್ಲಿ ಎಲ್ಲಾ ಕಾನೂನು ಉಲ್ಲಂಘನೆ ಆಗಿದೆ. ಎಲ್ಲಾ ಅಕ್ರಮ ನೀತಿಗಳ ಅನುಸರಿಸಿ ನಿವೇಶನ ಮಂಜೂರು ಮಾಡಲಾಗುತ್ತಿದೆ, ಈ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದೆ. ಇದರ ಬಗ್ಗೆ ನೋಟಿಸ್ ಕೊಟ್ಟು ದಾಖಲೆ ಕೇಳಿದರೆ ಅಧಿಕಾರಿಗಳು ಯಾವ ದಾಖಲೆ ಕೊಡುವುದಿಲ್ಲ. ದಾಖಲೆ ಕೇಳಿದ ಕೂಡಲೇ ದಾಖಲೆ ನಾಶಮಾಡುತ್ತಾರೆ. ಅಲ್ಲದೇ ದಾಖಲೆಗಳನ್ನು ಸುಟ್ಟು ಹಾಕುತ್ತಾರೆ. ಇದಕ್ಕಾಗಿ ದಿಢೀರ್ ದಾಳಿ ಮಾಡಿ ದಾಖಲೆ ಜಪ್ತಿ ಮಾಡುವ ಅವಶ್ಯಕತೆ ಇದೆ. ನಗರ ಯೋಜನಾ ವಿಭಾಗ, ಮುಡಾ ಸೂಪರಿಂಟೆಂಡೆಂಟ್ ಕಚೇರಿಯಲ್ಲಿನ ಮಹತ್ವದ ದಾಖಲೆ ಜಪ್ತಿ ಮಾಡಲೇ ಬೇಕಾಗಿದೆ. ಹೀಗಾಗಿ ದಿಢೀರ್ ದಾಳಿ ಮಾಡಲು ಸರ್ಚ್ ವಾರೆಂಟ್ ಜಾರಿ ಮಾಡಲಾಗಿತ್ತು. ಇದನ್ನೂ ಓದಿ: ಸಿದ್ದರಾಮಯ್ಯಗೆ 120 ಕೋಟಿ ರೂ. ಪರಿಹಾರ ಕೊಡಬೇಕಿತ್ತು: ಸಿಎಂ ಪರ ಮಾಜಿ ಶಾಸಕ ಬ್ಯಾಟಿಂಗ್‌

    ಟೈಂ ಲೈನ್:
    * ಜೂನ್ 28ರ ಸಂಜೆ ಸರ್ಚ್ ವಾರೆಂಟ್ ಸಿದ್ಧ.
    * ಜೂನ್ 29ರ ಬೆಳಗ್ಗೆ ಐಎಎಸ್ ಅಧಿಕಾರಿ ಪ್ರಾಧಿಕಾರಕ್ಕೆ ಎಂಟ್ರಿ.
    * ಜುಲೈ 1ಕ್ಕೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಪ್ರಾಧಿಕಾರಕ್ಕೆ ದಿಢೀರ್ ಆಗಮನ ಸಭೆ.
    * ಜುಲೈ 2ಕ್ಕೆ ಮೈಸೂರು ಲೋಕಾಯುಕ್ತರ ವರ್ಗಾವಣೆ
    * ಈ ಎಲ್ಲಾ ಬೆಳವಣಿಗೆಗಳನ್ನು ಲಿಖಿತವಾಗಿ ಉಲ್ಲೇಖಿಸಿ ಸರ್ಚ್ ವಾರೆಂಟ್ ರದ್ದು.
    * ಐಎಎಸ್ ಅಧಿಕಾರಿ ಬಂದು 144 ಫೈಲ್‌ ತೆಗೆದುಕೊಂಡು ಹೋಗಿದ್ದಾರೆ ಎಂದು ಲೋಕಾಯುಕ್ತ ರೀಪೋರ್ಟ್

  • MUDA Scam| ನೋಟಿಸ್‌ ಇಲ್ಲದೇ ರಾತ್ರಿ ದಿಢೀರ್‌ ಲೋಕಾ ಎಸ್‌ಪಿ ಕಚೇರಿಗೆ ಭೇಟಿ ನೀಡಿದ  ಸಿಎಂ ಬಾಮೈದ!

    MUDA Scam| ನೋಟಿಸ್‌ ಇಲ್ಲದೇ ರಾತ್ರಿ ದಿಢೀರ್‌ ಲೋಕಾ ಎಸ್‌ಪಿ ಕಚೇರಿಗೆ ಭೇಟಿ ನೀಡಿದ ಸಿಎಂ ಬಾಮೈದ!

    ಮೈಸೂರು: ರಾತ್ರೋರಾತ್ರಿ ನೋಟಿಸ್‌ ಇಲ್ಲದೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA Scam) ಸೈಟ್‌ ಹಂಚಿಕೆ ಅಕ್ರಮದ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಎಸ್‌ಪಿ (Lokayukta SP) ಟಿ.ಜೆ.ಉದೇಶ್ ಅವರನ್ನು ಸಿಎಂ ಸಿದ್ದರಾಮಯ್ಯ (CM Siddaramaiah) ಭಾಮೈದ ಮಲ್ಲಿಕಾರ್ಜುನ ಸ್ವಾಮಿ (Mallikarjuna Swamy) ಭೇಟಿ ಮಾಡಿದ್ದು ಹಲವು ಅನುಮಾನಗಳನ್ನು ಸೃಷ್ಟಿಸಿದೆ.

    ಹೌದು. ಮಂಗಳವಾರ ಮುಡಾದ ಹಿಂದಿನ ಆಯುಕ್ತ ಡಿ.ಬಿ. ನಟೇಶ್‌ (DB Natesh) ಲೋಕಾಯುಕ್ತ ಎಸ್‌ಪಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದರು. ನಟೇಶ್‌ ವಿಚಾರಣೆ ಮುಗಿದ ಅರ್ಧಗಂಟೆಯ ಬಳಿಕ ಮಲ್ಲಿಕಾರ್ಜುನ ಸ್ವಾಮಿ ಅವರು ಉದೇಶ್ ಅವರನ್ನು ಭೇಟಿಯಾಗಿದ್ದಾರೆ.

    ಮಲ್ಲಿಕಾರ್ಜುನ ಸ್ವಾಮಿ ಸಿಎಂ ಪತ್ನಿ ಸೈಟ್ ಪಡೆದ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿದ್ದಾರೆ. ರಾತ್ರಿ 7:30ಕ್ಕೆ ಲೋಕಾಯುಕ್ತ ಕಚೇರಿಗೆ ದಿಢೀರ್‌ ಎಂಟ್ರಿ ನೀಡಿದ ಅವರು 8 ಗಂಟೆಯವರೆಗೆ ಕಚೇರಿ ಒಳಗಡೆಯೇ ಇದ್ದರು.

    ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತರಿಂದ ನೋಟಿಸ್‌ ನೀಡಿದ್ದರೆ ಸಾಧಾರಣವಾಗಿ ಆರೋಪಿಗಳು ಬೆಳಗ್ಗೆ ಅಥವಾ ಮಧ್ಯಾಹ್ನದ ನಂತರ ಹಾಜರಾಗುತ್ತಾರೆ. ಆದರೆ ಇಲ್ಲಿ ವಿಚಾರಣೆಯೂ ಇಲ್ಲ, ನೋಟಿಸ್‌ ಇಲ್ಲದೇ ಇದ್ದರೂ ರಾತ್ರಿ ವೇಳೆ ತನಿಖಾಧಿಕಾರಿಯನ್ನು ಆರೋಪಿ ಭೇಟಿ ಮಾಡಿದ್ದರಿಂದ ಹಲವು ಅನುಮಾನಗಳು ಹುಟ್ಟಿಕೊಂಡಿದೆ.

