Tag: MUDA Scam

  • ರಾಜ್ಯಪಾಲರನ್ನು ನಮ್ಮ ನಾಯಕರು ನಿಂದನೆ ಮಾಡಿಲ್ಲ, ಇರೋದನ್ನೆ ಹೇಳಿದ್ದಾರೆ: ಸಿದ್ದರಾಮಯ್ಯ

    ಬೆಂಗಳೂರು: ರಾಜ್ಯಪಾಲರು (Thawarchand Gehlot) ಮಾಡಿರುವ ಕೆಲಸವನ್ನು ನಮ್ಮ ನಾಯಕರು ಹೇಳಿದ್ದಾರೆ. ಅದನ್ನು ರಾಜ್ಯಪಾಲರನ್ನು ಹೀಯಾಳಿಸಿದರು ಅನ್ನೋದು ಸರಿಯಲ್ಲ ಎಂದು ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ (Congress) ನಾಯಕರು ಆಡಿದ್ದ ಮಾತುಗಳನ್ನು ಸಿಎಂ ಸಿದ್ದರಾಮಯ್ಯ (Siddaramaiah) ಸಮರ್ಥನೆ ಮಾಡಿಕೊಂಡಿದ್ದಾರೆ.

    ರಾಜ್ಯಪಾಲರನ್ನು ಕಾಂಗ್ರೆಸ್ ನಾಯಕರು ನಿಂದಿಸಿರುವ ಕುರಿತು ಬಿಜೆಪಿಯಿಂದ ಗುರುವಾರ ರಾಜ್ಯಾದ್ಯಂತ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯಪಾಲರು ಮಾಡಿರುವ ಕೆಲಸವನ್ನು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಇದನ್ನು ಹೇಳಿದರೆ ಹೀಯಾಳಿಸಿದ ರೀತೀನಾ? ಶಶಿಕಲಾ ಜೊಲ್ಲೆ ಕೇಸ್ ಇದೆ, ನಿರಾಣಿ ಕೇಸ್ ಇದೆ. ಕುಮಾರಸ್ವಾಮಿ ಕೇಸ್ ಇದೆ. ಜನಾರ್ದನ ರೆಡ್ಡಿ ಮೇಲೆ ಕೇಸ್ ಇದೆ. ಇವುಗಳಿಗೆ ಪರ್ಮಿಷನ್ ಕೊಟ್ಟಿಲ್ಲ. ಇದನ್ನು ಹೇಳಿದ್ರೆ ತಪ್ಪಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ವಿಧಾನ ಪರಿಷತ್‌ನಲ್ಲಿ ಬಹುಮತ ಬಂದ್ರೆ ಬಿಜೆಪಿ ತಂದಿದ್ದ ಭೂ ಕಂದಾಯ ಕಾಯ್ದೆ ರದ್ದು ಮಾಡ್ತೀನಿ: ಸಿದ್ದರಾಮಯ್ಯ

    ರಾಜ್ಯಪಾಲರ ಹುದ್ದೆ ಸಂವಿಧಾನಿಕ ಹುದ್ದೆ. ಅದರ ಬಗ್ಗೆ ಗೌರವ ಇರಬೇಕು. ನಾವು ಹೇಳೋದು ರಾಜ್ಯಪಾಲರು ರಾಷ್ಟ್ರಪತಿಗಳ ಪ್ರತಿನಿಧಿಯಾಗಿ ಕೆಲಸ ಮಾಡಬೇಕು. ಕೇಂದ್ರ ಸರ್ಕಾರದ ಪ್ರತಿನಿಧಿ ಆಗಿ ಕೆಲಸ ಮಾಡೋದು ಬೇಡ ಎಂದು ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ನಾಯಕರು ಆಡಿದ ಮಾತನ್ನು ಸಮರ್ಥಿಸಿಕೊಂಡರು. ಇದನ್ನೂ ಓದಿ: ಶತಮಾನ ಕಂಡ ಸರ್ಕಾರಿ ಶಾಲೆ ಕಿಡಿಗೇಡಿಗಳಿಂದ ಧ್ವಂಸ

  • ಸಾಮಾಜಿಕ ನ್ಯಾಯದ ಪರ ಇರೋದಕ್ಕೆ ನನ್ನ ವಿರುದ್ಧ ಬಿಜೆಪಿ ಷಡ್ಯಂತ್ರ: ಸಿದ್ದರಾಮಯ್ಯ

    ಸಾಮಾಜಿಕ ನ್ಯಾಯದ ಪರ ಇರೋದಕ್ಕೆ ನನ್ನ ವಿರುದ್ಧ ಬಿಜೆಪಿ ಷಡ್ಯಂತ್ರ: ಸಿದ್ದರಾಮಯ್ಯ

    ಬೆಂಗಳೂರು: ನಾನು ಸಾಮಾಜಿಕ ನ್ಯಾಯದ ಪರವಾಗಿ ಇದ್ದೇನೆ ಅಂತ ಸಹಿಸಲು ಬಿಜೆಪಿಯವರಿಗೆ (BJP) ಆಗ್ತಿಲ್ಲ. ಹೀಗಾಗಿ ನನ್ನ ವಿರುದ್ಧ ಷಡ್ಯಂತ್ರ ಮಾಡ್ತಿದ್ದಾರೆ ಎಂದು ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಅನುಮತಿ ವಿರುದ್ಧ ಸಿಎಂ ಸಿದ್ದರಾಮಯ್ಯ (Siddaramaiah) ಮತ್ತೆ ಕಿಡಿಕಾರಿದ್ದಾರೆ.

    ಮಾಜಿ ಸಿಎಂ ದೇವರಾಜ ಅರಸು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ದೇವರಾಜ್ ಅವರ ಸಾಮಾಜಿಕ ನ್ಯಾಯದ ಅಡಿಯಲ್ಲಿ ಕೆಲಸ ಮಾಡ್ತಿದ್ದೇನೆ. ಬಡವರ ಪರ ಇದ್ದೇನೆ. ಇದೆಲ್ಲವನ್ನೂ ಮಾಡ್ತಿದ್ದೇನೆ ಅಂತ ಬಿಜೆಪಿ ಅವರಿಗೆ ನನ್ನ ಮೇಲೆ ಕೋಪ. ಅದಕ್ಕೆ ಸಿದ್ದರಾಮಯ್ಯರನ್ನ ಹೇಗಾದ್ರು ಮಾಡಿ ಮುಗಿಸಬೇಕು ಎಂದು ಹುನ್ನಾರ ಮಾಡ್ತಿದ್ದಾರೆ ಎಂದು ಆರೋಪಿಸಿದರು.

    ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಯಾವುದೇ ತಪ್ಪು ಮಾಡಿಲ್ಲ. ನನ್ನ ರಾಜಕೀಯ ಜೀವನಕ್ಕೆ ಕಪ್ಪು ಚುಕ್ಕೆ ಇಡೋ ಪ್ರಯತ್ನ ಮಾಡ್ತಿದ್ದಾರೆ. ನಾನು ಏನು ತಪ್ಪು ಮಾಡಿದೇ ಹೋದರು ರಾಜೀನಾಮೆ ಕೊಡಿ ರಾಜೀನಾಮೆ ಕೊಡಿ ಅಂತ ಮಾತಾಡ್ತಿದ್ದಾರೆ. ಅದಕ್ಕೆ ಕೆಲವರು ತಮಟೆ ಹೊಡೆಯುತ್ತಿದ್ದಾರೆ‌. ಇದು ನನ್ನ ವಿರುದ್ದ ಮಾಡ್ತಿರೋ ಷಡ್ಯಂತ್ರ. ಇಂತಹ ಷಡ್ಯಂತ್ರಗಳನ್ನ ನಾವೆಲ್ಲ ಒಂದಾಗಿ ವಿರೋಧ ಮಾಡಬೇಕು. ಇಲ್ಲದೆ ಹೋದರೆ ನ್ಯಾಯ ಸಿಗೊಲ್ಲ ಎಂದು ಜನರಿಗೆ ಕರೆ ನೀಡಿದರು.

    ದೇವರಾಜ ಅರಸು ಮತ್ತು ರಾಜೀವ್ ಗಾಂಧಿ ಸಾಮಾಜಿಕ ‌ನ್ಯಾಯದ ಪರ‌ ಕೆಲಸ ಮಾಡಿದ್ದರು. ಇಬ್ಬರ ಹಾದಿಯಲ್ಲಿ ನಡೆಯೋ ಪ್ರಯತ್ನ ಮಾಡ್ತಿದ್ದೇನೆ‌. ಅಧಿಕಾರ ಇರಲಿ ಇರದೇ ಹೋಗಲಿ ಸಾಮಾಜಿಕ ನ್ಯಾಯದಲ್ಲಿ ನಾನು ರಾಜೀ ಆಗೊಲ್ಲ ಎಂದು ವಿರೋಧಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

  • ಚುರುಕು ಪಡೆದ ಮುಡಾ ಹಗರಣದ ತನಿಖೆ – ಮೂರು ಪಕ್ಷದ ನಾಯಕರಿಗೆ ಈಗ ಭಯ

    ಚುರುಕು ಪಡೆದ ಮುಡಾ ಹಗರಣದ ತನಿಖೆ – ಮೂರು ಪಕ್ಷದ ನಾಯಕರಿಗೆ ಈಗ ಭಯ

    ಮೈಸೂರು: ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ ಸಿಕ್ಕಿದ  ಕೂಡಲೇ ಇತ್ತ ಮೂಡಾ ಹಗರಣದ (MUDA Scam) ತನಿಖೆಯೂ ಚುರುಕು ಪಡೆದಿದೆ. ವಿಚಾರಣೆಯ ಚುರುಕಿಗೆ ಸಿದ್ದರಾಮಯ್ಯ ಹೆದರಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಮೈಸೂರಲ್ಲಿ ಬಹಳಷ್ಟು ರಾಜಕಾರಣಿಗಳಿಗೆ (Politicians) ನಡುಕ ಶುರುವಾಗಿದೆ.

    ಮೂಡಾ ಹಗರಣದ ಕೇಂದ್ರ ಬಿಂದುವೇ ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಂಚಿಕೆ ಆಗಿರುವ 50:50 ಅನುಪಾತದ ಸೈಟ್‌ಗಳು. ಮೇಲ್ನೋಟಕ್ಕೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಬಂದಿರುವ 14 ಸೈಟ್‌ಗಳ ವಿಚಾರ ಮಾತ್ರ ಹೆಚ್ಚು ಚರ್ಚೆಯಲ್ಲಿದೆ. ಆದರೆ ಇದೇ ಅನುಪಾತದಲ್ಲಿ 2018ರಿಂದ ಇಲ್ಲಿಯವರೆಗೂ ಮಂಜೂರಾಗಿರುವ ಸೈಟ್‌ಗಳ ಸಂಖ್ಯೆ ಸಾವಿರ ದಾಟುತ್ತಿದೆ. ಅಲ್ಲಿಗೆ ಜೆಡಿಎಸ್, ಬಿಜೆಪಿ ಮತ್ತು ಕಾಂಗ್ರೆಸ್‌ನ ಎಲ್ಲಾ ಮುಖಂಡರು, ಜನಪ್ರತಿನಿಧಿಗಳು ಇದರಲ್ಲಿ ಪಾಲುದಾರರಾಗಿರುವುದು ಸ್ಪಷ್ಟವಾಗಿದೆ.  ಇದನ್ನೂ ಓದಿ: ತಂದೆ ಮಾಡದ ತಪ್ಪಿಗೆ ಈ ರೀತಿ ಆರೋಪಕ್ಕೆ ಗುರಿಯಾಗಿದ್ದು ಬೇಸರ ತರಿಸಿದೆ: ಯತೀಂದ್ರ ಭಾವುಕ

     

    ಸಿಎಂ ಅವರ ಕುಟುಂಬಕ್ಕೆ 50:50 ಅನುಪಾತದಲ್ಲಿ ಸೈಟ್ ಸಿಕ್ಕಿರುವಾಗ ತಮಗೆ ಬಂದಿರುವ ಸೈಟ್‌ಗಳಿಗೆ ಯಾವ ತೊಂದರೆಯೂ ಇಲ್ಲ ಎಂದು ಬಹಳಷ್ಟು ಜನ ಅಂದುಕೊಂಡಿದ್ದರು. ಆದರೆ ತನಿಖೆ ಸಾಗುತ್ತಿರುವ ರೀತಿ ನೋಡಿದರೆ ಇವತ್ತಲ್ಲ ನಾಳೆ ಎಲ್ಲರ ಬಂಡವಾಳಗಳು ಬಯಲಾಗಲಿದೆ.

