Tag: MUDA Scam

  • ದೆಹಲಿಯಿಂದ ವಾಪಸ್ಸಾದ ಪರಮೇಶ್ವರ್ – ಮುಡಾ ಹಗರಣ ಚರ್ಚೆ ಮಾಡಿದ್ದೇವೆ ಎಂದ ಗೃಹ ಸಚಿವ

    ದೆಹಲಿಯಿಂದ ವಾಪಸ್ಸಾದ ಪರಮೇಶ್ವರ್ – ಮುಡಾ ಹಗರಣ ಚರ್ಚೆ ಮಾಡಿದ್ದೇವೆ ಎಂದ ಗೃಹ ಸಚಿವ

    ಬೆಂಗಳೂರು: ಮುಡಾ ಹಗರಣ (MUDA Scam) ಸೇರಿದಂತೆ ಪಕ್ಷದ ಸಂಘಟನೆಯ ಬಗ್ಗೆಯೂ ಹೈಕಮಾಂಡ್ ಜೊತೆ ಚರ್ಚೆ ಮಾಡಲಾಗಿದೆ ಎಂದು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ (G Parameshwar) ಹೇಳಿದರು.

    ದೆಹಲಿಯಿಂದ ಆಗಮಿಸಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda Airport) ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೆಹಲಿಗೆ ಹೋಗಿ ಹೈಕಮಾಂಡ್ ಜೊತೆ ಚರ್ಚೆ ಮಾಡಿಕೊಂಡು ಬಂದಿದ್ದೇನೆ. ಮುಡಾ ಹಗರಣ ಒಂದೇ ಅಲ್ಲ ಪಕ್ಷ ಸಂಘಟನೆ ಬಗ್ಗೆ ಎಲ್ಲಾ ಚರ್ಚೆ ಮಾಡಿದ್ದೇವೆ. ಸಿಎಂ ಡಿಸಿಎಂ ಮತ್ತು ಹಲವು ಸಚಿವರು ಸಹ ಬಂದಿದ್ದರು. ಸರ್ಕಾರದ ಆಡಳಿತ ಬಗ್ಗೆ ಒಂದಷ್ಟು ಚರ್ಚೆ ಮಾಡಿದ್ದೇವೆ ಎಂದರು. ಇದನ್ನೂ ಓದಿ: Shivamogga | ಕಾಡಾನೆ ದಾಳಿಗೆ ಕೃಷಿ ಕಾರ್ಮಿಕ ಬಲಿ

    ನೀವು ನಿರೀಕ್ಷೆ ಮಾಡಿದಂತ ವಿಚಾರಗಳು ಏನು ಚರ್ಚೆಯಾಗಿಲ್ಲ. ಸಂದರ್ಭ ಬಂದಾಗ ಅರ್ಕಾವತಿ ಡಿನೋಟಿಫಿಕೇಷನ್ ವರದಿ ಬಹಿರಂಗ ಮಾಡುತ್ತೇವೆ. ಸರ್ಕಾರದಲ್ಲಿ ಎಲ್ಲವು ಪಾರದರ್ಶಕವಾಗಿರುತ್ತದೆ. ಆ ರೀತಿ ಮುಚ್ಚಿಡುವಂತದ್ದು ಏನು ಇಲ್ಲ. ಸಚಿವರಿಗೆ ಕೊಕ್ ಅಂತಹ ವಿಚಾರ ಏನು ಚರ್ಚೆ ಆಗಿಲ್ಲ. ಬೈರತಿ ಸುರೇಶ್ ಅವರು ಮಗನ ಮದುವೆಯಲ್ಲಿ ಬ್ಯುಸಿಯಾಗಿದ್ದಾರೆ. ಅದಕ್ಕೆ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ ಅಷ್ಟೇ. ಕಾರ್ಕಳದಲ್ಲಿ ಯುವತಿ ಅತ್ಯಾಚಾರ ಆರೋಪಿಯ ಬಂಧನವಾಗಿದೆ. ಮುಂದೆ ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: J&K Poll Manifesto | ಪಿಡಿಪಿ ಅಧಿಕಾರಕ್ಕೆ ಬಂದ್ರೆ 200 ಯೂನಿಟ್ ವಿದ್ಯುತ್‌ ಉಚಿತ – ಮೆಹಬೂಬಾ ಮುಫ್ತಿ

  • ರಾಜ್ಯಪಾಲರ ವಿರುದ್ಧ ರಾಷ್ಟ್ರಪತಿಗಳಿಗೆ ದೂರು ನೀಡಲು ಅವಕಾಶ ಇದೆ: ಸಿಎಂ

    ರಾಜ್ಯಪಾಲರ ವಿರುದ್ಧ ರಾಷ್ಟ್ರಪತಿಗಳಿಗೆ ದೂರು ನೀಡಲು ಅವಕಾಶ ಇದೆ: ಸಿಎಂ

    ಬೆಂಗಳೂರು: ರಾಜ್ಯಪಾಲರ ವಿರುದ್ಧ ರಾಷ್ಟ್ರಪತಿಗಳಿಗೆ ದೂರು ನೀಡಲು ಅವಕಾಶ ಇದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿಕೆ ನೀಡಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯಪಾಲರು ಪ್ರಾಸಿಕ್ಯೂಶನ್‌ಗೆ ಅನುಮತಿ ಕೊಟ್ಟಿರುವುದು ಸಂವಿಧಾನ ಬಾಹಿರ. ರಾಜಭವನ ದುರ್ಬಳಕೆ ಆಗಿದೆ. ರಾಜ್ಯಪಾಲರ ನಡೆಯನ್ನು ಕ್ಯಾಬಿನೆಟ್‌ನಲ್ಲಿ ಖಂಡಿಸಿದ್ದೇವೆ. ಕೋರ್ಟ್‌ನಲ್ಲೂ ಚಾಲೆಂಜ್ ಮಾಡಿದ್ದೇವೆ ಎಂದರು. ಇದನ್ನೂ ಓದಿ: ಮೋದಿ, ಯೋಗಿಯನ್ನು ಹೊಗಳಿದ್ದಕ್ಕೆ ಹೆಂಡತಿ ಮುಖಕ್ಕೆ ಬಿಸಿ ಸಾಂಬಾರ್‌ ಎರಚಿ ತಲಾಖ್‌ ನೀಡಿದ ಪತಿ

    ಡಿಸಿಎಂ (DK Shivakumar) ಹಾಗೂ ಕೆಲವು ಸಚಿವರು ನಿನ್ನೆ ದೆಹಲಿಗೆ ಹೋಗಿದ್ದೆವು. ರಾಜ್ಯದ ರಾಜಕೀಯ ಬೆಳವಣಿಗೆಯನ್ನು ಹೈಕಮಾಂಡ್ ಗಮನಕ್ಕೆ ತಂದಿದ್ದೇವೆ. ಮುಡಾ ಪ್ರಕರಣದ ಬಗ್ಗೆ ಚರ್ಚೆ ಮಾಡಿದ್ದೇವೆ. ಕೋರ್ಟ್‌ನಲ್ಲಿ ರಾಜ್ಯಪಾಲರ ಆದೇಶ ಪ್ರಶ್ನಿಸಿ ಅರ್ಜಿ ಹಾಕಲಾಗಿದೆ. ಆ. 29 ತಾರೀಖಿಗೆ ವಿಚಾರಣೆ ಮುಂದೂಡಲಾಗಿದೆ. ಜೊತೆಗೆ ಕಾನೂನು ಹೋರಾಟ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿರುವುದಾಗಿ ತಿಳಿಸಿದರು. ಇದನ್ನೂ ಓದಿ: ಬೆಂಬಲ ಬೆಲೆಯಲ್ಲಿ ಹೆಸರುಕಾಳು, ಸೂರ್ಯಕಾಂತಿ ಖರೀದಿಗೆ ಕೇಂದ್ರದ ಸಮ್ಮತಿ: ಶಿವಾನಂದ ಪಾಟೀಲ್

