Tag: MUDA Scam

  • ಈ ಬಂಡೆ ಸಿದ್ದರಾಮಯ್ಯ ಜೊತೆಗಿದೆ, ನಿಮ್ಮ ಕೈಯಲ್ಲಿ ಏನು ಮಾಡಲು ಸಾಧ್ಯವಿಲ್ಲ: ಡಿಕೆಶಿ ಗುಡುಗು

    ಈ ಬಂಡೆ ಸಿದ್ದರಾಮಯ್ಯ ಜೊತೆಗಿದೆ, ನಿಮ್ಮ ಕೈಯಲ್ಲಿ ಏನು ಮಾಡಲು ಸಾಧ್ಯವಿಲ್ಲ: ಡಿಕೆಶಿ ಗುಡುಗು

    – ಏ ಕುಮಾರಸ್ವಾಮಿ, ಏ ಅಶೋಕಾ, ಏ ವಿಜಯೇಂದ್ರ ನಿಮಗೆ ಸಿದ್ದರಾಮಯ್ಯನವರ ರಾಜೀನಾಮೆ ಬೇಕಾ?

    ಮೈಸೂರು: ಈ ಬಂಡೆ ಸಿದ್ದರಾಮಯ್ಯ (Siddaramaiah) ಜೊತೆಗಿದೆ. ನನ್ನ ಜೊತೆ 136 ಮಂದಿ ಶಾಸಕರಿದ್ದಾರೆ. ನಿಮ್ಮ ಕೈಯಲ್ಲಿ ಏನು ಮಾಡಲು ಸಾಧ್ಯವಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ದೋಸ್ತಿ ನಾಯಕರ ವಿರುದ್ಧ ಗುಡುಗಿದ್ದಾರೆ.

    ಮಹಾರಾಜ ಕಾಲೇಜಿನಲ್ಲಿ ನಡೆದ ಜನಾಂದೋಲನ ಸಭೆಯಲ್ಲಿ ಮಾತನಾಡಿದ ಅವರು, ಏ ಕುಮಾರಸ್ವಾಮಿ, ಏ ಅಶೋಕಾ, ಏ ವಿಜಯೇಂದ್ರ ನಿಮಗೆ ಸಿದ್ದರಾಮಯ್ಯನವರ ರಾಜೀನಾಮೆ ಬೇಕಾ? ನನ್ನನ್ನು ಮಾಧ್ಯಮದವರು ಬಂಡೆ ಎಂದು ಹೇಳಿದರು. ನಮ್ಮ ಸರ್ಕಾರವನ್ನು 10 ತಿಂಗಳಲ್ಲಿ ತೆಗೆಯುತ್ತೇವೆ ಎಂದು ಹುನ್ನಾರ ಮಾಡುತ್ತಿದ್ದಾರೆ. ನಮ್ಮ ಯೋಜನೆಗಳ ರಕ್ಷಣೆಗೆ ಈ ಹೋರಾಟ ಎಂದು ಹೇಳಿದರು.

     

    ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ಜನರು ಅಧಿಕಾರಕ್ಕೆ ಬಂದ ಹಾಗೆ. ನಮ್ಮ ಜನಾಂದೋಲನ ರಾಜ್ಯದ, ಸಂವಿಧಾನದ ರಕ್ಷಣೆಗಾಗಿ. ಕುಮಾರಸ್ವಾಮಿ ನಿನ್ನ ಅಧ್ಯಕ್ಷತೆಯಲ್ಲಿ ಜೆಡಿಎಸ್‌ 19 ಸೀಟ್ ಗೆದ್ದಿದೆ. ಈ ಡಿಕೆ ಶಿವಕುಮಾರ್ ನೇತೃತ್ವದಲ್ಲಿ 136 ಸ್ಥಾನ ಗೆದ್ದಿದೆ. ಬ್ರಿಟಿಷರಿಂದ ಕಾಂಗ್ರೆಸ್ ತೆಗೆಯಲು ಆಗಲಿಲ್ಲ. ನೀನು ಎರಡು ಜನ್ಮ ಎತ್ತಿದರೂ ನಮ್ಮನ್ನ ತೆಗೆಯಲು ಆಗುವುದಿಲ್ಲ ಕುಮಾರಸ್ವಾಮಿ ಎಂದು ಏಕವಚನದಲ್ಲೇ ಹರಿಹಾಯ್ದರು. ಇದನ್ನೂ ಓದಿ: ಲೂಮಿನಲ್ ಟೆಸ್ಟ್‌ನಲ್ಲಿ ʻದಾಸʼನಿಗೆ ಟ್ವಿಸ್ಟ್‌ | ಒಗೆದು ಒಣಹಾಕಿದ್ದ ಬಟ್ಟೆಯಲ್ಲಿ ರಕ್ತದ ಕಲೆ ಪತ್ತೆಯಾಗಿದ್ದು ಹೇಗೆ?

     

    ಸಿದ್ದರಾಮಯ್ಯ ಧರ್ಮಪತ್ನಿ ಪಾರ್ವತಿ ಅವರ ಅಣ್ಣ ಅರಿಶಿನ ಕುಂಕುಮಕ್ಕೆ ಜಮೀನು ಕೊಟ್ಟಿದ್ದಾರೆ. ಸಾಮಾನ್ಯ ಜನರು ಅಕ್ಕ-ತಂಗಿಯರಿಗೆ ಜಮೀನು ಕೊಡುತ್ತಾರೆ. ಪಾರ್ವತಿ ಅವರಿಗೆ ಅದೇ ರೀತಿ ಕೊಟ್ಟಿದ್ದಾರೆ. ಅದು ಸಿದ್ದರಾಮಯ್ಯ ಅವರಿಗೆ ಗೊತ್ತಿರಲಿಲ್ಲ. ಡಿನೋಟಿಫೀಕೇಶನ್ ಆದ ಜಮೀನನ್ನು ಕೊಡಿ ಎಂದು ಪಾರ್ವತಿ ಅವರು ಕೇಳಿದ್ದಾರೆ. ಬಳಿಕ ಆ ಜಮೀನಿನ ಬದಲಿಗೆ 14 ಸೈಟ್ ಕೊಟ್ಟಿದ್ದಾರೆ. ನನ್ನಂತವನು ಇದ್ದರೆ ಆ ಹೋರಾಟವೇ ಬೇರೆ ಇತ್ತು. ಇದರಲ್ಲಿ ಏನು ತಪ್ಪಿದೆ? ಸಿದ್ದರಾಮಯ್ಯನವರು ನನ್ನ ಹೆಂಡತಿಗೆ ಜಮೀನು ನೀಡಿ ಎಂದು ಪತ್ರ ಬರೆದಿದ್ದಾರಾ? ಬಸವರಾಜ ಬೊಮ್ಮಯಿ ನಿನ್ನ ಕಾಲದಲ್ಲೇ ಸೈಟ್ ಕೊಡಲಾಗಿದೆ. ನಿಮ್ಮ ತಟ್ಟೆಯಲ್ಲಿ ಹೆಗ್ಗಣಗಳು ಇವೆ. ನಿಮ್ಮ ಕಾಲದಲ್ಲಿ 28 ಹಗರಣಗಳು ಇವೆ ಎಂದು ಕಿಡಿಕಾರಿದರು.

