Tag: MUDA Scam

  • ಮುಡಾ ಸೈಟ್ ಕೋಲಾಹಲ – ವಿಧಾನಸೌಧದಲ್ಲಿ ಬಿಜೆಪಿ, ಜೆಡಿಎಸ್‌ ಅಹೋರಾತ್ರಿ ಧರಣಿ

    ಮುಡಾ ಸೈಟ್ ಕೋಲಾಹಲ – ವಿಧಾನಸೌಧದಲ್ಲಿ ಬಿಜೆಪಿ, ಜೆಡಿಎಸ್‌ ಅಹೋರಾತ್ರಿ ಧರಣಿ

    – ಮೈಸೂರಿಗೆ ಪಾದಯಾತ್ರೆಗೆ ಮುಂದಾದ ಮೈತ್ರಿ ನಾಯಕರು
    – ರಾಜ್ಯಪಾಲರಿಗೆ ಸಿಎಂ ಸಿದ್ದರಾಮಯ್ಯ ವಿವರಣೆ

    ಬೆಂಗಳೂರು: ವಿಧಾನಸಭೆ ಮಳೆಗಾಲ ಅಧಿವೇಶನ (Vidhan Sabha Session) ಅಂತ್ಯಕ್ಕೆ ಇನ್ನು ಎರಡು ದಿನ ಬಾಕಿ ಇರುವಂತೆಯೇ ಸದನದಲ್ಲಿ ಮೂಡಾ ಹಗರಣ (MUDA Scam) ಕೋಲಾಹಲ ಎಬ್ಬಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಕುಟುಂಬದ ವಿರುದ್ಧ ಕೇಳಿ ಬಂದಿರುವ ಮುಡಾ ಬದಲಿ ನಿವೇಶನ ಹಂಚಿಕೆ ಆರೋಪದ ಸಂಬಂಧ ಬಿಜೆಪಿ (BJP) ಹೋರಾಟವನ್ನು ತೀವ್ರಗೊಳಿಸಿದೆ.

    ವಿಧಾನಸಭೆಯಲ್ಲಿ ಬೆಳಗ್ಗೆ ಚರ್ಚೆಗೆ ಅವಕಾಶ ನೀಡದ್ದಕ್ಕೆ ಸಿಟ್ಟಾಗಿರುವ ಬಿಜೆಪಿ (BJP) ಹಾಗೂ ಜೆಡಿಎಸ್ (JDS) ಈಗ ವಿಧಾನಸಭೆ-ಪರಿಷತ್‌ನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದೆ. ಈ ಹಗರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಬಯಸಿರುವ ಬಿಜೆಪಿ, ಶನಿವಾರದ ನಂತರ ಮೈಸೂರಿಗೆ ಪಾದಯಾತ್ರೆ (Mysuru Padayatra) ನಡೆಸುವ ಬಗ್ಗೆಯೂ ಆಲೋಚಿಸಿದೆ.

     

    ಸದನದ ಹೊರಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (B. Y. Vijayendra) ಮಾತನಾಡಿ, ವಾಲ್ಮೀಕಿ-ಮುಡಾ ಹಗರಣಗಳ ಸಂಬಂಧ ಹೋರಾಟಕ್ಕೆ ಆಡಳಿತ ಪಕ್ಷದಿಂದಲೇ ಒತ್ತಡ ಇದೆ. ಇಷ್ಟು ದೊಡ್ಡ ಹಗರಣ ನಡೆದಿದೆ. ನೀವೇನೂ ಹೋರಾಟ ಮಾಡುದಿಲ್ಲವೇ ಎಂದು ನಮ್ಮನ್ನು ಕೇಳುತ್ತಿದ್ದಾರೆ ಎಂದು ಹೇಳಿದರು.

    ಈ ಮಧ್ಯೆ, ಮುಡಾ ಹಗರಣದ ಬಗ್ಗೆ ವಿವರಣೆ ನೀಡುವಂತೆ ಮುಖ್ಯಕಾರ್ಯದರ್ಶಿಗೆ ರಾಜ್ಯಪಾಲರು ಸೂಚಿಸಿದ್ದ ಹಿನ್ನೆಲೆಯಲ್ಲಿ ರಾಜಭವನಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದರು. ಸುಮಾರು 40 ನಿಮಿಷಗಳ ಕಾಲ ಚರ್ಚೆ ಮಾಡಿದ್ದಾರೆ.

    ಬಿಜೆಪಿ ಅಹೋರಾತ್ರಿ ಧರಣಿ ಸದನದಲ್ಲಿ ಅಂಕಿತವಾದ ವಿಧೇಯಕಗಳು ಹಾಗೂ ಕೇಂದ್ರ ಸರ್ಕಾರದ ವಿರುದ್ಧ ತೆಗೆದುಕೊಂಡ 3 ನಿರ್ಣಯಗಳ ಬಗ್ಗೆ ಚರ್ಚಿಸಿದ್ದಾರೆ ಅಂತ ತಿಳಿದು ಬಂದಿದೆ.

    ವಿಧಾನಸಭೆಯಲ್ಲಿ ವಾಕ್ಸಮರ
    ಇದಕ್ಕೂ ಮುನ್ನ ಬೆಳಗ್ಗೆ ವಿಧಾನಸಭೆಯಲ್ಲಿ ವಾಕ್ಸಮರ ನಡೆಯಿತು. ನಿಲುವಳಿ ಸೂಚನೆಗೆ ವಿಪಕ್ಷ ನಾಯಕ ಅಶೋಕ್ (R Ashok) ಮುಂದಾದರು. ಮುಖ್ಯಮಂತ್ರಿಗಳೇ ನೇರವಾಗಿ ಪಾಲುದಾರರು. ಇದು ತುರ್ತು ವಿಷಯ. ಚರ್ಚೆಗೆ ಅವಕಾಶ ಕೊಡಿ ಎಂದು ಆಗ್ರಹಿಸಿದರು. ಅಶೋಕ್‌ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್‌ ಖಾದರ್‌, ಅಷ್ಟು ಅರ್ಜೆಂಟ್ ಇದ್ದರೆ ಕಳೆದ ವಾರವೇ ಪ್ರಸ್ತಾಪ ಮಾಡಬೇಕಿತ್ತು. ಪ್ರಶ್ನೋತ್ತರ ಮುಗಿದ ಬಳಿಕ ತೆಗೆದುಕೊಳ್ಳೋಣ ಎಂದು ಹೇಳಿದರು.

    ಪ್ರಶ್ನೋತ್ತರ ಅವಧಿ ಬಿಡಿ ಮುಡಾ ಅಕ್ರಮದ ಚರ್ಚೆಗ ತೆಗೆದುಕೊಳ್ಳಿ ಅಂತ ಬಿಜೆಪಿಗರು ಒತ್ತಾಯಿಸಿದ್ರು. ಎದ್ದು ನಿಂತ ಸಚಿವ ಬೈರತಿ ಸುರೇಶ್, ಬಿಜೆಪಿಗರ ಭ್ರಷ್ಟಾಚಾರವೂ ಇದೆ. ಚರ್ಚೆ ನಡೆಯಲಿ ಎಂದರು.

    ಈ ವೇಳೆ ಬಸನ ಗೌಡ ಪಾಟೀಲ್‌ ಯತ್ನಾಳ್ ಮಧ್ಯ ಪ್ರವೇಶಿಸಿ, ಕ್ಲೀನ್ ಇಂಡಿಯಾ, ಕ್ಲೀನ್ ಕರ್ನಾಟಕ. ಕ್ಲೀನ್ ಆಲ್ ಪಾರ್ಟಿ ಆಗಬೇಕು. ಸಿದ್ದರಾಮಯ್ಯ ಒಬ್ಬರನ್ನೇ ಟಾರ್ಗೆಟ್ ಮಾಡೋದಲ್ಲ; ಅಡ್ಜಸ್ಟ್ಮೆಂಟ್. ಮ್ಯಾಚ್ ಫಿಕ್ಸಿಂಗ್ ಎಲ್ಲವೂ ಬರಲಿ ಎಂದು ಹೇಳಿದರು.

    ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಎದ್ದುನಿಂತು ವಿಚಾರಣಾ ಆಯೋಗ ರಚನೆ ಆಗಿದೆ. ಈಗ ನಿಲುವಳಿ ನೀಡಿರುವುದು ನಿಯಮಬಾಹಿರ, ಚರ್ಚೆಗೆ ಅವಕಾಶ ಇಲ್ಲ ಎಂದರು.

    ಮುಖ್ಯಮಂತ್ರಿಗಳ ಮನೆಯವರಿಗೆ 14 ಸೈಟ್‌ಗಳನ್ನು ಕೊಟ್ಟಿದ್ದಾರೆ ಅಂತ ಬೆಲ್ಲದ್ ಆರೋಪಕ್ಕೆ ಕಾಂಗ್ರೆಸಿಗರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಕೋಲಾಹಲ ಉಂಟಾಯಿತು.

    ನಿಲುವಳಿ ತಿರಸ್ಕಾರ ಮಾಡಿದ ಸ್ಪೀಕರ್ ಚರ್ಚೆಗೆ ಅವಕಾಶ ಕೊಡದೇ ರೂಲಿಂಗ್ ಕೊಟ್ಟು, ಸದನ ಮುಂದೂಡಿದರು. ಬಿಜೆಪಿಗರು ಶೇಮ್ ಶೇಮ್ ಅಂತ ಛೇಡಿಸಿದ್ರು.

