Tag: MUDA Scam

  • ತನಿಖೆ ನಿಲ್ಲಲ್ಲ, ಶಿಕ್ಷೆ ಪ್ರಮಾಣ ಕಡಿಮೆ ಆಗಬಹುದು; ಭಾವನಾತ್ಮಕ ಪತ್ರ ಕೊನೆಯ ಅಸ್ತ್ರ ಅಷ್ಟೆ – ಸ್ನೇಹಮಯಿ ಕೃಷ್ಣ

    ತನಿಖೆ ನಿಲ್ಲಲ್ಲ, ಶಿಕ್ಷೆ ಪ್ರಮಾಣ ಕಡಿಮೆ ಆಗಬಹುದು; ಭಾವನಾತ್ಮಕ ಪತ್ರ ಕೊನೆಯ ಅಸ್ತ್ರ ಅಷ್ಟೆ – ಸ್ನೇಹಮಯಿ ಕೃಷ್ಣ

    ಮೈಸೂರು: ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರು ಮುಡಾದಿಂದ ಪಡೆದಿದ್ದ 14 ಸೈಟ್ ವಾಪಾಸ್ ಕೊಟ್ಟಿದ್ದಾರೆ. ಈ ಬಗ್ಗೆ ದೂರದಾರ ಸ್ನೇಹಮಯಿ ಕೃಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

    ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಕೃಷ್ಣ ಅವರು, ಸಿಎಂ ಪತ್ನಿ ತಮಗೆ ಬಂದ ಸೈಟ್ ವಾಪಾಸ್ ಕೊಟ್ಟಿದ್ದರು ತನಿಖೆ ನಡೆಯುತ್ತೆ. ಅವರಿಗೆ ಶಿಕ್ಷೆ ಪ್ರಮಾಣ ಕಡಿಮೆ ಆಗಬಹುದು ಅಷ್ಟೆ. ಸಿಎಂ ಪತ್ನಿ ಪತ್ರ ಬರೆಯುವ ಮೂಲಕ ಭಾವನಾತ್ಮಕ ಅಸ್ತ್ರ ಪ್ರಯೋಗಿಸಿದ್ದಾರೆ ಎಂದು ಹೇಳಿದ್ದಾರೆ.

    ಇದು ನನ್ನ ಹೋರಾಟಕ್ಕೆ ದೊಡ್ಡ ಜಯ. ನನ್ನ ಉದ್ದೇಶಕ್ಕೆ ಮುನ್ನುಡಿಯಾಗಿ 14 ನಿವೇಶನಗಳನ್ನು ವಾಪಸ್‌ ಕೊಡಲು ಮುಂದಾಗಿದ್ದಾರೆ. ಇದೇ ರೀತಿ ಸಾವಿರಾರು ನಿವೇಶನಗಳು ಮುಡಾದಿಂದ ಅಕ್ರಮವಾಗಿ ಅನೇಕರಿಗೆ ಹೋಗಿದೆ. ಅವು ಮುಡಾಗೆ ವಾಪಸ್‌ ಬರುವವರೆಗೂ ನನ್ನ ಹೋರಾಟ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ.

    ಸ್ನೇಹಮಯಿ ಕೃಷ್ಣ ಎಂಬ ಸಾಮಾನ್ಯ ವ್ಯಕ್ತಿ ನಮ್ಮ ವಿರುದ್ಧ ಏನು ಮಾಡಲು ಸಾಧ್ಯ ಎಂಬ ಅಹಂಕಾರ ಇತ್ತು. ಅವರ ಪ್ರಯತ್ನಗಳು ವಿಫಲವಾಗಿ ಸತ್ಯ ಅರಿವಾಗಿದೆ. ನಾವು ಏನೇ ಹೋರಾಟ ಮಾಡಿದರೂ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಈ ನಿರ್ಧಾರಕ್ಕೆ ಬಂದಿದ್ದಾರೆ. ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಬದಲು ಶಿಕ್ಷೆಯನ್ನು ಕಡಿಮೆ ಮಾಡಿಕೊಳ್ಳೋಣ ಎಂದು ಈ ಪ್ರಯತ್ನ ಮಾಡಿರುವಂತಿದೆ ಎಂದು ಸಿಎಂ ಪತ್ನಿ ನಿರ್ಧಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

    ತಪ್ಪು ಮಾಡದೇ ಇದ್ದಿದ್ದರೆ ಸೈಟ್‌ ವಾಪಸ್‌ ಕೊಡುವ ನಿರ್ಧಾರ ಮಾಡುತ್ತಿರಲಿಲ್ಲ. ಲೋಕಾಯುಕ್ತ, ಇ.ಡಿ ಕೇಸ್‌ ಹಾಕಿದ ಮೇಲೆ ನಿರ್ಧಾರ ಏಕೆ ಕೈಗೊಂಡರು? ಅದಕ್ಕೂ ಮುಂಚೆ ನಿರ್ಧರಿಸಬಹುದಿತ್ತಲ್ಲ ಎಂದು ಪ್ರಶ್ನಿಸಿದರು.

  • ಸಿಎಂ ಮುಡಾ ಸಂಕಷ್ಟದಿಂದ ಪಾರಾಗಲಿ ಎಂದು ದರ್ಗಾದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರಾರ್ಥನೆ

    ಸಿಎಂ ಮುಡಾ ಸಂಕಷ್ಟದಿಂದ ಪಾರಾಗಲಿ ಎಂದು ದರ್ಗಾದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರಾರ್ಥನೆ

    ಹಾವೇರಿ: ಮುಡಾ ಹಗರಣದಲ್ಲಿ (MUDA Scam) ಸಿಎಂ ಸಿದ್ದರಾಮಯ್ಯ (CM Siddaramaiah) ಆರೋಪದಿಂದ ಮುಕ್ತರಾಗಿ ಬರಲೆಂದು ಹಾವೇರಿ (Haveri) ಜಿಲ್ಲೆ ಶಿಗ್ಗಾವಿ ಪಟ್ಟಣದಲ್ಲಿ ಮಾಜಿ ಶಾಸಕ ಅಜ್ಜಂಫೀರ್ ಖಾದ್ರಿ ನೇತೃತ್ವದಲ್ಲಿ ನೂರಾರು ಬೆಂಬಲಿಗರು ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

    ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಸಿಲುಕಿಸಲು ಪ್ರತಿಪಕ್ಷಗಳು ಷಡ್ಯಂತ್ರ ನಡೆಸಿವೆ. ಬಿಜೆಪಿ (BJP) ಹಾಗೂ ಜೆಡಿಎಸ್ (JDS) ನಾಯಕರು ಒಂದಾಗಿ ಷಡ್ಯಂತ್ರ ನಡೆಸಿದ್ದಾರೆ. ಅವರ ಜೊತೆ ನಾವಿದ್ದೇವೆ ಎಂದು ಸಂದೇಶ ರವಾನೆ ಮಾಡಲು ಬೃಹತ್ ಪಾದಯಾತ್ರೆ ನಡೆಸಿದರು. ಮಾಜಿ ಶಾಸಕ ಅಜ್ಜಂಫೀರ್ ಖಾದ್ರಿ ನೇತೃತ್ವದಲ್ಲಿ ನೂರಾರು ಬೆಂಬಲಿಗರು ಶಿಗ್ಗಾವಿ ತಾಲೂಕಿನ ಬಾಡ ಗ್ರಾಮದಿಂದ ಶಿಗ್ಗಾವಿ ಪಟ್ಟಣದವರೆಗೆ ಪಾದಯಾತ್ರೆ ನಡೆಸಿದರು. ಇದನ್ನೂ ಓದಿ: 18 ವರ್ಷಗಳ ಬಳಿಕ ವಿರಾಜಪೇಟೆ ಪುರಸಭೆ ಅಧಿಕಾರ ಹಿಡಿದ ಕಾಂಗ್ರೆಸ್

