Tag: MUDA Scam

  • MUDA Scam| ಕೈ ನಾಯಕ ಪಾಪಣ್ಣಗೆ ವಿಜಯನಗರದ 4ನೇ ಹಂತದಲ್ಲಿ ಹಂಚಿಕೆಯಾಗಿತ್ತು 31 ಸೈಟ್‌

    MUDA Scam| ಕೈ ನಾಯಕ ಪಾಪಣ್ಣಗೆ ವಿಜಯನಗರದ 4ನೇ ಹಂತದಲ್ಲಿ ಹಂಚಿಕೆಯಾಗಿತ್ತು 31 ಸೈಟ್‌

    – ಇಡಿಯಿಂದ 59 ಮುಡಾ ಸೈಟ್‌ ಮುಟ್ಟುಗೋಲು

    ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಹಗರಣ(MUDA Scam) ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಬೇಟೆಯನ್ನು ಮುಂದುವರೆಸಿದೆ. ಮುಡಾದ ಮಾಜಿ ಆಯುಕ್ತ ದಿನೇಶ್ ಕುಮಾರ್ (Dinesh Kumar) ಬಂಧನದ ಬಳಿಕ 59 ಕ್ಕೂ ಹೆಚ್ಚು ಸೈಟ್ ಗಳನ್ನು ಮುಟ್ಟುಗೋಲು ಹಾಕಿಕೊಂಡು ವಶಕ್ಕೆ ಪಡೆದುಕೊಂಡಿದೆ.

    ವಶಪಡಿಸಿಕೊಂಡ 60 ಕೋಟಿ ರೂ. ಮೌಲ್ಯದ ಸೈಟ್‌ಗಳಲ್ಲಿ ಕಾಂಗ್ರೆಸ್ ಮುಖಂಡ ಎ ಪಾಪಣ್ಣ (Papanna) ಅವರದ್ದೇ ಅಗ್ರಪಾಲು. ಈ ಬಗ್ಗೆ ಪಬ್ಲಿಕ್ ಟಿವಿಯ ಬಳಿ ಎಕ್ಸ್ ಕ್ಲೂಸಿವ್ ದಾಖಲೆ ಸಿಕ್ಕಿದ್ದು ಎ ಪಾಪಣ್ಣ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಇದನ್ನೂ ಓದಿ:  ಇದನ್ನೂಓದಿ: ಗಗನಕ್ಕೇರಿದ ಬಂಗಾರದ ಬೆಲೆ 1.5 ಲಕ್ಷದ ಗಡಿ ದಾಟಿದ ಕೆ.ಜಿ ಬೆಳ್ಳಿ!

    ಪಾಪಣ್ಣ ಬಳಿಯಿದ್ದ 31 ಸೈಟ್‌ಗಳು ವಿಜಯನಗರದ ನಾಲ್ಕನೇ ಹಂತದ್ದೇ ಆಗಿರುವುದು ವಿಶೇಷ. ಮುಡಾ ಮಾಜಿ ಅಧ್ಯಕ್ಷ ಮರೀಗೌಡಗೆ ಕೂಡ ಅಕ್ರಮ ಸೈಟ್ ಮಂಜೂರು ಮಾಡಲಾಗಿದೆ. ಇದನ್ನೂ ಓದಿ:  ವಿಮೆ ಹಣದ ಮೇಲೆ ಕಣ್ಣು – ಅಳಿಯನನ್ನೇ ಕೊಲೆ ಮಾಡಿದ ಮಾವ & ಗ್ಯಾಂಗ್

    ದಿನೇಶ್ ಕುಮಾರ್ ತನ್ನ ಮನೆಯ ಕೆಲಸಕ್ಕಿದ್ದ ರಮೇಶ್‌ ಹೆಸರಲ್ಲೂ ಕೋಟ್ಯಂತರ ರೂ. ಆಸ್ತಿ ಮಾಡಿದ್ದಾರೆ. ಅತ್ತೆ, ಮಾವ, ಬಾಮೈದಾ ಹೆಸರಲ್ಲಿ ಕೋಟಿ ಕೋಟಿ ಆಸ್ತಿ ಮಾಡಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.

  • ಮುಡಾ ಹಗರಣ – ಮಾಜಿ ಆಯುಕ್ತ ದಿನೇಶ್‌ ಕುಮಾರ್‌ ಇಡಿಯಿಂದ ಅರೆಸ್ಟ್‌

    ಮುಡಾ ಹಗರಣ – ಮಾಜಿ ಆಯುಕ್ತ ದಿನೇಶ್‌ ಕುಮಾರ್‌ ಇಡಿಯಿಂದ ಅರೆಸ್ಟ್‌

    ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಗರಣ (MUDA Scam) ಸಂಬಂಧಿಸಿದಂತೆ ಮಾಜಿ ಆಯುಕ್ತ ದಿನೇಶ್‌ ಕುಮಾರ್‌ (Dinesh Kumar) ಅವರನ್ನು ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಬಂಧಿಸಿದ್ದಾರೆ.

