Tag: MUDA Scam

  • ಮುಡಾ ಹಗರಣ | ಸಿಎಂ ರಾಜೀನಾಮೆಗೆ ಆಗ್ರಹಿಸಿ ಆ.3ರಿಂದ ಬಿಜೆಪಿ-ಜೆಡಿಎಸ್ ಪಾದಯಾತ್ರೆ

    ಮುಡಾ ಹಗರಣ | ಸಿಎಂ ರಾಜೀನಾಮೆಗೆ ಆಗ್ರಹಿಸಿ ಆ.3ರಿಂದ ಬಿಜೆಪಿ-ಜೆಡಿಎಸ್ ಪಾದಯಾತ್ರೆ

    ಬೆಂಗಳೂರು: ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಅವರ ರಾಜೀನಾಮೆಗೆ ಆಗ್ರಹಿಸಿ ಆಗಸ್ಟ್ 3ರಿಂದ (ಶನಿವಾರ) ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಲು ತೀರ್ಮಾನಿಸಿದೆ.

    ಮೈಸೂರು ಪಾದಯಾತ್ರೆಯ ರೂಪುರೇಷೆ ಸಂಬಂಧ ಮೈತ್ರಿ ನಾಯಕರು ಭಾನುವಾರ ಜಂಟಿ ಸಭೆ ನಡೆಸಿ ಈ ತೀರ್ಮಾನ ಕೈಗೊಂಡಿದ್ದಾರೆ. ಶನಿವಾರದಂದು ಬೆಂಗಳೂರಿನ (Bengaluru) ನೈಸ್ ರಸ್ತೆಯಿಂದ ಪಾದಯಾತ್ರೆ ಆರಂಭಿಸಲಿದ್ದು, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹಾಗೂ ಹೆಚ್.ಡಿ ಕುಮಾರಸ್ವಾಮಿ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ಇದನ್ನೂ ಓದಿ: ಹೆಚ್‌ಡಿಕೆಗೆ ದಿಢೀರ್‌ ರಕ್ತಸ್ರಾವವಾಗಲು ಕಾರಣವೇನು? – ಬ್ಲಡ್‌ ಥಿನ್ನರ್‌ ಔಷಧಿ ತೆಗೆದುಕೊಳ್ಳುತ್ತಿದ್ದದ್ದು ಏಕೆ?

    ಮೈಸೂರಿನಲ್ಲಿ (Mysuru) ಪಾದಯಾತ್ರೆ ಸಮಾರೋಪಕ್ಕೆ ಜೆ.ಪಿ ನಡ್ಡಾ ಅವರನ್ನು ಕರೆಸಲು ದೋಸ್ತಿ ನಾಯಕರು ಪ್ಲ್ಯಾನ್ ಮಾಡಿದ್ದಾರೆ. ಪಾದಯಾತ್ರೆಯ ಮಾರ್ಗ ಮಧ್ಯೆ ಕೆಲವು ಕಡೆ ಜನ ಸೇರಿಸಿ ಮೈತ್ರಿ ಪಕ್ಷಗಳು ಸಮಾವೇಶ ನಡೆಸಲಿವೆ. ಶನಿವಾರದಿಂದ ಒಂದು ವಾರಗಳ ಕಾಲ ಪಾದಯಾತ್ರೆ ನಡೆಯಲಿದ್ದು, ದಿನಕ್ಕೆ 20 ಕಿಮೀ ವರೆಗೆ ಪಾದಯಾತ್ರೆ ನಡೆಯಲಿದೆ ಎಂದು ಸಭೆಯಲ್ಲಿ ಬಿಜೆಪಿ-ಜೆಡಿಎಸ್ ನಾಯಕರು ಹೇಳಿದ್ದಾರೆ. ಇದನ್ನೂ ಓದಿ: Women’s Asia Cup 2024: ಲಂಕಾ ಚಾಂಪಿಯನ್‌ – 20 ವರ್ಷಗಳ ಬಳಿಕ ಟ್ರೋಫಿ ಗೆದ್ದ ಸಿಂಹಳಿಯರು

    ಸಭೆ ಬಳಿಕ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಮಾಧ್ಯಗಳೊಂದಿಗೆ ಮಾತನಾಡಿ, ರಾಜ್ಯದಲ್ಲಿ ಭ್ರಷ್ಟ ಕಾಂಗ್ರೆಸ್ ಸರ್ಕಾರ ಇದೆ. ಮುಡಾ, ವಾಲ್ಮೀಕಿ ನಿಗಮಗಳಲ್ಲಿ ಹಗರಣ, ಎಸ್ಸಿ-ಎಸ್ಟಿ ಹಣ ದುರ್ಬಳಕೆ ವಿಚಾರ ಇಟ್ಟುಕೊಂಡು ಪಾದಯಾತ್ರೆ ಬಗ್ಗೆ ಚರ್ಚೆ ಮಾಡಿದ್ದೇವೆ. ಮುಂದಿನ ಶನಿವಾರ ನಮ್ಮ ಪಾದಯಾತ್ರೆ ಆರಂಭವಾಗಲಿದೆ. ಆಗಸ್ಟ್ 3ರ ಶನಿವಾರದಿಂದ 7 ದಿನಗಳ ಕಾಲ ಪಾದಯಾತ್ರೆ ನಡೆಯಲಿದೆ. ಆಗಸ್ಟ್ 10ರಂದು ಪಾದಯಾತ್ರೆಯ ಸಮಾರೋಪ ಸಮಾರಂಭ ಮೈಸೂರಿನಲ್ಲಿ ಇರಲಿದೆ. ಅಂದು ರಾಷ್ಟ್ರೀಯ ನಾಯಕರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಕೇಂದ್ರ ಸಚಿವ ಹೆಚ್‌ಡಿಕೆಗೆ ಮೂಗಿನಿಂದ ‌ದಿಢೀರ್‌ ರಕ್ತಸ್ರಾವ – ಆಸ್ಪತ್ರೆಗೆ ಕರೆದೊಯ್ದ ಸಿಬ್ಬಂದಿ

  • ಮುಡಾ ಹಗರಣ ಸಿಬಿಐ ತನಿಖೆ ಮಾಡಿದ್ರೆ ಬಿಎಸ್‌ವೈ ಇದ್ದಾನೋ, ಬಿವೈವಿ ಇದ್ದಾನೋ ಎಂದು ಗೊತ್ತಾಗುತ್ತೆ: ಯತ್ನಾಳ್

    ಮುಡಾ ಹಗರಣ ಸಿಬಿಐ ತನಿಖೆ ಮಾಡಿದ್ರೆ ಬಿಎಸ್‌ವೈ ಇದ್ದಾನೋ, ಬಿವೈವಿ ಇದ್ದಾನೋ ಎಂದು ಗೊತ್ತಾಗುತ್ತೆ: ಯತ್ನಾಳ್

    – ಎಲ್ಲಾ ಪಕ್ಷದ ಒಳ ಒಪ್ಪಂದದ ಗಿರಾಕಿಗಳು ಹೊರಬಂದು ಹೊಸ ಪಕ್ಷ ಕಟ್ಟಲಿ

    ವಿಜಯಪುರ: ಮೈಸೂರಿನ ಮುಡಾ ಹಗರಣ (MUDA Scam) ಸಿಬಿಐ ತನಿಖೆ ಮಾಡಿದರೆ ಯಡ್ಡಿಯೂರಪ್ಪ (B.S.Yediyurappa) ಇದ್ದಾನೋ, ವಿಜಯೇಂದ್ರ (B.Y Vijayendra) ಇದ್ದಾನೋ ಅಥವಾ ಯಡ್ಡಿಯೂರಪ್ಪರ ಅಕ್ಕನ ಮಕ್ಕಳು ಇದ್ದಾರೋ ಎಂಬುದು ಬಹಿರಂಗವಾಗಲಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಏಕವಚನದಲ್ಲೇ ಸ್ವಪಕ್ಷಿಯರ ವಿರುದ್ಧ ಹರಿಹಾಯ್ದಿದ್ದಾರೆ.

    ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ಮುಡಾ ಹಗರಣ ತನಿಖೆಯನ್ನು ಸಿಬಿಐಗೆ ನೀಡಿದರೆ ಮಾತ್ರ ಸತ್ಯ ಬಹಿರಂಗವಾಗಲಿದೆ. ಹೀಗಾಗಿ ಹಗರಣದ ತನಿಖೆಯನ್ನು ಸಿಬಿಐಗೆ ನೀಡಬೇಕು. ಈ ಪ್ರಕರಣ ಸರಿಯಾಗಿ ತನಿಖೆಯಾದ್ರೆ ಸಿಎಂ ಸಿದ್ದರಾಮಯ್ಯ ದಲಿತ ಹಾಗೂ ಕಾಂಗ್ರೆಸ್ ವಿರೋಧಿ ಎಂಬುದು ಬಹಿರಂಗವಾಗುತ್ತದೆ ಎಂದು ಅವರು ಹೇಳಿದ್ದಾರೆ.

    ಮುಂದುವರಿದು ಮಾತನಾಡಿದ ಅವರು, ರಾಜು ಯಾರ ಶಿಷ್ಯ ಎಂದು ವಿಜಯೇಂದ್ರ ಹೇಳಬೇಕು. ಲೋಕಸಭೆ ಚುನಾವಣೆ ವೇಳೆ ರಾಜು ಯಾಕೆ ಕಾಂಗ್ರೆಸ್ ಸೇರಿದ್ದು? ರಾಜಕೀಯ ಹೊಂದಾಣಿಕೆಗಾಗಿ ಮಾಡಿದ ತಂತ್ರ ಇದು. ಮೈಸೂರು, ಚಾಮರಾಜನಗರ ಗೆಲ್ಲಲು ಕಾಂಗ್ರೆಸ್‌ಗೆ ಪರೋಕ್ಷವಾಗಿ ಬೆಂಬಲ ನೀಡಲು ಸೇರಿದ್ದು. ಅಲ್ಲದೇ ಸಿದ್ದರಾಮಯ್ಯ ನೇತೃತ್ವದಲ್ಲಿ ಇದನ್ನೆಲ್ಲ ಮುಚ್ಚಿ ಹಾಕಲು ಕಾಂಗ್ರೆಸ್ ಸೇರಿದ್ದಾನೆ. ಇದು ರಾಜು ಬಿಜೆಪಿಯಲ್ಲಿದ್ದಾಗಲೇ ಆದ ಹಗರಣ ಎಂದು ಅವರು ಆರೋಪಿಸಿದ್ದಾರೆ.