    ಸಿಎಂ ಭ್ರಷ್ಟಾಚಾರ ರಹಿತ ಸ್ವಚ್ಛ ಆಡಳಿತ ನಡೆಸಿದ್ದಾರೆ. ಅವರು ಸಿಎಂ ಹುದ್ದೆಯಲ್ಲಿ ಇರುವುದನ್ನು ಸಹಿಸಲು ಆಗುತ್ತಿಲ್ಲ. ಹೀಗಾಗಿ ಬಿಜೆಪಿ ಜೆಡಿಎಸ್ ಷಡ್ಯಂತ್ರ ಮಾಡುತ್ತಿವೆ ಎಂದು ಖಾದ್ರಿ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಬೆಳಗಾವಿಯಲ್ಲಿ ಕಾನೂನು ಅರಿವು ಕಾರ್ಯಾಗಾರ

  • ಮುಡಾದಲ್ಲಿ ಸಿಎಂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಸಿದ್ದರಾಮಯ್ಯರ ರಾಜೀನಾಮೆ ಅನಿವಾರ್ಯ: ವಿಜಯೇಂದ್ರ

    ಮುಡಾದಲ್ಲಿ ಸಿಎಂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಸಿದ್ದರಾಮಯ್ಯರ ರಾಜೀನಾಮೆ ಅನಿವಾರ್ಯ: ವಿಜಯೇಂದ್ರ

    ನೆಲಮಂಗಲ: ಮುಡಾ ಹಗರಣದಲ್ಲಿ (MUDA Scam) ಸಿಎಂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸಿದ್ದರಾಮಯ್ಯ (CM Siddaramaiah) ರಾಜೀನಾಮೆ ನೀಡುವುದು ಅನಿವಾರ್ಯವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.

    ಸೋಂಪುರ ಹೋಬಳಿಯ ಸಮಾಧಾನ ಮಠದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಡಾ ಹಗರಣ, ವಾಲ್ಮೀಕಿ ಹಗರಣದಿಂದ (Valmiki Scam) ರಾಜ್ಯದ ಜನತೆಗೆ ಅನ್ಯಾಯವಾಗಿದೆ. ಇದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವ ಅನಿವಾರ್ಯತೆ ಬಂದಾಗಿದೆ. ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮೈಸೂರಿಗೆ ಮೊದಲನೇ ಪಾದಯಾತ್ರೆ ಯಶಸ್ವಿಯಾಗಿದೆ. ಸದ್ಯ ಎರಡನೇ ಪಾದಯಾತ್ರೆ ಬಗ್ಗೆ ಚರ್ಚೆಯಾಗಿಲ್ಲ ಎಂದು ತಿಳಿಸಿದರು.ಇದನ್ನೂ ಓದಿ: ಬಾಹ್ಯಾಕಾಶ ನಿಲ್ದಾಣ ತಲುಪಿತು ಕ್ರ್ಯೂ-9 ಮಿಷನ್ – ಅಪ್ಪಿಕೊಂಡು ಸ್ವಾಗತಿಸಿದ ಗಗನಯಾನಿಗಳು

    ಈ ಎರಡು ಹಗರಣಗಳು ಸಿಬಿಐಯಿಂದ (CBI) ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕಾಂಗ್ರೆಸ್ ವರಿಷ್ಠ ಮಲ್ಲಿಕಾರ್ಜುನ ಖರ್ಗೆಯವರೇ (Mallikarjuna Kharge) ಈ ಹಗರಣದ ಬಗ್ಗೆ ಮಾತಾಡಿದ್ದಾರೆ. ಸಿಎಂ ಸಿದ್ದರಾಮಯ್ಯರ ರಾಜೀನಾಮೆ ಅನಿವಾರ್ಯವಾಗಿದೆ ಎಂದರು.

    ಬಿಜೆಪಿ (BJP) ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಬಗ್ಗೆ ಮಾತನಾಡಿದ ಅವರು, ಬಸವನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಪ್ರತ್ಯೇಕ ಸಭೆ ಹಿನ್ನಲೆಯಾಗಿ ತಿಳಿಸಿದರು. ಈ ಸಭೆ ಹೊಸದೇನಲ್ಲ. ನಮ್ಮ ತಂದೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರ (Former Chief Minister Yadiyurappa) ಅನೇಕ ಸವಾಲುಗಳನ್ನು ನೋಡಿ ಬೆಳೆದಿದ್ದೇನೆ. ಹೀಗಾಗಿ ಎಲ್ಲಾ ಸವಾಲನ್ನು ಯಶಸ್ವಿಯಾಗಿ ಎದುರಿಸುತ್ತೇನೆ. ಸಮಸ್ಯೆಯಿಂದ ಓಡಿ ಹೋಗುವುದಲ್ಲ. ಜೀವನದಲ್ಲಿ ಸಮಸ್ಯೆ ಇದ್ದಾಗ ವಿಶ್ವಾಸ ಹೆಚ್ಚಾಗುತ್ತದೆ. ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷವನ್ನು ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ತರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಇದೇ ವೇಳೆ ನಿರ್ಮಲಾ ಸೀತಾರಾಮನ್ (Nirmala Sitharaman) ಎಫ್‌ಎಆರ್ (FIR) ವಿಚಾರವಾಗಿ ಮಾತನಾಡಿ, ರಾಜ್ಯ ಸರ್ಕಾರ ತರಾತುರಿಯಲ್ಲಿ ಕೇಂದ್ರ ಹಣಕಾಸು ಸಚಿವೆ ಮೇಲೆ ಎಫ್‌ಎಆರ್ ದಾಖಲು ಮಾಡಿದೆ. ಎಲೆಕ್ಟ್ರಾಲ್ ಬಾಂಡ್ ಬಗ್ಗೆ ಕೇಳ ನ್ಯಾಯಲಾಯ ಆದೇಶ ಮಾಡಿದೆ. ರಾಜ್ಯ ಸರ್ಕಾರ ಎಲ್ಲವನ್ನೂ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ಕಾಂಗ್ರೆಸ್ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿದರು.ಇದನ್ನೂ ಓದಿ: ಬೆಂಗಳೂರಿಗರೇ ಹುಷಾರಾಗಿರಿ, ಮಾತನಾಡಿಕೊಂಡು ಹೋಗ್ತಿದ್ದಾಗಲೇ ಮೊಬೈಲ್‌ ಕಳ್ಳತನ – ರಸ್ತೆಗೆ ಬಿದ್ದ ಡೆಲಿವರಿ ಬಾಯ್‌

  • ಮುಡಾ ಸಣ್ಣ ಕೇಸ್, ಚುನಾವಣಾ ಬಾಂಡ್ ದೊಡ್ಡ ಹಗರಣ; ಪ್ರಧಾನಿಯಿಂದ ಎಲ್ಲಾ ಸಚಿವರು ಬರ್ತಾರೆ: ಶರಣಪ್ರಕಾಶ ಪಾಟೀಲ್