    ಇಂದು ಇಡಿ ವಿಚಾರಣೆಗೆ ಬರುವಂತೆ ದಿನೇಶ್‌ ಕುಮಾರ್‌ಗೆ ನೋಟಿಸ್‌ ನೀಡಿತ್ತು. ವಿಚಾರಣೆಗೆ ಬಂದ ವೇಳೆ ದಿನೇಶ್‌ ಕುಮಾರ್‌ ಅವರನ್ನು ಬಂಧನ ಮಾಡಲಾಗಿದ್ದು ನ್ಯಾಯಾಧೀಶರ ಮುಂದೆ ಹಾಜರು ಪಡಿಸಬೇಕಿದೆ. ದಿನೇಶ್ ಅಕ್ರಮ ಹಣ ವರ್ಗಾವಣೆ ಮಾಡಿರೋದು ಸಾಬೀತಾಗಿದೆ ಎಂದು ಈ ಹಿಂದೆ ಇಡಿ ಹೇಳಿತ್ತು. ಇದನ್ನೂ ಓದಿ:  ಮುಡಾ ಹಗರಣ : ಇಡಿಯಿಂದ 100 ಕೋಟಿ ಮೌಲ್ಯದ 92 ಆಸ್ತಿ ಮುಟ್ಟುಗೋಲು

    ನಕಲಿ ದಾಖಲೆಗಳನ್ನು ದಿನೇಶ್ ಸೃಷ್ಟಿ ಮಾಡಿ ಈ ದಾಖಲೆಗಳ ಮೂಲಕ ಸೈಟ್ ಗಳನ್ನು ಮರುಹಂಚಿಕೆ ಮಾಡಿ ಲಾಭ ಮಾಡಿದ್ದಾರೆ. ಹಣ ಪಡೆದು ಆಸ್ತಿ ಗಳಿಕೆ ಮಾಡಿರುವುದಕ್ಕೆ ದಾಖಲೆ ಪತ್ತೆಯಾಗಿದೆ ಎಂದು ಇಡಿ ಹೇಳಿದೆ.

    2022ರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಜಿ.ಟಿ.ದಿನೇಶ್ ಕುಮಾರ್ ಅಧಿಕಾರ ಸ್ವೀಕರಿಸಿದ್ದರು. ದಿನೇಶ್ ಕುಮಾರ್ ವಿರುದ್ಧ ಮುಡಾದಲ್ಲಿ 50:50 ಅನುಪಾತದಡಿ ಸೈಟ್ ಹಂಚಿಕೆಯಲ್ಲಿ ಅಕ್ರಮ ಆರೋಪ ಕೇಳಿ ಬಂದ ಹಿನ್ನೆಲೆ ಸರ್ಕಾರ ಅವರನ್ನು ವರ್ಗಾವಣೆ ಮಾಡಿತ್ತು. ಯಾವುದೇ ಸ್ಥಳ ತೋರಿಸದೇ ದಿನೇಶ್ ಕುಮಾರ್‌ ಅವರನ್ನು ವರ್ಗಾವಣೆ ಮಾಡಿದ್ದ ಸರ್ಕಾರ ನಂತರ ಹಾವೇರಿ ವಿವಿಯ ಕುಲಸಚಿವ ಹುದ್ದೆಯನ್ನು ನೀಡಿತ್ತು. ಕುಲಸಚಿವ ಹುದ್ದೆಯನ್ನು ನೀಡಿದ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಸರ್ಕಾರ ಕೊನೆಗೆ ಆ ಆದೇಶವನ್ನೇ ರದ್ದು ಮಾಡಿತ್ತು. ಇದನ್ನೂ ಓದಿ:  ಮುಡಾ ಮಾಜಿ ಆಯುಕ್ತನ ಹೆಸ್ರಲ್ಲಿ 198, ಎಂಎಲ್‌ಸಿ ಹೆಸ್ರಲ್ಲಿ 128 ಬೇನಾಮಿ ಸೈಟ್ – 631 ಸೈಟುಗಳ ಮಾಹಿತಿ ಕೇಳಿದ ಇಡಿ

  • ಮುಡಾ ಹಗರಣ | ಸಿಎಂ ಪತ್ನಿಗೆ ಹೈಕೋರ್ಟ್ ನೋಟಿಸ್

    ಮುಡಾ ಹಗರಣ | ಸಿಎಂ ಪತ್ನಿಗೆ ಹೈಕೋರ್ಟ್ ನೋಟಿಸ್

    ಬೆಂಗಳೂರು/ಮೈಸೂರು: ಮುಡಾ ಸೈಟ್ ಹಂಚಿಕೆ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ (CM Siddaramaiah) ಪತ್ನಿ ಪಾರ್ವತಿ ಸಿದ್ದರಾಮಯ್ಯ (Parvathi Siddaramaiah) ಅವರಿಗೆ ಹೈಕೋರ್ಟ್ ನೋಟಿಸ್ ನೀಡಿದೆ.ಇದನ್ನೂ ಓದಿ: ನಮ್ಮಿಬ್ಬರನ್ನು ದೂರ ಮಾಡ್ತಾರೆ ಎಂಬ ಭಯದಲ್ಲಿ ಕಾಲುವೆಗೆ ಹಾರಿ ಪ್ರೇಮಿಗಳು ಆತ್ಮಹತ್ಯೆ