    ಮುಡಾ ಹಗರಣದಲ್ಲಿ ಕೇವಲ ಸಿಎಂ ಸಿದ್ದರಾಮಯ್ಯ ಅವರನ್ನು ಮಾತ್ರ ಟಾರ್ಗೆಟ್ ಮಾಡಿದರೆ ಸಾಲದು, ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಯಡಿಯೂರಪ್ಪ, ಸಿದ್ಧರಾಮಯ್ಯ, ಡಿಕೆಶಿ ಮತ್ತು ಜಮೀರ್ ಅಹ್ಮದ್ ಹೊಂದಾಣಿಕೆ ರಾಜಕಾರಣ ಮಾಡಿದವರೇ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

    ಮೂರು ರಾಜಕೀಯ ಪಕ್ಷಗಳಲ್ಲಿಯೂ ಒಳ ಒಪ್ಪಂದದ ಗಿರಾಕಿಗಳಿದ್ದಾರೆ. ಅವರೆಲ್ಲ ಹೊರಗೆ ಬಂದು ಒಂದು ಹೊಸ ಪಕ್ಷ ಕಟ್ಟಬೇಕು. ಅದಕ್ಕೆ ಒಳ ಒಪ್ಪಂದದ ಪಾರ್ಟಿ ಎಂದು ಹೆಸರಿಡಬೇಕು. ಆಗ ಉಳಿದ ಪಕ್ಷಗಳು ಸರಿ ಆಗುತ್ತವೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

    ಈಗ ಎಲ್ಲಾ ಸೋತ ಎಂಪಿಗಳು ಮಾತನಾಡಲು ಶುರು ಮಾಡಿದ್ದಾರೆ. ಪಾಪಾ ಈಶ್ವರಪ್ಪನವರಿಗೂ ಅನ್ಯಾಯ ಮಾಡಿದ್ರೂ. ಅವರು ಏನು ತಪ್ಪು ಮಾಡಿದ್ದರು ಎಂದು ಅವರು ಇದೇ ವೇಳೆ ಹೇಳಿದ್ದಾರೆ.

  • 40 ವರ್ಷವಾದರೂ ನನಗೆ ಬದಲಿ ನಿವೇಶನ ಸಿಕ್ಕಿಲ್ಲ – ಕೇಂದ್ರ ಸಚಿವ ಹೆಚ್‌ಡಿಕೆ

    40 ವರ್ಷವಾದರೂ ನನಗೆ ಬದಲಿ ನಿವೇಶನ ಸಿಕ್ಕಿಲ್ಲ – ಕೇಂದ್ರ ಸಚಿವ ಹೆಚ್‌ಡಿಕೆ

    – ಸಿದ್ದರಾಮಯ್ಯ ತಮ್ಮ ಹೆಸರಿಗೆ ಕಳಂಕ ಬರುವಂತೆ ಮಾಡಿಕೊಂಡಿದ್ದಾರೆ
    – ಯಡಿಯೂರಪ್ಪ ಕಾಲದಲ್ಲೂ ನನ್ನ ವಿರುದ್ಧ ತನಿಖೆ ಆಗಿತ್ತು ಎಂದ ಸಚಿವ

    ನವದೆಹಲಿ: ಮುಖ್ಯಮಂತ್ರಿಗಳು (Chief Minister) ಈ ಮಟ್ಟಿಗೆ ಇಳಿಯುತ್ತಾರೆ ಅಂದುಕೊಂಡಿರಲಿಲ್ಲ. ತಮ್ಮ ಹೆಸರಿಗೆ ಕಳಂಕ ಬರುವಂತೆ ಮಾಡಿಕೊಂಡಿದ್ದಾರೆ. ಕಳಂಕ ತೊಳೆದುಕೊಳ್ಳಲು ಹಿಂದುಳಿದ ನಾಯಕ, ಬಡವರ ಪರ ಹೋರಾಟ ಮಾಡಿದವರು ಅಂತ ಹೇಳಿಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ಅವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮುಡಾ ಹಗರಣ ಆರೋಪ ಕುರಿತು ಮಾತನಾಡಿದ್ದಾರೆ. ಮುಖ್ಯಮಂತ್ರಿಗಳು ಈ ಮಟ್ಟಿಗೆ ಇಳಿಯುತ್ತಾರೆ ಅಂದುಕೊಂಡಿರಲಿಲ್ಲ. ಹೆಸರಿಗೆ ಕಳಂಕ ಬರುವಂತೆ ಮಾಡಿಕೊಂಡಿದ್ದಾರೆ. ಕಳಂಕ ತೊಳೆದುಕೊಳ್ಳಲು ಹಿಂದುಳಿದ ನಾಯಕ, ಬಡವರ ಪರ ಹೋರಾಟ ಮಾಡಿದವರು ಅಂತ ಹೇಳಿಕೊಳ್ಳುತ್ತಿದ್ದಾರೆ. ಇದನ್ನೆಲ್ಲ ಮುಂದಿಟ್ಟುಕೊಂಡು ರಕ್ಷಿಸಿಕೊಳ್ಳಬೇಕಾದ ದಯನೀಯ ಸ್ಥಿತಿ ಬಂದಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: 2028ರೊಳಗೆ ಮತ್ತೆ ರಾಮನಗರ ಅಂತ ಬರುತ್ತೆ – ರಾಮನ ಹೆಸರು ತೆಗೆಯಲು ಸಾಧ್ಯವಿಲ್ಲ: ಹೆಚ್‌ಡಿಕೆ ತಿರುಗೇಟು

    ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ (Valmiki Corporation) ಅಕ್ರಮವಾಗಿದೆ ಅಂತ ಅವರೇ ಒಪ್ಪಿಕೊಂಡಿದ್ದಾರೆ. ಮೊದಲು ವೀರಾವೇಷದಲ್ಲಿ ವಿಧಾನಸಭೆಯಲ್ಲಿ ಮಾತನಾಡುತ್ತಿದ್ದರು. ಈಗ ವೀರಾವೇಷ ಏನಾಗಿದೆ? ನೈತಿಕತೆ ಏನಾಗಿದೆ? ಪಾರದರ್ಶಕ ಆಡಳಿತ ಅಂತಾರೆ, ಮಗ ಏನೇಲ್ಲ ಮಾಡಿದರು? ಇವರಿಗೆ ಮಾತನಾಡಲು ಶಕ್ತಿಯಿಲ್ಲದೇ ಮಂತ್ರಿ ಕೈಯಲ್ಲಿ ಹೇಳಿಕೆ ಕೊಡಿಸ್ತಿದ್ದಾರೆ. 1984 ರಲ್ಲಿ ನಾನು ಸಿನಿಮಾ ಹಂಚಿಕೆದಾರನಾಗಿ ವ್ಯವಹಾರ ಮಾಡ್ತಿದ್ದೆ. ಮೈಸೂರಿನಲ್ಲಿ ಕಚೇರಿ ಇಟ್ಟುಕೊಂಡಿದ್ದೆ. ಆ ವೇಳೆ ಸಿಐಟಿಬಿಯಿಂದ ಅರ್ಜಿ ಹಾಕಿದ್ದೆ. ಇಂಡಸ್ಟ್ರಿಯಲ್ ಸೈಟ್ ಕೇಳಿ ಅರ್ಜಿ ಹಾಕಿದ್ದೆ, ಸರ್ಕಾರದ ಭೂಮಿಯನ್ನು ಧರ್ಮಕ್ಕೆ ಬರೆಸಿಕೊಂಡಿಲ್ಲ. ಆದ್ರೆ ಇವರು 14 ಸೈಟು ತಗೊಂಡ್ರಲ್ಲ ಯಾವ ಆಧಾರದ ಮೇಲೆ ತಗೊಂಡ್ರು? 21 ಸಾವಿರ ಚದರಡಿ ಸೈಟನ್ನು ನೀಡಿದ್ದರು? ರಾಜಕೀಯಕ್ಕೆ ಬರುವ ಮುನ್ನ 15 ವರ್ಷ ಮೈಸೂರಿನಲ್ಲಿ ಕಚೇರಿ ಹೊಂದಿದ್ದೆ. ಆದರೂ ಸೈಟ್ ಕೊಟ್ಟಿಲ್ಲ, ಕೇವಲ ಲೆಟರ್ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಫ್ಯಾಂಟಸಿ ಪಾರ್ಕ್‌ ಮಾದರಿಯಲ್ಲಿ ಬೃಂದಾವನ ಗಾರ್ಡನ್ ಅಭಿವೃದ್ಧಿಪಡಿಸಲು ಸಂಪುಟ ಅಸ್ತು – 2,633 ಕೋಟಿ ರೂ. ಯೋಜನೆಗೆ ಒಪ್ಪಿಗೆ

    ಈ ಹಿಂದೆ ನಮ್ಮ ವಿರುದ್ಧವೂ ಸಿಐಡಿ, ಲೋಕಾಯುಕ್ತ ತನಿಖೆ ನಡೆದಿದೆ. ದೇವೇಗೌಡರ ಕುಟುಂಬ 500ಕ್ಕೂ ಹೆಚ್ಚಿನ ನಿವೇಶನ ಪಡೆದಿದೆ ಅಂತ ಆರೋಪ ಮಾಡಿದ್ದರು. ಎಲ್ಲ ತನಿಖೆ ಮಾಡಿದ ಬಳಿಕವೂ ಸಾಬೀತಾಗಿಲ್ಲ. ಆಗ ಹೆಚ್‌.ಡಿ ದೇವೇಗೌಡರು ಒಂದು ಸೈಟಿಗೆ ಮನವಿ ಮಾಡಿದ್ದರು. ನಮ್ಮ ಚಿಕ್ಕಮ್ಮನಿಗೆ ಸೈಟು ಕೊಡಿ ಎಂದು ಮನವಿ ಮಾಡಿದ್ದರು. ಯಡಿಯೂರಪ್ಪ ಕಾಲದಲ್ಲೂ ತನಿಖೆ ಆಯ್ತು, ಏನು ಆಗಲಿಲ್ಲ. 70*280 ಸೈಟ್ ನೀಡಿದ ಪತ್ರ ನೀಡಿದ್ದೀರಿ, ಆದರೆ ಹಕ್ಕು ಪತ್ರ ನೀಡಿಲ್ಲ ಅಂತ 2,000 ಇಸವಿಯಲ್ಲಿ ರಲ್ಲಿ ನಾನು ಒಂದು ಪತ್ರ ಬರೆದಿದ್ದೆ. 2006 ರಲ್ಲಿ ಸಿಎಂ ಆಗಿದ್ದೆ ಮುಖ್ಯಮಂತ್ರಿಯಾಗಿ ಈ ಸೈಟು ತಗೊಳ್ಳಲು ಆಗ್ತಿರಲಿಲ್ವ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: Women’s Asia Cup: ಸ್ಮೃತಿ, ರೇಣುಕಾ ಶೈನ್‌ – ಬಾಂಗ್ಲಾ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ; ಫೈನಲ್‌ ಪ್ರವೇಶಿಸಿದ ಭಾರತ!