    ಮುಡಾ ಸಣ್ಣ ಕೇಸ್, ಚುನಾವಣಾ ಬಾಂಡ್ ದೊಡ್ಡ ಹಗರಣ; ಪ್ರಧಾನಿಯಿಂದ ಎಲ್ಲಾ ಸಚಿವರು ಬರ್ತಾರೆ: ಶರಣಪ್ರಕಾಶ ಪಾಟೀಲ್

    ಮಡಿಕೇರಿ: ಮುಡಾ ಒಂದು ಸಣ್ಣ ಕೇಸ್ ಅಷ್ಟೇ, ಚುನಾವಣಾ ಬಾಂಡ್ ದೊಡ್ಡ ಹಗರಣ ಇದರಲ್ಲಿ ಪ್ರಧಾನಿಯಿಂದ ಹಿಡಿದು ಎಲ್ಲಾ ಸಚಿವರು ಬರುತ್ತಾರೆ. ಮೊದಲು ಅವರು ರಾಜೀನಾಮೆ ಕೊಡಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ್ (Sharana Prakash Patil) ಹೇಳಿದರು.

    ಜಿಲ್ಲೆಯಲ್ಲಿ ಮಾತನಾಡಿದ ಅವರು, ಇಡಿ, ಐಟಿಗಳನ್ನು ದುರುಪಯೋಗ ಮಾಡಿಕೊಂಡು ದಬ್ಬಾಳಿಕೆಯಿಂದ ಬಾಂಡ್ ಸಂಗ್ರಹಿಸಲಾಗಿದೆ ಎಂದು ಎಫ್‌ಐಆರ್ ಆಗಿದೆ. ಅದರಲ್ಲಿ ದಾಖಲೆಗಳಿವೆ. ಐಟಿ ದಾಳಿ ಆಗುತ್ತದೆ. ಅದಾದ ಬಳಿಕ ಅವರು ಚುನಾವಣಾ ಬಾಂಡ್ ಕೊಡುತ್ತಾರೆ. ನಂತರ ಆ ಕೇಸು ಕ್ಲೋಸ್ ಆಗುತ್ತದೆ. ಒಂದಲ್ಲ ಇಂತಹ ಹಲವು ನಿದರ್ಶನಗಳು ಇವೆ ಎಂದು ತಿಳಿಸಿದರು.ಇದನ್ನೂ ಓದಿ: BBK 11: ದೊಡ್ಮನೆ ಆಟಕ್ಕೆ ಎಂಟ್ರಿ ಕೊಟ್ಟಿರುವ ಸ್ಪರ್ಧಿಗಳ ಪಕ್ಕಾ ಲಿಸ್ಟ್

    ಕೇಂದ್ರ ಸರ್ಕಾರ (Central Government) 8,000 ಕೋಟಿ ರೂ.ಗಳನ್ನು ಚುನಾವಣಾ ಬಾಂಡ್ ಮೂಲಕ ಸಂಗ್ರಹಿಸಿದೆ. ಬೆದರಿಕೆಯೊಡ್ಡಿ ಹಣ ಸಂಗ್ರಹಿಸಿದೆ ಎಂದು ಎಫ್‌ಆರ್ ದಾಖಲಾಗಿದೆ. ಕಾಂಗ್ರೆಸ್ (Congress) ಕೂಡ ಚುನಾವಣಾ ಬಾಂಡ್ ಸ್ವೀಕರಿಸಿದೆ. ಆದರೆ ಕಾಂಗ್ರೆಸ್ ಯಾರಿಗೂ ಫೇವರ್ ಮಾಡಿಲ್ಲ. ಯಾರಿಗಾದರೂ ಫೇವರ್ ಮಾಡಿ ಬಾಂಡ್ ತೆಗೆದುಕೊಂಡಿದ್ದರೆ ಅಕ್ರಮ. ಅದು ನಮ್ಮ ಸರ್ಕಾರದಲ್ಲಿ ಇಲ್ಲ. ನಾವು ಯಾರಿಗೂ ಫೇವರ್ ಮಾಡಿಲ್ಲ. ಆದರೆ ಬಿಜೆಪಿ (BJP) ಬೆದರಿಸಿ ಬ್ಲಾಕ್ ಮೇಲ್ ಮಾಡಿ ಬಾಂಡ್ ತೆಗೆದುಕೊಂಡಿದೆ. ಇದೊಂದು ದೊಡ್ಡ ಹಗರಣ. ಇದರಲ್ಲಿ ಪ್ರಧಾನಿಯಿಂದ ಹಿಡಿದು ಎಲ್ಲಾ ಸಚಿವರು ಬರುತ್ತಾರೆ. ಮೊದಲು ಅವರು ರಾಜೀನಾಮೆ ಕೊಡಬೇಕು ಎಂದು ಕಿಡಿಕಾರಿದ್ದಾರೆ.

    ನಿರ್ಮಲಾ ಸೀತರಾಮನ್ (Niramala Sitharaman), ಜೆಪಿ ನಡ್ಡಾ (JP Nadda) ಹಾಗೂ ವಿಜಯೇಂದ್ರ (Vijayendra) ಮೇಲೆ ಎಫ್‌ಐಆರ್ ದಾಖಲಾಗಿರುವುದು ರಾಜಕೀಯ ಪ್ರೇರಿತ ಎಂಬ ವಿಚಾರವಾಗಿ ಮಾತನಾಡಿ, ಇದಕ್ಕೆ ಯಾರು ನಿರ್ದೇಶನ ನೀಡಲು ಸಾಧ್ಯ? ಎಫ್‌ಐಆರ್ (FIR) ದಾಖಲಿಸಲು ಹೇಳಿರುವುದು ಕೋರ್ಟ್. ಕೋರ್ಟಿನ ನಿರ್ದೇಶನದ ಮೇಲೆ ಎಫ್‌ಐಆರ್ ಆಗಿ ತನಿಖೆ ಆಗಬೇಕಾಗಿದೆ ಎಂದರು.ಇದನ್ನೂ ಓದಿ: ಜಾಮೀನು ಸಿಕ್ಕರೂ ಇಲ್ಲ ಬಿಡುಗಡೆ ಭಾಗ್ಯ – ಮಕ್ಕಳನ್ನು ಬಿಡಿಸಿಕೊಳ್ಳಲು ಹಣವಿಲ್ಲದೇ ಪೋಷಕರ ಪರದಾಟ

  • ಪಾರದರ್ಶಕ ತನಿಖೆಗೆ ಸಿಎಂ ರಾಜೀನಾಮೆ ನೀಡಲಿ: ಯದುವೀರ್ ಒಡೆಯರ್

    ಪಾರದರ್ಶಕ ತನಿಖೆಗೆ ಸಿಎಂ ರಾಜೀನಾಮೆ ನೀಡಲಿ: ಯದುವೀರ್ ಒಡೆಯರ್

    ಶಿವಮೊಗ್ಗ: ಮುಡಾ ಹಗರಣದಲ್ಲಿ (MUDA Scam) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಿರುದ್ಧ ಮೈಸೂರು ಲೋಕಾಯುಕ್ತದಲ್ಲಿ ಎಫ್ಐಆರ್ (FIR) ದಾಖಲಾಗಿದೆ. ಹಗರಣದ ಬಗ್ಗೆ ಪಾರದರ್ಶಕ ತನಿಖೆಯಾಗಬೇಕು ಹಾಗಾಗಿ ಸಿಎಂ ರಾಜೀನಾಮೆ ನೀಡಿ, ತನಿಖೆ ಎದುರಿಸಲಿ ಎಂದು ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ (Yaduvir Krishnadatta Wodeyar) ಆಗ್ರಹಿಸಿದರು.

    ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ದೇಶದಲ್ಲಿ ಕಾನೊನು ಎಲ್ಲರಿಗೂ ಒಂದೇ. ಈಗಾಗಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಲಿ ಎಂದರು.ಇದನ್ನೂ ಓದಿ:

    ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆ ಅಭಿವೃದ್ಧಿ ಬಗ್ಗೆ ಮಾತನಾಡಿದ ಸಂಸದರು, ಕಾರ್ಖಾನೆಗೆ ಕೇಂದ್ರ ಸಚಿವ ಕುಮಾರ ಸ್ವಾಮಿ ಭೇಟಿ ನೀಡಿದ್ದಾರೆ. ಇದನ್ನ ನಮ್ಮ ಕುಟುಂಬ ಆರಂಭಿಸಿತ್ತು. ಅದನ್ನ ಉಳಿಸುವ ಕೆಲಸ ಆಗಲಿದೆ. ವಿಐಎಸ್ಎಲ್ (VISL) ಹೆಮ್ಮೆಯ ಸಂಸ್ಥೆಯಾಗಿದೆ. ಅದಕ್ಕೆ ನಮ್ಮ ಪ್ರೋತ್ಸಾಹವಿದೆ ಎಂದರು.

    ದೇವಸ್ಥಾನದ ವಿಷಯದಲ್ಲಿ ಸರ್ಕಾರ ಹಸ್ತಕ್ಷೇಪ ಇರಬಾರದು. ಚಾಮುಂಡೇಶ್ವರಿ ಪ್ರಾಧಿಕಾರ ರಚನೆ ಬೇಡ ಎಂದು ತಿಳಿಸಿದ್ದೇವು. ಈ ವಿಷಯ ನ್ಯಾಯಾಲಯದಲ್ಲಿದೆ ಮುಂದೇನಾಗಲಿದೆ ಕಾದು ನೋಡೋಣ ಎಂದರು.ಇದನ್ನೂ ಓದಿ:

  • ಕಾನೂನು ಹೋರಾಟದ ವಿಚಾರವನ್ನು ನಮ್ಮ ಕಾನೂನಿನ ಟೀಂ ನೋಡಿಕೊಳ್ಳುತ್ತದೆ : ಸಿಎಂ

    ಕಾನೂನು ಹೋರಾಟದ ವಿಚಾರವನ್ನು ನಮ್ಮ ಕಾನೂನಿನ ಟೀಂ ನೋಡಿಕೊಳ್ಳುತ್ತದೆ : ಸಿಎಂ

    ಮೈಸೂರು: ಕಾನೂನು ಹೋರಾಟದ ವಿಚಾರವನ್ನು ನಮ್ಮ ಕಾನೂನಿನ ಟೀಂ ನೋಡಿಕೊಳ್ಳುತ್ತದೆ. ನಾನು ಅವರ ಬಳಿ ಯಾವ ಚರ್ಚೆಗಳನ್ನು ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.

    ಸಿಎಂ ವಿರುದ್ಧ ಲೋಕಾಯುಕ್ತದಲ್ಲಿ ಎಫ್‌ಐಆರ್ (FIR) ದಾಖಲಾಗಿರುವ ಹಿನ್ನೆಲೆಯಲ್ಲಿ ಮುಂದಿನ ಕಾನೂನು ಹೋರಾಟದ ಬಗ್ಗೆ ಸಿಎಂ ಜೊತೆ ಕಾನೂನು ಸಲಹೆಗಾರ ಪೊನ್ನಣ್ಣ, ಸಚಿವ ಭೈರತಿ ಸುರೇಶ್ ಅವರೊಂದಿಗೆ ಚರ್ಚೆ ನಡೆಯಿತು.ಇದನ್ನೂ ಓದಿ: PL 2025 | ಮೆಗಾ ಹರಾಜಿಗೂ ಮುನ್ನವೇ IPL ಆಟಗಾರರಿಗೆ ಬಿಸಿಸಿಐ ಭರ್ಜರಿ ಗಿಫ್ಟ್‌

    ಜಿಲ್ಲೆಯ ತಮ್ಮ ನಿವಾಸದಲ್ಲಿ ಚರ್ಚೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಹೋರಾಟದ ವಿಚಾರವನ್ನ ನಮ್ಮ ಕಾನೂನಿನ ಟೀಂ ನೋಡಿಕೊಳ್ಳುತ್ತದೆ. ಕಾನೂನು ಸಲಹೆಗಾರ ಪೊನಣ್ಣ ನನ್ನನ್ನು ಭೇಟಿಯಾಗಿದ್ದಾರೆ ಅಷ್ಟೇ. ನಾನು ಅವರ ಬಳಿ ಯಾವ ಚರ್ಚೆಗಳನ್ನು ಮಾಡಿಲ್ಲ. ಅವರು ತಮ್ಮ ಕ್ಷೇತ್ರಕ್ಕೆ ಹೋಗುತ್ತಿದ್ದರು. ಹೀಗಾಗಿ ಸೌಜನ್ಯವಾಗಿ ಬಂದಿದ್ದಾರೆ. ಇವತ್ತು ಮಾಧ್ಯಮಗಳಿಗೆ ಹೇಳುವುದಕ್ಕೆ ನನ್ನ ಬಳಿ ಏನು ಇಲ್ಲ. ನೀವೇ ಏನಾದರೂ ಇದ್ದರೆ ಹೇಳಿ ಎಂದರು.

    ಇದೇ ವೇಳೆ ಕುಮಾರಸ್ವಾಮಿ ಆರೋಪಗಳ ಕುರಿತು ಮಾತನಾಡಿದ ಅವರು, ಕುಮಾರಸ್ವಾಮಿಯ (HD Kumaraswamy) ಈ ಆರೋಪಗಳಿಗೆ ನಾನು ಉತ್ತರ ಕೊಡುವುದಿಲ್ಲ. ಉತ್ತರ ಕೊಡಬೇಕು ಅಂತ ಎಲ್ಲಿಯೂ ಇಲ್ಲ. ಉತ್ತರ ಕೊಡಲ್ಲ ಎಂದ ಮೇಲೆ ನಾನು ಕೊಡುವುದಿಲ್ಲ. ಮತ್ತೆ ಮತ್ತೆ ಅದನ್ನೇ ನನ್ನ ಬಳಿ ಕೇಳಬೇಡಿ. 8 ಗಂಟೆ ಅವಧಿಯ ಔಟ್ ಪುಟ್ ಏನು ಎಂದು ಕೇಳಿದರೆ? ಅದಕ್ಕೆ ಏನು ಉತ್ತರ ಕೊಡಬೇಕು. ಮಾಧ್ಯಮಗಳಿಗೆ ನಿನ್ನೆಯೇ ಎಲ್ಲಾ ವಿವರಗಳನ್ನು ಕೊಟ್ಟಿದ್ದೇನೆ ಎಂದು ಖಡಕ್ಕಾಗಿ ಉತ್ತರಿಸಿದ್ದಾರೆ.ಇದನ್ನೂ ಓದಿ:ಇದನ್ನೂ ಓದಿ: BBK 11: ದೊಡ್ಮ,ನೆ ಎಂಟ್ರಿ ಕೊಡಲಿದ್ದಾರೆ ಮೋಕ್ಷಿತಾ ಪೈ