    ಮುಡಾ (MUDA) ತನಿಖೆಗೆ ರಾಜ್ಯಪಾಲರ ಅನುಮತಿ ಬಗ್ಗೆ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಇಂದು ನಡೆದ ಹೈಕೋರ್ಟ್ ವಿಚಾರಣೆ ನಡೆಸಿತು. ಈ ವೇಳೆ ಹಂಗಾಮಿ ಮುಖ್ಯ ನ್ಯಾ.ಕಾಮೇಶ್ವರ ರಾವ್ ಹಾಗೂ ಸಿಎಂ ಜೋಷಿ ಅವರು ಎಲ್ಲಾ ಮನವಿಗಳು ಒಟ್ಟಿಗೆ ಬರಲಿ. ಆದರೆ ಟ್ಯಾಗ್ ಮಾಡುವುದು ಬೇಡ ಎಂದು ಎಜಿ ಶಶಿಕಿರಣ್ ಶೆಟ್ಟಿ ಮನವಿ ಮಾಡಿದ್ದಾರೆ.

    ಈ ವೇಳೆ ಸಿಬಿಐ ತನಿಖೆಗೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರಿಗೆ ಹೈಕೋರ್ಟ್ ನೋಟಿಸ್ (High Court) ನೀಡಿದ್ದು, ಸೆ.4ಕ್ಕೆ ಅರ್ಜಿ ವಿಚಾರಣೆ ಮುಂದೂಡಿಕೆ ಮಾಡಿದೆ.ಇದನ್ನೂ ಓದಿ: ಕೊಯಮತ್ತೂರು ಬಾಂಬ್ ಬ್ಲಾಸ್ಟ್‌ನ ಪ್ರಮುಖ ಆರೋಪಿ ವಿಜಯಪುರದಲ್ಲಿ ಅರೆಸ್ಟ್

  • MUDA Scam| ತನಿಖಾಧಿಕಾರಿ ಬದಲಾವಣೆಗೆ ನ್ಯಾಯಾಲಯಕ್ಕೆ ಅರ್ಜಿ

    MUDA Scam| ತನಿಖಾಧಿಕಾರಿ ಬದಲಾವಣೆಗೆ ನ್ಯಾಯಾಲಯಕ್ಕೆ ಅರ್ಜಿ

    ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಗರಣದ (MUDA Scam) ತನಿಖಾಧಿಕಾರಿ ಬದಲಾಯಿಸುವಂತೆ ನಾನು ಅರ್ಜಿ ಹಾಕುತ್ತೇನೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ (Snehamayi Krishna) ಹೇಳಿದ್ದಾರೆ.

    ಮೂಡಾ ಹಗರಣ ಪ್ರಕರಣದಲ್ಲಿ ಜನ ಪ್ರತಿನಿಧಿ ನ್ಯಾಯಾಲಯದ ಆದೇಶದಂತೆ ಇಂದು ಮೈಸೂರು ಲೋಕಾಯುಕ್ತರು ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಬೇಕಿದೆ. ಈ ವರದಿಯ ಅಂಶಗಳು ಖುದ್ದು ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಮೇಲೆಯೇ ಪ್ರಭಾವ ಬೀರುವ ಸಾಧ್ಯತೆ ಇದೆ. ಇದನ್ನೂ ಓದಿ: ಪತ್ನಿಯನ್ನು ಕೊಂದು ನಾಪತ್ತೆಯಾಗಿದ್ದ ಪತಿ, ಮುಳ್ಳಯ್ಯನಗಿರಿ ಕಾಡಿನಲ್ಲಿ ಬಂಧನ

     

    ಈ ಬಗ್ಗೆ ದೂರದಾರ ಸ್ನೇಹಮಯಿ ಕೃಷ್ಣ ಈ ಬಗ್ಗೆ ಪ್ರತಿಕ್ರಿಯಿಸಿ ಲೋಕಾಯುಕ್ತ ಇಂದು ಕೂಡ ಅಂತಿಮ ವರದಿ ಸಲ್ಲಿಸುವುದು ಅನುಮಾನ ಇದೆ. ಅವರು ಮತ್ತೆ ಸಮಯವನ್ನು ಕೇಳುತ್ತಾರೆ. ನನಗೆ ಲೋಕಾಯುಕ್ತ ಎಸ್‌ಪಿ ಬಗ್ಗೆ ಬಹಳಷ್ಟು ಅನುಮಾನವಿದ್ದು ತನಿಖಾಧಿಕಾರಿ ಬದಲಾಯಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಹಾಕುತ್ತೇನೆ ಎಂದು ಹೇಳಿದ್ದಾರೆ.

