ನವದೆಹಲಿ: ರಾಜಕೀಯವಾಗಿ ಚರ್ಚೆ ನಡೆದಿದೆ. ಈ ಸರ್ಕಾರದಲ್ಲಿ ಸುಳ್ಳು ಹೇಳಿಕೆ, ಸುಳ್ಳು ಪ್ರಚಾರ ನಡೆಯುತ್ತಿದೆ ಎಂದು ಪ್ರಧಾನಿ ಮೋದಿ (PM Narendra Modi) ಹೇಳಿಕೆಗೆ ಸಿಎಂ ಟ್ವೀಟ್ ವಿಚಾರವಾಗಿ ಕೇಂದ್ರ ಉಕ್ಕು ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumarswamy) ಪ್ರತಿಕ್ರಿಯಿಸಿದ್ದಾರೆ.
ರಾಷ್ಟç ರಾಜಧಾನಿಯಲ್ಲಿ ಮಾತನಾಡಿದ ಅವರು, ಹರಿಯಾಣದಲ್ಲಿ ಮುಡಾ ಪ್ರಕರಣ (MUDA Scam) ಸಂಬಂಧ ಮೋದಿ ಹೇಳಿಕೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ (CM Siddaramaiah) ಟ್ವೀಟ್ ವಿಚಾರವಾಗಿ ಮಾತನಾಡಿದರು. ರಾಜಕೀಯವಾಗಿ ಕೆಲವು ಚರ್ಚೆ ನಡೆದಿರುತ್ತವೆ ಅದಕ್ಕೆ ಮಹತ್ವ ಕೊಡುವಂತಹ ಅಗತ್ಯವಿಲ್ಲ. ಕಾಂಗ್ರೆಸ್ (Congress) ಸರ್ಕಾರದವರು ಬಿಜೆಪಿ (BJP) ಸರ್ಕಾರದ ವಿರುದ್ಧ 40% ಆರೋಪ ಮಾಡಿದ್ದರು ಎಂದರು.ಇದನ್ನೂ ಓದಿ: ಮಹಿಳೆಯ ಭಯಾನಕ ಹತ್ಯೆ ಕೇಸ್ | ಮಹಾಲಕ್ಷ್ಮಿ ಮಗನನ್ನು ಟ್ರ್ಯಾಪ್ ಮಾಡಿದ್ದಳು: ಆರೋಪಿಯ ತಾಯಿ
ಗಂಗೇನಹಳ್ಳಿ ಡಿನೊಟಿಫಿಕೇಷನ್ ವಿಚಾರವಾಗಿ ನನಗೆ ಯಾವುದೇ ನೋಟಿಸ್ ಕೊಟ್ಟಿರಲಿಲ್ಲ. ನನ್ನನ್ನು ಯಾರು ಸಂಪರ್ಕ ಮಾಡಿರಲಿಲ್ಲ. ನಾನು ಕದ್ದು ಹೋಗಲ್ಲ. ಈ ಕ್ಷಣದವರೆಗೆ ನನ್ನ ಜೊತೆ ಯಾರೂ ಮಾತನಾಡಿಲ್ಲ. ಈ ಸರ್ಕಾರದಲ್ಲಿ ಸುಳ್ಳು ಹೇಳಿಕೆ, ಸುಳ್ಳು ಪ್ರಚಾರ ನಡೆಯುತ್ತಿದೆ ಎಂದು ಆಗ್ರಹಿಸಿದರು.
ರಾಜಕೀಯವಾಗಿ ಕೆಲವು ಭಿನ್ನಾಭಿಪ್ರಾಯ ಇರುವುದು ಬೇರೆ ಆದರೆ ಅದನ್ನೆಲ್ಲಾ ಗಂಭೀರವಾಗಿ ತೆಗೆದುಕೊಳ್ಳಲು ಆಗುತ್ತಾ? ಅದಕ್ಕೆ ಏನಾದರೂ ದಾಖಲೆ ಇದಿಯಾ? ಕೆಲವರು ಸಂತೆ ಭಾಷಣ ಮಾಡುತ್ತಾರೆ. ಅದಕ್ಕೆ ಮಹತ್ವ ಕೊಡೋಕೆ ಆಗುತ್ತಾ? ಸಾಕ್ಷಿಗಳ ಆಧಾರದ ಮೇಲೆ ಮಾತನಾಡಿದರೆ ಉತ್ತರ ಕೊಡಬಹುದು. ರಾಜಕೀಯ ದ್ವೇಷಕ್ಕೆ ಮಾತನಾಡುತ್ತಾರೆ. ಹಿಂದೆ ಬಿಜೆಪಿ 40% ಆರೋಪ ಮಾಡಿದ್ದರು.ಈಗ 40% ಮೀರಿ ಹೋಗಿದೆ ಎಂದು ತುಮಕೂರು ಮೂಲದ ಗುತ್ತಿಗೆದಾರರು ಹೇಳಿದ್ದಾರೆ. ಇದಕ್ಕೆಲ್ಲಾ ಸಿಎಂ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.ಇದನ್ನೂ ಓದಿ: ಕ್ಯಾಲಿಫೋರ್ನಿಯಾದಲ್ಲಿ ಟ್ರೆಕ್ಕಿಂಗ್ ಮಾಡಿದ ಸಪ್ತಮಿ ಗೌಡ
ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ಬಹಳ ಕ್ಲೀನ್ ನಾಯಕ ಅಂದುಕೊಂಡಿದ್ದೆ. 40 ವರ್ಷಗಳ ರಾಜಕಾರಣದಲ್ಲಿ ಒಂದೇ ಒಂದು ಕಪ್ಪು ಚುಕ್ಕಿ ಇರಲಿಲ್ಲ. ಈಗ ಇಡೀ ಬಟ್ಟೆ ಕಪ್ಪು ಇಂಕ್‍ನಲ್ಲಿ ತುಂಬಿ ಹೋಗಿದೆ. ದೊಡ್ಡ ಮನಸು ಮಾಡಿ ರಾಜಾರೋಷವಾಗಿ ರಾಜೀನಾಮೆ ಕೊಡಿ ಎಂದು ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ (Jaggesh) ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ಸಿದ್ದರಾಮಯ್ಯ ಮಾಡಿದ್ದು ತಪ್ಪು ಎಂದು ನ್ಯಾಯಾಲಯ ಕೂಡ ಹೇಳಿದೆ. ಆದರೂ ಸಿದ್ದರಾಮಯ್ಯ ಸಮರ್ಥಿಸಿಕೊಳ್ಳುತ್ತಿರುವುದು ಸರಿಯಲ್ಲ. ಮುಡಾ ಹಗರಣ ಮೂಲಕ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕಕ್ಕೆ ಸಿದ್ದರಾಮಯ್ಯ ಘನವಾದ ಹೆಸರು ತಂದುಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು: ಕಾಂಗ್ರೆಸ್ ನಾಯಕ ಕೆ.ಬಿ.ಕೋಳಿವಾಡ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ತಾವು ಹಿಡಿದಿದ್ದ ಸಂವಿಧಾನಕ್ಕೆ ಎಷ್ಟು ಪುಟ ಇದೆ ಎಂದು ಹೇಳಲು ಆಗಲಿಲ್ಲ. ಅಂತಹವರನ್ನು ಪ್ರಧಾನಿ ಮಾಡಲು ಹೊರಟಿದ್ದಾರೆ. ಅಂತಹ ನಾಯಕನ ಕೆಳಗೆ ಇರುವ ಸಿದ್ದರಾಮಯ್ಯ ಘನವಾದ ಕೆಲಸ ಮಾಡಿದ್ದಾರೆ. ರಾಜ್ಯದ ಮಾನ ಮರ್ಯಾದೆ ಈಗಾಗಲೆ ಹರಾಜಾಗಿದೆ. ರಾಜೀನಾಮೆ ಕೊಡಿ, ನಿರ್ದೋಷಿಯಾಗಿ ಹೊರಗೆ ಬನ್ನಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ನಾಯಕನ ಪತ್ನಿ ವಿರುದ್ಧ ಮಾನಹಾನಿ ಹೇಳಿಕೆ – ಸಂಜಯ್ ರಾವತ್‍ಗೆ 15 ದಿನಗಳ ಜೈಲು!