    ತನಿಖೆಯಲ್ಲಿ ಯಾರು ಯಾರು ಪ್ರಭಾವದ ಮೇಲೆ ಸೈಟ್ ಪಡೆದಿದ್ದಾರೆ. ಯಾರ ಹೆಸರಲ್ಲಿ ಯಾರು ಬೇನಾಮಿ ಆಗಿದ್ದಾರೆ ಎನ್ನುವುದು ಸ್ಪಷ್ಟವಾಗಿ ಬಿಟ್ಟರೆ ಎಲ್ಲಿ ಮರ್ಯಾದೆ ಮೂರು ಪಾಲಾಗುತ್ತೆ ಎನ್ನುವ ಭಯ 50:50 ಅನುಪಾತದ ಅಡಿ ಸೈಟ್ ಪಡೆದವರಲ್ಲಿ ಶುರುವಾಗಿದೆ. ಮರ್ಯಾದೆ ಜೊತೆ ಸೈಟ್‌ಗಳು ಜಪ್ತಿ ಆದರೆ ಕಥೆ ಏನು ಎನ್ನುವುದು ಬಹಳಷ್ಟು ಜನರ ಆತಂಕಕ್ಕೆ ಕಾರಣವಾಗಿದೆ.

    ಒಟ್ಟಾರೆ ಮೂಡಾ ಹಗರದ ತನಿಖೆ ಜೋರಾಗುತ್ತಿದ್ದಂತೆ ಹಲವರಲ್ಲಿ ಭಯವಂತೂ ಶುರುವಾಗಿದೆ. ಈ ತನಿಖೆಯ ಮೂಲಕ ಮೂಡಾ ಸ್ವಚ್ಛವಾದರೆ ಸಾಕು ಎನ್ನುತ್ತಿದ್ದಾರೆ ಮೈಸೂರಿನ ಪ್ರಜ್ಞಾವಂತ ಜನರು.

     

  • ಕಾಂಗ್ರೆಸ್ ಹೈಕಮಾಂಡ್ ಬಳಿ ಪ್ಲ್ಯಾನ್ ಬಿ’? ಕೋರ್ಟ್ ಆದೇಶ ನೋಡಿಕೊಂಡು ಬ್ಲೂಪ್ರಿಂಟ್!

    ಕಾಂಗ್ರೆಸ್ ಹೈಕಮಾಂಡ್ ಬಳಿ ಪ್ಲ್ಯಾನ್ ಬಿ’? ಕೋರ್ಟ್ ಆದೇಶ ನೋಡಿಕೊಂಡು ಬ್ಲೂಪ್ರಿಂಟ್!

    ಬೆಂಗಳೂರು: ಸಿದ್ದರಾಮಯ್ಯ (Siddaramaiah) ಸದ್ಯಕ್ಕೆ ಸೇಫ್. ಆದರೆ ಮುಂದೆಯೂ ಅದೇ ಸ್ಟ್ಯಾಂಡ್ ಇರುತ್ತಾ? ಇದು ಕಾಂಗ್ರೆಸ್ (Congress) ವಲಯದಲ್ಲಿ ಕೇಳಿ ಬರುತ್ತಿರುವ ಪ್ರಶ್ನೆ. ಕಾಂಗ್ರೆಸ್ ಹೈಕಮಾಂಡ್ ಬಳಿ ಪ್ಲ್ಯಾನ್ ‘ಬಿ’ ಗೇಮ್ ಪ್ಲ್ಯಾನ್ ಇದೆ ಎಂಬ ಮಾಹಿತಿ ಹೊರಬರುತ್ತಿದೆ. ಸದ್ಯಕ್ಕೆ ಸಿಎಂ ಸಿದ್ದರಾಮಯ್ಯ ಪರ ನಿಲ್ಲೋದು ಪ್ಲ್ಯಾನ್ `ಎ’. ಆದರೆ ಮುಂದೆ ಹೆಚ್ಚು ಕಮ್ಮಿಯಾದ್ರೆ ಪ್ಲ್ಯಾನ್ ‘ಬಿ’ ಅಗತ್ಯತೆ ಬಗ್ಗೆ ಸಿದ್ಧತೆ ನಡೆದಿದೆ ಎನ್ನಲಾಗಿದೆ. ಕೋರ್ಟ್ ಆದೇಶ ನೋಡಿಕೊಂಡು ಪ್ಲ್ಯಾನ್ ‘ಬಿ’ ಕಾರ್ಯಾಚರಣೆಗೆ ತಯಾರಿ ನಡೆಸುವ ಸಾಧ್ಯತೆ ಇದೆ.

    ಇನ್ನು ಈಗಾಗಲೇ ಎಐಸಿಸಿ (AICC) ಪ್ರತ್ಯೇಕವಾಗಿ ದಾಖಲೆಗಳನ್ನು ಪರಿಶೀಲನೆ ನಡೆಸಿದೆ. ಸಿಎಂ ವಿರುದ್ಧದ ಆರೋಪಗಳ ಬಗ್ಗೆ ಕಾನೂನು ತಜ್ಞರಿಂದ ಪ್ರತ್ಯೇಕ ಪರಿಶೀಲನೆ ನಡೆದಿದೆ ಎನ್ನಲಾಗಿದೆ. ರಾಜಕೀಯ ಹೋರಾಟದಲ್ಲಿ ಕಡೆ ತನಕ ನಿಲ್ಲಬೇಕೆಂಬ ಸಂದೇಶ ಕೊಟ್ಟಾಯಿತು. ಆದರೆ ಕಾನೂನು ಹೋರಾಟದಲ್ಲಿ ಹಿನ್ನಡೆಯಾದರೆ ಪ್ಲ್ಯಾನ್ ‘ಬಿ’ ತಯಾರಿಗೆ ತಂತ್ರವೂ ಇದೆ ಅಂತೆ. ಇದನ್ನೂ ಓದಿ: ರಾಖಿ ಹಬ್ಬದ ಸಂಭ್ರಮದಲ್ಲಿ ಪ್ರಧಾನಿ – ಮೋದಿಗೆ ರಾಖಿ ಕಟ್ಟಿ ವಿದ್ಯಾರ್ಥಿಗಳ ಸಂಭ್ರಮ

    ಈಗಾಗಲೇ ಎಐಸಿಸಿ ನಾಯಕರ ಮಟ್ಟದಲ್ಲಿ ಪ್ಲ್ಯಾನ್ ‘ಬಿ’ ಬ್ಲೂಪ್ರಿಂಟ್ ಬಗ್ಗೆ ಚರ್ಚೆ ಆಗಿದ್ದು, ಮುಂದಿನ ವಾರದ ಬಳಿಕ ಎಐಸಿಸಿಯಿಂದ ಪ್ಲ್ಯಾನ್ ‘ಬಿ’ ಬ್ಲೂಪ್ರಿಂಟ್ ರೆಡಿಯಾಗುವ ಸಾಧ್ಯತೆ ಇದೆ. ಕರ್ನಾಟಕದ ರಾಜಕೀಯ ಬೆಳವಣಿಗೆ, ಜಾತಿ ರಾಜಕಾರಣವೇ ಪ್ಲ್ಯಾನ್ `ಬಿ’ಗೆ ಆಧಾರ ಎನ್ನಲಾಗುತ್ತಿದೆ. ಪ್ಲ್ಯಾನ್ ‘ಬಿ’ ಸಿದ್ಧವಾದರೆ ಆಗಲೂ ಸಿಎಂ ಸಿದ್ದರಾಮಯ್ಯ ಸೇಫ್ ಆಗ್ತಾರಾ? ಅಥವಾ ಸಂಕಟವೋ ಎಂಬುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ: ಆ.22ಕ್ಕೆ ಸಿಎಂ ಬಲ ಪ್ರದರ್ಶನ, ಆ.23ಕ್ಕೆ ಹೈಕಮಾಂಡ್‌ಗೆ ವರದಿ ಸಲ್ಲಿಕೆ!