    ಇದೇ ವೇಳೆ ರಾಜ್ಯಪಾಲರು ಬಿಲ್‌ಗಳನ್ನು ವಾಪಸ್ ಕಳುಹಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ,  ಕ್ಯಾಬಿನೆಟ್‌ನಲ್ಲಿ ನಾವು ನಿರ್ಣಯ ಮಾಡಿ ಸದನದಲ್ಲಿ ಪಾಸ್ ಆಗಿರುವ ಬಿಲ್‌ಗಳು. ವಿವರಣೆ ಕೇಳಿದರೆ ಕೊಡುತ್ತಿದ್ದೆವು. ಆದರೆ ವಾಪಸ್ ಕಳುಹಿಸಿದ್ದಾರೆ. ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆಂದು ಹೇಳಿದರು. ಇದನ್ನೂ ಓದಿ: ನೀರಿನ ದರ ಏರಿಕೆ ಮಾಡ್ತೀವಿ,ಬಸ್ ದರ ಏರಿಕೆ ನಾವು ಎಲ್ಲಿ ಹೇಳಿದ್ದೀವಿ: ಸಿಎಂ ಪ್ರಶ್ನೆ

  • MUDA Scam | ಪ್ರಾಸಿಕ್ಯೂಷನ್ ಸಮರದಲ್ಲಿ ಸೈಲೆಂಟ್ ಅಸ್ತ್ರ ಪ್ರಯೋಗಿಸಿದ ರಾಹುಲ್‌ ಗಾಂಧಿ!

    MUDA Scam | ಪ್ರಾಸಿಕ್ಯೂಷನ್ ಸಮರದಲ್ಲಿ ಸೈಲೆಂಟ್ ಅಸ್ತ್ರ ಪ್ರಯೋಗಿಸಿದ ರಾಹುಲ್‌ ಗಾಂಧಿ!

    ನವದೆಹಲಿ: ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧದ ಪ್ರಾಸಿಕ್ಯೂಷನ್‌ ಸಮರದಲ್ಲಿ ರಾಹುಲ್‌ ಗಾಂಧಿ (Rahul Gandhi) ಸೈಲೆಂಟ್‌ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ.

    ಮುಡಾ (MUDA Scam) ವಿಚಾರವನ್ನು ದೊಡ್ಡದು ಮಾಡಲು ಬಿಜೆಪಿ (BJP) ಕಾಯುತ್ತಿದೆ. ನಾವು ಈಗ ಪ್ರತಿಕ್ರಿಯೆ ನೀಡಿದರೆ ಅದನ್ನೇ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಾರೆ. ಕರ್ನಾಟಕದ (Karnataka) ವಿಚಾರ ರಾಜ್ಯದಲ್ಲಿಯೇ ಹೋರಾಟ ಮಾಡಿ ರಾಜಕೀಯವಾಗಿ ಎದುರಿಸಿ ಎಂದು ಸಿಎಂಗೆ ಸಲಹೆ ನೀಡಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಮುಡಾ ಆರೋಪದಲ್ಲಿ ಯಾವುದೇ ಹುರುಳಿಲ್ಲ. ನೀವು ಕಾನೂನು ಹೋರಾಟ ಮುಂದುವರಿಸಿ. ನಿಮ್ಮ ಜೊತೆಗೆ ನಾವಿದ್ದೇವೆ. ಹರ್ಯಾಣ, ಜಮ್ಮು ಚುನಾವಣೆ ಘೋಷಣೆಯಾಗಿದ್ದು ಬಿಜೆಪಿಯ ರಾಜಕೀಯ ದಾಳಿಗೆ ಬಗ್ಗುವುದು ಬೇಡ ಎಂದು ಸೂಚಿಸಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ವಿರುದ್ಧ ಮೊದಲ ಚಾರ್ಜ್‌ಶೀಟ್‌ ಸಲ್ಲಿಕೆ – 2,144 ಪುಟಗಳ ದೋಷಾರೋಪ ಪಟ್ಟಿಯಲ್ಲೇನಿದೆ?

    ಹರ್ಯಾಣ, ಜಮ್ಮು ಕಾಶ್ಮೀರ ಚುನಾವಣೆಯ ನಂತರ ಮಹಾರಾಷ್ಟ್ರದಲ್ಲೂ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ ಪ್ರತಿಭಟನೆ ನಡೆಸಿದರೆ ಬಿಜೆಪಿ ಅದನ್ನು ಅಸ್ತ್ರವನ್ನಾಗಿ ಮಾಡುವ ಸಾಧ್ಯತೆ ಇರುವುದರಿಂದ ರಾಹುಲ್ ಗಾಂಧಿ ಎಚ್ಚರಿಕೆ ಹೆಜ್ಜೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ.

  • ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟ ನಂತ್ರ ಹೈಕಮಾಂಡ್ ತೀರ್ಮಾನ ಏನು ಗೊತ್ತಿಲ್ಲ – ಸತೀಶ್ ಜಾರಕಿಹೋಳಿ

    ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟ ನಂತ್ರ ಹೈಕಮಾಂಡ್ ತೀರ್ಮಾನ ಏನು ಗೊತ್ತಿಲ್ಲ – ಸತೀಶ್ ಜಾರಕಿಹೋಳಿ

    ಬೆಂಗಳೂರು: ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟ ನಂತರ ಹೈಕಮಾಂಡ್ ತೀರ್ಮಾನ ಏನು ಅನ್ನೋದು ಗೊತ್ತಿಲ್ಲ ಮುಂದೆ ತೀರ್ಮಾನ ಮಾಡುತ್ತಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ‌ (Satish Jarkiholi) ಹೇಳಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಸಿಎಂ, ಡಿಸಿಎಂ ದೆಹಲಿ ಭೇಟಿ ನಮಗೆ ಅಷ್ಟೊಂದು ಗೊತ್ತಿಲ್ಲ ವಿಷ್ಯ ಏನೂ ಗೊತ್ತಿಲ್ಲ. ಸಾಮಾನ್ಯವಾಗಿ ಇಲ್ಲಿ ನಡೀತಿರೋ ವಿಚಾರವನ್ನ ಹೈಕಮಾಂಡ್ ಗಮನಕ್ಕೆ ತರೋ ಕೆಲಸ ಆಗ್ತಿದೆ. ಅದೇ ಕಾರಣಕ್ಕೆ ದೆಹಲಿಗೆ ಹೋಗಿದ್ದಾರೆ. ಪ್ರಾಸಿಕ್ಯೂಷನ್ (Prosecution) ನಂತ್ರ ಹೈಕಮಾಂಡ್ ತೀರ್ಮಾನ ಏನು? ಎಂಬ ವಿಚಾರದ ಬಗ್ಗೆ ಯಾವುದೇ ಕ್ಲಾರಿಫಿಕೇಷನ್ ಬಂದಿಲ್ಲ. ಕೋರ್ಟ್ ನಲ್ಲಿ ಆದೇಶ ಬಂದ್ಮೇಲೆ ಮುಂದಿನ ತೀರ್ಮಾನ. ಇಂಡಿಯಾ ಒಕ್ಕೂಟ ‌ಏನು ತೀರ್ಮಾನ ಕೈಗೊಳ್ಳುತ್ತದೆ ನೋಡಬಹುದು. ಬೇರೆ ಕಡೆ ಕೂಡ ಈ ರೀತಿ ಕೆಲಸ ಆಗ್ತಿವೆ ಎಂದು ಹೇಳಿದ್ದಾರೆ.