  • ಲೋಕಾಯುಕ್ತ FIR ಬೆನ್ನಲ್ಲೇ ಸಿಎಂಗೆ ಇಡಿ ಭಯ; ಇ-ಮೇಲ್ ಮೂಲಕ ಸ್ನೇಹಮಯಿ ಕೃಷ್ಣ ದೂರು

    ಲೋಕಾಯುಕ್ತ FIR ಬೆನ್ನಲ್ಲೇ ಸಿಎಂಗೆ ಇಡಿ ಭಯ; ಇ-ಮೇಲ್ ಮೂಲಕ ಸ್ನೇಹಮಯಿ ಕೃಷ್ಣ ದೂರು

    – ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ತನಿಖೆಗೆ ಆಗ್ರಹ

    ಬೆಂಗಳೂರು: ಮುಡಾ ಕೇಸಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಲೋಕಾಯುಕ್ತ ಎಫ್‌ಐಆರ್ ಬೆನ್ನಲ್ಲೇ ಈಗ ED (ಜಾರಿ ನಿರ್ದೇಶನಾಲಯ) ಭೀತಿ ಎದುರಾಗಿದೆ. 59 ಕೋಟಿ ರೂ. ಮೌಲ್ಯದ 14 ಸೈಟುಗಳ ಹಗರಣದಲ್ಲಿ ತನಿಖೆ ನಡೆಸಬೇಕು ಅಂತ ಜಾರಿ ನಿರ್ದೇಶನಾಲಯಕ್ಕೆ ಇ-ಮೇಲ್ ಮೂಲಕ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ (Snehamayi Krishna) ದೂರು ನೀಡಿದ್ದಾರೆ.

    ಬೆಂಗಳೂರಿನ ಇಡಿ ಜಂಟಿ ನಿರ್ದೇಶಕರಿಗೆ 16 ಪುಟಗಳ ದೂರಿನ ಅರ್ಜಿ ಬರೆದು ಇ-ಮೇಲ್ ಮೂಲಕ ಕಳಿಸಿರುವ ಸ್ನೇಹಮಹಿ ಕೃಷ್ಣ, ಸಿದ್ದರಾಮಯ್ಯ ವಿರುದ್ಧ ಅಕ್ರಮ ಹಣ ವರ್ಗಾವಣೆ ಕಾಯ್ಡೆ (Money Laundering Act) ಅಡಿಯಲ್ಲಿ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಮುಡಾದಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ. ಸಿಎಂ ಸಿದ್ದರಾಮಯ್ಯ ಅಧಿಕಾರ ದುರ್ಬಳಕೆ ಮಾಡಿಕೊಂಡು ಮುಡಾದಲ್ಲಿ ಪತ್ನಿಯ ಹೆಸರಿನಲ್ಲಿ 14 ನಿವೇಶನ ಪಡೆದಿದ್ದಾರೆ ಎಂದು ಸಹ ದೂರರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

    ಮುಡಾ ಹಗರಣ ತನಿಖೆಗೆ 4 ತಂಡ ರಚನೆ:
    ಮುಡಾ ಹಗರಣದಲ್ಲಿ (MUDA Scam) ಸಿಎಂ ಸಿದ್ದರಾಮಯ್ಯ ಅವರೇ ಎ-1 ಆರೋಪಿಯಾಗಿದ್ದು, ತನಿಖೆಯ ಟೆನ್ಷನ್ ಶುರುವಾಗಿದೆ. ಶನಿವಾರ – ಭಾನುವಾರ ಲೋಕಾಯುಕ್ತ ಕಚೇರಿಗೆ ರಜೆ ಇರೋದ್ರಿಂದ ಸೋಮವಾರದಿಂದ ಅಧಿಕೃತ ತನಿಖೆ ಶುರುವಾಗಲಿದೆ. ಎಫ್‌ಐಆರ್ ಆದ ಬೆನ್ನಲ್ಲೇ ಲೋಕಾಯುಕ್ತ ಎಸ್‌ಪಿ ತನಿಖೆಗೆ 4 ತಂಡಗಳನ್ನು ರಚಿಸಿದ್ದಾರೆ. ಇದನ್ನೂ ಓದಿ: ನಾಲ್ವರು ವಿಕಲ ಚೇತನ ಹೆಣ್ಣು ಮಕ್ಕಳಿಗೆ ಸ್ವೀಟ್‌ನಲ್ಲಿ ವಿಷ ಕೊಟ್ಟು ತಾನೂ ಆತ್ಮಹತ್ಯೆ ಮಾಡಿಕೊಂಡ ತಂದೆ

    3 ತಿಂಗಳೊಳಗೆ ಕೋರ್ಟ್‌ಗೆ ತನಿಖಾ ವರದಿ ಸಲ್ಲಿಸಬೇಕಿರೋದ್ರಿಂದ ತನಿಖೆ ಸ್ವಲ್ಪ ಚುರುಕಾಗಿಯೇ ನಡೆಯುತ್ತೆ ಎನ್ನಲಾಗ್ತಿದೆ. ಈ ಬೆಳವಣಿಗೆಗಳ ಬೆನ್ನಲ್ಲೇ ಸಿದ್ದರಾಮಯ್ಯ ಕಾನೂನು ಹೋರಾಟ ಆರಂಭಿಸಿದ್ದು ಮೈಸೂರಿನ ನಿವಾಸದಲ್ಲಿ ವಕೀಲರು, ಕಾನೂನು ಸಲಹೆಗಾರ ಪೊನ್ನಣ್ಣ ಹಾಗೇ ಸಚಿವ ಬೈರತಿ ಸುರೇಶ್ ಜೊತೆ ಚರ್ಚಿಸಿದ್ರು. ನನ್ನಿಂದ ಸಿಎಂಗೆ ಸಂಕಷ್ಟ ಬಂತು ಅನ್ನೋದ್ರಲ್ಲಿ ಅರ್ಥ ಇಲ್ಲ ಅಂತ ಬೈರತಿ ಸುರೇಶ್ ಹೇಳಿದ್ರು. ಇದನ್ನೂ ಓದಿ: ಅಧಿಕಾರಿಗಳು ಮತ್ತು ಮುಖಂಡರು ಲಂಚ ಕೇಳಿದರೆ ನನ್ನ ವಿಳಾಸಕ್ಕೆ ಪತ್ರ ಬರೆಯಿರಿ: ಡಿಕೆಶಿ

    ದಾನದ ರೂಪದಲ್ಲಿ ಸಿಎಂ ಪತ್ನಿಗೆ 3.11 ಎಕರೆ ನೀಡಿದ್ದ ಸಿಎಂ ಬಾಮೈದ ಮೊದಲ ಪ್ರತಿಕ್ರಿಯೆ ಕೊಟ್ಟಿದ್ದಾರೆ. ನನ್ನ ಹೆಸರಿದ್ದರೆ ನಾನೇನು ಮಾಡಲಿ, ಎಲ್ಲವನ್ನೂ ದೊಡ್ಡವರು ಮಾತಾಡ್ತಾರೆ. ನಾನೇನು ಮಾತನಾಡಲ್ಲ ಅಂತ ಮಲ್ಲಿಕಾರ್ಜುನಸ್ವಾಮಿ ಜಾರಿಕೊಂಡ್ರು. ಅಲ್ಲದೇ, ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತಕ್ಕೆ ನೀಡಿರುವ ವಿಳಾಸದಲ್ಲಿ ವಾಸವೇ ಮಾಡ್ತಿಲ್ಲ ಅನ್ನೋದು ತಿಳಿದುಬಂದಿದೆ. ಸಚಿವ ಮಹದೇವಪ್ಪ ಪ್ರತಿಕ್ರಿಯಿಸಿ ಸಿದ್ದರಾಮಯ್ಯ ನಾಯಕತ್ವಕ್ಕೆ ಗಂಡಾಂತರ ತರಲು ಪಟ್ಟಭಧ್ರ ಹಿತಾಸಕ್ತಿಗಳು ಹೊರಟಿವೆ ಅಂತ ಕಿಡಿಕಾರಿದ್ರು.