  • ಮುಡಾ ಹಗರಣ | ಸಿಎಂಗೆ ನಿರಾಸೆ – ತನಿಖೆ ಮುಂದುವರಿಸಿ, ಅಂತಿಮ ವರದಿ ಸಲ್ಲಿಕೆಗೆ ಆದೇಶ

    ಮುಡಾ ಹಗರಣ | ಸಿಎಂಗೆ ನಿರಾಸೆ – ತನಿಖೆ ಮುಂದುವರಿಸಿ, ಅಂತಿಮ ವರದಿ ಸಲ್ಲಿಕೆಗೆ ಆದೇಶ

    – ಕೇಸ್ ಮುಚ್ಚಿ ಹಾಕಲು ಅವಕಾಶ ಕೊಡಲ್ಲ ಎಂದ ಸ್ನೇಹಮಯಿ

    ಬೆಂಗಳೂರು: ಮುಡಾ ಹಗರಣದಲ್ಲಿ (MUDA Scam) ಬಿಗ್ ರಿಲೀಫ್ ನಿರೀಕ್ಷೆಯಲ್ಲಿದ್ದ ಸಿಎಂ ಸಿದ್ಗೆದರಾಮಯ್ಯಗೆ (Siddaramaiah) ನಿರಾಸೆಯಾಗಿದೆ. ತನಿಖೆ ಮುಂದುವರಿಸಿ, ಅಂತಿಮ ವರದಿ ಸಲ್ಲಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.

    ಸಿಎಂ ವಿರುದ್ಧದ ಬಿ ರಿಪೋರ್ಟ್ ವಿರೋಧಿಸಿ ದೂರುದಾರ ಸ್ನೇಹಮಯಿ ಕೃಷ್ಣ (Snehamayi Krishna) ಮತ್ತು ಇಡಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿ, ಆದೇಶ ಕಾಯ್ದಿರಿಸಿದ್ದ ನ್ಯಾಯಾಲಯ ಅಂತಿಮ ವರದಿ ಬಳಿಕ ಬಿ ರಿಪೋರ್ಟ್ ಬಗ್ಗೆ ತೀರ್ಮಾನ ಮಾಡುವುದಾಗಿ ಹೇಳಿದೆ. ತನಿಖೆ ಮುಂದುವರಿಸಲು ಅನುಮತಿ ನೀಡುವಂತೆ ಕೋರಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಮನವಿಯನ್ನು ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಪುರಸ್ಕರಿಸಿದ್ದಾರೆ. ಇದನ್ನೂ ಓದಿ: ಈ ಬಾರಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯ ಸಾಧ್ಯತೆ – ಮುಂಗಾರು ಮಳೆ ಬಗ್ಗೆ ಹವಾಮಾನ ಇಲಾಖೆ ಮಾಹಿತಿ

    ಆದೇಶದ ಬಳಿಕ ಮಾತನಾಡಿದ ದೂರುದಾರ ಸ್ನೇಹಮಯಿ ಕೃಷ್ಣ ಅವರು, ಲೋಕಾ ಅಧಿಕಾರಿಗಳು ಸಿಎಂ ಕುಟುಂಬವನ್ನ ರಕ್ಷಣೆ ಮಾಡುವುದಕ್ಕೆ ತನಿಖೆ ಪೂರ್ಣಗೊಳಿಸದೇ ವರದಿ ಸಲ್ಲಿಕೆ ಮಾಡಿದ್ದರು. ಹಾಗಾಗಿ ಕೋರ್ಟ್ ಅಂತಿಮ ವರದಿಯನ್ನ ಸಲ್ಲಿಸಲು ಕೋರ್ಟ್ ಸೂಚಿಸಿದೆ ಎಂದಿದ್ದಾರೆ. ಇದನ್ನೂ ಓದಿ: ನವಜಾತ ಶಿಶುಗಳ ಕಳ್ಳಸಾಗಣೆ ಮಾಡಿದರೆ ಆಸ್ಪತ್ರೆಗಳ ಪರವಾನಿಗೆ ಕೂಡಲೇ ಅಮಾನತುಗೊಳಿಸಿ: ಸುಪ್ರೀಂ

    ತನಿಖಾಧಿಕಾರಿಗಳಿಗೆ ತನಿಖೆಯ ಬಗ್ಗೆ ತಿಳಿದಿಲ್ಲ. ಮಾನ್ಯ ನ್ಯಾಯಾಲಯದ ಇಂದಿನ ಆದೇಶದಲ್ಲಿ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಸಿಎಂ ಅಧಿಕಾರ ದುರುಪಯೋಗಪಡಿಸಿಕೊಂಡು ಕೇಸ್ ಮುಚ್ಚಿ ಹಾಕುವ ಪ್ರಯತ್ನಕ್ಕೆ ನಾನು ಅವಕಾಶ ಕೊಡಲ್ಲ ಎಂದು ಹೇಳಿದ್ದಾರೆ.

  • ಮುಡಾದಲ್ಲಿ ಮತ್ತೊಂದು ಗೋಲ್ಮಾಲ್‌ – ವಾರಸುದಾರ ಅಲ್ಲದವನಿಗೆ ಖಾತೆ

    ಮುಡಾದಲ್ಲಿ ಮತ್ತೊಂದು ಗೋಲ್ಮಾಲ್‌ – ವಾರಸುದಾರ ಅಲ್ಲದವನಿಗೆ ಖಾತೆ

    ಮೈಸೂರು: ಮುಡಾದಲ್ಲಿ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ – MUDA) 50:50 ಹಗರಣ ಆಯ್ತು. ಈಗ ಪೌತಿ ಖಾತೆ ಕರ್ಮಕಾಂಡ ಬಗೆದಷ್ಟು ಬಯಲಾಗುತ್ತಿದೆ.