    ಮಲ್ಲಿಕಾರ್ಜುನಸ್ವಾಮಿ ಅವರ‌ನ್ನು ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ನ.18 ರಂದು ವಿಚಾರಣೆಗೆ ಒಳಪಡಿಸಿದ್ದರು. ಇದನ್ನೂ ಓದಿ: ಬೆಂಗ್ಳೂರು | ಎಲೆಕ್ಟ್ರಿಕ್ ಸ್ಕೂಟರ್ ಶೋರೂಂನಲ್ಲಿ ಅಗ್ನಿ ಅವಘಡ – ಯುವತಿ ಸಜೀವ ದಹನ

    ಎದ್ದಿದೆ ಹಲವು ಪ್ರಶ್ನೆಗಳು
    – ರಾತ್ರೋರಾತ್ರಿ ತನಿಖಾಧಿಕಾರಿ ಭೇಟಿ ಮಾಡುವ ಅನಿವಾರ್ಯತೆ ಆರೋಪಿಗೆ ಏನಿತ್ತು?
    – ಮಾಜಿ ಆಯುಕ್ತ ವಿಚಾರಣೆ ಮುಗಿದ ಕೂಡಲೇ ವಿಚಾರಣಾಧಿಕಾರಿಯನ್ನು ಆರೋಪಿ ಭೇಟಿ ಮಾಡಿದ್ದು ಯಾಕೆ?
    – ರಾತ್ರಿ ವೇಳೆ ಲೋಕಾಯುಕ್ತ ಕಚೇರಿಗೆ ಬರಲು ಆರೋಪಿಗೆ ಅವಕಾಶ ಕೊಟ್ಟಿದ್ದು ಯಾರು?

  • ನಾನೇನು ಡ್ಯಾನ್ಸ್‌ ಮಾಡ್ತೀದ್ದೀನಾ? – ಮಾಧ್ಯಮಗಳ ಮುಂದೆ ಮುಡಾ ಮಾಜಿ ಆಯುಕ್ತನ ಪೌರುಷ

    ನಾನೇನು ಡ್ಯಾನ್ಸ್‌ ಮಾಡ್ತೀದ್ದೀನಾ? – ಮಾಧ್ಯಮಗಳ ಮುಂದೆ ಮುಡಾ ಮಾಜಿ ಆಯುಕ್ತನ ಪೌರುಷ

    ಮೈಸೂರು: ಲೋಕಾಯುಕ್ತ ವಿಚಾರಣೆಗೆ (Lokayukta Enquiry) ಹಾಜರಾಗಿದ್ದ ಮುಡಾ (MUDA) ಮಾಜಿ ಆಯುಕ್ತ ಡಿಬಿ ನಟೇಶ್‌ (DB Natesh) ಮಾಧ್ಯಮಗಳ ಮುಂದೆ ಪೌರುಷ ಪ್ರದರ್ಶಿಸಿದ ಘಟನೆ ಇಂದು ನಡೆಯಿತು.

    ಕಚೇರಿಗೆ ವಿಚಾರಣೆ ಆಗಮಿಸಿದಾಗ ಮಾಧ್ಯಮ ಪ್ರತಿನಿಧಿಗಳು ನಟೇಶ್‌ ಅವರ ವಿಡಿಯೋವನ್ನು ಚಿತ್ರೀಕರಿಸುತ್ತಿದ್ದರು. ಈ ವೇಳೆ ಸಿಟ್ಟಾದ ನಟೇಶ್‌, ನನ್ನ ವಿಡಿಯೋ ಯಾಕೆ ಮಾಡ್ತೀದ್ದೀರಾ? ನಾನೇನು ಡ್ಯಾನ್ಸ್ ಮಾಡ್ತಾ ಇದ್ದೀನಾ ಅಂತಾ ಇಂಗ್ಲೀಷ್‌ನಲ್ಲಿ ಪ್ರಶ್ನಿಸಿ ಸಿಟ್ಟು ಹೊರಹಾಕಿದರು. ಅಷ್ಟೇ ಅಲ್ಲದೇ ಕೈಯಲ್ಲಿ ತಂದಿದ್ದ ದಾಖಲೆಗಳನ್ನ ಟೇಬಲ್ ಮೇಲೆ ಕುಕ್ಕಿದರು. ಇದನ್ನೂ ಓದಿ: ಅಧಿಕಾರಿಯೇ ಮನೆಗೆ ತೆರಳಿ ಪತ್ನಿಯನ್ನು ಒಪ್ಪಿಸಿದ್ದೇನೆ ಎಂದರೆ ಸಿಎಂ ಪ್ರಭಾವ ಎಷ್ಟಿದೆ ಅನ್ನೋದು ಗೊತ್ತಾಗುತ್ತೆ: ಸ್ನೇಹಮಯಿ ಕೃಷ್ಣ

     

    ನಟೇಶ್‌ ಮೇಲಿರುವ ಆರೋಪ ಏನು?
    ಸಿಎಂ ಸಿದ್ದರಾಮಯ್ಯ (CM Siddaramaiah) ಪತ್ನಿ ಪಾರ್ವತಿ ಅವರಿಗೆ 14 ಸೈಟ್‌ಗಳು ನಟೇಶ್‌ ಅವಧಿಯಲ್ಲಿ ಮಂಜೂರು ಆಗಿತ್ತು. ಸಭೆ ಮಾಡಿದ್ದು, ಸೈಟ್ ಹಂಚಿದ್ದು, ಖಾತೆ ಮಾಡಿಸಿದ್ದು ಎಲ್ಲವೂ ನಟೇಶ್ ಅವಧಿಯಲ್ಲೇ ಆಗಿತ್ತು. ಸೈಟ್‌ ಹಂಚಿಕೆಯ ವೇಳೆ ಸಿದ್ದರಾಮಯ್ಯ ಅವರ ಪ್ರಭಾವ ತನ್ನ ಮೇಲೆ ಇತ್ತಾ ಎಂಬ ಆರೋಪದ ಸಾಬೀತಿಗೆ ನಟೇಶ್ ಹೇಳಿಕೆ ಬಹಳ ಮಹತ್ವ ಪಡೆದಿದೆ.

    ಮುಡಾದ ಅಕ್ರಮ ನಿವೇಶನ ಹಂಚಿಕೆ ಪ್ರಕರಣಕ್ಕೆ ಡಿಬಿ ನಟೇಶ್​ ಅವರ​ ವಿರುದ್ಧ ಪ್ರಾಸಿಕ್ಯೂಷನ್​ಗೆ ರಾಜ್ಯ ಗೃಹ ಇಲಾಖೆ ಕಳೆದ ವಾರ ಅನುಮತಿ ನೀಡಿತ್ತು.

    ನಗರದ ಮಲ್ಲೇಶ್ವರಂನ 10ನೇ ಕ್ರಾಸ್ ನಲ್ಲಿರುವ‌ ನಟೇಶ್ ಮನೆ ಮೇಲೆ ಈ ಹಿಂದೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದರು. ಸತತ 33 ಗಂಟೆಗಳ ಕಾಲ ದಾಖಲೆ ಪರಿಶೀಲನೆ ಮಾಡಿ 4 ಬ್ಯಾಗ್ ಕೊಂಡೊಯ್ದಿದ್ದರು. ಬಳಿಕ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ನಟೇಶ್ ಅವರು ಈಗಾಗಲೇ ಇಡಿ ಅಧಿಕಾರಿಗಳ ಮುಂದೆ ಮೂರು ಬಾರಿ ವಿಚಾರಣೆಗೆ ಹಾಜರಾಗಿದ್ದಾರೆ.

     

  • ಅಧಿಕಾರಿಯೇ ಮನೆಗೆ ತೆರಳಿ ಪತ್ನಿಯನ್ನು ಒಪ್ಪಿಸಿದ್ದೇನೆ ಎಂದರೆ ಸಿಎಂ ಪ್ರಭಾವ ಎಷ್ಟಿದೆ ಅನ್ನೋದು ಗೊತ್ತಾಗುತ್ತೆ: ಸ್ನೇಹಮಯಿ ಕೃಷ್ಣ

    ಅಧಿಕಾರಿಯೇ ಮನೆಗೆ ತೆರಳಿ ಪತ್ನಿಯನ್ನು ಒಪ್ಪಿಸಿದ್ದೇನೆ ಎಂದರೆ ಸಿಎಂ ಪ್ರಭಾವ ಎಷ್ಟಿದೆ ಅನ್ನೋದು ಗೊತ್ತಾಗುತ್ತೆ: ಸ್ನೇಹಮಯಿ ಕೃಷ್ಣ

    ಮೈಸೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಕುಟುಂಬ ಪಡೆದ 14 ಸೈಟ್‌ಗಳ ವಿಚಾರಣೆ ಮೈಸೂರು ಲೋಕಾಯುಕ್ತದಲ್ಲಿ ಚುರುಕಾಗಿ ಸಾಗಿದೆ. ಇಂದು (ನ.19) ವಿಚಾರಣೆಗೆ ಮುಡಾ ಮಾಜಿ ಆಯುಕ್ತ ಡಿ.ಬಿ ನಟೇಶ್ (DB Natesh) ಹಾಜರಾಗಲಿದ್ದಾರೆ.