– ಮುಡಾ ಕೇಸ್ ಸಿಬಿಐ ತನಿಖೆ ಆದೇಶಿಸಿ ಎಂದು ಹೈಕೋರ್ಟ್‌ಗೆ ಅರ್ಜಿ ಹಾಕ್ತೇವೆ
ಮೈಸೂರು: ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಇಂದೇ ಎಫ್‌ಐಆರ್ ದಾಖಲಾಗಬೇಕು. ವೆಬ್‌ಸೈಟ್‌ನಲ್ಲಿನ ಆದೇಶ ಪ್ರತಿಯಿಂದಲೇ ಎಫ್‌ಐಆರ್ ಮಾಡಿಕೊಳ್ಳಬಹುದು. ಇವತ್ತೇ ಎಫ್‌ಐಆರ್ ದಾಖಲಾಗುತ್ತದೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ (Snehamayi Krishna) ಮೈಸೂರಿನಲ್ಲಿ (Mysuru) ಹೇಳಿದ್ದಾರೆ.
ಈ ಬಗ್ಗೆ ‘ಪಬ್ಲಿಕ್ ಟಿವಿ’ಗೆ ಮಾಹಿತಿ ನೀಡಿದ ಅವರು, ನಮಗೆ ಲೋಕಾಯುಕ್ತ ತನಿಖೆ ಮೇಲೆ ನಂಬಿಕೆ ಇಲ್ಲ. ಹೀಗಾಗಿ ತನಿಖೆ ಜವಾಬ್ದಾರಿಯನ್ನು ಸಿಬಿಐಗೆ (CBI) ಕೊಡಿ ಎಂದು ಹೈಕೋರ್ಟ್‌ಗೆ ಇವತ್ತು ಅಥವಾ ನಾಳೆ ಅರ್ಜಿ ಸಲ್ಲಿಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಮುಂಬೈನಲ್ಲಿ ಭಾರೀ ಮಳೆಗೆ ನಾಲ್ವರು ಸಾವು; ಶಾಲಾ-ಕಾಲೇಜುಗಳಿಗೆ ರಜೆ
ಸಿಎಂ ಮೇಲಿನ ಮುಡಾ ಕೇಸ್‌ನಲ್ಲಿ (MUDA Scam) ಲೋಕಾಯುಕ್ತದಿಂದ ನಿಷ್ಪಕ್ಷಪಾತ ತನಿಖೆ ಅಸಾಧ್ಯ. ಹೀಗಾಗಿ, ವಿಚಾರಣೆ ಸಿಬಿಐಗೆ ಕೊಡಿ ಎಂದು ಹೈಕೋರ್ಟ್‌ಗೆ ಅರ್ಜಿ ಹಾಕುವುದಾಗಿ ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ತೀರ್ಪು ಹೊರಬೀಳುತ್ತಿದ್ದಂತೆ ಬಿಜೆಪಿ-ಜೆಡಿಎಸ್ ನಾಯಕರು, ಸಿಎಂ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮುಡಾ ಹಗರಣ ಸಂಕಷ್ಟ; ಹೈಕಮಾಂಡ್‌ಗೆ ವರದಿ ನೀಡಿದ ಸಿಎಂ ಸಿದ್ದರಾಮಯ್ಯ
– ನೇರಾ ನೇರಾ ಚರ್ಚೆಗೆ ಬರುವಂತೆ ಮೋದಿಗೆ ಸವಾಲು – ರಾಜ್ಯಪಾಲರ ಮೇಲೆ ಒತ್ತಡ ಹೇರುತ್ತಿರುವವರು ಯಾರು?
ಬೆಂಗಳೂರು: ಭ್ರಷ್ಟಾಚಾರದ (Corruption) ಆರೋಪದ ಕಳಂಕ ಮೆತ್ತಿಕೊಂಡಿಲ್ಲದ ಒಬ್ಬನೇ ಒಬ್ಬ ನಾಯಕನನ್ನು ಕರ್ನಾಟಕದ ಬಿಜೆಪಿಯಲ್ಲಿ (BJP) ನೀವು ತೋರಿಸಿದರೆ ನಿಮ್ಮನ್ನು ಕರ್ನಾಟಕಕ್ಕೆ ಗೌರವದಿಂದ ಕರೆಸಿ ಸಾರ್ವಜನಿಕವಾಗಿ ಸನ್ಮಾನ ಕಾರ್ಯಕ್ರಮ ಏರ್ಪಡಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ತಿರುಗೇಟು ನೀಡಿದ್ದಾರೆ.
ಮುಡಾ ಪ್ರಕರಣಕ್ಕೆ (MUDA Case) ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಬೇಕೆಂದು ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ಪ್ರಕಟಿಸಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ದೂರದ ಊರಲ್ಲಿ ಕೂತು ಗಾಳಿಯಲ್ಲಿ ಗುಂಡು ಹೊಡೆಯಬೇಡಿ, ನೇರಾನೇರ ಚರ್ಚೆಗೆ ಬನ್ನಿ ಎಂದು ಸವಾಲು ಎಸೆದಿದ್ದಾರೆ.
ಸಿಎಂ ಹೇಳಿಕೆಯಲ್ಲಿ ಏನಿದೆ?
ಕರ್ನಾಟಕ (Karnataka) ರಾಜ್ಯದ ಮುಖ್ಯಮಂತ್ರಿ ಹುದ್ದೆಯನ್ನು ಎರಡುವರೆ ಸಾವಿರ ಕೋಟಿ ರೂಪಾಯಿಗಳಿಗೆ ಹರಾಜು ಹಾಕಿ ಹಣ ಪೀಕಿದ್ದಾರೆ ಎಂಬ ಆರೋಪವನ್ನು ಸ್ವಪಕ್ಷದ ನಾಯಕರಿಂದಲೇ ಎದುರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ? ಇದನ್ನೂ ಓದಿ: ಯುಪಿ ಬಳಿಕ ಹಿಮಾಚಲದಲ್ಲೂ ಆಹಾರ ಮಳಿಗೆಗಳ ಮಾಲೀಕರ ಹೆಸರು ಪ್ರದರ್ಶನ ಕಡ್ಡಾಯ!
ತಮ್ಮ ಪಕ್ಷದ ಮುಖ್ಯಮಂತ್ರಿ ಹುದ್ದೆಯನ್ನು ಮಾರಾಟ ಮಾಡಲಾಗಿದೆ ಎಂದು ರಾಜ್ಯದ ಬಿಜೆಪಿ ಶಾಸಕರೊಬ್ಬರು ಬಹಿರಂಗವಾಗಿ ಆರೋಪಿಸಿದ್ದರೂ ಅವರ ಮೇಲೆ ಕ್ರಮ ಇಲ್ಲ. ದಿನ ಬೆಳಗಾದರೆ ಭ್ರಷ್ಟಾಚಾರದ ಆರೋಪದ ಕೆಸರೆರಚಾಟದಲ್ಲಿ ತೊಡಗಿರುವ ಬಿಜೆಪಿ ಶಾಸಕರ ವಿರುದ್ಧವೂ ಯಾವ ಕ್ರಮವೂ ಇಲ್ಲ. ನರೇಂದ್ರ ಮೋದಿ ಅವರೇ ಈ ಮೌನಕ್ಕೆ, ಈ ನಿಷ್ಕ್ರೀಯತೆಗೆ ಏನು ಕಾರಣ? ಈ ಭ್ರಷ್ಟಾಚಾರದಲ್ಲಿ ನೀವೂ ಭಾಗಿದಾರರೆಂದು ತಿಳಿದುಕೊಳ‍್ಳಬಹುದೇ?
ನಮ್ಮ ಸರ್ಕಾರದ ವಿರುದ್ದ ಭ್ರಷ್ಟಾಚಾರದ ಆರೋಪ ಹೊರಿಸಿ ಭಾಷಣ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರೇ, ಭ್ರಷ್ಟಾಚಾರದ ಆರೋಪದ ಕಳಂಕ ಮೆತ್ತಿಕೊಂಡಿಲ್ಲದ ಒಬ್ಬನೇ ಒಬ್ಬ ನಾಯಕನನ್ನು ಕರ್ನಾಟಕದ ಬಿಜೆಪಿಯಲ್ಲಿ ನೀವು ತೋರಿಸಿದರೆ ನಿಮ್ಮನ್ನು ಕರ್ನಾಟಕಕ್ಕೆ ಗೌರವದಿಂದ ಕರೆಸಿ ಸಾರ್ವಜನಿಕವಾಗಿ ಸನ್ಮಾನ ಕಾರ್ಯಕ್ರಮ ಏರ್ಪಡಿಸುತ್ತೇವೆ.