     

     

     

  • ಮುಡಾ ಅಕ್ರಮ ಕೇಸ್‌: ಚರ್ಚೆಗೆ ಅವಕಾಶ ಇಲ್ಲವೆಂದು ಸ್ಪೀಕರ್ ರೂಲಿಂಗ್ – ವಿಧಾನಸಭೆಯಲ್ಲಿ ಗದ್ದಲ, ಮಾತಿನ ಚಕಮಕಿ

    ಮುಡಾ ಅಕ್ರಮ ಕೇಸ್‌: ಚರ್ಚೆಗೆ ಅವಕಾಶ ಇಲ್ಲವೆಂದು ಸ್ಪೀಕರ್ ರೂಲಿಂಗ್ – ವಿಧಾನಸಭೆಯಲ್ಲಿ ಗದ್ದಲ, ಮಾತಿನ ಚಕಮಕಿ

    ಬೆಂಗಳೂರು: ಮುಡಾ ಅಕ್ರಮ ಪ್ರಕರಣದ (MUDA Scam Case) ಚರ್ಚೆ ಕುರಿತು ನಿಲುವಳಿ ಮಂಡನೆ ಪ್ರಸ್ತಾಪಕ್ಕೆ ವಿಧಾನಸಭೆಯಲ್ಲಿ ಬಿಜೆಪಿ – ಜೆಡಿಎಸ್ ಸದಸ್ಯರಿಗೆ (BJP – JDS Members) ಹಿನ್ನಡೆಯಾಗಿದ್ದು, ನಿಲುವಳಿ ತಿರಸ್ಕಾರ ಮಾಡಿ ಸ್ಪೀಕರ್ ಯು.ಟಿ ಖಾದರ್ (UT Khader) ರೂಲಿಂಗ್ ನೀಡಿದ್ದಾರೆ. ಎರಡು ಪಕ್ಷಗಳ ಸದಸ್ಯರ ವಾದ – ಪ್ರತಿವಾದ ಆಲಿಸಿ ಕೊನೆಗೆ ಸರ್ಕಾರದ ಆಗ್ರಹದಂತೆ ಸ್ಪೀಕರ್ ನಿಲುವಳಿ ತಿರಸ್ಕರಿಸಿದರು.

    ನಿಲುವಳಿ ತಿರಸ್ಕಾರದ ಬಳಿಕ ʻಶೇಮ್ ಶೇಮ್ʼ ಎಂದು ಬಿಜೆಪಿ ಸದಸ್ಯರಿಗೆ ಕಾಂಗ್ರೆಸ್ ಶಾಸಕರು ಛೇಡಿಸಿದ್ರು. ತುರ್ತು ವಿಚಾರ ಅಲ್ಲ, ಪ್ರಕರಣದ ತನಿಖೆ ವಿಚಾರಣಾ ಆಯೋಗದಲ್ಲಿದೆ. ಹಾಗಾಗಿ ನಿಲುವಳಿ ಪ್ರಸ್ತಾಪಕ್ಕೆ ಅವಕಾಶ ಇಲ್ಲ, ನಿಯಮ 69ರ ಅಡಿ ಚರ್ಚೆಗೂ ಅವಕಾಶ ಇಲ್ಲ ಎಂದು ಸ್ಪೀಕರ್ ರೂಲಿಂಗ್ ಕೊಟ್ಟು ಕಲಾಪ ಮುಂದೂಡಿದರು. ಇದನ್ನೂ ಓದಿ: ಸುಪ್ರೀಂ ಕೋರ್ಟ್‌ಗೆ ಹೋಗಿ ರಾಜ್ಯ ಸರ್ಕಾರ ಬರ ಪರಿಹಾರ ಹಣ ಪಡೆದುಕೊಂಡು ಬಂದಿದೆ – ಕೃಷ್ಣಬೈರೇಗೌಡ

    ಇದಕ್ಕೂ‌ ಮುನ್ನ ಕಲಾಪ ಆರಂಭವಾಗುತ್ತಿದಂತೆ ನಿಲುವಳಿ ಪ್ರಸ್ತಾಪಕ್ಕೆ ಬಿಜೆಪಿ ಆಗ್ರಹಿಸಿತು. ಆದರೆ ಪ್ರಶ್ನೋತ್ತರ ಕಲಾಪದ ಬಳಿಕ‌ ನಿರ್ಣಯ ತೆಗೆದುಕೊಳ್ಳುವುದಾಗಿ ಸ್ಪೀಕರ್ ಭರವಸೆ ನೀಡಿದರು. ಆಗ ಸದನದಲ್ಲಿ ವಾಕ್ಸಮರವೇ ನಡೆಯಿತು. ಮುಖ್ಯಮಂತ್ರಿಗಳೇ ಇದರಲ್ಲಿ ನೇರ ಪಾಲುದಾರರು ಇದ್ದಾರೆ, ಚರ್ಚೆ ಆಗಬೇಕು ಎಂದು ಆರ್‌‌.ಅಶೋಕ್ (R Ashoka) ಆಗ್ರಹಿಸಿದರೆ, ರಾಜ್ಯದ ಜನರೇ ನೋಡ್ತಿದ್ದಾರೆ, ಸಿಎಂ ಮೇಲೆಯೇ ಆರೋಪ ಇರೋದ್ರಿಂದ ಚರ್ಚೆಗೆ ತಗೊಳ್ಳಿ ಅಂತ ಅಶ್ವಥ್ ನಾರಾಯಣ್ ಒತ್ತಾಯಿಸಿದರು. ಆಗ ಸಚಿವ ಬೈರತಿ ಸುರೇಶ್ (Byrathi Suresh) ಆಕ್ರೋಶ ಹೊರಹಾಕಿ, ಮುಡಾದಲ್ಲಿ ನಿಮ್ಮದು ಭ್ರಷ್ಟಾಚಾರ ಇದೆ, ಚರ್ಚೆಗೆ ಕೊಡಿ‌. ನನ್ನ ಹತ್ರನೂ ದಾಖಲೆ ಇದೆ. ಇಲ್ಲಿ ಕುಳಿತಿರುವ ಮಹಾನುಭಾವರದ್ದು ಇದೆ, ಬರೀ ಒಬ್ಬರದ್ದೇ ಹೇಳೋದು ಅಲ್ಲ, ನಮಗೂ ಅವಕಾಶ ಕೊಡಿ, ನಾವು ಚರ್ಚೆ ಮಾಡ್ತೀವಿ ಎಂದು ಸುರೇಶ್ ಅಬ್ಬರಿಸಿದರು.

    ಎಲ್ಲರದ್ದೂ ಬಯಲಿಗೆ ಬರಲಿ, ರಾಜ್ಯ ಲೂಟಿ ಹೊಡೆದಿರುವ ಎಲ್ಲರ ಹೆಸರು ಹೊರಗೆ ಬರಲಿ, ಕ್ಲೀನ್ ಇಂಡಿಯಾ, ಕ್ಲೀನ್ ಕರ್ನಾಟಕ, ಕ್ಲೀನ್ ಆಲ್ ಪಾರ್ಟಿ ಎಂದು ಯತ್ನಾಳ್ ಗುಡುಗಿದರೆ, ಹೊರಗೆ ಬರಬೇಕು, ಎಲ್ಲ ತೆಗೆಯಿರಿ, ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಅಂತಾರೆ, ಅದು ಹೊರಗೆ ಬರಲಿ ಎಂದು ಅಶ್ವಥ್‌ ನಾರಾಯಣ್ (Ashwath Narayan) ಆಗ್ರಹಿಸಿದರು. ಆಗ ಸದನದಲ್ಲಿ ಮಾತಿನ ಚಕಮಕಿ, ಗದ್ದಲ ಉಂಟಾಯಿತು. ಇದನ್ನೂ ಓದಿ: ಡಿಕೆಶಿ ಭಾಷಣದ ವೇಳೆ ‘ಡಿ ಬಾಸ್.. ಡಿ ಬಾಸ್’ ಘೋಷಣೆ ಕೂಗಿದ ದರ್ಶನ್ ಅಭಿಮಾನಿಗಳು

    ಸರ್ಕಾರದ ಪರವಾಗಿ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಹೆಚ್‌.ಕೆ ಪಾಟೀಲ್, ಸದನದ ನಿಯಮಾನುಸಾರ ಚರ್ಚೆಗೆ ತಗೊಳ್ಳೋಕೆ ಸಾಧ್ಯವಿಲ್ಲ. ಕಾರ್ಯವಿಧಾನ, ನಡವಳಿಕೆಯಲ್ಲಿ ಅವಕಾಶ ಇಲ್ಲ. ಈಗಾಗಲೇ ನಿವೃತ್ತ ನ್ಯಾಯಾಧೀಶರಾದ P.N ದೇಸಾಯಿ ಏಕಸದಸ್ಯ ಆಯೋಗದಿಂದ ವಿಚಾರಣೆ ನಡೆಯುತ್ತಿದೆ. ಆರು ತಿಂಗಳ ಒಳಗೆ ಸರ್ಕಾರಕ್ಕೆ ವರದಿ ಒಪ್ಪಿಸುವ ನಿರೀಕ್ಷೆ ಇದೆ. 2006 ರಿಂದ 2024ರ ವರೆಗೆ ನಡೆದಿರುವ ಅಕ್ರಮದ ಬಗ್ಗೆ ತನಿಖೆ ಆಗ್ತಿದೆ. ಹೀಗಾಗಿ ನಿಯಮ 63ರ ಪ್ರಕಾರ ಇದನ್ನು ಚರ್ಚೆಗೆ ತಗೊಳ್ಳೋಕೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ತುಳುವನ್ನ 2ನೇ ಹೆಚ್ಚುವರಿ ಭಾಷೆಯಾಗಿ ಘೋಷಿಸಿ – ಕಾಂಗ್ರೆಸ್‌ ಶಾಸಕ ಅಶೋಕ್ ರೈ ಒತ್ತಾಯ; ತುಳುವಿನಲ್ಲೇ ಮನವಿ‌

    ಇದಕ್ಕೆ ವಿಪಕ್ಷ ನಾಯಕ ಆರ್.ಅಶೋಕ್ ಆಕ್ಷೇಪಿಸಿ, ನಿನ್ನೆ ಶಿವಲಿಂಗೇಗೌಡ ಜಾರಿ ನಿರ್ದೇಶನಾಲಯದ ಬಗ್ಗೆ ಸದನದಲ್ಲಿ ಚರ್ಚೆ ಮಾಡಿದ್ರಲ್ಲ ಹೇಗೆ ಅನುಮತಿ ಕೊಟ್ರಿ? ಎಂದು ಗುಡುಗಿದರು. ಸದನ ಆರಂಭವಾಗುವ ಹಿಂದಿನ ದಿನ ಸರ್ಕಾರ ‌ನಿವೃತ್ತ ನ್ಯಾಯಾಧೀಶರ ಸಮಿತಿ ರಚಿಸಿದೆ. ಅಂದರೆ ಸದನದಲ್ಲಿ ಇದರ ಬಗ್ಗೆ ಚರ್ಚೆ ಆಗಬಾರದೆಂದು ಮೊದಲೇ ನಿರೀಕ್ಷಣಾ ಜಾಮೀನು ಪಡೆದುಕೊಂಡಿದೆ ಅಂತ ಶಾಸಕ ಸುರೇಶ್ ಕುಮಾರ್ ಆರೋಪಿಸಿದರು. ನಂತರ ಮುಖ್ಯಮಂತ್ರಿಗಳ ಮನೆಯವರಿಗೆ 14 ಫ್ಲಾಟ್‌ಗಳನ್ನು ಕೊಟ್ಟಿದ್ದಾರೆ ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಆರೋಪಿಸಿದರು. ಇದಕ್ಕೆ ಕೈ ಸದಸ್ಯರಿಂದ ಆಕ್ಷೇಪ ವ್ಯಕ್ತವಾಯಿತು. ಒಟ್ಟಾಗಿ ನಿಂತು ಬಿಜೆಪಿ ಶಾಸಕರಿಗೆ ಕೈ ಸದಸ್ಯರು ತಿರುಗೇಟು ನೀಡಿದ್ರು. ಅಂತಿಮವಾಗಿ ಸ್ಪೀಕರ್ ಚರ್ಚೆಗೆ ಅವಕಾಶ ಕೊಡದೇ ರೂಲಿಂಗ್ ಕೊಟ್ಟು, ಸದನ ಮುಂದೂಡಿದರು.