    ನಟೇಶ್ ನೂರಾರು ಮಂಜುರಾತಿಗಳ ಪತ್ರಗಳನ್ನು ಹೊರಡಿಸುವಂತೆ ಆದೇಶಿಸಿದ್ದಾರೆ. ಅದರಲ್ಲಿ 2 ಅಂಶಗಳನ್ನು ಗಮನಿಸಿದಾಗ, 2015ರ ಸರ್ಕಾರದ ಅಧಿಸೂಚನೆಯ ಪ್ರಕಾರ 50:50 ಅನುಪಾತದಲ್ಲಿ ಸೈಟ್ ಹಂಚಿಕೆಯಾಗಬೇಕು. ಆದರೆ ಅದು ಅನ್ವಯವಾಗಿಲ್ಲ ಮತ್ತು ನ.20 2020ರಲ್ಲಿ ಮುಡಾದಲ್ಲಿ (MUDA) ಸಭೆಯಲ್ಲಿ ನಿರ್ಣಯ ಆಗಬೇಕಿತ್ತು. ಆದರೆ ಸಭೆಯಲ್ಲಿ ಆ ನಿರ್ಣಯ ಕೈಗೊಂಡಿಲ್ಲ. ಕೇವಲ ಚರ್ಚೆ ಮಾಡುವುದಾಗಿ ತಿಳಿಸಲಾಗಿದೆ. ಇದನ್ನು ಗಮನಿಸಿ ದಾಖಲೆ ಸೃಷ್ಟಿಸುವುದು ತಪ್ಪು. ಇದರಿಂದ ದಾಖಲೆ ಸೃಷ್ಟಿಸಿರುವುದರಿಂದ ಅದು ಸುಳ್ಳು ದಾಖಲೆಯಾಗುತ್ತದೆ. ಇದು ಗಂಭೀರ ವಿಷಯವಾಗಿದ್ದು, ಮುಡಾದಲ್ಲಿ ನಟೇಶ್ ಹಾಗೂ ದಿನೇಶ್ ತುಂಬಾ ಪ್ರಮುಖ ಪಾತ್ರವಹಿಸಿದ್ದಾರೆ. ಅವರನ್ನು ಬಂಧಿಸಬೇಕು, ಆದರೆ ಲೋಕಾಯುಕ್ತ ವಿಚಾರಣೆಯ ಬಳಿಕ ಏನಾಗುತ್ತದೆ ಎಂದು ಕಾದುನೋಡಬೇಕು ಎಂದರು.ಇದನ್ನೂ ಓದಿ: ಮಸ್ಕ್‌ ಸ್ಪೇಸ್‌ ಎಕ್ಸ್‌ ರಾಕೆಟ್‌ನಲ್ಲಿ ಇಸ್ರೋ ಉಪಗ್ರಹ ಉಡಾವಣೆ ಯಶಸ್ವಿ

    ನಟೇಶ್ 14 ನಿವೇಶನಗಳನ್ನು ಮಂಜುರಾತಿ ಮಾಡಿದ್ದಾರೆ. ಜೊತೆಗೆ ಅವರು ಸಾಮಾಜಿಕ ಮಾಧ್ಯಮದಲ್ಲಿ ನಿವೇಶನ ಕುರಿತು ಖುದ್ದು ತಾವೇ ಮನೆಗೆ ಹೋಗಿ ಸಿಎಂ ಪತ್ನಿಯನ್ನು ಪರಿಹಾರ ಪಡೆಯಲು ಒಪ್ಪಿಸಿದ್ದೇನೆ ಎಂದು ಹೇಳಿದ್ದರು. ಒಬ್ಬ ಅಧಿಕಾರಿ ಮನೆಗೆ ತೆರಳಿ ಮಾತನಾಡಿದ್ದಾರೆ ಎಂದರೆ ಅದರಲ್ಲಿ ಸಿಎಂ ಪ್ರಭಾವ ಹೇಗಿದೆ ಎಂದು ಗೊತ್ತಾಗುತ್ತದೆ ಎಂದು ತಿಳಿಸಿದರು.

    ನಟೇಶ್ ಅವರ ಹೇಳಿಕೆ ಇಡೀ ಪ್ರಕರಣದ ಪ್ರಮುಖ ತಿರುವು, ವಿಚಾರಣೆ ಸರಿಯಾಗಿ ನಡೆದರೆ ಸಿದ್ದರಾಮಯ್ಯ ಪ್ರಭಾವ ಸಾಬೀತಾಗುತ್ತದೆ. ಇಷ್ಟೊಂದು ಆಸಕ್ತಿ ಒಬ್ಬ ಅಧಿಕಾರಿಗೆ ಯಾಕೆ ಎಂಬುದು ವಿಚಾರಣೆ ಆದರೆ ಸತ್ಯ ಹೊರ ಬರುತ್ತದೆ ಎಂದು ಹೇಳಿದ್ದಾರೆ.

    ಸ್ವತಃ ಅರ್ಜಿದಾರರ ಮನೆಗೆ ತೆರಳಿ ಮಾತನಾಡಿರುವುದು ಗಂಭೀರ ವಿಷಯ ಹಾಗೂ ಇದು ಪ್ರಮುಖ ಸಾಕ್ಷಿಯಾಗುತ್ತದೆ. ಇಂದಿನ ವಿಚಾರಣೆ ಮುಡಾದಲ್ಲಿ ಪ್ರಮುಖ ಘಟ್ಟವಾಗಿದೆ. ಇಂದು ತನಿಖಾಧಿಕಾರಿಗಳು, ಮಂಜೂರಾತಿ ಪತ್ರದಲ್ಲಿ 50:50 ಅನುಪಾತದಲ್ಲಿ ಸೈಟ್ ಹಂಚಿಕೆ ಮಾಡಲು ತಿಳಿಸಿದ್ದಾರಾ? ಹಾಗೂ ಮುಡಾದಲ್ಲಿ ಸಭೆಯಲ್ಲಿ 50:50 ಅನುಪಾತದಲ್ಲಿ ಸೈಟ್ ಹಂಚಿಕೆ ಮಾಡಲು ನಿರ್ಣಯ ಆಗಿದ್ಯಾ? ಎನ್ನುವ ಕುರಿತು ಸ್ಪಷ್ಟನೆ ನೀಡಬೇಕು ಎಂದರು.ಇದನ್ನೂ ಓದಿ: ಸೋಮವಾರ ಸಂಜೆ ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್ – ದೃಢಪಡಿಸಿದ ಪರಮೇಶ್ವರ್

  • ಮುಡಾ ಕೇಸಲ್ಲಿ ಸಿಎಂ ಬಾಮೈದನಿಗೆ ಇಡಿ ವಿಚಾರಣೆ – ಸತತ 4 ಗಂಟೆ ಡ್ರಿಲ್

    ಮುಡಾ ಕೇಸಲ್ಲಿ ಸಿಎಂ ಬಾಮೈದನಿಗೆ ಇಡಿ ವಿಚಾರಣೆ – ಸತತ 4 ಗಂಟೆ ಡ್ರಿಲ್

    ಮೈಸೂರು/ಬೆಂಗಳೂರು: ಮುಡಾ ಹಗರಣದಲ್ಲಿ ಸಿಎಂ (Chief Minister) ಬಾಮೈದ ಮಲ್ಲಿಕಾರ್ಜುನಸ್ವಾಮಿ ಅವರ‌ನ್ನ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.

