ಬೆಳಗಾವಿ: ರಾಜ್ಯ ರಾಜಕೀಯ ಬದಲಾವಣೆ ಬೆಳಗಾವಿಯಿಂದಲೇ (Belagavi) ಆಗುತ್ತಾ ಎಂಬ ಪ್ರಶ್ನೆ ಮತ್ತೆ ಎದ್ದಿದೆ. ಮುಡಾ ಹಗರಣಕ್ಕೆ (MUDA Scam) ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಪ್ರಕರಣ ದಾಖಲಾದ ಬಳಿಕ ಎರಡು ಬಾರಿ ಸತೀಶ್ ಜಾರಕಿಹೊಳಿ (Satish Jarkiholi) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಭೇಟಿ ಮಾಡಿದ್ದರಿಂದ ಈ ಪ್ರಶ್ನೆ ಎದ್ದಿದೆ.
ಸಿದ್ದರಾಮಯ್ಯ ಬಿಟ್ಟರೆ ಸದ್ಯ ಅಹಿಂದ ಮತಗಳನ್ನು ಸೆಳೆಯುವ ಶಕ್ತಿ ಸತೀಶ್ ಜಾರಕಿಹೊಳಿ ಅವರಿಗೆ ಇದೆ. ಹೀಗಾಗಿ ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಎಂಬ ಅಭಿಯಾನವನ್ನು ಸತೀಶ್ ಅಭಿಮಾನಿಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಆರಂಭಿಸಿದ್ದಾರೆ. ಆದರೆ ಇದಕ್ಕೂ ಖರ್ಗೆ ಭೇಟಿಗೂ ಯಾವುದೇ ಸಂಬಂಧವಿಲ್ಲ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.
ದೆಹಲಿ ಭೇಟಿ ಬಳಿಕ ಮೊದಲ ಪ್ರತಿಕ್ರಿಯೆ ನೀಡಿದ ಸಚಿವ ಜಾರಕಿಹೊಳಿ ಖರ್ಗೆ ಅವರು ನಮ್ಮ ವರಿಷ್ಠರು ದೆಹಲಿಗೆ ಹೋದಾಗ ಭೇಟಿ ಆಗಲೇಬೇಕು. ಖರ್ಗೆ ಅವರ ಭೇಟಿ ಸಹಜ ಭೇಟಿಯಾಗಿದೆ. ರಾಜ್ಯದಲ್ಲಿ ರಾಜಕೀಯವಾಗಿ ಹೊಸ ಬೆಳವಣಿಗೆಗಳು ಕಾಣುತ್ತಿಲ್ಲ. ನಮ್ಮ ಪಕ್ಷದಿಂದ ಸಿಎಂ ಮೇಲೆ ರಾಜೀನಾಮೆಗೆ ಯಾವುದೇ ಒತ್ತಡವಿಲ್ಲ. ಎರಡು ತಿಂಗಳಿನಿಂದ ವಿರೋಧ ಪಕ್ಷಗಳು ಮಾತ್ರ ಒತ್ತಡ ಹಾಕುತ್ತಿವೆ. ಈ ಬಗ್ಗೆ ಕಾನೂನು ರೀತಿಯಾಗಿ ಹೋರಾಟ ಮಾಡುತ್ತೇವೆ. ಮುಡಾ ಪ್ರಕರಣವನ್ನ ಇಡಿ ತನಿಖೆ ನಡೆಸಲಿ ಇದರಿಂದಾಗಿ ಸತ್ಯಾಂಶ ಹೊರಬರುತ್ತದೆ ಎಂದರು. ಇದನ್ನೂ ಓದಿ: ಬೆಳಗಾವಿ ರಾಜಕಾರಣಕ್ಕೆ ಸರ್ಕಾರ ಬೀಳಿಸೋದು, ಉಳಿಸೋದು ಎರಡು ಗೊತ್ತಿದೆ: ಪ್ರಭಾಕರ ಕೋರೆ
ಒಟ್ಟಿನಲ್ಲಿ ದಸರಾ ಬಳಿಕ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಆಗುವ ಎಲ್ಲ ಸಾಧ್ಯತೆಗಳಿದ್ದು ಸಚಿವ ಸತೀಶ್ ಜಾರಕಿಹೊಳಿ ಈ ಬಾರಿ ಕಿಂಗ್ ಮೇಕರ್ ಆಗುತ್ತಾರಾ ಅಥವಾ ಕಿಂಗ್ ಆಗುತ್ತಾರಾ ಎಂಬ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.
ಮೈಸೂರು: ಸಿಎಂ ಸಿದ್ದರಾಮಯ್ಯ (Siddaramaiah) ಪರ ಮಾತನಾಡಿರುವ ಶಾಸಕ ಜಿ.ಟಿ ದೇವೇಗೌಡರ (G.T Devegowda) ವಿಚಾರವಾಗಿ, ಕಳ್ಳರು ಕಳ್ಳರು ಒಂದಾಗಿದ್ದಾರೆ ಎಂದು ಮುಡಾ ಹಗರಣ (MUDA scam) ದೂರುದಾರ ಸ್ನೇಹಮಯಿ ಕೃಷ್ಣ (Snehamayi Krishna) ವ್ಯಂಗ್ಯವಾಡಿದ್ದಾರೆ.
ಲೋಕಾಯುಕ್ತ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಟಿಡಿ ಸಹ 50:50 ಅನುಪಾತದ ಫಲಾನುಭವಿಯಾಗಿದ್ದಾರೆ. ಅವರಿಗೂ ತನಿಖೆಯ ಭಯ ಶುರುವಾಗಿದೆ. ಅದೇ ಕಾರಣಕ್ಕೆ ಭಯದಿಂದ ಹೀಗೆ ಮಾತಾಡ್ತಿದ್ದಾರೆ. ಮತ್ತೊಂದಿಷ್ಟು ಕಳ್ಳರು ಮುಂದಿನ ದಿನಗಳಲ್ಲಿ ಇದೇ ರೀತಿ ಮಾತಾಡುತ್ತಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: 5 ವರ್ಷ ಸಿದ್ದರಾಮಯ್ಯ ಅಧಿಕಾರ ಪೂರೈಸಲಿದ್ದಾರೆ: ಡಿ.ಕೆ.ಸುರೇಶ್
ಕಳ್ಳರು ತಮ್ಮ ರಕ್ಷಣೆಗಾಗಿ ಒಂದು ಕೂಟವನ್ನು ರಚನೆ ಮಾಡಿಕೊಂಡಿದ್ದಾರೆ. ಜಿಟಿಡಿ 3 ತಿಂಗಳಿನಿಂದ ಏನು ಮಾಡುತ್ತಿದ್ದರು? ದಸರಾದಂತ ನಾಡಹಬ್ಬದ ಕಾರ್ಯಕ್ರಮದಲ್ಲಿ ಆ ರೀತಿ ಮಾತನಾಡಿದ್ದು ತಪ್ಪು. ಮುಡಾದಲ್ಲಿ ಜಿ.ಟಿ ದೇವೇಗೌಡರ ಅಕ್ರಮ ಇರಬಹುದು. ಆ ಕಾರಣಕ್ಕೆ ಎಲ್ಲರೂ ಒಂದಾಗಿದ್ದಾರೆ. ಆ ಬಗ್ಗೆಯೂ ಮಾಹಿತಿ ನೀಡಿದ್ದೇನೆ ಎಂದಿದ್ದಾರೆ.