  • ಮುಡಾ ಹಗರಣಕ್ಕೆ ರಾಜ್ಯಪಾಲರ ಮಧ್ಯಪ್ರವೇಶ

    ಮುಡಾ ಹಗರಣಕ್ಕೆ ರಾಜ್ಯಪಾಲರ ಮಧ್ಯಪ್ರವೇಶ

    ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(MUDA) ಸೈಟ್‌ ಹಗರಣ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಬೆನ್ನಲ್ಲೇ ರಾಜ್ಯಪಾಲರ ಮಧ್ಯಪ್ರವೇಶವಾಗಿದೆ.

    ಮುಡಾ ಪ್ರಕರಣದ (MUDA Scam) ಬಗ್ಗೆ ಪೂರ್ಣ ವಿವರಣೆ ನೀಡುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್‌ ಅವರಿಗೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ (Thawar Chand Gehlot) ಸೂಚಿಸಿದ್ದಾರೆ. ಇದನ್ನೂ ಓದಿ: ಐಟಿ ಉದ್ಯೋಗಿಗಳಿಗೆ ಶಾಕಿಂಗ್‌ ಸುದ್ದಿ – 9 ಗಂಟೆಯಲ್ಲ, 14 ಗಂಟೆ ದುಡಿಯಬೇಕು

    ಏನಿದು ಆರೋಪ?
    ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಧರ್ಮಪತ್ನಿ ಪಾರ್ವತಿ (Parvathi ) ಅವರಿಗೆ ಅರ್ಹತೆಗೂ ಮೀರಿ ಎರಡು ಕೋಟಿ ರೂ. ಬೆಲೆಬಾಳುವ 14 ನಿವೇಶನ​ಗಳನ್ನು ಪ್ರತಿಷ್ಠಿತ ವಿಜಯನಗರ ಬಡಾವಣೆಯಲ್ಲಿ ಹಂಚಿಕೆ ಮಾಡಲಾಗಿದೆ. ಅರ್ಹತೆ ಪ್ರಕಾರ ಪಾರ್ವತಿ ಅವರಿಗೆ ನೀಡಬೇಕಾಗಿದ್ದು ಕೇವಲ ಎರಡು ಜಮೀನು ಮಾತ್ರ. ಆದರೆ 14 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಬಿಜೆಪಿ ಮತ್ತು ಜೆಡಿಎಸ್‌ ಗಂಭೀರ ಆರೋಪ ಮಾಡುತ್ತಿದೆ. ಇದನ್ನೂ ಓದಿ: ಸರ್ಕಾರಿ ನೌಕರರು ಆರ್‌ಎಸ್‌ಎಸ್ ಸೇರಬಹುದು – ಇಂದಿರಾ ಗಾಂಧಿ ಅಂದು ನಿಷೇಧ ಹೇರಿದ್ದು ಯಾಕೆ?

    ಈ ಆರೋಪಕ್ಕೆ ಸಿದ್ದರಾಮಯ್ಯ, ನಿಯಮದ ಪ್ರಕಾರವೇ ಎಲ್ಲರಿಗೂ ಹಂಚಿಕೆಯಾಗುವಂತೆ ಮುಡಾದಿಂದ ಸೈಟ್‌ ಹಂಚಿಕೆಯಾಗಿದೆ. ನಾವು ಯಾವುದೇ ತಪ್ಪು ಮಾಡಿಲ್ಲ. ನಾವು ಅಲ್ಲೇ ಸೈಟ್‌ ನೀಡಬೇಕೆಂದು ಕೇಳಿಕೊಂಡಿಲ್ಲ. ಮುಡಾದವರು ಹಂಚಿಕೆ ಮಾಡಿದ್ದಾರೆ. ಯಾವುದೇ ಅಕ್ರಮ ನಡೆಸಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.

     

  • ಸರ್ಕಾರದಲ್ಲಿ ಹಗರಣ ಆಗಿದೆ ಅಂತ ಯಾರೂ ತಲೆ ತಗ್ಗಿಸಬೇಕಾಗಿಲ್ಲ: ಡಿಸಿಎಂ ಡಿಕೆಶಿ

    ಸರ್ಕಾರದಲ್ಲಿ ಹಗರಣ ಆಗಿದೆ ಅಂತ ಯಾರೂ ತಲೆ ತಗ್ಗಿಸಬೇಕಾಗಿಲ್ಲ: ಡಿಸಿಎಂ ಡಿಕೆಶಿ

    ಬೆಂಗಳೂರು: ಸರ್ಕಾರದಲ್ಲಿ ಹಗರಣ (Scam) ಆಗಿದೆ ಅಂತ ಯಾರೂ ತಲೆ ತಗ್ಗಿಸಬೇಕಾಗಿಲ್ಲ. ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದಾರೆ. ಅಧಿಕಾರಿಗಳ ತಪ್ಪಿನಿಂದಾಗಿ ಹೀಗಾಗಿದೆ. ಈ ಹಗರಣದಲ್ಲಿ ನಮ್ಮ ಶಾಸಕರ ಪಾತ್ರ ಇಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಕಾರ್ಯಕರ್ತರಿಗೆ ಧೈರ್ಯ ತುಂಬಿದ್ದಾರೆ.

    ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿಂದು ನಡೆದ\ ಬ್ಲಾಕ್ ಕಾಂಗ್ರೆಸ್ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಸಭೆಯಲ್ಲಿ ವಾಲ್ಮೀಕಿ ಹಾಗೂ ಮೂಡಾ ಹಗರಣ ವಿಚಾರ ಪ್ರತಿಧ್ವನಿಸಿತು. ಇದನ್ನೂ ಓದಿ: 24 ಗಂಟೆ ವಿದ್ಯುತ್‌ ಉಚಿತ, ಯುವಕರಿಗೆ ಉದ್ಯೋಗ ಖಚಿತ, ಮಹಿಳೆಯರಿಗೆ ಪ್ರತಿ ತಿಂಗಳು 1,000 ರೂ. – ʻಕೇಜ್ರಿವಾಲ್‌ ಕಿ ಗ್ಯಾರಂಟಿʼ ಘೋಷಣೆ!

    ಈ ವೇಳೆ ಡಿಸಿಎಂ ಡಿಕೆಶಿ ಮಾತನಾಡಿ, ಸರ್ಕಾರದಲ್ಲಿ ಹಗರಣ ಆಗಿದೆ ಅಂತ ಯಾರೂ ತಲೆ ತಗ್ಗಿಸಬೇಕಾಗಿಲ್ಲ. ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದಾರೆ. ಅಧಿಕಾರಿಗಳ ತಪ್ಪಿನಿಂದಾಗಿ ಹೀಗಾಗಿದೆ. ಈ ಹಗರಣದಲ್ಲಿ ನಮ್ಮ ಶಾಸಕರ ಪಾತ್ರ ಇಲ್ಲ. ನನ್ನ ಬಳಿ ಆಣೆ ಪ್ರಮಾಣ ಮಾಡಿ ಹೇಳಿದ್ದಾರೆ. ಯಾರೇ ತಪ್ಪು ಮಾಡಿದ್ದರೂ ಸುಮ್ಮನೆ ಬಿಡೋದಿಲ್ಲ. ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ತೇವೆ. ಹಗರಣ ಆಗಿದೆ ಅಂತ ಕಾರ್ಯಕರ್ತರು ತಲೆ ಕೆಡಿಸಿಕೊಳ್ಳಬೇಕಾದ ಅವಶ್ಯಕತೆ ಇಲ್ಲ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.