ಗಣಿಗಾರಿಕೆಗೆ ಕಾನೂನುಬಾಹಿರವಾಗಿ ಭೂಮಿ ಮಂಜೂರು ಮಾಡಿರುವ, ನೂರಾರು ಕೋಟಿ ರೂಪಾಯಿ ಹಗರಣದ ಆರೋಪ ಎದುರಿಸುತ್ತಿರುವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಕೇಂದ್ರ ಸಂಪುಟಕ್ಕೆ ಸೇರಿಸಿಕೊಂಡಿರುವ ನಿಮಗೆ ಇತರರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವಾಗ ಆತ್ಮಸಾಕ್ಷಿಯೂ ಚುಚ್ಚುವುದಿಲ್ಲವೇ? ಈ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲು ಕರ್ನಾಟಕದ ಲೋಕಾಯುಕ್ತರು ಕೋರಿರುವ ಅನುಮತಿ ಬಗ್ಗೆ ಘನತೆವೆತ್ತ ರಾಜ್ಯಪಾಲರು ಕಣ್ಣುಮುಚ್ಚಿಕೊಂಡಿರುವುದೇಕೇ? ಅವರ ಮೇಲೆ ಒತ್ತಡ ಹೇರುತ್ತಿರುವರು ಯಾರು?
ಪ್ರಧಾನಿ ನರೇಂದ್ರ ಮೋದಿ ಅವರೇ, ಕಳೆದ ಹನ್ನೊಂದು ವರ್ಷಗಳಲ್ಲಿ ನಿರಂತರವಾಗಿ ನಿಮ್ಮ ಕಾರ್ಯಾಲಯದ ವಾಷಿಂಗ್ ಮೆಷಿನ್ ಕೆಲಸ ಮಾಡುತ್ತಿರುವುದನ್ನು ದೇಶ ಗಮನಿಸುತ್ತಿದೆ. ನಿಮ್ಮಿಂದಲೇ ಭ್ರಷ್ಟಾಚಾರದ ಆರೋಪಕ್ಕೊಳಗಾಗಿರುವ ವಿರೋಧ ಪಕ್ಷಗಳ ನಾಯಕರನ್ನೆಲ್ಲಾ ವಾಷಿಂಗ್ ಮೆಷಿನ್‌ನಲ್ಲಿ ಹಾಕಿ ಪರಮ ಪ್ರಾಮಾಣಿಕರನ್ನಾಗಿ ಮಾಡುತ್ತಿರುವ ನಿಮ್ಮ ಚಾಕಚಕ್ಯತೆಗೆ ಶಹಭಾಸ್ ಅನ್ನಲೇ ಬೇಕು. ಅಧಿಕೃತ ಮಾಹಿತಿಯ ಪ್ರಕಾರವೇ 2014 ರಿಂದ ಇಲ್ಲಿಯ ವರೆಗೆ ಭ್ರಷ್ಟಾಚಾರದ ಆರೋಪ ಹೊತ್ತಿರುವ 25 ವಿರೋಧ ಪಕ್ಷದ ನಾಯಕರು ಬಿಜೆಪಿ ಸೇರಿದ್ದಾರೆ. ಇವರಲ್ಲಿ 23 ನಾಯಕರನ್ನು ಭ್ರಷ್ಟಾಚಾರದ ಆರೋಪಗಳಿಂದ ಕೇಂದ್ರ ತನಿಖಾ ಸಂಸ್ಥೆಗಳು ಮುಕ್ತಗೊಳಿಸಿವೆ. ಇದನ್ನೂ ಓದಿ: ಸೆ.27ರಂದು ತುಮಕೂರು- ಯಶವಂತಪುರ ಮೆಮು ರೈಲಿಗೆ ಚಾಲನೆ
ಹಿಮಂತಾ ಶರ್ಮಾ, ಸುವೇಂದು ಅಧಿಕಾರಿ, ಹೆಚ್.ಡಿ.ಕುಮಾರಸ್ವಾಮಿ, ಅಜಿತ್ ಪವಾರ್, ಅಶೋಕ್ ಚವ್ಹಾಣ್, ನಾರಾಯಣ ರಾಣೆ, ಪ್ರತಾಪ್ ಸರ್‌ನಾಯಕ್ ಅವರಿಂದ ಹಿಡಿದು ಇತ್ತೀಚಿನ ಏಡ್ಸ್ ಟ್ರ್ಯಾಪ್ ಗಿರಾಕಿ ಮುನಿರತ್ನ ವರೆಗೆ ಎಷ್ಟೊಂದು ಭ್ರಷ್ಟರನ್ನು ವಾಷಿಂಗ್ ಮೆಷಿನ್ ನಲ್ಲಿ ತೊಳೆದು ನೀವು ಕ್ಲೀನ್ ಮಾಡಿಲ್ಲ? ಇವೆಲ್ಲ ಕೇವಲ ಧರ್ಮಾರ್ಥ ಸೇವೆಯೇ ಪ್ರಧಾನಿಗಳೇ?
ಪ್ರಧಾನಿ ನರೇಂದ್ರ ಮೋದಿ ಅವರೇ ನಿಮ್ಮ ಪಕ್ಷದ ಖಜಾನೆಗೆ ಸಂದಾಯವಾಗಿರುವ ಚುನಾವಣಾ ಬಾಂಡ್‌ಗಳ ಹಿಂದಿನ ಕೊಡುಗೈ ದಾನಿಗಳು ಯಾರು? ಅವರು ಕೊಟ್ಟದ್ದೆಷ್ಟು? ಅದಕ್ಕಾಗಿ ಅವರು ಪಡೆದದ್ದು ಎಷ್ಟು? ಎನ್ನುವುದು ಇಂದು ದೇಶದ ಜನರ ಕಣ್ಣ ಮುಂದಿದೆ. ನಿಮ್ಮ ಹನ್ನೊಂದು ವರ್ಷಗಳ ಅವಧಿಯಲ್ಲಿ ಬ್ಯಾಂಕ್ ಲೂಟಿಗೈದವರು ದೇಶ ಬಿಟ್ಟು ಓಡಿಹೋಗಲು ದಾರಿ ಮಾಡಿಕೊಟ್ಟವರು ಯಾರು? ಅದಾನಿ-ಅಂಬಾನಿ ಅವರ ಸಂಪತ್ತು ಎಷ್ಟು ಪಟ್ಟು ಹೆಚ್ಚಾಯಿತು? ಬಡವರ ಗಳಿಕೆ ಎಷ್ಟು ಪಟ್ಟು ಕಡಿಮೆಯಾಯಿತು?
ನೀವು ಭ್ರಷ್ಟಾಚಾರದ ಬಗ್ಗೆ ಚರ್ಚೆ ಪ್ರಾರಂಭಿಸಿರುವುದನ್ನು ನೋಡಿ ಸಂತೋಷವಾಯಿತು. ನನ್ನ ವಿರುದ್ಧ ಭ‍್ರಷ್ಟಾಚಾರದ ಸುಳ್ಳು ಆರೋಪಗಳನ್ನು ಮಾಡಿ ಕುಣಿದಾಡುತ್ತಿರುವ ಪಾತ್ರಧಾರಿಗಳನ್ನಷ್ಟೇ ರಾಜ್ಯದ ಜನ ನೋಡಿದ್ದಾರೆ. ಈಗ ಇದರ ಹಿಂದಿರುವ ಸೂತ್ರಧಾರಿ ಯಾರು ಎನ್ನುವುದು ಕೂಡಾ ಜನರಿಗೆ ಗೊತ್ತಾಗಲಿ.
ಮೋದಿಯವರೇ, ದೂರದ ಊರಲ್ಲಿ ಕೂತು ಗಾಳಿಯಲ್ಲಿ ಗುಂಡು ಹೊಡೆಯಬೇಡಿ, ನೇರಾನೇರ ಚರ್ಚೆ ಮಾಡಲು ನೀವು ಸಿದ್ಧ ಇದ್ದರೆ ನಾನು ಸದಾ ಸಿದ್ಧ.