    ಸೋಮವಾರ ಮಧ್ಯಾಹ್ನ 2 ಗಂಟೆ ವೇಳೆಗೆ ಇಡಿ ಮುಂದೆ ಹಾಜರಾದ ಮಲ್ಲಿಕಾರ್ಜುನ ಸ್ವಾಮಿ (Mallikarjunaswamy) ಅವರು ಸತತ ನಾಲ್ಕು ಗಂಟೆ ವಿಚಾರಣೆ ಎದುರಿಸಿದರು. ಸಂಜೆ ವೇಳೆಗೆ ವಿಚಾರಣೆ ಮುಗಿದ ಬಳಿಕ ಮನೆಗೆ ತೆರಳಿದರು. ಎ-4 ಹಾಗೂ ಭೂಮಾಲೀಕ ದೇವರಾಜು ಬಳಿ ಜಮೀನು ಪಡೆದು ಸಿಎಂ ಪತ್ನಿಗೆ ಎ-3 ಆರೋಪಿ ಮಲ್ಲಿಕಾರ್ಜುನಸ್ವಾಮಿ ಕುಂಕುಮ ರೂಪದಲ್ಲಿ ಭೂಮಿ ನೀಡಿದ್ದರು. ಮುಡಾ ಪ್ರಕರಣದಲ್ಲಿ ಇಡಿ ವಿಚಾರಣೆ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಸಿಎಂ ಪತ್ನಿ ಪಾರ್ವತಿ ಹಾಗೂ ಸಿದ್ದರಾಮಯ್ಯ (Siddaramaiah) ಅವರಿಗೂ ನೋಟಿಸ್‌ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ದೆಹಲಿ | 10, 12ನೇ ತರಗತಿಯವರಿಗೆ ಬೇರೆ ಬಗೆಯ ಶ್ವಾಸಕೋಶಗಳಿಲ್ಲ – ತರಗತಿ ಬಂದ್‌ಗೆ ಸುಪ್ರೀಂ ನಿರ್ದೇಶನ

    ಮುಡಾ ತನಿಖೆಯ ಸಂಬಂಧ ಈವರೆಗೆ ಯಾರ‍್ಯಾರಿಗೆ ಇಡಿ ನೋಟಿಸ್‌?

    * ಸೆಪ್ಟಂಬರ್ 7 ರಂದು ದೂರುದಾರ ಸ್ನೇಹಮಯಿ ಕೃಷ್ಣ ವಿಚಾರಣೆ
    * ಅಕ್ಟೋಬರ್ 18 ರಂದು ಮೈಸೂರಿನ ಮುಡಾ ಕಚೇರಿ ಮೇಲೆ ದಾಳಿ
    * ಅಕ್ಟೋಬರ್ 18 ರಂದು ಅಧಿಕಾರಿಗಳನ್ನ ವಿಚಾರಣೆ ಮಾಡಿದ್ದ ಇ.ಡಿ
    * ಅಕ್ಟೋಬರ್ 19 ರಂದು ಭೂಮಿ ಮಾಲೀಕ ದೇವರಾಜು ವಿಚಾರಣೆ
    * ಅಕ್ಟೋಬರ್ 27 ರಂದು ದೂರುದಾರ ಗಂಗರಾಜು ವಿಚಾರಣೆ
    * ಅಕ್ಟೋಬರ್ 28 ರಂದು ಬಿಲ್ಡರ್ ಮಂಜುನಾಥ್ ಮನೆಯಲ್ಲಿ ಶೋಧ
    * ಅಕ್ಟೋಬರ್ 28 ರಂದು ಮುಡಾ ಮಾಜಿ ಆಯುಕ್ತ ನಟೇಶ್‌ಗೆ ಇಡಿ ಶಾಕ್
    * ನವೆಂಬರ್ 12 ರಂದು ಸಿಎಂ ಖಾಸಗಿ ಪಿಎ ಸಿ.ಟಿ ಕುಮಾರ್‌ಗೆ ವಿಚಾರಣೆ
    * ನವೆಂಬರ್ 13 ರಂದು ರಾಯಚೂರು ಸಂಸದ ಕುಮಾರ್ ನಾಯಕ್ ವಿಚಾರಣೆ
    * ನವೆಂಬರ್ 14 ರಂದು ಮುಡಾ ಮಾಜಿ ಅಧ್ಯಕ್ಷ ಮರಿಗೌಡ ವಿಚಾರಣೆ
    * ನವೆಂಬರ್ 14 ರಂದು ಮೂಡಾ ಮಾಜಿ ಅಧ್ಯಕ್ಷ ಮಾಳಿಗೆ ಶಂಕರ್, ಮರೀಗೌಡ ಆಪ್ತ
    ಶಿವಣ್ಣ ವಿಚಾರಣೆ
    * ನವೆಂಬರ್‌ 18ರಂದು ಸಿಎಂ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ವಿಚಾರಣೆ

    ಇನ್ನೂ, ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಸಿಎಂ ಸಿದ್ದರಾಮಯ್ಯ-ಕೇಂದ್ರ ಸಚಿವ ಸೋಮಣ್ಣ ಮುಖಾಮುಖಿ ಆಗಿದ್ರು. ಸಿಎಂ ಆಗಮಿಸುವಾಗ ಸೋಮಣ್ಣ ಹೊರಡ್ತಿದ್ರು. ಈ ವೇಳೆ, ಸಿಎಂ ಬಳಿ ಮುಡಾ ಕೇಸ್ ಪ್ರಸ್ತಾಪಿಸಿದ ಸೋಮಣ್ಣ, ಮುಂಚೆಯೇ ಸೈಟ್ ವಾಪಸ್ ಮಾಡಿದ್ರೆ ಇಷ್ಟೆಲ್ಲಾ ರಾದ್ಧಾಂತ ಆಗ್ತಿರಲಿಲ್ಲ ಎಂದು ಬೇಸರ ಹೊರಹಾಕಿದ್ರು. ಅದಕ್ಕೆ, ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಸಿಎಂ ಸಮರ್ಥಿಸಿಕೊಂಡ್ರು. ಹಾಗಿದ್ರೆ ಸದನದಲ್ಲೇಕೆ 65 ಕೋಟಿ ಸೈಟ್ ಅಂತಾ ಹೇಳಿದ್ದು ಎಂದು ಸೋಮಣ್ಣ ಕೇಳಿದ್ರು.. ಅದಕ್ಕೆ ಅದು ಹಾಗಲ್ಲ.. ನಾನು ಹೇಳಿದ್ದು ಬೇರೆ ಎಂದು ಸಿಎಂ ಸಮಜಾಯಿಷಿ ಕೊಟ್ರು.. ದೇವರು, ನಂಬಿಕೆಗಳ ವಿಚಾರಗಳು ಪ್ರಸ್ತಾಪ ಆದ್ವು. ನಾನು ದೇವರಲ್ಲಿ ನಂಬಿಕೆ ಇಟ್ಟಿಲ್ಲ ಅಂತಾ ಸಿಎಂ ಸಿದ್ದರಾಮಯ್ಯ ಹೇಳಿಕೊಂಡ್ರು.

    ಈ ಮಧ್ಯೆ, ಜಿಟಿ ದೇವೇಗೌಡ ಸಂಬಂಧಿ ಮಹೇಂದ್ರಗೆ ಅಕ್ರಮವಾಗಿ 50:50 ಸೈಟ್ ನೀಡಿದ ಪ್ರಕರಣ ಸಂಬಂಧ ಇನ್ನಷ್ಟು ವಿಚಾರ ಬಯಲಾಗಿದೆ. 2020ರಲ್ಲಿ ಮಹೇಂದ್ರ ಜಮೀನು ಖರೀದಿಸಿದ್ರು. ಇದಾದ ಏಳೇ ತಿಂಗಳಿಗೆ ಮಹೇಂದ್ರಗೆ 50:50 ಅನುಪಾತದಲ್ಲಿ 19 ಸೈಟ್ ಹಂಚಿಕೆ ಆಗಿದ್ವು. ಮುಡಾ ವಶಪಡಿಸಿಕೊಂಡ ದೇವನೂರು ಭೂಮಿಯಲ್ಲಿ ಲೇಔಟ್ ಅಭಿವೃದ್ಧಿ ಆಗಿ, ಮನೆ ಕಟ್ಟಿದ ಸ್ಥಳದಲ್ಲಿನ ಜಮೀನನ್ನು ಮಹೇಂದ್ರ ಖರೀದಿಸಿದ್ದಾದ್ರೂ ಹೇಗೆ ಎಂಬುದೇ ಈಗ ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಇದನ್ನೂ ಓದಿ: ಅರ್ಹತೆ ಇಲ್ಲದವರಿಗೆ ಬಿಪಿಎಲ್ ಕಾರ್ಡ್ ಸಿಕ್ತಿದೆ, ಸರ್ಕಾರ ಪರಿಷ್ಕರಣೆ ಮಾಡಬೇಕು: ನಟ ಚೇತನ್

  • ಮುಡಾ ಪಡೆದಿರುವ ಜಮೀನಿಗೆ ಬದಲಾಗಿ ರೈತರಿಗೆ 50:50 ಸೈಟ್ ಕೊಡಲೇಬೇಕು: ಜಿಟಿಡಿ

    ಮುಡಾ ಪಡೆದಿರುವ ಜಮೀನಿಗೆ ಬದಲಾಗಿ ರೈತರಿಗೆ 50:50 ಸೈಟ್ ಕೊಡಲೇಬೇಕು: ಜಿಟಿಡಿ

    ಮಂಗಳೂರು: ಮುಡಾ ಪಡೆದಿರುವ ಜಮೀನಿಗೆ ಬದಲಾಗಿ ರೈತರಿಗೆ 50:50 ಸೈಟ್ ಕೊಡಲೇಬೇಕು ಎಂದು ಶಾಸಕ ಜಿ.ಟಿ ದೇವೇಗೌಡ ಆಗ್ರಹಿಸಿದ್ದಾರೆ.

