Tag: MUDA Scam

  • MUDA Scam | ಸಿದ್ದರಾಮಯ್ಯಗೆ ಉರುಳಾದ 14 ಸೈಟ್‌ – ಏನಿದು ಹಗರಣ? ವಿಪಕ್ಷಗಳ ಆರೋಪ ಏನು? ಬೆಳಕಿಗೆ ಬಂದಿದ್ದು ಹೇಗೆ?

    MUDA Scam | ಸಿದ್ದರಾಮಯ್ಯಗೆ ಉರುಳಾದ 14 ಸೈಟ್‌ – ಏನಿದು ಹಗರಣ? ವಿಪಕ್ಷಗಳ ಆರೋಪ ಏನು? ಬೆಳಕಿಗೆ ಬಂದಿದ್ದು ಹೇಗೆ?

    ಮೈಸೂರು: ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ದ ಈಗ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ. ಇದಕ್ಕೆ ಕಾರಣ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ (Paravathi) ಅವರಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (MUDA) ಬಂದ 14 ಸೈಟ್. ಹಾಗಾದರೆ ಏನಿದು ಹಗರಣ? ವಿಪಕ್ಷಗಳ ಆರೋಪ ಏನು? ಈ ಹಗರಣ ಬೆಳಕಿಗೆ ಬಂದಿದ್ದು ಹೇಗೆ? ಇತ್ಯಾದಿ ವಿವರಗಳನ್ನು ಇಲ್ಲಿ ನೀಡಲಾಗಿದೆ.

    ಏನಿದು ವಿವಾದ?
    ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಹೆಸರಿನಲ್ಲಿದ್ದ ಕೆಸರೆ ಗ್ರಾಮದ ಸರ್ವೆ ನಂಬರ್ 464ರಲ್ಲಿ 3.16 ಎಕರೆ ಜಮೀನನ್ನು ದೇವನೂರು ಬಡಾವಣೆ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಈ ಜಾಗವನ್ನು ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ದಾನ ಪತ್ರದ ಮೂಲಕ ಅವರ ಸಹೋದರ ಕೊಟ್ಟಿದ್ದರು. ಇದು ಒಟ್ಟು 1,48,104 ಚದರ ಅಡಿ ಜಾಗ ಇತ್ತು. ಅದರ ಬದಲಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ 2021ರಲ್ಲಿ ಪಾರ್ವತಿ ಅವರಿಗೆ ಮೈಸೂರಿನ ಪ್ರತಿಷ್ಠಿತ ವಿಜಯನಗರ ಬಡಾವಣೆಯಲ್ಲಿ 38,284 ಚದರ ಅಡಿ ಜಾಗ ನೀಡಿದ್ದು ಈಗ ವಿವಾದದ ಕೇಂದ್ರಬಿಂದು. ಇದನ್ನೂ ಓದಿ: ಬಿಜೆಪಿಯಿಂದ ಸಿದ್ದರಾಮಯ್ಯರ ಒಂದು ಕೂದಲು ಅಲುಗಾಡಿಸಲು ಸಾಧ್ಯವಿಲ್ಲ: ಹೆಚ್‌ಸಿ ಬಾಲಕೃಷ್ಣ

    ಬದಲಿ ನಿವೇಶನಕ್ಕೆ ಪತ್ರ
    ಮೈಸೂರಿನ ಕೆಸರೆ ಗ್ರಾಮದ ಸರ್ವೆ ನಂಬರ್ 464ರಲ್ಲಿರುವ 3 ಎಕರೆ 16 ಗುಂಟೆ ಜಾಗವನ್ನು ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಸಹೋದರ, ಪಾರ್ವತಿಯವರಿಗೆ ದಾನವಾಗಿ ನೀಡಿದ್ದರು. ಈ ಜಾಗವನ್ನು ಅಭಿವೃದ್ಧಿಗಾಗಿ ಪ್ರಾಧಿಕಾರ ಕಾನೂನು ಪ್ರಕಾರವೇ ವಶಪಡಿಸಿಕೊಂಡಿತ್ತು. 1998 ರಲ್ಲಿ ನೋಟಿಫೈ ಮಾಡಿತ್ತು. ಇದೇ ಜಾಗದಲ್ಲಿ ದೇವನೂರು 3ನೇ ಹಂತದ ಬಡಾವಣೆಯನ್ನೂ ಅಭಿವೃದ್ಧಿ ಮಾಡಿದೆ. ವಿಷಯ ಏನೆಂದರೆ ವಶಪಡಿಸಿಕೊಂಡ ಜಾಗಕ್ಕೆ ಬದಲಿ ಭೂಮಿ ಕೊಡುವುದು ಪ್ರಾಧಿಕಾರದ ಕರ್ತವ್ಯ. ಹೀಗಾಗಿ ಬದಲಿ ಭೂಮಿ ನೀಡುವಂತೆ 2014ರಲ್ಲಿ ಸಿಎಂ ಪತ್ನಿ ಅರ್ಜಿ ಹಾಕಿದ್ದರು. 2017ರಲ್ಲಿ ನಡೆದ ಸಭೆಯಲ್ಲಿ ಅಭಿವೃದ್ಧಿಪಡಿಸದೇ ಇರುವ ಭೂಮಿ ನೀಡಲು ತೀರ್ಮಾನಿಸಲಾಗಿತ್ತು. ಆದರೆ ಇದಕ್ಕೆ ಒಪ್ಪದ ಸಿಎಂ ಪತ್ನಿ ಪಾರ್ವತಿ 2021ರಲ್ಲಿ ಮತ್ತೊಂದು ಪತ್ರ ಬರೆದು 50:50 ಅನುಪಾತದಲ್ಲಿ ಬದಲಿ ನಿವೇಶನ ಕೊಡಿ ಎಂದು ಮನವಿ ಸಲ್ಲಿಸಿದ್ದರು. ಸಿಎಂ ಪತ್ನಿ ಕೋರಿಕೆಯಂತೆ 2021ರಲ್ಲಿ 50:50 ಅನುಪಾತದಲ್ಲಿ ಭೂಮಿ ನೀಡಲಾಗಿದೆ.

    ಹಗರಣದ ವಾಸನೆ ಬಂದಿದ್ದು ಯಾಕೆ?
    ಭೂಮಿ ವಶಪಡಿಸಿಕೊಂಡ ಜಾಗ ಬಿಟ್ಟು ಅಥವಾ ಸಮಾನಾಂತರವಾದ ಜಾಗ ಬಿಟ್ಟು ವಿಜಯನಗರದಲ್ಲಿ ಅಭಿವೃದ್ಧಿ ಆಗಿರುವ 38,284 ಚದರಡಿ ಭೂಮಿ ಹಂಚಿಕೆ ಮಾಡಲಾಗಿದೆ. ಅಲ್ಲದೇ 1998ರಲ್ಲಿ ಕಳೆದುಕೊಂಡ ಭೂಮಿಗೆ 2021ರಲ್ಲಿ ಪರಿಹಾರ ನೀಡಲಾಗಿದೆ ಎಂಬುದು ಆರ್‌ಟಿಐ ಕಾರ್ಯಕರ್ತರ ಆರೋಪ. ಭೂಮಿ ವಶಪಡಿಸಿಕೊಂಡ ಜಾಗದಲ್ಲಿ, ಅಥವಾ ಸಮಾನಾಂತರ ಜಾಗದಲ್ಲಿ ಬದಲಿ ಭೂಮಿ ನೀಡಬೇಕು ಎಂಬುದು ಕಾನೂನಿನಲ್ಲಿದೆ. ಆದರೆ ಸಿಎಂ ಪತ್ನಿಗೆ ಭೂಸ್ವಾಧೀನವಾದ ಜಾಗ ಬಿಟ್ಟು, ವಿಜಯನಗರದಲ್ಲಿ ಭೂಮಿ ಕೊಡಲಾಗಿದೆ. ಸಿಎಂ ಪತ್ನಿ ಅಲ್ಲದೇ ಹಲವು ಮಂದಿ ಭೂಮಿಯನ್ನು ಮುಡಾ ವಶಪಡಿಸಿಕೊಂಡಿದೆ. ಸಿಎಂ ಪತ್ನಿಗೆ ಹಂಚಿಕೆ ಮಾಡಿದಂತೆ ಇವರಿಗೂ ಜಾಗವನ್ನು ವಿಜಯನಗರ ಬಡಾವಣೆಯಲ್ಲಿ ಜಾಗ ಹಂಚಿಕೆ ಮಾಡಿಲ್ಲ. 50:50 ಅನುಪಾತ ನಿಯಮವನ್ನ ದುರುಪಯೋಗಪಡಿಸಿಕೊಂಡು 1998ರಲ್ಲಿ ವಶಪಡಿಸಿಕೊಂಡ ಜಾಗಕ್ಕೆ 2020ರಲ್ಲಿ ಜಾರಿಗೆ ಬಂದ 50-50 ಅನುಪಾತ ಬಳಸಿದ್ದೇಕೆ ಎನ್ನುವುದೇ ದೊಡ್ಡ ಪ್ರಶ್ನೆ. ಇದನ್ನೂ ಓದಿ: ರಕ್ಷಿತ್ ಶೆಟ್ಟಿಗೆ 20 ಲಕ್ಷ ರೂ. ಠೇವಣಿ ಇಡುವಂತೆ ಹೈಕೋರ್ಟ್ ನಿರ್ದೇಶನ

     

    ಕೆಸರೆಯಲ್ಲಿ ಕಡಿಮೆ ಮೌಲ್ಯದ ಜಾಗ ಸ್ವಾಧೀನ ಮಾಡಿ, ವಿಜಯನಗರದಲ್ಲಿ ಹೆಚ್ಚಿನ ಮೌಲ್ಯದ ಬದಲಿ ಭೂಮಿ ನೀಡಲಾಗಿದೆ. ಅಂದರೆ, ದೇವನೂರು ಬಡಾವಣೆಯಲ್ಲಿ ಚದರ ಅಡಿಗೆ 2,500 ರೂ. ನಿಂದ 3,000 ರೂ.ವರೆಗೆ ದರ ಇದೆ. ಆದರೆ ವಿಜಯನಗರದಲ್ಲಿ ಚದರ ಅಡಿಗೆ 7 ರಿಂದ 8 ಸಾವಿರ ರೂಪಾಯಿ ಇದೆ. ಹೀಗಾಗಿ ಸಿಎಂ ಮತ್ತು ಸಿಎಂ ಪತ್ನಿಗೆ ಆರ್ಥಿಕ ಲಾಭ ಮಾಡಿಕೊಡಲು ಮುಡಾ ಅಧಿಕಾರಿಗಳು ಸರ್ಕಾರಕ್ಕೆ ಆರ್ಥಿಕ ನಷ್ಟ ಮಾಡಿದ್ದಾರೆ. ಸಿಎಂ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದರಿಂದ ಈ ಜಾಗ ಹಂಚಿಕೆ ಮಾಡಲಾಗಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.

    ಒಂದನೇಯದಾಗಿ ಸಿಎಂ ಪತ್ನಿಗೆ 1998ರ ಜಾಗಕ್ಕೆ 2021ರಲ್ಲಿ ಪರಿಹಾರ ಸಿಕ್ಕಿರುವುದು, ಎರಡನೇಯದ್ದು ಬೇರೆ ಕಡೆ ಭೂಮಿ ಕೊಟ್ಟಿರುವುದು, ಮೂರನೇಯದ್ದು 50-50 ಅನುಪಾತ ದುರ್ಬಳಕೆ ಮಾಡಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿ ಈಗ ಸಿಎಂ ಸಂಕಷ್ಟಕ್ಕೆ ಕಾರಣವಾಗಿದೆ.