– ಕರ್ನಾಟಕದಲ್ಲಿರೋದು ದರೋಡೆಕೋರರ ಸರ್ಕಾರ ಎಂದ ಕೇಂದ್ರ ಸಚಿವ
– ರಾಷ್ಟ್ರ ರಾಜಧಾನಿಯಲ್ಲೂ ಮುಡಾ ಹಗರಣ ಸದ್ದು
ನವದೆಹಲಿ: ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಾಗ ಪ್ರತಿಭಟನೆ ಮಾಡಿದ್ರಿ, ಪ್ರತಿಕೃತಿಗೆ ಚಪ್ಪಲಿ ಹಾರಹಾಕಿ ದಹನ ಮಾಡಿದ್ರಿ. ಈಗ ಹೈಕೋರ್ಟ್ ಆದೇಶ ಆಗಿದೆಯಲ್ಲ, ಈಗ ಚಪ್ಪಲಿ ಹಾರ ಯಾರಿಗೆ ಹಾಕಬೇಕು? ಸಿದ್ದರಾಮಯ್ಯ (Siddaramaiah) ಅವರಿಗೆ ಹಾಕಬೇಕಾ? ಇನ್ಯಾರಿಗೆ ಹಾಕ್ತಿರಿ? ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy), ಕಾಂಗ್ರೆಸ್ ನಾಯಕರ ವಿರುದ್ಧ ಲೇವಡಿ ಮಾಡಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್‌ಡಿಕೆ, ಸಿದ್ದರಾಮಯ್ಯ ಅವರಿಗೆ ವಕೀಲರಾಗಿರುವ ಅನುಭವ ಇದೆ. ನೈತಿಕತೆ ಉಳಿಸಿಕೊಂಡು ಬಂದವರಲ್ಲವೇ? ಲೋಕಾಯಕ್ತ ತನಿಖೆಗೆ ಆದೇಶ ಮಾಡಿದಾಗ ಅಧಿಕಾರದಲ್ಲಿ ಉಳಿಬೇಕಾ ಅಂತ ಅವರೇ ಹೇಳಬೇಕು. ಹೈಕೋರ್ಟ್ (Karnataka Highcourt) ಆದೇಶ ನೀಡಿದೆಯಲ್ಲ, ಈಗ ಚಪ್ಪಲಿ ಹಾರ ಯಾರಿಗೆ ಹಾಕಬೇಕು? ಸಿದ್ದರಾಮಯ್ಯ ಅವರಿಗೆ ಹಾಕಬೇಕಾ? ಇನ್ಯಾರಿಗೆ ಹಾಕ್ತಿರಿ? ಎಂದು ಲೇವಡಿ ಮಾಡಿದ್ದಾರೆ.
ಮೂಡಾ ಹಗರಣ (MUDA Scam) ದೇಶದ್ಯಾಂತ ಪ್ರಾಮುಖ್ಯತೆ ಪಡೆದಿದೆ. ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ನಿನ್ನೆ ಹೈಕೋರ್ಟ್ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ. ಪ್ರಕರಣ ವರದಿಯನ್ನು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ಕಾನೂನು ತಜ್ಞರು ಅನುಭವದ ಆಧಾರದ ಮೇಲೆ ವಿಶ್ಲೇಷಣೆ ಮಾಡ್ತಿದ್ದಾರೆ. ಆದೇಶದ ಪ್ರತಿ ಎಲ್ಲರಿಗೂ ಸಿಕ್ಕಿದೆ. ಆದರೆ ಸಿಎಂಗೆ ಮಾತ್ರ ತೀರ್ಪಿನ ಪ್ರತಿ ಸಿಕ್ಕಿಲ್ಲ, ಓದಿಲ್ಲ ಅಂತಿದ್ದಾರೆ. ಅಲ್ಲದೇ ಕುಮಾರಸ್ವಾಮಿ ರಾಜೀನಾಮೆಯನ್ನೂ ಸಿಎಂ ಕೇಳಿದ್ದಾರೆ. ಅವರೂ ಜಾಮೀನಿನ ಮೇಲೆ ಇಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.
ನನ್ನ ಪ್ರಕರಣಕ್ಕೂ, ಸಿದ್ದರಾಮಯ್ಯ ಪ್ರಕರಣಕ್ಕೂ ಬಹಳ ವ್ಯತಾಸ ಇದೆ. ಬಿಜೆಪಿ-ಜೆಡಿಎಸ್ ಸೇರಿ ಸರ್ಕಾರವನ್ನು ಅಸ್ಥಿರ ಮಾಡಲು, ನನ್ನ ವರ್ಚಸ್ಸಿಗೆ ಕಪ್ಪು ಮಸಿ ಬಳೆಯಲು ಷಡ್ಯಂತ್ರ ಮಾಡ್ತಿದ್ದಾರೆ ಎಂದು ಹೇಳ್ತಿದ್ದಾರೆ. ನಾನು ಆರೋಪದಿಂದ ಮುಕ್ತನಾಗಿ ಮಾತನಾಡುತ್ತೇನೆ ಎಂದಿದ್ದೆ. ಆದ್ರೆ ಇವತ್ತು ನಿಮ್ಮ ಭಂಡತನ ಏನೂ ಅನ್ನೋದು ತೋರಿಸುತ್ತಿದ್ದೀರಿ ಎಂದು ಲೇವಡಿ ಮಾಡಿದ್ದಾರೆ.
ನನ್ನ ಮೇಲೆ 2 ಕೇಸ್ ಇದೆ:
ಕುಮಾರಸ್ವಾಮಿ ಸರ್ಕಾರಿ ಭೂಮಿ ಹೊಡೆದಿದ್ದೀರಿ ಎಂದು ಎಂದು ಆರೋಪ ಮಾಡ್ತಾರೆ. ಹೀಗಾಗೀ ನನ್ನ ಮೇಲಿನ ಕೇಸ್ ಬಗ್ಗೆ ಹೇಳ್ತಿನಿ. ನನ್ನ ಮೇಲೆ ಎರಡು ಪ್ರಕರಣ ಇದೆ. ಸಾಯಿ ವೆಂಕಟೇಶ್ವರ ಮಿನರಲ್ಸ್ ಪ್ರಕರಣ ಇದೆ ಮತ್ತೊಂದು ಕಾನೂನು ಬಾಹಿರವಾಗಿ ಭೂಮಿ ಹಂಚಿಕೆ ಮಾಡಿದ್ದೆ ಎಂದು ಆರೋಪಿಸಿದ್ದಾರೆ. ಆದರೆ ನಾನು ಅರ್ಜಿ ಹಾಕಿದವರಿಗೆ ಭೂಮಿ ನೀಡಿದ್ದೆ. ಮುಖ್ಯವಾಗಿ ಇನ್ನೂ ಭೂಮಿ ಹಂಚಿಕೆ ಆಗಿಲ್ಲ. ಅಧಿಕಾರಿಗಳು ಮಾಡಿರುವ ತಪ್ಪಿಗೆ ಕುಮಾರಸ್ವಾಮಿ ಮೇಲೆ ಅರ್ಜಿ ಹಾಕಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಹಾಕಿದ್ದ ಕೇಸ್ ಮೇಲೆ ಅರ್ಜಿ ಹಾಕಿಸಿದ್ರು:
ಸಿದ್ದರಾಮಯ್ಯ ಹುಟ್ಟು ಹೋರಾಟಗಾರರಂತೆ. ಅವರು ಯಾವ ಹೋರಾಟ ಮಾಡಿದ್ದಾರೆ ಇವರು. ಬಳ್ಳಾರಿ ಪಾದಯಾತ್ರೆ ಬಿಟ್ಟು ಇನ್ನೇನು ಹೋರಾಟ ಮಾಡಿದ್ದಾರೆ? ವಿರೋಧ ಪಕ್ಷದ ನಾಯಕರಾಗಿ ಅವರು ಯಾವ ಹೋರಾಟ ಮಾಡಿದ್ದಾರೆ? ನಾನು ಬಿಜೆಪಿ ವಿರುದ್ಧ ಹೋರಾಟ ಮಾಡಿದ್ದಕ್ಕೆ ಅವರು ಹಾಕಿಸಿದ್ದ ಕೇಸ್ ಇದು. ಸಿದ್ದರಾಮಯ್ಯ ಬಂದ ಮೇಲೆ ನನ್ನ ಮೇಲಿನ ದ್ವೇಷಕ್ಕೆ ಕೇಸ್ ದಾಖಲಿಸಿದರು. ಬಿಜೆಪಿ ಹಾಕಿದ್ದ ಕೇಸ್ ಮೇಲೆ ಸುಪ್ರೀಂ ಕೋರ್ಟ್‌ನಲ್ಲಿ ಸಿದ್ದರಾಮಯ್ಯ ಅರ್ಜಿ ಹಾಕಿಸಿದರು. ಅದನ್ನು ಇಟ್ಟುಕೊಂಡು ಈಗ ರಾಜೀನಾಮೆ ಕೇಳ್ತಿದ್ದಾರೆ. ನಾನೇನು ಸರ್ಕಾರದ ಆಸ್ತಿ ಹೊಡೆದಿದ್ದಿನಾ? ಈಗ ಗಂಗೇನಹಳ್ಳಿ ಪ್ರಕರಣದ ಬಗ್ಗೆ ಮಾತನಾಡುತ್ತಿದ್ದಾರೆ. ಇದರಲ್ಲಿ ಯಡಿಯೂರಪ್ಪ ಮತ್ತು ನನ್ನನ್ನು ಸೇರಿಸಿದ್ದಾರೆ. ಇದರಲ್ಲಿ ಕುಮಾರಸ್ವಾಮಿ ಪಾತ್ರ ಏನು? ಗಂಗೇನಹಳ್ಳಿ ಡಿ ನೋಟಿಫಿಕೇಷನ್‌ನಲ್ಲಿ ರಾಜೀನಾಮೆ ಕೇಳ್ತಿದ್ದಾರೆ. ಪ್ರಕರಣ ದಾಖಲಾದಾಗ ಲೋಕಾಯುಕ್ತ ಏನ್ ಮಾಡ್ತಿತ್ತು? ಆ ನಂತರ ನಿಮ್ಮ ಕೇಸ್‌ಗಳನ್ನ ಮುಚ್ಚಿಕೊಳ್ಳಲು ಎಸಿಬಿಗಳನ್ನ ಶುರು ಮಾಡಿದ್ರಿ ಎಂದು ತಿರುಗೇಟು ನೀಡಿದ್ದಾರೆ.