    ಮಂಗಳೂರಿನಲ್ಲಿ (Mangaluru) ಅವರು ಮಾಧ್ಯಮಗಳೊಂದಿಗೆ  ಮಾತನಾಡಿದರು.  ಈ ವೇಳೆ ಮುಡಾದಲ್ಲಿ ದೇವೇಗೌಡರ ಪ್ರಭಾವ ಬಳಸಿ ಮಹೇಂದ್ರ 19 ಸೈಟ್ ಪಡೆದಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಸ್ನೇಹಮಯಿ ಕೃಷ್ಣ ಬುದ್ಧಿವಂತ, ಅವನಲ್ಲಿ ಶಕ್ತಿ ಇದೆ. ಒಂದು ಎಕರೆ ಭೂಮಿ ಸ್ವಾಧೀನ ಪಡಿಸಿ ದುಡ್ಡಿನ ಪರಿಹಾರ ನೀಡಿದ್ರೆ ಒಂದು ಸೈಟ್ ಕೊಡ್ತಾರೆ. ಆ ಜಮೀನಿಗೆ ಪರಿಹಾರ ಕೊಡದೇ ಇದ್ರೆ 50:50 ನಲ್ಲಿ ಸೈಟ್ ಕೊಡಬೇಕು. ರೈತರ ಜಮೀನಿಗೆ ಇದನ್ನು ಕಾನೂನು ಬದ್ಧವಾಗಿ ಕೊಡಬೇಕು ಎಂದು ಹೇಳಿದರು. ಇದನ್ನೂ ಓದಿ: ಬೈಡನ್ ರೀತಿ ಮೋದಿ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ

    ಮುಡಾ ಪಡೆದಿರುವ ಜಮೀನಿಗೆ 50:50 ಸೈಟ್ ಕೊಡಲೇಬೇಕು. ಕೊಡುವ ಪ್ರಕ್ರಿಯೆಯಲ್ಲಿ ತಪ್ಪಾಗಿದ್ರೆ ಶಿಕ್ಷೆ ಅನುಭವಿಸುತ್ತಾರೆ. ನನ್ನ ಸಂಬಂಧಿಯೇ ಆಗಲಿ, ಯಾರೇ ಆಗಲಿ ಶಿಕ್ಷೆಯಾಗಬೇಕು. ಭೂಮಿ ನೀಡಿದ ರೈತನಿಗೆ 50:50ನಲ್ಲಿ ಸೈಟ್ ಕೊಡಲೇಬೇಕು. ಹೀಗೆ ಮಾಡುವ ಸಂದರ್ಭದಲ್ಲಿ ಕೆಲವು ನ್ಯೂನತೆಗಳಾಗಿದೆ. ರೈತರಿಗೆ ಅಧಿಕೃತವಾಗಿ 50:50 ಕೊಡೋದನ್ನು ಯಾರಿಂದಲೂ ತಪ್ಪಿಸಲು ಆಗಲ್ಲ. 50:50 ಕೊಡೋದ್ರಲ್ಲಿ ದುರುಪಯೋಗ ಆಗಿದ್ರೆ ಅವರಿಗೆ ಶಿಕ್ಷೆಯಾಗಬೇಕು. ಕಾನೂನು ಉಲ್ಲಂಘನೆ ಆಗಿದ್ರೆ ಎಲ್ಲರಿಗೂ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.

    ವಿರೋಧ ಪಕ್ಷದ ನಾಯಕನ ಆಯ್ಕೆ ಸಂದರ್ಭದಲ್ಲಿ ಕೋರ್ ಕಮಿಟಿ ಮೀಟಿಂಗ್ ಕರೆದಿದ್ದರು. ನಾನೂ ಪಬ್ಲಿಕ್ ಅಕೌಂಟ್ಸ್ ಕಮಿಟಿ ಟೂರ್ ಹೋಗಿದ್ದೆ. ಆ ಸಂದರ್ಭದಲ್ಲಿ ಮೀಟಿಂಗ್ ಕರೆದು ನನ್ನ ಬಿಟ್ಟು ನಾಯಕನ ಆಯ್ಕೆ ಮಾಡಿದ್ರು. ನಿಖಿಲ್ ಕುಮಾರಸ್ವಾಮಿ ಮೈಸೂರಿಗೆ ಬಂದಾಗ ಕರೆದಿದ್ದರು. ಆ ಸಭೆಯಲ್ಲಿ ನಾನು ಭಾಗವಹಿಸಿದ್ದೆ. ಅಲ್ಲಿ ಸಾ.ರಾ ಮಹೇಶ್ ಇನ್ನು ಎಚ್.ಡಿ ಕುಮಾರಸ್ವಾಮಿ, ಎಚ್.ಡಿ ದೇವೆಗೌಡ್ರು ಇಲ್ಲ. ಇನ್ನು ನಾನೇ ಬಿ.ಫಾರಂ ಕೊಡೋದೆಂದು ಭಾಷಣ ಮಾಡಿದ್ದರು. ಆಗ ನಿಖಿಲ್ ಕುಮಾರಸ್ವಾಮಿ ಬಂದು ಕ್ಷಮಿಸಿ ತಪ್ಪಾಗಿ ಭಾಷಣ ಮಾಡಿದ್ದಾರೆ ಎಂದು ಹೇಳಿದರು. ನಾನು ಪಕ್ಷ ಕಟ್ಟುವ ಕೆಲಸ ಪ್ರಾಮಾಣಿಕವಾಗಿ ಮಾಡಿದ್ದೇನೆ. ಯಾಕೇ ನನ್ನನ್ನು ಬಿಟ್ಟಿದ್ದಾರೆಂದು ಅವರೇ ಹೇಳಬೇಕು ಎಂದು ಹೇಳಿದರು. ಇದನ್ನೂ ಓದಿ: ತಿಮ್ಮಸಂದ್ರ ವಕ್ಫ್‌ ಆಸ್ತಿ ಪ್ರಕರಣ – ರೈತರಿಗೆ ಭೂಮಿ ಮಂಜೂರು ಆಗಿರೋ ದಾಖಲೆಗಳಿಲ್ಲ ಎಂದ ಡಿಸಿ

    ಚನ್ನಪಟ್ಟಣ (Channapatna) ಉಪಚುನಾವಣಾ ಪ್ರಚಾರದಲ್ಲಿ ತಾವು ಹೊರಗುಳಿದಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಯಾರು ಸಹ ನನ್ನನ್ನು ಚುನಾವಣೆಗೆ ಬನ್ನಿ ಎಂದು ಕರೆದಿಲ್ಲ. ಕೋರ್ ಕಮಿಟಿ ಅಧ್ಯಕ್ಷನಾಗಿದ್ದರು ಸಹ ಪ್ರಚಾರದ ಪಟ್ಟಿಯಿಂದ ನನ್ನ ಹೆಸರನ್ನು ತೆಗೆದಿದ್ದಾರೆ. ದೂರವಾಣಿ ಮೂಲಕನೂ ನನ್ನ ಕರೆದಿಲ್ಲ, ಹಾಗಾಗಿ ನಾನು ಭಾಗವಹಿಸಿಲ್ಲ. ಕೋರ್ ಕಮಿಟಿ ಅಧ್ಯಕ್ಷನನ್ನು ಬಿಟ್ಟೇ ಮೀಟಿಂಗ್ ಮಾಡಿದ್ದಾರೆ. ಯಾಕಾಗಿ ಈ ರೀತಿ ಮಾಡಿದ್ದಾರೆಂದು ಅವರೇ ಹೇಳಬೇಕು. ಚಾಮುಂಡಿ ಬೆಟ್ಟದಲ್ಲಿ ಅಂತದ್ದೇನು ತಪ್ಪು ಮಾತನಾಡಿಲ್ಲ. ಸಿದ್ದರಾಮಯ್ಯನವರು 135 ಶಾಸಕರ ಬೆಂಬಲದಿಂದ ಮುಖ್ಯಮಂತ್ರಿ ಆಗಿದ್ದಾರೆ. ಎಚ್.ಡಿ ಕುಮಾರಸ್ವಾಮಿ 2ಲಕ್ಷ ಲೀಡ್‌ನಲ್ಲಿ ಗೆದ್ದು ಎಂಪಿ ಆಗಿದ್ದಾರೆ. ಅಶೋಕ್ ಅವರು ಗೆದ್ದು ವಿರೋಧ ಪಕ್ಷದ ನಾಯಕರಾಗಿದ್ದಾರೆ ಎಂದು ತಿಳಿಸಿದರು.