    ಬೆಳಕಿಗೆ ಬಂದಿದ್ದು ಹೇಗೆ?
    50:50 ಅನುಪಾತದ ಅಡಿ ನಿವೇಶನ ಹಂಚಿಕೆ ಬಗ್ಗೆ ಒಂದೂವರೆ ತಿಂಗಳ ಹಿಂದೆ ಆರ್‌ಟಿಐ (RTI) ಕಾರ್ಯಕರ್ತರು ಧ್ವನಿ ಎತ್ತಿದ್ದರು. ಈ ವೇಳೆ ಸಿಎಂ ಪತ್ನಿಗೂ ನಿವೇಶನ ಹಂಚಿಕೆ ಆಗಿರುವ ದಾಖಲೆ ಬೆಳಕಿಗೆ ಬಂದವು. ಹೀಗಾಗಿ ಹಗರಣ ರಾಜ್ಯಮಟ್ಟದಲ್ಲಿ ಸುದ್ದಿಯಾಯಿತು.

     

     

  • ಬಿಜೆಪಿಯಿಂದ ಸಿದ್ದರಾಮಯ್ಯರ ಒಂದು ಕೂದಲು ಅಲುಗಾಡಿಸಲು ಸಾಧ್ಯವಿಲ್ಲ: ಹೆಚ್‌ಸಿ ಬಾಲಕೃಷ್ಣ

    ಬಿಜೆಪಿಯಿಂದ ಸಿದ್ದರಾಮಯ್ಯರ ಒಂದು ಕೂದಲು ಅಲುಗಾಡಿಸಲು ಸಾಧ್ಯವಿಲ್ಲ: ಹೆಚ್‌ಸಿ ಬಾಲಕೃಷ್ಣ

    – ದ್ವೇಷದ ರಾಜಕಾರಣ ಮಾಡಿ ರಾಜ್ಯವನ್ನು ಬಾಂಗ್ಲಾ, ಶ್ರೀಲಂಕಾ ಸ್ಥಿತಿಗೆ ತರುವ ಪ್ರಯತ್ನ

    ರಾಮನಗರ: ಬಿಜೆಪಿಯಿಂದ (BJP) ಸಿದ್ದರಾಮಯ್ಯರ (Siddaramaiah) ಒಂದು ಕೂದಲು ಅಲುಗಾಡಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಮಾಗಡಿ ಶಾಸಕ ಹೆಚ್‌ಸಿ ಬಾಲಕೃಷ್ಣ (HC Balakrishna) ವಾಗ್ದಾಳಿ ನಡೆಸಿದ್ದಾರೆ.

    ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ (MUDA Scam) ಅನುಮತಿ ನೀಡಿದ ವಿಚಾರದ ಕುರಿತು ಮಾಗಡಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಈ ಮಟ್ಟಕ್ಕೆ ಇಳಿಯುತ್ತಾರೆ ಎಂದು ಅಂದುಕೊಂಡಿರಲಿಲ್ಲ. ರಾಜ್ಯ ಕಂಡ ಏಕೈಕ ಅತ್ಯುತ್ತಮ ನಾಯಕ ಸಿದ್ದರಾಮಯ್ಯ. ಅಧಿಕಾರ ಇದ್ದ ಸಂದರ್ಭದಲ್ಲಿ ಕುಟುಂಬದವರನ್ನು ಅಕ್ಕಪಕ್ಕ ಸೇರಿಸದೇ ಆಡಳಿತ ಮಾಡಿದ್ದಾರೆ. ಬಿಜೆಪಿಯವರು ದ್ವೇಷದ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಯುಪಿಯಲ್ಲಿ ಹಳಿ ತಪ್ಪಿದ ಸಬರಮತಿ ಎಕ್ಸ್‌ಪ್ರೆಸ್ ರೈಲು – ತಪ್ಪಿದ ಭಾರಿ ಅನಾಹುತ

    ಸಿದ್ದರಾಮಯ್ಯ ಕಾಲದಲ್ಲಿ ಆಗದೇ ಇರುವ ವಿಚಾರವನ್ನು ಅವರ ಹಣೆಗೆ ಕಟ್ಟುವ ಕೆಲಸ ಆಗುತ್ತಿದೆ. ಬಿಜೆಪಿಯವರಿಗೆ ಸಿದ್ದರಾಮಯ್ಯನ ಜನಪ್ರಿಯತೆ ಸಹಿಸಲು ಆಗುತ್ತಿಲ್ಲ. ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ ನಮ್ಮ ತಟ್ಟೆಯ ನೊಣದ ಬಗ್ಗೆ ಮಾತನಾಡುತ್ತಾರೆ. ಬಹುಶಃ ಇದರಿಂದ ಅವರಿಗೆ ಯಾವುದೇ ಅನುಕೂಲ ಆಗಲ್ಲ. ದ್ವೇಷದ ರಾಜಕಾರಣ ಮಾಡಿ ರಾಜ್ಯವನ್ನು ಬಾಂಗ್ಲಾ, ಶ್ರೀಲಂಕಾ ಸ್ಥಿತಿಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಇಷ್ಟೊಂದು ದ್ವೇಷದ ರಾಜಕಾರಣ ಮಾಡಿರೋ ಉದಾಹರಣೆಯೇ ಇಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಬಿಜೆಪಿ ನಾಯಕರ ಆಗ್ರಹ

  • ಸಿದ್ದರಾಮಯ್ಯ ಕಾನೂನುಬದ್ಧವಾಗಿ ಹೋರಾಟ ಮಾಡಿ ಕ್ಲೀನ್‌ಚಿಟ್ ಸಿಕ್ಕಿ ಯಶಸ್ವಿಯಾಗಿ ಹೊರಬರಲಿ: ಈಶ್ವರಪ್ಪ

    ಸಿದ್ದರಾಮಯ್ಯ ಕಾನೂನುಬದ್ಧವಾಗಿ ಹೋರಾಟ ಮಾಡಿ ಕ್ಲೀನ್‌ಚಿಟ್ ಸಿಕ್ಕಿ ಯಶಸ್ವಿಯಾಗಿ ಹೊರಬರಲಿ: ಈಶ್ವರಪ್ಪ

    – ಸಿಎಂ ಪತ್ನಿ ಗೌರಮ್ಮ ರೀತಿ ಇದ್ದವರು; ಅವರ ಮೇಲೆ ಆಪಾದನೆ ಬಾರದಿರಲಿ
    – ಸಿದ್ದರಾಮಯ್ಯ ಪರ ಈಶ್ವರಪ್ಪ ಬ್ಯಾಟಿಂಗ್

    ಶಿವಮೊಗ್ಗ: ಸಿದ್ದರಾಮಯ್ಯ (Siddaramaiha) ಕಾನೂನುಬದ್ಧವಾಗಿ ಹೋರಾಟ ಮಾಡಿ ಕ್ಲೀನ್‌ಚಿಟ್ ಸಿಕ್ಕಿ ಯಶಸ್ವಿಯಾಗಿ ಹೊರಗೆ ಬರಲಿ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ( K S Eshwarappa) ಹೇಳಿಕೆ ನೀಡಿದ್ದಾರೆ.

    ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ವಿಚಾರವಾಗಿ ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಸಿಎಂ ಮೇಲೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಕಾನೂನಿಗೆ ಗೌರವ ಕೊಡಬೇಕು ಎಂದು ಹೇಳಿದರು.  ಇದನ್ನೂ ಓದಿ : ಧೈರ್ಯವಾಗಿರಿ, ನಿಮ್ಮ ಜೊತೆ ನಾವಿದ್ದೇವೆ: ಸಿದ್ದರಾಮಯ್ಯ ಬೆಂಬಲಕ್ಕೆ ನಿಂತ ಹೈಕಮಾಂಡ್

    ನನ್ನ ಮೇಲೆ ಆಪಾದನೆ ಬಂದಾಗ ನಾನು ರಾಜೀನಾಮೆ ಕೊಟ್ಟು ತನಿಖೆಗೆ ಸಹಕಾರ ಕೊಟ್ಟಿದ್ದೇನೆ. ಅವರು ಕೂಡ ರಾಜೀನಾಮೆ ಕೊಟ್ಟು ತನಿಖೆಗೆ ಸಹಕಾರ ಕೊಡುತ್ತಾರೆ ಎಂಬ ವಿಶ್ವಾಸ ನನಗಿದೆ. ಆದರೆ ಅವರ ಶ್ರೀಮತಿಯವರನ್ನು ಎಲ್ಲಿ ಇದರಲ್ಲಿ ಸೇರಿಸಿಬಿಡುತ್ತಾರೋ ಎಂಬ ಅನುಮಾನವಿದೆ. ಪಾಪ ಅವರು ಗೌರಮ್ಮ ರೀತಿ ಇದ್ದವರು. ಅವರ ಮೇಲೆ ಅಂತಹ ಆಪಾದನೆ ಬಾರದೇ ಇರಲಿ ಎಂದು ಬೇಡಿಕೊಳ್ಳುತ್ತೇನೆ ಎಂದರು. ಇದನ್ನೂ ಓದಿ : ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ – ಸಿಎಂ ಮುಂದಿರುವ ಆಯ್ಕೆ ಏನು?

  • ಸಿಎಂ ರಾಜೀನಾಮೆ ಕೊಡುವ ಪ್ರಶ್ನೆಯೇ ಉದ್ಭವ ಆಗಲ್ಲ: ಪರಮೇಶ್ವರ್

    ಸಿಎಂ ರಾಜೀನಾಮೆ ಕೊಡುವ ಪ್ರಶ್ನೆಯೇ ಉದ್ಭವ ಆಗಲ್ಲ: ಪರಮೇಶ್ವರ್

    ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiha) ಅವರು ರಾಜೀನಾಮೆ ಕೊಡುವ ಪ್ರಶ್ನೆಯೇ ಉದ್ಭವ ಆಗಲ್ಲ. ನಾವು ಸಿಎಂ ಪರ ನಿಂತುಕೊಳ್ಳುತ್ತೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G Parameshwara) ತಿಳಿಸಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಿಂದ(Delhi) ಒತ್ತಡ ಬಂದಿರುವ ಕಾರಣ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿರಬಹುದು ಎಂದು ಹೇಳಿದರು. ಇದನ್ನೂ ಓದಿ: ಸಿಎಂಗೆ ಮುಡಾ ಸಂಕಷ್ಟ – ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರಿಂದ ಅನುಮತಿ

    ಈಗ ತಾನೇ ಸುದ್ದಿ ಬಂದಿದೆ. ಯಾವ ರೀತಿ ಅನುಮತಿ ಕೊಟ್ಟಿದ್ದಾರೆ ನೋಡಬೇಕು. ಈ ಪ್ರಕರಣ ಬಗ್ಗೆ ಸ್ಪಷ್ಟೀಕರಣ ಕೊಟ್ಟಿದ್ವಿ, ಪ್ರಾಸಿಕ್ಯೂಷನ್‌ಗೆ ಕೊಡಲ್ಲ ಅನ್ನುವ ವಿಶ್ವಾಸ ಇತ್ತು. ಆದರೆ ಅನುಮತಿ ಕೊಟ್ಟಿದ್ದಾರೆ. ನಾವು ಕಾನೂನಾತ್ಮಕವಾಗಿ ಎದುರಿಸ್ತೇವೆ. ರಾಜಭವನ ದುರುಪಯೋಗ ಆಗ್ತಿದೆ. ದೆಹಲಿಯಿಂದ ಒತ್ತಡ ಬಂದು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿರಬಹುದು. ಇದನ್ನು ನಾವು ದ್ವೇಷದ ನಡೆ ಅಂತನೇ ಭಾವಿಸಬೇಕಾಗುತ್ತದೆ ಎಂದು ಪ್ಯಾಸಿಕ್ಯೂಷನ್ ವಿರುದ್ಧ ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ಸಿಡಿಲು ಬಡಿದು 106 ಕುರಿಗಳು ದಾರುಣ ಸಾವು; ಕಂಗಾಲಾದ ಕುರಿಗಾಹಿಗಳು