    ಬದಲಿ ನಿವೇಶನ ಸಿಕ್ಕಿಲ್ಲ:
    ಬೆಂಗಳೂರಿನಲ್ಲಿ ಏನೇಲ್ಲ ನಡೆದಿದೆ ತೆಗೆದ್ರೆ ಬ್ರಹ್ಮಾಂಡ ಇದೆ. 2017 ರಲ್ಲಿ ಮತ್ತೊಂದು ಪತ್ರ ಬರೆದೆ. ಸಾ.ರಾ ಮಹೇಶ ನ್ಯಾಯವಾದ ಸೈಟ್ ಪಡೆದುಕೊಳ್ಳಿ ಎಂದು ಮನವಿ ಮಾಡಿದರು, ಅದಕ್ಕಾಗಿ ಪತ್ರ ಬರೆದಿದ್ದೆ. 40 ವರ್ಷ ಆದರೂ ನನಗೆ ಬದಲಿ ನಿವೇಶನ ನೀಡಿಲ್ಲ. ದುಡ್ಡು ಕೊಟ್ಟರೂ ನನಗೆ ಈವರೆಗೂ ನಿವೇಶನ ನೀಡಿಲ್ಲ. 2017ರಲ್ಲಿ ಹಂಚಿಕೆಯಾದ ನಿವೇಶನದಲ್ಲಿ 8,000 ಚದರಾಡಿ ಕಡಿಮೆಯಾಗಿದೆ ಎಂದು ಮೂಡಾ ಹೇಳಿತ್ತು. ಕುಮಾರಸ್ವಾಮಿ ನಾನು ಸಾಮಾನ್ಯ ಪ್ರಜೆ, ಪ್ರಜೆಯಾಗಿ ಒಂದು ಅರ್ಜಿ ಹಾಕಲು ಅಧಿಕಾರ ಇಲ್ವ? ನನ್ನ ಪರಿಸ್ಥಿತಿಯೇ ಹೀಗೆ ಆದರೆ ಬಡವರ ಪರಿಸ್ಥಿತಿ ಏನು? ಯಾವ ತನಿಖೆ ಮಾಡ್ತೀರಿ, ಇದನ್ನು ನಿಮ್ಮ ಮಗ ಅಥವಾ ಹೆಂಡ್ತಿ ಹೆಸರಿಗೆ ಅಥಾವ ಬೈರತಿ ಸುರೇಶ್ ಹೆಸರಿಗೆ ಬರೆಯುತ್ತೇನೆ ಬಿಡಿ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: 15 ತಿಂಗಳಲ್ಲಿ 1,200 ರೈತರ ಆತ್ಮಹತ್ಯೆ – ಕಾಂಗ್ರೆಸ್ ಸರ್ಕಾರದಲ್ಲಿ ರೈತರಿಗಿಲ್ಲ ಉಜ್ವಲ ಭವಿಷ್ಯ: ಜೋಶಿ

  • ರಾಜ್ಯಸಭೆಯಲ್ಲೂ ವಾಲ್ಮೀಕಿ ನಿಗಮದ ಹಗರಣ, ಮುಡಾ ಪ್ರಕರಣದ ಸದ್ದು – ಕೋಟಿ ಕೋಟಿ ಲೂಟಿ ಆರೋಪ

    ರಾಜ್ಯಸಭೆಯಲ್ಲೂ ವಾಲ್ಮೀಕಿ ನಿಗಮದ ಹಗರಣ, ಮುಡಾ ಪ್ರಕರಣದ ಸದ್ದು – ಕೋಟಿ ಕೋಟಿ ಲೂಟಿ ಆರೋಪ

    – ಎಸ್ಟಿ ಸಮುದಾಯದ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣ ದುರುಪಯೋಗ – ಈರಣ್ಣ ಕಡಾಡಿ

    ನವದೆಹಲಿ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣ (Valmiki Scam) ಇದೀಗ ರಾಜ್ಯಸಭೆಯಲ್ಲಿ (Rajya Sabha) ಪ್ರತಿಧ್ವನಿಸಿದ್ದು, ಸಂಸದ ಈರಣ್ಣ ಕಡಾಡಿ (Eranna Kadadi) ವಾಲ್ಮೀಕಿ ಹಗರಣ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

    ಎಸ್ಟಿ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣ ದುರುಪಯೋಗ ಆಗಿದೆ ಎಂದು ಈರಣ್ಣ ಕಡಾಡಿ ರಾಜ್ಯಸಭೆಯಲ್ಲಿ ಆರೋಪಿಸಿದರು. ಇದಕ್ಕೆ ಕಾಂಗ್ರೆಸ್ (Congress) ಸಂಸದರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಆಸನದಿಂದ ಎದ್ದು ಗಲಾಟೆ ಮಾಡಿದರು. ಇದೇ ವಿಚಾರವಾಗಿ ಮಾತನಾಡಲು ನಮಗೂ ಅವಕಾಶ ಕೊಡಿ ಎಂದು ಪಟ್ಟು ಹಿಡಿದರು. ಇದನ್ನೂ ಓದಿ: ಟಿಬಿ ಡ್ಯಾಂನ 30 ಕ್ರಸ್ಟ್‌ ಗೇಟ್‌ ಓಪನ್‌; 90‌,000 ಕ್ಯುಸೆಕ್‌ ನೀರು ನದಿಗೆ – ಹಂಪಿಯ ಹಲವು ಸ್ಮಾರಕಗಳು ಮುಳುಗಡೆ

    ಕರ್ನಾಟಕದ ಅಭಿವೃದ್ಧಿಗೆ ಇಟ್ಟ ಹಣ ಹಾಡಹಗಲೇ ಲೂಟಿ ಮಾಡಿದ್ದಾರೆ. 187 ಕೋಟಿ ರೂ. ಹಣ ತೆಲಂಗಾಣ ಚುನಾವಣೆಗೆ ಬಳಕೆ ಮಾಡಲಾಗಿದೆ. ಇದನ್ನು ರಾಜಕೀಯ ಮಾಡೋಕೆ ಕಾಂಗ್ರೆಸ್ ಹೊರಟಿದೆ. ಹಾಗಾಗಿ ಈ ಸದನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕಡಾಡಿ ಆಗ್ರಹಿಸಿದರು. ಈರಣ್ಣ ಕಡಾಡಿಯವರ ಈ ಮಾತಿಗೆ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಿಜೆಪಿ ಅವಧಿಯಲ್ಲಿ ಬದಲಿ ನಿವೇಶನ – ಮುಡಾ ಸೈಟ್ ಹಂಚಿಕೆ ದಾಖಲೆ ಬಿಡುಗಡೆ ಮಾಡಿದ ಕಾಂಗ್ರೆಸ್

    ಇನ್ನು ಈ ಕುರಿತು ದೆಹಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ ನಿತ್ಯ ಒಂದು ಅವ್ಯವಹಾರ ಹೊರಬರುತ್ತಿದೆ. ಗ್ಯಾರಂಟಿ ಯೋಜನೆಗಳಿಗೆ ಬೇರೆ ಬೇರೆ ಇಲಾಖೆಯ ಹಣ ಬಳಕೆಯಾಗಿದೆ. ವಾಲ್ಮೀಕಿ ನಿಗಮ ಮಂಡಳಿ ಹಣವನ್ನು ದುರ್ಬಳಕೆ ಮಾಡಿಕೊಂಡಿದೆ. ಬೇನಾಮಿ ಖಾತೆಗೆ ಹಣ ಜಮೆಯಾಗುವುದಲ್ಲದೇ ಮದ್ಯ ಖರೀದಿ ಮಾಡಿದೆ. ಶೋಷಿತ ಜನಾಂಗದ ಹಣವನ್ನು ಚುನಾವಣೆಯಲ್ಲಿ ಅಭ್ಯರ್ಥಿಗಳ ಬಳಕೆಗೆ ಬಳಸಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಮೂಗರ ಭಾಷೆ ಗೇಲಿ ಮಾಡಿ ಅಪಹಾಸ್ಯ – ರೇಡಿಯೊ ಜಾಕಿ ಸೇರಿದಂತೆ ಇಬ್ಬರು ಅರೆಸ್ಟ್

    ಮುಡಾದಲ್ಲಿ (MUDA) ಸಿಎಂ ಕುಟುಂಬಸ್ಥರಿಂದ ಅಕ್ರಮವಾಗಿದೆ. ಶೋಷಿತರ ರಕ್ಷಣೆ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಅವರ ಹಣ ಕೊಳ್ಳೆ ಹೊಡೆಯುತ್ತಿದ್ದಾರೆ. ಈ ಬಗ್ಗೆ ನಾನು ರಾಜ್ಯಸಭೆಯಲ್ಲಿ ಮಾತನಾಡಿದ್ದೇನೆ. ಹಣ ದುರುಪಯೋಗದ ಬಗ್ಗೆ ಚರ್ಚಿಸಲು ಕಾಂಗ್ರೆಸ್ ಸಿದ್ಧವಿಲ್ಲ. ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿ ಚರ್ಚೆ ಆಗದಂತೆ ನೋಡಿಕೊಂಡಿದೆ. ಬಿಜೆಪಿ ನಿರಂತರ ಹೋರಾಟ ಮಾಡುತ್ತಿದೆ. ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ತನಿಖೆಗೆ ಆಗ್ರಹಿಸಿದ್ದೇವೆ. ಎಐಸಿಸಿಗೂ ಕರ್ನಾಟಕದಿಂದ ಹಣ ಹೋಗಿದೆ ಎಂದು ಜನರು ಮಾತನಾಡುತ್ತಿದ್ದಾರೆ. ಇದರಿಂದ ಹೊರ ಬರಲು ಸಿಎಂ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: KRSನಿಂದ 1 ಲಕ್ಷ ಕ್ಯುಸೆಕ್ ನೀರು ಬಿಡುಗಡೆ – ಕಾವೇರಿ ಕೊಳ್ಳದಲ್ಲಿ ಪ್ರವಾಹ

  • ಬಿಜೆಪಿ ಅವಧಿಯಲ್ಲಿ ಬದಲಿ ನಿವೇಶನ – ಮುಡಾ ಸೈಟ್ ಹಂಚಿಕೆ ದಾಖಲೆ ಬಿಡುಗಡೆ ಮಾಡಿದ ಕಾಂಗ್ರೆಸ್

    ಬಿಜೆಪಿ ಅವಧಿಯಲ್ಲಿ ಬದಲಿ ನಿವೇಶನ – ಮುಡಾ ಸೈಟ್ ಹಂಚಿಕೆ ದಾಖಲೆ ಬಿಡುಗಡೆ ಮಾಡಿದ ಕಾಂಗ್ರೆಸ್

    – ಜಮೀನು ದಾಖಲೆ ಬಿಡುಗಡೆ ಮಾಡಿದ ಸಿಎಂ

    ಬೆಂಗಳೂರು: ಮುಡಾ ಹಗರಣ ವಿಚಾರವಾಗಿ ಕಾಂಗ್ರೆಸ್-ಬಿಜೆಪಿ (Congress-BJP) ನಡುವೆ ಜಟಾಪಟಿ ಜೋರಾಗಿದೆ. ತಮ್ಮ ಮೇಲಿನ ಆರೋಪಗಳನ್ನು ಅಲ್ಲಗಳೆದಿರುವ ಸಿಎಂ ಸಿದ್ದರಾಮಯ್ಯ (Siddaramaiah) , ಜಮೀನು ದಾಖಲೆ ಬಿಡುಗಡೆ ಮಾಡಿದ್ದಾರೆ.

    ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಬಿಜೆಪಿ ಅವಧಿಯಲ್ಲಿ ಬದಲಿ ನಿವೇಶನ ನೀಡಲಾಗಿತ್ತು ಎಂದು ಮುಡಾ (MUDA Scam) ಸೈಟ್ ಹಂಚಿಕೆ ದಾಖಲೆಯನ್ನು ಕಾಂಗ್ರೆಸ್ ನಾಯಕರು ಇದೇ ವೇಳೆ ಬಿಡುಗಡೆ ಮಾಡಿದರು.