ಹೆಚ್.ಸಿ ಮಹದೇವಪ್ಪ ಅವರ ಸಹೋದರನ ಮಗನಿಗೆ ಸೈಟ್ ಕೊಡಲಾಗಿದೆ ಎಂಬ ಮಾಹಿತಿ ಇದೆ. ಮರಿಗೌಡ ಸಹೋದರ ಶಿವಣ್ಣ ಅವರಿಗೆ ಸೇಲ್ ಡೀಡ್ ಮೂಲಕ ಸೈಟ್ ಕೊಡಲಾಗಿದೆ. ಎಲ್ಲದರ ಬಗ್ಗೆಯೂ ಮಾಹಿತಿ ಕೊಟ್ಟಿದ್ದೇನೆ ಎಂದಿದ್ದಾರೆ.
ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಿಎಂ ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದು ಜಿ.ಟಿ. ದೇವೇಗೌಡರು ಹೇಳಿದ್ದರು. ಇಷ್ಟೇ ಅಲ್ಲದೇ ಕೇಂದ್ರ ಸಚಿವ ಹೆಚ್‍ಡಿಕೆ ವಿರುದ್ಧ ಸಹ ಕಿಡಿಕಾರಿದ್ದರು. ಇದನ್ನೂ ಓದಿ: ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಶೀಘ್ರದಲ್ಲೇ ದರ ಏರಿಕೆ ಶಾಕ್!
ನವದೆಹಲಿ: ಮೂಡಾ ಪ್ರಕರಣದಲ್ಲಿ (MUDA Scam) ಸಿಎಂ ರಾಜೀನಾಮೆಗೆ (CM Siddaramaiah) ಒತ್ತಾಯ ವ್ಯಕ್ತವಾಗುತ್ತಿರುವ ಹೊತ್ತಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಅವರನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarakholi) ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ದಲಿತ ಸಚಿವರೊಂದಿಗೆ ಸಭೆ ನಡೆಸಿದ ಬೆನ್ನಲ್ಲೇ ಜಾರಕಿಹೊಳಿ ಹಾಗೂ ಖರ್ಗೆಯವರ ಭೇಟಿ ಮಹತ್ವ ಪಡೆದುಕೊಂಡಿದೆ.
ದೆಹಲಿಯಲ್ಲಿ (Delhi) ಮಲ್ಲಿಕಾರ್ಜುನ್ ಖರ್ಗೆ ನಿವಾಸದಲ್ಲಿ ಭೇಟಿಯಾಗಿರುವ ಸತೀಶ್ ಜಾರಕಿಹೊಳಿ, ಪ್ರಸಕ್ತ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಮೂಡಾ ಪ್ರಕರಣದಲ್ಲಿ ನಾವು ಸಿಎಂ ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದೇವೆ. ಪ್ರತಿ ಹಂತದಲ್ಲೂ ನಾವು ಸಮರ್ಥಿಸಿಕೊಳ್ಳುತ್ತಿದ್ದೇವೆ ಎಂದಿದ್ದಾರೆ.ಇದನ್ನೂ ಓದಿ: ಪುಣೆಯಲ್ಲಿ 21ರ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ
ಒಂದು ವೇಳೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸಂದರ್ಭ ಎದುರಾದರೆ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ನಾಯಕರಿಗೆ ಸಿಎಂ ಸ್ಥಾನ ಸಿಗಬೇಕು. ಇದಕ್ಕೆ ನಾವೆಲ್ಲ ಒಗ್ಗಟ್ಟಾಗಿ ನಿಂತು ಸಿಎಂ ಸ್ಥಾನವನ್ನು ಸಮುದಾಯಕ್ಕೆ ಪಡೆಯಬೇಕು ಎನ್ನುವ ನಿಟ್ಟಿನಲ್ಲಿ ಖರ್ಗೆ ಅವರ ಜೊತೆಗೆ ಚರ್ಚೆ ನಡೆದಿದೆ ಎನ್ನಲಾಗಿದೆ.
ಇದಕ್ಕೂ ಮುನ್ನ ಎರಡು ದಿನಗಳ ಹಿಂದೆ ಸಮಾಜ ಕಲ್ಯಾಣ ಸಚಿವ ಮಹದೇವಪ್ಪ, ಗೃಹ ಸಚಿವ ಪರಮೇಶ್ವರ್ ಜೊತೆಗೆ ಸತೀಶ್ ಜಾರಕಿಹೊಳಿ ರಹಸ್ಯ ಮಾತುಕತೆ ನಡೆಸಿದ್ದರು. ಈ ಸಭೆಯಲ್ಲೂ ಮುಂದಿನ ರಾಜಕೀಯ ಬೆಳವಣಿಗೆ ಹಾಗೂ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವ ಸನ್ನಿವೇಶ ಒದಗಿ ಬಂದರೆ ಮುಂದಿನ ನಿಲುವುಗಳ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಶೀಘ್ರದಲ್ಲೇ ದರ ಏರಿಕೆ ಶಾಕ್!
ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಡಾ ವಿಚಾರದಲ್ಲಿ ಮನನೊಂದು ಆತ್ಮಸಾಕ್ಷಿಯಾಗಿ ನಡೆದುಕೊಳ್ಳುತ್ತೇನೆ ಎಂದು ಪಾರ್ವತಿ ಸಿದ್ದರಾಮಯ್ಯ (Parvathi Siddaramaiah) 14 ಸೈಟ್‌ಗಳನ್ನ ಮರಳಿಸಿದ್ದಾರೆ. ಸೈಟ್ ವಾಪಸ್ ನೀಡಿದ ಮೇಲೆ ಕುಮಾರಸ್ವಾಮಿಗೆ ಮಾತನಾಡಲು ವಿಷಯವಿಲ್ಲ. ಅದಕ್ಕೆ ಹುಚ್ಚು ಹಿಡಿದವರ ಹಾಗೇ ಒದರಾಡುತ್ತಿದ್ದಾರೆ ಎಂದರು.