    ಹಲವು ರಾಜ್ಯಗಳಲ್ಲಿ ರಾಜ್ಯಪಾಲರು ಮತ್ತು ಸರ್ಕಾರಗಳ ನಡುವೆ ಸಂಘರ್ಷ ನಡೆದಿವೆ. ತಮಿಳುನಾಡು, ಬಂಗಾಳ ಸೇರಿ ನಮ್ಮ ರಾಜ್ಯದಲ್ಲೂ ನಡೀತಿದೆ. ರಾಜ್ಯಪಾಲರು ಬಿಲ್ ವಾಪಸ್ ಕಳಿಸಿದ್ದಾರೆ. ಕೆಲ ಬಿಲ್‌ಗಳನ್ನ ವಾಪಸ್ ಕಳಿಸಿದ್ದಾರೆ. ಅವರು ಬಿಲ್ ಕುರಿತು ಸ್ಪಷ್ಟನೆ ಕೇಳೋಕೆ ಹಕ್ಕಿದೆ. ಅದನ್ನ ಸರ್ಕಾರ ಕೂಡ ಉತ್ತರ ಕೊಡುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದಾಖಲೆಗಳ ನಾಶ ಪಡಿಸಲು ವೈಟ್ನರ್ ಹಚ್ಚಿದ್ದು ಯಾರು? – ನಾವು ಸರ್ಕಾರ ಬೀಳಿಸಲ್ಲ: ಸಿಎಂ ವಿರುದ್ಧ ಸುನೀಲ್ ಕುಮಾರ್ ಕಿಡಿ

    ಇನ್ನೂ ಸರ್ಕಾರ ಅಸ್ಥಿರ‌ಗೊಳಿಸುವ ಕುರಿತು ಮಾತನಾಡಿ, ಸರ್ಕಾರ ಅಸ್ಥಿರ ಗೊಳಿಸೋ‌ ವಿಚಾರದ ಬಗ್ಗೆ ಸಿಎಂ ಹೇಳಿದ್ದಾರೆ. ಹಿಂದೆಯಿಂದಲೂ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ. ಆದ್ರೆ ಯಾವುದೇ ಬದಲಾವಣೆ ಆಗಲ್ಲ. 6 ಗಳಿಗೊಮ್ಮೆ‌ ಸರ್ಕಾರ ಬೀಳಿಸೋ ವಿಚಾರ ಮುನ್ನಲೆಗೆ ಬರುತ್ತಿರುತ್ತೆ. ಮುಂದಿನ 4 ವರ್ಷಗಳ ಕಾಲ ನಮ್ಮದೇ ಸರ್ಕಾರ ಅಲ್ಲಿವರೆಗೆ ಬೀಳಿಸುವ ಪ್ರಯತ್ನ ನಡೆಯುತ್ತಲೇ ಇರುತ್ತೆ ಎಂದಿದ್ದಾರೆ. ಇದನ್ನೂ ಓದಿ: ಸರ್ಕಾರಕ್ಕೆ ಕಪ್ಪುಚುಕ್ಕಿ ತರುವ ಸುಳ್ಳು ಆರೋಪಕ್ಕೆ‌ ರಾಜ್ಯಪಾಲರ ಸಮ್ಮತಿ: ಸಚಿವ ಎಂ.ಬಿ.ಪಾಟೀಲ್

  • ದಾಖಲೆಗಳ ನಾಶ ಪಡಿಸಲು ವೈಟ್ನರ್ ಹಚ್ಚಿದ್ದು ಯಾರು? – ನಾವು ಸರ್ಕಾರ ಬೀಳಿಸಲ್ಲ: ಸಿಎಂ ವಿರುದ್ಧ ಸುನೀಲ್ ಕುಮಾರ್ ಕಿಡಿ

    ಬೆಂಗಳೂರು: ಆರೋಪ ಬಂದ ಮೇಲೆ ರಾಜೀನಾಮೆ ಕೋಡಬೇಕಿತ್ತು. ಆದ್ರೆ ಕುರ್ಚಿಗೆ ಅಂಟಿಕೊಡು ಸಿಎಂ (Chief Minister) ಕೂತ್ಕೊಂಡು ರಾಜ್ಯಪಾಲರ ಮೇಲೆ ಗೂಬೆ ಕೂರಿಸೋದನ್ನ ಬಿಡಬೇಕು ಅಂತಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ (Sunil Kumar) ಕಿಡಿ ಕಾರಿದ್ದಾರೆ.

    ಬಿಜೆಪಿ ಕಚೇರಿಯಲ್ಲಿ (BJP Office) ಮಾತನಾಡಿದ ಅವರು, ಮೊದಲು ರಾಜೀನಾಮೆ ಕೊಟ್ಟು ತನಿಖೆ ಎದರಿಸಲಿ, ನಂತರ ಅದರಲ್ಲಿ ತಪ್ಪಿಲ್ಲ ಅಂದರೆ ಮತ್ತೆ ಸಿಎಂ ಆಗಲಿ. ಇನ್ನೂ ನಾವು ಯಾವುದೇ ಅಪರೇಷನ್ ಕಮಲಕ್ಕೆ ಕೈ ಹಾಕಿಲ್ಲ ಕೈ ಹಾಕೋದು ಇಲ್ಲ. ಅವರರವರ ಒಳಗಿನ ಮತ್ತೆ ಭ್ರಷ್ಟಾಚಾರ ಮುಚ್ಚಿ ಕೊಳ್ಳಲು ಈ ಹೇಳಿಕೆ ಕೊಡ್ತಿದ್ದಾರೆ. ಸರ್ಕಾರ ಅಸ್ಥಿರಗೊಳಿಸುವ ಅಂತಹ ಪ್ರಯತ್ನ ಬಿಜೆಪಿ ಮಾಡಲ್ಲ ಅಂತ ಹೇಳಿದರು. ಇದನ್ನೂ ಓದಿ: ಟೀಚರ್ ಹೊಡೆದ್ರು ಅಂತಾ ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ – ಶಾಲಾ ಬಿಲ್ಡಿಂಗ್‌ನ 3ನೇ ಫ್ಲೋರ್‌ನಿಂದ ಏಕಾಏಕಿ ಜಿಗಿದ ವಿದ್ಯಾರ್ಥಿನಿ!