    ಈ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮುಡಾ ಅವ್ಯವಹಾರ ನಡೆದಿದೆ ಅಂತಾ ಉಭಯ ಸದನದಲ್ಲಿ ನಿಲುವಳಿ ಸೂಚನೆ ಕೊಟ್ಟಿದ್ದರು. ವಿಧಾನಸಭೆಯಲ್ಲಿ ಸ್ಪೀಕರ್, ಪರಿಷತ್‌ನಲ್ಲಿ ಸಭಾಪತಿಗಳು ವಿಪಕ್ಷಗಳ ನಿಲುವಳಿ ಸೂಚನೆ ತಿರಸ್ಕಾರ ಮಾಡಿದ್ದರು. ಸದನದ ನಿಯಮಾವಳಿ ಪ್ರಕಾರ ಚರ್ಚೆ ಮಾಡೋದಕ್ಕೆ ಬರೊಲ್ಲ. ಚರ್ಚೆ ಮಾಡಿದ್ರೆ ಕೆಟ್ಟ ಸಂಪ್ರದಾಯ, ನಿಯಮಾವಳಿಗೆ ವಿರುದ್ಧ ಆಗುತ್ತೆ ಅಂತಾ ಹೇಳಿ ತಿರಸ್ಕಾರ ಮಾಡಿದ್ರು. ಚರ್ಚೆಗೆ ಸ್ಪೀಕರ್, ಸಭಾಪತಿಗಳು ಅವಕಾಶ ಇಲ್ಲ ಅಂತಾ ಎರಡು ಸದನದಲ್ಲಿ ರೂಲಿಂಗ್ ಕೊಟ್ಟಿದ್ದಾರೆ. ನಿಲುವಳಿ ಸೂಚನೆಯನ್ನ ತಿರಸ್ಕಾರ ಮಾಡಿದ್ದಾರೆ. ವಿಧಾನಸಭೆ ಮತ್ತು ಪರಿಷತ್‌ನಲ್ಲಿ ಬಿಜೆಪಿ-ಜೆಡಿಎಸ್ ರಾಜಕೀಯ ದುರುದ್ದೇಶದಿಂದ ಆಧಾರ ರಹಿತವಾಗಿ, ಕಾನೂನುಬಾಹಿರವಾಗಿರೋ ರೀತಿಯಲ್ಲಿ ಚರ್ಚೆ ನಿಲುವಳಿ ಸೂಚನೆ ತಂದಿದ್ದರು. ಬಿಜೆಪಿ-ಜೆಡಿಎಸ್ ಅವರು ರಾಜಕೀಯ ದುರುದ್ದೇಶದಿಂದ ತಂದಿರೋದು. ರಾಜಕೀಯ ಮಾಡೋಕೆ ತಂದಿದ್ದರು. ಯಾವುದೇ ನಿಲುವಳಿ ಸೂಚನೆ ಚರ್ಚೆ ಆಗಬೇಕಾದ್ರೆ ನಿಯಮದ ಪ್ರಕಾರ ಇರಬೇಕು. ನಿಯಮದ ವಿರುದ್ಧ ಇದ್ದರೆ ಚರ್ಚೆ ಮಾಡೋಕೆ ಬರೊಲ್ಲ ಎಂದು ತಿಳಿಸಿದರು.

    ವಿಪಕ್ಷಗಳಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರೋದು ಸಹಿಸೋಕೆ ಆಗ್ತಿಲ್ಲ. ನಾನು ಎರಡನೇ ಬಾರಿ ಸಿಎಂ ಆಗಿರೋದು ಸಹಿಸೋಕೆ ಆಗ್ತಿಲ್ಲ. ನಾವು ಎರಡು ವಾರ ಅಧಿವೇಶನ ಕರೆದಿದ್ದೆವು. ಎರಡು ವಾರ ಒಂದೇ ವಿಷಯ ಚರ್ಚೆ ಆಯ್ತು. ವಾಲ್ಮೀಕಿ ನಿಗಮದಲ್ಲಿ ನಡೆದಿರೋ ಹಗರಣ ಕುರಿತು ಚರ್ಚೆ ಆಯ್ತು. ಅದು ಬಿಟ್ಟರೆ ರಾಜ್ಯದ ಸಮಸ್ಯೆ ಬಗ್ಗೆ ಚಕಾರ ಎತ್ತಲಿಲ್ಲ. ಪ್ರವಾಹ ಬಂದಿರುವ ಬಗ್ಗೆ ರಾಜ್ಯದಲ್ಲಿ ನಮ್ಮ ಶಾಸಕರು ಪ್ರಸ್ತಾಪ ಮಾಡಿದ್ರು. ವಿಪಕ್ಷಗಳು ಪ್ರಸ್ತಾಪ ಮಾಡಲಿಲ್ಲ. ಬೇರೆ ವಿಚಾರಗಳ ಬಗ್ಗೆ ವಿಪಕ್ಷಗಳು ಚರ್ಚೆ ಮಾಡಿಲ್ಲ. ಇದೆಲ್ಲ ನೋಡಿದ್ರೆ ಸಿಎಂ, ರಾಜ್ಯ ಸರ್ಕಾರಕ್ಕೆ, ಸಿಎಂ ವ್ಯಕ್ತಿತ್ವಕ್ಕೆ ಮಸಿ ಬಳಿಯಬೇಕು, ಕಪ್ಪು ಚುಕ್ಕೆ ತರೋಕೆ ಪ್ರಯತ್ನ ಮಾಡಿದ್ರು ಎಂದು ವಾಗ್ದಾಳಿ ನಡೆಸಿದರು.

    ಮುಡಾ ಕೇಸ್ ಬಗ್ಗೆ ಮಾತನಾಡಿ, ಇದು ಪಿತ್ರಾರ್ಜಿತ ಆಸ್ತಿ. ಜಮೀನು ಮಾಲೀಕ ನಿಂಗಾ ಬಿನ್ ಜವರಾ 2-8-1935 ರಲ್ಲಿ ಮೈಸೂರು ತಾಲೂಕು ಕಚೇರಿಗೆ ಅರ್ಜಿ ಕೊಡ್ತಾರೆ. ಅದರ ಮೇಲೆ ಹರಾಜ್ ನಡೆಯುತ್ತದೆ. ಆಗ ಹರಾಜಿನ ಮೊತ್ತ 3 ರೂಪಾಯಿ. 26-9-1935 ರಲ್ಲಿ ಹರಾಜು ನೋಟಿಸ್ ಕೊಡ್ತಾರೆ. 13-10-1935 ರಲ್ಲಿ ಹರಾಜಿನಲ್ಲಿ ಭಾಗವಹಿಸಿ ಒಂದು ರೂಪಾಯಿಗೆ ಕೂಗುತ್ತಾರೆ. ಆಗ ಕೂಗಿದಾಗ ಬೇರೆ ಯಾರೂ ಇರೋದಿಲ್ಲ, ನಿಂಗಾ ಒಬ್ಬರೇ ಇರುತ್ತಾರೆ. ಆಗ ನಿಂಗಾಗೆ ಹರಾಜಿನಲ್ಲಿ 1 ರೂ.ಗೆ ಕ್ರಯ ಆಗುತ್ತದೆ. 13-10-1935 ರಲ್ಲಿ ಹರಾಜಿನಲ್ಲಿ ಕ್ರಯ ಆಯ್ತು ಅದಕ್ಕೆ ಸೇಲ್ ಕನ್ಫರ್ಮ್ ಆಗುತ್ತದೆ. ಈ ಜಮೀನು ಹರಾಜಿನ ಮೂಲಕ ಬಂದಿರೋದು ಎಂದು ಸೇಲ್ ಕನ್ಫರ್ಮ್ ದಾಖಲಾತಿಯನ್ನು ಸಿಎಂ ಬಿಡುಗಡೆ ಮಾಡಿದರು.

    ಇದು ಸ್ವಯಾರ್ಜಿತ ಆಸ್ತಿ, ಇದಕ್ಕೆ PTCL ಕಾಯ್ದೆ ಅನ್ವಯ ಆಗುವುದಿಲ್ಲ. ಬಿಜೆಪಿ-ಜೆಡಿಎಸ್ ತಪ್ಪು ಮಾಹಿತಿ ಕೊಡ್ತಿದ್ದಾರೆ. ಬಹಳ ಹರಸಾಹಸ, ಕುಟಿಲ ಸಾಹಸ ಮಾಡ್ತಿದ್ದಾರೆ. ಹರಾಜಿನಲ್ಲಿ ಕೊಂಡುಕೊಂಡಿದ್ದರೂ PTCL ಕಾಯ್ದೆ ಅನ್ವಯ ಆಗುತ್ತೆ ಅಂತಾ ಹೇಳಿದ್ದಾರೆ. ಈ ಸೇಲ್ ಕಾನೂನು ಪ್ರಕಾರ ಇದೆ. ನಿಂಗಾ ಬಿನ್ ಜವರಾಗೆ ಮೂರು ಜನ ಮಕ್ಕಳು ಇರುತ್ತಾರೆ. ಮಲ್ಲಯ್ಯ, ಮೈಲಾರಯ್ಯ, ದೇವರಾಜ್ ಎಂದು ಸಿಎಂ ವಂಶವೃಕ್ಷ ಬಿಡುಗಡೆ ಮಾಡಿದರು. ಮಲ್ಲಯ್ಯನಿಗೆ ವಾರಸುದಾರರು ಇರೋದಿಲ್ಲ. 2ನೇ ಮಗ ಮೈಲಾರಯ್ಯ ಹೆಂಡತಿ ಪುಟ್ಟಗೌರಮ್ಮ ಅವರ ಮಗ ಒ.ಮಂಜುನಾಥ್ ಸ್ವಾಮಿ. ದೇವರಾಜ್ ಮೂರನೇ ಮಗ. ವಂಶವೃಕ್ಷಕ್ಕೆ ಮೂರು ಜನ ಸಹಿ ಹಾಕಿದ್ದಾರೆ. ಮಲ್ಲಯ್ಯ, ಪುಟ್ಟಗೌರಮ್ಮ, ದೇವರಾಜು, ಮಂಜುನಾಥ್ ಸ್ವಾಮಿ ಮೂರು ಜನರು ಸಹಿ ಹಾಕಿದ್ದಾರೆ. ಹೀಗಾಗಿ ವಂಶವೃಕ್ಷ ಸರಿಯಾಗಿದೆ. ವಂಶವೃಕ್ಷದ ಪ್ರಕಾರ ಮಲ್ಲಯ್ಯ, ಮೈಲಾರಯ್ಯ, ದೇವರಾಜ್ ನಿಂಗಾನ ಮಕ್ಕಳು ಎಂದರು.