    ನಮ್ಮ ಕಾನೂನು ತಂಡ ಏನು ತೀರ್ಮಾನ ಮಾಡುತ್ತದೆ ನೋಡಬೇಕು. ಸಿಎಂ ರಾಜೀನಾಮೆ ಪ್ರಶ್ನೆ ಈಗ ಉದ್ಭವ ಆಗಲ್ಲ. ನಾವು ಸಿದ್ದರಾಮಯ್ಯ ಪರ ನಿಂತುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ:  ಮುಂಬೈ ಟೆರರ್ ಅಟ್ಯಾಕ್ – ಪಾಕ್ ಮೂಲದ ರಾಣಾ ಹಸ್ತಾಂತರಕ್ಕೆ ಯುಎಸ್ ಕೋರ್ಟ್ ಅಸ್ತು

    ಮಾಜಿ ಸಿಎಂ ಯಡಿಯೂರಪ್ಪ (Yadiyurappa) ವಿರುದ್ಧದ ಪೋಕ್ಸೋ ಕೇಸ್ ಬಗ್ಗೆ ಮಾತನಾಡಿ, ಘಟನೆ ಆಗಿರುವುದು ಸತ್ಯ. ಕೇಸ್ ಮುಂದುವರೆಸುತ್ತೇವೆ. ತಡೆಯಾಜ್ಞೆ ತೆರವು ಮಾಡಿಸಿ ಮುಂದಿನ ಕಾನೂನು ಪ್ರಕ್ರಿಯೆಗೆ ಮುಂದಾಗುತ್ತೇವೆ. ಈಗಾಗಲೇ ಪೋಕ್ಸೋ ಕೇಸ್‌ನಲ್ಲಿ ತಡೆಯಾಜ್ಞೆ ತೆರವಿಗೆ ಎಜಿಗೆ ಸೂಚಿಸಲಾಗಿದೆ ಎಂದು ಪೋಕ್ಸೋ ಕೇಸ್ ಕುರಿತು ಕಾನೂನು ಪ್ರಕ್ರಿಯೆ ತೀವ್ರಗೊಳಿಸುವ ಬಗ್ಗೆ ಸಚಿವರು ಸುಳಿವು ನೀಡಿದರು. ಇದನ್ನೂ ಓದಿ: ತಂದೆಯನ್ನು ಆಸ್ಪತ್ರೆಗೆ ಸೇರಿಸಿ ಕಾರಿನಲ್ಲಿ ಎಸಿ ಹಾಕಿ ಮಲಗಿದ್ದ ಮಗ ಸಾವು

  • ವಾಲ್ಮೀಕಿ ಹಗರಣದ ವಿರುದ್ಧ ಸರಿಯಾದ ಹೋರಾಟ ನಡೆದರೆ ಸಿಎಂ ಕುರ್ಚಿ ಅಲ್ಲಾಡುತ್ತೆ: ಪ್ರತಾಪ್ ಸಿಂಹ

    ವಾಲ್ಮೀಕಿ ಹಗರಣದ ವಿರುದ್ಧ ಸರಿಯಾದ ಹೋರಾಟ ನಡೆದರೆ ಸಿಎಂ ಕುರ್ಚಿ ಅಲ್ಲಾಡುತ್ತೆ: ಪ್ರತಾಪ್ ಸಿಂಹ

    ಮೈಸೂರು: ವಾಲ್ಮೀಕಿ ಹಗರಣದ ವಿರುದ್ಧ ಸರಿಯಾದ ಹೋರಾಟ ನಡೆದರೆ ಸಿಎಂ ಕುರ್ಚಿ ಅಲ್ಲಾಡುತ್ತೆ ಎಂದು ಮಾಜಿ ಸಂಸದ ಪ್ರತಾಪ್ (Prathap Simha) ಸಿಂಹ ಹೇಳಿದ್ದಾರೆ.

    ವಾಲ್ಮೀಕಿ ಹಗರಣದ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸೆ.17ಕ್ಕೆ ವಾಲ್ಮೀಕಿ ಹಗರಣ ವಿಚಾರದಲ್ಲಿ ಪಾದಯಾತ್ರೆ ಮಾಡಲು ನಿರ್ಧಾರವಾಗಿದೆ. ಬೆಳಗಾವಿಯಲ್ಲಿ ನಡೆದದ್ದು ಬಿಜೆಪಿ ಅತೃಪ್ತರ ಬಂಡಾಯಗಾರರ ಸಭೆಯಲ್ಲ. ಬಿಜೆಪಿಯ ಜನಪ್ರಿಯ ನೇತಾರ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ನಡೆದ ಸಭೆ ಎಂದರು.

    ನಾವು ಮೈಸೂರು ಚಲೋ ಪಾದಯಾತ್ರೆ ಅನುಭವದ ಹಂಚಿಕೊಂಡಿದ್ದೇವೆ. ವಾಲ್ಮೀಕಿ ಹಗರಣದ ವಿರುದ್ಧ ಸರಿಯಾದ ಹೋರಾಟ ನಡೆದರೆ ಸಿಎಂ ಕುರ್ಚಿ ಅಲ್ಲಾಡುತ್ತೆ. ಬಸನಗೌಡ ಪಾಟೀಲ್ ಯತ್ನಾಳ್‌ರಂತ (Basangouda Patil Yatnal) ಬಹು ದೊಡ್ಡ ನಾಯಕರು ಕರೆದ ಕಾರಣ ನಾನು ಹೋಗಿದ್ದೆ ಎಂದು ಹೇಳಿದರು. ಇದನ್ನೂ ಓದಿ: ಜಮ್ಮು-ಕಾಶ್ಮೀರ: ಭಯೋತ್ಪಾದಕರ ವಿರುದ್ಧದ ಎನ್‌ಕೌಂಟರ್‌ನಲ್ಲಿ ಭಾರತೀಯ ಸೇನಾ ಕ್ಯಾಪ್ಟನ್‌ ಹುತಾತ್ಮ

    ಈ ಪಾದಯಾತ್ರೆ ಯಾರ ಮೇಲಾಟದ ಕಾರ್ಯಕ್ರಮವಲ್ಲ. ಯಾರ ನಾಯಕತ್ವ ಪ್ರದರ್ಶನವೂ ಅಲ್ಲ. ಪಾದಯಾತ್ರೆಗೆ ಹೈಕಮಾಂಡ್ ಅನುಮತಿ ಕೊಡುತ್ತದೆ. ಅನುಮತಿಯೊಂದಿಗೆ ಪಾದಯಾತ್ರೆ ಮಾಡುತ್ತೇವೆ. ಬಿಜೆಪಿ(BJP) ರಾಜ್ಯಾಧ್ಯಕ್ಷರ ಹಾದಿಯಾಗಿ ಎಲ್ಲರನ್ನು ಪಾದಯಾತ್ರೆಗೆ ಕರೆಯುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಗ್ಯಾರಂಟಿ ಪರಿಷ್ಕರಣೆಗೆ ರಾಜ್ಯ ಸರ್ಕಾರ ಚಿಂತನೆ; ಬಿಪಿಎಲ್ ಮಾನದಂಡ ಫಿಕ್ಸ್?

    ದಿನೇಶ್‌ಗೆ ತಿರುಗೇಟು:
    ಗೌರಿ ಲಂಕೇಶ್ ಆರೋಪಿಯ ಭೇಟಿಯಾದ ವಿಚಾರದ ಕುರಿತು ದಿನೇಶ್ ಗುಂಡೂರಾವ್ ಟ್ವೀಟ್‌ಗೆ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. ರಾಜಕಾರಣಿಗಳ ಮಕ್ಕಳಿಗೆ ಅಪ್ಪಂದಿರ ಪ್ರತಿಭೆ ವರ್ಗಾವಣೆ ಆಗುವುದಿಲ್ಲ. ದಿನೇಶ್ ಗುಂಡೂರಾವ್ (Dinesh Gundu Rao) ವಿಚಾರದಲ್ಲೂ ಅದೇ ಆಗಿದೆ. ಪ್ರಕರಣದ ಆರೋಪಿಯನ್ನು ಮಾತಾಡಿಸುವುದೇ ತಪ್ಪಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮಂಡ್ಯದಲ್ಲಿ ಮೆಡಿಕಲ್ ಮಾಫಿಯಾ; ಲೋಕಾಯುಕ್ತ ದಾಳಿಯಲ್ಲಿ ಲಕ್ಷಾಂತರ ರೂ. ಮೌಲ್ಯದ ಅವಧಿ ಮುಗಿದ ಮೆಡಿಸಿನ್ ಪತ್ತೆ

    ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಹಗರಣದ ವಿಚಾರದಲ್ಲಿ ಸೋನಿಯಾ ಗಾಂಧಿ(Sonia Gandhi), ರಾಹುಲ್ ಗಾಂಧಿ(Rahul Gandhi) ಇಬ್ಬರು ಆರೋಪಿಗಳು. ಕಾಂಗ್ರೆಸ್ ನಾಯಕರು ಯಾಕೆ ಹೋಗಿ ಅವರ ಕಾಲಿಗೆ ಬೀಳುತ್ತಾರೆ? ಅಧಿನಾಯಕ, ಅಧಿನಾಯಕಿ ಅಂತಾ ಕರೆಯುವ ಸೋನಿಯಾ, ರಾಹುಲ್ ಆರೋಪಿ ಸ್ಥಾನದಲ್ಲಿ ಇಲ್ವಾ? ದಿನೇಶ್ ಗುಂಡೂರಾವ್ ತಿಳಿಗೇಡಿ ತನದಲ್ಲಿ ಹೇಳಿಕೆ ಕೊಡುವುದನ್ನು ನಿಲ್ಲಿಸಲಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಕೇಜ್ರಿವಾಲ್‌ಗೆ ಜಾಮೀನು ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್

  • MUDA Scam | ಸಿಎಂ ವಿರುದ್ಧ ಖಾಸಗಿ ದೂರು – ವಿಚಾರಣೆ ಮುಂದೂಡಿಕೆ

    MUDA Scam | ಸಿಎಂ ವಿರುದ್ಧ ಖಾಸಗಿ ದೂರು – ವಿಚಾರಣೆ ಮುಂದೂಡಿಕೆ

    ಬೆಂಗಳೂರು: ಮುಡಾ ಹಗರಣ (MUDA Scam) ಸಂಬಂಧ ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ದ ದಾಖಲಾದ ಎರಡು ಖಾಸಗಿ ದೂರುಗಳ ವಿಚಾರಣೆಯನ್ನು ಬೆಂಗಳೂರಿನ ಜನ್ರಪತಿನಿಧಿಗಳ ಕೋರ್ಟ್ ಇಂದು ನಡೆಸಿತು.