     

  • EXCLUSIVE: ನಾನು ಪ್ರಾಮಾಣಿಕ.. ನನ್ನ ಮುಗಿಸೋಕೆ ಸಾಧ್ಯವಿಲ್ಲ: ‘ದೋಸ್ತಿ’ಗಳಿಗೆ ಸಿಎಂ ಟಾಂಗ್

    EXCLUSIVE: ನಾನು ಪ್ರಾಮಾಣಿಕ.. ನನ್ನ ಮುಗಿಸೋಕೆ ಸಾಧ್ಯವಿಲ್ಲ: ‘ದೋಸ್ತಿ’ಗಳಿಗೆ ಸಿಎಂ ಟಾಂಗ್

    – ವಿಪಕ್ಷಗಳ ನಾಯಕರು ದ್ವೇಷದ ರಾಜಕಾರಣ ಮಾಡ್ತಿದ್ದಾರೆ
    – ಕಾಂಗ್ರೆಸ್‌ನ ಪ್ರತಿ ಶಾಸಕರಿಗೆ 50 ಕೋಟಿ ಆಫರ್‌ ಮಾಡಿದ್ದಾರೆ: ಸಿದ್ದರಾಮಯ್ಯ ಗಂಭೀರ ಆರೋಪ

    ಬೆಂಗಳೂರು: ಬಿಜೆಪಿ-ಜೆಡಿಎಸ್‌ನವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನನ್ನ ರಾಜಕೀಯ ಜೀವನದಲ್ಲಿ ಕಪ್ಪು ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ನಾನು ಪ್ರಾಮಾಣಿಕ. ನನ್ನನ್ನು ಮುಗಿಸೋಕೆ ಸಾಧ್ಯವಿಲ್ಲ ಎಂದು ವಿಪಕ್ಷಗಳಿಗೆ ಸಿಎಂ ಸಿದ್ದರಾಮಯ್ಯ (Siddaramaiah) ಟಾಂಗ್‌ ಕೊಟ್ಟಿದ್ದಾರೆ.

    ‘ಪಬ್ಲಿಕ್‌ ಟಿವಿ’ (Public TV) ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಸಿದ್ದರಾಮಯ್ಯ, ದ್ವೇಷದ ರಾಜಕಾರಣ ಮಾಡುವವರಿಗೆ ವ್ಯಕ್ತಿ ಹಿನ್ನೆಲೆ, ಚಾರಿತ್ರ್ಯ ನೋಡಲು ಹೋಗಲ್ಲ. ದ್ವೇಷವೊಂದೇ ಅವರ ಮುಂದಿರುತ್ತದೆ. ನನಗೆ ಬಿಜೆಪಿ-ಜೆಡಿಎಸ್‌ನವರನ್ನು ನಾನು ನೋಡೋಕೆ ಹೋಗಲ್ಲ. ನನ್ನ ರಾಜಕೀಯ ಜೀವನದಲ್ಲಿ ಕಪ್ಪುಮಸಿ ಬಳಿಯುವ ಪ್ರಯತ್ನ ಮಾಡ್ತಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ದೆಹಲಿ ಹೈಕಮಾಂಡ್ ನಮ್ಮ ತಂದೆಗೆ ಕ್ಲೀನ್ ಚಿಟ್ ಕೊಟ್ಟಿದೆ: ಯತೀಂದ್ರ ಸಿದ್ದರಾಮಯ್ಯ

    ನಾನು ರಾಜಕೀಯದಲ್ಲಿ ಎಂಎಲ್‌ಎ ಆಗಿ 41 ವರ್ಷ, ಮಂತ್ರಿಯಾಗಿ 40 ವರ್ಷಗಳಾಗಿ ಬಂತು. ರಾಜ್ಯಕ್ಕೆ 15 ಬಜೆಟ್‌ ಮಂಡಿಸಿದ್ದೇನೆ. 10-12 ವರ್ಷಗಳಿಗೆ ಹೆಚ್ಚು ಕಾಲ ಹಣಕಾಸು ಮಂತ್ರಿಯಾಗಿದ್ದೆ. ಯಾವತ್ತು ಕೂಡ ಕಳಂಕ ಬಂದಿಲ್ಲ. ನಾನು ಬಡವರ ಪರವಿದ್ದು, ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇನೆಂಬ ಕಾರಣಕ್ಕೆ ಈಗ ಕಳಂಕ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

    ಐಡಿಯಾಲಜಿಕಲ್‌ ಆಗಿ ಬಿಜೆಪಿ-ಜೆಡಿಎಸ್‌ನವರು ಬಡವರ ವಿರೋಧಿಗಳು. ನಾವು ಪರಿಶಿಷ್ಟ ಜಾತಿ- ವರ್ಗದವರಿಗೆ ಜನಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿ ಹಣದಲ್ಲಿ ಖರ್ಚು ಮಾಡಬೇಕು ಅಂತಾ ಕಾನೂನು ಮಾಡಿದೆವು. ಅದನ್ನು ಕೇಂದ್ರದವರಾಗಲಿ, ಬಿಜೆಪಿ ಅಧಿಕಾರದಲ್ಲಿ ಇರುವಂತಹ ರಾಜ್ಯದಲ್ಲಿ ಮಾಡಿದ್ದಾರಾ? ನಾವು 2013 ರಲ್ಲೇ ಮಾಡಿದ್ದೀವಿ. ಅವರೇಕೆ ಮಾಡಿಲ್ಲ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಇಳಿಸಲು ಸಾಧ್ಯವಿಲ್ಲ: ವಿಪಕ್ಷಗಳಿಗೆ ಕೆ.ಹೆಚ್.ಮುನಿಯಪ್ಪ ಟಾಂಗ್‌

    ಪ್ರಶ್ನೆ: ಈಗ್ಯಾಕೆ ನಿಮಗೆ ಕಪ್ಪುಚುಕ್ಕೆ ಹಾಕ್ಬೇಕು?
    ನನಗೆ ಕಪ್ಪುಚುಕ್ಕೆ ಹಾಕಿ ಮಸಿಬಳಿದು ರಾಜಕೀಯವಾಗಿ ನನ್ನನ್ನು ಮುಗಿಸಿದರೆ, ಕಾಂಗ್ರೆಸ್‌ ಮುಗಿಸಬಹುದು ಎಂಬುದು ಅವರ ಲೆಕ್ಕಾಚಾರ. ಜನ ನಮ್ಮ ಪರ ಇದ್ದಾಗ ಮಾತ್ರ ಲೀಡರ್‌ ಆಗೋದಕ್ಕೆ ಸಾಧ್ಯವಾಗುತ್ತದೆ. ಅವರು ನನಗೇನು ಮಾಡಕ್ಕಾಗಲ್ಲ. ಕಪ್ಪುಚುಕ್ಕೆ ತರೋದಕ್ಕೂ ಆಗಲ್ಲ, ಮಸಿ ಬಳಿಯುವುದಕ್ಕೂ ಆಗಲ್ಲ, ನನ್ನ ಚಾರಿತ್ರ್ಯ ವಧೆ ಮಾಡೋದಕ್ಕೂ ಆಗಲ್ಲ, ದ್ವೇಷದ ರಾಜಕಾರಣ ಮಾಡಿ ನನ್ನ ಮುಗಿಸುವುದಕ್ಕೂ ಸಾಧ್ಯವಿಲ್ಲ. ಆದರೆ ಅವರು ಹಾಗೆ ತಿಳಿದುಕೊಂಡಿದ್ದಾರೆ ಎಂದು ತಿಳಿಸಿದರು.