  • ಆ.22ಕ್ಕೆ ಸಿಎಂ ಬಲ ಪ್ರದರ್ಶನ, ಆ.23ಕ್ಕೆ ಹೈಕಮಾಂಡ್‌ಗೆ ವರದಿ ಸಲ್ಲಿಕೆ!

    ಆ.22ಕ್ಕೆ ಸಿಎಂ ಬಲ ಪ್ರದರ್ಶನ, ಆ.23ಕ್ಕೆ ಹೈಕಮಾಂಡ್‌ಗೆ ವರದಿ ಸಲ್ಲಿಕೆ!

    ಬೆಂಗಳೂರು: ಆಗಸ್ಟ್ 22ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಬಲ ಪ್ರದರ್ಶನ ಮಾಡಲಿದ್ದು, ಆಗಸ್ಟ್ 23ಕ್ಕೆ ಕಾಂಗ್ರೆಸ್ ಹೈಕಮಾಂಡ್‌ಗೆ ಸಂಪೂರ್ಣ ವರದಿ ಕೊಡಲಿದ್ದಾರೆ. ಒಳ-ಹೊರ ವಿರೋಧಿಗಳಿಗೆ ಸಿದ್ದರಾಮಯ್ಯ ಸಂದೇಶ ಕಳುಹಿಸುವ ಪ್ಲ್ಯಾನ್ ನಡೆದಿದ್ದು, ಶಾಸಕರು ನನ್ನ ಪರ ಇದ್ದಾರೆ ಎಂಬ ಸಂದೇಶ ರವಾನಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

    ಶಾಸಕರಿಗೆ ಮನವರಿಕೆ ಮಾಡಿಕೊಡುವ ನೆಪ. ಆದರೆ ಅಸಲಿ ಗೇಮ್ ಬೇರೆ ಇದೆ ಎಂಬ ಬಗ್ಗೆ ರಾಜಕೀಯ ಚರ್ಚೆ ಜೋರಾಗಿದೆ. ಆ.22ಕ್ಕೆ ಗುರುವಾರ ಬೆಳಗ್ಗೆ ಸಚಿವ ಸಚಿವ ಸಂಪುಟ ಸಭೆ ಇದ್ದು, ಅಂದೇ ಸಂಜೆ 4 ಗಂಟೆಗೆ ಶಾಸಕಾಂಗ ಪಕ್ಷ ಕರೆದಿದ್ದಾರೆ. ಈಗಾಗಲೇ ಸಚಿವ ಸಂಪುಟ ಸಭೆ ಕರೆದು ಸಚಿವರ ಬೆಂಬಲ ಪ್ರದರ್ಶನ ಆಗಿದೆ. ಎಲ್ಲ ಸಚಿವರು ಸಿದ್ದರಾಮಯ್ಯ ಪರ ಎಂದಿದ್ದಾರೆ. ಕಾಂಗ್ರೆಸ್ ಹೈಕಮಾಂಡ್, ಸಚಿವರು, ಆಪ್ತರು ಜೊತೆ ಇದ್ದಾರೆ ಎಂಬ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್‌: ಜಾಮೀನಿಗೆ ಅರ್ಜಿ ಸಲ್ಲಿಸಿದ A1 ಆರೋಪಿ ಪವಿತ್ರಾಗೌಡ

    ಅದೇ ರೀತಿ ಕಾಂಗ್ರೆಸ್ ಶಾಸಕರ ಜೊತೆಯೂ ಸಭೆ ನಡೆಸಿ ಕೇಸ್ ಬಗ್ಗೆ ಮನವರಿಕೆಗೆ ಯತ್ನ ಎನ್ನಲಾಗಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಬಳಿಕ ಆ.23 ರಂದು ದೆಹಲಿಗೆ ತೆರಳುವ ಸಿಎಂ ಸಿದ್ದರಾಮಯ್ಯ, ಹೈಕಮಾಂಡ್‌ಗೆ ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆ, ಪಕ್ಷದೊಳಗಿನ ವಿದ್ಯಾಮಾನಗಳ ಬಗ್ಗೆ ವರದಿ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯುವ ತಂತ್ರಕ್ಕೆ ಕೈ ಹಾಕಿದ್ರಾ ಸಿದ್ದರಾಮಯ್ಯ ಎಂಬ ಚರ್ಚೆ ಜೋರಾಗಿದ್ದು, ಎಲ್ಲದಕ್ಕೂ ಕಾಲವೇ ಉತ್ತರಿಸಬೇಕಿದೆ. ಇದನ್ನೂ ಓದಿ: ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದಕ್ಕೆ ಖುಷಿ ಪಡೋರು ಕಾಂಗ್ರೆಸ್ ನಾಯಕರೇ: ಶೆಟ್ಟರ್

  • ಕೇಂದ್ರದ ವಿರೋಧ ಪಕ್ಷವನ್ನು ಮಣಿಸಲು ರಾಜ್ಯಪಾಲರನ್ನು ಏಜೆಂಟರಾಗಿ ಬಳಸುತ್ತಿದ್ದಾರೆ: ಆರ್.ವಿ ದೇಶಪಾಂಡೆ

    ಕೇಂದ್ರದ ವಿರೋಧ ಪಕ್ಷವನ್ನು ಮಣಿಸಲು ರಾಜ್ಯಪಾಲರನ್ನು ಏಜೆಂಟರಾಗಿ ಬಳಸುತ್ತಿದ್ದಾರೆ: ಆರ್.ವಿ ದೇಶಪಾಂಡೆ

    ಕಾರವಾರ: ಕೇಂದ್ರದ ವಿರೋಧ ಪಕ್ಷಗಳು ಯಾವ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದೆಯೋ ಎಲ್ಲಾ ಸರ್ಕಾರವನ್ನು ಅಸ್ಥಿರ ಮಾಡುವ ಕಾರ್ಯವನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. ಅದಕ್ಕಾಗಿ ಆಯಾ ರಾಜ್ಯದ ರಾಜ್ಯಪಾಲರು (Governer) ಏಜೆಂಟರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ ದೇಶಪಾಂಡೆ (RV Deshpande) ಕಿಡಿಕಾರಿದ್ದಾರೆ.