    ಜಿಲ್ಲಾ ಕೇಂದ್ರಗಳಲ್ಲಿ ಪಕ್ಷದ ಕಚೇರಿಗಳಿರಬೇಕು:
    ಮುಂದುರಿದು, ಜಿಲ್ಲಾ ಕೇಂದ್ರಗಳಲ್ಲಿ ಪಕ್ಷದ ಕಚೇರಿಗಳಿರಬೇಕು. ಸ್ವಂತ ಕಟ್ಟಡಗಳಿರುವಂತೆ ನೋಡಿಕೊಳ್ಳಬೇಕು. ಅದಕ್ಕೆ ಬೇಕಾದ ನೆರವು ಪಕ್ಷವೇ ಭರಿಸಲಿದೆ. ಬ್ಲಾಕ್ ಮಟ್ಟದಲ್ಲೂ ಕಚೇರಿಗಳಿರಬೇಕು. ಬಾಡಿಗೆ ಕಟ್ಟಡಗಳಲ್ಲಾದ್ರೂ ಕಚೇರಿ ಮಾಡಬೇಕು. ಬಗರ್ ಹುಕುಂ ಸಮಿತಿಗಳಲ್ಲಿ ಕಾರ್ತಕರ್ತರಿಗೆ ಅವಕಾಶ ನೀಡಬೇಕು ಎಂದು ಕಾರ್ಯಕರ್ತರಿಗೆ ಸೂಚಿಸಿದರು. ಇದನ್ನೂ ಓದಿ: `Public TV’ ಇಂಪ್ಯಾಕ್ಟ್‌: ಪ್ರವಾಹ ಪೀಡಿತ ಪ್ರದೇಶ ಕರಡಿಗೋಡು ಗ್ರಾಮಕ್ಕೆ ಸಚಿವ ಬೋಸರಾಜು ಭೇಟಿ

    ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾರ್ಯಕರ್ತರು ಎಲ್ಲಾ ಕಮಿಟಿಗಳ ರಚನೆ ಮಾಡಬೇಕು. ಯಾವ ಶಾಸಕರು ಸಹ ತಮ್ಮ ಮನೆಗಳಲ್ಲಿ ಮೀಟಿಂಗ್ ಮಾಡಬಾರದು. ಕಾಂಗ್ರೆಸ್ ಕಚೇರಿ ಚಿಕ್ಕದಿದ್ದರೆ, ಕಲ್ಯಾಣ ಮಂಟಪದಲ್ಲಿ ಸಭೆ ಮಾಡಬೇಕು. ಶಾಸಕರ ಮನೆಯಲ್ಲಿ ಆಫೀಸ್ ನಡೆಸುವ ಹಾಗೆ ಆಗಬಾರದು. ನಾಮಿನೇಷನ್ ವಿಚಾರವಾಗಿ ಸೋಷಿಯಲ್ ಜಸ್ಟೀಸ್ ಇದೆ. ಆಸ್ಪತ್ರೆ, ಕೆಇಬಿ ಕಮಿಟಿ, ಸ್ಕೂಲ್ ಕಮಿಟಿ, ಆಶ್ರಮ ಕಮಿಟಿ ಅಂಬೇಡ್ಕರ್ ಕಮಿಟಿ ಇವೆಲ್ಲ ಸಮಿತಿಗಳು ಆಗಬೇಕು. ಸಾಮಾಜಿಕ ನ್ಯಾಯವನ್ನ ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡುವಂತೆ ಹೇಳಿರುವುದಾಗಿ ತಿಳಿಸಿದರು. ಇದನ್ನೂ ಓದಿ: ಲೋಕಸಭಾ ಚುನಾವಣೆಗಾಗಿ ಬಿಬಿಎಂಪಿಯಲ್ಲಿ 2,000 ಕೋಟಿ ರೂ. ಟೆಂಡರ್ ಹಗರಣ – ಮಾಜಿ ಉಪಮೇಯರ್ ಹೊಸ ಬಾಂಬ್

  • ಮುಡಾ, ವಾಲ್ಮೀಕಿ ಹಗರಣ ಖಂಡಿಸಿ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ – ಕಟ್ಟೆಯೊಡೆದ ಆಕ್ರೋಶ!

    ಮುಡಾ, ವಾಲ್ಮೀಕಿ ಹಗರಣ ಖಂಡಿಸಿ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ – ಕಟ್ಟೆಯೊಡೆದ ಆಕ್ರೋಶ!

    – ನಿಗಮದ ಹಣವನ್ನ ಚುನಾವಣೆಯಲ್ಲಿ ಹೆಂಡಕ್ಕೆ ಬಳಸಿದ್ದಾರೆ: ವಿಜಯೇಂದ್ರ
    – ದಲಿತರ ಹೆಸ್ರಲ್ಲಿ ಅಧಿಕಾರಕ್ಕೆ ಬಂದು ಮೋಸ ಮಾಡ್ತಿದ್ದಾರೆ: ಮಾಳವಿಕಾ

    ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಹಗರಣ, ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಹಾಗೂ SCSP-TSP ಹಣ ದುರ್ಬಳಕೆ ಖಂಡಿಸಿ ಎಸ್ಟಿ ಮೋರ್ಚಾದಿಂದ ಗುರುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

    ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ಪ್ರಮುಖ ನಾಯಕರೂ ಸೇರಿದಂತೆ ಸಾವಿರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra), ಶಾಸಕರಾದ ಕೆ.ಗೋಪಾಲಯ್ಯ, ಗೋವಿಂದ ಕಾರಜೋಳ, ಸಿಮೆಂಟ್ ಮಂಜು, ಶ್ರೀವತ್ಸ, ಮಾಜಿ ಸಚಿವ ಕೆ.ಆರ್ ನಾರಾಯಣ ಗೌಡ, ಪರಿಷತ್ ಸದಸ್ಯರು, ಮಾಜಿ ಸಂಸದ ಮುನಿಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ಸೇರಿದಂತೆ ಘಟಾನುಘಟಿ ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ನಂತರ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ತೆರಳುತ್ತಿದ್ದ ಬಿಜೆಪಿ ನಾಯಕರನ್ನ ಪೊಲೀಸರು ವಶಕ್ಕೆ ಪಡೆದರು.

    ಪ್ರತಿಭಟನೆಯಲ್ಲಿ ಯಾರು ಏನ್ ಹೇಳಿದ್ರು?
    ಬೃಹತ್ ಪ್ರತಿಭಟನೆಯಲ್ಲಿ ವಾಲ್ಮೀಕಿ ಹಗರಣ ಹಾಗೂ ಮುಡಾ ಹಗರಣಗಳನ್ನ (MUDA Scam Case) ಖಂಡಿಸಿ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಲೇವಡಿ ಮಾಡಿದರು.

    ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ:
    ವಾಲ್ಮೀಕಿ ಅಭಿವೃದ್ಧಿ ನಿಗಮ, ಮೈಸೂರು ಮುಡಾದಲ್ಲಿ ಆಗಿರೋದು ಬ್ರಹ್ಮಾಂಡ ಭ್ರಷ್ಟಾಚಾರ. ಕಾಂಗ್ರೆಸ್‌ಗೆ ನೈತಿಕತೆ ಇಲ್ಲ. ಎಸ್ಸಿ-ಎಸ್ಟಿಗೆ ಮೀಸಲಿಟ್ಟ ಹಣವನ್ನ ದುರ್ಬಳಕೆ ಮಾಡಿದ್ದಾರೆ. ಹತ್ತಾರು ಕೋಟಿ ಬಳ್ಳಾರಿ, ಹೊರ ರಾಜ್ಯಗಳ ಚುನಾವಣೆಗಳಿಗೆ ವರ್ಗಾವಣೆ ಆಗಿದೆ. ಚುನಾವಣೆಯಲ್ಲಿ ಹಣ, ಹೆಂಡಕ್ಕೆ ಇದೇ ಹಣವನ್ನು ಬಳಸಿಕೊಳ್ಳಲಾಗಿದೆ. ಇಷ್ಟಾದರೂ ಕಾಂಗ್ರೆಸ್ ಸರ್ಕಾರ ತಾನು ನಿರಪರಾಧಿ ಅಂತ ಹೇಳಿಕೊಳ್ತಿದೆ. ಈ ಹಗರಣದ ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ಕೊಡಬೇಕು. ಸಿಟ್ಟಿಂಗ್ ಮಿನಿಸ್ಟರ್ ವಾಲ್ಮೀಕಿ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ, ಸಿಎಂ ಗಾಬರಿಯಾಗಿದ್ದಾರೆ. ಸಿಎಂ, ಸಚಿವರು ಸದನಕ್ಕೆ ಬರಲು ಭಯ ಪಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಮಾಳವಿಕಾ ಅವಿನಾಶ್:
    ಮುಡಾ ಹಾಗೂ ವಾಲ್ಮೀಕಿ ಹಗರಣಗಳ ವಿಚಾರ ರಾಜ್ಯದ ಜನತೆಗೆ ಗೊತ್ತಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನ ತೆಲಾಂಗಣಕ್ಕೆ ವರ್ಗಾವಣೆ ಮಾಡಲಾಗಿದೆ. ದಲಿತರ ಹೆಸರಲ್ಲಿ ಅಧಿಕಾರಕ್ಕೆ ಬಂದು, ದಲಿತರಿಗೆ ಕಾಂಗ್ರೆಸ್‌ನವರು ಮೋಸ ಮಾಡ್ತಿದ್ದಾರೆ. ಮುಡಾ ಹಗರಣದಲ್ಲಿ ಸಿಎಂ ಭಾಗಿಯಾಗಿದ್ದು, ನೇರವಾಗಿ ಸಿಕ್ಕಿಹಾಕಿಕೊಂಡಿದ್ದಾರೆ. ದಲಿತರ ಹಣ, ದಲಿತರಿಗೇ ತಲುಪಬೇಕು ಅನ್ನೋ ಕಾರಣಕ್ಕೆ ಈ ಹೋರಾಟ ಆರಂಭವಾಗಿದೆ.

    ಸಂಸದ ಗೋವಿಂದ ಕಾರಜೋಳ:
    ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಲೇಬೇಕು. ದಲಿತರ ಹಣವನ್ನು ಗ್ಯಾರಂಟಿಗಳಿಗೆ ಬಳಸಿದ್ದಾರೆ. ಕಾಂಗ್ರೆಸ್‌ನವರಿಗೆ ನಾಚಿಕೆ ಆಗೋದಿಲ್ವಾ? ಹಿಂದಿನಿಂದಲೂ ದಲಿತರ ಹೆಸರಿನಲ್ಲಿ ನಾಟಕ ಆಡ್ತಿದ್ದಾರೆ. ರಾಜೀನಾಮೆ ಕೊಡುವವರೆಗೂ ಎಲ್ಲಾ ಜಿಲ್ಲೆಗಳಲ್ಲಿ ನಿರಂತರ ಹೋರಾಟ ಮಾಡ್ತೇವೆ. ಇವರ ಮೋಸದಾಟವನ್ನು ಬಯಲಿಗೆ ಎಳೆಯಬೇಕು.