    ನಕಲಿ ದಾಖಲೆ ಸೃಷ್ಟಿಸಿ ಮಾದರಿ ಮನೆಯ (Model House) ಪೌತಿ ಖಾತೆಯನ್ನು ಅಧಿಕಾರಿಗಳು ಮಾಡಿರುವುದು ದಾಖಲಾತಿಗಳಿಂದ ಬೆಳಕಿಗೆ ಬಂದಿದೆ.

    ಮುಡಾ ವ್ಯವಸ್ಥಾಪಕ ಹಾಗೂ ತಹಶೀಲ್ದಾರ್ ಅಕ್ರಮವಾಗಿ ಪೌತಿ ಖಾತೆ ಮಾಡಿಕೊಟ್ಟಿದ್ದಾರೆ. ಈ ಸಂಬಂಧ ವ್ಯವಸ್ಥಾಪಕ ಸೋಮಸುಂದರ್‌ ಅವ್ರನ್ನ ಅಮಾನತುಗೊಳಿಸಿ ಮುಡಾ ಆಯುಕ್ತ ರಘುನಂದನ್ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಮುಡಾ ವಿಶೇಷ ತಹಶೀಲ್ದಾರ್ ಕೆ.ವಿ ರಾಜಶೇಖರ್ ವಿರುದ್ಧವೂ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಿದ್ದಾರೆ.

    ಏನಿದು ಗೋಲ್ಮಾಲ್‌ ಕೇಸ್‌?
    1982ರ ನವೆಂಬರ್ 2ರಂದು ಮೈಸೂರಿನ ಗೋಕುಲಂ 3ನೇ ಹಂತದಲ್ಲಿ ನಿರ್ಮಿಸಲಾಗಿದ್ದ ಮಾಡೆಲ್ ಹೌಸ್. ಮನೆ ಸಂಖ್ಯೆ 867 (30*40) ಅನ್ನು ಜಯಲಕ್ಷ್ಮೀಪುರಂನ ಲಿನಿಯನ್ ಶಾರದಾ ಜೋಸೆಫ್ ಎಂಬುವವರಿಗೆ ಮಂಜೂರು ಮಾಡಲಾಗಿತ್ತು. ಪೂರ್ಣ ಹಣ ಪಾವತಿಸಿಕೊಂಡು ಕರಾರು ಪತ್ರ, ದೃಢೀಕರಣ ಪತ್ರ ಸೇರಿದಂತೆ ಎಲ್ಲಾ ದಾಖಲೆಗಳನ್ನೂ ನೀಡಲಾಗಿತ್ತು.

    ಮನೆ ಮಂಜೂರಾತಿದಾರರು 1983ರ ಸೆಪ್ಟೆಂಬರ್ 3ರಂದು ಮರಣ ಹೊಂದಿದ್ದರು. ಆದ್ರೆ 2024ರ ಮಾರ್ಚ್ 26ರಂದು ಮೃತರ ಕಾನೂನುಬದ್ಧ ವಾರಸುದಾರ ಅಲ್ಲದ ಸಿವಿಲ್ ಮಾರ್ಕಸ್ ಜೋಸೆಫ್ ಎಂಬವರಿಗೆ ನಕಲಿ ವಂಶವೃಕ್ಷ, ಆಧಾರ್ ಸೃಷ್ಟಿಸಿ ಪೌತಿ ಖಾತೆ. ಮಾಡಿ ಕೊಟ್ಟಿದ್ದಾರೆ. ಇದು ದಾಖಲಾತಿಗಳಲ್ಲಿ ಸಾಬೀತಾಗಿದೆ.

  • ಮುಡಾ ಹಗರಣ – ಇಂದು ಸಿಎಂ ಸಿದ್ದರಾಮಯ್ಯಗೆ ನಿರ್ಣಾಯಕ ದಿನ

    ಮುಡಾ ಹಗರಣ – ಇಂದು ಸಿಎಂ ಸಿದ್ದರಾಮಯ್ಯಗೆ ನಿರ್ಣಾಯಕ ದಿನ

    – ಬಿ ರಿಪೋರ್ಟ್ ವಿರೋಧಿಸಿ ಇ.ಡಿ ವಾದ

    ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaih) ಅವರಿಗೆ ಇಂದು ಮಹತ್ವದ ದಿನ. ಮುಡಾ ಹಗರಣಕ್ಕೆ (MUDA Scam) ಸಂಬಂಧಿಸಿದಂತೆ ಲೋಕಾಯುಕ್ತ ಸಲ್ಲಿಕೆ ಮಾಡಿದ್ದ ಬಿ ರಿಪೋರ್ಟ್‌ಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಆದೇಶ ನೀಡಲಿದೆ.