    ಅವರಿಂದ ಆಪರೇಷನ್‌ ಕಮಲ ಮಾಡೋಕೆ ಸಾಧ್ಯವಿಲ್ಲ. ಕಾಂಗ್ರೆಸ್‌ನ ಪ್ರತಿ ಎಂಎಲ್‌ಗೆ 50 ಕೋಟಿ ಆಫರ್‌ ಮಾಡಿದ್ದಾರೆ. It’s A Fact. ಪೊಲಿಟಿಕಲ್ ಇಂಟೆಲಿಜೆನ್ಸ್‌ ರಿಪೋರ್ಟ್‌ ನನ್ನ ಹತ್ತಿರ ಇದೆಯಲ್ವಾ. ಆಪರೇಷನ್‌ಗೆ ಪ್ರಯತ್ನಿಸಿ ಅವರು ವಿಫಲರಾಗಿದ್ದಾರೆ ಎಂದರು. ಇದನ್ನೂ ಓದಿ: ನನ್ನ, ಸಿಎಂ ನಡುವೆ ಮತಭೇದ ಇರಬಹುದು, ಮನಭೇದ ಇಲ್ಲ: ಬಿ.ಕೆ.ಹರಿಪ್ರಸಾದ್

    ಪ್ರಶ್ನೆ: ನೀವು ಯಾಕೆ ಆಸ್ತಿ ಮಾಡಿಕೊಳ್ಳಲಿಲ್ಲ?
    ನಾನು ಏನು ಅಂತಾ ಜನರಿಗೆ ಗೊತ್ತು. ನಾನು 2ನೇ ಬಾರಿಗೆ ಸಿಎಂ ಆಗಿದ್ದೇನೆ. ಮೊದಲ ಬಾರಿಗೆ 5 ವರ್ಷ ಸಿಎಂ ಆಗಿದ್ದಾಗ ಬೇಕಾದಷ್ಟು ಆಸ್ತಿ ಮಾಡಿಕೊಳ್ಳಲು ನನ್ನಿಂದ ಆಗುತ್ತಿರಲಿಲ್ವಾ? ನನಗೆ ಅದು ಬೇಕಾಗಿಲ್ಲ. ನಾನು ಪ್ರಾಮಾಣಿಕವಾಗಿ ಇರಬೇಕು. ಹಾಗೆಯೇ ಇದ್ದೇನೆ. ವೈಯಕ್ತಿಕ ಆಸ್ತಿ ಗಳಿಕೆಗೋಸ್ಕರ ನಾನು ಹಣವನ್ನು ಮಾಡಿಲ್ಲ, ಮಾಡುವುದೂ ಇಲ್ಲ. 14 ಸೈಟ್‌ಗೆ ನಾನು ಆಸೆ ಪಟ್ಟಿಲ್ಲ ಎಂದು ಸಮರ್ಥಿಸಿಕೊಂಡರು.

  • ದೆಹಲಿ ಹೈಕಮಾಂಡ್ ನಮ್ಮ ತಂದೆಗೆ ಕ್ಲೀನ್ ಚಿಟ್ ಕೊಟ್ಟಿದೆ: ಯತೀಂದ್ರ ಸಿದ್ದರಾಮಯ್ಯ

    ದೆಹಲಿ ಹೈಕಮಾಂಡ್ ನಮ್ಮ ತಂದೆಗೆ ಕ್ಲೀನ್ ಚಿಟ್ ಕೊಟ್ಟಿದೆ: ಯತೀಂದ್ರ ಸಿದ್ದರಾಮಯ್ಯ

    ಮೈಸೂರು: ದೆಹಲಿ ಹೈಕಮಾಂಡ್‌ನಿಂದ ನಮ್ಮ ತಂದೆಗೆ ಕ್ಲೀನ್ ಚಿಟ್ ಸಿಕ್ಕಿದೆ ಎಂದು ವಿಪಕ್ಷಗಳಿಗೆ ಸಿಎಂ ಸಿದ್ದರಾಮಯ್ಯ ಪುತ್ರ ಹಾಗೂ ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಟಾಂಗ್ ಕೊಟ್ಟರು.

    ಸಿಎಂ ಸಿದ್ದರಾಮಯ್ಯ ವಿರುದ್ಧ ಮೈತ್ರಿ ಪಕ್ಷಗಳ ಮುಡಾ ಆರೋಪ ವಿಚಾರವಾಗಿ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಯತೀಂದ್ರ, ದೆಹಲಿ ಹೈಕಮಾಂಡ್‌ನಿಂದ ನಮ್ಮ ತಂದೆಗೆ ಕ್ಲೀನ್ ಚಿಟ್ ಸಿಕ್ಕಿದೆ. ಜನರಿಂದ ಆಯ್ಕೆಯಾದ ಸರ್ಕಾರವನ್ನು ಸುಳ್ಳು ಆರೋಪ ಮಾಡಿ ಬೀಳಿಸೋ ಕುತಂತ್ರಕ್ಕೆ ನಾವು ಬಿಡಲ್ಲ. ಅದರ ವಿರುದ್ಧ ಏನು ಬೇಕೋ ಆ ಹೋರಾಟವನ್ನು ನಮ್ಮ ಪಕ್ಷದವರು ಮಾಡುತ್ತಾರೆ ಎಂದು ತಿಳಿಸಿದರು.

    ದೆಹಲಿ ಹೈಕಮಾಂಡ್ ಕೂಡ ನಮ್ಮ ತಂದೆಯವರು ಏನೂ ತಪ್ಪಿಲ್ಲ ಅಂತಾ ಹೇಳಿದೆ. ಮುಖ್ಯಮಂತ್ರಿಗಳಿಗೆ ನಮ್ಮ ಬೆಂಬಲ ಕೊಡ್ತೀವಿ ಅಂತಾ ಹೇಳಿದ್ದಾರೆ. ಹಾಗಾಗಿ ನಮಗೆ ನಮ್ಮ ಪಕ್ಷದ ಬೆಂಬಲ, ನಾಯಕರ ಬೆಂಬಲ ಹಾಗೂ ಕಾರ್ಯಕರ್ತರ ಬೆಂಬಲ ಇದೆ. ನಾವೂ ಕೂಡ ಜನರ ಮುಂದೆ ಹೋಗಿ ಹೋರಾಟ ಮಾಡ್ತೇವೆ ಎಂದರು.