ಮುಡಾ ಪ್ರಕರಣದಲ್ಲಿ (MUDA Scam) ನನ್ನ ಪತಿ ಹೆಸರಿಗೆ ಮಸಿ ಬಳಿಯುವಂತಹ ಕೆಲಸ ಮಾಡುತ್ತಿದ್ದಾರೆ. ನನ್ನ ಹೆಸರಿನಲ್ಲಿರುವ 14 ಸೈಟ್‌ಗಳನ್ನ ವಾಪಸ್ ಕೊಡುತ್ತೇನೆ ಎಂದು ಪಾರ್ವತಿ ಸಿದ್ದರಾಮಯ್ಯ ಹೇಳಿದ್ದಾರೆ. ಮನನೊಂದು ಆತ್ಮಸಾಕ್ಷಿಯಾಗಿ ನಡೆದುಕೊಳ್ಳುತ್ತೇನೆ ಎಂದು ಸೈಟ್ ಸರೆಂಡರ್ ಮಾಡಿದ್ದಾರೆ. ಇದಕ್ಕೆ ಹೇಗೆ ಸರೆಂಡರ್ ಮಾಡಿದರೂ ಎಂದು ಕುಮಾರಸ್ವಾಮಿ ಕೇಳ್ತಾರೆ. ಅಶೋಕನನ್ನು ಕೇಳಿದರೆ ನಾನು ಆವಾಗಲೇ ಜಾಗವನ್ನು ಮರಳಿಸಿದ್ದೇನೆ ಎನ್ನುತ್ತಾರೆ. ಅವರು ವಿರೋಧ ಪಕ್ಷದ ನಾಯಕರು ಇವರು ಕೇಂದ್ರ ಸಚಿವರು. ಇವರಿಗೆ ಯಾವ ರೀತಿಯ ಬದ್ಧತೆಯಿದೆ. ಜವಾಬ್ದಾರಿಯಿದೆ. ಇವರ ಮಾತುಗಳಿಗೆ ಅರ್ಥವಿದೆಯಾ? ಹುಚ್ಚರು ಮಾಡಿದ ಹಾಗೇ ಮಾಡಿ ಏನೇನೋ ಒದರಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.ಇದನ್ನೂ ಓದಿ: ಹರ್ಷಿಕಾ ಪೂಣಚ್ಚಗೆ ಹೆಣ್ಣು ಮಗು ಜನನ
ಕುಮಾರಸ್ವಾಮಿ ಮೇಲೆ 50 ಕೋಟಿ ರೂ. ಲಂಚ ಆರೋಪದಲ್ಲಿ ಎಫ್‌ಐಆರ್ ಆಗಿದೆ. ವಿಥ್ ರೆಕಾರ್ಡ್ ಕೇಸ್ ಆಗಿದೆ. ಅಶೋಕ್ ಅವರ ಮೇಲೆ ಎಫ್‌ಐಆರ್ ಆಗಿದೆ. ಯಡಿಯೂರಪ್ಪ ಮೇಲೆ ನೂರಾರು ಕೇಸ್ ಇವೆ. ಇದಕ್ಕೆಲ್ಲಾ ಏನು ಉತ್ತರ ಕೊಡುತ್ತಾರೆ? ಅವರದೇ ಪಕ್ಷದಲ್ಲಿರುವವರು ಭ್ರಷ್ಟಾಚಾರ ಮಾಡಿ ಸಾವಿರ ಕೋಟಿ ಇಟ್ಟುಕೊಂಡಿದ್ದಾರೆ ಎಂದು ಅವರ ಪಕ್ಷದ ಯತ್ನಾಳ್ ಹೇಳಿದ್ದಾರೆ. ಈ ಸರ್ಕಾರ ತೆಗೆದು ಸಿಎಂ ಆಗಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆಲ್ಲಾ ಕುಮಾರಸ್ವಾಮಿ, ಯಡಿಯೂರಪ್ಪ, ಅಶೋಕ್, ವಿಜಯೇಂದ್ರ ಉತ್ತರ ಕೊಡಬೇಕಲ್ಲ. ಅಮಿತ್ ಶಾ, ಮೋದಿ ಸಹ ಏನೂ ಮಾತನಾಡುತ್ತಿಲ್ಲ. ಕೇಶವ ಕೃಪಾಕ್ಕೆ ಕರೆದು ಆರ್‌ಎಸ್‌ಎಸ್‌ನವರಿಗೆ ಸರಿ ಮಾಡಲು ಕಳುಹಿಸಿದ್ದಾರೆ ಇದು ಬಹಿರಂಗವಾದ ವಿಷಯ ಎಂದು ತಿಳಿಸಿದರು.