    ಸುಮಾರು ನಾಲ್ಕು ತಿಂಗಳುಗಳ ಕಾಲ ತನಿಖೆ ನಡೆಸಿದ ಲೋಕಾಯುಕ್ತ ಸಿಎಂ ಮತ್ತು ಸಿಎಂ ಪತ್ನಿ ಸೇರಿದಂತೆ ನಾಲ್ವರಿಗೆ ಕ್ಲೀನ್ ಚಿಟ್ ನೀಡಿತ್ತು. ಅಧಿಕಾರ ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲ ಎಂದು ಅಂತಿಮ ವರದಿ ಸಲ್ಲಿಸಿತ್ತು. ಆದರೆ ಅಂತಿಮ ವರದಿ ಪ್ರಶ್ನಿಸಿದ್ದ ದೂರುದಾರ ಸ್ನೇಹಮಯಿ ಕೃಷ್ಣ ಅಂತಿಮ ವರದಿಯಲ್ಲಿ ಇರುವ ಲೋಪದೋಷಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ವಾದ-ಪ್ರತಿವಾದ ಆಲಿಸಿರುವ ನ್ಯಾಯಾಲಯ ಇಂದು ಆದೇಶ ನೀಡಲಿದೆ. ಇದನ್ನೂ ಓದಿ: ಇಂದು ಪಿಯುಸಿ ಫಲಿತಾಂಶ ಪ್ರಕಟ – ಯಾವ ವೆಬ್‌ಸೈಟ್‌ನಲ್ಲಿ ನೋಡಬಹುದು? ಚೆಕ್‌ ಮಾಡೋದು ಹೇಗೆ?

    ಆದರೆ ಸ್ನೇಹಮಯಿ ಕೃಷ್ಣ ಅವರ ಜೊತೆಗೆ ಇ.ಡಿ ಅಧಿಕಾರಿಗಳು ಬಿ ರಿಪೋರ್ಟ್ ವಿರುದ್ಧ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಇ.ಡಿಯ ತಕರಾರು ಅರ್ಜಿ ಮಾನ್ಯತೆಯ ವಾದ-ಪ್ರತಿವಾದ ನಡೆಯಲಿದೆ. ಈ ನಡುವೆ ಬಿ ರಿಪೋರ್ಟ್ ಅನ್ನು ನ್ಯಾಯಾಲಯ ಒಪ್ಪುತ್ತಾ ಅಥವಾ ಮರು ತನಿಖೆಗೆ ಆದೇಶ ನೀಡುತ್ತಾ ಎಂದು ಕಾದುನೋಡಬೇಕಿದೆ.  ಇದನ್ನೂ ಓದಿ: ಬೆಟ್ಟಿಂಗ್ ಆಪ್ ಪ್ರಮೋಟ್ ಆರೋಪ – ಸೋನು ಗೌಡ ಸೇರಿ 100ಕ್ಕೂ ಹೆಚ್ಚು ರೀಲ್ಸ್ ಸ್ಟಾರ್‌ಗಳ ವಿಚಾರಣೆ

  • ಲೋಕಾಯುಕ್ತ ಕ್ಲೀನ್‌ ಚಿಟ್‌ ವರದಿ ತಿರಸ್ಕರಿಸುವಂತೆ ಇಡಿ ತಕರಾರು ಅರ್ಜಿ

    ಲೋಕಾಯುಕ್ತ ಕ್ಲೀನ್‌ ಚಿಟ್‌ ವರದಿ ತಿರಸ್ಕರಿಸುವಂತೆ ಇಡಿ ತಕರಾರು ಅರ್ಜಿ

    ಮೈಸೂರು: ಮುಡಾ ಹಗರಣ ಪ್ರಕರಣದಲ್ಲಿ ಸಿಎಂ ಕುಟುಂಬಕ್ಕೆ ಲೋಕಾಯುಕ್ತ (Lokayukta) ನೀಡಿರುವ ಕ್ಲೀನ್ ಚಿಟ್‌ ರೀಪೋರ್ಟ್ ಅನ್ನು ತಿರಸ್ಕರಿಸುವಂತೆ ಜಾರಿ ನಿರ್ದೇಶನಾಲಯ (ED) ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿದೆ.

    ಸಿಎಂ ಹಾಗೂ ಸಿಎಂ ಕುಟುಂಬದ ವಿರುದ್ಧ ಸಾಕಷ್ಟು ಸಾಕ್ಷಿಗಳಿವೆ. ಆದರೂ ಲೋಕಾಯುಕ್ತದವರು ಕ್ಲೀನ್ ಚೀಟ್ ಕೊಟ್ಟಿದ್ದಾರೆ. ಇದು ಸರಿ ಇಲ್ಲ. ಹೀಗಾಗಿ ಲೋಕಾಯುಕ್ತ ವರದಿ ತಿರಸ್ಕರಿಸಿ ಎಂದು ತಕರಾರು ಅರ್ಜಿ ಹಾಕಿದೆ.