    ದೂರುದಾರ ಸ್ನೇಹಮಯಿ ಕೃಷ್ಣ ಮಾತಾಡಿ, ಸಿದ್ದರಾಮಯ್ಯ ಪತ್ನಿ ಹೆಸರಲ್ಲಿ ಎಫ್‌ಐಆರ್ ಮಾಡಿಸಿದ್ದು, ನನಗೆ ವೈಯಕ್ತಿಕವಾಗಿ ಬೇಸರವಿದೆ ಎಂದಿದ್ದಾರೆ, ಜೊತೆಗೆ ಲೋಕಾಯುಕ್ತ ತನಿಖೆ ಬೇಡ. ಸಿಬಿಐ ತನಿಖೆಯೇ ಆಗಲಿ ಅಂತ ಆಗ್ರಹಿಸಿದ್ದಾರೆ. ಈ ಮಧ್ಯೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ `ಪೊಲಿಟಿಕಲ್ ಆರ್ಡರ್’ ಅಂತ ಟೀಕಿಸಿದ್ದ ಸಚಿವ ಜಮೀರ್ ವಿರುದ್ಧ ಎಜಿ ಶಶಿಕಿರಣ್ ಶೆಟ್ಟಿಗೆ ಟಿ.ಜೆ ಅಬ್ರಹಾಂ ದೂರು ನೀಡಿದ್ದಾರೆ. ಇದನ್ನೂ ಓದಿ: ನಾನು ರಾಜ್ಯಕ್ಕೆ ಸೇವೆ ಮಾಡ್ಬೇಕು ಅಂತ ದೊಡ್ಡ ಹೋರಾಟ ಆಗ್ತಿದೆ; ಮತ್ತೆ ಸಿಎಂ ಆಸೆ ವ್ಯಕ್ತಪಡಿಸಿದ ಡಿಕೆಶಿ

  • ಸಿಎಂ ಗೌರವಯುತವಾಗಿ ರಾಜೀನಾಮೆ ನೀಡಬೇಕು: ಕಾಂಗ್ರೆಸ್ ನಾಯಕರ ವಿರುದ್ಧ ಯತ್ನಾಳ್ ಕಿಡಿ

    ಸಿಎಂ ಗೌರವಯುತವಾಗಿ ರಾಜೀನಾಮೆ ನೀಡಬೇಕು: ಕಾಂಗ್ರೆಸ್ ನಾಯಕರ ವಿರುದ್ಧ ಯತ್ನಾಳ್ ಕಿಡಿ

    ವಿಜಯಪುರ: ಮುಡಾ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಗೌರವಯುತವಾಗಿ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ (Congress) ನಾಯಕರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಕಿಡಿಕಾರಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ನೀವು ಸ್ವಚ್ಛವಾಗಿರಿ. ಅವರು ಕಳ್ಳರಿದ್ದಾರೆ ಇವರು ಕಳ್ಳರಿದ್ದಾರೆ ಎಂದು ನೀವು ಹಾಗೇ ಮಾಡಬೇಡಿ. ನೀವು ಸ್ವಚ್ಛವಾಗಿರಿ. ಮುಡಾ ವಿಚಾರದಲ್ಲಿ (MUDA Scam) ನೀವು ಗೌರವಯುತವಾಗಿ ರಾಜೀನಾಮೆ ನೀಡಬೇಕು ಎಂದು ಸಲಹೆ ನೀಡಿದರು.ಇದನ್ನೂ ಓದಿ: ಸುನೀತಾ ವಿಲಿಯಮ್ಸ್‌ ಕರೆತರಲು ಇಂದು ನಭಕ್ಕೆ ನೆಗೆಯಲಿದೆ ಕ್ರ್ಯೂ -9

    ಈ ಹಿಂದೆ ಬೊಫೋರ್ಸ್ ವಿಚಾರದಲ್ಲಿ ಎಲ್‌ಕೆ ಅಡ್ವಾನಿಯವರ (L. K. Advani) ಹೆಸರು ಕೇಳಿ ಬಂದಿತ್ತು. ಕೇವಲ 50 ಲಕ್ಷ ರೂ. ಆರೋಪ ಬಂದಿತ್ತು. ಎಲ್‌ಕೆಎ ಎಂದು ಜೈನ್ ಡೈರಿಯಲ್ಲಿ ಬರೆಯಲಾಗಿತ್ತು. ಈ ಆರೋಪಕ್ಕೆ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಜೊತೆಗೆ ಇದರಿಂದ ಮುಕ್ತವಾಗುವವರೆಗೆ ಸಂಸತ್ ಪ್ರವೇಶ ಮಾಡುವುದಿಲ್ಲ ಎಂದು ನಿರ್ಧಾರ ಮಾಡಿದ್ದರು.

    ಅದು ಆದರ್ಶ. ರಾಜೀನಾಮೆ ನೀಡುವ ಮೂಲಕ ಸಿದ್ದರಾಮಯ್ಯ ರಾಜ್ಯಕ್ಕೆ ಹೊಸ ಆದರ್ಶವಾಗಬೇಕು. ಇಲ್ಲವಾದರೆ ಅವರು ಸಹ ಯಡಿಯೂರಪ್ಪ ಅವರ ಹಾಗೇ ಆಗುತ್ತಾರೆ ಎಂದರು. ಅವರು ಸಿಎಂ ಆಗಿರೋದು ತನಿಖೆ ಮೇಲೆ ಪರಿಣಾಮ ಬೀರುತ್ತದೆ. ಅಧಿಕಾರಿಗಳು ಅವರ ವಿರುದ್ಧ ರಿಪೋರ್ಟ್ ಕೊಟ್ಟರೆ ವರ್ಗಾವಣೆ ಇಲ್ಲ ಸಸ್ಪೆಂಡ್ ಮಾಡುತ್ತಾರೆ. ಈ ಭಯದಲ್ಲಿ ಪಾರದರ್ಶಕವಾಗಿ ನಿಷ್ಪಕ್ಷಪಾತವಾಗಿ ಸರಿಯಾಗಿ ತನಿಖೆ ಮಾಡಲಾಗುವುದಿಲ್ಲ. ಸಿಎಂ ರಾಜೀನಾಮೆ ನೀಡಿದರೆ ನಿಷ್ಪಕ್ಷಪಾತವಾದ ತನಿಖೆ ಮಾಡಬಹುದು ಎಂದರು.