ಗದಗ: ಮುಡಾ ಹಗರಣದಲ್ಲಿ (MUDA Scam) ಸಿದ್ದರಾಮಯ್ಯ ಅವರು ಕಾಲಿನ ಮೇಲೆ ಒಂದು ಕಲ್ಲು ಹಾಕಿಕೊಳ್ಳುವ ಬದಲು ಹತ್ತಾರು ಕಲ್ಲು ಹಾಕಿಕೊಂಡು, ಔಷಧಿ ಇಲ್ಲದ ಹಾಗೆ ಮಾಡಿಕೊಂಡಿದ್ದಾರೆ. ಕಾನೂನು ಇದೆ, ಕಾನೂನು ಯಾವ ರೀತಿ ತೀರ್ಮಾನ ಮಾಡುತ್ತೆ ನೋಡೋಣ. ಸಿಎಂ ನಾನು ಒಟ್ಟಿಗೆ ರಾಜಕೀಯಕ್ಕೆ ಬಂದವರು. ಮುಡಾ ಪ್ರಕರಣ ಜಗತ್ ಜಾಹೀರವಾಗಿದೆ. ಅದನ್ನು ಸಿಎಂ ಅರ್ಥ ಮಾಡಿಕೊಳ್ಳುತ್ತಿಲ್ಲ. ನಾವು ಬೇರೆ ಭಾಷೆಯಲ್ಲಿ ಮಾತನಾಡಲು ಆಗೋದಿಲ್ಲ, ನಮಗೆ ಸಂಸ್ಕಾರ ಇದೆ ಎಂದು ಕೇಂದ್ರ ಸಚಿವ ವಿ ಸೋಮಣ್ಣ ( V Somanna) ಸಿಎಂ ವಿರುದ್ಧ ಕಿಡಿಕಾರಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿ ಟಿ ದೇವೇಗೌಡ (G T Devegowda) ಅವರು ಸಿಎಂ ಪರ ಯಾಕೆ ಮಾತನಾಡಿದರು ಎಂದು ಅವರನ್ನೇ ಕೇಳಬೇಕು, ಅವ್ರು ಸೀನಿಯರ್ ರಾಜಕಾರಣಿ. ಯಾಕೆ ಹೀಗೆ ಹೇಳ್ತಾರೆ ಅದು ಅವರಿಗೆ ಗೊತ್ತಿದೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: Photo Gallery | ಮಂಗಳೂರಿನಲ್ಲಿ ಕಳೆಗಟ್ಟಿದ ದಸರಾ ಸಂಭ್ರಮ – ಶಾರದಾ ಮಾತೆಗೆ ದಿವ್ಯಾಲಂಕಾರ
ಶಾಸನ ಸಭೆಯಲ್ಲಿ ಸೈಟ್ ವಾಪಸ್ ಕೊಡಬೇಕಾಗಿತ್ತು. ಆರ್ ಅಶೋಕ್‌ನ ( R Ashok) ಸೈಟ್ ವಿಚಾರವನ್ನು ಇಟ್ಟುಕೊಂಡಿದ್ದೀರಿ. ಈ ಪ್ರಕರಣಕ್ಕೆ ಏನು ಸಂಬಂಧ. ಅಶೋಕ್ ಆಗಲೇ ವಾಪಸ್ ನೀಡಿದ್ರು, ನೀವು ಕೂಡ ಆವಾಗಲೇ ಕೊಡಬೇಕಾಗಿತ್ತು. ಸಿಎಂ ಸ್ಥಾನ ಶಾಶ್ವತವಲ್ಲ. ವ್ಯವಸ್ಥೆಯಲ್ಲಿ ಯಾರು ದೊಡ್ಡವರಲ್ಲ. ಕಾನೂನು ಎಲ್ಲರಿಗೂ ಒಂದೇ ಎಂದು ಟಾಂಗ್ ನೀಡಿದರು. ಈ ವೇಳೆ ಬಿಜೆಪಿ (BJP) ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಕಾಂತಿಲಾಲ ಬಣಸಾಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇದನ್ನೂ ಓದಿ: ಮಣಿಪುರದಲ್ಲಿ 2 ಗುಂಪುಗಳ ನಡುವೆ ಘರ್ಷಣೆ – ಗುಂಡಿನ ಚಕಮಕಿಯಲ್ಲಿ ಮೂವರು ಸಾವು, 20 ಮಂದಿಗೆ ಗಾಯ
ಬೆಂಗಳೂರು: ಮುಡಾ ಕೇಸಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಾಯಿ ಚಾಮುಂಡಿ ಸನ್ನಿಧಾನದಲ್ಲಿಂದು ಆಡಿರುವ ಮಾತುಗಳು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿದ್ದೇನೆ. ಇನ್ನೊಂದು ವರ್ಷದವರೆಗೂ ತಾಯಿ ಚಾಮುಂಡಿ (Chamundeshwari) ಆಶೀರ್ವಾದ ಇರಲಿ ಎಂದು ಸಿಎಂ ಸಿದ್ದರಾಮಯ್ಯ ಕೋರಿದ್ದಾರೆ.
ಹೌದು. ಇದು ಒಂದೂವರೆ ವರ್ಷದ ಹಿಂದಿನ ಮಾತು… ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಪಕ್ಷ ಬರೋಬ್ಬರಿ 136 ಸ್ಥಾನ ಗೆಲ್ಲುವ ಮೂಲಕ ಅಖಂಡ ಗೆಲುವು ಸಾಧಿಸಿತ್ತು. ಈ ಸಂದರ್ಭದಲ್ಲಿ ಸಿಎಂ ಸ್ಥಾನಕ್ಕಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ನಡುವೆ ಪೈಪೋಟಿ ನಡೆದಿತ್ತು. ಹೈಕಮಾಂಡ್ ಸಾಕಷ್ಟು ಸುತ್ತು ಸಂಧಾನ ಸಭೆ ನಡೆಸಿದ ನಂತ್ರ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ, ಡಿ.ಕೆ ಶಿವಕುಮಾರ್ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ರು. ಈ ವೇಳೆ ಪವರ್ ಶೇರಿಂಗ್ ವಿಚಾರ ಸಿಕ್ಕಾಪಟ್ಟೆ ಸುದ್ದಿ ಮಾಡಿತ್ತು.
ಮೊದಲ ಎರಡೂವರೆ ವರ್ಷ ಸಿದ್ದರಾಮಯ್ಯ, ಕೊನೆಯ ಎರಡೂವರೆ ವರ್ಷ ಡಿಕೆ ಶಿವಕುಮಾರ್ ಸಿಎಂ ಆಗೋ ರೀತಿ ಒಪ್ಪಂದ ನಡೆದಿದೆ ಎಂಬ ಸುದ್ದಿ ಹರಿದಾಡಿತ್ತು. ಆದ್ರೆ, ಈ ಬಗ್ಗೆ ಈವರೆಗೆ ಯಾರೂ ಕೂಡ ಅಧಿಕೃತವಾಗಿ ಮಾತಾಡಿಲ್ಲ. ಆದ್ರೂ, ಆಗೋಮ್ಮೆ ಈಗೊಮ್ಮೆ ಈ ವಿಚಾರ ಸದ್ದು ಮಾಡುತ್ತಲೇ ಇರ್ತಿತ್ತು. ಸಿದ್ದರಾಮಯ್ಯ ಮಾತ್ರ 5 ವರ್ಷ ನಾನೇ ಸಿಎಂ ಎಂದು ಪ್ರತಿಪಾದಿಸುತ್ತಲೇ ಬಂದಿದ್ರು. ಆದ್ರೆ, ಮುಡಾ ಕೇಸಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಈ ಹೊತ್ತಲ್ಲಿ, ತಾಯಿ ಚಾಮುಂಡಿ ಸನ್ನಿಧಾನದಲ್ಲಿಂದು ಮುಖ್ಯಮಂತ್ರಿ ಆಡಿರುವ ಮಾತುಗಳು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿದ್ದೇನೆ. ಇನ್ನೊಂದು ವರ್ಷದವರೆಗೂ ತಾಯಿ ಚಾಮುಂಡಿ ಆಶೀರ್ವಾದ ಇರಲಿ. ಇನ್ನೊಂದು ವರ್ಷ ಒಳ್ಳೆಯ ಕೆಲಸ ಮಾಡಲು ದೇವಿ ಆಶೀರ್ವಾದ ಇರಲಿ ಎಂದು ಸಿಎಂ ಸಿದ್ದರಾಮಯ್ಯ ಕೋರಿದ್ದಾರೆ.