    ಶಾಸಕ ಎಸ್.ಆರ್ ವಿಶ್ವನಾಥ್:
    ಸಿದ್ದರಾಮಯ್ಯ ಹಣಕಾಸು ಸಚಿವರು, ಇಷ್ಟು ದೊಡ್ಡ ಹಗರಣ ಸಿದ್ದರಾಮಯ್ಯ ಅವರ ಗಮನಕ್ಕೆ ಬಾರದೇ ನಡೆಯೋದಿಲ್ಲ. ನಾಗೇಂದ್ರ ಅಕ್ರಮವಾಗಿ ಆ ಹಣವನ್ನು ವರ್ಗಾವಣೆ ಮಾಡಿಸಿದ್ದಾರೆ. ಸಿಬಿಐ, ಎಸ್‌ಐಟಿ, ಇಡಿ ಮೂವರು ಸಹ ಅಕ್ರಮ ನಡೆದಿರೋದಾಗಿ ಹೇಳ್ತಾ ಇದ್ದಾರೆ. ಯಾರೋ ಹೇಳಿದರು ಅಂತ ಇಡಿ ದಾಖಲಾತಿ ಇಲ್ಲದೇ ಅರೆಸ್ಟ್ ಮಾಡೋದಿಲ್ಲ. ನಮ್ಮ ಹೋರಾಟ ನಿರಂತರವಾಗಿರುತ್ತೆ.

    ವಿಜಯೇಂದ್ರ ವಶಕ್ಕೆ:
    ಪ್ರತಿಭಟನಾ ಮೆರವಣಿಗೆಯಲ್ಲಿ ವಿಧಾನಸೌಧಕ್ಕೆ ಮುತ್ತಿಗೆಹಾಕಲು ತೆರಳುತ್ತಿದ್ದ ವೇಳೆ ಶಾಸಕರೂ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನ ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ತಳ್ಳಾಟ, ನೂಕಾಟ ದೊಡ್ಡ ಪ್ರಮಾಣದಲ್ಲೇ ಆಯಿತು. ಕಾರ್ಯಕರ್ತರು ಬ್ಯಾರಿಕೇಡ್ ಕಿತ್ತೆಸೆದು ಆಕ್ರೋಶ ಹೊರಹಾಕಿದರು, ರಸ್ತೆಯಲ್ಲಿ ಬಸ್ ಸಂಚಾರಕ್ಕೆ ಅಡ್ಡಿಪಡಿಸಿ ಪ್ರತಿಭಟನೆ ನಡೆಸಿದರು.

  • ಮುಡಾ, ವಾಲ್ಮೀಕಿ ನಿಗಮದ ಹಗರಣ ತಾರ್ಕಿಕ ಅಂತ್ಯಕ್ಕೆ ಒಯ್ಯುತ್ತೇವೆ: ವಿಜಯೇಂದ್ರ

    ಮುಡಾ, ವಾಲ್ಮೀಕಿ ನಿಗಮದ ಹಗರಣ ತಾರ್ಕಿಕ ಅಂತ್ಯಕ್ಕೆ ಒಯ್ಯುತ್ತೇವೆ: ವಿಜಯೇಂದ್ರ

    -ಕಾಂಗ್ರೆಸ್‍ಗೆ ದಲಿತರ ವೋಟು, ನೋಟು, ಸಾವು ಬೇಕು: ಅಶೋಕ್

    ಬೆಂಗಳೂರು: ಸಾವಿರಾರು ಕೋಟಿ ರೂ. ಮೊತ್ತದ ಮುಡಾ ಹಗರಣ ಮತ್ತು ದಲಿತರ ಹಣವನ್ನು ಲೂಟಿ ಮಾಡಿದ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸದನದಲ್ಲಿ ಉತ್ತರ ಕೊಡಬೇಕು ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ (B.Y Vijayendra) ಅವರು ಆಗ್ರಹಿಸಿದರು.

    ವಿಜಯೇಂದ್ರ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ನೇತೃತ್ವದಲ್ಲಿ ಶಾಸಕರ ಭವನದ ಮಹರ್ಷಿ ವಾಲ್ಮೀಕಿ ಪ್ರತಿಮೆ ಬಳಿ ಬಿಜೆಪಿ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದ ತನಿಖೆಯನ್ನು ನಿವೃತ್ತ ನ್ಯಾಯಾಧೀಶರಿಂದ ನಡೆಸಿದರೆ ಸಾಲದು. ಸಿಎಂಗೆ ನಿಜವಾಗಿಯೂ ತಾಕತ್ತಿದ್ದರೆ ಮುಡಾ ಹಗರಣದ (MUDA scam) ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.

    ಈ ಹಗರಣದಲ್ಲಿ ಮುಖ್ಯಮಂತ್ರಿಗಳ ಕುಟುಂಬವೇ ಪಾಲುದಾರರಾಗಿದ್ದಾರೆ. ಸಾವಿರಾರು ಕೋಟಿ ರೂ. ಬೆಲೆಬಾಳುವ ನಿವೇಶನಗಳಿಗೆ ಮೈಸೂರು ಮುಡಾ ಹಗರಣ ನಡೆದಿದೆ. ಈ ಹಗರಣವನ್ನು ಸಿಬಿಐ ತನಿಖೆಗೆ ಆಗ್ರಹಿಸಿ ಸದನದ ಹೊರಗೆ ಹೋರಾಟ ನಡೆಸಿದ್ದೇವೆ. ಸದನದ ಒಳಗೆ ಕೂಡ ಹೋರಾಟ ಮುಂದುವರೆಯಲಿದೆ. ಅಲ್ಲದೇ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

    ಸಿದ್ದರಾಮಯ್ಯನವರು (Siddaramaiah) ದಲಿತರ ಹೆಸರು ಹೇಳಿಕೊಂಡು, ಪರಿಶಿಷ್ಟ ವರ್ಗ, ಪರಿಶಿಷ್ಟ ಪಂಗಡದವರಿಗೆ ನ್ಯಾಯ ಕೊಡುವುದಾಗಿ ಹೇಳಿಕೊಂಡು ಅಧಿಕಾರಕ್ಕೆ ಬಂದವರು. ಆದರೆ ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಲೂಟಿ ಮಾಡಿದ್ದಲ್ಲದೆ, ಅದೇ ಮೊತ್ತದಲ್ಲಿ ಲೋಕಸಭಾ ಚುನಾವಣೆ ನಡೆಸಿದ್ದಾರೆ. ಮುಖ್ಯಮಂತ್ರಿಗಳು ಮತ್ತು ಕಾಂಗ್ರೆಸ್ ಸರ್ಕಾರದ ಬಂಡವಾಳ ಈ ಮೂಲಕ ಬಯಲಾಗಿದೆ ಎಂದಿದ್ದಾರೆ.

    ನಿಗಮದ ಅಧ್ಯಕ್ಷ ದದ್ದಲ್ ಕಾಣೆ
    ಮುಖ್ಯಮಂತ್ರಿಗಳು ಆ ಸ್ಥಾನದಲ್ಲಿ ಕೂರಲು ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ನಿಮ್ಮ ಮಾಜಿ ಸಚಿವ ನಾಗೇಂದ್ರ ಅವರು ಇ.ಡಿ. ಕಸ್ಟಡಿಯಲ್ಲಿದ್ದಾರೆ. ನಿಗಮದ ಅಧ್ಯಕ್ಷರೂ ಆದ ಶಾಸಕ ದದ್ದಲ್ ಕಾಣೆಯಾಗಿದ್ದಾರೆ. ಹಾಗಿದ್ದರೆ ಸಿಎಂ ಉತ್ತರ ಕೊಡಬೇಕಲ್ಲವೇ? ಅಧಿಕಾರಿಗಳು ಸೇರಿಕೊಂಡು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಗರಣ ಮಾಡಿದ್ದಾಗಿ ಹೇಳುವ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಅವರ ಶಾಸಕರಿಗೆ ಕ್ಲೀನ್ ಚಿಟ್ ಕೊಡುವ ದುಸ್ಸಾಹಸ ಮಾಡುತ್ತಿದ್ದಾರೆ. ಕಾಂಗ್ರೆಸ್ಸಿಗರು ಭ್ರಷ್ಟಾಚಾರ ರಹಿತ ಆಡಳಿತ ಕೊಡುವುದಾಗಿ ಹೇಳಿ ಜನರ ಕಿವಿಗೆ ಹೂವು ಇಟ್ಟಿದ್ದರು. ಆದರೆ, ಅವರ ಬಂಡವಾಳ ಬಯಲಾಗಿದೆ ಎಂದು ಅವರು ಕಿಡಿಕಾರಿದ್ದಾರೆ.

    ಮುಖ್ಯಮಂತ್ರಿಗಳು ನಿಜವಾಗಿ ಪ್ರಾಮಾಣಿಕರೇ ಆಗಿದ್ದರೆ, ನಿಷ್ಪಕ್ಷಪಾತ ತನಿಖೆ ಆಗಬೇಕೆಂದಿದ್ದರೆ ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು. ವಾಲ್ಮೀಕಿ ನಿಗಮದ ಹಣವನ್ನು ಲೋಕಸಭಾ ಚುನಾವಣೆಗೆ ಬಳಸಿದ ಕುರಿತು ಇ.ಡಿ ತಿಳಿಸಿದ ಹಿನ್ನೆಲೆಯಲ್ಲಿ ಇವೆರಡೂ ಹಗರಣಗಳ ಬಗ್ಗೆ ಸದನದಲ್ಲಿ ಉತ್ತರ ಕೊಡಬೇಕು. ವಾಲ್ಮೀಕಿ ನಿಗಮದ ಹಗರಣದ ಸಂಬಂಧ ನಾವು ನಿಲುವಳಿ ಸೂಚನೆ ಮಂಡಿಸುತ್ತಿದ್ದೇವೆ. ಇದರ ಕುರಿತು ಚರ್ಚೆ ಆಗಲೇಬೇಕು. ಸಿಎಂ ಉತ್ತರ ಕೊಡಲೇಬೇಕು ಎಂದು ಅವರು ಒತ್ತಾಯಿಸಿದರು.