    10-4-1993 ರಲ್ಲಿ ದೇವರಾಜ್ ಅನ್ನೋರಿಗೆ ಖಾತೆ ಮಾಡೋಕೆ ಏನು ವಿರೋಧ ಇಲ್ಲ ಅಂತಾ ಸರ್ಕಾರಕ್ಕೆ ಖಾತೆ ಬರೆದುಕೊಡ್ತಾರೆ. ಮಲ್ಲಯ್ಯ, ಪುಟ್ಟಗೌರಮ್ಮ, ದೇವರಾಜ್ ಸಹಿ ಮಾಡಿಕೊಟ್ಟಿರುತ್ತಾರೆ. ಖಾತೆ ಮಾಡಿಕೊಡೋಕೆ ನಮಗೆ ಯಾವುದೇ ವಿರೋಧ ಇಲ್ಲ ಅಂತಾ ಸಹಿ ಹಾಕಿದ್ದಾರೆ. ನಾವು ಮಾಡಿಸಿರೋ ಸಹಿಯಲ್ಲ ಅವರು ಮಾಡಿರೋದು. ಇಷ್ಟೆಲ್ಲ ಇದ್ದರೂ ಬಿಜೆಪಿ ಅವರು ಸುಳ್ಳು ಹೇಳೋದ್ರಲ್ಲಿ ನಿಸ್ಸೀಮರು. ಇದಾದ ಮೇಲೆ ಪಹಣಿ ಕೂಡಾ ದೇವರಾಜ್ ಹೆಸರಲ್ಲಿ ಆಗಿದೆ ಎಂದು ಸಿಎಂ ದಾಖಲಾತಿಗಳ ಮಾಹಿತಿ ಓದಿದರು. ಎಲ್ಲರೂ ಸಹಿ ಹಾಕಿದ ಆಧಾರದಲ್ಲಿ ದೇವರಾಜ್ ಹೆಸರಿನಲ್ಲಿ ದಾಖಲೆ ಆಗಿದೆ. ಹೀಗಾಗಿ ಬಿಜೆಪಿ ಹೇಳಿದ್ರಲ್ಲಿ ಸತ್ಯ ಇಲ್ಲ. ಬಿಜೆಪಿ ಅವರಿಗೆ ನಾಚಿಕೆ ಇಲ್ಲವಾ. ಮಾನ ಮರ್ಯಾದೆ ಇದೆಯಾ? ಮಂಜುನಾಥ್ ಸ್ವಾಮಿಯನ್ನ ಎತ್ತಿಕಟ್ಟಿ ನಮಗೂ ಭಾಗ ಬರಬೇಕು ಅಂತಾ ಬಿಜೆಪಿ ಅವರು ಎತ್ತಿಕ್ಕಿ ಹೇಳಿಕೆ ಕೊಡಿಸ್ತಾರೆ. 24 ವರ್ಷಗಳ ಮೇಲೆ ಚಿತಾವಣೆ ಮಾಡಿ ಮಂಜುನಾಥ್ ಎತ್ತಿಕಟ್ಟಿ ಆರೋಪ ಮಾಡ್ತಿದ್ದಾರೆ. ಮಂಜುನಾಥ್ ಸ್ವಾಮಿಯೂ ಅಂದು ಸಹಿ ಹಾಕಿದ್ದ. ಈಗ ನಮಗೂ ಭಾಗ ಬರಬೇಕು ಅಂತಾ ಹೇಳಿಸಿಕೊಡ್ತಿದ್ದಾರೆ ಬಿಜೆಪಿ ಅವರು. ಬಿಜೆಪಿ ಅವರಿಗೆ ಮಾನ ಮರ್ಯಾದೆ ಇದೆಯಾ? ಅವರು ಅನ್ಯೋನ್ಯವಾಗಿ ಇದ್ದರು. ಈ ಬಿಜೆಪಿ ಎತ್ತಿ ಕಟ್ಟಿದೆ. ಮನೆ ಮುರುಕರು ಬಿಜೆಪಿ ಅವರು. ದೇವರಾಜ್ ಹೆಸರಿಗೆ ಪಹಣಿಯಾಗಿದೆ. ಇದಾದ ಮೇಲೆ ಮುಡಾದವರು ಈ ಜಮೀನನ್ನ 464 ಸರ್ವೆ ನಂಬರ್ ಅನ್ನ 1992 ರಲ್ಲಿ ಪ್ರಾಥಮಿಕ ನೋಟಿಫಿಕೇಶನ್ ಹೊರಡಿಸುತ್ತಾರೆ ಸೈಟ್ ಮಾಡೋಕೆ. 1997 ರಲ್ಲಿ ಫೈನಲ್ ನೋಟಿಫಿಕೇಶನ್ ಆಗುತ್ತದೆ. ಬಿಜೆಪಿ-ಜೆಡಿಎಸ್ ಅವರು ಅರ್ಜಿ ಕೊಡದೆ ಡಿ-ನೋಟಿಫಿಕೇಶನ್ ಆಗಿದೆ ಅಂತಾರೆ. 1996-97 ರಲ್ಲಿ ಮಂತ್ರಿ ಆಗಿದ್ದವರು ಬಚ್ಚೇಗೌಡರು. ಜಮೀನುದಾರ ದೇವರಾಜ್ ಅವರು 13-8-1996 ರಲ್ಲಿ ಅರ್ಜಿ ಕೊಡ್ತಾರೆ. ನನಗೆ ನನ್ನ ತಂದೆ ಅವರಿಂದ ಪಿತ್ರಾರ್ಜಿತವಾಗಿ ಬಂದಿದ್ದು ಈ ಜಮೀನಿನಲ್ಲಿ ಜೀವನ ಮಾಡ್ತಿದ್ದೇನೆ. ದೇವರಾಜ್ ನಗರಾಭಿವೃದ್ಧಿ ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಬೇಕು ಅಂತಾ ಅರ್ಜಿ ಹಾಕಿರುತ್ತಾರೆ. ಆಗ ಡಿ-ನೋಟಿಫಿಕೇಶನ್ ಮಾಡೋಕೆ ಒಂದು ಸಮಿತಿ ಇರುತ್ತದೆ. ಬಾಲಸುಬ್ರಹ್ಮಣ್ಯನ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ಇತ್ತು ಎಂದು ಅಂದಿನ ಸಭಾ ನಡಾವಳಿ ಓದಿದರು.

    ಡಿ-ನೋಟಿಫಿಕೇಶನ್ 1998 ರಲ್ಲಿ ಆಗುತ್ತದೆ ಈ ಜಮೀನು. ಇದಾದ ಮೇಲೆ ಮಲ್ಲಿಕಾರ್ಜುನ ಸ್ವಾಮಿ 2004 ರಲ್ಲಿ ಜಮೀನು ಖರೀದಿ ಮಾಡ್ತಾರೆ. ದೇವರಾಜ್ ಅವರಿಂದ ಕ್ರಯ ಮಾಡಿಸಿಕೊಳ್ತಾರೆ. ದೇವರಾಜ್ ಹೆಂಡತಿ ಮಕ್ಕಳು ಸಹಿ ಮಾಡಿ ಕೊಟ್ಟಿದ್ದಾರೆ. ಕಾನೂನು ಪ್ರಕರ ಕ್ರಯ ಆಗುತ್ತದೆ. 2005 ರಲ್ಲಿ ಮಲ್ಲಿಕಾರ್ಜುನ ಸ್ವಾಮಿ ಲ್ಯಾಂಡ್ ಕನ್‌ವರ್ಷನ್ ಮಾಡಿಸಿಕೊಂಡಿದ್ದಾರೆ. ನಮ್ಮ ಮಾವನಿಗೆ ಮೂರು ಜನ ಮಕ್ಕಳು. ಮಲ್ಲಿಕಾರ್ಜುನ ಸ್ವಾಮಿ, ಜಗದೀಶ್ ಮತ್ತು ನನ್ನ ಹೆಂಡತಿ. ನನ್ನ ಹೆಂಡತಿ ಮದ್ಯದವಳು. ಆಗ ಭಾಗ ಆಯ್ತು. 2010 ರಲ್ಲಿ ದಾನಪತ್ರದ ಮೂಲಕ ನನ್ನ ಹೆಂಡತಿಗೆ ಮಲ್ಲಿಕಾರ್ಜುನ ಸ್ವಾಮಿ ಕೊಡ್ತಾರೆ. ಇದರಲ್ಲಿ ಏನಾದ್ರು ಅಕ್ರಮ ಇದೆಯಾ? 2013-2014 ರಲ್ಲಿ ನಮಗೆ ಗೊತ್ತಾಯ್ತು ಮುಡಾದವರು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡು ಸೈಟ್ ಮಾಡಿ, ಪಾರ್ಕ್ ಮಾಡಿದ್ದಾರೆ ಅಂತಾ. ಆಗ ನಾವು ನಮಗೆ ಪರ್ಯಾಯ ಜಮೀನು ಕೊಡಿ ಅಂತಾ ಅರ್ಜಿ ಹಾಕ್ತೀವಿ. ಇದರಲ್ಲಿ ಏನಾದ್ರು ತಪ್ಪು ಇದೆಯಾ? ಕಾನೂನು ಉಲ್ಲಂಘನೆ ಇದೆಯಾ? 2014ರಲ್ಲಿ ಸಿಎಂ ಆಗಿದ್ದಾಗ ಈ ವಿಚಾರವನ್ನು ನನ್ನ ಹೆಂಡತಿ ನನ್ನ ಗಮನಕ್ಕೆ ತರುತ್ತಾಳೆ. ಸಿಎಂ ಇದ್ದಾಗ ನಾನು ಇದನ್ನ ಮಾಡೊಲ್ಲ ಅಂತಾ ಹೇಳ್ತೀನಿ. ಆಮೇಲೆ ಮಾಡಿ ಅಂತಾ ನಾನು ಹೇಳಿರುತ್ತೇನೆ. 23-6-2014 ರಲ್ಲಿ ಮೊದಲ ಅರ್ಜಿ ಕೊಡಲಾಗುತ್ತದೆ. ಇದರ ಮೇಲೆ ಏನು ಆಕ್ಷನ್ ಆಗೊಲ್ಲ. 2017 ರಲ್ಲಿ ಮುಡಾ ಒಂದು ನಿರ್ಣಯ ಮಾಡ್ತಾರೆ. ಪ್ರಾಧಿಕಾರದಿಂದ ಭೂಸ್ವಾಧೀನ ಮಾಡಿಕೊಂಡಿದ್ದು ತಪ್ಪಾಗಿದೆ. ಬದಲಿ ಜಾಗ ನೀಡಲು ನಿರ್ಣಯ ಮಾಡಲಾಗಿತ್ತು. 2021 ರಲ್ಲಿ ನಾವು ಮತ್ತೆ ಮುಡಾಗೆ ಅರ್ಜಿ ಕೊಡ್ತೀವಿ. ನಮ್ಮ ಜಾಗದಲ್ಲಿ ನಿವೇಶನ ಮಾಡಿರೋದ್ರಿಂದ ಅಭಿವೃದ್ದಿ ಪಡಿಸಿದ 50:50 ನಿವೇಶನ ಅಡಿ ಕೊಡಿ ಅಂತಾ ನಾವು ಕೇಳಿದ್ವಿ. ಇಲ್ಲೇ ಕೊಡಿ ಅಂತಾ ನಾವು ಕೇಳಿಲ್ಲ. ಮುಡಾದವರೇ ವಿಜಯನಗರದಲ್ಲಿ ನಮಗೆ ಸೈಟ್ ಕೊಟ್ಟಿದ್ದಾರೆ ಎಂದು ತಿಳಿಸಿದರು.