    ಸೋಮವಾರ ಕಾರವಾರದಲ್ಲಿ (Karwar) ಕಾಂಗ್ರೆಸ್ (Congress) ಪಕ್ಷದಿಂದ ರಾಜ್ಯಪಾಲರ ನಡೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯಪಾಲರು ಸರ್ಕಾರವನ್ನು ಅಸ್ಥಿರ ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆ. ಬಿಜೆಪಿಯ ಆದೇಶದ ಮೇಲೆ ರಾಜ್ಯಪಾಲರು ಕೆಲಸ ಮಾಡುತ್ತಿದ್ದಾರೆ. ರಾಜ್ಯಪಾಲರು ಈ ರೀತಿಯ ನಿರ್ಧಾರಕ್ಕೆ ಹೋಗುತ್ತಾರೆ ಎಂದು ನಾನು ಎಣಿಸಿರಲಿಲ್ಲ. ರಾಜ್ಯಪಾಲರ ಮುಂದೆ ಹಲವಾರು ಪ್ರಕರಣಗಳು ಪೆಂಡಿಗ್ ಇದೆ. ಶಶಿಕಲಾ ಜೊಲ್ಲೆ, ನಿರಾಣಿ, ಕುಮಾರಸ್ವಾಮಿ ಅವರ ಪ್ರಕರಣ ಹಲವು ವರ್ಷದಿಂದ ಪೆಂಡಿಂಗ್ ಇದೆ. ಇದನ್ನು ಏಕೆ ಪೆಂಡಿಂಗ್ ಇಟ್ಟಿದ್ದಾರೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ನಾನು ಯಾವುದೇ ತಪ್ಪು ಮಾಡಿಲ್ಲ.. ನ್ಯಾಯಾಲಯದಲ್ಲಿ ಪರಿಹಾರ ಸಿಗುವ ವಿಶ್ವಾಸ ಇದೆ: ಸಿದ್ದರಾಮಯ್ಯ

    ಇದಲ್ಲದೇ ಸರ್ಕಾರದ ಐದು ಗ್ಯಾರಂಟಿಗಳು ನಡೆಯಬಾರದು. ಸರ್ಕಾರ ಅಸ್ಥಿರ ಆಗಬೇಕು ಎಂಬ ನಿಟ್ಟಿನಲ್ಲಿ ಬಿಜೆಪಿ ಕೆಲಸ ಮಾಡುತ್ತಿದೆ. ರಾಜ್ಯಪಾಲರನ್ನು ಹಿಡಿದುಕೊಂಡು ಹಿಂದಿನ ಬಾಗಿಲಿನಿಂದ ಪ್ರಹಾರ ಮಾಡುತಿದ್ದಾರೆ. ಇದರ ಹೊಡೆತ ಬೀಳುವುದಿಲ್ಲ. ಅವರಿಗೆ ತಿರುಗೇಟು ಆಗುತ್ತದೆ ಎಂದರು. ಇದನ್ನೂ ಓದಿ: ನನ್ನ ರಾಜೀನಾಮೆ ಕೇಳೋ ಅಶೋಕ್ ಮೊದಲು ವಾಸ್ತವಾಂಶ ತಿಳಿಯಲಿ: ಸಿದ್ದರಾಮಯ್ಯ

    ಪ್ರತಿಭಟನೆಯಲ್ಲಿ ಕಾರವಾರದ ಶಾಸಕ ಸತೀಶ್ ಸೈಲ್, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಶಿರಸಿ ಶಾಸಕ ಭೀಮಣ್ಣ ನಾಯ್ಕ ಸೇರಿದಂತೆ ಪ್ರಮುಖ ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದು, ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ದೂರು ನೀಡಿದರು. ಇದನ್ನೂ ಓದಿ: ರಾಜ್ಯದಲ್ಲಿ ಏನಾದರೂ ಗಲಾಟೆಯಾದರೆ ಅದಕ್ಕೆ ರಾಜ್ಯಪಾಲರೇ ಹೊಣೆ – ಜಮೀರ್ ಅಹ್ಮದ್ ಎಚ್ಚರಿಕೆ

  • ದಲಿತ ರಾಜ್ಯಪಾಲರನ್ನು ನಿಂದಿಸಿದ್ದಕ್ಕೆ ಕಾಂಗ್ರೆಸ್ ಮೇಲೆ ಅಟ್ರಾಸಿಟಿ ಕೇಸ್ ಹಾಕಬೇಕು: ಸಿಟಿ ರವಿ ಆಗ್ರಹ

    ದಲಿತ ರಾಜ್ಯಪಾಲರನ್ನು ನಿಂದಿಸಿದ್ದಕ್ಕೆ ಕಾಂಗ್ರೆಸ್ ಮೇಲೆ ಅಟ್ರಾಸಿಟಿ ಕೇಸ್ ಹಾಕಬೇಕು: ಸಿಟಿ ರವಿ ಆಗ್ರಹ

    ಬೆಂಗಳೂರು: ಉಪ್ಪು ತಿಂದವ ನೀರು ಕುಡಿಯಬೇಕು, ತಪ್ಪು ಮಾಡಿದವನಿಗೆ ಶಿಕ್ಷೆ ಆಗಬೇಕು. ಭ್ರಷ್ಟಾಚಾರ ಮುಚ್ಚಿಕೊಳ್ಳುವ ಮಾತಾಡಬೇಡಿ. ಕಾಂಗ್ರೆಸ್‌ಗೆ (Congress) ಸೇರಿದ ಮೇಲೆ ಆತ್ಮಸಾಕ್ಷಿ ಮಾರ್ಕೊಂಡಿದ್ದೀರಾ, ಹೈಕಮಾಂಡ್ ಒತ್ತಡಕ್ಕೆ ಭ್ರಷ್ಟಾಚಾರ, ಲೂಟಿ ಮಾಡುವ ಅನಿವಾರ್ಯತೆ ಬಂದಿರಬೇಕು ಎಂದು ಸಿಎಂ ವಿರುದ್ಧ ಸಿಟಿ ರವಿ (CT Ravi) ಹರಿಹಾಯ್ದರು.