    ಇವತ್ತು ಅವರು ಏನು ತಪ್ಪು ಮಾಡದಿದ್ರೂ ಆರೋಪ ಎದುರಿಸಬೇಕಾಗಿ ಬಂದಿದೆ. ಈಗ ತಂದೆಯವರ ಪ್ರಾಮಾಣಿಕ ರಾಜಕೀಯ ಜೀವನ ಜನ ಅರ್ಥ ಮಾಡಿಕೊಳ್ಳುವಂತಾಗುತ್ತೆ. ಬೆಂಬಲಿಗರೆಲ್ಲರೂ ವಿಚಾರ ಸಂಕೀರ್ಣ ಮೂಲಕ ಬಿಜೆಪಿ ಕುತಂತ್ರ ತಿಳಿಸುವ ಕೆಲಸ ಮಾಡಿದ್ದೀರಿ. ಅದಕ್ಕೆ ನಿಮಗೆ ಧನ್ಯವಾದಗಳು ಎಂದು ತಿಳಿಸಿದರು.

  • MUDA Scam | ಸಿದ್ದರಾಮಯ್ಯ ವಿರುದ್ಧ ಕೋರ್ಟ್‌ನಲ್ಲಿ ದೂರು ದಾಖಲು

    MUDA Scam | ಸಿದ್ದರಾಮಯ್ಯ ವಿರುದ್ಧ ಕೋರ್ಟ್‌ನಲ್ಲಿ ದೂರು ದಾಖಲು

    ಬೆಂಗಳೂರು: ಮುಡಾ ಸೈಟ್ ಹಗರಣ (MUDA Scam) ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಖಾಸಗಿ ದೂರು (Private Complaint) ದಾಖಲಾಗಿದೆ.

    ಸ್ನೇಹಮಯಿ ಕೃಷ್ಣ ಎಂಬುವರು ದೂರು ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಮ್ಮ, ಮಲ್ಲಿಕಾರ್ಜುನ , ನಿಂಗಾ (ಜವರ) ಮತ್ತು ಇನ್ನಿತರರ ವಿರುದ್ಧ ದೂರು ದಾಖಲಾಗಿದೆ. ಈ ಅರ್ಜಿಯ ವಿಚಾರಣೆಯನ್ನು 82ನೇ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ನಡೆಸಲಿದ್ದಾರೆ. ಇದನ್ನೂ ಓದಿ: ವಕ್ಫ್ ಬೋರ್ಡ್‌ ಅಧಿಕಾರವನ್ನು ಕಡಿಮೆ ಮಾಡುವ ವಕ್ಫ್‌ ತಿದ್ದುಪಡಿ ಮಸೂದೆ ಮಂಡನೆ

     

    ವಕೀಲ ವಂಸತ್ ಅವರು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ಇವತ್ತು ದಾಖಲೆಗಳ ಪರಿಶೀಲನೆ ನಡೆದಿದೆ. ಕೆಲವೊಂದು ಅಂಶಗಳ ಇಟ್ಟು ವಾದ ಮಂಡನೆ ಮಾಡಿದ್ದೇವೆ. ಕೋರ್ಟ್‌ ಮತ್ತಷ್ಟು ವಾದ ಮಂಡನೆಗೆ ಅವಕಾಶ ನೀಡಿದ್ದರಿಂದ ಶುಕ್ರವಾರ ವಾದ ಮಂಡನೆ ಮಾಡಲಿದ್ದೇವೆ ಎಂದು ತಿಳಿಸಿದರು.

  • 27 ಹಕ್ಕುದಾರರಿರುವ ಪಿತ್ರಾರ್ಜಿತ ಆಸ್ತಿಯನ್ನು ಒಬ್ಬನ ಸಹಿಯಿಂದ ಪಡೆದ ಸಿಎಂ, ಅಕ್ರಮವಾಗಿ ಜಮೀನು ಖರೀದಿ: ಆರ್‌.ಅಶೋಕ್

    27 ಹಕ್ಕುದಾರರಿರುವ ಪಿತ್ರಾರ್ಜಿತ ಆಸ್ತಿಯನ್ನು ಒಬ್ಬನ ಸಹಿಯಿಂದ ಪಡೆದ ಸಿಎಂ, ಅಕ್ರಮವಾಗಿ ಜಮೀನು ಖರೀದಿ: ಆರ್‌.ಅಶೋಕ್

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಖರೀದಿಸಿದ ಜಮೀನು ಪಿತ್ರಾರ್ಜಿತ ಆಸ್ತಿಯಾಗಿದ್ದು, ಅದಕ್ಕೆ 27 ಹಕ್ಕುದಾರರಿದ್ದರೂ ಕೇವಲ ಒಬ್ಬರ ಬಳಿ ಸಹಿ ಹಾಕಿಸಿಕೊಳ್ಳಲಾಗಿದೆ. ಇದು ಸಂಪೂರ್ಣ ಅಕ್ರಮ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ (R.Ashok) ಹೇಳಿದರು.

    ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು. ಜಮೀನಿನ ಮೂಲ ಹಕ್ಕುದಾರರು, ಇತಿಹಾಸದ ಕುರಿತು ವಿವರಿಸಿದರು. ಇದನ್ನೂ ಓದಿ: MUDA Scam | ಆರೋಪ ನಿರಾಧಾರ, ನೋಟಿಸ್‌ ನೀಡಿರುವುದು ಕ್ರಮಬದ್ದವಲ್ಲ: ರಾಜ್ಯಪಾಲರಿಗೆ ಸಿಎಂ ಉತ್ತರ

    ಸಿಎಂ ಸಿದ್ದರಾಮಯ್ಯ ಖರೀದಿಸಿದ ಜಾಗ ನಿಂಗ ಎಂಬುವರಿಗೆ ಸೇರಿದ ಜಮೀನಾಗಿದ್ದು, 1936 ರಲ್ಲಿ ನಿಂಗ ಜಮೀನು ಖರೀದಿಸಿದ್ದರು. ಅವರು 28 ವರ್ಷಗಳ ಹಿಂದೆ ನಿಧನರಾಗಿದ್ದು, ಅವರ ಪತ್ನಿ ನಿಂಗಮ್ಮ 1990 ರಲ್ಲಿ ಮೃತರಾಗಿದ್ದರು. ಇದು ನಿಂಗ ಮತ್ತು ನಿಂಗಮ್ಮ ಅವರ ಸ್ವಯಾರ್ಜಿತ ಆಸ್ತಿಯಾಗಿದ್ದು, ಅವರ ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಾಗಿದೆ. ನಿಂಗ ಅವರಿಗೆ ಮೂರು ಮಕ್ಕಳಿದ್ದು, ಅವರ ಕುಟುಂಬದವರು 27 ಜನರಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ದೇವರಾಜು ಎಂಬ ಒಬ್ಬ ವ್ಯಕ್ತಿಯಿಂದ ಮಾತ್ರ ಸಹಿ ಹಾಕಿಸಿಕೊಂಡಿದ್ದಾರೆ ಎಂದು ತಿಳಿಸಿದರು.