    ಕೇಂದ್ರದಲ್ಲೂ ಕೆಲವರ ಮೇಲೆ ಎಫ್‌ಐಆರ್ ಆಗಿದೆ. ಇಲ್ಲಿ ಯಾರ ಮೇಲೆ ಎಫ್ಐಆರ್ ಆಗಿದೆ ಎಂದು ಗೊತ್ತು. ನ್ಯಾಯಾಲಯದ ತೀರ್ಪು ಬಂದು ತಪ್ಪಿತಸ್ಥ ಅಂದ ಮೇಲೆ ಅವರಿಗೆ ಶಿಕ್ಷೆ ಆಗುತ್ತೋ, ರಾಜೀನಾಮೆ ಕೊಡಬೇಕೋ, ಜೈಲಿಗೆ ಹಾಕಬೇಕೋ ಅದನ್ನ ಮಾಡಬೇಕು. ಅದು ಬಿಟ್ಟು ಕಾಂಗ್ರೆಸ್ ಮಂತ್ರಿಗಳು ಪ್ರತೀ ದಿವಸ ಕುಮಾರಸ್ವಾಮಿ ರಾಜೀನಾಮೆ ಕೊಡಿ ಎಂದು ಕೇಳೋದು, ಬಿಜೆಪಿ ದಳದವರು ಸೇರಿ ಸಿದ್ದರಾಮಯ್ಯ (Siddaramaih) ರಾಜೀನಾಮೆ ಕೊಡಿ ಎಂದು ಕೇಳೋದು ಇದು ಯಾವುದು ಸರಿಯಲ್ಲ. ನ್ಯಾಯಾಲಯದ ತೀರ್ಪು ಬರುವವರೆಗೆ ಯಾರು ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲ. ಕೊಟ್ರೆ ಇಡೀ ವಿಧಾನಸೌಧದಲ್ಲಿರುವ 75% ಶೇಕಡಾ ರಾಜೀನಾಮೆ ಕೊಡಬೇಕಾಗುತ್ತದೆ. ಕೇಂದ್ರ ರಾಜ್ಯದಲ್ಲಿ ಬಹಳಷ್ಟು ಜನ ಇದ್ದಾರೆ. ಇಷ್ಟು ಹೇಳಿದ್ದೆ ದೊಡ್ಡ ಅಪರಾಧ ಎಂದು ತಿಳ್ಕೊಂಡ್ರೆ ನಾನೇನು ಮಾಡೋಕೆ ಆಗುತ್ತೆ ಇಷ್ಟು ಹೇಳಿದ್ದೆ ದೊಡ್ಡ ಅಪರಾಧ ಅಂತಾ ತಿಳ್ಕೊಂಡ್ರೆ ನಾನೇನು ಮಾಡೋಕೆ ಆಗುತ್ತೆ ಎಂದು ಹರಿಹಾಯ್ದರು. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ 2,021 ಬಿಪಿಎಲ್ ಕಾರ್ಡುಗಳು ಎಪಿಎಲ್‌ಗೆ ಮಾರ್ಪಾಡು

    ಕೇಂದ್ರ ಸಚಿವ ಕುಮಾರಸ್ವಾಮಿ (HDKumaraswamy) ಅವರನ್ನು ಕರಿಯಾ ಎಂದು ಸಚಿವ ಜಮೀರ್ ಹೇಳಿಕೆ ವಿಚಾರ ಪ್ರತಿಕ್ರಿಯೆ ನೀಡಿ, ಜಮೀರ್ ಕುಮಾಸ್ವಾಮಿಗೆ ಆ ರೀತಿ ಮಾತನಾಡಬಾರದಿತ್ತು ಎಂಬ ಅರಿವಾಗಿದೆ ಹೀಗಾಗಿ ಕ್ಷಮೆಯನ್ನು ಸಹ ಕೇಳಿದ್ದಾರೆ. ಯಾವುದೇ ವ್ಯಕ್ತಿ ಸಚಿವರಾದ ಮೇಲೆ ಆ ಸಚಿವ ಸ್ಥಾನದ ಗೌರವವನ್ನು ಕಾಪಾಡೋದು ಅವರೆಲ್ಲರ ಕರ್ತವ್ಯ ಯಾರೂ ಕೂಡಾ ಆ ರೀತಿ ಮಾತನಾಡಬಾರದು ಎಂದರು. ಇದನ್ನೂ ಓದಿ: ಸಚಿವ ಕೆ.ಜೆ ಜಾರ್ಜ್ ಪುತ್ರನ ಅರಣ್ಯದೊಳಗಿನ ಜಮೀನಿಗೆ ದಾರಿ ಬಂದ್‌ – ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್‌

  • ಮುಡಾ ಹಗರಣಕ್ಕೆ ಟ್ವಿಸ್ಟ್‌ – ಜಿಟಿ ದೇವೇಗೌಡ ಸಂಬಂಧಿಗೆ 19 ಸೈಟ್‌ ಹಂಚಿಕೆ!

    ಮುಡಾ ಹಗರಣಕ್ಕೆ ಟ್ವಿಸ್ಟ್‌ – ಜಿಟಿ ದೇವೇಗೌಡ ಸಂಬಂಧಿಗೆ 19 ಸೈಟ್‌ ಹಂಚಿಕೆ!

    – ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಆರೋಪ
    – ನಕಲಿ ದಾಖಲೆ ಸೃಷ್ಟಿಸಿ ಮುಡಾದಿಂದ ಸೈಟ್‌

    ಮೈಸೂರು: ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಸೈಟ್‌ ಹಗರಣದ ಸದ್ದು ಜೋರಾಗುತ್ತಿದ್ದಂತೆ ಈಗ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್‌ ಶಾಸಕ ಜಿಟಿ ದೇವೇಗೌಡ ಅವರ ಸಂಬಂಧಿಯೂ ಮುಡಾದಿಂದ 19 ಸೈಟ್‌ ಪಡೆದಿರುವ ಗಂಭೀರ ಆರೋಪ ಕೇಳಿಬಂದಿದೆ.

    ಹೌದು. ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ (Snehamayi Krishna) ಅವರು ಪಬ್ಲಿಕ್‌ ಟಿವಿ ಜೊತೆ ಮಾತನಾಡಿ ಜಿಟಿ ದೇವೇಗೌಡ (GT Devegowda) ಅವರ ಸಹೋದರಿಯ ಮಗ ಮಹೇಂದ್ರ (Mahendra) 19 ಸೈಟ್‌ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಸಿಎಂ ಪರ ಜಿಟಿಡಿ ಬ್ಯಾಟಿಂಗ್ | ಕಳ್ಳರು ಕಳ್ಳರು ಒಂದಾಗಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ವ್ಯಂಗ್ಯ