    ಮುಡಾ ಅಧಿಕಾರಿಗಳಿಂದಲೇ ಕಾನೂನು ದುರ್ಬಳಕೆ ಆರೋಪ:
    ಮುಡಾ ಹಗರಣ‌ ಪ್ರಕರಣದಲ್ಲಿ ಲೋಕಾಯುಕ್ತ ವರದಿಯಿಂದ ಸಿಎಂ ಸಿದ್ದರಾಮಯ್ಯ ಮತ್ತು ಕುಟುಂಬ ಪಾರಾಗಿದ್ದಾರೆ. ಆದ್ರೆ, ಕಾನೂನಿನ ದುರ್ಬಳಕೆ ಮಾಡಿಕೊಂಡ ಅಧಿಕಾರಿಗಳು ಈಗ ಸಂಕಷ್ಟ ಎದುರಿಸಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ. 2003-04 ರಿಂದಲೂ ಕೂಡ ಮುಡಾದ ಆಡಳಿತ ಅಧಿಕಾರಿಗಳು ಕಾನೂನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಲೋಕಾಯುಕ್ತ (Lokayukta) ತೀರ್ಮಾನಕ್ಕೆ ಬಂದಿತ್ತು. 2016 ರಿಂದ 2024ರ ವರೆಗೂ ಮುಡಾದಲ್ಲಿ ಆಯುಕ್ತರಾಗಿದ್ದ ಅಧಿಕಾರಿಗಳು 1,098 ಸೈಟ್‌ಗಳು ದುರ್ಬಳಕೆ ಆಗಿದೆ ಎಂದು ತನಿಖೆ ಮುಂದುವರೆಸಿದೆ.

  • ಮುಡಾ ಕೇಸ್‌ನಲ್ಲಿ ಬಿ ರಿಪೋರ್ಟ್ ಲೋಕಾಯುಕ್ತದಿಂದ ಪೂರ್ವ ನಿಯೋಜಿತ: ಅಶೋಕ್ ಕೆಂಡ

    ಮುಡಾ ಕೇಸ್‌ನಲ್ಲಿ ಬಿ ರಿಪೋರ್ಟ್ ಲೋಕಾಯುಕ್ತದಿಂದ ಪೂರ್ವ ನಿಯೋಜಿತ: ಅಶೋಕ್ ಕೆಂಡ

    – ಪ್ರಮೋಷನ್/ವರ್ಗಾವಣೆಗಾಗಿ ಕ್ಲೀನ್‌ಚಿಟ್

    ಬೆಂಗಳೂರು: ಮುಡಾ ಹಗರಣ (MUDA Scam) ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕ್ಲೀನ್‌ಚಿಟ್ ನೀಡಲು ಲೋಕಾಯುಕ್ತ ಮುಂದಾಗಿದೆ. ಪೂರ್ವ ನಿಯೋಜಿತವಾಗಿ ತನಿಖಾ ವರದಿ ರೂಪಿಸಲಾಗಿದೆ. ಆದರೆ ಬಿಜೆಪಿಯಿಂದ (BJP) ಹೋರಾಟ ಮುಂದುವರಿಯಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ಹೇಳಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಹಾಗೂ ಕುಟುಂಬದವರು ನಡೆಸಿದ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಜೆಡಿಎಸ್ ಪಾದಯಾತ್ರೆ ಮಾಡಿದೆ. ಜೊತೆಗೆ ಅಧಿವೇಶನದಲ್ಲಿ ಚರ್ಚಿಸಲಾಗಿದೆ. ಈ ಹಗರಣದಲ್ಲಿ ತಪ್ಪಿಲ್ಲ ಎಂದಾದರೆ ಸಿಎಂ ಸಿದ್ದರಾಮಯ್ಯ ನಿವೇಶನಗಳನ್ನು ಯಾಕೆ ಮರಳಿಸಬೇಕಿತ್ತು? ಲೋಕಾಯುಕ್ತ, ಸಿದ್ದರಾಮಯ್ಯ ಅವರಿಗೆ ಕ್ಲೀನ್‌ಚಿಟ್ ನೀಡಲಿದೆ. ಇದರಲ್ಲಿ ಯಾರದ್ದೂ ತಪ್ಪಿಲ್ಲ. ಸ್ವಯಂಚಾಲಿತವಾಗಿ ಭೂ ಪರಿವರ್ತನೆಯಾಗಿದೆ. ಲೇಔಟ್ ಮಾಡಿರುವುದೇ ಸಿಎಂ ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲ. ಅವರು ಅಷ್ಟು ಪ್ರಾಮಾಣಿಕರು ಹಾಗೂ ಸಭ್ಯಸ್ತರು. ಇದರಲ್ಲಿ ಅಧಿಕಾರಿಗಳದ್ದೇ ತಪ್ಪು ಎಂದು ಲೋಕಾಯುಕ್ತ ವರದಿಯಲ್ಲಿ ಉಲ್ಲೇಖವಾಗಲಿದೆ. ಈ ಪ್ರಕರಣ ದಾಖಲಾಗುವ ಮುನ್ನವೇ ಲೋಕಾಯುಕ್ತದಲ್ಲಿ ಆಯಕಟ್ಟಿನ ಜಾಗಕ್ಕೆ ನಿರ್ದಿಷ್ಟ ಅಧಿಕಾರಿಗಳು ಬಂದು ಕೂತಿದ್ದಾರೆ. ಇದು ಪೂರ್ವ ನಿಯೋಜಿತವಾಗಿ ತಯಾರಿಸಿದ ವರದಿ ಎಂದು ದೂರಿದರು. ಇದನ್ನೂ ಓದಿ: ಶೋಕಾಸ್ ನೋಟಿಸ್‌ಗೆ ಯತ್ನಾಳ್ ಕೊಟ್ಟ ಉತ್ತರ ಒಪ್ಪದ ಬಿಜೆಪಿ ಶಿಸ್ತು ಸಮಿತಿ