ಇನ್ನೊಂದು ವರ್ಷದವರೆಗೂ ತಾಯಿ ಚಾಮುಂಡಿ ಆಶೀರ್ವಾದ ಇರಲಿ, ಎಂಬ ಮುಖ್ಯಮಂತ್ರಿಯ ಮಾತು ಕಾಂಗ್ರೆಸ್ ಪಕ್ಷದಲ್ಲಿ ಭಾರೀ ಸಂಚಲನವನ್ನೇ ಮೂಡಿಸಿದಂತೆ ಕಾಣ್ತಿದೆ. ಸಿಎಂ ಸಿದ್ದರಾಮಯ್ಯ ಆಪ್ತ ಬಣದ ಸಚಿವರು, ಶಾಸಕರು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ತುರ್ತು ಸಭೆ ನಡೆಸಿದ್ದಾರೆ. ಇದನ್ನೂ ಓದಿ: ರಾಯಚೂರಿನಲ್ಲಿ ಶರನ್ನವರಾತ್ರಿ ಅದ್ಧೂರಿ ಆಚರಣೆ; ಗೌಳಿ ಸಮಾಜದಿಂದ ಅಂಬಾಭವಾನಿ ಮೆರವಣಿಗೆ
ಸಚಿವರಾದ ಬೈರತಿ ಸುರೇಶ್, ಸಂತೋಷ್ ಲಾಡ್ ನೇತೃತ್ವದಲ್ಲಿ ನಡೆದ ಹಿಂದುಳಿದ ವರ್ಗಗಳ ಮುಖಂಡರ ಸಭೆಯಲ್ಲಿ ಮುಂದಿನ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ ಪಾಲ್ಗೊಂಡಿದ್ದ 15ಕ್ಕೂ ಹೆಚ್ಚು ಶಾಸಕರು ಸಿಎಂ ಸಿದ್ದರಾಮಯ್ಯ ಪರವಾಗಿ ಹೋರಾಟಕ್ಕೆ ತೀರ್ಮಾನಿಸಿದ್ದಾರೆ. ಜಾತಿಗಣತಿ ವರದಿ ಅಂಗೀಕಾರ ಮಾಡಿ, ಬಿಡುಗಡೆ ಮಾಡೇಕು ಎಂದು ಸರ್ಕಾರದ ಮೇಲೆ ಒತ್ತಡ ಹೇರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಅ.9ರವರೆಗೆ ಅತ್ಯಧಿಕ ಮಳೆ – ಯೆಲ್ಲೋ ಅಲರ್ಟ್ ಘೋಷಣೆ
ಅತ್ತ, ತುಮಕೂರು ದಸರಾ ವೇದಿಕೆಯಲ್ಲಿ ಪರಮೇಶ್ವರ್ ಮುಂದಿನ ಸಿಎಂ ಆಗ್ಬೇಕು ಎಂಬ ಕೂಗು ಪರೋಕ್ಷವಾಗಿ ಕೇಳಿಬಂದಿದೆ. ಈ ಮಧ್ಯೆ, ಟ್ವೀಟ್ ಮಾಡಿದ ಸಿಎಂ ಸಿದ್ದರಾಮಯ್ಯ, ಜನರ ಆಶೀರ್ವಾದದಿಂದ ನಾವು ಆಡಳಿತಕ್ಕೆ ಬಂದಿದ್ದೇವೆ. 5 ವರ್ಷಗಳ ಕಾಲ ರಾಜ್ಯದ ಜನತೆ ನಮಗೆ ಅವಕಾಶ ಕೊಟ್ಟಿದ್ದಾರೆ. ಈಗಲೂ ಎಷ್ಟೇ ತೊಡಕುಗಳು ಎದುರಾದರೂ, ತಾಯಿ ಚಾಮುಂಡೇಶ್ವರಿ ಆಶೀರ್ವಾದ ನಮ್ಮ ಮೇಲಿದೆ. ಐದು ವರ್ಷಗಳ ಕಾಲ ನಾವು ಆಡಳಿತ ಮಾಡಿಯೇ ಮಾಡುತ್ತೇವೆ ಅಂದ್ರು. ಐದು ವರ್ಷವೂ ಸಿದ್ದರಾಮಯ್ಯನವ್ರೇ ಸಿಎಂ ಎಂದು ಸಚಿವ ಜಮೀರ್ ಹೇಳಿದ್ರು.