    ಸಿಎಂ ವಿರುದ್ಧ ತನಿಖೆಗೆ ಪೂರ್ವಾನುಮತಿ ಬೇಕೇ ಬೇಕು ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು. ಆದರೆ ಈ ಹಂತದಲ್ಲಿ ಪೂರ್ವಾನುಮತಿ ಬೇಕಿಲ್ಲ ಎಂದು ದೂರುದಾರನ ಪರ ವಕೀಲರು ವಾದ ಮಂಡಿಸಿದರು. ಕೊನೆಗೆ ಕೋರ್ಟ್ ಆದೇಶವನ್ನು ಆಗಸ್ಟ್ 20ಕ್ಕೆ ಕಾಯ್ದಿರಿಸಿತು. ಇದನ್ನೂ ಓದಿ: ಸಿಎಂ ಜೊತೆ ಚರ್ಚಿಸಿ ಅಕ್ಕಿ ಪೂರೈಕೆಗೆ ಕೇಂದ್ರಕ್ಕೆ ಹೊಸ ಪ್ರಸ್ತಾವನೆ ಸಲ್ಲಿಸಲಾಗುವುದು: ಕೆ.ಹೆಚ್ ಮುನಿಯಪ್ಪ

    ಇದೇ ವೇಳೆ ಟಿಜೆ ಅಬ್ರಾಹಂ ಅರ್ಜಿಯ ವಿಚಾರಣೆಯನ್ನು ಆಗಸ್ಟ್ 21ಕ್ಕೆ ಕೋರ್ಟ್ ಮುಂದೂಡಿತು. ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ದೂರನ್ನು ತಿರಸ್ಕರಿಸಿ ಎಂದು ಆಲಂ ಪಾಶ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ.  ಇದನ್ನೂ ಓದಿ: ಟಿಬಿ ಡ್ಯಾಂಗೆ ಸ್ಟಾಪ್ ಲಾಗ್ ಗೇಟ್ ಅಳವಡಿಸಲು ಪ್ಲಾನ್ – ಏನೇನು ತಯಾರಿ ನಡೆಯುತ್ತಿದೆ?

    ಈ ಮಧ್ಯೆ ಸಿಎಂ ವಿರುದ್ಧ ಇಬ್ಬರು ನೀಡಿರುವ ಖಾಸಗಿ ದೂರುಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಹೇಳಿದ್ದಾರೆ.

  • MUDA Scam | ಸಿದ್ದರಾಮಯ್ಯ ವಿರುದ್ಧ ಖಾಸಗಿ ದೂರು – ಇಂದು ಕೋರ್ಟ್‌ನಲ್ಲಿ ಭವಿಷ್ಯ!

    MUDA Scam | ಸಿದ್ದರಾಮಯ್ಯ ವಿರುದ್ಧ ಖಾಸಗಿ ದೂರು – ಇಂದು ಕೋರ್ಟ್‌ನಲ್ಲಿ ಭವಿಷ್ಯ!

    ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣ (MUDA Scam) ವಿಚಾರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ದಾಖಲಾದ ಖಾಸಗಿ ದೂರನ್ನು ವಿಚಾರಣೆಗೆ ಸ್ವೀಕರಿಸಬೇಕೇ ಅಥವಾ ಬೇಡವೇ ಎಂಬುದರ ಕುರಿತ ಆದೇಶವನ್ನು ಮಂಗಳವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ (Court of Representatives) ಪ್ರಕಟಿಸಲಿದೆ.

    ನ್ಯಾಯಾಲಯದ ಈ ಆದೇಶ ಆಧರಿಸಿ ಸಿದ್ದರಾಮಯ್ಯ (Siddaramaiah) ಅವರು ವಿಚಾರಣೆ ಎದುರಿಸಲಿದ್ದಾರೆಯೇ ಎಂಬುದು ಗೊತ್ತಾಗಲಿದೆ. ಕೋರ್ಟ್‌ ನೀಡುವ ಆದೇಶ ನೋಡಿಕೊಂಡು ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ನೀಡಿರುವ ದೂರನ್ನು ಅಭಿಯೋಜನೆಗೆ ಅನುಮತಿ ಪರಿಗಣಿಸಿ ನೀಡಬೇಕೇ ಅಥವಾ ಬೇಡವೇ ಎಂಬುದನ್ನು ರಾಜ್ಯಪಾಲರು ನಿರ್ಧರಿಸುವ ಸಾಧ್ಯತೆಯಿದೆ. ಮಂಗಳವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶದತ್ತ ಎಲ್ಲರ ಚಿತ್ರ ಇದೆ. ಇದನ್ನೂ ಓದಿ: ಮೈಸೂರು ದಸರಾ 2024: ಜಂಬೂಸವಾರಿ ಆನೆಗಳ ಪಟ್ಟಿ ರಿಲೀಸ್‌ – ಈ ಬಾರಿಯೂ ಅಭಿಮನ್ಯು ʻಕ್ಯಾಪ್ಟನ್‌ʼ

    ಐದು ದಿನಗಳ ಹಿಂದೆಯಷ್ಟೇ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಎಂಬುವರು ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಮ್ಮ, ಮಲ್ಲಿಕಾರ್ಜುನ , ನಿಂಗಾ (ಜವರ) ಮತ್ತು ಇನ್ನಿತರರ ವಿರುದ್ಧ ದೂರು ದಾಖಲಾಗಿದೆ.

    ದೂರುದಾರರ ಪರವಾಗಿ ವಕೀಲರಾದ ಲಕ್ಷ್ಮಿ ಐಯ್ಯಂಗಾರ್ ಅವರು ವಾದ ಮಂಡಿಸಿದ್ದರು. ಮುಡಾ ಹಗರಣದ ವಿಚಾರದಲ್ಲಿ ತಕ್ಷಣಕ್ಕೆ ಅಭಿಯೋಜನೆಯ ಅಗತ್ಯ ಇಲ್ಲ. ಅದಿಲ್ಲದೆಯೇ ಪ್ರಕರಣವನ್ನ ವಿಚಾರಣೆಗೊಳಪಡಿಸಬಹುದು ಎಂದು ವಾದ ಮಂಡಿಸಿ, ಅಯ್ಯಪ್ಪ ಮತ್ತು ಮಂಜು ಸುರಾನಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಆದೇಶವನ್ನು ಉಲ್ಲೇಖಿಸಿದರು. ಇದನ್ನೂ ಓದಿ: Mysuru | ಶುರುವಾಯ್ತು ಹೊಸ ವಿವಾದ – ರಾಜ್ಯ ಸರ್ಕಾರ & ರಾಜಮನೆತನದ ನಡುವೆ ಜಟಾಪಟಿ

    ಪ್ರಕರಣದ ಬೆಳವಣಿಗೆ ಏನು?
    • ಮುಡಾ ಅಕ್ರಮ ಸಂಬಂಧ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಕಳೆದ ವಾರ ಅರ್ಜಿ ಸಲ್ಲಿಕೆಯಾಗಿತ್ತು.
    • ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಎಂಬುವವರಿಂದ ಖಾಸಗಿ ದೂರು ಸಲ್ಲಿಕೆಯಾಗಿತ್ತು.
    • ಈ ಅರ್ಜಿಯನ್ನು ವಿಚಾರಣೆಗೆ ಆಂಗೀಕರಿಸಬೇಕೇ ಎಂಬ ಬಗ್ಗೆ ಇಂದು (ಆ.13) ಕೋರ್ಟ್ ಆದೇಶ ನೀಡಲಿದೆ.
    • ಕೋರ್ಟ್ ವಿಚಾರಣೆಗೆ ಅಂಗೀಕರಿಸಿದರೆ ಸಿದ್ದರಾಮಯ್ಯಗೆ ಕಾನೂನು ಸಂಕಷ್ಟ ಎದುರಾಗುವ ಸಾಧ್ಯತೆಐಿದೆ
    • ಕೋರ್ಟ್ ಆದೇಶ ಗಮನಿಸಿ ಸಿದ್ದು ವಿರುದ್ಧ ಪ್ರಾಸಿಕ್ಯೂಷನ್ ಬಗ್ಗೆ ರಾಜ್ಯಪಾಲರು ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ.
    * ಈಗಾಗಲೇ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿರುವ ಅಬ್ರಹಾಂ ಕರೆಸಿ ರಾಜ್ಯಪಾಲರು ಮಾಹಿತಿ ಸಹ ಪಡೆದುಕೊಂಡಿದ್ದಾರೆ.

  • ಬಿಎಸ್‌ವೈ ಬಂಧನಕ್ಕೆ ತಡೆ – ಹೈಕೋರ್ಟ್‌ ಆದೇಶ ತೆರವಿಗೆ ಸರ್ಕಾರ ಪ್ಲ್ಯಾನ್‌

    ಬಿಎಸ್‌ವೈ ಬಂಧನಕ್ಕೆ ತಡೆ – ಹೈಕೋರ್ಟ್‌ ಆದೇಶ ತೆರವಿಗೆ ಸರ್ಕಾರ ಪ್ಲ್ಯಾನ್‌

    ಬೆಂಗಳೂರು: ಮುಡಾ ಹಗರಣದಲ್ಲಿ (MUDA Scam) ಸಿಎಂ ಸಿದ್ದರಾಮಯ್ಯ (CM Siddaramaiah) ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಆಗ್ರಹಿಸುತ್ತಿರುವ ಬೆನ್ನಲ್ಲೇ ಮಾಜಿ ಸಿಎಂ ಯಡಿಯೂರಪ್ಪ (Yediyurappa) ವಿರುದ್ಧದ ಪೋಕ್ಸೋ ಪ್ರಕರಣಕ್ಕೆ (Pocso Case) ಈಗ ಮತ್ತೆ ಜೀವ ಬಂದಿದೆ.

    ಸಿಎಂ ವಿರುದ್ಧ ಬಿಜೆಪಿಯಿಂದ (BJP) ರಾಜೀನಾಮೆ ಒತ್ತಾಯ, ರಾಜ್ಯಪಾಲರಿಂದ ಪ್ರಾಸಿಕ್ಯೂಷನ್ ನಿರೀಕ್ಷೆಯ ಬೆನ್ನಲ್ಲೇ ಬಿಎಸ್‌ವೈ ವಿರುದ್ಧ ಕಾನೂನು ಪ್ರಕ್ರಿಯೆಯನ್ನು ಸರ್ಕಾರ ತೀವ್ರಗೊಳಿಸಿದೆ. ಇದನ್ನೂ ಓದಿ: ತುಂಗಭದ್ರಾ ಡ್ಯಾಂನ ಸರ್ಕಾರ ಕಂಟ್ರೋಲ್‌ ಮಾಡಲ್ಲ – ಡಿಕೆಶಿ ಸ್ಪಷ್ಟನೆ

     

    ಬಿಎಸ್‌ವೈ ಬಂಧನಕ್ಕೆ ಇರುವ ಹೈಕೋರ್ಟ್ (High Court) ತಡೆಯಾಜ್ಞೆ ತೆರವಿಗೆ ಕಸರತ್ತು ನಡೆಸುತ್ತಿದೆ. ತಡೆಯಾಜ್ಞೆ ತೆರವುಗೊಳಿಸಿ ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ಲ್ಯಾನ್‌ ಮಾಡಿದೆ.

    ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದರೆ ಬಿಎಸ್‌ವೈ ಬಂಧನಕ್ಕೆ ನೀಡಿದ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಕಾನೂನು ಹೋರಾಟ ನಡೆಸುವ ಸಾಧ್ಯತೆಯಿದೆ.