ಗಂಗೇನಹಳ್ಳಿ ಡಿನೋಟಿಕೇಷನ್ ಮಾಡಿಲ್ಲ. ಸತ್ತವರ ಹೆಸರಿನಲ್ಲಿ ಡಿನೋಟಿಫಿಕೇಷನ್ ಮಾಡಿದ್ದೆ ಎಂದು ಕೃಷ್ಣಭೈರೇಗೌಡ ಆರೋಪ ಮಾಡ್ತಾರೆ. ಇದೇಲ್ಲ ಗೊತ್ತಿದ್ದು ನನ್ನ ಮಂತ್ರಿ ಮಂಡಲದಲ್ಲಿ ಯಾಕೆ ಸಚಿವರಾಗಿದ್ದರು? ಈಗ ಜನಪ್ರತಿನಿಧಿಗಳ ನ್ಯಾಯಲಯ ಏನ್ ಹೇಳಿದೆ? 90 ದಿನಗಳಲ್ಲಿ ತನಿಖಾ ವರದಿ ನೀಡಲು ಹೇಳಿದೆ. ನಿನ್ನೆ ಹೈಕೋರ್ಟ್ ತೀರ್ಪಿನಲ್ಲಿ ಟ್ರಯಲ್ ಮುಗಿದು ಚಾರ್ಜ್ ಶೀಟ್ ಫೈಲ್ ಆಗಿದೆ. ಸಿದ್ದರಾಮಯ್ಯ ರಾಜೀನಾಮೆ ಕೊಡಲ್ಲ, ಇದು ಕಾನೂನು ಹೋರಾಟ ಮೂಲಕವೇ ಆಗಬೇಕು ಎಂದು ಹೇಳಿದ್ದೆ. ತಪ್ಪು ಮಾಡಿಲ್ಲ ಅಂದರೆ ಕಾನೂನಿನಲ್ಲಿ ರಕ್ಷಣೆ ಪಡೆಯಬಹುದು ಎಂದು ಹೇಳಿದೆ. ನಾನು ರಾಜೀನಾಮೆ ಈಗಲೂ ಕೇಳಿಲ್ಲ. ನಾನು ರಾಜೀನಾಮೆ ಕೇಳುವ ನೈತಿಕತೆ ಇಟ್ಟುಕೊಂಡಿದ್ದೇನೆ ಸಿದ್ದರಾಮಯ್ಯ ಅವರೇ ಎಂದು ಕುಟುಕಿದ್ದಾರೆ.
ನನ್ನ ನೈತಿಕತೆ ಪ್ರಶ್ನೆ ಮಾಡ್ತಿರಾ, ರಿಡೂ ನಲ್ಲಿ ಏನ್ ಮಾಡಿದ್ದಿರಿ? ಅದರಲ್ಲಿ ಎಷ್ಟು ಜನರಿಗೆ ಭೂ ಮಾಲೀಕರಿಗೆ ವಾಪಸ್ ಹೋಗಿದೆ? ಎಷ್ಟು ಜನ ಬಿಲ್ಡರ್ ಗಳಿಗೆ ಭೂಮಿ ಹೋಗಿದೆ? ಇದ್ಯಾವ ನೈತಿಕತೆ? ನಾನು ಆರೋಪದಿಂದ ಮುಕ್ತವಾಗಿ ಬಂದ ಮೇಲೆ ಈ ವಿಷಯದ ಮೇಲೆ ಮಾತನಾಡ್ತಿನಿ. ನಾನು ನೈತಿಕತೆ ಕಳೆದುಕೊಂಡಿದ್ದೇನೆ ಎಂದು ಹೇಳಿಲ್ಲ. ನಿಮ್ಮ ಥರಕ್ಕೆ ಡಿನೋಟಿಫಿಕೇಷನ್ ಮಾಡಿಲ್ಲ. ಬಾಮೈದನ ಹೆಸರಿನಲ್ಲಿ ಭೂಮಿ ತಗೊಂಡಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಕರ್ನಾಟಕದಲ್ಲಿರೋದು ದರೋಡೆಕೋರರ ಸರ್ಕಾರ:
ಕರ್ನಾಟಕದಲ್ಲಿ ಸರ್ಕಾರ ಇದಿಯಾ, ದರೋಡೆಕೋರರ ಸರ್ಕಾರ ಇದು. ಸಿದ್ದರಾಮಯ್ಯ ಸರ್ಕಾರ ಹಿಂದಿನ ಅವಧಿಯಲ್ಲೂ ದರೋಡೆ ಮಾಡಿದೆ. ಈ ಸರ್ಕಾರದಿಂದ ಆಡಳಿತ ನಿರೀಕ್ಷೆ ಮಾಡ್ತಿದ್ದೀರಾ? ನೈತಿಕತೆ ಇಲ್ಲ ಅಂತ ರಾಜೀನಾಮೆ ಕೇಳಿಲ್ಲ ಅಂತ ಅಲ್ಲ. ನಾನು ರಾಜೀನಾಮೆ ಕೇಳುವ ನೈತಿಕತೆ ಇಟ್ಟುಕೊಂಡಿದ್ದೇನೆ. ನಾನು ಆರೋಪ ಮುಕ್ತನಾಗಬೇಕು ಅಂತಾ ಸುಮ್ನೆ ಇದ್ದೇನೆ. ನಾನು ಹಿಟ್ ಆಂಡ್ ರನ್ ಅಲ್ಲ, ವರ್ಗಾವಣೆಗೆ ಎಷ್ಟೇಷ್ಟು ಹಣ ತಗೊಬೇಕು ಎನ್ನುವ ಚರ್ಚೆ ನಡೆದಿದೆ. ಅದರದ್ದೇ ಪೆನ್ ಡ್ರೈವ್ ಇದೆ, ಅದನ್ನೇ ತೋರಿಸಿದ್ದು ಎಂದು ಮತ್ತೆ ಪೆನ್‌ಡ್ರೈವ್ ವಿಚಾರ ಪ್ರಸ್ತಾಪಿಸಿದ್ದಾರೆ.