ಬೆಳಗಾವಿ: ದಸರಾ (Mysuru Dasara) ಮೆರವಣಿಗೆಯಲ್ಲಿ ರಾಜ್ಯದ ಕಳಂಕಿತ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಭಾಗಿಯಾಗಿದ್ದು ಸರಿಯಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ ರಾಜೀವ್ (P Rajeev) ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣದ (MUDA Scam) ಮೇಲೆ ಆರೋಪ ಬಂದಾಗ ಸ್ಪಷ್ಟವಾಗಿ ನಿರಾಕರಣೆ ಮಾಡಿದ್ದರು. ರಾಜ್ಯಪಾಲರು ಪ್ರಾಸಿಕ್ಯೂಷನ್ ನೀಡಿದ ಮೇಲೆ ಕಾಂಗ್ರೆಸ್‌ನ ಎಲ್ಲಾ ಮುಖಂಡರು ಅವಹೇಳನಕಾರಿಯಾಗಿ ಮಾತನಾಡಿದ್ದರು. ನ್ಯಾಯಾಲಯಕ್ಕೆ ಮೇಲ್ನೋಟಕ್ಕೆ ಹಗರಣ ಆಗಿದೆ ಎಂದು ಗೊತ್ತಾದ ಮೇಲೆ ತನಿಖೆಗೆ ಅನುಮತಿ ನೀಡಿದೆ. ಸಿದ್ದರಾಮಯ್ಯನವರು ತಕ್ಷಣವೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಕಳಂಕಿತ ಮುಖ್ಯಮಂತ್ರಿ ದಸರಾ ಮೆರವಣಿಗೆಗೆ ಚಾಲನೆ ನೀಡಿದ್ದು ಸರಿಯಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಹುಕ್ಕೇರಿ ಹಿರೇಮಠದಿಂದ ಈ ಬಾರಿ ಹೋಳಿಗೆ ದಸರಾ
ಕಾಂಗ್ರೆಸ್ ಸರ್ಕಾರ ಇದ್ದಾಗ ಸಿದ್ದರಾಮಯ್ಯ ವಿರುದ್ಧ 60ಕ್ಕೂ ಹೆಚ್ಚು ಲೋಕಾಯುಕ್ತದಲ್ಲಿ ಕೇಸ್ ದಾಖಲಾಗಿವೆ. ಕೇಸ್ ದಾಖಲಾಗಿದ್ದಕ್ಕೆ ಲೋಕಾಯುಕ್ತ ತನಿಖಾ ಸಂಸ್ಥೆ ಬಂದ್ ಮಾಡಿಸಿದ್ದರು. ರಾಜ್ಯ ಭ್ರಷ್ಟಾಚಾರದಲ್ಲಿ ಮುಳುಗಿ ಅಭಿವೃದ್ಧಿ ಕುಂಠಿತವಾಗಿದೆ. ರಾಜ್ಯದಲ್ಲಿ ಕಳೆದ ನಾಲ್ಕು ತಿಂಗಳಿಂದ ಗೃಹಲಕ್ಷ್ಮಿ ಹಣ ಬರೋದು ತಪ್ಪಿದೆ. ಮತ್ತೆ ಲೂಟಿ ಮಾಡುವ ಕೆಲಸ ಶುರುವಾಗಿದೆ. ವಾಲ್ಮೀಕಿ ಹಗರಣದ ಹಣ ಚುನಾವಣೆಗೆ ಬಳಸಿಕೊಂಡಿದ್ದಾರೆಂದು ಇಡಿ ಸ್ಪಷ್ಟವಾಗಿ ಉಲ್ಲೇಖ ಮಾಡಿದೆ. ರಾಜ್ಯವನ್ನು ಸಾಲದ ಸುಳಿಯಲ್ಲಿ ಸಿಲುಕಿಸಿದ್ದು ಕಾಂಗ್ರೆಸ್ ಸರ್ಕಾರ ಎಂದು ಹರಿಹಾಯ್ದರು. ಇದನ್ನೂ ಓದಿ: ದೆಹಲಿ ವಾಯು ಮಾಲಿನ್ಯ – ವಾಯು ಗುಣಮಟ್ಟ ನಿರ್ವಹಣಾ ಆಯೋಗಕ್ಕೆ ಸುಪ್ರೀಂ ಛೀಮಾರಿ
ಯಾದಗಿರಿ: ಒಂದು ವಾರದಲ್ಲಿ ಸಿದ್ದರಾಮಯ್ಯ (CM Siddaramaiah) ರಾಜೀನಾಮೆ ಕೊಡ್ತಾರೆ, ಸರ್ಕಾರ ಉರುಳುತ್ತದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಮಾಧ್ಯದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಇನ್ನೊಂದು ವಾರ ಇರುವುದು ಕಷ್ಟ. ಒಂದು ವಾರದಲ್ಲಿ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರೆ, ಸರ್ಕಾರ ಉರುಳುತ್ತದೆ. ಜಗ್ಗುವುದಿಲ್ಲ, ಬಗ್ಗುವುದಿಲ್ಲ ಅಂತ ಹೇಳಿದ್ದರು. ಮೊನ್ನೆ ರಾತ್ರಿಯೇ ಜಗ್ಗಿದು ಆಯ್ತು. ಗ್ಗಿದು ಆಯ್ತು. ಇನ್ನೆನೂ ಉಳಿದಿದೆ. ಈ ಸರ್ಕಾರ ರಾಜ್ಯದಲ್ಲಿ ಇರಲಿಕ್ಕೆ ಸಾಧ್ಯವಿಲ್ಲ. ಯಾಕೆಂದರೆ ಇದು ಪಾಪದ ಸರ್ಕಾರ. ಜನರಿಗೆ ಸುಳ್ಳು ಹೇಳಿ, ವಂಚನೆ ಮಾಡಿ ಅಧಿಕಾರಕ್ಕೆ ಬಂದಿರುವ ಸರ್ಕಾರ ಇದು ಕಿಡಿಕಾರಿದ್ದಾರೆ.ಇದನ್ನೂ ಓದಿ: ಸಿದ್ದರಾಮಯ್ಯ ಜೀವನಾಧಾರಿತ ಸಿನಿಮಾದ ಶೂಟಿಂಗ್‌ಗೆ ತಾತ್ಕಾಲಿಕ ಬ್ರೇಕ್
ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರೇ ಸರ್ಕಾರ ಬಿದ್ದ ಹಾಗೇ ಅಲ್ಲವಾ. ಕಾಂಗ್ರೆಸ್‌ನಲ್ಲೇ (Congress) ಸಿಎಂ ಸ್ಥಾನಕ್ಕಾಗಿ ಹತ್ತು ಜನ ಬಟ್ಟೆ ಹೊಲಿಸಿಕೊಂಡು ಕೂತಿದ್ದಾರೆ. ಸಿಎಂ ಬದಲಾವಣೆ ಆದರೇ ದಲಿತರೇ ಸಿಎಂ ಆಗಬೇಕು. ಯಾಕೆಂದರೆ 77 ವರ್ಷ ಜೈಲಿನಲ್ಲಿ ಇಟ್ಟುಕೊಂಡ ಹಾಗೇ ಕಬ್ಜಾ ಮಾಡಿಕೊಂಡು ಮತ ಪಡೆದಿದ್ದೀರಿ. ದಲಿತರ ಮತ ಪಡೆದು ಅವರಿಗೆ ಅನ್ಯಾಯ ಮಾಡ್ತಿದ್ದೀರಿ. ದಲಿತರನ್ನ ಸಿಎಂ ಮಾಡಿ ಇಲ್ಲದೇ ಇದ್ದರೆ ಅವರ ಕೋಪಕ್ಕೆ ನೀವು ಗುರಿ ಆಗುತ್ತೀರಿ ಎಂದು ಹೇಳಿದರು.