     

  • ‘ಕಪ್ಪು ಚುಕ್ಕೆ’ ಆಟದಲ್ಲಿ ಸಿದ್ದರಾಮಯ್ಯಗೆ ಅಪ್ಪಳಿಸಿದ ಅನಿರೀಕ್ಷಿತ ಅಲೆ..!

    ‘ಕಪ್ಪು ಚುಕ್ಕೆ’ ಆಟದಲ್ಲಿ ಸಿದ್ದರಾಮಯ್ಯಗೆ ಅಪ್ಪಳಿಸಿದ ಅನಿರೀಕ್ಷಿತ ಅಲೆ..!

    – ರವೀಶ ಎಚ್.ಎಸ್, ಪೊಲಿಟಿಕಲ್ ಬ್ಯೂರೋ ಚೀಫ್, ಪಬ್ಲಿಕ್ ಟಿವಿ

    ದು ನನ್ನ ಮಗ ರಾಕೇಶ್ ರೂಂ.. ಮುಖದ ಮೇಲೆ ಕೈ ಆಡಿಸುತ್ತಾ ಆ ಕಡೆ ಈ ಕಡೆ ನೋಡುತ್ತಿದ್ದರು ಮುಖ್ಯಮಂತ್ರಿ ಸಿದ್ದರಾಮಯ್ಯ. ರೂಂ ಮೂಲೆಯಲ್ಲಿ ರಾಕೇಶ್ ಫೋಟೋ ಕೂಡ ಇತ್ತು. ಆ ಕೊಠಡಿಯ ಎಲ್ಲ ಕಡೆ ಒಂದು ಕ್ಷಣ ಕಣ್ಣಾಡಿಸಿ ಬಿಟ್ಟರು. ಕ್ಷಣಕ್ಕಷ್ಟೇ ಮೌನವಾದರು.. ಆ ಬಳಿಕ ಇನ್ನೊಂದು ಫೋಟೋ ನೋಡಿದರು. ಓಹೋ.. ಇದು ಆ ಫೋಟೋ.. ನಾನು ಕಾಂಗ್ರೆಸ್‌ಗೆ ಸೇರಿದಾಗ ತೆಗೆದ ಫೋಟೋ. ಮೈಸೂರು ಕಾಂಗ್ರೆಸ್ ಆಫೀಸ್‌ಗೆ ಹೋಗಿದ್ದೆ ಆಗ ತೆಗೆದಿದ್ದು ಎನ್ನುತ್ತಾ ಸಿದ್ದರಾಮಯ್ಯ ಮೊಗದಲ್ಲಿ ಗೆದ್ದ ನಗು ಎದ್ದು ಕಾಣ್ತಿತ್ತು. ಅಂದಹಾಗೆ ಇದೆಲ್ಲ ಕಂಡಿದ್ದು ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್.ರಂಗನಾಥ್ ಅವರ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಸಂದರ್ಶನಕ್ಕೂ ಮುನ್ನ. ಮೈಸೂರಿನ ಶಾರದಾದೇವಿನಗರದಲ್ಲಿ ಈಗ ಇರುವ ಮನೆಯ ಮೂರನೇ ಮಹಡಿಯ ಸಂದರ್ಶನಕ್ಕಾಗಿ ಸೆಟ್ ಮಾಡಲಾಗಿತ್ತು. ಅಪರೂಪಕ್ಕೆ ಎಂಬಂತೆ ಆ ಕೊಠಡಿಗೆ ಸಿಎಂ ಸಿದ್ದರಾಮಯ್ಯ ಬಂದಾಗ ಅವರಲ್ಲಿ ಕಂಡುಬಂದ ಭಾವನಾತ್ಮಕ ಕ್ಷಣಗಳು. ಸಿದ್ದರಾಮಯ್ಯನಹುಂಡಿ ಎಂಬ ಗ್ರಾಮದಿಂದ ಬಂದು ಲಾಯರ್ ಆಗಿ, ಅಲ್ಲಿಂದ ರಾಜಕೀಯಕ್ಕೆ ಬಂದು ರಾಜಕಾರಣದಲ್ಲಿ ಸಕ್ಸಸ್ ಕಂಡಿದ್ದೇ ಒಂದು ಮೈಲಿಗಲ್ಲು. ಎರಡು ಬಾರಿ ವಿರೋಧ ಪಕ್ಷದ ನಾಯಕ, ಎರಡು ಬಾರಿ ಉಪಮುಖ್ಯಮಂತ್ರಿ, ಎರಡು ಬಾರಿ ಮುಖ್ಯಮಂತ್ರಿ ಆಗುವುದು ಸಾಧನೆ ಅಲ್ಲದೆ ಮತ್ತೇನು.? ಆದರೆ ಅದೇ ಸಿದ್ದರಾಮಯ್ಯಗೆ ಕಡೆಯ ರಾಜಕೀಯ ಕಾಲಘಟ್ಟದಲ್ಲಿ ನಿರೀಕ್ಷಿಸಲಾಗದ ಅಲೆಯೊಂದು ಅಪ್ಪಳಿಸಿತು. ಭೂಮಿ ಮೇಲೆ ಆಸೆಯೇ ಇಲ್ಲ ಎಂದು ಸಾರ್ವಜನಿಕವಾಗಿ ನಡವಳಿಕೆ ತೋರಿದ್ದವರು ಸೈಟುಗಳಿಗಾಗಿಯೇ ಉರುಳು ಸುತ್ತಿಸಿಕೊಂಡಿದ್ದೇ ಒಂದು ಅಘಾತದ ಸಂಗತಿ.

    ನನ್ನ ಹತ್ತಿರ ನೆಟ್ಟಗೆ ಮನೆ ಇಲ್ಲ. ಎರಡು ಮನೆ ಮಾರಿಬಿಟ್ಟೆ.. ಮೈಸೂರಿನಲ್ಲಿ ಈಗ ಒಂದು ಮನೆ ಕಟ್ಟುತ್ತಿದ್ದೇನೆ. ಅದು ಮೂರು ವರ್ಷದಿಂದ ಮನೆ ಕಟ್ಟುತ್ತಿದ್ದೇನೆ. ಮಗ ಒಂದು ತೋಟ ಮಾಡಿದ್ದಾನೆ. ಮೈಸೂರಿನ ಕೂಡನಹಳ್ಳಿ ಹತ್ತಿರ 7-8 ಎಕರೆ ತೋಟ ಇದೆ. ಅದು ಮನೆಯಿಂದ ಪಾಲು ಬಂದಿದ್ದು ಅಷ್ಟೇ. ಇಷ್ಟು ಬಿಟ್ಟರೆ ನನ್ನ ಹತ್ತಿರ ಏನೇ ಇದ್ದರೂ ತೆಗೆದುಕೊಳ್ಳಲಿ. ಹೀಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಲು ಶುರು ಮಾಡಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಹೊರಗೆ ಕಾಣಿಸಿಕೊಳ್ಳದೇ, ಇಲ್ಲಿ ತನಕ ಎಲ್ಲಿಯೂ ವೇದಿಕೆ ಹಂಚಿಕೊಳ್ಳದೇ, ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಫೋಟೋ ನೋಡಿದ್ದೀರಾ ಎಂದು ಕೇಳುವಷ್ಟು ಅಂತರ ಕಾಯ್ದುಕೊಂಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಅದೇ ಪತ್ನಿ ವಿಚಾರದಲ್ಲಿ ಸೈಟುಗಳ ಅಕ್ರಮ ಹಂಚಿಕೆ ಆರೋಪ ಕೇಳಿಬಂದಿರುವುದು ಸಿದ್ದರಾಮಯ್ಯಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಈ ಮೊದಲು ಪುತ್ರನ ವಿಡಿಯೋ ಒಂದು ಹೊರಗೆ ಬಂದು ವರ್ಗಾವಣೆ ದಂಧೆಯ ಆರೋಪ ಕೇಳಿಬಂದಿತ್ತು. ಸ್ವತಃ ಸಿಎಂ ಸಿದ್ದರಾಮಯ್ಯ ಜೊತೆ ಪುತ್ರ ಯತೀಂದ್ರ ಮಾತನಾಡಿದ್ದ ವಿಡಿಯೋ ವರ್ಗಾವಣೆಯದ್ದು ಅಲ್ಲ, ಸಿಎಸ್‌ಆರ್ ಫಂಡ್ ಮಾತುಕತೆ ಅಂತಾ ಸಮರ್ಥಿಸಿಕೊಂಡಿದ್ದರು. ಆಗ ಪುತ್ರನ ವಿಡಿಯೋ ಪ್ರಕರಣದ ಮುಜುಗರವಾದ್ರೆ, ಈಗ ಪತ್ನಿ ಸೈಟು ಪಡೆದಿರುವ ಅಕ್ರಮ ಆರೋಪ ಸಿದ್ದರಾಮಯ್ಯಗೆ ಭಾವನಾತ್ಮಕವಾಗಿ ಬಹುದೊಡ್ಡ ಹೊಡೆತ. ಆ ಕಾರಣಕ್ಕಾಗಿಯೇ ಮೈಸೂರಿನ ಸಮಾವೇಶದಲ್ಲಿ ಪತ್ನಿ ವಿಚಾರವಾಗಿಯೂ ಭಾವನಾತ್ಮಕವಾಗಿ ಮಾತನಾಡಿಬಿಟ್ಟರು. ನನ್ನ ಧರ್ಮಪತ್ನಿ ಪಾರ್ವತಿ ಎಲ್ಲಿಯೂ ಸಾರ್ವಜನಿಕ ಕಾರ್ಯಕ್ರಮಕ್ಕೆ ಬಂದಿಲ್ಲ. ನಾನು ಪ್ರಮಾಣವಚನ ಸ್ವೀಕಾರ ಮಾಡುವಾಗಲೂ ಬಂದಿಲ್ಲ. ಇಲ್ಲಿರುವವರು ಅನೇಕರು ನನ್ನ ಹೆಂಡತಿ ಮುಖ ನೋಡಿಲ್ಲ. ಅವರು ತಪ್ಪು ಮಾಡಲು ಸಾಧ್ಯನಾ? ನಾನು ತಪ್ಪು ಮಾಡಲು ಸಾಧ್ಯನಾ ಎಂದು ಪ್ರಶ್ನೆ ಕೇಳಿ ಎಮೋಷನಲ್ ಕಾರ್ಡ್ ಪ್ಲೇ ಮಾಡಿದ್ದು ಇದೇ ವೇದಿಕೆಯಲ್ಲಿ. ಅದೇ ವೇದಿಕೆಯಲ್ಲಿ ಮಾರನೇ ದಿನ ಎಮೋಷನಲ್ ಕಾರ್ಡ್‌ಗೆ ಕೇಂದ್ರ ಸಚಿವ ಕುಮಾರಸ್ವಾಮಿ ತಿರುಗೇಟು ಕೊಟ್ಟುಬಿಟ್ಟರು. ನಿಮ್ಮ ಪತ್ನಿ ಬಗ್ಗೆ ನಾವು ಮಾತಾಡ್ತಿಲ್ಲ. ನಿಮ್ಮ ಪತ್ನಿ ಸೈಟುಗಳನ್ನ ಪಡೆದಿರುವ ಮಾರ್ಗದ ಬಗ್ಗೆ ನಮ್ಮ ತಕರಾರು ಎನ್ನುವ ಮೂಲಕ ರಾಜಕೀಯ ಹೋರಾಟವೇ ಎಂಬ ಸಂದೇಶ ರವಾನಿಸಿದ್ದಾರೆ.