ಬೆಂಗಳೂರು: ಮುಡಾ (MUDA) ಸಂಬಂಧ ಏನೇ ತನಿಖೆ ನಡೆಯಲಿ ಯಾವುದೇ ಕಾರಣಕ್ಕೂ ಸಿಎಂ ಸಿದ್ದರಾಮಯ್ಯ (CM Siddaramaiah) ರಾಜೀನಾಮೆ ಕೊಡುವುದಿಲ್ಲ ಎಂದು ಸಿಎಂ ಪರ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಬ್ಯಾಟಿಂಗ್ ಮಾಡಿದ್ದಾರೆ. ಜನಪ್ರತಿನಿಧಿಗಳ ಕೋರ್ಟ್‌ನಲ್ಲಿ ಸಿಎಂ ವಿರುದ್ಧ ಲೋಕಾಯುಕ್ತ ತನಿಖೆಗೆ ಆದೇಶ ನೀಡಿದ ಬಳಿಕ ಪ್ರತಿಕ್ರಿಯಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಗಳವಾರ ಹೈಕೋರ್ಟ್ ಸೂಕ್ಷ್ಮವಾಗಿ ತನಿಖೆಗೆ ಆದೇಶ ಮಾಡಿದೆ. 17ಎ ಅಡಿ ತನಿಖೆಗೆ ಅನುಮತಿ ಕೊಟ್ಡಿದೆ. ಕೋರ್ಟ್ 218 ಬಿಎನ್‌ಎಸ್‌ಎಸ್ (Bharatiya Nagarik Suraksha Sanhita) ಅಡಿ ತಿರಸ್ಕಾರ ಮಾಡಿದೆ. ಸಿಎಂ ಕೂಡಾ ತನಿಖೆ ಮಾಡಲಿ ಎಂದು ಹೇಳಿದ್ದಾರೆ. ನಾವೇ ಮೊದಲು ನ್ಯಾಯಾಂಗ ರಚನೆ ಮಾಡಿದ್ದೇವೆ. ನಾವು ತನಿಖೆಯಿಂದ ಹಿಂದೆ ಸರಿಯಲ್ಲ. ತನಿಖೆ ಆಗಲಿ ಎಂದು ತಿಳಿಸಿದರು.ಇದನ್ನೂ ಓದಿ: ಮುಂಬೈನಲ್ಲಿ ರಾಕಿಭಾಯ್ ಹವಾ ಜೋರು..!
ರಾಜ್ಯಪಾಲರ (Governer) ಕಚೇರಿ ದುರ್ಬಳಕೆ ಆಗಿದೆ. ಬಿಜೆಪಿಗೆ (BJP) ರಾಜ್ಯಪಾಲರು ಸ್ಟೇಷನ್ ಹೌಸ್ ಆಗಿದ್ದಾರೆ. ರಾಜ್ಯಪಾಲರು ಕಾನೂನು ಪ್ರಕಾರ ಆದೇಶ ಕೊಡಬೇಕು. ಆದರೆ ಅದನ್ನು ಮಾಡಿಲ್ಲ. ಹೀಗಾಗಿ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆ ಇಲ್ಲ ಎಂದಿದ್ದಾರೆ.
ಸಿಎಂ ರಾಜೀನಾಮೆ ಕೇಳುವ ಬಿಜೆಪಿ ಅವರಿಗೆ ನೈತಿಕತೆ ಇದೆಯಾ? ಯಡಿಯೂರಪ್ಪ ಕೇಸ್ (Yadiyurappa Case) ಬಗ್ಗೆ, ಮುನಿರತ್ನ ಬಗ್ಗೆ ಮಾತಾಡಿದ್ದಾರಾ, ಪ್ರಜ್ವಲ್ ಕೇಸ್ ಬಗ್ಗೆ ಮಾತಾಡಿದ್ದಾರಾ? ಎಲ್ಲಿ ಹೋಗಿತ್ತು ಇವರ ನೈತಿಕತೆ? ವಿಜಯೇಂದ್ರ (Vijayendra) ಮೇಲೂ ಕೇಸ್ ಇದೆ. ಇವರು ನಮಗೆ ನೈತಿಕತೆ ಹೇಳೋದಾ? ಎಂದು ಕಿಡಿಕಾರಿದರು.
ಬೆಂಗಳೂರು: ಎಫ್‌ಐಆರ್ (FIR) ಆದ ತಕ್ಷಣ ಸಿಎಂ (CM Siddaramaiah) ರಾಜೀನಾಮೆ ಕೊಡಬೇಕು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R Ashok) ಆಗ್ರಹಿಸಿದ್ದಾರೆ.
ಮುಡಾ ಹಗರಣ ಸಂಬಂಧ ಜನಪ್ರತಿನಿಧಿಗಳ ಕೋರ್ಟ್ ತೀರ್ಪಿನ ಬೆನ್ನಲ್ಲೇ ಜಯನಗರದ (Jayanagar) ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ರಾಜಕಾರಣದಲ್ಲಿ ಮಹತ್ತರ ತಿರುವಿನ ದಿನವಾಗಿದೆ. ರಾಜ್ಯದ ಆಡಳಿತ ನಡೆಸುವ ಮುಖ್ಯಮಂತ್ರಿ ಮೇಲೆ ಆಪಾದನೆ ಬಂದು ಹೈಕೋರ್ಟ್ ಆದೇಶ ಆಗಿದೆ. ಜನ ಪ್ರತಿನಿಧಿಗಳ ಕೋರ್ಟ್ ಎಫ್‌ಐಆರ್ ಆಗಲಿ ಎಂದು ಹೇಳಿದೆ ಎಂದರು.ಇದನ್ನೂ ಓದಿ: ಸಿದ್ದರಾಮಯ್ಯನವರು ಕೂಡಲೇ ಮುಡಾ ಪ್ರಕರಣವನ್ನ ಸಿಬಿಐಗೆ ವಹಿಸಬೇಕು: ವಿಜಯೇಂದ್ರ ಆಗ್ರಹ
ನಮ್ಮ ಮೇಲೆ ಆಪಾದನೆ ಇಲ್ಲ. ಇದು ಬಿಜೆಪಿ ಪ್ರೇರಿತ ಎಂದು ರಾಜಕೀಯ ದಾಳ ಹೂಡಿದ್ದರು. ರಾಜಭವನ ಅನುಮತಿ ಕೊಟ್ಟ ತಕ್ಷಣ ರಾಜಭವನ ಕಡೆ ಕಾಂಗ್ರೆಸ್ ಅವರು ತಿರುಗಿಬಿಟ್ಟರು. ರಾಜಭವನವನ್ನು ಬಾಂಗ್ಲಾದೇಶದ ಮಾದರಿಯಲ್ಲಿ ಸ್ಫೋಟಿಸುತ್ತೀವಿ ಎಂದು ಕಾಂಗ್ರೆಸ್ ಅವರು ವಿಜೃಂಭಣೆ ಮಾಡಿದ್ದರು. ಈಗ ತನಿಖೆಗೆ ಸೂಕ್ತ ಎಂದು ಆದೇಶ ಆಗಿದೆ ಎಂದು ಹೇಳಿದರು.
ಒರಿಜಿನಲ್ ಕೇಸ್ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಇತ್ತು. ಈಗ ಜನಪ್ರತಿನಿಧಿಗಳ ನ್ಯಾಯಾಲಯ ಸ್ಟೇಟ್‌ಮೆಂಟ್ ಕೊಟ್ಟಿದೆ. ಗರ್ವನರ್ ಹೇಳಿದ್ದರಲ್ಲಿ ಸತ್ಯಾಂಶ ಕಾಣುತ್ತಿದೆ ಎಂದು ಕೋರ್ಟ್ ಹೇಳಿದೆ. ಸಿದ್ದರಾಮಯ್ಯ ಅವರು ಇನ್ನೂ ಯಾವುದಕ್ಕೇ ಕಾಯುತ್ತಿದ್ದಾರೆ. ಬಿಜೆಪಿ ಕೇಸ್ ಹಾಕಿಲ್ಲ. ಕೇಸ್ ಹಾಕಿರುವುದು ಆರ್‌ಟಿಐ ಕಾರ್ಯಕರ್ತರು. ಬಿಜೆಪಿಯದ್ದು ಸೇಡಿನ ರಾಜಕಾರಣ. ಗರ್ವನರ್ ಅವರು ಬಿಜೆಪಿ ಕೇಂದ್ರ ಎಂದಿದ್ದರು. ಈಗ ಎರಡೂ ನ್ಯಾಯಾಲಯ ಹೇಳಿದೆ ಏನು ಹೇಳ್ತೀರಾ ಎಂದು ಪ್ರಶ್ನಿಸಿದರು.