ಆರ್.ಅಶೋಕ್ ಬಿಡಿಎ ಜಮೀನು ವಾಪಸ್ ನೀಡಿರುವ ವಿಚಾರವಾಗಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಮುಡಾ ನಿವೇಶನ ಕೇಸಿಗೂ ಆರ್.ಅಶೋಕ್ ಕೇಸ್‌ಗೂ ಸಂಬಂಧವಿಲ್ಲ. ಆರ್.ಅಶೋಕ್ (R Ashok) ವಾಪಸ್ ಕೊಟ್ಟಿರೋದರಲ್ಲಿ ಏನು ತಪ್ಪಿದೆ. ನೀವು ತೊಡೆತಟ್ಟಿ ಹೋಗಿ ನಂತರ ಸೈಟ್ ವಾಪಸ್ ಕೊಟ್ಟಿದ್ದೀರಿ. ಅವತ್ತೇ ಸಿಎಂ ಸಿದ್ದರಾಮಯ್ಯ ಅವರು ಸೈಟ್ ವಾಪಸ್ ಕೊಡಬೇಕಿತ್ತು. ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವಾಗ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸೈಟ್ ವಾಪಸ್ ಕೊಟ್ಟರೆ ಈಗ ಕ್ಷಮೆ ಇಲ್ಲ ಎಂದು ತಿಳಿಸಿದರು.ಇದನ್ನೂ ಓದಿ: ಸರ್ಕಾರ ಉರುಳಿಸುವ ದುರಾಲೋಚನೆ ಬರದಿರಲಿ: ದಸರಾ ಉದ್ಘಾಟಿಸಿ ಹಂಪ ನಾಗರಾಜಯ್ಯ
ಚಿತ್ರದುರ್ಗ: ನಿಮ್ಮದಲ್ಲದ ಸೈಟ್‌ಗೆ ಪರಿಹಾರ ಕೇಳೋದು ಆತ್ಮಸಾಕ್ಷಿಯಾ ಎಂದು ಬಿಜೆಪಿ ಸಂಸದ ಗೋವಿಂದ ಕಾರಜೋಳ (Govinda Karajola) ಸಿಎಂ ಸಿದ್ದರಾಮಯ್ಯಗೆ (Siddaramaiah) ಟಾಂಗ್ ಕೊಟ್ಟಿದ್ದಾರೆ.
ಚಿತ್ರದುರ್ಗದಲ್ಲಿ (Chitradurga) ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಆತ್ಮಸಾಕ್ಷಿಗೆ ಅನುಗುಣ ನಡೆಯುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಮುಡಾ ಹಗರಣದಲ್ಲಿ (MUDA Scam) ಸಿಲುಕಿರುವ ಸಿಎಂ ಸಿದ್ದರಾಮಯ್ಯ ಆತ್ಮಸಾಕ್ಷಿ ಬಗ್ಗೆ ಮಾತನಾಡಿದ್ದಾರೆ. ಅಕ್ರಮವಾಗಿ ಬೇನಾಮಿ ಆಸ್ತಿ ಪಡೆದುಕೊಳ್ಳುವುದು ಆತ್ಮಸಾಕ್ಷಿಯಾ? ಅಲ್ಲದೇ, ಈ ಕೇಸ್ ವಿಚಾರದಲ್ಲಿ ಕೋರ್ಟ್ ಆದೇಶ ನೀಡಿದ ದಿನವೇ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಿತ್ತು ಎಂದರು. ಇದನ್ನೂ ಓದಿ: ಸಿಎಂ ಪತ್ನಿ ಸೈಟ್ ಮರಳಿಸಿದ್ದು ತಪ್ಪೇ? ಈ ಕೇಸ್‌ನಲ್ಲಿ ತಪ್ಪೇನಿದೆ: ತಿಮ್ಮಾಪುರ್ ಪ್ರಶ್ನೆ
ಈಗಲೂ ಕಾಲ ಮಿಂಚಿಲ್ಲ. ಸಿಎಂ ಸ್ಥಾನಕ್ಕೆ ಅವರು ರಾಜೀನಾಮೆ ನೀಡಲಿ. ಹಾಗೆಯೇ ಸಿಎಂ ಸಿದ್ದರಾಮಯ್ಯ ಅಷ್ಟೊಂದು ತಪ್ಪು ಮಾಡಿಲ್ಲವೆಂಬ ಖಚಿತತೆ ಇದ್ದಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಲಿ. ಆ ಪ್ರಕರಣದಲ್ಲಿ ಒಂದು ವೇಳೆ ಕ್ಲೀನ್ ಚಿಟ್ ಸಿಕ್ಕರೆ ಮತ್ತೆ ಅವರೇ ಸಿಎಂ ಆಗಲಿ ಎಂದರು. ಈ ವೇಳೆ ಕೇಂದ್ರ ಸಚಿವ ಸೋಮಣ್ಣ, ಎಂಎಲ್‌ಸಿ ನವೀನ್ ಉಪಸ್ಥಿತರಿದ್ದರು. ಇದನ್ನೂ ಓದಿ: ಯತ್ನಾಳ್ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು: ಮಾಜಿ ಸಂಸದ ಮುನಿಸ್ವಾಮಿ
– ಮುಡಾ ಆಯುಕ್ತರನ್ನು ಬಂಧಿಸುವಂತೆ ಕೇಂದ್ರ ಸಚಿವ ಹೆಚ್‌ಡಿಕೆ ಆಗ್ರಹ
ಬೆಂಗಳೂರು: ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯ (Parvathi Siddaramaiah) ಅವರು ತಮಗೆ ಹಂಚಿಕೆ ಮಾಡಲಾಗಿದ್ದ 14 ನಿವೇಶನಗಳನ್ನು ವಾಪಸ್ ನೀಡಿದ ಬಳಿಕವು ಗದ್ದಲ ಇನ್ನಷ್ಟು ತೀವ್ರಗೊಂಡಿದೆ. ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಇಡಿ ಅಧಿಕಾರಿಗಳು ಮುಡಾ ಆಯುಕ್ತರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು, ಕುಮಾರಸ್ವಾಮಿ ಅವರನ್ನು ಅರೆಸ್ಟ್ ಮಾಡಲಿ ಎಂದು ಹೇಳಿದ್ದಾರೆ.