    ಸಿಎಂ ಹಿಂದೆ ಅಹಿಂದ ಸಂಘಟನೆ ಮಾಡಿದ್ದರು. ಆಗ ಅವರಿಗೆ ನಾನು ಬೆಂಬಲ ಕೊಟ್ಟು ಭಾಗಿಯಾಗಿದ್ದೆ. ಈಗಲೇ ಅವರು ಮತ್ತೆ ಅಹಿಂದ ಸಂಘಟನೆ ಮಾಡಿದರೆ ಬೆಂಬಲ ಕೊಡುತ್ತೇನೆ ಎಂದು ಹೇಳಿದರು.

    ಇದೇ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ವಿರುದ್ಧ ಕೇಸ್ ದಾಖಲಿಸಲು ಕೋರ್ಟ್ ಆದೇಶ ಹಿನ್ನೆಲೆ ಮಾತನಾಡಿ, ನ್ಯಾಯಾಲಯದ ಆದೇಶ ಪಾಲಿಸಬೇಕು. ಎಲ್ಲರಿಗೂ ಅನ್ವಯವಾಗುತ್ತದೆ. ನನಗೂ ಅಷ್ಟೇ, ಪ್ರಧಾನ ಮಂತ್ರಿಗಳಿಗೂ ಅಷ್ಟೇ, ರಾಷ್ಟ್ರಪತಿಗಳಿಗೂ ಅಷ್ಟೇ, ನೆಲಕ್ಕೆ ನಾವು ಗೌರವ ಕೊಡಬೇಕು ಎಂದು ಪ್ರತಿಕ್ರಿಯಿಸಿದರು.

    ಎಲ್ಲಾ ಪಕ್ಷಗಳು ಚುನಾವಣಾ ಬಾಂಡ್‌ಗಳನ್ನು ತೆಗೆದುಕೊಂಡಿವೆ. ಚುನಾವಣಾ ಬಾಂಡುಗಳನ್ನು ಕಾಂಗ್ರೆಸ್ ತೆಗೆದುಕೊಂಡಿದೆ. ಲಾಲು ಪ್ರಸಾದ್ ಯಾದವ್ ತೆಗೆದುಕೊಂಡಿದ್ದಾರೆ. ಅಖಿಲೇಶ್ ಯಾದವ್ ತೆಗೆದುಕೊಂಡಿದ್ದಾರೆ, ಬಿಜೆಪಿ (BJP), ಕಾಂಗ್ರೆಸ್ (Congress) ಎಲ್ಲರೂ ತೆಗೆದುಕೊಂಡಿದ್ದಾರೆ. ಹಾಗಾದರೆ ರಾಹುಲ್ ಗಾಂಧಿ ರಾಜೀನಾಮೆ ಕೊಡುತ್ತಾರಾ ಎಂದು ಕಾಂಗೆಸ್ಸಿಗರ ವಿರುದ್ದ ಕಿಡಿ ಕಾರಿದರು.

    ಚುನಾವಣಾ ಬಾಂಡ್ ಯಾರು ತೆಗೆದುಕೊಳ್ಳಬಾರದೆಂದು ಸುಪ್ರೀಂ ಕೋರ್ಟ್ (Supreme Court) ತೀರ್ಪು ನೀಡಿದೆ. ಈಗ ಬಾಂಡ್ ತೆಗೆದುಕೊಳ್ಳುತ್ತಿಲ್ಲ. ಬಿಜೆಪಿಗೆ ಹೆಚ್ಚು ಹಣ ಕೊಟ್ಟಿರುವ ಕಾರಣ ಅವರಿಗೆ ತೊಂದರೆಯಾಗಿದೆ ಎಂದರು.ಇದನ್ನೂ ಓದಿ: ನಾನು ರಾಜ್ಯಕ್ಕೆ ಸೇವೆ ಮಾಡ್ಬೇಕು ಅಂತ ದೊಡ್ಡ ಹೋರಾಟ ಆಗ್ತಿದೆ; ಮತ್ತೆ ಸಿಎಂ ಆಸೆ ವ್ಯಕ್ತಪಡಿಸಿದ ಡಿಕೆಶಿ

  • ಸಿಎಂ ವಿರುದ್ಧ FIR ಬೆನ್ನಲ್ಲೇ ಮುಡಾ ಹಗರಣ ತನಿಖೆಗೆ 4 ತಂಡ ರಚಿಸಿದ ಲೋಕಾ ಎಸ್ಪಿ

    ಸಿಎಂ ವಿರುದ್ಧ FIR ಬೆನ್ನಲ್ಲೇ ಮುಡಾ ಹಗರಣ ತನಿಖೆಗೆ 4 ತಂಡ ರಚಿಸಿದ ಲೋಕಾ ಎಸ್ಪಿ

    ಮೈಸೂರು/ಬೆಂಗಳೂರು: ಮುಡಾ ಹಗರಣದಲ್ಲಿ (MUDA Scam) ಸಿಎಂ ಸಿದ್ದರಾಮಯ್ಯ ಅವರೇ ಎ-1 ಆರೋಪಿಯಾಗಿದ್ದು, ತನಿಖೆಯ ಟೆನ್ಷನ್ ಶುರುವಾಗಿದೆ. ಶನಿವಾರ – ಭಾನುವಾರ ಲೋಕಾಯುಕ್ತ ಕಚೇರಿಗೆ ರಜೆ ಇರೋದ್ರಿಂದ ಸೋಮವಾರದಿಂದ ಅಧಿಕೃತ ತನಿಖೆ ಶುರುವಾಗಲಿದೆ. ಎಫ್‌ಐಆರ್ ಆದ ಬೆನ್ನಲ್ಲೇ ಲೋಕಾಯುಕ್ತ ಎಸ್‌ಪಿ (Lokayukta SP) ತನಿಖೆಗೆ 4 ತಂಡಗಳನ್ನು ರಚಿಸಿದ್ದಾರೆ.

    3 ತಿಂಗಳೊಳಗೆ ಕೋರ್ಟ್‌ಗೆ ತನಿಖಾ ವರದಿ ಸಲ್ಲಿಸಬೇಕಿರೋದ್ರಿಂದ ತನಿಖೆ ಸ್ವಲ್ಪ ಚುರುಕಾಗಿಯೇ ನಡೆಯುತ್ತೆ ಎನ್ನಲಾಗ್ತಿದೆ. ಈ ಬೆಳವಣಿಗೆಗಳ ಬೆನ್ನಲ್ಲೇ ಸಿದ್ದರಾಮಯ್ಯ (Siddaramaiah) ಕಾನೂನು ಹೋರಾಟ ಆರಂಭಿಸಿದ್ದು ಮೈಸೂರಿನ ನಿವಾಸದಲ್ಲಿ ವಕೀಲರು, ಕಾನೂನು ಸಲಹೆಗಾರ ಪೊನ್ನಣ್ಣ ಹಾಗೇ ಸಚಿವ ಬೈರತಿ ಸುರೇಶ್ ಜೊತೆ ಚರ್ಚಿಸಿದ್ರು. ನನ್ನಿಂದ ಸಿಎಂಗೆ ಸಂಕಷ್ಟ ಬಂತು ಅನ್ನೋದ್ರಲ್ಲಿ ಅರ್ಥ ಇಲ್ಲ ಅಂತ ಬೈರತಿ ಸುರೇಶ್ ಹೇಳಿದ್ರು. ಇದನ್ನೂ ಓದಿ: ಪೆಟ್ರೋಲ್ – ಡೀಸೆಲ್ ಜಿಎಸ್‌ಟಿ ವ್ಯಾಪ್ತಿಗೆ ತರಲು ರಾಜ್ಯಗಳು ಒಪ್ಪಲ್ಲ: ಹರ್ದೀಪ್ ಸಿಂಗ್ ಪುರಿ