    ಏನಿದು ಆರೋಪ?
    ಮಹೇಂದ್ರ ಎಂಬುವವರಿಗೆ ಸೇರಿದ ದೇವನೂರು ಗ್ರಾಮದ 2.22 ಎಕರೆ ಭೂಮಿಯನ್ನು ಉಪಯೋಗಿಸಿಕೊಂಡಿರುವುದಾಗಿ ಮುಡಾ ಹೇಳಿದೆ. ಆದರೆ ಯಾವಾಗ ಭೂಮಿಯನ್ನು ವಶಪಡಿಸಿಕೊಂಡು ಅಭಿವೃದ್ಧಿ ಪಡಿಸಿದ್ದೇವೆ ಎನ್ನುವ ಮಾಹಿತಿ ಮಾತ್ರ ಇಲ್ಲ. ಅಷ್ಟೇ ಅಲ್ಲದೇ ದೇವನೂರು ಗ್ರಾಮದ ಭೂಮಿಗೆ ವಿಜಯನಗರ 3ನೇ ಹಂತದಲ್ಲಿ ನಿವೇಶನ ನೀಡಲಾಗಿದೆ. ಇದನ್ನೂ ಓದಿ: ಮುಡಾ 50:50 ಅನುಪಾತ ರದ್ದು ಮಾಡಿ ಅಂತಾ ನಾನು ಹೇಳಲ್ಲ: ಜಿಟಿ ದೇವೇಗೌಡ ಅಚ್ಚರಿಯ ಹೇಳಿಕೆ

    ಪ್ರೋತ್ಸಾಹದಾಯಕ ಯೋಜನೆಯಲ್ಲಿ ಸ್ವ ಇಚ್ಚೆಯಿಂದ ಬಿಟ್ಟುಕೊಟ್ಟಿದ್ದಾರೆ ಎಂದು ಕ್ರಯ ಪತ್ರದಲ್ಲಿ ನಮೂದಾಗಿದೆ. ಈ ಜಾಗ ನೀಡಿದ್ದಕ್ಕೆ ಕೇವಲ 2 ಸೈಟ್‌ಗಳನ್ನು ಮಾತ್ರ ನೀಡಬೇಕಿತ್ತು. 40*60 ಮತ್ತು 40*30 ರ 3600 ಚದರ ಅಡಿ ಮಾತ್ರ ಪರಿಹಾರ ಸಿಗಬೇಕಾಗಿತ್ತು. ಆದರೆ ನಗರದ ಪ್ರೈಮ್ ಜಾಗವಾದ ವಿಜಯನಗರದಲ್ಲಿ 19 ನಿವೇಶನಗಳನ್ನು ಹಂಚಿಕೆ ಮಾಡುವ ಮೂಲಕ ಪರಿಹಾರ ಸಿಕ್ಕಿದೆ.  ಇದನ್ನೂ ಓದಿ: ಕೇಂದ್ರದಿಂದ ತರೋದನ್ನು ರಾಜ್ಯಕ್ಕೆ ತನ್ನಿ, ರಾಜೀನಾಮೆ ಕೇಳುತ್ತಾ ಕೂತರೆ ಹೇಗೆ – ಹೆಚ್‌ಡಿಕೆ ವಿರುದ್ಧವೇ ಜಿಟಿಡಿ ಕಿಡಿ

    ಸ್ನೇಹಮಯಿ ಕೃಷ್ಣ ಹೇಳಿದ್ದು ಏನು?
    ಈ ಭೂಮಿಯನ್ನ ಮುಡಾ ಯಾವಾಗ ವಶಪಡಿಸಿಕೊಂಡಿದೆ ಎಂಬ ಮಾಹಿತಿ ಸ್ಪಷ್ಟವಾಗಿಲ್ಲ. ಈ ಜಾಗದ ಮೂಲ ಮಾಲೀಕರು ಮಹೇಂದ್ರ ಅಲ್ಲ. ನಕಲಿ ದಾಖಲೆಗಳು ಸೃಷ್ಟಿ ಮಾಡಿಕೊಂಡು ಅಕ್ರಮವಾಗಿ ಪರಿಹಾರದ ಮೂಲಕ ನಿವೇಶನ ಪಡೆಯಲಾಗಿದೆ. ಮೂಲತಃ ಮಹೇಂದ್ರ ಎನ್ನುವ ವ್ಯಕ್ತಿಗೆ ದೇವನೂರು ಬಡಾವಣೆ ಜಾಗದಲ್ಲಿ ಜಮೀನು ಇಲ್ಲ. ಇದರ ಜೊತೆ ಪ್ರತಿಷ್ಠಿತ ವಿಜಯನಗರ ಬಡಾವಣೆಯಲ್ಲಿ 19 ಸೈಟ್‌ ಹಂಚಿಕೆ ಮಾಡಿದ್ದಕ್ಕೆ ಮಾನದಂಡ ಏನು ಎಂದು ಪ್ರಶ್ನೆ ಮಾಡಿದ್ದಾರೆ.

  • ಇಬ್ಬರು ಸಚಿವರಿಂದಲೇ ಮುಡಾ ಅಕ್ರಮಕ್ಕೆ ಸಹಕಾರ!

    ಇಬ್ಬರು ಸಚಿವರಿಂದಲೇ ಮುಡಾ ಅಕ್ರಮಕ್ಕೆ ಸಹಕಾರ!

    – ಮಾಜಿ ಮುಡಾ ಅಧಿಕಾರಿಗಳ ಸ್ಫೋಟಕ ಹೇಳಿಕೆ

    ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸೈಟ್‌ ಹಂಚಿಕೆ ಹಗರಣ (MUDA Scam) ಈಗ ಇಬ್ಬರು ಸಚಿವರಿಗೂ ಸುತ್ತಿಕೊಳ್ಳುವ ಸಾಧ್ಯತೆಯಿದೆ.

    ಹೌದು. ಸಿಎಂ ವಿರುದ್ಧದ ಜಾರಿ ನಿರ್ದೇಶನಾಲಯದ (ED) ತನಿಖೆ ತೀವ್ರಗೊಳ್ಳುತ್ತಿದ್ದಂತೆ ಅಧಿಕಾರಿಗಳು ಈಗ ಇಬ್ಬರು ಸಚಿವರ ಹೆಸರನ್ನು ಹೇಳಿರುವ ವಿಚಾರ ಮೂಲಗಳಿಂದ ಪಬ್ಲಿಕ್‌ ಟಿವಿಗೆ ಮಾಹಿತಿ ಸಿಕ್ಕಿದೆ.

    ಇಡಿ ಮುಡಾದಲ್ಲಿ ಹಿಂದೆ ಕೆಲಸ ಮಾಡಿದ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದೆ. ಈ ವೇಳೆ 50:50 ಅನುಪಾತದಲ್ಲಿ ಸೈಟ್ ಹಂಚಿಕೆ ಮಾಡುವಾಗ ಇಬ್ಬರು ಸಚಿವರು ಪ್ರಭಾವ ಬೀರಿದ್ದಾರೆ. ಪ್ರಮುಖ ಸಚಿವರಿಂದಲೇ ಅಕ್ರಮ ನಡೆದಿದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಬೀದರ್ ಬರೋಬ್ಬರಿ 13,295 ಎಕರೆ ಆಸ್ತಿ ವಕ್ಫ್ ಪಾಲು!

     

    ಮುಡಾ ಮಾಜಿ ಅಧಿಕಾರಿಗಳ ಹೇಳಿಕೆಯನ್ನು ಬೆನ್ನತ್ತಿರುವ ಇಡಿ ಈಗ ದಾಖಲೆ ಪರಿಶೀಲನೆಯನ್ನು ತೀವ್ರಗೊಳಿಸಿದೆ. ಒಂದು ವೇಳೆ ಅಧಿಕಾರಿಗಳ ಹೇಳಿಕೆಗೆ ಸಂಬಂಧಿಸಿದಂತೆ ಪೂರಕ ದಾಖಲೆಗಳು ಸಿಕ್ಕಿದರೆ ಇಡಿ  ಇಬ್ಬರು ಸಚಿವರನ್ನು ವಿಚಾರಣೆಗೆ ಕರೆಸಿಕೊಳ್ಳುವ ಸಾಧ್ಯತೆಯಿದೆ. ಇದನ್ನೂ ಓದಿ: ಮುಡಾದಲ್ಲಿ ಭಾರೀ ಅಕ್ರಮ – ಹಂಚಿಕೆಯಾದ 2 ಸಾವಿರ ಸೈಟ್‌ಗಳಿಗೆ ಮೂಲ ದಾಖಲೆ ಇಲ್ಲ

    ಮುಡಾ ವಿಚಾರಣೆ ತೀವ್ರಗೊಳ್ಳುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲಿರುವ ಕಾನೂನು ತಂಡದ ಜೊತೆ ಸಮಾಲೋಚನೆ ನಡೆಸಿ ಮುಂದಿನ ಕಾನೂನು ಹೋರಾಟಕ್ಕೆ ಸಿದ್ಧತೆ ಮಾಡುತ್ತಿದ್ದಾರೆ.