    ಕಾಂಗ್ರೆಸ್ ಸರ್ಕಾರದಲ್ಲಿ (Karnataka Government) ಅಸ್ಥಿರತೆ ಕಾಣ್ತಿದೆ. ಸ್ವತಃ ಸಿಎಂ ತಮ್ಮ ಕುರ್ಚಿ ಉಳಿಸಿಕೊಳ್ಳಲು ಜನ ಕಲ್ಯಾಣದ ಯೋಜನೆಗಳ ಕೈ ಬಿಟ್ಟಿದ್ದಾರೆ. ಯಾವುದೇ ಜಿಲ್ಲೆಗಳಲ್ಲೂ ಸಚಿವರು ಪ್ರವಾಸ ಸಭೆಗಳನ್ನು ನಡೆಸ್ತಿಲ್ಲ. ಜನರ ಬವಣೆಗಳನ್ನು ಕೇಳದಿರುವ ಪರಿಸ್ಥಿತಿ ಇದೆ. ಆಡಳಿತ ಪಕ್ಷದ ಸದಸ್ಯರೇ ಬೇರೆ ಬೇರೆ ಪ್ರತಿಭಟನೆ ಮಾಡ್ತಿದ್ದಾರೆ. ಜನರ ಬಗ್ಗೆ ಯೋಚನೆ ಮಾಡದಿರುವುದು ಅತ್ಯಂತ ಶೋಚನೀಯ ಸ್ಥಿತಿ ಅಂತಾ ಟೀಕಿಸಿದರು. ಆದ್ರೆ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಹೈಕಮಾಂಡ್‌ಗೆ ವರದಿ ಕೊಡಲು ಸಿಎಂ ದೆಹಲಿಗೆ ತೆರಳಿದ್ದಾರೆ.

    ಸಿಎಂ ರಾಜ್ಯದ ಜನರ ಪ್ರಶ್ನೆಗಳಿಗೆ ಉತ್ತರ ಕೊಡಬೇಕು. ಮೈಸೂರಿನಲ್ಲಿರುವ ಜಮೀನನ್ನು ಹೇಗೇ ಅಕ್ರಮವಾಗಿ ತಮ್ಮ ಬಾಮೈದನಿಗೆ ರಿಜಿಸ್ಟರ್ ಮಾಡಿಸಿಕೊಂಡ್ರು? ದಾಖಲೆಗಳ ನಾಶ ಪಡಿಸಲು ವೈಟ್ನರ್ ಹಚ್ಚಿದ್ದು ಯಾರು? ಇಷ್ಟು ದೊಡ್ಡ ಪ್ರಮಾಣದ ಹಗರಣ ಆಗ್ತಿದ್ರು ಸಿಎಂ ಯಾಕೇ ಕೈ ಕಟ್ಟಿಕೊಂಡು ಕುಳಿತುಕೊಂಡಿದ್ಸಾರೆ?ವಾಲ್ಮೀಕಿ ಹಗರಣದಲ್ಲಿ ತನಿಖೆ ಮಾಡ್ತಾ ಮಾಡ್ತಾ ಚಾರ್ಜ್ ಶೀಟ್ ನಲ್ಲಿ ಯಾಕೇ ಸಚಿವರು, ಶಾಸಕರ ಹೆಸರನ್ನು ಕೈ ಬಿಟ್ರಿ? ನಾವು ದಲಿತರ ಪರ ಎಂದು ಏಕೆ ಹೇಳ್ತಿದ್ದೀರಿ? ಇದಕ್ಕೆಲ್ಲಾ ಸ್ವತಃ ತಾವೇ ಉತ್ತರವನ್ನು ಕೊಡಬೇಕು ಅಂತಾ ಆಗ್ರಹಿಸಿದ್ರು. ಇದನ್ನೂ ಓದಿ: ಸರ್ಕಾರದ ಎಲ್ಲಾ ಇಲಾಖೆಗಳ ನಾಮಫಲಕವನ್ನ ಕಡ್ಡಾಯವಾಗಿ ಕನ್ನಡದಲ್ಲೇ ಪ್ರದರ್ಶಿಸಬೇಕು – CS ಆದೇಶ

    ಸರ್ಕಾರವನ್ನು ಬೀಳಿಸ್ತೀವಿ ಅಂತಾ ನಾವು ಯಾರು ಹೇಳಿಲ್ಲ. ಸರ್ಕಾರ ಉರುಳಿಸಲು ನಿಮ್ಮ ಪಾರ್ಟಿಯಿಂದಲೇ ನಡೆದಿದ್ಯಾ? ಸಿದ್ದರಾಮಯ್ಯ ಇಳಿದ್ರೆ ಕಾಂಗ್ರೆಸ್‌ನಲ್ಲಿ ಮತ್ತೊಬ್ಬ ಸಿಎಂ ಆಗುವ ಅರ್ಹತೆ ಇಲ್ಲವಾ? ನಿಮ್ಮ ಮಾತು ನೋಡಿದ್ರೆ ರಾಜ್ಯದ ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಬಿಟ್ಟರೆ, ಮತ್ತೊಬ್ಬ ಪರ್ಯಾಯ ಸಿಎಂ ಆಗುವ ಅರ್ಹತೆ ಇಲ್ಲ ಅಂತಾ ವಾಗ್ದಾಳಿ ನಡೆಸಿದ್ರು. ಬಿಲ್‌ಗಳನ್ನ ವಾಪಸ್‌ ಕಳುಹಿಸಿದ್ದಾರೆಂದು ಗವರ್ನರ್ ಬಗ್ಗೆ ಮಂತ್ರಿಗಳು ಎಲ್ಲೆ ಮೀರಿ ಮಾತಾಡ್ತಿದ್ದಾರೆ. ಹಿಂದೆಯೂ ಗವರ್ನರ್‌ಗಳು ವಿಧೇಯಕ ವಾಪಸ್ಸು ಕಳುಹಿಸಿರುವ ಉದಾಹರಣೆಗಳಿವೆ. ಯಾವ ವಿಧೇಯಕ ಜನಪರವಾಗಿ ಇರುತ್ತೋ ಅದನ್ನು ಗವರ್ನರ್ ಅಂಗೀಕಾರ ಮಾಡಿ ಕಳುಹಿಸ್ತಾರೆ. ಯಾವುದಾದರೂ ಅನುಮಾನ ಇದ್ದರೇ ಏಕ ಪಕ್ಷೀಯವಾಗಿ ಇರಬಹುದು ಅಂತಾ ವಾಪಸ್ಸು ಕಳುಹಿಸ್ತಾರೆ. ಇದೇನೂ ಮೊದಲ ಬಾರಿಯಾಗಿ ಅಲ್ಲ. ಗವರ್ನರ್ ಸಂವಿಧಾನ ಬದ್ಧವಾಗಿ ನಡೆಯುತ್ತಿದ್ದಾರೆ. ಇದನ್ನು ವಿರೋಧಿಸಿ ಕಾಂಗ್ರೆಸ್ ಮಾತಾಡ್ತಿರೋದು ಸರ್ಕಾರಕ್ಕೆ ಶೋಭೆ ತರುವಂತದ್ದಲ್ಲ ಅಂತಾ ಕಿಡಿಕಾರಿದ್ರು. ಇದನ್ನೂ ಓದಿ: ಬಿಜೆಪಿ ಏನೇ ಆರೋಪ ಮಾಡಲಿ ತಲೆ ಕೆಡಿಸಿಕೊಳ್ಳಬೇಡಿ: ಸಿಎಂಗೆ ಹೈಕಮಾಂಡ್ ಅಭಯ

  • ಬಿಜೆಪಿ ಏನೇ ಆರೋಪ ಮಾಡಲಿ ತಲೆ ಕೆಡಿಸಿಕೊಳ್ಳಬೇಡಿ: ಸಿಎಂಗೆ ಹೈಕಮಾಂಡ್ ಅಭಯ

    ಬಿಜೆಪಿ ಏನೇ ಆರೋಪ ಮಾಡಲಿ ತಲೆ ಕೆಡಿಸಿಕೊಳ್ಳಬೇಡಿ: ಸಿಎಂಗೆ ಹೈಕಮಾಂಡ್ ಅಭಯ

    – ಕಾನೂನು ಹೋರಾಟದ ಮೂಲಕವೇ ಉತ್ತರ ನೀಡಿ
    – ಸಿಎಂ ಮೇಲಿನ ದಾಳಿ ಹಿಂದುಳಿದ ನಾಯಕರ ವಿರುದ್ಧ ಎನ್ನುವಂತೆ ಬಿಂಬಿಸಲು ‘ಹೈ’ ಸೂಚನೆ

    ನವದೆಹಲಿ: ಬಿಜೆಪಿ ಏನೇ ಆರೋಪ ಮಾಡಲಿ ತಲೆ ಕೆಡಿಸಿಕೊಳ್ಳಬೇಡಿ. ಕಾನೂನು ಹೋರಾಟ ಮೂಲಕವೇ ಉತ್ತರ ನೀಡಿ ಎಂದು ಸಿಎಂ ಸಿದ್ದರಾಮಯ್ಯಗೆ (Siddaramaiah) ಕಾಂಗ್ರೆಸ್ ಹೈಕಮಾಂಡ್ (Congress High Command) ಸಲಹೆ ನೀಡಿದೆ.

    ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿರುವ ಮುಡಾ ಪ್ರಕರಣ ಸದ್ಯ ದೆಹಲಿ ಅಂಗಳ ತಲುಪಿದ್ದು, ಪ್ರಾಸಿಕ್ಯೂಷನ್ ಪ್ರಹಸನದ ಬಗ್ಗೆ ಸಿಎಂ-ಡಿಸಿಎಂ ಜಂಟಿಯಾಗಿ ಕಾಂಗ್ರೆಸ್ ಹೈಕಮಾಂಡ್‌ಗೆ ವಿವರಣೆ ನೀಡಿದ್ದಾರೆ. ಸಂಪುಟ ಸಭೆಯ ನಿರ್ಣಯ, ಶಾಸಕಾಂಗ ಪಕ್ಷದ ಸಭೆ, ಮುಡಾ (MUDA Scam) ವಿಚಾರದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ 100 ಪುಟಗಳ ವರದಿ ಸಲ್ಲಿಸಿದ್ದಾರೆ. ಎಲ್ಲವನ್ನೂ ಕೇಳಿದ ಹೈಕಮಾಂಡ್, ಸಿಎಂ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಸಂಡೇ ಲಾಯರ್, ರಾಹುಲ್ ಗಾಂಧಿ ಮೌನ ಏಕೆ?: ಛಲವಾದಿ ನಾರಾಯಣಸ್ವಾಮಿ ಕಿಡಿ

    ಕಾನೂನು ಹೋರಾಟ ನಡೆಸಿ, ನಾವಿದ್ದೇವೆ ಎಂಬ ಸಂದೇಶವನ್ನು ಹೈಕಮಾಂಡ್ ನೀಡಿದೆ. ಅಲ್ಲದೇ, ಗ್ಯಾರಂಟಿಗಳನ್ನು ನೋಡಿ ಬಿಜೆಪಿ-ಜೆಡಿಎಸ್ ಹೆದರಿದೆ. ರಾಜ್ಯಪಾಲರನ್ನು ಬಳಸಿ ಹಿಂದುಳಿದ ನಾಯಕನ ಮೇಲೆ ದಾಳಿ ನಡೆಸುವ ಯತ್ನ ಮಾಡುತ್ತಿದೆ ಎಂದು ಹೈಕಮಾಂಡ್ ಆಪಾದಿಸಿದೆ.

    ಬಿಜೆಪಿ ಏನೇ ಆರೋಪ ಮಾಡಲಿ ತಲೆ ಕೆಡಿಸಿಕೊಳ್ಳಬೇಡಿ. ಪ್ರಕರಣ ಈಗ ಕಾನೂನು ವ್ಯಾಪ್ತಿಗೆ ಬಂದಿದೆ. ಕಾನೂನು ಹೋರಾಟದ ಮೂಲಕವೇ ಉತ್ತರ ನೀಡಿ. ಹೈಕೋರ್ಟ್ ಆಗಲಿ, ಸುಪ್ರೀಂ ಕೋರ್ಟ್ ಆಗಲಿ ಕಾನೂನು ಹೋರಾಟ ಮುಂದುವರಿಸಿ ಎಂದು ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ ಬಿಜೆಪಿ ಪರಿಷತ್ ಸದಸ್ಯ

    ವಿಪಕ್ಷಗಳ ವಿಚಾರದಲ್ಲಿ ಮತ್ತಷ್ಟು ಅಗ್ರೆಸಿವ್ ಆಗಿ. ಗ್ಯಾರಂಟಿಯನ್ನೇ ಅಸ್ತ್ರ ಮಾಡಿಕೊಳ್ಳಿ. ಗ್ಯಾರಂಟಿ ಸಹಿಸದೇ ಬಿಜೆಪಿ, ಸಿಎಂ ವಿರುದ್ಧ ಆರೋಪ ಮಾಡುತ್ತಿದೆ. ಹೆಜ್ಜೆ ಹೆಜ್ಜೆಗೂ ರಾಜ್ಯಪಾಲರ ನಡೆ ಖಂಡಿಸಿ ಬಿಜೆಪಿ ಜೆಡಿಎಸ್ ಹೋರಾಟಗಳನ್ನು ಹೊರ ತನ್ನಿ. ಮುಲಾಜಿಲ್ಲದೇ ಮಾತನಾಡಿ. ಅಗತ್ಯ ಎನಿಸಿದ ಪ್ರಕರಣದಲ್ಲಿ ತನಿಖೆಗೆ ನೀಡಿ. ಯಾವುದೇ ಕಾರಣಕ್ಕೂ ಸಿಎಂ ವಿರುದ್ಧ ಮಾತನಾಡುವಂತಿಲ್ಲ. ಸಿಎಂ ಬೆನ್ನಿಗೆ ನಿಲ್ಲಬೇಕು, ಸರ್ಕಾರ ಪಕ್ಷದಲ್ಲಿ ಗೊಂದಲ ಇಲ್ಲದೇ ಒಟ್ಟಾಗಿ ಹೋರಾಡಿ ಎಂದು ರಾಜ್ಯ ನಾಯಕರಿಗೆ ಸಲಹೆ ನೀಡಿದ್ದಾರೆ.

    ಸಿಎಂ ಮೇಲಿನ ದಾಳಿ ಹಿಂದುಳಿದ ನಾಯಕರ ವಿರುದ್ಧ ಷಡ್ಯಂತ್ರ ಎನ್ನುವಂತೆ ಬಿಂಬಿಸಿ. ರಾಷ್ಟ್ರಪತಿ ಬಳಿಗೆ ಹೋಗುವುದು ಮುಂದೆ ನಿರ್ಧರಿಸೋಣ. ರಾಷ್ಟ್ರಮಟ್ಟದಲ್ಲಿ ಇದು ಚರ್ಚೆಯಾಗಲಿದೆ. ಹೀಗಾಗಿ ಈ ಹೆಜ್ಜೆಯ ಬಗ್ಗೆ ನಾವು ಯೋಚಿಸಬೇಕಿದೆ ಎಂದು ತಿಳಿಸಿದ್ದಾರೆ.