    ಎಲ್ಲಾ ಹಗರಣವನ್ನೂ ಸಿಬಿಐ ತನಿಖೆಗೆ ಕೊಡಿ
    ಯಾವ ಸರ್ಕಾರ ಇದ್ದಾಗ ಮುಡಾದಲ್ಲಿ ಹಗರಣ ನಡೆದಿದ್ದರೂ ಎಲ್ಲಾ ಸೇರಿಸಿ ಸಿಬಿಐ ತನಿಖೆಗೆ ಒಪ್ಪಿಸಿ. ಸಿಎಂ ಕುಟುಂಬವೇ ಈ ಹಗರಣದಲ್ಲಿ ಭಾಗಿಯಾಗಿದೆ. ನಿಮಗೆ ಬೇಕಾದಂತೆ ನಿವೃತ್ತ ನ್ಯಾಯಾಧೀಶರಿಂದ ತನಿಖೆ ಮಾಡಿದರೆ ಸಾಕಾಗುವುದಿಲ್ಲ. ಸಿಬಿಐ ತನಿಖೆಗೆ ಕೊಡಲೇಬೇಕು. ನಮ್ಮ ಮೇಲೆ ದಬ್ಬಾಳಿಕೆ ಮಾಡಿ ಹೆದರಿಸುವ ಕೆಲಸ ಮಾಡದ್ದೀರಿ ಎಂದು ಅವರು ಕಿಡಿಕಾರಿದ್ದಾರೆ.

    ಎರಡೂ ಹಗರಣಗಳನ್ನು ಒಂದು ತಾರ್ಕಿಕ ಅಂತ್ಯಕ್ಕೆ ಒಯ್ಯುವ ಬಗ್ಗೆ ನಿರ್ಧಾರ ಮಾಡಿದ್ದೇವೆ. ಅಲ್ಲಿನವರೆಗೆ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಅವರು ಹೇಳಿದ್ದಾರೆ.

    ಕಾಂಗ್ರೆಸ್‍ಗೆ ದಲಿತರ ಸಾವು ಬೇಕು
    ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ಆತ್ಮಹತ್ಯೆ ಮಾಡಿಕೊಂಡ ವಾಲ್ಮೀಕಿ ನಿಗಮದ ಅಧಿಕಾರಿಯೂ ದಲಿತರೇ ಆಗಿದ್ದಾರೆ. ಕಾಂಗ್ರೆಸ್ಸಿಗರಿಗೆ ದಲಿತರ ಮತ ಬೇಕು. ದಲಿತರ ನೋಟು ಕೂಡ ಬೇಕು. ದಲಿತರ ಸಾವು ಬೇಕು. ಇದು ಕಾಂಗ್ರೆಸ್ ನೀತಿ. ಈ ಸರ್ಕಾರ ನೈತಿಕವಾಗಿ ಸತ್ತು ಹೋಗಿದೆ. ಅಧಿಕಾರದಲ್ಲಿ ಉಳಿಯುವ ಯೋಗ್ಯತೆ ಕಳಕೊಂಡಿದೆ. ಮಾನ ಮರ್ಯಾದೆ ಇದ್ದರೆ ಸಿಎಂ ರಾಜೀನಾಮೆ ಕೊಡಬೇಕಿತ್ತು. ಇವತ್ತು ಯಾವ ಮುಖ ಇಟ್ಟುಕೊಂಡು ವಿಧಾನಸೌಧಕ್ಕೆ ಬರುತ್ತಾರೋ ಅರ್ಥ ಆಗುತ್ತಿಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

  • ಮುಡಾ ಹಗರಣ: ತನಿಖೆಗೆ ಏಕಸದಸ್ಯ ವಿಚಾರಣಾ ಆಯೋಗ ರಚಿಸಿ ಸರ್ಕಾರ ಆದೇಶ!

    ಮುಡಾ ಹಗರಣ: ತನಿಖೆಗೆ ಏಕಸದಸ್ಯ ವಿಚಾರಣಾ ಆಯೋಗ ರಚಿಸಿ ಸರ್ಕಾರ ಆದೇಶ!

    ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಗರಣದ (MUDA Scam) ತನಿಖೆ ನಡೆಸಲು ನಿವೃತ್ತ ನ್ಯಾಯಾಧೀಶರ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗ (Inquiry Commission) ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ವಿಧಾನ ಮಂಡಲ ಅಧಿವೇಶನಕ್ಕೆ ಮುನ್ನಾ ದಿನವೇ ನಿವೃತ್ತ ನ್ಯಾಯಾಧೀಶರಾದ ಪಿ.ಎನ್‌ ದೇಸಾಯಿ (PN Desai) ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗ ರಚಿಸಿ ಸರ್ಕಾರ ಆದೇಶಿಸಿದೆ. ಅಲ್ಲದೇ ಸಂಪೂರ್ಣಾ ತನಿಖಾ ವರದಿಯನ್ನು 6 ತಿಂಗಳ ಒಳಗೆ ಸಲ್ಲಿಸುವಂತೆ ವಿಚಾರಣಾ ಆಯೋಗಕ್ಕೆ ಸರ್ಕಾರ (Karnataka Govt) ಗಡುವು ನೀಡಿದೆ.

    ರಾಜ್ಯ ಸರ್ಕಾರದ ಆದೇಶದಲ್ಲಿ ಏನಿದೆ?
    ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿವೇಶನ ಹಂಚಿಕೆ ವಿಷಯದಲ್ಲಿ ಆರೋಪಗಳು ಸರ್ಕಾರದ ಗಮನಕ್ಕೆ ಬಂದಿರುವುದಲ್ಲದೇ, ಈ ಕುರಿತು ದಿನ ಪತ್ರಿಕೆಗಳಲ್ಲಿ ಹಾಗೂ ಮಾಧ್ಯಮಗಳಲ್ಲಿಯೂ ಸಹ ವರದಿಯಾಗಿರುತ್ತದೆ. ಈ ಪ್ರಕರಣದಲ್ಲಿ ವಿಚಾರಣೆ ನಡೆಸುವುದು ಸೂಕ್ತವೆಂದು ಮನಗಂಡು, Commission Of Inquiry Act, 1952ರ (ವಿಚಾರಣಾ ಆಯೋಗ ಕಾಯ್ದೆ 1952) ನಿಮಯು 3ರ ಉಪನಿಯಮ (1) ಅನ್ವಯ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಿಂದ ವಿಚಾರಣೆ ನಡೆಸಲು ವಿಚಾರಣಾ ಆಯೋಗ ರಚಿಸಲು ಸರ್ಕಾರ ತೀರ್ಮಾನಿಸಿದೆ.

    ಈ ಹಿನ್ನೆಲೆಯಲ್ಲಿ ಆರೋಪಗಳ ಬಗ್ಗೆ, ವಿಚಾರಣೆಯನ್ನು ನಡೆಸಲು Commission Of Inquiry Act, 1952ರ ನಿಮಯು 3ರ ಉಪನಿಯಮ (1) ಅನ್ವಯ ಪ್ರದತ್ತವಾದ ಅಧಿಕಾರದನ್ವಯ ಸರ್ಕಾರವು ನಿವೃತ್ತ ನ್ಯಾಯಾಧೀಶರಾದ ಪಿ.ಎನ್.ದೇಸಾಯಿ, ಅವರ ನೇತೃತ್ವದಲ್ಲಿ ಏಕಸದಸ್ಯ ವಿಚಾರಣಾ ಆಯೋಗ ರಚಿಸಿದೆ.

    ಸದರಿ ವಿಚಾರಣಾ ಆಯೋಗವು Commission Of Inquiry Act, 1952 ಹಾಗೂ Code Of Civil Procedure (ಸಿವಿಲ್ ಪ್ರೊಸೀಜರ್ ಕೋಡ್ 1952) ನಲ್ಲಿನ ಅವಕಾಶದ ಅಡಿ ವಿಚಾರಣೆ ನಡೆಸಲು ಎಲ್ಲಾ ಅಧಿಕಾರ ಹೊಂದಿರುತ್ತದೆ. ತನಿಖೆಯನ್ನು 6 ತಿಂಗಳೊಳಗಾಗಿ ಪೂರ್ಣಗೊಳಿಸಿ ವರದಿಯನ್ನು ಸಲ್ಲಿಸಬೇಕೆಂದು ಸರ್ಕಾರವು ಅಪೇಕ್ಷಿಸುತ್ತದೆ. ವಿಚಾರಣಾ ಆಯೋಗದ ಉಲ್ಲೇಖ ನಿಯಮಗಳನ್ನು ಪ್ರತ್ಯೇಕವಾಗಿ ಹೊರಡಿಲಾಗುತ್ತದೆ.

    ಈ ವಿಚಾರಣಾ ಆಯೋಗಕ್ಕೆ ಸಮಗ್ರ ಮಾಹಿತಿ / ದಾಖಲೆಗಳನ್ನು ಒದಗಿಸಿ ಆಯೋಗವು ವಿಚಾರಣೆಯನ್ನು ಪೂರ್ಣಗೊಳಿಸಲು ಹಾಗೂ ತಾಂತ್ರಿಕ ಸಲಹೆಗಾರರು/ಆರ್ಥಿಕ ಸಲಹೆಗಾರರು/ ಆಡಳಿತಾತ್ಮಕ ಸಲಹೆಗಾರರನ್ನು ಒದಗಿಸಲು ನಗರಾಭಿವೃದ್ಧಿ ಇಲಾಖೆ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಸಹಕರಿಸತಕ್ಕದ್ದು. ವಿಚಾರಣಾ ಆಯೋಗಕ್ಕೆ ಸಂಬಂಧಪಟ್ಟಂತೆ ನಗರಾಭಿವೃದ್ಧಿ ಇಲಾಖೆಯ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಆಯೋಗವು ಕಾಲಾನುಕಾಲಕ್ಕೆ ವಿಚಾರಣೆಗಾಗಿ ಅಪೇಕ್ಷಿಸುವ ಎಲ್ಲಾ ಕಡತಗಳು/ ದಾಖಲಾತಿಗಳು/ ಇತ್ಯಾದಿಗಳನ್ನು ಒದಗಿಸತಕ್ಕದ್ದು ಹಾಗೂ ವಿಚಾರಣೆ ಸಂದರ್ಭದಲ್ಲಿ ಹಾಜರಿದ್ದು, ವಿಚಾರಣಾ ಆಯೋಗದೊಂದಿಗೆ ಸಂಪೂರ್ಣವಾಗಿ ಸಹಕರಿಸತಕ್ಕದ್ದು ಎಂದು ಆದೇಶ ಪ್ರತಿಯಲ್ಲಿ ತಿಳಿಸಿದೆ.