    ದಾನದ ರೂಪದಲ್ಲಿ ಸಿಎಂ ಪತ್ನಿಗೆ 3.11 ಎಕರೆ ನೀಡಿದ್ದ ಸಿಎಂ ಬಾಮೈದ ಮೊದಲ ಪ್ರತಿಕ್ರಿಯೆ ಕೊಟ್ಟಿದ್ದಾರೆ. ನನ್ನ ಹೆಸರಿದ್ದರೆ ನಾನೇನು ಮಾಡಲಿ, ಎಲ್ಲವನ್ನೂ ದೊಡ್ಡವರು ಮಾತಾಡ್ತಾರೆ. ನಾನೇನು ಮಾತನಾಡಲ್ಲ ಅಂತ ಮಲ್ಲಿಕಾರ್ಜುನಸ್ವಾಮಿ ಜಾರಿಕೊಂಡ್ರು. ಅಲ್ಲದೇ, ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತಕ್ಕೆ ನೀಡಿರುವ ವಿಳಾಸದಲ್ಲಿ ವಾಸವೇ ಮಾಡ್ತಿಲ್ಲ ಅನ್ನೋದು ತಿಳಿದುಬಂದಿದೆ. ಸಚಿವ ಮಹದೇವಪ್ಪ ಪ್ರತಿಕ್ರಿಯಿಸಿ ಸಿದ್ದರಾಮಯ್ಯ ನಾಯಕತ್ವಕ್ಕೆ ಗಂಡಾಂತರ ತರಲು ಪಟ್ಟಭಧ್ರ ಹಿತಾಸಕ್ತಿಗಳು ಹೊರಟಿವೆ ಅಂತ ಕಿಡಿಕಾರಿದ್ರು. ಇದನ್ನೂ ಓದಿ: ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ಮೇಲೆ ಹೆಚ್ಚು ರೈತರ ಸಾವು: ಪ್ರಧಾನಿ ಮೋದಿ ಆರೋಪ

    ದೂರುದಾರ ಸ್ನೇಹಮಯಿ ಕೃಷ್ಣ ಮಾತಾಡಿ, ಸಿದ್ದರಾಮಯ್ಯ ಪತ್ನಿ ಹೆಸರಲ್ಲಿ ಎಫ್‌ಐಆರ್ ಮಾಡಿಸಿದ್ದು, ನನಗೆ ವೈಯಕ್ತಿಕವಾಗಿ ಬೇಸರವಿದೆ ಎಂದಿದ್ದಾರೆ, ಜೊತೆಗೆ ಲೋಕಾಯುಕ್ತ ತನಿಖೆ ಬೇಡ. ಸಿಬಿಐ ತನಿಖೆಯೇ ಆಗಲಿ ಅಂತ ಆಗ್ರಹಿಸಿದ್ದಾರೆ. ಈ ಮಧ್ಯೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ `ಪೊಲಿಟಿಕಲ್ ಆರ್ಡರ್’ ಅಂತ ಟೀಕಿಸಿದ್ದ ಸಚಿವ ಜಮೀರ್ ವಿರುದ್ಧ ಎಜಿ ಶಶಿಕಿರಣ್ ಶೆಟ್ಟಿಗೆ ಟಿ.ಜೆ ಅಬ್ರಹಾಂ ದೂರು ನೀಡಿದ್ದಾರೆ. ಇದನ್ನೂ ಓದಿ: ಯಾದಗಿರಿ | ವಿಷಕಾರಿ ನೀರು ಸೇವಿಸುತ್ತಿರುವ ತಾಂಡಾ ಗ್ರಾಮಸ್ಥರು – ಇಲ್ಲಿನ ಜನಕ್ಕಿಲ್ಲ ಶುದ್ಧ ಕುಡಿಯುವ ನೀರು

  • ಸಿಎಂ ಸಿದ್ದರಾಮಯ್ಯ ಅವ್ರು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ: ಪ್ರದೀಪ್ ಈಶ್ವರ್

    ಸಿಎಂ ಸಿದ್ದರಾಮಯ್ಯ ಅವ್ರು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ: ಪ್ರದೀಪ್ ಈಶ್ವರ್

    ಚಿಕ್ಕಬಳ್ಳಾಪುರ: ಸಿಎಂ ಸಿದ್ದರಾಯಯ್ಯ (Siddaramaiah) ರಾಜೀನಾಮೆಗೆ ಬಿಜೆಪಿ ಆಗ್ರಹ ವಿಚಾರಕ್ಕೆ ಸಂಬಂಧಪಟ್ಟಂತೆ ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಪ್ರತಿಕ್ರಿಯಿಸಿದ್ದಾರೆ.

    ನಗರದ ವಾರ್ಡ್ ನಂಬರ್ 24 ರಲ್ಲಿ ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮ ನಡೆಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡೋದಿಲ್ಲ. ಸಿದ್ದರಾಮಯ್ಯನವರೇ ನಮ್ಮ ಮುಖ್ಯಮಂತ್ರಿಗಳು. ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಮೈಸೂರು ದಸರಾದಲ್ಲಿ ತುತ್ತೂರಿ ಬ್ಯಾನ್

    ಬಿಜೆಪಿಯವರು ಹೋರಾಟ ಮಾಡಬೇಕು. ಹಾಗಾಗಿ ಹೋರಾಟ ಮಾಡಲಿ. ಆದರೆ, ಕುಮಾರಸ್ವಾಮಿ, ಯಡಿಯೂರಪ್ಪನವರ ಮೇಲೆ ಎಫ್‌ಐಆರ್ ಆಗಿಲ್ವಾ? ಬೇಲ್ ಮೇಲೆ ಹೊರಗಿಲ್ವಾ? ವಿಜಯೇಂದ್ರ ಮೇಲೆ ಇಲ್ವಾ? ಅವರು ಮೊದಲು ರಾಜೀನಾಮೆ ಕೊಟ್ಟು ಮೇಲ್ಪಂಕ್ತಿ ಹಾಕಿಕೊಡಲಿ. ಅವರಿಗೊಂದು ನ್ಯಾಯ ನಮಗೊಂದು ನ್ಯಾಯನಾ ಎಂದು ಪ್ರಶ್ನಿಸಿದರು.

    ಅಹಿಂದ ನಾಯಕ ಸಿದ್ದರಾಮಯ್ಯ ಅವರನ್ನ ತುಳಿಯಲು ಪ್ರಯತ್ನ ಮಾಡ್ತಿದ್ದಾರೆ. ಅದನ್ನ ನಾವು ಸಹಿಸಲ್ಲ ಎಂದರು. ಇದನ್ನೂ ಓದಿ: ಬೆಳ್ಳಂದೂರು ರಸ್ತೆ ನಿರ್ಮಾಣಕ್ಕಾಗಿ ಬಿಬಿಎಂಪಿಗೆ ಭೂಮಿ ನೀಡಲು ರಕ್ಷಣಾ ಇಲಾಖೆ ಒಪ್ಪಿಗೆ: ಡಿಕೆಶಿ