ಇದೇ ವೇಳೆ ಪರಮೇಶ್ವರ್ ಹೇಳಿಕೆ ಬಗ್ಗೆ ಮಾತನಾಡಿದ ಅವರು, ಲೋಕಾಯುಕ್ತ ಪೊಲೀಸ್ ಕರ್ನಾಟಕ ಪೊಲೀಸ್ ಅಂಡರ್‌ನಲ್ಲೇ ಬರುತ್ತದೆ. ಪರಮೇಶ್ವರ್ ಅವರು ಲೋಕಾಯುಕ್ತ ಸ್ವಾತಂತ್ರ‍್ಯ ಸಂಸ್ಥೆ ಎಂದು ಹೇಳಿದ್ದಾರೆ. ಆದರೆ ಪೊಲೀಸರು ಯಾರು? ನಾವು ಸಿಬಿಐಗೆ ವಹಿಸಿ ಎಂದು ಆಗ್ರಹ ಮಾಡುತ್ತೇವೆ ಎಂದರು.ಇದನ್ನೂ ಓದಿ: ಸಿದ್ದರಾಮಯ್ಯ ರಾಜೀನಾಮೆ ಕೇಳೋ ವಿಪಕ್ಷಗಳಿಗೆ ನೈತಿಕತೆ ಇಲ್ಲ: ಲಕ್ಷ್ಮಿ ಹೆಬ್ಬಾಳ್ಕರ್
ಬೆಂಗಳೂರು: ಮುಡಾ ಪ್ರಕರಣ (MUDA Case) ಬಗ್ಗೆ ಇಡೀ ದೇಶ ಮಾತನಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಬೆತ್ತಲಾಗಿದ್ದಾರೆ. ಭ್ರಷ್ಟಾಚಾರ ರಹಿತ ಆಡಳಿತ ಕೊಡ್ತೀವಿ ಅಂತ ಅಧಿಕಾರಕ್ಕೆ ಬಂದು, ಒಂದೇ ವರ್ಷದಲ್ಲಿ ಇಷ್ಟೆಲ್ಲ ಭ್ರಷ್ಟಾಚಾರ ಮಾಡಿ ಸಿಕ್ಕಿಬಿದ್ದಿದ್ದಾರೆ. ಸಿಎಂ ಅಧಿಕಾರದಲ್ಲಿರುವಾಗ ಲೋಕಾಯುಕ್ತ ಪ್ರಾಮಾಣಿಕ ತನಿಖೆ ನಡೆಸಲು ಸಾಧ್ಯವೇ? ಆದ್ದರಿಂದ ಕೂಡಲೇ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಶಾಸಕರೂ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಆಗ್ರಹಿಸಿದ್ದಾರೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ರಾಜ್ಯ ಹೈಕೋರ್ಟ್ (Karnataka High Court) ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆದೇಶವನ್ನು ಪ್ರಶ್ನಿಸಿ ಸಿಎಂ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿತ್ತು. ಇದಾದ ಬೆನ್ನಲ್ಲೇ ಬುಧವಾರ ಜನಪ್ರತಿನಿಧಿಗಳ ನ್ಯಾಯಾಲಯ ಮೈಸೂರು ಲೋಕಾಯುಕ್ತ ಪೊಲೀಸರಿಂದ (Mysuru Lokayukta Police) ತನಿಖೆಗೆ ಆದೇಶ ನೀಡಿತು. ಈ ಕುರಿತು ರಾಜ್ಯ ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ರಾಜೀನಾಮೆ ಪಡೆದರೆ ಇಡೀ ದಕ್ಷಿಣ ಭಾರತ ಹೊತ್ತಿ ಉರಿಯುತ್ತೆ: ಅಹಿಂದ ರಾಜ್ಯಾಧ್ಯಕ್ಷ
ಹೈಕೋರ್ಟ್‌ನಿಂದ ತೀರ್ಪು ಹೊರಬಂದಿದ್ದರೂ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಲ್ಲ ಅಂದಿದ್ದಾರೆ. ಆರೋಪಗಳು ಬಂದಿದ್ದರೂ ಏಕೆ ರಾಜೀನಾಮೆ ಕೊಡಬೇಕು ಅಂದಿದ್ದಾರೆ. ಈ ಹಿಂದೆ ಯಡಿಯೂರಪ್ಪ ಅವರ ಮೇಲೆ ಆರೋಪ ಕೇಳಿಬಂದಾಗ ಸಿದ್ದರಾಮಯ್ಯ ವಿಪಕ್ಷ ನಾಯಕ ಆಗಿದ್ರು, ಆಗ ಏನು ಹೇಳಿದ್ರು ಅಂತ ನೆನಪಿಸಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: MUDA Scam| ಸಿಎಂ ವಿರುದ್ಧ ಲೋಕಾಯುಕ್ತ ತನಿಖೆಗೆ ಕೋರ್ಟ್ ಆದೇಶ
ರಾಜೀನಾಮೆ ಕೊಟ್ಟು ತನಿಖೆಗೆ ಸಹಕರಿಸಲಿ:
ಬಿಜೆಪಿಯು ಇಂತಹ ಭ್ರಷ್ಟ ಸರ್ಕಾರ, ಭ್ರಷ್ಟ ಸಿಎಂ ವಿರುದ್ಧ ನಿರಂತರ ಹೋರಾಟ ಮಾಡ್ಕೊಂಡು ಬಂದಿದೆ, ಪಾದಯಾತ್ರೆ ನಡೆಸಿದೆ. ಇದರ ಪರಿಣಾಮ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟರು. ಹೈಕೋರ್ಟ್ ಸಹ ತನಿಖೆ ನಡೆಸಿ ಅಂದಿದೆ. ಈಗ ಜನಪ್ರತಿನಿಧಿಗಳ ಕೋರ್ಟ್ ಸಹ ತನಿಖೆ ಮಾಡಲು ಮೈಸೂರು ಲೋಕಾಯುಕ್ತ ಪೊಲೀಸರಿಗೆ ಸೂಚನೆ ಕೊಟ್ಟಿದೆ. ಯಾವ ನಾಯಕನ ವಿರುದ್ಧ ತನಿಖೆಗೆ ಆದೇಶ ಆಗಿದೆಯೋ ಆ ವ್ಯಕ್ತಿ ರಾಜ್ಯದ ಸಿಎಂ. ಇಂಥ ಸಂದರ್ಭದಲ್ಲಿ ಪಾರದರ್ಶಕ ತನಿಖೆ ನಡೆಯುವುದು ಅನುಮಾನ. ಹಾಗಾಗಿ ಕೋರ್ಟ್ ತೀರ್ಪುಗಳನ್ನು ಒಪ್ಪಿಕೊಂಡು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಲಿ. ರಾಜೀನಾಮೆ ಕೊಟ್ಟು ಸಿದ್ದರಾಮಯ್ಯ ತನಿಖೆಗೆ ಸಹಕರಿಸಲಿ ಎಂದು ಒತ್ತಾಯಿಸಿದ್ದಾರೆ.
ಲೋಕಾಯುಕ್ತದಿಂದ ಪ್ರಾಮಾಣಿಕ ತನಿಖೆ ಸಾಧ್ಯವೇ?
ಸಿಎಂ ವಿರುದ್ಧವೇ ಆರೋಪ ಕೇಳಿಬಂದಾಗ ಲೋಕಾಯುಕ್ತ ಪೊಲೀಸರಿಂದ ಪ್ರಾಮಾಣಿಕ ತನಿಖೆ ಮಾಡಲು ಸಾಧ್ಯವೇ? ಲೋಕಾಯುಕ್ತ ಪೊಲೀಸರಿಂದ ನ್ಯಾಯಬದ್ಧ ತನಿಖೆ ಅಸಾಧ್ಯ. ಕೋರ್ಟ್ ಆದೇಶ ಮಾಡಿರಬಹುದು, ಆದರೆ ತನಿಖೆ ಪಾರದರ್ಶಕ ಆಗುತ್ತಾ? ಹೀಗಾಗಿ ಸಿದ್ದರಾಮಯ್ಯ ಅವರು ಸಿಬಿಐಗೆ ಮುಡಾ ಪ್ರಕರಣ ವಹಿಸಬೇಕು. ಸ್ವತಂತ್ರ ತನಿಖಾ ಸಂಸ್ಥೆಯಿಂದಲೇ ಮುಡಾ ಪ್ರಕರಣ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ತನಿಖೆ ಎದುರಿಸಲು ಸಿದ್ಧನಿದ್ದೇನೆ: ಕೋರ್ಟ್ ಆದೇಶಕ್ಕೆ ಸಿಎಂ ಪ್ರತಿಕ್ರಿಯೆ
ಭ್ರಷ್ಟಾಚಾರಕ್ಕೆ ಸಾಥ್ ಕೊಡ್ತಿದ್ದಾರೆ ಎಂದರ್ಥವೇ?