    ಭ್ರಷ್ಟಾಚಾರದ ಕುರಿತಾಗಿ ಸಿಎಂ (Siddaramaiah) ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯಪಾಲರು ನ್ಯಾಯಯುತ ತನಿಖೆ ನಡೆಯಲಿ ಎಂದು ಅನುಮತಿ ಕೊಟ್ಟಿದ್ದಾರೆ. ಅವರು ತನಿಖೆಗಷ್ಟೇ ಅನುಮತಿ ಕೊಟ್ಟಿದ್ದಾರೆ. ಆದರೆ ಕಾಂಗ್ರೆಸ್‌ನವರು ರಾಜ್ಯಪಾಲರ ಪ್ರತಿಕೃತಿ ದಹಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ಚೋರ್ ಉಲ್ಟಾ ಕೊತ್ವಾಲ್ ಕೊ ಡಾಂಟಾ ಅನ್ನುವಂತಾಗಿದೆ. ದಲಿತ ಸಮುದಾಯದ ರಾಜ್ಯಪಾಲರನ್ನು ಕಾಂಗ್ರೆಸ್‌ನವರು ನಿಂದಿಸಿದ್ದಾರೆ. ಪೊಲೀಸರು ಕಾಂಗ್ರೆಸ್‌ನವರ ಮೇಲೆ ಅಟ್ರಾಸಿಟಿ ದೂರು ದಾಖಲಿಸಬೇಕು ಎಂದು ಹೇಳಿದರು. ಇದನ್ನೂ ಓದಿ: ತ್ರಿವಳಿ ತಲಾಖ್‌ ಪದ್ಧತಿಯಿಂದ ಮುಸ್ಲಿಂ ಮಹಿಳೆಯರ ಸ್ಥಿತಿ ದಯನೀಯವಾಗಿದೆ: ಕೇಂದ್ರ

    ಯಡಿಯೂರಪ್ಪ (Yadiyurappa) ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಾಗ ಸಿದ್ದರಾಮಯ್ಯ ಏನು ಹೇಳಿದರು ಎಂಬುದನ್ನು ನೆನಪಿಸಿಕೊಳ್ಳಲಿ. ರಾಜ್ಯಪಾಲರು ಸಂವಿಧಾನ ಬದ್ಧ ತೀರ್ಮಾನ ತೆಗೆದುಕೊಂಡಿದ್ದಾರೆ. ನ್ಯಾಯಯುತ ತನಿಖೆಗೆ ಯಡಿಯೂರಪ್ಪ ರಾಜೀನಾಮೆ ಕೊಡಬೇಕು ಅಂದಿದ್ದರು. ಸಿಎಂಗೆ ಮರೆವಿನ ಕಾಯಿಲೆ ಇದೆ. ಆವತ್ತು ಅವರು ಆಡಿದ ಮಾತು ಇವತ್ತು ನಾವು ನೆನಪು ಮಾಡಿಕೊಡುತ್ತಿದ್ದೇವೆ. ಅದೇ ರಾಜಭವನ, ಅದೇ ಅಧಿಕಾರ ಇವತ್ತಿನ ರಾಜ್ಯಪಾಲರಿಗೂ ಇದೆ. ಆಗ ಪ್ರಾಸಿಕ್ಯೂಷನ್ ಯಡಿಯೂರಪ್ಪ ಮೇಲಿತ್ತು, ಈಗ ನಿಮ್ಮ ಮೇಲಿದೆ. ಪಾತ್ರಧಾರಿಗಳಷ್ಟೇ ಬದಲು, ಈಗ ನಿಮ್ಮ ಮಾತಿನಂತೆ ನೀವು ರಾಜೀನಾಮೆ ಕೊಡಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಮುಡಾ ಹಗರಣ| ಇಷ್ಟು ಆತುರ ಏನು – ಸಿಎಂ ಪರ ವಕೀಲರಿಗೆ ಜಡ್ಜ್ ಪ್ರಶ್ನೆ

    ನೀವು ಎರಡು ನಾಲಿಗೆಯವರಾಗಬಾರದು. ನೀವು ಅಧಿಕಾರದಲ್ಲಿದೀರ, ತನಿಖೆ ಪಾರದರ್ಶಕತೆಯಿಂದ ನಡೆಯುವುದಿಲ್ಲ. ನೀವು ರಾಜೀನಾಮೆ ಕೊಡಿ. 136 ಶಾಸಕರು ಇದ್ದಾರಲ್ಲ. ಯಾರನ್ನಾದರೂ ಕೈಗೊಂಬೆ ಮಾಡಿಕೊಂಡು ಸಿಎಂ ಮಾಡಿ. ನಿಮ್ಮ ಸರ್ಕಾರವನ್ನು ನಾವು ಅಸ್ಥಿರಗೊಳಿಸುತ್ತಿಲ್ಲ. ನಮಗೆ ಹೊಟ್ಟೆಯುರಿ ಇಲ್ಲ. ನಿಮ್ಮ ಗ್ಯಾರಂಟಿ ಹೇಗೆ ಜಾರಿಯಾಗುತ್ತಿದೆ ನೋಡುತ್ತಿದ್ದೇವೆ. ಅಹಿಂದ ಸಿಎಂ ಅನ್ನೋ ಮಾತನ್ನು ಆಡುತ್ತಿದ್ದೀರಿ, ಅದೇನು ನಿಮಗೆ ಲೂಟಿ ಹೊಡೆಯುವ ಲೈಸೆನ್ಸಾ? ಗ್ಯಾರಂಟಿಗಳು ನಿಮಗೆ ಲೂಟಿಗೆ ಲೈಸೆನ್ಸ್ ಕೊಟ್ಟಿವೆಯಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ:  ರಾಜ್ಯಪಾಲರ ವಿರುದ್ಧ ಸಿಡಿದೆದ್ದ ಸಾಹಿತಿಗಳು – ಪ್ರತಿಭಟನೆಗೆ ಕರೆ

  • ಮುಡಾ ಹಗರಣ| ಇಷ್ಟು ಆತುರ ಏನು – ಸಿಎಂ ಪರ ವಕೀಲರಿಗೆ ಜಡ್ಜ್ ಪ್ರಶ್ನೆ

    ಮುಡಾ ಹಗರಣ| ಇಷ್ಟು ಆತುರ ಏನು – ಸಿಎಂ ಪರ ವಕೀಲರಿಗೆ ಜಡ್ಜ್ ಪ್ರಶ್ನೆ

    ಬೆಂಗಳೂರು: ಮುಡಾ ಕೇಸ್‍ಗೆ (MUDA Scam) ಸಂಬಂಧಿಸಿದಂತೆ ರಾಜ್ಯಪಾಲರು ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ (Siddaramaiah) ಹೈಕೋರ್ಟ್‍ಗೆ (High Court) ಅರ್ಜಿ ಸಲ್ಲಿಸಿದ್ದಾರೆ.