    ನಮ್ಮದು 3 ಎಕರೆ 16 ಕುಂಟೆ ಅಂದರೆ ಒಟ್ಟು 1,48,000 ಚದರಡಿ. ನಮಗೆ ಅವರು ಕೊಟ್ಟಿರೋದು 38,284 ಚದರ ಅಡಿ. ನಮ್ಮಿಂದ ಜಮೀನು 1,48,000 ಚದರ ಅಡಿ ತಗೊಂಡು ನಮಗೆ 38,284 ಚದರ ಅಡಿ ಅಭಿವೃದ್ಧಿ ಪಡಿಸಿದ ಸೈಟ್ ಕೊಟ್ಟಿದ್ದಾರೆ. ಅಂದಿನ ಮುಡಾ ಕಮಿಟಿಯಲ್ಲಿ ರಾಮದಾಸ್, ಜಿಟಿ ದೇವೇಗೌಡ, ನಾಗೇಂದ್ರ ಇದ್ದರು. ಅಂದು ಅವರೇ ನಿರ್ಣಯ ಮಾಡಿದ್ದಾರೆ. ಅಭಿವೃದ್ಧಿ ಪಡಿಸಿದ 50:50 ಭೂ ಪರಿಹಾರ ಕೊಡಲು ಕಮಿಟಿ ನಿರ್ಧಾರ ಮಾಡಿದೆ. 50:50 ನಿರ್ಣಯದ ಪ್ರಕಾರ 909 ನಿವೇಶನ ಹಂಚಿಕೆ ಆಗಿರುತ್ತವೆ. ಒಟ್ಟು 1328 ನಿವೇಶನ ಅಂದು ಹಂಚಿಕೆ ಆಗಿವೆ. ನಾವು ಇಂತಹ ಜಾಗದಲ್ಲಿ ಕೊಡಿ ಅಂತಾ ಕೇಳಿಲ್ಲ. ಅವರೇ ಕೊಟ್ಟಿರೋದು. ಬಿಜೆಪಿ ಅವರೇ ಕಮಿಟಿಯಲ್ಲಿ ಇದಕ್ಕೆ ಒಪ್ಪಿಗೆ ಕೊಟ್ಡಿದ್ದಾರೆ. ಇದರಲ್ಲಿ ಅಕ್ರಮ ಎಲ್ಲಿ ಆಗಿದೆ. ವಿಜಯನಗರ ಬಡಾವಣೆಯಲ್ಲಿ ಬೇರೆ ಬೇರೆ ಅವರಿಗೂ 125 ಸೈಟ್ ಕೊಟ್ಟಿದ್ದಾರೆ. ನಮಗೂ ಹಾಗೇ ಕೊಟ್ಡಿದ್ದಾರೆ. ನನ್ನದಾಗಲಿ, ನನ್ನ ಹೆಂಡತಿ, ನನ್ನ ಬಾಮೈದನದ್ದು ತಪ್ಪು ಇದೆಯಾ ಎಂದು ಪ್ರಶ್ನಿಸಿದರು.

    ಬಿಜೆಪಿ ಅವಧಿಯಲ್ಲಿ ಯಾರು ಯಾರಿಗೆ ನಿವೇಶನ ಕೊಟ್ಟಿದ್ದಾರೆ ಎಂದು ಸಚಿವ ಬೈರತಿ ಸುರೇಶ್ ದಾಖಲಾತಿ ಬಿಡುಗಡೆ ಮಾಡಿದರು. ಯಾರಿಗೆ ಮುಡಾ ಸೈಟ್ ಹಂಚಿಕೆ ಎಂದು ವಿಪಕ್ಷಗಳ ನಾಯಕರ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಹೆಚ್.ವಿಶ್ವನಾಥ್, ಜಿ.ಟಿ.ದೇವೇಗೌಡ, ಮಂಜೇಗೌಡ, ಸಾ.ರಾ.ಮಹೇಶ್, ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಹೆಸರಿರುವ ಪಟ್ಟಿ ಬಿಟ್ಟಿದ್ದಾರೆ.

  • ಕರ್ನಾಟಕ ಕಾಂಗ್ರೆಸ್‌ ಸರ್ಕಾರದ ವಿರುದ್ಧ ದೆಹಲಿಯಲ್ಲಿ ಬಿಜೆಪಿ ಸಂಸದರ ಪ್ರತಿಭಟನೆ

    ಕರ್ನಾಟಕ ಕಾಂಗ್ರೆಸ್‌ ಸರ್ಕಾರದ ವಿರುದ್ಧ ದೆಹಲಿಯಲ್ಲಿ ಬಿಜೆಪಿ ಸಂಸದರ ಪ್ರತಿಭಟನೆ

    ನವದೆಹಲಿ: ವಾಲ್ಮೀಕಿ ನಿಗಮ, ಮುಡಾ ಹಗರಣ ಹಿನ್ನೆಲೆಯಲ್ಲಿ ಕರ್ನಾಟಕ ಕಾಂಗ್ರೆಸ್‌ (Congress) ಸರ್ಕಾರದ ವಿರುದ್ಧ ನವದೆಹಲಿಯಲ್ಲಿ ಬಿಜೆಪಿ (BJP Protest) ಸಂಸದ ಪ್ರತಿಭಟನೆ ನಡೆಸಿದ್ದಾರೆ.

    ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ದೆಹಲಿಯ ಸಂಸತ್‌ನ ಗಾಂಧಿ ಪ್ರತಿಮೆ ಎದುರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುವಲ್ಲಿ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಪಾಕ್ ದುಸ್ಸಾಹಸ ಮೆರೆದಾಗಲೆಲ್ಲಾ ಸೋಲು ಕಂಡಿದೆ: ಕಾರ್ಗಿಲ್‌ನಲ್ಲಿ ಮೋದಿ ಭಾಷಣ

    ಮುಡಾ ಹಾಗೂ ವಾಲ್ಮೀಕಿ ನಿಗಮದಲ್ಲಿ ಅಕ್ರಮ ನಡೆದಿದೆ. ಇದರ ಬಗ್ಗೆ ಸೂಕ್ತ ತನಿಖೆ ಅತ್ಯಗತ್ಯ. ವಾಲ್ಮೀಕಿ ನಿಗನ ಹಗರಣ ಮತ್ತು ಮುಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

    ಮುಡಾ ಆಸ್ತಿಯನ್ನು ಕಾಂಗ್ರೆಸ್ ಲೂಟಿ ಮಾಡಿದೆ. ಕೋಟಿಗಟ್ಟಲೆ ಲಾಭ ಮಾಡಿಕೊಂಡಿದೆ. ಇದೆಲ್ಲವೂ ಸಿಎಂ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ನಡೆದಿದೆ. ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಪ್ರತಿಭಟಿಸಿ ಸತ್ಯವನ್ನು ಜನರ ಮುಂದೆ ತರುವುದು ನಮ್ಮ ಕರ್ತವ್ಯ ಎಂದು ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಭಾರೀ ಮಳೆಗೆ ಪ್ರವಾಹ ಪರಿಸ್ಥಿತಿ; ಪುಣೆಯಲ್ಲಿ 6 ಮಂದಿ ಬಲಿ

    ಪ್ರತಿಭಟನೆಯಲ್ಲಿ ಬಿಜೆಪಿ ನಾಯಕರಾದ ಜಗದೀಶ್ ಶೆಟ್ಟರ್, ಗೋವಿಂದ್ ಕಾರಜೋಳ, ಪಿಸಿ ಮೋಹನ್, ಬಿ.ವೈ ರಾಘವೇಂದ್ರ, ವಿಶ್ವೇಶ್ವರ ಹೆಗಡೆ ಕಾಗೇರಿ, ಯದುವೀರ್‌ ಒಡೆಯರ್‌, ಜಗ್ಗೇಶ್, ಈರಣ್ಣ ಕಡಾಡಿ, ನಾರಾಯಣ ಸಾ ಬಾಂಡಗೆ, ಲೇಹರ್ ಸಿಂಗ್, ಪಿಸಿ ಗದ್ದಿಗೌಡರ್, ಡಾ. ಮಂಜುನಾಥ್, ಮಲ್ಲೇಶ್ ಬಾಬು, ಕ್ಯಾ. ಬ್ರಿಜೇಶ್ ಚೌಟಾ, ರಮೇಶ್ ಜಿಗಜಿಣಗಿ ಭಾಗಿಯಾಗಿದ್ದರು.

  • ವಿಧಾನಸಭೆಯಲ್ಲಿ ಮುಂದುವರಿದ ಬಿಜೆಪಿ, ಜೆಡಿಎಸ್ ಧರಣಿ – ತುಳು ಸಂಭಾಷಣೆ ಸೊಗಡು, ವಿಧೇಯಕಗಳ ಅಂಗೀಕಾರ

    ವಿಧಾನಸಭೆಯಲ್ಲಿ ಮುಂದುವರಿದ ಬಿಜೆಪಿ, ಜೆಡಿಎಸ್ ಧರಣಿ – ತುಳು ಸಂಭಾಷಣೆ ಸೊಗಡು, ವಿಧೇಯಕಗಳ ಅಂಗೀಕಾರ

    ಬೆಂಗಳೂರು: ವಿಧಾನಸಭೆಯಲ್ಲಿ (Vidhan Sabha) ಮುಡಾ ಅಕ್ರಮದ (Muda Scam) ಚರ್ಚೆಗೆ ಮತ್ತೆ ಪ್ರತಿಪಕ್ಷಗಳ ಪಟ್ಟು ಹಿಡಿದಿದ್ದು ಬಿಜೆಪಿ-ಜೆಡಿಎಸ್ (BJP-JDS) ಪ್ರತಿಭಟನೆ ಮುಂದುವರಿಸಿವೆ.

    ಕಲಾಪ ಆರಂಭವಾಗುತ್ತಿದ್ದಂತೆ ಒಂದೇ ಒಂದು ಗಂಟೆಗೆ ಚರ್ಚೆಗೆ ಕೊಡಿ ಎಂದು ಬಿಜೆಪಿ ಶಾಸಕರು ಆಗ್ರಹಿಸಿದರು. ಇದೇ ವೇಳೆ ತುಳು ಭಾಷೆಯಲ್ಲಿ ಮಾತನಾಡಿ ಸ್ಪೀಕರ್‌ಗೆ ಚರ್ಚೆಗೆ ಕೇಳಿದ ಸುನೀಲ್ ಕುಮಾರ್ (Sunil Kumar) ತುಳುವಿನಲ್ಲಿ ಮಾತನಾಡಿ ಇಲ್ಲಿ ಚರ್ಚೆಗೆ ಕೊಟ್ಟರೇ ಏನು ಸಮಸ್ಯೆ ಎಂದರು‌.


    ಇದಕ್ಕೆ ಏನು ಸಮಸ್ಯೆ ಇಲ್ಲ ಎಂದು ತುಳುವಿನಲ್ಲೇ ಸ್ಪೀಕರ್ ಖಾದರ್‌ (UT Khader) ಉತ್ತರ ನೀಡಿದ್ರೂ ಚರ್ಚೆಗೆ ಅವಕಾಶ ಕೊಡಲಿಲ್ಲ. ನಾನು ಹೇಳಿದ ಹಾಗೆ ಕೇಳಿದರೆ ನಿಮಗೆ ಏನು ಸಮಸ್ಯೆ ಎಂದು ತುಳುವಿನಲ್ಲೇ ಸ್ಪೀಕರ್ ಮರು ಪ್ರಶ್ನೆ ಹಾಕಿದ್ರು. ಈ ವೇಳೆ ಯಾವುದೋ ಭಾಷೆಯಲ್ಲಿ ಮಾತಾಡುತ್ತಿದ್ದೀರಾ ಎಂದ ಆಡಳಿತ ಪಕ್ಷದ ಕೆಲ ಶಾಸಕರು ಕಿಚಾಯಿಸಿದ್ರು. ಯಾವುದೋ ಅಲ್ಲ, ಸಾವಿರಾರು ವರ್ಷಗಳ ಇತಿಹಾಸ, ಸಂಸ್ಕೃತಿ ಇರುವ ತುಳು ಭಾಷೆ ಎಂದ ಸ್ಪೀಕರ್ ಸಮರ್ಥಿಸಿಕೊಂಡರು‌. ಇದನ್ನೂ ಓದಿ: Paris Olympics 2024 | ಕ್ರೀಡೆಗಳ ಮಹಾಸಂಗಮ; ಒಲಿಂಪಿಯಾ ಬೆಟ್ಟದಲ್ಲಿ ಹುಟ್ಟಿದ ಕ್ರೀಡೆ ವಿಶ್ವವಿಖ್ಯಾತಿಯಾಗಿದ್ದು ಹೇಗೆ?