    ಇದೆಲ್ಲವನ್ನೂ ನೋಡಿದಾಗ ಮುಡಾದಲ್ಲಿ ಪತ್ನಿ ಪಾರ್ವತಿಗೆ 50:50 ಪರಿಹಾರ ರೂಪದ 14 ಸೈಟುಗಳ ಹಂಚಿಕೆ ಅಕ್ರಮ ಎಂಬ ಆರೋಪದ ರಾಡಿ ಬಳಿಕ ಸಿದ್ದರಾಮಯ್ಯ ಬೇಸರ ಆಗಿರುವುದು ಸ್ಪಷ್ಟವಾಗುತ್ತೆ. ಯಾವುದಕ್ಕೆ ನನಗೆ ಆಸೆ ಇಲ್ಲ ಎನ್ನುತ್ತಿದ್ದೆನೋ, ಅದೇ ಭೂಮಿ ವಿಚಾರದಲ್ಲಿ ಮಸಿ ಬಳಿಯುವ ಯತ್ನ ನಡೆದುಹೋಯ್ತಲ್ಲ ಎಂಬ ನೋವು ಸಿದ್ದರಾಮಯ್ಯರನ್ನ ಕಾಡದೇ ಇರಲಾರದು. ಆ ಕಾರಣಕ್ಕಾಗಿಯೇ ಮುಡಾ ಕೊಟ್ಟಿರುವ ಸೈಟ್‌ಗಳನ್ನ ವಾಪಸ್ ಕೊಡುವ ಪ್ರಸ್ತಾಪ ಮುಂದಿಟ್ಟಿದ್ದಾರೆ. ಟೇಕ್ ಇಟ್ ಬ್ಯಾಕ್.. ಆದ್ರೆ ಪತ್ನಿಗೆ ಕೊಡಬೇಕಾದ ಪರಿಹಾರವನ್ನು ಕಾನೂನು ರೂಪದಲ್ಲೇ ಕೊಡಲಿ ಎಂಬ ಹೊಸ ಸೂತ್ರ ಬಿಟ್ಟಿದ್ದಾರೆ. ಆದ್ರೆ ದೇಸಾಯಿ ವಿಚಾರಣಾ ಆಯೋಗದ ತನಿಖೆ ಇರುವಾಗ, ರಾಜ್ಯಪಾಲರ ಬಳಿ ಪ್ರಾಸಿಕ್ಯೂಶನ್ ಅನುಮತಿ ಕೊಡಬೇಕೋ..? ಬೇಡವೋ..? ಎಂಬ ವಿಚಾರ ಇರುವ ಹಂತದಲ್ಲಿ ಕಾನೂನಾತ್ಮಕವಾಗಿ ವಾಪಸ್ ಕೊಡಬಹುದಾ ಎಂಬ ಪ್ರಶ್ನೆಯೂ ಎದುರಾಗಿದೆ. ಆ ಕಾರಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾದುನೋಡಲು ಮುಂದಾಗಿದ್ದಾರೆ ಅನ್ನಿಸುತ್ತೆ. ಸಿವಿಲ್ ವ್ಯಾಜ್ಯ.. ಕ್ರಿಮಿನಲ್ ವ್ಯಾಜ್ಯಗಳಿಗೂ ಬಹಳಷ್ಟು ವ್ಯತ್ಯಾಸಗಳಿವೆ. ರಾಜಕಾರಣವೇ ಹಾಗೆ ಯಾವುದನ್ನ ಎಲ್ಲಿಗೆ ಬೇಕಾದರೂ ತಂದು ನಿಲ್ಲಿಸುತ್ತೆ. ಆ ರಾಜಕಾರಣವನ್ನ ಎಲ್ಲರೂ ಎಲ್ಲ ಕಾಲಕ್ಕೂ ಮಾಡಿದ್ದಾರೆ. ಮುಂದೆಯೂ ಮಾಡಿಯೇ ಮಾಡುತ್ತಾರೆ. ಆದರೆ ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಪ್ರಭಾವ ಎಷ್ಟಿತ್ತು.. ಎಷ್ಟಿರಲಿಲ್ಲ..? ಯಾರದ್ದು ಸರಿ..? ಯಾರದ್ದು ತಪ್ಪು.. ಎಷ್ಟಿದೆ.? ಎಂಬ ಸತ್ಯಾಸತ್ಯತೆ ತನಿಖೆಯಿಂದ ಹೊರಬರುತ್ತೆ.

    ಇವರದ್ದೇ ಸರಿ.. ಇವರದ್ದೇ ತಪ್ಪು ಎಂದು ತೀರ್ಪು ನೀಡುವ ವಿಶ್ಲೇಷಣೆ ಅಗತ್ಯ ಇಲ್ಲ. ಆದರೆ ಆಕ್ಷನ್‌ಗೆ ರಿಯಾಕ್ಷನ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಧಾನಗತಿಯ ಹೆಜ್ಜೆ ಇಟ್ಟಿದ್ದರ ಬಗ್ಗೆ ಸಾಕಷ್ಟು ಚರ್ಚೆ ನಡೆದುಹೋಗಿದೆ. ಸೈಟುಗಳ ಅಕ್ರಮ ಹಂಚಿಕೆ ಆರೋಪ ಕೇಳಿಬಂದಾಗ ಇಷ್ಟು ದೊಡ್ಡ ಮಟ್ಟಕ್ಕೆ ಆ ಹೋರಾಟವನ್ನ ತೆಗೆದುಕೊಂಡು ಹೋಗ್ತಾರೆ ಅಂದುಕೊಂಡಿರಲಿಲ್ಲ ಅನ್ನಿಸುತ್ತೆ. ಅಲ್ಲದೆ ಆ 14 ಸೈಟ್‌ಗಳನ್ನು ವಾಪಸ್ ಕೊಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲದಲ್ಲಿದ್ದರು ಎನ್ನುವುದು ಸ್ಪಷ್ಟವಾಗುತ್ತೆ. ಆ ಕಾರಣಕ್ಕಾಗಿಯೇ ಬಿಜೆಪಿ – ಜೆಡಿಎಸ್ ಜಂಟಿ ಹೋರಾಟದ ಕಿಚ್ಚು ನಿಧಾನಗತಿಯಲ್ಲಿ ಹಬ್ಬುತ್ತಿದ್ದರೂ ಸಿದ್ದರಾಮಯ್ಯ ಮುಂದೆ ನೋಡೋಣ ಎಂಬ ಮನಸ್ಥಿತಿಗೆ ಬಂದುಬಿಟ್ಟರೇನೋ… ವಿಧಾನಸಭೆಯಲ್ಲಿ ಚರ್ಚೆಗೆ ಅವಕಾಶ ಕೇಳಿದಾಗ ಸಿದ್ದರಾಮಯ್ಯ ಹಿಂದೇಟು ಹಾಕಬಾರದಿತ್ತು. ವಿಧಾನಸಭೆಯಲ್ಲಿ ಮಾತಿನಲ್ಲೂ, ಅನುಭವದಲ್ಲಿ ವಿಪಕ್ಷಗಳನ್ನ ಎದುರಿಸುವ ತಾಕತ್ತು ಸಿದ್ದರಾಮಯ್ಯಗೆ ಇತ್ತು. ಆದರೆ ಪತ್ನಿ ಪಾರ್ವತಿ ಪಡೆದಿರುವ ಸೈಟು ವಿಚಾರವಾಗಿ ಚರ್ಚೆ ನಡೆದು ಕಡತಕ್ಕೆ ಹೋಗುವುದು, ಮತ್ತಷ್ಟು ರಾಡಿ ಆಗುವುದು ಸಿದ್ದರಾಮಯ್ಯಗೆ ಇಷ್ಟ ಇರಲಿಲ್ಲ ಎಂಬ ಮಾತಿತ್ತು. ಆ ಕಾರಣಕ್ಕಾಗಿಯೇ ಚರ್ಚೆ ಬೇಡ ಎಂಬ ಪಟ್ಟು ಹಿಡಿದು ಬಿಜೆಪಿ-ಜೆಡಿಎಸ್ ಹೋರಾಟಕ್ಕೆ ಮುನ್ನುಡಿ ಬರೆದುಬಿಟ್ಟರು. ಅದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡ ಬಿಜೆಪಿ-ಜೆಡಿಎಸ್ ಎರಡು ಹಂತದ ಹೋರಾಟದ ಪ್ಲ್ಯಾನ್ ಮಾಡಿ ಬೆಂಗಳೂರಿನಿಂದ ಮೈಸೂರು ತನಕ ಸಿದ್ದರಾಮಯ್ಯ ವಿರುದ್ಧ ಹೆಜ್ಜೆ ಹಾಕಿ ಇನ್ನಷ್ಟು ರಾಡಿ ಮಾಡಿಬಿಟ್ಟರು. ವಿಧಾನಸಭೆಯಲ್ಲಿ ಚರ್ಚೆ ನಡೆಸಿ ರಾಜಕೀಯ ಅಸ್ತ್ರ ಪ್ರಯೋಗಿಸಿದ್ರೆ ಮೈಸೂರಿನಲ್ಲಿ ಜನಾಂದೋಲನ ಸಮಾವೇಶ ಮಾಡಿ ಉತ್ತರ ಕೊಡಬೇಕಾದ ಅನಿವಾರ್ಯತೆಯೇ ಬರುತ್ತಿರಲಿಲ್ಲ.