    ಸಿಎಂ ಪರ ವಕೀಲರಾದ ಶತಬೀಷ್ ಶಿವಣ್ಣ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಬಳಿಕ ಕೋರ್ಟ್ ಕಲಾಪ ಆರಂಭವಾಗುತ್ತಿದ್ದಂತೆ ನ್ಯಾ.ಹೇಮಂತ್ ಚಂದನ್ ಗೌಡರ್ ಪೀಠದ ಮುಂದೆ ಅರ್ಜಿ ವಿಚಾರಣೆಗೆ ಸಿಎಂ ಪರ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ಮನವಿ ಮಾಡಿದರು. ಈ ವೇಳೆ ವಕೀಲರ ಮನವಿಗೆ, ಅಷ್ಟು ಆತುರ ಏನಿದೆ ಎಂದು ಜಡ್ಜ್ ಪ್ರಶ್ನಿಸಿದರು.

    ಈ ವೇಳೆ ವಕೀಲರು, ರಾಜ್ಯಪಾಲರು ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಿದ್ದಾರೆ. ಹೀಗಾಗಿ ರಾಜ್ಯಪಾಲರ ಆದೇಶ ಪ್ರಶ್ನೆ ಮಾಡಲಾಗುತ್ತಿದೆ. ದೂರುದಾರರು ಕೇವಿಯೆಟ್ ಕೂಡ ಹಾಕಿದ್ದಾರೆ ಎಂದು ಮಾಹಿತಿ ನೀಡಿದರು. ಇದೀಗ ನ್ಯಾಯಮೂರ್ತಿಗಳು ಮಧ್ಯಾಹ್ನ 2:30ಕ್ಕೆ ವಿಚಾರಣೆ ನಿಗದಿ ಮಾಡಿದ್ದಾರೆ.

    ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠದ ಮುಂದೆ ಸಹ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಒಂದೇ ಅರ್ಜಿಯನ್ನು ಎರಡೂ ಪೀಠದಲ್ಲೂ ಮಾಡಲಾಗಿದೆ. ಮುಖ್ಯ ನ್ಯಾಯಾಮೂರ್ತಿಯವರಿಂದ ಮಧ್ಯಾಹ್ನ ಪೀಠ ನಿಗದಿ ಮಾಡಿ, ಯಾವುದಾದರೂ ಒಂದು ಪೀಠದಲ್ಲಿ ಅರ್ಜಿ ವಿಚಾರಣೆ ನಡೆಸಲು ತೀರ್ಮಾನಿಸಲಾಗಿದೆ.

  • MUDA Scam | ಇಂದಿನಿಂದ ಕಾನೂನು ಸಮರ ಆರಂಭ – ಸಿಎಂ ಪರ ವಾದ ಏನು?

    MUDA Scam | ಇಂದಿನಿಂದ ಕಾನೂನು ಸಮರ ಆರಂಭ – ಸಿಎಂ ಪರ ವಾದ ಏನು?

    ಬೆಂಗಳೂರು: ಮುಡಾ ಹಗರಣ (MUDA Scam) ಸಂಬಂಧ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ತನಿಖೆಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಇಂದಿನಿಂದ ಕಾನೂನು ಸಮರ (Legal Battle) ಆರಂಭವಾಗಲಿದೆ.

    ರಾಜ್ಯಪಾಲರ ಆದೇಶದ ವಿರುದ್ಧ ಇಂದು ಹೈಕೋರ್ಟ್‌ನಲ್ಲಿ (High Court) ಸುಪ್ರೀಂಕೋರ್ಟ್‌ ಹಿರಿಯ ವಕೀಲರಾದ ಅಭಿಷೇಕ್ ಮನುಸಿಂಘ್ವಿ ಮತ್ತು ಕಪಿಲ್ ಸಿಬಲ್ ಟೀಂ ವಾದ ಮಾಡಲಿದೆ.

     

    ಸಿಎಂ ಪರ ವಾದ ಏನಿರಬಹುದು?
    ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ (Thawar Chand Gehlot) ನಡೆ ರಾಜಕೀಯ ಪ್ರೇರಿತವಾಗಿದೆ. ಮುಡಾ ಸೈಟ್ ಹಂಚಿಕೆಯಲ್ಲಿ ಯಾವುದೇ ಕಾನೂನು ಉಲ್ಲಂಘನೆ ನಡೆದಿಲ್ಲ.

    ಅಧಿಕಾರ ದುರ್ಬಳಕೆ, ಭ್ರಷ್ಟಾಚಾರ ನಡೆದಿಲ್ಲ. ಮುಡಾ (MUDA) ನಿಯಮದ ಅನ್ವಯವೇ ನಿವೇಶನ ಹಂಚಿಕೆಯಾಗಿದೆ. ಇದರಲ್ಲಿ ನನ್ನ ಮತ್ತು ನನ್ನ ಕುಟುಂಬ ಯಾವುದೇ ನಿಯಮ ಉಲ್ಲಂಘನೆ ಮಾಡಿಲ್ಲ.  ಇದನ್ನೂ ಓದಿ: ಊಟದ ವೇಳೆ ಇಲಿ ಪಾಷಾಣ ಸ್ಪ್ರೇ – 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

    ಯಾವುದೇ ದಾಖಲಾತಿಗಳಿಲ್ಲದೆ ಏಕಪಕ್ಷೀಯವಾಗಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ನೀಡಿದ ಅನುಮತಿಯನ್ನು ರದ್ದು ಮಾಡಬೇಕು.

    ರಾಜ್ಯಾಪಾಲರ ಆದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನ ಕಾಯ್ದೆಯ ಸೆಕ್ಷನ್ 17ಎ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಸೆಕ್ಷನ್ ಅಡಿ ಡಿಜಿ-ಐಜಿಪಿ ಮಟ್ಟದ ಪೊಲೀಸ್ ಅಧಿಕಾರಿ ಪ್ರಾಸಿಕ್ಯೂಷನ್‌ಗೆ ಕೇಳಬೇಕು. ಕೇಂದ್ರ ಸರ್ಕಾರವೇ 2021ರ ಸೆಪ್ಟೆಂಬರ್‌ನಲ್ಲಿ ಈ ನಿಯಮಾವಳಿ ರೂಪಿಸಿದೆ. ಇದನ್ನೂ ಓದಿ: ಅಂದು ಯಡಿಯೂರಪ್ಪ, ಇಂದು ಸಿದ್ದರಾಮಯ್ಯ – ಸಿಎಂಗೆ ಕಂಟಕವಾದ `ಮೈತ್ರಿ’ ಪಾದಯಾತ್ರೆ