    ವಿರೋಧ ಪಕ್ಷಗಳ ಧರಣಿ ನಡುವೆಯೇ ಕಲಾಪ ಕಾರ್ಯಕಲಾಪಗಳನ್ನು ನಡೆಸಿದ ಸ್ಪೀಕರ್, ವಿಧೇಯಕಗಳ ಅಂಗೀಕಾರ ಪ್ರಸ್ತಾವನೆಯನ್ನು ಮುಗಿಸಿದರು. ವಿರೋಧ ಪಕ್ಷಗಳ ಗದ್ದಲದ ನಡುವೆಯೇ 6 ವಿಧೇಯಕಗಳ ಅಂಗೀಕಾರ, ನಾಲ್ಕು ನಿರ್ಣಯಗಳ ಅಂಗೀಕಾರವೂ ನಡೆಯಿತು. ಅಂತಿಮವಾಗಿ ಕಲಾಪವನ್ನ ಮಧ್ಯಾಹ್ನಕ್ಕೆ ಮುಂದೂಡಿದರು.

     

    ಅಂಗೀಕಾರಗೊಂಡ 6 ವಿಧೇಯಕಗಳು

    >.ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ತ್ವ ಸ್ಥಳಗಳ ಮತ್ತು ಅವಶೇಷಗಳ ತಿದ್ದುಪಡಿ ವಿಧೇಯಕ-2024 ಅಂಗೀಕಾರ

    >.ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರೆ ಹಿಂದುಳಿದ ವರ್ಗಗಳ ತಿದ್ದುಪಡಿ ವಿಧೇಯಕ ಅಂಗೀಕಾರ

    >.ಶ್ರೀ ರೇಣುಕಾಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ-2024 ಅಂಗೀಕಾರ

    >.ಕರ್ನಾಟಕ ಭೂ ಕಂದಾಯ ಎರಡನೇ ತಿದ್ದುಪಡಿ- 2024 ವಿಧೇಯಕ ಅಂಗೀಕಾರ

    >.ಕರ್ನಾಟಕ ವೈದ್ಯಕೀಯ ನೋಂದಣಿ ಮತ್ತು ಇತರ ಕೆಲವು ಕಾನೂನು ತಿದ್ದುಪಡಿ ವಿಧೇಯಕ- 2024 ಅಂಗೀಕಾರ

    >.ಕರ್ನಾಟಕ ಸರ್ಕಾರಿ ಉದ್ಯಾನವನಗಳ ಸಂರಕ್ಷಣಾ ತಿದ್ದುಪಡಿ ವಿಧೇಯಕ 2024 ಅಂಗೀಕಾರ

  • ವಿಧಾನ ಪರಿಷತ್ ‌ನಲ್ಲಿ ಮುಡಾ ಗಲಾಟೆ: 6 ವಿಧೇಯಕ, 4 ನಿರ್ಣಯಗಳು ಚರ್ಚೆ ಇಲ್ಲದೆ ಅಂಗೀಕಾರ

    ವಿಧಾನ ಪರಿಷತ್ ‌ನಲ್ಲಿ ಮುಡಾ ಗಲಾಟೆ: 6 ವಿಧೇಯಕ, 4 ನಿರ್ಣಯಗಳು ಚರ್ಚೆ ಇಲ್ಲದೆ ಅಂಗೀಕಾರ

    ಬೆಂಗಳೂರು: ಮುಡಾ ಹಗರಣದ (MUDA Scam) ತನಿಖೆಗೆ ಅವಕಾಶ ಕೊಡುವಂತೆ ಇಂದೂ ಕೂಡಾ ವಿಧಾನ ಪರಿಷತ್‌ನಲ್ಲಿ ವಿಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಮಧ್ಯೆ ವಿಧಾನಸಭೆಯಿಂದ ಅಂಗೀಕಾರ ರೂಪದಲ್ಲಿದ್ದ 6 ವಿಧೇಯಕಗಳು ಯಾವುದೇ ಚರ್ಚೆ ಆಗದೇ ಅಂಗೀಕಾರವಾದವು. ಇದರ ಜೊತೆಗೆ ಕೇಂದ್ರ ಸರ್ಕಾರದ ನಿರ್ಧಾರ ವಿರೋಧಿಸುವ 4 ನಿರ್ಣಯಗಳನ್ನ ವಿಧಾನ ಪರಿಷತ್‌ನಲ್ಲಿ ಮಂಡನೆ ಮಾಡಿ ಅಂಗೀಕಾರ ‌ಪಡೆಯಲಾಯ್ತು.
    ಬೆಳಗ್ಗೆ ಸದನ ಪ್ರಾರಂಭವಾದ ಕೂಡಲೇ ವಿಪಕ್ಷಗಳು ಮೂಡಾ ಹಗರಣ ವಿಷಯ ಚರ್ಚೆಗೆ ವಿಪಕ್ಷಗಳು ನಿನ್ನೆ ನೀಡಿದ್ದ ಮರು ಪರಿಶೀಲನೆ ಅರ್ಜಿಗೆ ರೂಲಿಂಗ್ ಕೊಡುವಂತೆ ವಿಪಕ್ಷಗಳು ಒತ್ತಾಯ ಮಾಡಿದವು. ಸಭಾಪತಿ ಹೊರಟ್ಟಿ ಅವರು ವಿಪಕ್ಷಗಳ ಮರು ಪರಿಶೀಲನೆಯನ್ನು ತಿರಸ್ಕಾರ ಮಾಡಿ, ಮುಡಾ ಹಗರಣದ ಚರ್ಚೆಗೆ ಅವಕಾಶ ನಿರಾಕರಿಸಿದರು. ಸಭಾಪತಿಗಳ ರೂಲಿಂಗ್‌ಗೆ ವಿಪಕ್ಷಗಳು ವಿರೋಧಿಸಿ ಸದನದ ಬಾವಿಗಳಿದು ಪ್ರತಿಭಟನೆ ನಡೆಸಿದ್ರು. ಸರ್ಕಾರ, ಸಿಎಂ ವಿರುದ್ದ ಘೋಷಣೆ ‌ಕೂಗಿದ್ರು. ಗೋವಿಂದಾ ಗೋವಿಂದಾ ಅಂತ ಘೋಷಣೆ ಕೂಗಿ ಸರ್ಕಾರದ ವಿರುದ್ದ ಕಿಡಿಕಾರಿದರು.

    ವಿಪಕ್ಷಗಳ ಪ್ರತಿಭಟನೆ ಮಧ್ಯೆ ಕರ್ನಾಟಕ ಧನ ವಿನಿಯೋಗ ವಿಧೇಯಕ 2024, ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ವಿಧೇಯಕ 2024,  ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ತಿದ್ದುಪಡಿ ವಿಧೇಯಕ 2024, ಕರ್ನಾಟಕ ನೀರಾವರಿ ತಿದ್ದುಪಡಿ ವಿಧೇಯಕ 2024,ಕರ್ನಾಟಕ ವಿಧಾನ ಮಂಡಲ (ಅನರ್ಹತಾ ನಿವಾರಣೆ) (ಎರಡನೇ ತಿದ್ದುಪಡಿ) ವಿಧೇಯಕ 2024, ಕರ್ನಾಟಕ ಮುನಿಸಿಪಾಲಿಟಿಗಳು ಮತ್ತು ಇತರೆ ಕಾನೂನುಗಳ ತಿದ್ದುಪಡಿ ವಿಧೇಯಕ 2024ಗಳು ಯಾವುದೇ ಚರ್ಚೆ ಇಲ್ಲದೆ ಅಂಗೀಕಾರವಾದವು. ಇದನ್ನೂ ಓದಿ: ಎಂಪಿಯಾಗಿ ಕಂಗನಾ ರಣಾವತ್‌ ಆಯ್ಕೆ ಪ್ರಶ್ನಿಸಿ ಅರ್ಜಿ – ಹಿಮಾಚಲ ಪ್ರದೇಶ ಹೈಕೋರ್ಟ್‌ನಿಂದ ನೋಟಿಸ್‌
    ಇದಲ್ಲದೆ 4 ನಿರ್ಣಯಗಳನ್ನು ಸರ್ಕಾರ ಮಂಡನೆ ಮಾಡಿ ಸದನದಲ್ಲಿ ಅಂಗೀಕಾರ ಪಡೆಯಿತು. 1971ರ ಜನಗಣತಿ ಅನ್ವಯ ಕೇಂದ್ರ ಸರ್ಕಾರ ಕ್ಷೇತ್ರ ಪುನರ್ ವಿಗಂಡಣೆ ಮಾಡಬೇಕು ಅನ್ನೋ ನಿರ್ಣಯ, ಒಂದು ದೇಶ ಒಂದು ಚುನಾವಣೆಗೆ ವಿರೋಧಿಸಿ ನಿರ್ಣಯ,‌ ನೀಟ್ ಪರೀಕ್ಷೆ ವ್ಯವಸ್ಥೆ ಖಂಡಿಸಿ ನೀಟ್ ರದ್ದು ಮಾಡುವ ನಿರ್ಣಯ, ಹಾಗೂ ಅರಣ್ಯ ವಾಸಿಗಳ ನಿಯಮಗಳನ್ನ ಮಾರ್ಪಾಡು ಮಾಡುವಂತೆ ಕೇಂದ್ರ ಸರ್ಕಾರವನ್ನ ಒತ್ತಾಯಿಸಿ ನಿರ್ಣಯ ಮಂಡಿಸಿ ಅಂಗೀಕಾರ ಪಡೆಯಲಾಯಿತು.