  • ಮುಡಾ ಹಗರಣಕ್ಕೆ ಅಧಿಕಾರಿ ಕಾರಣವೇ ಹೊರತು ಪ್ರಾಧಿಕಾರ ಸಮಿತಿಯಲ್ಲ – ರಮೇಶ ಬಂಡಿಸಿದ್ದೇಗೌಡ

    ಮುಡಾ ಹಗರಣಕ್ಕೆ ಅಧಿಕಾರಿ ಕಾರಣವೇ ಹೊರತು ಪ್ರಾಧಿಕಾರ ಸಮಿತಿಯಲ್ಲ – ರಮೇಶ ಬಂಡಿಸಿದ್ದೇಗೌಡ

    ಹಾಸನ: ಅಧಿಕಾರಿಗಳು 50:50 ನಿವೇಶನ ಕೊಡುವುದನ್ನು ಯಾವುದೇ ಕಾರಣಕ್ಕೂ ಸಭೆಗೆ ಮಂಡಿಸಲ್ಲ. ಅವರಿಗೆ ಆ ಅಧಿಕಾರವಿದೆ. ಮುಡಾ ಹಗರಣಕ್ಕೆ (MUDA Scam) ಅಧಿಕಾರಿಗಳು ಕಾರಣವೇ ಹೊರತು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಮಿತಿಯಲ್ಲ ಎಂದು ಶಾಸಕ ರಮೇಶ್ ಬಂಡಿಸಿದ್ದೇಗೌಡ (Ramesha Bandisiddegowda) ಹೇಳಿದರು.

    ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ (Siddaramaiah) ಅವರು ನೇರ ಅರ್ಜಿದಾರರಲ್ಲ. ಸಿದ್ದರಾಮಯ್ಯ ಅವರ ಒಂದೇ ಒಂದು ಸಹಿ ಇಲ್ಲ. ಯಾರ ಗಮನಕ್ಕೂ ತರದೇ ಅಧಿಕಾರಿಗಳೇ ಇದನ್ನ ಮಾಡಿದ್ದಾರೆ. ಇದು ಮುಡಾ ಅಧ್ಯಕ್ಷರು ಮತ್ತು ಯಾವ ಸದಸ್ಯರ ಗಮನಕ್ಕೂ ಬರಲ್ಲ. ಅಧಿಕಾರ ದುರುಪಯೋಗಪಡಿಸಿಕೊಂಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ. ಸವಲತ್ತು ಪಡೆದಿರುವ ಎಲ್ಲರ ಹೆಸರು ಹೇಳಬೇಕು. ತನಿಖೆ ನಡೆಯುತ್ತಿದೆ ಸತ್ಯಾಂಶ ಹೊರಬರುತ್ತದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: Fashion Tips| ಹೆಣ್ಣಿಗೆ ಸೀರೆ ಯಾಕೆ ಅಂದ?- ನಾರಿಮಣಿಯರ ಗಮನ ಸೆಳೆದ ಬನಾರಸ್ ಸೀರೆ

    ನಾನು ಒಬ್ಬ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ. ನಾನು ಮೂರು ಬಾರಿ ಶಾಸಕನಾಗಿ ಮುಡಾದಲ್ಲಿ ಕೆಲಸ ಮಾಡಿದ್ದೇನೆ. ಅರ್ಜಿ ಇಲ್ಲದೇನೆ ಹೇಗೆ ಮಂಜೂರಾತಿ ಮಾಡಲು ಆಗುತ್ತೆ? ಅರ್ಜಿ ಇಲ್ಲ ಎಂದು ನಾವೇನು ಹೇಳಿಲ್ಲ. ಮಂಜೂರಾತಿ ಮಾಡಿಕೊಡಿ ಎಂದು ಅರ್ಜಿ ಕೊಟ್ಟಿದ್ದಾರೆ. ತಪ್ಪು ಬರೆದಾಗ ವೈಟ್ನರ್ ಹಾಕೋದು ಸಹಜ. ನ್ಯಾಯಾಂಗ ತನಿಖೆಗೆ ಕೊಟ್ಟಿದ್ದೇವೆ ಪರಿಶೀಲನೆ ಮಾಡಲಿ ಎಂದು ತಿಳಿಸಿದರು. ಇದನ್ನೂ ಓದಿ: ಮಂಕಿಪಾಕ್ಸ್ ಕಾಯಿಲೆ ಮುಂಜಾಗ್ರತ ಕ್ರಮವಾಗಿ ವಿಕ್ಟೋರಿಯಾದಲ್ಲಿ 50 ಬೆಡ್ ಮೀಸಲು – ಶರಣ ಪ್ರಕಾಶ್ ಪಾಟೀಲ್

    ಯಡಿಯೂರಪ್ಪ (BS Yediyurappa) ಅವರ ತಂಗಿ ಮಕ್ಕಳಿಗೆ ನಿವೇಶನಗಳನ್ನು ಕೊಟ್ಟಿಲ್ವಾ? 50:50 ಯಲ್ಲಿ ನಿವೇಶನ ತಗೊಂಡಿಲ್ವಾ? ಪ್ರಾಮಾಣಿಕರಾಗಿದ್ದರೆ ಅವರು ತಿಳಿಸಲಿ. ಜೆಡಿಎಸ್ ಶಾಸಕರು (JDS MLAs) 50:50 ಹಂಚಿಕೆ ಅಡಿಯಲ್ಲಿ ಎಷ್ಟು ನಿವೇಶನ ತೆಗೆದುಕೊಂಡಿದ್ದಾರೆ? 1800-2000 ಸೈಟ್‌ಗಳನ್ನು ವ್ಯವಸ್ಥಿತವಾಗಿ ತೆಗೆದುಕೊಂಡಿದ್ದಾರಲ್ಲಾ? ಅದು ಯಾರದ್ದು? ಇವರು, ಇವರ ತಮ್ಮನ ಮಕ್ಕಳು, ಅಕ್ಕನ ಮಕ್ಕಳು, ಚಿಕ್ಕಪ್ಪ, ದೊಡ್ಡಪ್ಪನ ಮಕ್ಕಳಿಗೆ ಕೊಟ್ಟಿಲ್ವಾ? ಎಂದು ಕಿಡಿಕಾರಿದರು.

    ಸಿಎಂ, ಡಿಸಿಎಂ ದೆಹಲಿ ಭೇಟಿಯ ವಿಚಾರ ತಿಳಿಸಿದ ಅವರು, ಎಲ್ಲಾ ಶಾಸಕರು ದೆಹಲಿಗೆ ಹೋಗಿಲ್ಲ. ಸಿಎಂ ಮತ್ತು ಡಿಸಿಎಂ ಅವರು ರಾಜ್ಯದ ಇವತ್ತಿನ ಪರಿಸ್ಥಿತಿ ಬಗ್ಗೆ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾಹಿತಿ ನೀಡಲು ದೆಹಲಿಗೆ ಹೋಗಿದ್ದಾರೆ. ಅವರನ್ನು ದೆಹಲಿಗೆ ಹೋಗುವುದಕ್ಕೆ ಎಲ್ಲಾ ಶಾಸಕರು ಒತ್ತಾಯ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಸಂಬಂಧಿಕನಿಂದಲೇ 10ರ ಬಾಲಕಿ ಮೇಲೆ ಅತ್ಯಾಚಾರ – ಅರೆಬೆತ್ತಲೆ ಸ್ಥಿತಿಯಲ್ಲಿ ಶವ ಪತ್ತೆ; ಕಾಮುಕ ಅರೆಸ್ಟ್

    ರಾಷ್ಟ್ರಪತಿ ಅವರನ್ನು ಭೇಟಿ ಮಾಡೋಣ ಎಂದಿದ್ದೇವೆ. ಬಿಜೆಪಿ-ಜೆಡಿಎಸ್ ನವರು ಗದಾಪ್ರಹಾರ ಮಾಡುತ್ತಿದ್ದಾರೆ. ಅದನ್ನು ರಾಷ್ಟ್ರಪತಿಗಳಿಗೆ ಮನದಟ್ಟು ಮಾಡಿಕೊಡೋಣ ಎಂದು ಹೇಳಿದ್ದೇವೆ. ಆದಷ್ಟು ಬೇಗ ಎಲ್ಲಾ ಶಾಸಕರು ಹೋಗಿ ರಾಷ್ಟ್ರಪತಿಗಳನ್ನು ಭೇಟಿ ಮಾಡುತ್ತೇವೆ ಎಂದು ಹೇಳಿದರು.

  • ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ – ರಾಜ್ಯಪಾಲರ ವಿರುದ್ಧ ರಾಷ್ಟ್ರಪತಿಗೆ ದೂರು

    ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ – ರಾಜ್ಯಪಾಲರ ವಿರುದ್ಧ ರಾಷ್ಟ್ರಪತಿಗೆ ದೂರು

    ನವದೆಹಲಿ: ಮೂಡಾ ಭ್ರಷ್ಟಚಾರ ಆರೋಪದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್ ವಿರುದ್ಧ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರಿಗೆ ದೂರು ನೀಡಲಾಗಿದೆ. ದೆಹಲಿಯಲ್ಲಿ ಅಹಿಂದಾ ಚಳುವಳಿ ಸಂಘಟನೆಯ ರಾಜ್ಯ ಮುಖ್ಯ ಜಂಟಿ ಸಂಚಾಲಕ ಎನ್.ವೆಂಕಟೇಶಗೌಡ (Venkatesh Gowda), ಯುವ ಘಟಕದ ರಾಜ್ಯಧ್ಯಕ್ಷ ಬಿ.ಟಿ.ಮಂಜುನಾಥ್‌ರಿಂದ ದೂರು ನೀಡಲಾಗಿದೆ.

    ಖಾಸಗಿ ದೂರಿನ ಮೇರೆಗೆ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಸರಿಯಲ್ಲ. ಬಿಜೆಪಿ-ಜೆಡಿಎಸ್ ಒತ್ತಡಕ್ಕೆ ಮಣಿದು ಅನುಮತಿ ನೀಡಿದೆ. ರಾಜ್ಯಪಾಲರ ಕಚೇರಿ ರಾಜಕೀಯವಾಗಿ ದುರ್ಬಳಕೆಯಾಗುತ್ತಿದ್ದು, ಕೂಡಲೇ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ದೂರಿನ ಪ್ರತಿಯಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: ಮೋದಿ ಉತ್ತರಾಧಿಕಾರಿ ಯಾರು? ಅಮಿತ್‌ ಶಾ, ಗಡ್ಕರಿ, ಯೋಗಿ.. ಯಾರಿಗೆ ಹೆಚ್ಚು ಜನರ ಒಲವು?

    ದೂರಿನ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅಹಿಂದಾ ಚಳುವಳಿ ಸಂಘಟನೆಯ ರಾಜ್ಯ ಮುಖ್ಯ ಜಂಟಿ ಸಂಚಾಲಕ ಎನ್.ವೆಂಕಟೇಶಗೌಡ, ಸಿಎಂ ಸಿದ್ದರಾಮಯ್ಯ ದೇಶದಲ್ಲಿ ಮಾದರಿ ಆಡಳಿತ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಓಬಿಸಿ ಜನರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಎರಡನೇ ಅವಧಿಯಲ್ಲಿ ಸಾಕಷ್ಟು ಜನಪ್ರಿಯ ಯೋಜನೆಗಳನ್ನು ಜಾರಿ ಮಾಡಿದ್ದಾರೆ.

    ಈ ಅಭಿವೃದ್ಧಿಯನ್ನು ಸಹಿಸದೇ ಬಿಜೆಪಿ ಮತ್ತು ಜೆಡಿಎಸ್ ಸಿದ್ದರಾಮಯ್ಯ ಅವರಿಂದ ಮುಖ್ಯಮಂತ್ರಿ ಸ್ಥಾನ ಕಸಿದುಕೊಳ್ಳುವ ಹುನ್ನಾರ ಮಾಡಿದ್ದು, ಈ ಮೂಲಕ ಬಡ ಸಮುದಾಯಗಳ ಶಕ್ತಿ ಕುಂದಿಸುವ ತಂತ್ರ ಮಾಡಿವೆ. ರಾಜಕೀಯ ಒತ್ತಡಕ್ಕೆ ಮಣಿದು ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಇದು ಕಾನೂನು ಬಾಹಿರ ನಡೆಯಾಗಿದ್ದು, ಕೂಡಲೇ ರಾಷ್ಟ್ರಪತಿಗಳು ರಾಜ್ಯಪಾಲರ ಕಚೇರಿ ದುರ್ಬಳಕೆ ತಡೆಯಬೇಕು ಮತ್ತು ರಾಜ್ಯಪಾಲರನ್ನು ವಾಪಸ್ ಕರೆಸುಕೊಳ್ಳಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: Kolkata Horror | 36 ಗಂಟೆಗಳ ಅಮಾನುಷ ಶಿಫ್ಟ್ ಸರಿಯಲ್ಲ ಎಂದ ಸುಪ್ರೀಂ – ಸುಳ್ಳುಪತ್ತೆ ಪರೀಕ್ಷೆಗೆ ಅಸ್ತು!

  • ನಿಮ್ಮ ಜಗಳದಿಂದ ಸರ್ಕಾರ ಅಸ್ಥಿರಗೊಂಡರೆ ಅದಕ್ಕೂ ನಮಗೆ ಸಂಬಂಧವಿಲ್ಲ: ಜೋಷಿ ಕಿಡಿ

    ನಿಮ್ಮ ಜಗಳದಿಂದ ಸರ್ಕಾರ ಅಸ್ಥಿರಗೊಂಡರೆ ಅದಕ್ಕೂ ನಮಗೆ ಸಂಬಂಧವಿಲ್ಲ: ಜೋಷಿ ಕಿಡಿ

    ಬೆಂಗಳೂರು: ನಮ್ಮಿಂದ ಸರ್ಕಾರ ಅಸ್ಥಿರವಾಗುವುದಿಲ್ಲ. ನಿಮ್ಮ ಜಗಳದಿಂದ ಅಸ್ಥಿರಗೊಂಡರೆ ಅದಕ್ಕೂ ನಮಗೆ ಸಂಬಂಧವಿಲ್ಲ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಖಾತೆಯ ಸಚಿವ ಪ್ರಹ್ಲಾದ್ ಜೋಷಿ (Pralhad Joshi) ಹೇಳಿದ್ದಾರೆ.

    ರಾಜ್ಯಪಾಲರ ಮೂಲಕ ಬಿಜೆಪಿ (BJP) ಕಾಂಗ್ರೆಸ್ ಸರ್ಕಾರ (Congress Government) ಅಸ್ಥಿರಗೊಳಿಸುವ ಆರೋಪವನ್ನು ನಿರಾಕರಿಸಿ ಪಬ್ಲಿಕ್‌ ಟಿವಿಗೆ ಅವರು ಹೇಳಿಕೆ ನೀಡಿದರು.