  • Karnataka Assembly Session| ಟಾರ್ಗೆಟ್‌ ಸಿದ್ದರಾಮಯ್ಯ – ಪ್ರತಿಪಕ್ಷಗಳಿಗೆ ಸಿಕ್ಕಿವೆ 3 ಬ್ರಹ್ಮಾಸ್ತ್ರಗಳು

    Karnataka Assembly Session| ಟಾರ್ಗೆಟ್‌ ಸಿದ್ದರಾಮಯ್ಯ – ಪ್ರತಿಪಕ್ಷಗಳಿಗೆ ಸಿಕ್ಕಿವೆ 3 ಬ್ರಹ್ಮಾಸ್ತ್ರಗಳು

    – ಜುಲೈ 15ರಿಂದ ಜುಲೈ 26ರ ತನಕ ನಡೆಯಲಿದೆ ಅಧಿವೇಶನ
    – ಸಿದ್ದರಾಮಯ್ಯನವರ ರಾಜೀನಾಮೆಗೆ ಆಗ್ರಹಿಸುವುದೇ ಮೊದಲ ಅಜೆಂಡಾ

    ಬೆಂಗಳೂರು: ಸೋಮವಾರದಿಂದ 9 ದಿನಗಳ ಕಾಲ ವಿಧಾನಮಂಡಲದ ಅಧಿವೇಶನ (Karnataka Legislative Assembly Session) ನಡೆಯಲಿದೆ. ಪ್ರತಿಪಕ್ಷಗಳಿಗೆ 3 ಬ್ರಹ್ಮಾಸ್ತ್ರಗಳು ಸಿಕ್ಕಿದ್ದು, ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಬಳಸಲು ತಯಾರಿ ನಡೆಸಿವೆ. ಇದೊಂದು ರೀತಿಯಲ್ಲಿ ಟಾರ್ಗೆಟ್ ಸದನವಾಗಿದ್ದು, 3 ಪ್ರಕರಣಗಳಲ್ಲೂ ಸಿದ್ದರಾಮಯ್ಯ ಅವರೇ ಟಾರ್ಗೆಟ್ ಆಗುವ ಸಾಧ್ಯತೆ ಇದೆ.

    ಜುಲೈ 15ರಿಂದ ಜುಲೈ 26ರ ತನಕ ನಡೆಲಿರುವ ಕಲಾಪದಲ್ಲಿ ಕಾಂಗ್ರೆಸ್ ಸರ್ಕಾರವನ್ನು (Congress Government) ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ-ಜೆಡಿಎಸ್ (BJP-JDS) ಜಂಟಿ ಹೋರಾಟಕ್ಕಿಳಿಯಲಿವೆ. ವಾಲ್ಮೀಕಿ (Valmiki Scam) ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಅಕ್ರಮ, ಮುಡಾ ಅಕ್ರಮ (Muda Scam) ಆರೋಪ, ಎಸ್‌ಸಿಎಸ್‌ಪಿ/ಟಿಎಸ್‌ಪಿ ಹಣವನ್ನು ಗ್ಯಾರಂಟಿಗೆ ಬಳಸಿಕೊಂಡಿದ್ದೇ ಬಿಜೆಪಿ-ಜೆಡಿಎಸ್ ಹೋರಾಟಕ್ಕೆ ಬಲ ತಂದಿದೆ. ಇದನ್ನೂ ಓದಿ: ಕಾವೇರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ವರೆಗೂ ಹೋಗೋಣ – ರಾಜ್ಯ ಸರ್ಕಾರಕ್ಕೆ ಆರ್‌. ಅಶೋಕ್‌ ಬೆಂಬಲ!

    ಸಿದ್ದರಾಮಯ್ಯನವರ ರಾಜೀನಾಮೆಗೆ ಆಗ್ರಹಿಸುವುದೇ ಮೊದಲ ಅಜೆಂಡಾ ಆಗಿದೆ ಎನ್ನಲಾಗಿದೆ. ಅಲ್ಲದೆ ಪೆಟ್ರೋಲ್, ಡಿಸೇಲ್ ದರ ಏರಿಕೆ, ಡೆಂಗ್ಯೂ ಹೆಚ್ಚಳ ವಿಚಾರ, ಕಾವೇರಿ ನೀರು ಬಿಡುವ ನಿರ್ಧಾರದ ವಿಚಾರಗಳು ಸಹ ಹೆಚ್ಚು ಸದ್ದು ಮಾಡುವ ಸಾಧ್ಯತೆ ಇದೆ. ಅಲ್ಲದೇ ವಾಲ್ಮೀಕಿ ಹಗರಣ ಬಗ್ಗೆ ಚರ್ಚೆಗೆ ನಿಯಮ 60ರ ಅಡಿ ನಿಲುವಳಿ ಸೂಚನೆ ಮಂಡಿಸಲು ಬಿಜೆಪಿ ನಿರ್ಧರಿಸಿದೆ.

    ಸಿಎಂ, ದದ್ದಲ್ ರಾಜೀನಾಮೆಗೆ ಆಗ್ರಹಿಸಿ ಶಾಸಕರ ಭವನದಲ್ಲಿರುವ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ವಿಧಾನಸೌಧದವರೆಗೆ ಬಿಜೆಪಿಗರು ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ. ಪ್ರತಿಪಕ್ಷಗಳ ಆರೋಪವನ್ನು ಎದುರಿಸಲು ಸಿಎಂ ಸಿದ್ದರಾಮಯ್ಯ ಕೂಡ ತಯಾರಿ ನಡೆಸಿದ್ದು, ಪ್ರಕರಣಗಳಿಗೆ ಹಿರಿಯ ಸಚಿವರ ಟೀಂ ಮಾಡಿ ಎದುರಿಸಲು ಸಿದ್ಧವಾಗಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ ನಿಗಮ ಆಯ್ತು ಈಗ ವಕ್ಫ್‌ ಬೋರ್ಡ್‌ನಲ್ಲೂ ಕೋಟ್ಯಂತರ ರೂ. ಅಕ್ರಮ ವರ್ಗಾವಣೆ

    ದೇವರಾಜ ಅರಸು ಟ್ರಕ್ ಟರ್ಮಿನಲ್ ಹಗರಣ, ಮಾಜಿ ಎಂಎಲ್‌ಎಸ್ ಡಿ.ಎಸ್. ವೀರಯ್ಯ ಬಂಧನ, ಶಿವಮೊಗ್ಗ ಪ್ರಾಧಿಕಾರದ ಸೈಟ್ ಹಂಚಿಕೆ ಗೋಲ್ಮಾಲ್, ಗೌಡರ ಕಾಲದಲ್ಲಿ ಮುಡಾ ಸೈಟ್ ಹಂಚಿಕೆ ಅಕ್ರಮ, ಹೆಚ್ಡಿಕೆಗೆ 60 ಸಾವಿರ ಅಡಿ ನಿವೇಶನ ಅಸ್ತ್ರ ಪ್ರಯೋಗಿಸಲಿದ್ದಾರೆ.

     

  • ವಾಲ್ಮೀಕಿ ನಿಗಮದ ಹಗರಣದಲ್ಲಿ ಸಿದ್ದರಾಮಯ್ಯ, ಡಿಕೆಶಿಯೂ ಇದ್ದಾರೆ – ಕೇಂದ್ರ ಸಚಿವ ಜೋಶಿ ಬಾಂಬ್‌!

    ವಾಲ್ಮೀಕಿ ನಿಗಮದ ಹಗರಣದಲ್ಲಿ ಸಿದ್ದರಾಮಯ್ಯ, ಡಿಕೆಶಿಯೂ ಇದ್ದಾರೆ – ಕೇಂದ್ರ ಸಚಿವ ಜೋಶಿ ಬಾಂಬ್‌!

    ಧಾರವಾಡ: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣದಲ್ಲಿ (Valmiki Corporation Corruption Case) ಸಂಪೂರ್ಣವಾಗಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ ಸಹ ಇದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ (Pralhad Joshi) ಬಾಂಬ್‌ ಸಿಡಿಸಿದರು. ಇದನ್ನೂ ಓದಿ: ದೇವೇಗೌಡರ ಕುಟುಂಬದಲ್ಲಿ ಉಳಿದವನು ನಿಖಿಲ್ ಅಂತಾ ಅರೆಸ್ಟ್ ಮಾಡೋಕೆ ಪ್ಲ್ಯಾನ್‌ ಮಾಡಿದ್ರು: ಹೆಚ್‌ಡಿಕೆ‌ ಕಿಡಿ

    ಧಾರವಾಡದಲ್ಲಿ (Dharwad) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ, 40 ದಿನವಾದರೂ ಎಸ್‌ಐಟಿ ನಾಗೇಂದ್ರ (BN Nagendra) ಮತ್ತು ದದ್ದಲ್‌ಗೆ ನೋಟೀಸ್ ಕೊಟ್ಟಿಲ್ಲ, ಅವರನ್ನು ವಿಚಾರಣೆಗೂ ಕರೆದಿಲ್ಲ. ಈಗ ದದ್ದಲ್‌ನನ್ನ ಬಂಧಿಸಿ ಅಂತ ಹೇಳಿದ್ದಾರೆ. ಬಂಧನಕ್ಕೊಳಗಾಗಿ ಸಿಎಂ ಸಂಪೂರ್ಣ ಆಶ್ರಯದಲ್ಲಿ ರಾಜಾತಿಥ್ಯ ಪಡೆಯಬೇಕೆಂಬ ದುರಾಲೋಚನೆಯೂ ಇದರಲ್ಲಿದೆ. ಸರ್ಕಾರಿ ಖಜಾನೆಯಿಂದ ಹಣ ಹೋಗಿದೆ. ಅತ್ಯಂತ ಹತಾಶಾ ಭಾವನೆಯಿಂದ ಸಿದ್ದರಾಮಯ್ಯ ಶಿಷ್ಯಂದಿರು ಮಾತನಾಡುತ್ತಿದ್ದಾರೆ. ಇವರ ತಲೆಯಲ್ಲಿನ ಬುದ್ಧಿ ತೀರಾ ಖಾಲಿಯಾಗಿದೆ ಅನಿಸುತ್ತಿದೆ ಎಂದ ಅವರು, ಸಿದ್ದರಾಮಯ್ಯ (Siddaramaiah) ಹಿಂದೆಲ್ಲ ನಾಲಿಗೆ ಮೆದುಳಿಗೆ ಸಂಬಂಧವಿಲ್ಲದ ಮಾತು ಅಂತೆಲ್ಲ ಹೇಳುತ್ತಿದ್ದರು, ನಿರ್ಮಲಾ ಸೀತಾರಾಮನ್ ರಾಜೀನಾಮೆ ಸಹ ಕೇಳಿದ್ದಾರೆ, ಈಗ ಅವರ ಮಂತ್ರಿಗಳೇ ನಾಲಿಗೆ-ಮೆದುಳಿಗೆ ಸಂಬಂಧ ಇಲ್ಲದಂತೆ ಮಾತನಾಡ್ತಿದ್ದಾರೆ ಅಂತ ವಾಗ್ದಾಳಿ ನಡೆಸಿದರು.