  • ನನ್ನ ಹೆಸರಿಗೆ ಮಸಿ ಬಳಿಯಲು ವಿಪಕ್ಷಗಳಿಂದ ಪ್ರತಿಭಟನೆ: ಸಿದ್ದರಾಮಯ್ಯ

    ನನ್ನ ಹೆಸರಿಗೆ ಮಸಿ ಬಳಿಯಲು ವಿಪಕ್ಷಗಳಿಂದ ಪ್ರತಿಭಟನೆ: ಸಿದ್ದರಾಮಯ್ಯ

    ಬೆಂಗಳೂರು: ನನ್ನ ಹೆಸರಿಗೆ ಮಸಿ ಬಳಿಯಲು, ನನ್ನ ವಿರುದ್ದ ಹೊಟ್ಟೆ ಕಿಚ್ಚಿನಿಂದ ವಿಪಕ್ಷಗಳು ಮುಡಾ ಹಗರಣದಲ್ಲಿ (MUDA Scam) ರಾಜಕೀಯ ಮಾಡ್ತಿವೆ ಸಿಎಂ ಸಿದ್ದರಾಮಯ್ಯ (Karnataka CM Siddaramaiah) ಬಿಜೆಪಿ-ಜೆಡಿಎಸ್ ಅಹೋರಾತ್ರಿ ಧರಣಿ ವಿರುದ್ದ ಕಿಡಿಕಾರಿದ್ದಾರೆ.
    ವಿಧಾನ ಪರಿಷತ್ ‌ಕಲಾಪ ಪ್ರಾರಂಭವಾದ ಕೂಡಲೇ ವಿಪಕ್ಷಗಳು ಸದನದ ಬಾವಿಗಿಳಿದು ಮೂಡಾ ಹಗರಣ ಬಗ್ಗೆ ಚರ್ಚೆಗೆ ಅವಕಾಶ ಕೇಳಿದ್ರು. ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ಅವರು ವಿಷಯವೇ ಇಲ್ಲದ್ದನ್ನ ವಿಷಯ ಮಾಡ್ತಿದ್ದಾರೆ. ಸುಮ್ಮನೆ ಮುಡಾ ವಿಷಯ ಇಟ್ಟುಕೊಂಡು ಪ್ರತಿಭಟನೆ ಮಾಡ್ತಿದ್ದಾರೆ. ನಿಯಮಾವಳಿ ಪ್ರಕಾರವೇ ಸೈಟ್ ಪಡೆಯಲಾಗಿದೆ. ಕಾನೂನು ಪ್ರಕಾರವೇ ಎಲ್ಲಾ ಆಗಿದೆ. ಮುಡಾ ಸೈಟ್ ಕೊಟ್ಟಾಗ ಬಿಜೆಪಿಯೇ ಅಧಿಕಾರದಲ್ಲಿ ಇತ್ತು. ಅದರೂ ಈಗ ಪ್ರತಿಭಟನೆ ಮಾಡಿಸ್ತಿದ್ದಾರೆ ಅಂತ ವಿಪಕ್ಷಗಳ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಪ್ರೇಯಸಿಯೊಂದಿಗೆ ಹೆಡ್ ಕಾನ್‌ಸ್ಟೇಬಲ್‌ ಸರಸ ಸಲ್ಲಾಪ; ರೆಡ್‌ಹ್ಯಾಂಡಾಗಿ ಹಿಡಿದ ಪತ್ನಿ
    ಅವರು ಕೊಟ್ರು, ನಾವು ತಗೊಂಡ್ವಿ!: ಮುಡಾ ಕೇಸ್  ತನಿಖೆಗೆ ನಿವೃತ್ತಿ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ತನಿಖೆ ಮಾಡೋವಾಗ ಚರ್ಚೆ ಮಾಡೋದು ಸರಿಯಲ್ಲ ಅಂತ ಸಭಾಪತಿ ರೂಲಿಂಗ್ ಅನ್ನ ಸಮರ್ಥನೆ ಮಾಡಿಕೊಂಡರು. ಸೈಟ್ ತೆಗೆದುಕೊಂಡಿರೋದ್ರಲ್ಲಿ ನನ್ನ ತಪ್ಪಿಲ್ಲ. 50:50 ನಿಯಮ ಮಾಡಿದ್ದು ಬಿಜೆಪಿ ಅವಧಿಯಲ್ಲಿ. ನಮ್ಮ ಜಮೀನಿಗೆ ಪರ್ಯಾಯವಾಗಿ ನಾವು ಸೈಟ್ ಕೇಳಿದಾಗ ಮೂಡಾ ಸೈಟ್  ಕೊಟ್ಟಿದೆ. ನಾವು ಇದೇ ಜಾಗ ಕೊಡಿ ಅಂತ ನಾವು ಕೇಳಿರಲಿಲ್ಲ. ಅವರು ‌ಕೊಟ್ಟರು, ನಾವು ತಗೊಂಡ್ವಿ ಅಂತ ತಿಳಿಸಿದರು. ಇದನ್ನೂ ಓದಿ: ಜೈಲಿಂದ ಹೊರಬಂದ ಬಳಿಕ ಹೆಚ್‌ಡಿಕೆ ಭೇಟಿಯಾದ ದೇವರಾಜೇಗೌಡ – ಪೆನ್‌ಡ್ರೈವ್‌ ಕೇಸ್ ಬಗ್ಗೆ ಮಾತುಕತೆ
    ವಿಪಕ್ಷಗಳ ಪ್ರತಿಭಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ‌. ನನ್ನ ಹೆಸರಿಗೆ ಮಸಿ ಬಳಿಯಲು ಹೀಗೆ ಮಾಡ್ತಿದ್ದಾರೆ. 40 ವರ್ಷಗಳಿಂದ ನನ್ನ ಮೇಲೆ ಯಾವುದೇ ಕಪ್ಪು ಚುಕ್ಕಿ ಇಲ್ಲ. ಹೀಗಾಗಿ ವಿಪಕ್ಷಗಳಿಗೆ ಹೊಟ್ಟೆ ಕಿಚ್ಚು. ಹೊಟ್ಟೆ ಕಿಚ್ಚಿಗೆ ಹೀಗೆ ಮಾಡ್ತಿದ್ದಾರೆ. ಕಾನೂನು ರೀತಿ ಸೈಟ್ ಹಂಚಿಕೆ‌ ಆಗಿದೆ ಎಂದು ಮುಡಾ ಸೈಟ್ ಹಂಚಿಕೆಯನ್ನು ಸಮರ್ಥನೆ ಮಾಡಿಕೊಂಡರು.

  • ಊಟ, ಹಾಸಿಗೆ ಕೊಡ್ತಾರೆ ಮಲಗಿ ಹೋಗೋಣ ಅಂತಾ ಪ್ರತಿಭಟನೆ ಮಾಡ್ತಿದ್ದಾರೆ: ಲಕ್ಷ್ಮಣ ಸವದಿ

    ಊಟ, ಹಾಸಿಗೆ ಕೊಡ್ತಾರೆ ಮಲಗಿ ಹೋಗೋಣ ಅಂತಾ ಪ್ರತಿಭಟನೆ ಮಾಡ್ತಿದ್ದಾರೆ: ಲಕ್ಷ್ಮಣ ಸವದಿ

    ಬಿಪಿ, ಶುಗರ್ ಸರಿಪಡಿಸಿಕೊಳ್ಳಲು ಪಾದಯಾತ್ರೆ ಮಾಡಬಹುದು ಮಾಡಲಿ

    ಬೆಂಗಳೂರು: ನಿಜವಾದ ಹೋರಾಟ ಮಾಡುವುದಾದರೆ ಮೊದಲಿನಿಂದ ಮಾಡುತ್ತಿದ್ದರು. ಈಗ ಊಟ ಕೊಡ್ತಾರೆ, ಹಾಸಿಗೆ ಕೊಡ್ತಾರೆ ಎಂದು ಮಲಗಿ ಹೋಗೋಣ ಅಂತಾ ಪ್ರತಿಭಟನೆ (Protest) ಮಾಡ್ತಿದ್ದಾರೆ ಎಂದು ದೋಸ್ತಿ ನಾಯಕರನ್ನು ಕಾಂಗ್ರೆಸ್ (Congress) ಶಾಸಕ ಲಕ್ಷ್ಮಣ ಸವದಿ (Laxman Savadi) ವ್ಯಂಗ್ಯವಾಡಿದ್ದಾರೆ.

    ನಗರದಲ್ಲಿ `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಮುಡ ಹಗರಣ (MUDA scam) ನಡೆದಿದೆ ಎನ್ನುತ್ತಿರುವುದು ಯಾವಾಗ? ಹಗರಣ ನಡೆದಿದ್ದರೆ ಯಾರ ಅವಧಿ? ಈಗ ಯಾಕೆ ಆರೋಪ ಮಾಡ್ತಿದ್ದಾರೆ? ಅವರೆ ಸಿಎಂ ಆಗಿದ್ದರು, ಕಂದಾಯ ಸಚಿವರು ಆಗಿದ್ದರು. ಆಗ ಏನು ಮಾಡುತ್ತಿದ್ದರು? ದೊಡ್ಡ ಹಗರಣ ಆಗಿದ್ದರೆ ಮೊದಲೇ ಯಾಕೆ ತಡೆಯಲಿಲ್ಲ. ಕೊನೆಯೆ ಎರಡು ದಿನ ಯಾಕೆ ಎಂದು ಅವರು ಪ್ರಶ್ನಿಸಿದ್ದಾರೆ.

    ವಿರೋಧ ಪಕ್ಷದಲ್ಲಿ ನಾಯಕರಿಲ್ಲ, ಅದು ನಿಷ್ಕ್ರಿಯ ಆಗಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಇವರು ಡ್ರಾಮಾ ಮಾಡ್ತಿದ್ದಾರೆ. ಇದು ಅಹೋರಾತ್ರಿ ಧರಣಿ ಅಲ್ಲ ಡ್ರಾಮಾ ಅಷ್ಟೇ. ವಿಪಕ್ಷದವರು ನಾವು ಜೀವಂತವಾಗಿ ಇದ್ದೇವೆ ಎಂದು ತೋರಿಸಿಕೊಳ್ಳಲು ಈ ಧರಣಿ. ಇನ್ನೂ ಸಾಕಷ್ಟು ಜನರಿಗೆ ಬಿಪಿ, ಶುಗರ್ ಇದೆ. ಆರೋಗ್ಯ ಸರಿಪಡಿಸಿಕೊಳ್ಳಲು ಪಾದಯಾತ್ರೆ ಮಾಡಬಹುದು ಮಾಡಲಿ. ಇನ್ನೂ 20 ವರ್ಷ ಅವರೆಲ್ಲಾ ರಾಜಕಾರಣ ಮಾಡಲು ಫಿಟ್ ಇರಬೇಕು ಎಂದು ವ್ಯಂಗ್ಯವಾಡಿದ್ದಾರೆ.

    ಮುಡದಲ್ಲಿ 200% ಯಾವುದೇ ಹಗರಣ ನಡೆದಿಲ್ಲ. ಮುಖ್ಯಮಂತ್ರಿಗಳ ಧರ್ಮ ಪತ್ನಿಗೆ ಅವರ ಕುಟುಂಬದಿಂದ ಆಸ್ತಿ ಬಂದಿದೆ. ಈಗ ಕೇಂದ್ರ ಬಜೆಟ್ ವೈಫಲ್ಯ ಮುಚ್ಚಿಕೊಳ್ಳಲು ಮೇಲಿನಿಂದ ಸೂಚನೆ ಬಂದಿದೆ. ಅದಕ್ಕೆ ಇಲ್ಲಿ ಧರಣಿ ನಡೆಯುತ್ತಿದೆ. ಈ ಡ್ರಾಮಾದ ಹಿಂದಿರುವವರು ಯಾರು ಎಂಬುದನ್ನು ಕೆಲವೇ ದಿನಗಳಲ್ಲಿ ಬಹಿರಂಗ ಪಡಿಸುತ್ತೇನೆ ಎಂದು ಅವರು ಹೇಳಿದ್ದಾರೆ.