    ನಿಮ್ಮ ಮನೆಯನ್ನು ನೀವು ಮೊದಲು ಸರಿ ಮಾಡಿಕೊಳ್ಳಿ, ಬೇರೆಯವರ ಮೇಲೆ ಆರೋಪ ಬಿಡಿ. ಬಿಜೆಪಿ ಯಾವ ಕಾರಣಕ್ಕೂಈ ಸರ್ಕಾರ ತೆಗೆಯುವ ಉದ್ದೇಶ ಹೊಂದಿಲ್ಲ. ಸಿಎಂ ಮೇಲೆ ಆರೋಪ ಬಂದಿದೆ. ಅವರು ಶುದ್ಧರಾಗಿ ಹೊರಗೆ ಬರಲಿ. ಪಾರದರ್ಶಕ ತನಿಖೆ ನಡೆಯಲಿ ಎಂದರು. ಇದನ್ನೂ ಓದಿ: Renukaswamy Case | ಪ್ರಮುಖ ಸಾಕ್ಷಿ, ಹಾಸ್ಯ ನಟ ಚಿಕ್ಕಣ್ಣಗೆ ಮತ್ತೆ ಸಂಕಷ್ಟ!

     

    ಸಿದ್ದರಾಮಯ್ಯ ಮೇಲೆ ನಮಗೇನೂ ಕೋಪ ಇಲ್ಲ. ಬಿಜೆಪಿ ಸರ್ಕಾರ ಅಸ್ಥಿರಗೊಳ್ಳುತ್ತಿಲ್ಲ. ನಮಗೆ ವಿಪಕ್ಷ ಆಗಿ ಕೆಲಸ ಮಾಡಲು ಜನಾದೇಶ ಕೊಟ್ಟಿದ್ದಾರೆ. ಆ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಪ್ರಾಸಿಕ್ಯೂಷನ್‌ ವಾರ್‌ – ರಾಷ್ಟ್ರಮಟ್ಟದಲ್ಲಿ ಹೋರಾಟ ನಡೆಸಲು ಮುಂದಾದ ಕಾಂಗ್ರೆಸ್‌

    ಕಾಂಗ್ರೆಸ್ 58 ವರ್ಷ ಕಾಲ ದೇಶದಲ್ಲಿ ಆಡಳಿತ ಮಾಡಿದ್ದು, 92 ಬಾರಿ ಗಟ್ಟಿಮುಟ್ಟಾದ ಚುನಾಯಿತ ಸರ್ಕಾರಗಳನ್ನು ರಾಜ್ಯಪಾಲರ ಮೂಲಕ ಉರುಳಿಸಿದೆ. INDIA ಒಕ್ಕೂಟದಲ್ಲಿರುವ ಅನೇಕ ಪಕ್ಷಗಳ ಸರ್ಕಾರಗಳನ್ನು ಇವರೇ ತೆಗೆದಿದ್ದಾರೆ. ಇವರು ಈಗ ನಮಗೆ ರಾಜ್ಯಪಾಲರ ವಿಚಾರದಲ್ಲಿ ಬೋಧನೆ ಮಾಡುತ್ತಿರುವುದು ಬಹಳ ದೊಡ್ಡ ಆಶ್ಚರ್ಯ ಎಂದು ಜೋಷಿಯವರು ಠಕ್ಕರ್‌ ನೀಡಿದರು.

     

  • ಪ್ರಾಸಿಕ್ಯೂಷನ್‌ ವಾರ್‌ – ರಾಷ್ಟ್ರಮಟ್ಟದಲ್ಲಿ ಹೋರಾಟ ನಡೆಸಲು ಮುಂದಾದ ಕಾಂಗ್ರೆಸ್‌

    ಪ್ರಾಸಿಕ್ಯೂಷನ್‌ ವಾರ್‌ – ರಾಷ್ಟ್ರಮಟ್ಟದಲ್ಲಿ ಹೋರಾಟ ನಡೆಸಲು ಮುಂದಾದ ಕಾಂಗ್ರೆಸ್‌

    ಬೆಂಗಳೂರು: ಕಾಂಗ್ರೆಸ್ (Congress) ಪ್ರಾಸಿಕ್ಯೂಷನ್ ವಾರ್ ಈಗ ದೆಹಲಿ ಅಂಗಳ ತಲುಪಿದ್ದು ರಾಷ್ಟ್ರಮಟ್ಟದಲ್ಲಿ ಹೋರಾಟ ನಡೆಸಲು ಕಾಂಗ್ರೆಸ್‌ ವೇದಿಕೆ ಸಿದ್ಧಪಡಿಸುತ್ತಿದೆ.

    ಹೌದು. ಇಂದು ಹೈಕಮಾಂಡ್ ಅಂಗಳದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಪ್ರಾಸಿಕ್ಯೂಷನ್ ಅಸ್ತ್ರದ ಸಮರ್ಥನೆಗೆ ಮುಂದಾಗಲಿದ್ದಾರೆ. ಎಂತಹದೇ ಪರಿಸ್ಥಿತಿ ಬಂದರೂ ಹೈಕಮಾಂಡ್ ರಾಜೀನಾಮೆಗೆ ಸೂಚಿಸಬಾರದು ಎಂಬ ರೀತಿಯಲ್ಲಿ ಮನವರಿಕೆ ಮಾಡಿಕೊಡುವ ಲೆಕ್ಕಾಚಾರವನ್ನು ಸಿಎಂ ಹಾಕಿಕೊಂಡಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ 12,690 ಕೋಟಿ ರೂ. ವೆಚ್ಚದ ಸುರಂಗ ರಸ್ತೆ ಯೋಜನೆಗೆ ಸಂಪುಟ ಸಭೆ ಅಸ್ತು

     

    ಹೈಕಮಾಂಡ್ ಜೊತೆಗಿನ ಇಂದಿನ ಸಭೆ ಸಿದ್ದರಾಮಯ್ಯ ಪಾಲಿಗೆ ನಿರ್ಣಾಯಕವಾಗಿದೆ. ವಕೀಲರು ಎಐಸಿಸಿಯಿಂದಲೇ (AICC) ಬಂದಿರುವುದರಿಂದ ದಾಖಲೆ ಸಹಿತ ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡುವ ಲೆಕ್ಕಾಚಾರವನ್ನು ಸಿದ್ದರಾಮಯ್ಯ ಹಾಕಿಕೊಂಡಿದ್ದಾರೆ.

    ರಾಜ್ಯಪಾಲರ ವಿರುದ್ಧ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ದೂರು ನೀಡಲು ಕಾಂಗ್ರೆಸ್‌ ನಾಯಕರು ಗುರುವಾರದ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದ್ದಾರೆ. ಹೈಕಮಾಂಡ್ ಅನುಮತಿಸಿದರೆ ಸಿಎಂ, ಡಿಸಿಎಂ ಡಿಕೆ ಶಿವಕುಮಾರ್‌ ದಿನಾಂಕ ನಿಗದಿ ಮಾಡಿ ಎಲ್ಲ 135+1 ಶಾಸಕರನ್ನ ದೆಹಲಿಗೆ ಕರೆದೊಯ್ದು ರಾಷ್ಟ್ರಪತಿಗಳ ಮುಂದೆ ಪರೇಡ್ ಮಾಡಿಸುವ ಪ್ಲಾನ್‌ ಹಾಕಿಕೊಳ್ಳಲಾಗಿದೆ.

    ಶಾಸಕರ ಪರೇಡ್ ಮೂಲಕ ರಾಷ್ಟ್ರಪತಿಗಳ ಮುಂದೆ ಶಕ್ತಿ ಪ್ರದರ್ಶನ ಮಾಡಿ ನಮ್ಮದು ಬಹುಮತದ ಸರ್ಕಾರ ಎಂಬ ಸಂದೇಶ ರವಾನೆಗೆ ಕಸರತ್ತು ಮಾಡಲು ಸಿಎಂ ಮುಂದಾಗಿದ್ದಾರೆ.