    ಪ್ರಾಸಿಕ್ಯೂಷನ್‌ಗೆ ಅನುಮತಿಸಲು ಯಾವುದಾದರೂ ತನಿಖಾ ವರದಿ ಇರಬೇಕು. ಸಿದ್ದರಾಮಯ್ಯ ವಿರುದ್ಧ ಯಾವುದೇ ತನಿಖಾ ವರದಿ ಇರಲಿಲ್ಲ. ಯಾವುದೇ ಸೂಕ್ತ ಆಧಾರವಿಲ್ಲದೇ ತನಿಖೆಗೆ ಒಪ್ಪಿಗೆ ನೀಡಲಾಗಿದೆ. ಖಾಸಗಿ ದೂರಿನ ಮೇಲೆ ತನಿಖೆಗೆ ನೀಡಿರುವುದು ಕಾನೂನು ಬಾಹಿರ. ಈ ಮೂಲಕ ರಾಜ್ಯಪಾಲರೇ ತನಿಖಾಧಿಕಾರಿಯಂತೆ ವರ್ತಿಸಿದ್ದಾರೆ.

    ಕಾನೂನಾತ್ಮಕವಾಗಿಯೇ ಬದಲಿ ನಿವೇಶನ ಹಂಚಿಕೆಯಾಗಿದೆ. ನಿರ್ದಿಷ್ಟ ಸ್ಥಳದಲ್ಲೇ ಬದಲಿ ನಿವೇಶನ ಕೊಡಿ ಎಂದು ಸಿಎಂ ಕುಟುಂಬ ಕೇಳಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಿವೇಶನ ಹಂಚಿಕೆ ಮಾಡಲಾಗಿದೆ. ಡಿನೋಟಿಫೈ, ಜಮೀನು ನೋಂದಣಿ ಸಂಬಂಧ ಯಾರ ಮೇಲೂ ಪ್ರಭಾವ ಬೀರಿಲ್ಲ.

     

  • ಸಿದ್ದರಾಮಯ್ಯಗೆ ಈಗ ಮೂರು ಸಂಕಟ – ಮೂರು ಹೋರಾಟ!

    ಸಿದ್ದರಾಮಯ್ಯಗೆ ಈಗ ಮೂರು ಸಂಕಟ – ಮೂರು ಹೋರಾಟ!

    ಬೆಂಗಳೂರು: ಸಿದ್ದರಾಮಯ್ಯಗೆ (Siddaramaiah) ಈಗ ಮೂರು ಸಂಕಟ, ಮೂರು ಹೋರಾಟ ಇವೆ. ಭಾವನಾತ್ಮಕ ಸಂಕಟ.. ರಾಜಕೀಯ ಸಂಕಟ.. ಕಾನೂನು ಸಂಕಟಗಳು ಇವೆ.

    ಮೂರು ಸಂಕಟಗಳನ್ನ ಹೋರಾಟದ ಮೂಲಕವೇ ಸಮಚಿತ್ತದಿಂದ ಎದುರಿಸಬೇಕಾಗಿದೆ. ಎಫ್‌ಐಆರ್ (FIR) ದಾಖಲಾದರೇ ಸಾರ್ವಜನಿಕವಾಗಿ ಕಾಣಿಸಿ ಕೊಳ್ಳದ ಪತ್ನಿ ವಿಚಾರಣೆ ಎದುರಿಸಬೇಕು. ಇದು ಸಹಜವಾಗಿಯೇ ಸಿಎಂ ಸಿದ್ದರಾಮಯ್ಯಗೆ ಇದು ಅರಗಿಸಿಕೊಳ್ಳಲಾಗದ ವಿಷಯ. ಅನಿರೀಕ್ಷಿತವಾಗಿ ಕುಟುಂಬದಿಂದಲೇ ಬಂದ ಆರೋಪವನ್ನ ಭಾವನಾತ್ಮಕ ಹೋರಾಟದ ಮೂಲಕ ಎದುರಿಸಬೇಕಿದೆ. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಸದ್ಯಕ್ಕೆ ಪೊಲಿಟಿಕಲ್ ಸೇಫ್ – ಆದ್ರೆ ಮುಂದೇನು?

    ಇನ್ನು ರಾಜಕೀಯ ಸಂಘರ್ಷ (Political conflict) ಮಾಡದ ಹೊರತು ಅಧಿಕಾರ ಉಳಿಸಿಕೊಳ್ಳಲು ಆಗದು. ರಾಜ್ಯಪಾಲರ ರಾಜಕೀಯ ಪಿತೂರಿ ಆರೋಪದಿಂದ ಹಿಡಿದು ಅಧಿಕಾರ ಉಳಿಸಿಕೊಳ್ಳುವ ತನಕ ರಾಜಕೀಯ ಹೋರಾಟ ಮಾಡುವುದು ಅನಿವಾರ್ಯ. ಆರೋಪ ಮುಕ್ತರಾಗಲು ಕೋರ್ಟ್ ನಲ್ಲೇ (Karnataka Highcourt) ಹೋರಾಟ ನಡೆಸಬೇಕಿದೆ. ಇದನ್ನೂ ಓದಿ: ಟ್ರೈನಿ ವೈದ್ಯೆ ಅತ್ಯಾಚಾರ & ಹತ್ಯೆ ಕೇಸ್‌; ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ

    ಇಷ್ಟು ವರ್ಷದ ರಾಜಕಾರಣದಲ್ಲಿ ಕಾಪಾಡಿಕೊಂಡು ಬಂದಿದ್ದದ್ದನ್ನ ಮರಳಿಪಡೆಯಲು ಕಾನೂನು ಹೋರಾಟ ಅಗತ್ಯ. ಕಾನೂನು ಹೋರಾಟದ ಮೂಲಕ ಜಯಿಸಿ ಬಂದು ವಿರೋಧಿಗಳಿಗೆ ಉತ್ತರ ಕೊಡಬೇಕಾದ ಅನಿವಾರ್ಯತೆಯೂ ಇದೆ. ಹಾಗಾಗಿ ಸಿಎಂ ಸಿದ್ದರಾಮಯ್ಯ ಮೂರು ಸಂಕಟಗಳನ್ನ ಅನುಭವಿಸಿಯೇ ಮೇಲೆದ್ದು ಬರ್ತಾರಾ? ವಿರೋಧಿಗಳ ಬಾಯಿ ಮುಚ್ಚಿಸುತ್ತಾರಾ? ಎಂಬುದನ್ನ ಕಾದುನೋಡಬೇಕಿದೆ. ಇದನ್ನೂ ಓದಿ: TB Dam | ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಯಶಸ್ವಿ – ತಾಂತ್ರಿಕ ತಂಡಕ್ಕೆ 2 ಲಕ್ಷ ಬಹುಮಾನ