ಮೂಡಾ ಸೈಟ್ (MUDA Site) ವಿಚಾರದಲ್ಲಿ ಅಧಿಕಾರಿಗಳು ಸಿಎಂ ಪರ ಕೆಲಸ ಮಾಡ್ತಿದ್ದಾರೆ. ಕೋರ್ಟ್‌ನಲ್ಲಿ 62 ಕೋಟಿ ಬೆಲೆ ಬಾಳುವ ಜಾಗವದು, ನಮಗೆ 62 ಕೋಟಿ ನೀಡಿ ಜಾಗ ವಾಪಸ್ ಪಡೆಯಿರಿ ಅಂತಾ ಹೇಳಿದ್ದು, ಈಗ ತನಿಖೆಯ ದಿಕ್ಕು ತಪ್ಪಿಸಲು ಸೈಟ್ ವಾಪಸ್ ಕೊಡೋ ಡ್ರಾಮವನ್ನ ಮಾಡಿದ್ದಾರೆ. ಕೋರ್ಟ್‌ನಲ್ಲಿ ಕೇಸ್ ಇದೆ. ಮೂಡಾ ಆಯುಕ್ತರು ಯಾವ ಆಧಾರದ ಮೇಲೆ ಕೇಸ್ ವಾಪಸ್ ಪಡೆದ್ರು ಅನ್ನೋದು ತನಿಖೆಯಾಗಬೇಕು. ಲೋಕಾಯುಕ್ತದವರು ಮೊದಲು ಮೂಡಾ ಆಯುಕ್ತರನ್ನ ಬಂಧಿಸಬೇಕು, ಜಾರಿ ನಿರ್ದೇಶನಾಲಯವು ಮುಡಾ ವಿಚಾರದಲ್ಲಿ ತನಿಖೆ ಶುರು ಮಾಡ್ತಿದ್ದಂತೆ ಈ ರೀತಿ ಯಾಕೆ ಮಾಡಿದ್ರು ಎಂದು ಪ್ರಶ್ನೆ ಮಾಡಿದ್ದಾರೆ.
ಮುಡಾ ಆಯುಕ್ತರು ಹೇಳಿದ್ದೇನು?
ಸಿಎಂ ಪತ್ನಿ ಪಾರ್ವತಮ್ಮ ಸಿದ್ದರಾಮಯ್ಯ ಅವರು ಸ್ವ ಇಚ಼್ಛೆಯಿಂದ ಸೈಟ್ ವಾಪಸ್ ಮಾಡಿದ್ದರ ಕುರಿತು ಮೈಸೂರು ನಗರಾಭಿವೃದ್ಧಿ ಪ್ರಾಧೀಕಾರದ ಆಯುಕ್ತ ರಘನಂದನ್ ಪ್ರತಿಕ್ರಿಯೆ ನೀಡಿದ್ದರು. ಈಗ ಸ್ವ ಇಚ್ಛೆಯಿಂದ ಸೈಟ್ ವಾಪಸ್ ಕೊಟ್ಟಿದ್ದಾರೆ. ಕಾನೂನು ಪರಿಗಣಿಸಿ ನಾವು ಪಾರ್ವತಮ್ಮ ಅವರ ಹೆಸರಿನಲ್ಲಿ ಇದ್ದ 14 ಸೈಟ್‌ಗಳ ಸೇಲ್ ಡೀಡ್ ರದ್ದು ಮಾಡಿದ್ದೇವೆ. ಈಗ 14 ನಿವೇಶನ ಮುಡಾ ವ್ಯಾಪ್ತಿಗೆ ಬಂದಿವೆ. ಈ ಸೈಟ್‌ಗಳನ್ನು ಬೇರೆಯವರಿಗೆ ಹಂಚಬಹುದಾ ಅಥವಾ ತನಿಖೆ ಮುಗಿಯುವವರೆಗೂ ಅದನ್ನು ಹಂಚಬಾರದ ಎಂಬ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆಯುತ್ತೇವೆ. ಪಾರ್ವತಿ ಅವರ ಸೈಟ್‌ಗಳು ತಮ್ಮ ವಶಕ್ಕೆ ಪಡೆದ ಬಗ್ಗೆ ತನಿಖಾ ಸಂಸ್ಥೆಗಳಿಗೆ ಮಾಹಿತಿ ಕೊಡುತ್ತೇವೆ ಎಂದಿದ್ದರು.
ಮುಡಾ ಕಾರ್ಯದರ್ಶಿ ಹೇಳಿದ್ದೇನು?
1991ನ ರೂಲ್ಸ್ 8ನಲ್ಲಿ ಸ್ವ ಇಚ್ಚೆಯಿಂದ ಸೈಟ್ ಕೊಡಬಹುದು. ಆ ಸೈಟ್ ಅನ್ನು ನಾವು ಪಡೆದುಕೊಳ್ಳಲು ಅವಕಾಶವಿದೆ. ನಮ್ಮ ಬಳಿ ಮಾಲೀಕರು ಬಂದಿಲ್ಲ. ಅವರೇ ಖಾಸಗಿಯಾಗಿಯೂ ಅಧಿಕಾರಿಗಳನ್ನು ಕರೆಸಿಕೊಳ್ಳಬಹುದು. ಅದರಂತೆ ಅವರ ಸ್ಥಳಕ್ಕೆ ಹೋಗಿ ಪ್ರಕ್ರಿಯೆ ನಡೆಸಲಾಗುತ್ತದೆ. ನಾವು ಈಗ ಸೈಟ್ ವಾಪಸ್ ಪಡೆದುಕೊಂಡಿದ್ದೇವೆ. ಈಗ ಇದನ್ನು ರಿಜಿಸ್ಟರ್‌ಗೆ ಕಳುಹಿಸಿಕೊಟ್ಟಿದ್ದೇವೆ. ಮುಂದಿನ ಎಲ್ಲಾ ಪ್ರಕ್ರಿಯೆಯನ್ನು ರಿಜಿಸ್ಟರ್ ಮಾಡುತ್ತಾರೆ ಎಂದು ಮೈಸೂರು ಮುಡಾ (MUDA) ಕಾರ್ಯದರ್ಶಿ ಪ್ರಸನ್ನ ಕುಮಾರ್ ಪ್ರತಿಕ್ರಿಯಿಸಿದ್ದರು. ಇದನ್ನೂ ಓದಿ: 14 ಸೈಟ್ ಕೇಸ್‌ಗಿಂತಲೂ ಇದು ದೊಡ್ಡ ಪ್ರಕರಣ – ಹಳೆಯ ಡಿನೋಟಿಫಿಕೇಶನ್ ಕೆದಕಿ ಸಿಎಂಗೆ ಹೆಚ್‌ಡಿಕೆ ಗುದ್ದು