    ಒಂದೂಕಾಲು ವರ್ಷಕ್ಕೆ ಕಾಂಗ್ರೆಸ್ ಸರ್ಕಾರ ಎರಡು ಪ್ರಮುಖ ಅಕ್ರಮ ಆರೋಪಗಳ ಕುಣಿಕೆ ಸಿಗುತ್ತೆ ಅಂತಾ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಸಿದ್ದರಾಮಯ್ಯ ನಾಯಕತ್ವ ವಿಪಕ್ಷಗಳಿಂದ ಇಂತಹ ಹೋರಾಟ ಎದುರಾಗುತ್ತೆ ಎಂದು ಯಾರೂ ಊಹಿಸಿರಲಿಲ್ಲ. ಹಾಗಾದ್ರೆ ಇದು ರಾಜಕೀಯ ಬದಲಾವಣೆಗೆ ಸಾಕ್ಷಿ ಆಗುತ್ತಾ ಎಂಬ ಪ್ರಶ್ನೆಗೆ ಸದ್ಯಕ್ಕೆ ಇಲ್ಲ ಎನ್ನಬಹುದು. ಆದರೆ ಯಾರ ಮೇಲಾದಾರೂ ಪರಿಣಾಮ ಬೀರುತ್ತೆ ಎಂದರೆ ಖಂಡಿತವಾಗಿ ಕೆಲವರಿಗೆ ಲಾಭ-ನಷ್ಟದ ಹಾರ ಬೀಳುತ್ತೆ. ಸಿಎಂ ಸಿದ್ದರಾಮಯ್ಯ ಪರ ನಾನು ಇದ್ದೇನೆ, ನಾನು ಬಂಡೆ ಆಗಿದ್ದೇನೆ ಎಂಬುದು ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಲೋಗನ್. ಬೆಂಗಳೂರಿನಿಂದ ಮೈಸೂರಿನ ತನಕ ನಾಲ್ಕೈದು ಸಮಾವೇಶಗಳಲ್ಲಿ ಸಿದ್ದರಾಮಯ್ಯ ಹೆಸರಲ್ಲಿ ಅಬ್ಬರಿಸಿದ್ದು ಡಿಕೆಶಿ. ನನ್ನ ಕುಮಾರಸ್ವಾಮಿ ನಡುವಿನ ಯುದ್ಧ ಎಂದು ಬಿಂಬಿಸಿಕೊಳ್ಳುವ ರೀತಿಯಲ್ಲಿ ನಡೆದ ತಂತ್ರದಲ್ಲಿ ಡಿಕೆಶಿ ಯಶಸ್ವಿ ಬಗ್ಗೆ ಲೆಕ್ಕಚಾರವೂ ನಡೆದಿದೆ. ಅಷ್ಟೇ ಅಲ್ಲದೆ ಮುಂದಿನ ಗುರಿ, ಗೆರೆ ಸ್ಪಷ್ಟವಾಗಿಸಿಕೊಳ್ಳಲು ಡಿಕೆಶಿಯ ಹರಸಾಹಸವೂ ಇದರಲ್ಲಿದೆ ಎನ್ನುವ ಮಾತುಗಳು ಕಾಂಗ್ರೆಸ್ ಪಕ್ಷದಲ್ಲೇ ಕೇಳಿಬಂದಿವೆ. ಈ ನಡುವೆ ಬಿಜೆಪಿ-ಜೆಡಿಎಸ್‌ಗೆ ಟಕ್ಕರ್ ಕೊಡುವ ಸಮಾವೇಶದಲ್ಲೇ ಕೆಲ ಸಚಿವರು ಸಿದ್ದರಾಮಯ್ಯ ಮೂರು ಮುಕ್ಕಾಲು ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ ಎಂಬ ಮುದ್ರೆಯನ್ನು ಒತ್ತಿದ್ದಾರೆ. ಇನ್ನು ಬಿಜೆಪಿ-ಜೆಡಿಎಸ್ ಪಾದಯಾತ್ರೆಯಲ್ಲಿ ವಿಜಯೇಂದ್ರ, ನಿಖಿಲ್ ಕುಮಾರಸ್ವಾಮಿ ನೆಲೆ ಗಟ್ಟಿಗೊಳಿಸುವ ಯತ್ನವೂ ಹೌದು ಎನ್ನಬಹುದು. ಒಳಸುಳಿಯ ಹೊಡೆತದ ನಡುವೆಯೂ ಮೂರೂ ಮುಕ್ಕಾಲು ವರ್ಷದ ಬೆಳೆಗೆ ಬೆವರು ಹರಿಸುತ್ತಿರುವ ವಿಜಯೇಂದ್ರಗೆ ಸದ್ಯಕ್ಕೆ ಲಾಭ ಎಂಬುದೆಷ್ಟು ಸತ್ಯವೋ.. ಅದೇ ರೀತಿ ತಂದೆಯ ರಾಷ್ಟ್ರ ರಾಜಕಾರಣದ ನಡೆಯಿಂದ ಜೆಡಿಎಸ್ ನೆಲೆಯಲ್ಲಿ ಉತ್ತರಾಧಿಕಾರತ್ವ ಯತ್ನಕ್ಕೆ ನಿಖಿಲ್‌ಗೂ ರಹದಾರಿ ಎಂಬುದನ್ನು ಮರೆಯುವಂತಿಲ್ಲ. ಅಲ್ಲದೆ ಒಕ್ಕಲಿಗ ಕೋಟೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ನಡುವಿನ ಯುದ್ಧ ಮೇಲ್ನೋಟಕ್ಕೆ ಒಕ್ಕಲಿಗ ಪಾರುಪತ್ಯ ಅನ್ನಿಸಿದರೂ ಜೆಡಿಎಸ್ ಶಕ್ತಿಯನ್ನು ಅಳೆಯುವಂತಿದೆ. ಆ ಕಾರಣಕ್ಕಾಗಿಯೇ ಒಂದೊಂದು ಸಲ ಕುಮಾರಸ್ವಾಮಿ ವರ್ಸಸ್ ಸಿದ್ದರಾಮಯ್ಯ, ಒಂದೊಂದು ಸಲ ಕುಮಾರಸ್ವಾಮಿ ವರ್ಸಸ್ ಡಿ.ಕೆ.ಶಿವಕುಮಾರ್ ನಡುವೆ ರಾಜಕೀಯ ಸಮರ ನಡೆಯುತ್ತೆ. ಹಾಗಾಗಿ `ಕಪ್ಪು ಚುಕ್ಕೆ’ ಇಡುವ ಆಟದಲ್ಲಿ ಸಿದ್ದರಾಮಯ್ಯಗೆ ಅಪ್ಪಳಿಸಿದ ಅನಿರೀಕ್ಷಿತ ಅಲೆ ಕರ್ನಾಟಕ ರಾಜಕಾರಣದಲ್ಲಿ ಯಾರ ದಿಕ್ಕನ್ನ ಬದಲಿಸುತ್ತೋ..? ಕಾದು ನೋಡಬೇಕಿದೆ.

  • ಸೇಡಿನ ರಾಜಕೀಯ ಮಾಡುವ ಮನಸ್ಥಿತಿ ಇರೋದು ದೇವೇಗೌಡರು, ಅವರ ಕುಟುಂಬಕ್ಕೆ: ಸಿಎಂ ವಾಗ್ದಾಳಿ

    ಸೇಡಿನ ರಾಜಕೀಯ ಮಾಡುವ ಮನಸ್ಥಿತಿ ಇರೋದು ದೇವೇಗೌಡರು, ಅವರ ಕುಟುಂಬಕ್ಕೆ: ಸಿಎಂ ವಾಗ್ದಾಳಿ

    -ಪಾಳೇಗಾರಿಕೆ ಪ್ರವೃತ್ತಿ ಇರೋರನ್ನ ರಾಜಕೀಯದಿಂದ ಓಡಿಸ್ಬೇಕು
    -ಪೋಕ್ಸೋ ಕೇಸ್ ಇರೋ ಬಿಎಸ್‍ವೈ ನನ್ನ ರಾಜೀನಾಮೆ ಕೇಳ್ತಾರೆ

    ಮೈಸೂರು: ದೇವೇಗೌಡರು, ಕುಮಾರಸ್ವಾಮಿ (H.D Kumaraswamy) ಕೊಟ್ಟ ಮಾತಿನಂತೆ ನಡೆದುಕೊಳ್ಳಲ್ಲ. ಸೇಡಿನ ರಾಜಕೀಯ ಮಾಡುವ ಮನಸ್ಥಿತಿ ಇರೋದು ದೇವೇಗೌಡರು ಹಾಗೂ ಅವರ ಕುಟುಂಬಕ್ಕೆ. ಇನ್ನೊಬ್ಬರು ಅಧಿಕಾರ ಮಾಡುವುದನ್ನು ಕುಮಾರಸ್ವಾಮಿ, ದೇವೇಗೌಡರು ಸಹಿಸಲ್ಲ. ನಮ್ಮ ಸರ್ಕಾರವನ್ನು ಅಸ್ಥಿರ ಮಾಡುವ ದುಷ್ಟ ಪ್ರಯತ್ನವನ್ನು ದೇವೇಗೌಡರು ಮಾಡ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ಮೈಸೂರಿನಲ್ಲಿ (Mysuru) ಕಾಂಗ್ರೆಸ್ (Congress) ಸಮಾವೇಶದಲ್ಲಿ ಅವರು ಮಾತನಾಡಿದರು. ಈ ವೇಳೆ ಮಹಾತ್ಮ ಗಾಂಧಿಯವರು ದೇಶದ ಜನರಿಗೆ ಕರೆ ಕೊಟ್ಟದಿನ. ಬ್ರಿಟಿಷರಿಗೆ ಎಚ್ಚರಿಕೆ ಕೊಟ್ಟು ಕಹಳೆ ಊದಿದ ದಿನ. ಸ್ವಾತಂತ್ರ್ಯ ಹೋರಾಟಗಾರರು ತ್ಯಾಗ ಬಲಿದಾನ ಮಾಡಿ ಸ್ವಾತಂತ್ರ್ಯ ತಂದು ಕೊಟ್ಟರು. ಆ ದಿನವೇ ಸಮಾವೇಶ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಅವರು ಹೇಳಿದ್ದಾರೆ.

    ಇವತ್ತು ನಮ್ಮನಾಡು, ದೇಶದಲ್ಲಿ ಕೋಮುವಾದಿ, ಜಾತಿವಾದಿ, ಪಾಳೇಗಾರಿಕೆ ಪ್ರವೃತ್ತಿ ಇರೋರನ್ನು ರಾಜಕೀಯದಿಂದ ಓಡಿಸಬೇಕು. ಮನುವಾದಿಗಳು, ಜಾತಿವಾದಿಗಳು, ಶೋಷಿತರು ಅಧಿಕಾರ ಮಾಡೋದನ್ನು ಸಹಿಸಲ್ಲ. ದೇವರಾಜ ಅರಸು, ಬಂಗಾರಪ್ಪ, ಮೋಯ್ಲಿಯವರಿಗೆ ಇದೇ ಗತಿ ಆಗಿತ್ತು. ಧರ್ಮಸಿಂಗ್ ಅವರಿಗೆ ಕೊಟ್ಟ ಮಾತನ್ನು ತಪ್ಪಿದ್ದರು. ಬಿಜೆಪಿ ಜೊತೆ ಅಧಿಕಾರ ಮಾಡಿದ್ದರು. ಈ ಮನಸ್ಥಿತಿಯನ್ನು ವಿರೋಧಿಸಲು ಸಮಾವೇಶ ಮಾಡುತ್ತಿದ್ದೇವೆ ಎಂದಿದ್ದಾರೆ.

    ಬಿಜೆಪಿ-ಜೆಡಿಎಸ್‍ನವರು ಒಬ್ಬರಿಗೊಬ್ಬರು ಹೇಗೆ ಬೈದಾಡಿಕೊಂಡಿದ್ದರು. ನರೇಂದ್ರ ಮೋದಿ ಪ್ರಧಾನಿ ಆದರೆ ದೇಶದಲ್ಲಿ ಇರಲ್ಲ ಎಂದು ದೇವೇಗೌಡರು ಹೇಳಿದ್ದರು. 2006 ರಲ್ಲಿ ಕುಮಾರಸ್ವಾಮಿ ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡಿದ್ರೆ ನನ್ನ ಹೆಣದ ಮೇಲೆ ಮಾಡಬೇಕು ಎಂದಿದ್ದರು. ಈಗ ಕೋಮುವಾದಿಗಳ ಜೊತೆ ಸೇರಿ ಷಡ್ಯಂತ್ರ ಮಾಡಿದ್ದೀರಿ. ನಮ್ಮ ಸರ್ಕಾರವನ್ನು ಕೆಡವಲು ದುಷ್ಟ ಪ್ರಯತ್ನ ಮಾಡುತ್ತಿದ್ದಾರೆ. ನಾನು 4 ದಶಕಗಳಿಂದ ರಾಜಕೀಯದಲ್ಲಿ ಇದ್ದೀನಿ. ಅಂದಿನಿಂದ ಇಂದಿನವರೆಗೆ ಅನೇಕ ಖಾತೆಗಳು ಸಿಕ್ಕಿವೆ. ಜನರ ಆಶೀರ್ವಾದದ ಫಲದಿಂದ ರಾಜಕೀಯದಲ್ಲಿ ಮುಂಚೂಣಿಯಲ್ಲಿದ್ದೇನೆ ಎಂದು ಅವರು ಹೇಳಿದ್ದಾರೆ.