    1968 ರಲ್ಲಿ ಸರ್ವೆ ಸಂಖ್ಯೆ 464 ರಲ್ಲಿ ನಿಂಗ ಅವರ ಪುತ್ರ ಮಲ್ಲಯ್ಯ ಅವರ ಹೆಸರಿಗೆ ಈ ಜಮೀನು ನೋಂದಣಿಯಾಗಿತ್ತು. 1990 ರಲ್ಲಿ ಒಟ್ಟು 462 ಎಕರೆ ಜಮೀನಿನಲ್ಲಿ ದೇವನೂರು ಬಡಾವಣೆ ಮುಡಾ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಬಳಿಕ ಜಮೀನು ಸಂಬಂಧ ದೇವರಾಜು ಅವರಿಗೆ ಮುಡಾದಿಂದ 3 ಲಕ್ಷ ರೂ. ಅವಾರ್ಡ್ ನೀಡಲಾಗಿತ್ತು. ಈ ಅವಾರ್ಡ್ ನೋಟಿಸ್‌ಗೆ ಮಲ್ಲಯ್ಯ ಸಹಿ ಹಾಕಿದ್ದರು. ನಂತರ 1998 ರಲ್ಲಿ ಮುಡಾ ಸರ್ವೆ ಸಂಖ್ಯೆ 464 ನ್ನು ಭೂ ಸ್ವಾಧೀನದಿಂದ ಕೈ ಬಿಟ್ಟಿತ್ತು ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ರಾಜ್ಯಾದ್ಯಂತ ಮುಂದಿನ 5 ದಿನ ಮಳೆಯ ಮುನ್ಸೂಚನೆ

    ಈ ಜಮೀನು 1998 ರಲ್ಲಿ ಮುಡಾದಿಂದ ಡಿ ನೋಟಿಫಿಕೇಶನ್‌ ಆಗಿತ್ತು. ಆಗ ಸಿದ್ದರಾಮಯ್ಯನವರೇ ಉಪಮುಖ್ಯಮಂತ್ರಿಯಾಗಿದ್ದರು. ತಂದೆ-ತಾಯಿ ಸತ್ತ ನಂತರ ಕುಟುಂಬದ ಎಲ್ಲರ ಸಹಿ ಪಡೆಯಬೇಕಾಗುತ್ತದೆ. 2004 ರಲ್ಲಿ ದೇವರಾಜು ಅವರಿಂದ ಸಿದ್ದರಾಮಯ್ಯ ಅವರ ಭಾಮೈದುನ ಮಲ್ಲಿಕಾರ್ಜುನ ಸ್ವಾಮಿ 3 ಎಕರೆ 16 ಗುಂಟೆ ಜಮೀನನ್ನು ಕ್ರಯಕ್ಕೆ ಪಡೆದು ಕಾನೂನು ಬಾಹಿರವಾಗಿ ನೋಂದಣಿ ಮಾಡಿಸಿಕೊಂಡಿದ್ದರು. 2005 ರಲ್ಲಿ ಇದು ಭೂ ಪರಿವರ್ತನೆಯಾಯಿತು. 2001 ರಲ್ಲೇ ಬಡಾವಣೆ ಮಾಡಲು ಇದನ್ನು ಎಲ್‌ & ಟಿಗೆ ನೀಡಲಾಗಿತ್ತು. ಅದಾದ ನಂತರ ಈ ಜಮೀನು ಪರಿವರ್ತನೆಯಾಗಿದೆ ಎಂದು ಹೇಳಿದರು.

    ಈ ಜಮೀನು ಮೂಲೆಯಲ್ಲಿದ್ದುದರಿಂದ ಇದು ಬೇಕಿಲ್ಲ ಎಂದು ಕೈ ಬಿಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಆದರೆ ಇದು ಮಧ್ಯಭಾಗದಲ್ಲಿ ಬರುತ್ತದೆ. ದಲಿತ ವ್ಯಕ್ತಿ ನಿಂಗನಿಗೆ ಸೇರಿದ ಜಮೀನಿನ ದಾಖಲೆಗಳ ವಿವರ ದೊಡ್ಡ ದೊಡ್ಡ ಹುದ್ದೆಗಳಲ್ಲಿದ್ದ ಸಿದ್ದರಾಮಯ್ಯನವರಿಗೆ ತಿಳಿಯಲೇ ಇಲ್ಲ. ಈ ಜಮೀನನ್ನು ಸಿದ್ದರಾಮಯ್ಯ ಪತ್ನಿಗೆ ಭಾವ ಅರಿಶಿನ ಕುಂಕುಮಕ್ಕೆ ನೀಡಿದ್ದಾರೆ. ಇದು ಪೂರ್ವ ಯೋಜಿತ ಅಕ್ರಮವಾಗಿದೆ ಎಂದರು.

    ಸಿಎಂ ಸಿದ್ದರಾಮಯ್ಯ ಪತ್ನಿ 2014 ರಲ್ಲಿ ಮುಡಾಗೆ ಪತ್ರ ಬರೆದು ಬದಲಿ ಪರಿಹಾರ ಜಮೀನು ನೀಡುವಂತೆ ಕೋರಿದ್ದರು. ಇದಕ್ಕೆ ಉತ್ತರ ಬರೆದ ಮುಡಾ ಆಯುಕ್ತರು, ಬದಲಿ ಜಮೀನು ಇಲ್ಲವೆಂದು, ಅದಕ್ಕೆ ತತ್ಸಮಾನ ಜಮೀನು ನೀಡಲಾಗುವುದು ಎಂದು ತಿಳಿಸುತ್ತಾರೆ. ನಂತರ 2014 ರಲ್ಲಿ 50:50 ವಿಧಾನದಲ್ಲಿ ಪರಿಹಾರ ನೀಡಲಾಯಿತು. 2023 ರಲ್ಲಿ ನಗರಾಭಿವೃದ್ಧಿ ಇಲಾಖೆ ಇವೆಲ್ಲವೂ ನಿಯಮಬಾಹಿರ ಎಂದು ಆದೇಶ ಮಾಡಿತ್ತು ಎಂದು ತಿಳಿಸಿದರು. ಇದನ್ನೂ ಓದಿ: ಕಾಳಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಕುಸಿತ – ನೀರಿಗೆ ಬಿದ್ದ ಲಾರಿ, ಚಾಲಕನ ರಕ್ಷಣೆ

    ಈ ಜಮೀನಿನ ಮಾಲೀಕತ್ವದ ವಿಷಯದಲ್ಲೇ ಇನ್ನೂ ತೀರ್ಮಾನ ಆಗಿಲ್ಲ. ಆದರೂ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದವರು ಅದನ್ನು ಪರಿಶೀಲಿಸಿಲ್ಲ. ಈ ಜಮೀನನ್ನು ಮೃತರಾದ ನಿಂಗ ಅವರ ಹೆಸರಿನಲ್ಲಿ ಡಿ ನೋಟಿಫೈ ಮಾಡಿದ್ದಾರೆ. ಬದಲಿ ಜಮೀನು ಪರಿಹಾರ ನೀಡುವುದಾದರೆ ಅದೇ ಜಾಗದಲ್ಲಿ ನಿವೇಶನ ನೀಡಬೇಕು. ಆದರೆ ಬೆಲೆಬಾಳುವ ಸೈಟುಗಳನ್ನು ನೀಡಿದ್ದಾರೆ. ಇದಕ್ಕೆ ಅಧಿಕಾರಿಗಳ ಮೇಲೆ ಯಾರು ಒತ್ತಡ ಹೇರಿದ್ದಾರೆ ಎಂದು ಪ್ರಶ್ನೆ ಮಾಡಿದರು.