    ಇಲ್ಲೊಬ್ಬ ಮಂತ್ರಿ ಸಹ ಹಾಗೆಯೇ ಮಾತನಾಡಿದ್ದಾರೆ, ನೀವು ಸಹಿ ಮಾಡಿದೀರಿ, ಅಕೌಂಟ್ ನಿಮ್ಮ ಹೆಸರಿನಲ್ಲಿದೆ, ಬೇರೆ ಅಕೌಂಟ್‌ಗೆ ಹಣ ಹೋಗಿದೆ, ಅಲ್ಲಿಂದ ಪಡೆದು ನುಂಗಿ ನೀರು ಕುಡಿದಿದ್ದಾರೆ ಎಂದ ಅವರು, ಇದರಲ್ಲಿ ಸಿದ್ದರಾಮಯ್ಯ ಸಹ ಭಾಗಿಯಾಗಿದ್ದಾರೆ. ಈ ಹಿಂದೆಯೂ ತೆಲಂಗಾಣ ಚುನಾವಣೆಗೆ ಸಾವಿರಾರೂ ಕೋಟಿ ಹಣ ಕಳುಹಿಸಿದ್ದರು, ಇಬ್ಬರು ಗುತ್ತಿಗೆದಾರರ ಮನೆಯಲ್ಲಿ ಹಣ ಸಿಕ್ಕಿತ್ತು. ಅದನ್ನ ಆಗ ನಾನು ಹೇಳಿದ್ದೆ, ಹಣ ಕಳಿಸುತ್ತಿದ್ದಾರೆ ಅಂದಾಗ ಕಾಂಗ್ರೆಸ್ ನವರು ವಿರೋಧಿಸಿದ್ದರು ಎಂದರು.‌ ಇದನ್ನೂ ಓದಿ: ಆಟೋ ಚಕ್ರದಿಂದ ಮೈಗೆ ಚಿಮ್ಮಿದ ಕೆಸರು – ಮರಳಿ ಬರುವವರೆಗೂ ಕಾದು ಚಾಲಕನಿಗೆ ಚಾಕು ಇರಿತ

    ಮುಡಾ ಹಗರಣದಲ್ಲಿಯೂ ಇವರು ಸಿಕ್ಕಿಬಿದ್ದಿದ್ದಾರೆ, 2003-04 ರಲ್ಲಿ ಆ ಭೂಮಿ ಡಿನೋಟಿಫಿಕೇಶನ್ ಆಗಿತ್ತು ಎನ್ನಲಾಗಿದೆ. 2010ರ ವರೆಗೆ ಆ ಭೂಮಿ ಮುಡಾ ಹೆಸರಿನಲ್ಲಿಯೇ ಇದೆ. 2010ರ ನಂತರ ಅನೇಕರಿಗೆ ಫ್ಲಾಟ್‌ ನೀಡಲಾಗಿದೆ. ಸಿದ್ದರಾಮಯ್ಯ ಪತ್ನಿ ಪಾರ್ವತಮ್ಮ ಅವರಿಗೆ ದಾನ ಕೊಟ್ಟಿದ್ದಾರೆ ಅಂತಿದ್ದಾರೆ. ಮುಡಾ ಅಭಿವೃದ್ಧಿಪಡಿಸಿ ಫ್ಲಾಟ್‌ ನೀಡಿದೆ, 2013ರ ಚುನಾವಣೆಯಲ್ಲಿ ಅಫಿಡವಿಟ್‌ನಲ್ಲಿ ಏಕೆ ಹಾಕಿಲ್ಲ? 2018ರ ಚುನಾವಣೆಯಲ್ಲಿ ಅದನ್ನು 25 ಲಕ್ಷ ರೂ. ಅಂತ ತೋರಿಸಿದ್ದಾರೆ. 2023ರ ಚುನಾವಣೆಯಲ್ಲಿ ಅದನ್ನು 8.62 ಕೋಟಿ ರೂ. ಅಂತ ತೋರಿಸಿದ್ದಾರೆ, ಇದೀಗ 62 ಕೋಟಿ ರೂ. ಅಂತ ಏಕೆ ಪರಿಹಾರ ಕೇಳುತ್ತಿದ್ದಾರೆ ಎಂದು ಪ್ರಶ್ನಿಸಿದರು. ಅಲ್ಲದೇ ಇಲ್ಲಿ ಫ್ಲಾಟ್‌ ಇದ್ದರೂ ವಿಜಯನಗರದಲ್ಲೇಕೆ ಫ್ಲಾಟ್‌ ತೆಗೆದುಕೊಂಡಿರಿ? ಇವರೆಲ್ಲಾ ಕಳ್ಳರಿದ್ದಾರೆ, ಅಷ್ಟೇ ಎಂದು ಜೋಶಿ‌ ಕಿಡಿ ಕಾರಿದರು. ಇದನ್ನೂ ಓದಿ: ಯಾತ್ರಾರ್ಥಿಗಳಿದ್ದ ಬಸ್ ಹಿಂದಿನಿಂದ ಟ್ರಕ್‌ಗೆ ಡಿಕ್ಕಿ – ಮೂವರು ಸಾವು, 14 ಮಂದಿ ಗಂಭೀರ 

  • ರಾಮನಗರ ಹೆಸರು ಮರುನಾಮಕರಣಕ್ಕೆ ಜೆಡಿಎಸ್ ವಿರೋಧ ಇಲ್ಲ, ಹಾಸನದವರ ವಿರೋಧ ಇದೆ: ಹೆಚ್‌ಸಿ ಬಾಲಕೃಷ್ಣ

    ರಾಮನಗರ ಹೆಸರು ಮರುನಾಮಕರಣಕ್ಕೆ ಜೆಡಿಎಸ್ ವಿರೋಧ ಇಲ್ಲ, ಹಾಸನದವರ ವಿರೋಧ ಇದೆ: ಹೆಚ್‌ಸಿ ಬಾಲಕೃಷ್ಣ

    ರಾಮನಗರ: ಜಿಲ್ಲೆ ಮರುನಾಮಕರಣಕ್ಕೆ ವಿರೋಧ ಮಾಡುತ್ತಿರುವುದು ಜೆಡಿಎಸ್‌ನವರಲ್ಲ (JDS), ಬದಲಾಗಿ ಹಾಸನದವರು ಎಂದು ಪರೋಕ್ಷವಾಗಿ ಕುಮಾರಸ್ವಾಮಿಗೆ (HD Kumaraswamy) ಮಾಗಡಿ ಶಾಸಕ ಹೆಚ್‌ಸಿ ಬಾಲಕೃಷ್ಣ  (HC Balakrishna) ತಿರುಗೇಟು ನೀಡಿದ್ದಾರೆ.

    ರಾಮನಗರ (Ramanagara) ಜಿಲ್ಲೆ ಮರುನಾಮಕರಣಕ್ಕೆ ಜೆಡಿಎಸ್ ವಿರೋಧ ವಿಚಾರ ಕುರಿತು ಮಾಗಡಿಯಲ್ಲಿ ಮಾತನಾಡಿದ ಅವರು, ಹಾಸನದವರಿಗೆ ಬೆಂಗಳೂರಿನ ಗಮ್ಮತ್ತು ಗೊತ್ತಿಲ್ಲ. ಆದ್ದರಿಂದ ಇದಕ್ಕೆ ವಿರೋಧ ಮಾಡುತ್ತಿದ್ದಾರೆ. ನಮಗೂ ಬೆಂಗಳೂರಿಗೂ ಅವಿನಾಭಾವ ಸಂಬಂಧ ಇದೆ. ನಾವು ಮೊದಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯವರೇ. ರಾಮನಗರ ಹೆಸರು ಬದಲಾವಣೆ ಆದರೆ ಕಚೇರಿಗಳು ಎಲ್ಲೂ ಹೋಗಲ್ಲ. ರಾಮನಗರವೇ ಜಿಲ್ಲಾ ಕೇಂದ್ರವಾಗಿರುತ್ತದೆ. ಆದರೆ ಬೆಂಗಳೂರು ದಕ್ಷಿಣ ಎಂಬ ಹೆಸರು ಬದಲಾವಣೆಗೆ ಮನವಿ ಮಾಡಿದ್ದೇವೆ ಎಂದರು. ಇದನ್ನೂ ಓದಿ: ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ – ಜನಜೀವನ ಅಸ್ತವ್ಯಸ್ತ

    ಇನ್ನೂ ಮುಡಾ ಬಹುಕೋಟಿ ಹಗರಣ ವಿಚಾರ ಕುರಿತು ಮಾತನಾಡಿ, ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ ಮುಡಾ ಭೂಸ್ವಾಧೀನ ಮಾಡಿದ ಬಳಿಕ ಜಾಗದ ಮಾಲೀಕರಿಗೆ 50:50 ಅನುಪಾತದಲ್ಲಿ ಸೈಟ್ ಹಂಚುತ್ತಾರೆ. ಅದೇ ರೀತಿ ಸಿಎಂ ಕೂಡ ಸೈಟ್ ಪಡೆದಿದ್ದಾರೆ. ಇಲ್ಲಿ ಯಾವುದೇ ಭ್ರಷ್ಟಾಚಾರ ಆಗಿಲ್ಲ ಎಂದು ಹೇಳಿದರು. ಇದನ್ನೂ ಓದಿ: ದೆಹಲಿಯಂತೆ ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್‌ಗೆ ಹೆಚ್ಚಿನ ಅಧಿಕಾರ