    ನನ್ನ ರಾಜಕೀಯದ 40 ವರ್ಷಗಳಲ್ಲಿ ಯಾವುದೇ ಕಪ್ಪುಚುಕ್ಕಿ ಇಲ್ಲ. ನನ್ನ ರಾಜಕೀಯ ಜೀವನ ತೆರೆದ ಪುಸ್ತಕವಿದ್ದ ಹಾಗೆ. ಇಷ್ಟೆಲ್ಲಾ ಅಧಿಕಾರ ಸಿಕ್ಕಿದರೂ ಆಸ್ತಿ ಮಾಡುವ ವ್ಯಾಮೋಹ ಬರಲಿಲ್ಲ. ನನ್ನ ಧರ್ಮ ಪತ್ನಿ ಪಾರ್ವತಿ ಸಾರ್ವಜನಿಕ ಕಾರ್ಯಕ್ರಮಕ್ಕೆ ಬಂದಿಲ್ಲ. ನಾನು ಪ್ರಮಾಣವಚನ ಸ್ವೀಕಾರ ಮಾಡುವಾಗಲೂ ಬಂದಿಲ್ಲ. ಇಲ್ಲಿರುವವರು ಅನೇಕರು ನನ್ನ ಹೆಂಡತಿ ಮುಖ ನೋಡಿಲ್ಲ. ಅವರು ತಪ್ಪು ಮಾಡಲು ಸಾಧ್ಯನಾ? ನಾನು ತಪ್ಪು ಮಾಡಲು ಸಾಧ್ಯನಾ? ನಾನು ರಾಜಕೀಯದಲ್ಲಿ ಇರುವವರೆಗೆ ಜನರಿಗೆ ದ್ರೋಹ ಮಾಡುವುದಿಲ್ಲ ಎಂದಿದ್ದಾರೆ.

    ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ಆದೇಶ ಇಲ್ಲ, ನನ್ನ ಪತ್ರ ಇಲ್ಲ. ಆದರೂ ನನ್ನ ರಾಜೀನಾಮೆ ಕೇಳ್ತಾರೆ. ಅಶೋಕ್, ವಿಜಯೇಂದ್ರ, ಯಡಿಯೂರಪ್ಪ, ಕುಮಾರಸ್ವಾಮಿಗೆ ಯಾವ ನೈತಿಕತೆ ಇದೆ? ಯಡಿಯೂರಪ್ಪಗೆ ಮಾನ ಮರ್ಯಾದೆ ಇದ್ದಿದ್ರೆ ರಾಜಕೀಯದಿಂದ ನಿವೃತ್ತಿಯಾಗಬೇಕಿತ್ತು. 82 ವರ್ಷ ಯಡಿಯೂರಪ್ಪ ಲೈಂಗಿಕ ದೌರ್ಜನ್ಯ ಮಾಡಿ ಪೋಕ್ಸೋ ಕೇಸ್‍ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಅವರು ನನ್ನ ರಾಜೀನಾಮೆ ಕೇಳ್ತಾರೆ. ಮಿಸ್ಟರ್ ಯಡಿಯೂರಪ್ಪ ನೀವು ಒಂದಾ, ಎರಡಾ 18, 20 ಹಗರಣಗಳಲ್ಲಿ ಸಿಕ್ಕಿದ್ದೀರಾ? ವಿಜಯೇಂದ್ರ ಅನೇಕ ಹಗರಣಗಳಲ್ಲಿ ಸಿಕ್ಕಿದ್ದಾರೆ. ಯತ್ನಾಳ್ ಈ ಬಗ್ಗೆ ಹೇಳಿದ್ದಾರೆ ಎಂದು ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.

    ಕೃಷ್ಣ ಮೇಲ್ದಂಡೆಯಲ್ಲಿ ಕುಮಾರಸ್ವಾಮಿ ಹಗರಣ ಮಾಡಿದ್ದಾರೆ. ಜಂತ್ ಕಲ್ ಮೈನಿಂಗ್‍ನಲ್ಲಿ ಕುಮಾರಸ್ವಾಮಿ ಹಗರಣ ಮಾಡಿದ್ದಾರೆ. ನಿಮಗೆ ನನ್ನ ರಾಜೀನಾಮೆ ಕೇಳಲು ಮಾನ ಮರ್ಯಾದೆ ಇದೆಯಾ? ಆರ್.ಅಶೋಕ್ ಬಿಎಂ ಕಾವಲ್‍ನಲ್ಲಿ ಜಮೀನು ಹಂಚಿದ್ದಾರೆ. ಕೋರ್ಟ್‍ಗೆ ಹೋಗಿ ಜಾಮೀನು ತಗೊಂಡಿದ್ದಾರೆ. ನಾಚಿಕೆ ಆಗಲ್ವಾ? ಯಡಿಯೂರಪ್ಪ ತರ ಚೆಕ್ ಮೂಲಕ ಲಂಚ ತಗೊಂಡಿದ್ದೀನಾ? ಯಡಿಯೂರಪ್ಪ ರೀತಿ ಡಿನೋಟಿಫೀಕೇಶನ್ ಮಾಡಿದ್ದೀನಾ? ನಾನು ಸೇಡಿನ ದ್ವೇಷದ ರಾಜಕಾರಣ ಮಾಡಿದ್ದರೆ ಇವತ್ತಿನ ಈ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ. ನಾನು ದ್ವೇಷದ, ಸೇಡಿನ ರಾಜಕಾರಣ ಮಾಡಿದ್ದರೆ ಇವರೆಲ್ಲಾ ಜೈಲಿಗೆ ಹೋಗಿರುತ್ತಿದ್ದರು ಎಂದು ಎಚ್ಚರಿಕೆ ನೀಡಿದ್ದಾರೆ.

    ನನಗೆ ಆಸ್ತಿ ವ್ಯಾಮೋಹ ಇದ್ದಿದ್ರೆ ಕೋಟಿಗಟ್ಟಲೆ ಹಣ ಮಾಡಬಹುದಿತ್ತು. ಮೊನ್ನೆ ಮೊನ್ನೆವರೆಗೂ ಮೈಸೂರಿನಲ್ಲಿ ಮನೆ ಇರಲಿಲ್ಲ. ಈಗ ಮನೆ ಕಟ್ಟುತ್ತಿದ್ದೇನೆ. ಎರಡು ಮನೆ ಕಟ್ಟಿ ಅದರ ಸಾಲ ತೀರಿಸಲು ಮನೆಯನ್ನೇ ಮಾರಿ ಬಿಟ್ಟೆ. 30 ಲಕ್ಷ ರೂ. ಬ್ಯಾಂಕ್ ಸಾಲ ಕಟ್ಟಲು ಆಗದೆ ಮನೆ ಮಾರಿ ಬಿಟ್ಟೆ. ಈಗ ಕಟ್ಟುತ್ತಿರುವ ಮನೆ ಬಿಟ್ಟು ನನ್ನ ಒಂದೇ ಒಂದು ಸೈಟ್ ಇದ್ದರೆ ತೋರಿಸಿ ಎಂದು ಸವಾಲು ಹಾಕಿದ್ದಾರೆ.

    ನಾನು ರಾಜಕೀಯ ಪ್ರಾರಂಭ ಮಾಡಿದ್ದು ಜಿರೋದಿಂದ. ನನ್ನ ಮೊದಲ ಚುನಾವಣೆಗೆ ಠೇವಣಿ ಕಟ್ಟಲು ಒಂದು ರೂಪಾಯಿ ಇರಲಿಲ್ಲ. ಆಗ ಕೋರ್ಟ್‍ನಲ್ಲಿ ಲಾಯರ್ ಕೆಲಸ ಮಾಡುತ್ತಿದ್ದೆ. ಚಾಮುಂಡೇಶ್ವರಿ ಜನ ಬಂದು ಚುನಾವಣೆಗೆ ನಿಲ್ಲಿ ಎಂದಿದ್ದರು. ನಮ್ಮ ಆಫೀಸ್ ಕ್ಲರ್ಕ್ 250 ರೂ. ಠೇವಣಿ ಕೊಟ್ಟಿದ್ದ. ಚುನಾವಣೆಗೆ ಜನರೇ ದುಡ್ಡು ಕೊಟ್ಟು ಗೆಲ್ಲಿಸಿದ್ದರು. 63 ಸಾವಿರ ರೂ. ಆಗ ಖರ್ಚು ಆಯ್ತು. ನಮ್ಮದು ಶ್ರೀಮಂತ ಕುಟುಂಬ ಅಲ್ಲ. ಹೊಟ್ಟೆ ಬಟ್ಟೆಗೆ ನೇರವಾದ ಕುಟುಂಬ. ನಮ್ಮಪ್ಪ ಚುನಾವಣೆಗೆ ನಿಲ್ಲಬಾರದು ಎಂದಿದ್ದರು. ಆಗ ನಾನು ಪಂಚಾಯಿತಿ ಸೇರಿಸಿ, ಒಂದು ರೂಪಾಯಿ ಕೊಡಬೇಡಾ ನಾನು ಹಾಗೆ ಗೆಲ್ಲುತ್ತೇನೆ ಎಂದಿದ್ದೆ. ಆಗ ನಮ್ಮಪ್ಪ ಒಪ್ಪಿಕೊಂಡಿದ್ದರು ಎಂದು ಅವರು ಹಳೆ ನೆನಪನ್ನ ಅವರು ಮೆಲುಕು ಹಾಕಿದ್ದಾರೆ.

    ನನ್ನ 9 ಚುನಾವಣೆಗಳನ್ನು ಜನರೇ ಗೆಲ್ಲಿಸಿದ್ದಾರೆ. ನಾನು ಮನೆಯಿಂದ ಒಂದು ರೂಪಾಯಿ ಖರ್ಚು ಮಾಡಿಲ್ಲ. ಜನರಿಗೆ ನ್ಯಾಯ ಸಿಗಬೇಕೆಂದು ಹೋರಾಟ ಮಾಡ್ತಾ ಇದೀನಿ. ನಾನು ಬದುಕಿರುವ ವರೆಗೂ ಹೋರಾಟ ಮಾಡುತ್ತೇನೆ. ಬಿಜೆಪಿ-ಜೆಡಿಎಸ್ ದುರುದ್ದೇಶದಿಂದ ಎಷ್ಟೇ ಪಾದಯಾತ್ರೆ ಮಾಡಿದ್ರೆ ನಾನು ಜಗ್ಗೋನು ಅಲ್ಲ, ಬಗ್ಗೋನು ಅಲ್ಲ. ಇದೇ ವೇಳೆ ಜನರ ಆಶೀರ್ವಾದ ಎಲ್ಲಿಯವರೆಗೆ ಇರುತ್ತೋ ಅಲ್ಲಿವರೆಗೆ ನನ್ನನ್ನು ಮುಟ್ಟೋಕೆ ಆಗಲ್ಲ. ದೇವರಾಜ ಅರಸು ನಂತರ 5 ವರ್ಷ ಪೂರ್ಣ ಮಾಡಿದ ಸಿಎಂ ನಾನೇ. ಬಿಜೆಪಿ-ಜೆಡಿಎಸ್‍ನಿಂದ ನನ್ನ, ಸರ್ಕಾರವನ್ನು ಅಲುಗಾಡಿಲು ಸಾಧ್ಯವಿಲ್ಲ ಎಂದು ದೋಸ್ತಿಗಳಿಗೆ ಟಾಂಗ್ ಕೊಟ್ಟಿದ್ದಾರೆ.