    ಮುಖ್ಯಮಂತ್ರಿ ಸಿದ್ದರಾಮಯ್ಯ 40 ವರ್ಷಗಳ ರಾಜಕೀಯದಲ್ಲಿ ಕ್ಲೀನ್‌ ಎಂದು ಹೇಳಿ, ಕ್ಲೀನ್‌ ಆಗಿ 14 ಸೈಟುಗಳನ್ನು ನುಂಗಿದ್ದಾರೆ. ಈ ಹಿಂದೆ ರೀಡು ಪ್ರಕರಣದಲ್ಲಿ ಕೆಂಪಣ್ಣ ಆಯೋಗ ನೇಮಿಸಿ ಆರು ವರ್ಷ ಕಳೆದರೂ ವರದಿ ಬರಲಿಲ್ಲ. ಅದೇ ತಂತ್ರವನ್ನು ಪ್ರಯೋಗಿಸಿ ದೇಸಾಯಿ ಆಯೋಗ ರಚಿಸಿದ್ದು, ಇದಕ್ಕೆ 60 ವರ್ಷ ಅವಧಿ ನೀಡುತ್ತಾರಾ ಎಂದು ಸ್ಪಷ್ಟಪಡಿಸಬೇಕು ಎಂದರು.

    ಕ್ಲೀನ್‌ ಎಂಬ ಪಟ್ಟವನ್ನು ರಾಜ್ಯದ ಜನರು ನೀಡಬೇಕಿದ್ದರೂ, ಮುಖ್ಯಮಂತ್ರಿಯವರು ತಮ್ಮನ್ನು ತಾವೇ ಕ್ಲೀನ್‌ ಎಂದು ಹೇಳಿಕೊಳ್ಳುತ್ತಿದ್ದಾರೆ. ಸದನದಲ್ಲಿ ಮಾತನಾಡಿದ್ದನ್ನು ಮರುದಿನ ಪತ್ರಿಕೆಗಳಲ್ಲಿ ಜಾಹೀರಾತು ನೀಡುತ್ತಾರೆ. ಹಣದ ಬಲ ಇದ್ದವರಿಗೆ ಮಾತ್ರ ಸದನದಲ್ಲಿ ಸ್ಥಾನ ಎಂದು ಅವರೇ ತೋರಿಸಿದಂತಾಗಿದೆ. ಈಗ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.

  • MUDA Scam | ಆರೋಪ ನಿರಾಧಾರ, ನೋಟಿಸ್‌ ನೀಡಿರುವುದು ಕ್ರಮಬದ್ದವಲ್ಲ: ರಾಜ್ಯಪಾಲರಿಗೆ ಸಿಎಂ ಉತ್ತರ

    MUDA Scam | ಆರೋಪ ನಿರಾಧಾರ, ನೋಟಿಸ್‌ ನೀಡಿರುವುದು ಕ್ರಮಬದ್ದವಲ್ಲ: ರಾಜ್ಯಪಾಲರಿಗೆ ಸಿಎಂ ಉತ್ತರ

    ಬೆಂಗಳೂರು: ನನ್ನ ಮೇಲೆ ಮಾಡಿರುವ ಆರೋಪಗಳೆಲ್ಲವೂ ನಿರಾಧಾರಾವಾಗಿದ್ದು ನನಗೆ ನೀವು ನೋಟಿಸ್‌ ಕೊಟ್ಟಿರುವುದು ಕ್ರಮಬದ್ದವಲ್ಲ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ಗೆ (Thawar Chand Gehlot) ಪತ್ರದ ಮೂಲಕ ಉತ್ತರ ನೀಡಿದ್ದಾರೆ.

    ಮುಡಾ ಸೈಟ್ ಹಂಚಿಕೆ (MUDA Scam) ವಿವಾದಕ್ಕೆ ಸಂಬಂಧಿಸಿದಂತೆ ಕಳೆದ ಭಾನುವಾರವೇ ಸಿಎಂ 60 ಪುಟಗಳ ಸುದೀರ್ಘ ಪತ್ರ ಬರೆದು ಕೊಟ್ಟಿದ್ದಾರೆ.

    ಮುಡಾ ನಿವೇಶನದ ಸಂಪೂರ್ಣ ದಾಖಲಾತಿಗಳು, ಸುಪ್ರೀಂಕೋರ್ಟ್, ಹೈಕೋರ್ಟ್‌ನ ಹಲವು ತೀರ್ಪುಗಳ ಉಲ್ಲೇಖ ಇರುವ ದಾಖಲಾತಿಗಳು ರವಾನಿಸಿ ಅಧಿಕಾರ ದುರ್ಬಳಕೆ ಮಾಡಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯಾದ್ಯಂತ ಮುಂದಿನ 5 ದಿನ ಮಳೆಯ ಮುನ್ಸೂಚನೆ

    ಸಿಎಂ ನೀಡಿದ ಉತ್ತರದಲ್ಲಿ ಏನಿದೆ?
    ನನ್ನ ಮೇಲೆ ಮಾಡಿರುವ ಆರೋಪಗಳೆಲ್ಲವೂ ನಿರಾಧಾರವಾಗಿದ್ದು ನನಗೆ ನೀವು ನೋಟಿಸ್‌ ಕೊಟ್ಟಿರುವುದು ಕ್ರಮಬದ್ದವಲ್ಲ. ನಾನು ಅಧಿಕಾರದಲ್ಲಿದ್ದಾಗ ಸ್ವಜನ ಪಕ್ಷಪಾತ ಮಾಡಿಲ್ಲ ಮತ್ತು ಕಾನೂನು ಬಾಹಿರವಾಗಿ ಯಾವುದೇ ನಿರ್ಧಾರಗಳನ್ನ ಕೈಗೊಂಡಿಲ್ಲ. ದೂರುದಾರರು ಮಾಡಿರುವ ಎಲ್ಲಾ ಆರೋಪಗಳು ನಿರಾಧಾರವಾಗಿದೆ.

    ಮುಡಾ ನಿವೇಶನ ಪಡೆದಿರುವ ಸಂಬಂಧ ಅಧಿಕಾರ ದುರ್ಬಳಕೆ ಮಾಡಿಲ್ಲ. ನ್ಯಾಯ ಸಮ್ಮತವಾಗಿ ನನ್ನ ಕುಟುಂಬ ನಿವೇಶನ ಪಡೆದಿದ್ದು ಯಾವುದೇ ರೀತಿಯಲ್ಲಿ ಕಾನೂನುಬಾಹಿರವಾಗಿ ನಿವೇಶನ ಪಡೆದಿಲ್ಲ. ಮುಖ್ಯ ಕಾರ್ಯದರ್ಶಿ ನೀಡಿರುವ ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸಬಹುದು.