     

  • ನೋಂದಣಿಗೂ ಮುನ್ನವೇ ಶುಲ್ಕ ಪಾವತಿ; ಸಿಎಂ ವಿರುದ್ಧ ಮತ್ತೊಂದು ದಾಖಲೆ ರಿಲೀಸ್!

    ನೋಂದಣಿಗೂ ಮುನ್ನವೇ ಶುಲ್ಕ ಪಾವತಿ; ಸಿಎಂ ವಿರುದ್ಧ ಮತ್ತೊಂದು ದಾಖಲೆ ರಿಲೀಸ್!

    ಬೆಂಗಳೂರು: ಮುಡಾ ಹಗರಣದ (MUDA Scam) ತನಿಖೆ ಚುರುಕುಗೊಂಡ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ದೂರುದಾರ ಸ್ನೇಹಮಯಿ ಕೃಷ್ಣ ಮತ್ತೊಂದು ದಾಖಲೆ ಬಿಡುಗಡೆ ಮಾಡಿದ್ದಾರೆ.

    ನೋಂದಣಿಗೆ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಿಎಂ ಪತ್ನಿ ಪಾರ್ವತಿ ಪತ್ರ ಬರೆದಿದ್ದರು. 2020ರ ಜನವರಿ 12ರಂದು ಪಾರ್ವತಿಯವರು ಮುಡಾ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದರು. ಆದರೆ ನೋಂದಣಿ ಶುಲ್ಕವನ್ನು ಒಂದು ದಿನ ಮುಂಚಿತವಾಗಿ ಪಾವತಿ ಮಾಡಿದ್ದರು. ಅಂದರೆ 2020ರ ಜನವರಿ 11ರಂದು ತಹಶೀಲ್ದಾರರಿಂದ ನೋಂದಣಿ ಶುಲ್ಕ ಪಾವತಿ ಮಾಡಿದ್ದಾರೆ. ಸಿದ್ದರಾಮಯ್ಯನವರ ಪ್ರಭಾವ ಅಧಿಕಾರಿಗಳ ಮೇಲೆ ಬೀರಿದೆ ಎಂಬುದಕ್ಕೆ ಮತ್ತೆರಡು ದಾಖಲೆಗಳು ಇದು ಎಂದು ಸ್ನೇಹಮಯಿ ಕೃಷ್ಣ (Snehamayi Krishna) ಆರೋಪಿಸಿದ್ದಾರೆ. ಇದನ್ನೂ ಓದಿ: ಬಿಡಿಗಾಸು ಅನುದಾನ ಬಿಡುಗಡೆ ಮಾಡದೆ ಹಗರಣದ ಆರೋಪ ಮಾಡುವುದರಲ್ಲಿ ಅರ್ಥವಿಲ್ಲ: ಸುನಿಲ್ ಕುಮಾರ್ ತಿರುಗೇಟು

    ಅರ್ಜಿ ಕೊಡುವ ಒಂದು ದಿನದ ಮೊದಲೇ ಶುಲ್ಕ ಪಾವತಿ ಮಾಡಲಾಗಿದೆ. ಈ ರೀತಿ ಪಾವತಿ ಮಾಡಲು ಯಾವ ಕಾನೂನಿನಲ್ಲಿ ಅವಕಾಶ ಇದೆಯಾ? ಇದು ಅಧಿಕಾರಿಗಳ ಮೇಲೆ ನಿಮ್ಮ ಪ್ರಭಾವ ಬೀರಿದೆ ಎಂಬುದನ್ನು ಸಾಬೀತು ಪಡಿಸುವುದಿಲ್ಲವೆ? ಸ್ವತಃ ವಕೀಲರಾದ ಮತ್ತು ಮುಡಾ ಪ್ರಕರಣದಲ್ಲಿ ತಮ್ಮ ಯಾವುದೇ ಪ್ರಭಾವ ಇಲ್ಲ ಎಂದು ಹೇಳುತ್ತಿರುವ ಸಿದ್ದರಾಮಯ್ಯನವರು ರಾಜ್ಯದ ಜನತೆಗೆ ಸ್ಪಷ್ಟೀಕರಣ ಕೊಡುವರೆ ಎಂದು ಸ್ನೇಹಮಯಿ ಕೃಷ್ಣ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸ್ವತಃ ಇಂದಿರಾ ಗಾಂಧಿ ಸ್ವರ್ಗದಿಂದ ಹಿಂತಿರುಗಿಬಂದರೂ 370ನೇ ವಿಧಿ ಮರುಸ್ಥಾಪನೆ ಸಾಧ್ಯವಿಲ್ಲ: ಅಮಿತ್‌ ಶಾ

  • ಮುಡಾ ಹಗರಣ: ವಿಚಾರಣೆ ತೀವ್ರಗೊಳಿಸಿದ ಇ.ಡಿ – ಸಿಎಂ ಸಿದ್ದರಾಮಯ್ಯ ಆಪ್ತನಿಗೆ ಡ್ರಿಲ್

    ಮುಡಾ ಹಗರಣ: ವಿಚಾರಣೆ ತೀವ್ರಗೊಳಿಸಿದ ಇ.ಡಿ – ಸಿಎಂ ಸಿದ್ದರಾಮಯ್ಯ ಆಪ್ತನಿಗೆ ಡ್ರಿಲ್

    ಮೈಸೂರು: ಮುಡಾದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಪತ್ನಿ ಪಾರ್ವತಿಗೆ 50-50 ಅನುಪಾತದಲ್ಲಿ 14 ಸೈಟ್ ನೀಡಿದ್ದ ಪ್ರಕರಣದಲ್ಲಿ ಇಡಿ ಅಧಿಕಾರಿಗಳು ಇದೀಗ ವಿಚಾರಣೆಯನ್ನು ತೀವ್ರಗೊಳಿಸಿದ್ದು, ಸಿಎಂ ಖಾಸಗಿ ಆಪ್ತ ಸಹಾಯಕ ಸಿ.ಟಿ.ಕುಮಾರ್ ಅವರ ವಿಚಾರಣೆ ನಡೆಸಿದ್ದಾರೆ.ಇದನ್ನೂ ಓದಿ: ಶಿಗ್ಗಾಂವಿ| ಒಳ್ಳೆಯ ಅಭ್ಯರ್ಥಿ ಆಯ್ಕೆ ಆಗಿ ಬರಲಿ – ಕುರುಬ ಸಮಾಜದ ವಯೋವೃದ್ಧನಿಂದ ಪೂಜೆ

    ಮೈಸೂರಿನಲ್ಲಿ ಸಿಎಂಗೆ ಸೇರಿದ ಎಲ್ಲಾ ವ್ಯವಹಾರಗಳನ್ನ ಸಿ.ಟಿ ಕುಮಾರ್ ಅಲಿಯಾಸ್ ಎಸ್.ಜಿ.ದಿನೇಶ್ ಕುಮಾರ್ ನೋಡಿಕೊಳ್ಳುತ್ತಿದ್ದರು. ಇದೀಗ ಇಡಿ ಅಧಿಕಾರಿಗಳು ದಿನೇಶ್‌ಕುಮಾರ್ ಅವರ ವಿಚಾರಣೆ ನಡೆಸಿದ್ದು, 14 ಸೈಟ್ ವಿಚಾರದಲ್ಲಿ ಪ್ರಶ್ನೆಗಳನ್ನು ಕೇಳಿ ಬೆವರಿಳಿಸಿದ್ದಾರೆ.

    ಮುಡಾದಲ್ಲಿ ನಕಲಿ ಸಹಿ ಬಗ್ಗೆ, ಪಾರ್ವತಿ ಅವರ ಪತ್ರಕ್ಕೆ ದಿನೇಶ್ ಕುಮಾರ್ ಸಹಿ ಹಾಕಿದ ಬಗ್ಗೆ ತೀವ್ರ ವಿಚಾರಣೆ ಮಾಡುವ ಮೂಲಕ ಫುಲ್ ಡ್ರಿಲ್ ಮಾಡಿದ್ದಾರೆ.ಇದನ್ನೂ ಓದಿ: ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶದಲ್ಲಿ 11 ಕಾಡಾನೆಗಳ ಸಾವಿಗೆ ರಾಗಿ ಕಾರಣವೇ?