ಸಿದ್ದರಾಮಯ್ಯನವರು ನನ್ನ ಜೊತೆ ಪಕ್ಷ ಇದೆ, ಶಾಸಕರು ಇದ್ದಾರೆ ಅಂತಿದ್ದಾರೆ. ಅದು ನಿಜವಾದ್ರೆ ಭ್ರಷ್ಟಾಚಾರಕ್ಕೆ ಅವರ ಪಕ್ಷದವರು ಸಾಥ್ ಕೊಡ್ತಿದ್ದಾರೆ ಎಂದು ಅರ್ಥವೇ? ಸಿದ್ದರಾಮಯ್ಯ ತಡಮಾಡದೇ ಸಿಬಿಐ ತನಿಖೆಗೆ ಆದೇಶ ಮಾಡಬೇಕು. ತಕ್ಷಣ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೇನಾಮೆ ಕೊಡಬೇಕು. ಅದಕ್ಕಾಗಿ ಗುರುವಾರ (ಸೆ.26) ಬಿಜೆಪಿ ಶಾಸಕರು, ಸಂಸದರು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದಿದ್ದಾರೆ.
ಸೋನಿಪತ್: ಹರಿಯಾಣ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ಕರ್ನಾಟಕದ ಮುಡಾ ಪ್ರಕರಣದ (MUDA Scam) ಪ್ರಸ್ತಾಪವಾಗಿದೆ. ಸೋನಿಪತ್‌ನಲ್ಲಿ ನಡೆದ ಪ್ರಚಾರದಲ್ಲಿ ಮುಡಾ ವಿಚಾರವನ್ನು ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi), ಸಿಎಂ ಸಿದ್ದರಾಮಯ್ಯ ವಿರುದ್ಧ ಹೈಕೋರ್ಟ್ ತನಿಖೆಗೆ ಆದೇಶಿಸಿದೆ, ಅವರ ವಿರುದ್ಧ ತನಿಖೆಯಾಗಲೇಬೇಕು ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ (Government Of Karnataka) ಅಧಿಕಾರಕ್ಕೆ ಬಂದು 2 ವರ್ಷ ಆಗಿದೆ. ಅಲ್ಲಿ ಯಾವ ಪರಿಸ್ಥಿತಿ ನಿರ್ಮಾಣವಾಗಿದೆ ನೋಡಿ. ಖುದ್ದು ಅಲ್ಲಿಯ ಮುಖ್ಯಮಂತ್ರಿ ವಿರುದ್ಧ ಭೂ ಹಗರಣದ ಆರೋಪ ಕೇಳಿ ಬಂದಿದೆ, ಹೈಕೋರ್ಟ್ ಚಾಟೀ ಬೀಸಿ ತನಿಖೆಗೆ ಆದೇಶಿಸಿದೆ ಎಂದು ತಿವಿದಿದ್ದಾರೆ. ಇದನ್ನೂ ಓದಿ: MUDA Scam: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಜೆಡಿಎಸ್ ಪ್ರತಿಭಟನೆ
ಕರ್ನಾಟಕ ಸಿಎಂ ವಿರುದ್ಧ ಭೂ ಹಗರಣ ಆರೋಪ ಕೇಳಿ ಬಂದು, ಅದರ ತನಿಖೆ ಶುರುವಾಗುತ್ತಿದ್ದಂತೆಯೇ ಹೈಕೋರ್ಟ್‌ಗೆ ಹೋಗಿದ್ದರು. ಹೈಕೋರ್ಟ್ ಕೂಡ ಅವರಿಗೆ ಛಾಟಿ ಬೀಸಿದೆ. ಮಂಗಳವಾರ ಹೈಕೋರ್ಟ್ ತನಿಖೆಗೆ ಆದೇಶ ಮಾಡಿದೆ. ಸಿದ್ದರಾಮಯ್ಯ ವಿರುದ್ಧ ತನಿಖೆ ಆಗಲೇಬೇಕು. ಹೀಗೆ ಭ್ರಷ್ಟಾಚಾರ ಮಾಡಿದವರಿಗೆ ಹರಿಯಾಣದಲ್ಲಿ ಅವಕಾಶ ಕೊಡ್ತಿರಾ? ಎಂದು ಮೋದಿ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ರಾಜೀನಾಮೆ ಪಡೆದರೆ ಇಡೀ ದಕ್ಷಿಣ ಭಾರತ ಹೊತ್ತಿ ಉರಿಯುತ್ತೆ: ಅಹಿಂದ ರಾಜ್ಯಾಧ್ಯಕ್ಷ
ಬೆಂಗಳೂರು: ತನಿಖೆಗಳಿಗೆ ಹೆದರಲ್ಲ, ತನಿಖೆ ಎದುರಿಸಲು ತಯಾರಾಗಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸ್ಪಷ್ಟಪಡಿಸಿದರು.
ಮುಡಾ ಹಗರಣ ಪ್ರಕರಣದಲ್ಲಿ (MUDA Scam Case) ತಮ್ಮ ವಿರುದ್ಧ ತನಿಖೆಗೆ ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕೋರ್ಟ್ನ ಆದೇಶದ ಪ್ರತಿ ಸಿಕ್ಕಿಲ್ಲ. ಪೂರ್ಣ ಓದಿದ ಮೇಲೆ ರಿಯಾಕ್ಟ್ ಮಾಡ್ತೀನಿ. ತನಿಖೆ ಎದುರಿಸಲು ತಯಾರಿಗಿದ್ದೇವೆ. ತನಿಖೆಗಳಿಗೆ ಹೆದರಲ್ಲ ಎಂದು ತಿಳಿಸಿದರು. ಇದನ್ನೂ ಓದಿ: MUDA Scam| ಸಿಎಂ ವಿರುದ್ಧ ಲೋಕಾಯುಕ್ತ ತನಿಖೆಗೆ ಕೋರ್ಟ್ ಆದೇಶ
ಮೇಲ್ಮನವಿ ಸಲ್ಲಿಸುವ ಬಗ್ಗೆ ಚರ್ಚೆ ಮಾಡ್ತೀವಿ. ವಕೀಲರ ಜೊತೆ ಚರ್ಚೆ ಮಾಡ್ತೀನಿ. ಕೇರಳ ಪ್ರವಾಸಕ್ಕೆ ಹೋಗ್ತಿದ್ದೇನೆ. ಆದೇಶದ ಪ್ರತಿ ಪೂರ್ಣ ಓದಿದ ಬಳಿಕ ನಾಳೆ ಬೆಳಗ್ಗೆ ಸಂಪೂರ್ಣ ಪ್ರತಿಕ್ರಿಯೆ ನೀಡುತ್ತೇನೆ ಎಂದರು.
ನಿನ್ನೆ ಹೈಕೋರ್ಟ್‌ನಲ್ಲಿ ಆದೇಶ ಆಯ್ತು, ತನಿಖೆ ಮಾಡಿ ಅಂತಾ ಹೇಳಿದ್ದಾರೆ. ಅದರ ಅನ್ವಯ ಜನಪ್ರತಿನಿಧಿಗಳ ನ್ಯಾಯಾಲಯ ಇಂದು ಆದೇಶ ಮಾಡಿದ್ದಾರೆ. ಪೂರ್ಣ ಆದೇಶ ನೋಡಿದ ಮೇಲೆ ಪ್ರತಿಕ್ರಿಯೆ ನೀಡ್ತೀನಿ. ನಿಮ್ಮ ಕುತೂಹಲ ಅರ್ಥ ಆಗುತ್ತೆ. ನಾನು ಕೇರಳಕ್ಕೆ ಹೋಗ್ತಿದ್ದೇನೆ. ಸಂಜೆ ಆರು ಗಂಟೆಗೆ ಪ್ರತಿ ಸಿಗುತ್ತೆ. ತನಿಖೆಗೆ ಸಿದ್ಧರಿದ್ದೇವೆ, ಎದುರಿಸುತ್ತೇವೆ, ತನಿಖೆಗಳಿಗೆ ಹೆದರುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯನವರು ಕೂಡಲೇ ಮುಡಾ ಪ್ರಕರಣವನ್ನ ಸಿಬಿಐಗೆ ವಹಿಸಬೇಕು: ವಿಜಯೇಂದ್ರ ಆಗ್ರಹ
ನಿನ್ನೆಯೂ ಹೇಳಿದ್ದೀನಿ, ಈಗಲೂ ಪುನರುಚ್ಚರಿಸುತ್ತಿದ್ದೇನೆ. ದೂರುದಾರರು ಮೈಸೂರಿನವರು, ಹೀಗಾಗಿ ಅಲ್ಲೇ ತನಿಖೆ ಆಗಲಿದೆ. ಲೋಕಾಯುಕ್ತ ತನಿಖೆಗೆ ನ್ಯಾಯಾಲಯ ಹೇಳಿದೆ ಎಂದರು.