     

    ಮುಡಾ ನಿವೇಶನ ಹಂಚಿಕೆ ವಿಷಯದಲ್ಲಿ ನಾನು ಲೋಪವೆಸಗಿಲ್ಲ. ಆಧಾರ ರಹಿತ ಮಾಹಿತಿ ಆಧರಿಸಿ ನೋಟಿಸ್‌ ನೀಡಿರುವುದು ಸಮಂಜಸವಲ್ಲ. ದೂರುದಾರರ ಪೂರ್ವಾಪರಗಳ ಬಗ್ಗೆಯೂ ರಾಜ್ಯಕ್ಕೆ ಗೊತ್ತಿದೆ. ಪೂರ್ವಾಪರತೆಗಳನ್ನು ಅರೆಯದೇ ನೋಟಿಸ್‌ ನೀಡಿರುವುದು ಸರಿಯಲ್ಲ. ಹೀಗಾಗಿ ಪ್ರಾಸಿಕ್ಯೂಷನ್ ಅನುಮತಿಗೆ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಬೇಕು.

  • MUDA Scam | ಆ.12ರ ಬಳಿಕ ರಾಜ್ಯಪಾಲರ ನಿರ್ಧಾರ ಪ್ರಕಟ?

    MUDA Scam | ಆ.12ರ ಬಳಿಕ ರಾಜ್ಯಪಾಲರ ನಿರ್ಧಾರ ಪ್ರಕಟ?

    ಬೆಂಗಳೂರು: ಮುಡಾ ಹಗರಣ (MUDA Scam) ವಿಚಾರವಾಗಿ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ (Thawar Chand Gehlot) ಅವರ ಮುಂದಿನ ನಡೆ ತೀವ್ರ ಕುತೂಹಲ ಕೆರಳಿಸಿದೆ. ದೆಹಲಿಯಿಂದ ವಾಪಸ್ ಆಗಿರುವ ರಾಜ್ಯಪಾಲರು ಇನ್ಮುಂದೆ ಅಸಲಿ ಆಟ ಆರಂಭಿಸುತ್ತಾರಾ ಎಂಬ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

    ಶೋಕಾಸ್ ನೋಟಿಸ್‌ನ ಮುಂದಿನ ಪ್ರಕ್ರಿಯೆ ಹೇಗಿರಲಿದೆ ಎಂಬ ಉತ್ಸಾಹ ಮೂಡಿಸಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿಸಿದರೆ ಸರ್ಕಾರ ಹಾಗೂ ರಾಜಭವನದ ನಡುವೆ ರಾಜಕೀಯ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ. ಸದ್ಯಕ್ಕೆ ಸದ್ಯಕ್ಕೆ ರಾಜ್ಯಪಾಲರು ಕಾದು ನೋಡಲಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ರಾಜಾಶ್ರಯಕ್ಕೆ ಹಸೀನಾ ಯುಕೆಗೆ ಹೋಗೋದು ಯಾಕೆ? – ವಾಯುನೆಲೆಯಲ್ಲಿ ದೋವಲ್‌ ಭೇಟಿ

     

    ದೆಹಲಿಯಲ್ಲಿ ಸಂಸತ್ ಅಧಿವೇಶನ (Parliament Session) ನಡೆಯುತ್ತಿದ್ದು ಆಗಸ್ಟ್ 12 ರಂದು ಮುಕ್ತಾಯಗೊಳ್ಳಲಿದೆ. ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿಸಿದರೆ, ಸದನದಲ್ಲಿ ಪ್ರತಿಪಕ್ಷಗಳು ಕೋಲಾಹಲ ಎಬ್ಬಿಸಬಹುದು ಎಂಬ ಕಾರಣಕ್ಕೆ ಅಲ್ಲಿಯವರೆಗೂ ಯಾವುದೇ ತೀರ್ಮಾನ ಕೈಗೊಳ್ಳುವುದು ಅನುಮಾನ ಎನ್ನಲಾಗಿದೆ. ಈ ಕಾರಣಕ್ಕೆ ಆಗಸ್ಟ್ 12ರ ಬಳಿಕ ರಾಜ್ಯಪಾಲರು ತಮ್ಮ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

  • ಮೈಸೂರು ಚಲೋ ಪಾದಯಾತ್ರೆ ವೇಳೆ ಹೃದಯಾಘಾತ – ಬಿಜೆಪಿ ಕಾರ್ಯಕರ್ತೆ ಸಾವು

    ಮೈಸೂರು ಚಲೋ ಪಾದಯಾತ್ರೆ ವೇಳೆ ಹೃದಯಾಘಾತ – ಬಿಜೆಪಿ ಕಾರ್ಯಕರ್ತೆ ಸಾವು

    ಬೆಂಗಳೂರು: ಬಿಜೆಪಿ (BJP) ಹಾಗೂ ಜೆಡಿಎಸ್‍ನಿಂದ (BJP) ನಡೆಯುತ್ತಿರುವ ಮೈಸೂರು ಚಲೋ ಪಾದಯಾತ್ರೆ (Mysuru Chalo padayatra) ವೇಳೆ ಬಿಜೆಪಿ ಕಾರ್ಯಕರ್ತೆಯೊಬ್ಬರು ಹೃದಯಾಘಾತದಿಂದ (Heart Attack) ಮೃತಪಟ್ಟಿದ್ದಾರೆ.

    ಮೃತ ಮಹಿಳೆಯನ್ನು ಬಸವನಗುಡಿಯ ಗೌರಮ್ಮ ಎಂದು ಗುರುತಿಸಲಾಗಿದೆ. ಬಹಿರಂಗ ಸಭೆಗೂ ಮುನ್ನ ನಡೆದು ಬರುತ್ತಿರುವಾಗ ಅವರಿಗೆ ಹೃದಯಾಘಾತವಾಗಿದೆ. ಪರಿಣಾಮ ಸ್ಥಳದಲ್ಲೇ ಅವರು ಸಾವನ್ನಪ್ಪಿದ್ದಾರೆ.

    ಭಾಷಣ ಮಧ್ಯೆಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗೂ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರು ತೆರಳಿ ಅಂತಿಮ ದರ್ಶನ ಪಡೆದಿದ್ದಾರೆ.

    ವಾಲ್ಮೀಕಿ ಹಗರಣ ಹಾಗೂ ಮುಡಾ ಹಗರಣದ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆ ನಡೆಸುತ್ತಿದ್ದು, ಪಾದಯಾತ್ರೆ ಮೂರನೇ ದಿನಕ್ಕೆ ಕಾಲಿಟ್ಟಿದೆ.

  • ಸಿಎಂ ಪರ ನಿಲ್ಲುವಂತೆ ಸುರ್ಜೇವಾಲ, ವೇಣುಗೋಪಾಲ್ ಸೂಚನೆ: ಪರಮೇಶ್ವರ್

    ಸಿಎಂ ಪರ ನಿಲ್ಲುವಂತೆ ಸುರ್ಜೇವಾಲ, ವೇಣುಗೋಪಾಲ್ ಸೂಚನೆ: ಪರಮೇಶ್ವರ್

    ಬೆಂಗಳೂರು : ಸಿಎಂ ಸಿದ್ದರಾಮಯ್ಯ (CM Siddaramaiah) ಪರ ಎಲ್ಲಾ ಮಂತ್ರಿಗಳು ನಿಲ್ಲಬೇಕು ಅಂತ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ (Randeep Singh Surjewala), ಸಂಸದ ವೇಣುಗೋಪಾಲ್‌ (K. C. Venugopal) ಅಂತ ಗೃಹ ಸಚಿವ ಪರಮೇಶ್ವರ್ (G Parameshwar) ತಿಳಿಸಿದ್ದಾರೆ.

    ಸಿದ್ದರಾಮಯ್ಯ ನಿವಾಸದಲ್ಲಿ ನಡೆದ ಸಭೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಬಗ್ಗೆ ಅನಾವಶ್ಯಕ ಆಪಾದನೆಗಳನ್ನು ಮಾಡಿ ವಿರೋಧ ಪಕ್ಷದವರು ಪಾದಯಾತ್ರೆ ಮಾಡಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಅದಕ್ಕೆ ಸರಿಯಾದ ಉತ್ತರ ಕೊಡಬೇಕು ಅಂತ ಹೇಳಿದ್ದಾರೆ. ಪ್ರತಿಯೊಬ್ಬ ಸಚಿವರು ಅದರ ಬಗ್ಗೆ ಮಾತಾಡಬೇಕು ಅಂತ ಹೇಳಿದ್ದಾರೆ. ನಾವು ಅದನ್ನ ಈಗಾಗಲೇ ಮಾಡುತ್ತಿದ್ದೇವೆ ಎಂದರು. ಇದನ್ನೂ ಓದಿ: ಮೃತ ಪಿಎಸ್‌ಐ ಪರಶುರಾಮ್ ಪತ್ನಿಗೆ ಸರ್ಕಾರದಿಂದ ಉದ್ಯೋಗ: ಪರಮೇಶ್ವರ್

     

    ನಾವು ಕೂಡಾ ಅವರು ಎಲ್ಲೆಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೋ ಅಲ್ಲಿ ಹಿಂದಿನ ದಿನ ಅಲ್ಲಿಗೆ ಹೋಗಿ ಅನೇಕ ಪ್ರಶ್ನೆಗಳನ್ನ ನಾವು ಹಾಕುತ್ತಿದ್ದೇವೆ. ನಿಮ್ಮ ಕಾಲದಲ್ಲಿ ಏನಾಗಿತ್ತು ಅಂತ ಪ್ರಶ್ನೆ ಕೇಳುತ್ತಿದ್ದೇವೆ. ಮುಡಾ ಬಗ್ಗೆ ಏನು ಸತ್ಯಾಂಶ ಏನು ಅನ್ನೋದರ ಬಗ್ಗೆ ನಾವೂ ಕೂಡಾ ಹೇಳುತ್ತಿದ್ದೇವೆ ಅಂತ ತಿಳಿಸಿದರು.

    ಮಂತ್ರಿಗಳ ಬದಲಾವಣೆ, ಸಂಪುಟ ಪುನರ್ ರಚನೆ ಬಗ್ಗೆ ಸುರ್ಜೇವಾಲ ಮತ್ತು ವೇಣುಗೋಪಾಲ್ ಜೊತೆ ಯಾವುದೇ ಚರ್ಚೆ ಆಗಿಲ್ಲ ಅಂತ ಇದೇ ವೇಳೆ ಪರಮೇಶ್ವರ್ ಹೇಳಿದರು.

    ಮಂತ್ರಿಗಳ ಬದಲಾವಣೆ, ಸಂಪುಟ ಪುನರ್ ರಚನೆ ಯಾವುದೂ ಇಲ್ಲ. ಒಟ್ಟಾಗಿ ಕೆಲಸ ಮಾಡಿ ಸರ್ಕಾರಕ್ಕೆ ಒಳ್ಳೆ ಹೆಸರು ತೆಗೆದುಕೊಂಡು ಬನ್ನಿ ಅಂತ ಹೇಳಿದ್ದಾರೆ. ಕ್ಯಾಬಿನೆಟ್ ಪುನರ್ ರಚನೆ, ಖಾತೆ ಬದಲಾವಣೆ ಯಾವುದೂ ಚರ್ಚೆ ನಮ್ಮ ಬಳಿ ಮಾಡಿಲ್ಲ .ಅ ಪ್ರಸ್ತಾಪವೇ ಸಭೆಯಲ್ಲಿ ಬಂದಿಲ್ಲ. ಕೆಲಸ ಮಾಡಿ ಸರ್ಕಾರಕ್ಕೆ ಒಳ್ಳೆ ಹೆಸರು ತನ್ನಿ ಅಂತ ಹೇಳಿದ್ದಾರೆ ಅಷ್ಟೇ ಎಂದರು.

     

  • ಸಿಎಂ ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟರೆ ಕಾನೂನು ಹೋರಾಟ: ಪರಮೇಶ್ವರ್

    ಸಿಎಂ ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟರೆ ಕಾನೂನು ಹೋರಾಟ: ಪರಮೇಶ್ವರ್

    ಬೆಂಗಳೂರು : ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ದ ಮುಡಾ ಹಗರಣಕ್ಕೆ (MUDA Scam) ಸಂಬಂಧಿಸಿದಂತೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ (Thawar Chand Gehlot) ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದರೆ ಕಾನೂ‌ನು ಹೋರಾಟ ಮಾಡುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ್ (G Parameshwar) ತಿಳಿಸಿದ್ದಾರೆ.

    ಬೆಂಗಳೂರಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಪ್ರಾಸಿಕ್ಯೂಷನ್ ಅನುಮತಿ ಕೊಟ್ಟರೆ ಕಾನೂನು ಹೋರಾಟ ಮಾಡುತ್ತೇವೆ. ಕ್ಯಾಬಿನೆಟ್ ನಿರ್ಣಯವನ್ನು ರಾಜ್ಯಪಾಲರು ಒಪ್ಪುತ್ತಾರೆ ಅಂತ ನಮಗೆ ರಾಜ್ಯಪಾಲರ ಮೇಲೆ ವಿಶ್ವಾಸ ಇದೆ. ನೊಟೀಸ್ ವಾಪಸ್ ಪಡೆಯಬೇಕು. ಈ ಪ್ರಕರಣದಲ್ಲಿ ಸತ್ಯಾಂಶ ಇಲ್ಲ ಅಂತ ನಿರ್ಣಯ ಮಾಡಿ ಕಳುಹಿಸಿದಾಗ ಅದನ್ನು ಮೀರಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡುತ್ತಾರೆ ಎಂದು ನಾನು ಅಂದುಕೊಳ್ಳೊಲ್ಲ ಅಂತ ವಿಶ್ವಾಸ ವ್ಯಕ್ತಪಡಿಸಿದರು.

     

     ರಾಜ್ಯಪಾಲರಿಗೆ ಅವರಿಗೆ ದತ್ತವಾದ ಅಧಿಕಾರ ಇರಬಹುದು. ಆದರೆ ಕ್ಯಾಬಿನೆಟ್ ಸಲಹೆಯನ್ನು ಅವರು ಅಷ್ಟು ಸುಲಭವಾಗಿ ತಿರಸ್ಕಾರ ಮಾಡುವುದಿಲ್ಲ ಎಂದು ಅಂದುಕೊಂಡಿದ್ದೇನೆ. ಅದನ್ನು ಮೀರಿಯೂ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದರೆ ನಾವು ಕೂಡಾ ಕಾನೂನು ಹೋರಾಟವನ್ನು ಮಾಡುತ್ತೇವೆ ಎಂದು ತಿಳಿಸಿದರು.