    ಲೋಕಾಯುಕ್ತ ಕ್ಲೀನ್‌ಚಿಟ್ ಕೊಟ್ಟಾಕ್ಷಣ ಅದನ್ನು ಕೋರ್ಟ್ ಸ್ವೀಕರಿಸಬೇಕೆಂದೇನಿಲ್ಲ. ಕೋರ್ಟ್ ಅದನ್ನು ತಿರಸ್ಕರಿಸಿದರೆ ಮತ್ತೆ ತನಿಖೆ ನಡೆಯಲಿದೆ. ನಮಗೆ ನ್ಯಾಯಾಂಗದ ಬಗ್ಗೆ ವಿಶ್ವಾಸವಿದೆ. ನಮಗಿಂತ ಹೆಚ್ಚಾಗಿ ಸಿಎಂ ಕನಸು ಕಟ್ಟಿಕೊಂಡಿರುವ ಕಾಂಗ್ರೆಸ್ ನಾಯಕರಿಗೆ ನಿದ್ರೆ ಹಾರಿಹೋಗಲಿದೆ ಎಂದರು. ಇದನ್ನೂ ಓದಿ: ಕಾರವಾರ | ಭೀಕರ ಅಪಘಾತ – ಒಂದೇ ಕುಟುಂಬದ ಮೂವರು ಸಾವು

    ಕಾಂಗ್ರೆಸ್ ಸರ್ಕಾರದ ಬಳಿ ಗ್ಯಾರಂಟಿಗೆ ಹಣವಿಲ್ಲ ಎಂದಮೇಲೆ ಮತ್ತೆ ಅಭಿವೃದ್ಧಿಗೆ ಎಲ್ಲಿಂದ ಹಣ ಬರಲಿದೆ? ಈ ಬಗ್ಗೆ ಕಾಂಗ್ರೆಸ್ ಶಾಸಕರು ಪ್ರಶ್ನೆ ಮಾಡಿದರೆ ಅವರನ್ನು ಯಾವುದಾದರೂ ಸಮಿತಿ, ನಿಗಮಕ್ಕೆ ಅಧ್ಯಕ್ಷರನ್ನಾಗಿ ಮಾಡಿ ಸುಮ್ಮನಾಗಿಸಲಾಗುತ್ತದೆ. ಇದೇ ಸಿಎಂ ಸಿದ್ದರಾಮಯ್ಯನವರ ಬಳಿ ಇರುವ ಅಸ್ತ್ರ ಎಂದು ಹೇಳಿದರು. ಇದನ್ನೂ ಓದಿ: ಕ್ರಿಕೆಟ್ ಆಡುವಾಗ ಅಲ್ ಅಮೀನ್ ವೈದ್ಯಕೀಯ ಕಾಲೇಜಿನಲ್ಲಿ ರ‍್ಯಾಗಿಂಗ್ ಆರೋಪ

    ಸಿಎಂ ಸಿದ್ದರಾಮಯ್ಯ ರಾಜಕೀಯದಿಂದ ನಿವೃತ್ತಿ ಎಂದು ನೂರಾರು ಬಾರಿ ಹೇಳಿದ್ದಾರೆ. ಅದೇ ರೀತಿ ಜಾತಿ ವರದಿ ಬಿಡುಗಡೆ ಬಗ್ಗೆಯೂ ಹೇಳಿದ್ದಾರೆ. ವೀರಪ್ಪ ಮೊಯ್ಲಿ ಸುಳ್ಳಿನ ಸರದಾರರಾದರೆ, ಸಿಎಂ ಸಿದ್ದರಾಮಯ್ಯ ಅವರ ತಾತನಂತೆ ಸುಳ್ಳು ಹೇಳುತ್ತಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಹೊಸಕೋಟೆಯಿಂದ ಕುಂಭಮೇಳಕ್ಕೆ ಹೋಗ್ತಿದ್ದಾಗ ಅಪಘಾತ – ಮಹಿಳೆ ಸಾವು

    ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಗೆ ಎರಡು ತಿಂಗಳಿಗೊಮ್ಮೆ ಸಂಬಳ ನೀಡಲಾಗುತ್ತಿದೆ. ಸ್ಕಾಲರ್ ಶಿಪ್ ಸಿಕ್ಕಿಲ್ಲವೆಂದು ವಿದ್ಯಾರ್ಥಿಗಳು ಕೋರ್ಟ್ ಮೊರೆ ಹೋಗಿದ್ದಾರೆ. ಪ್ರತಿ ತಿಂಗಳು ಗ್ಯಾರಂಟಿ ಹಣ ಕೊಡಲು ಕೂಡ ಹಣವಿಲ್ಲ. ಬಜೆಟ್ ಗೂ ಹಣ ಇರುವುದಿಲ್ಲ. ಅಂಗನವಾಡಿ ಕಾರ್ಯಕರ್ತರಿಗೆ ಗೌರವಧನ ಹೆಚ್ಚಳ ಮಾಡಿಲ್ಲ. ಕೇಂದ್ರ ಸರ್ಕಾರ ಅಕ್ಕಿ ಕೊಡಲು ಸಿದ್ಧವಾಗಿದ್ದರೂ ಪಡೆಯಲು ಸರ್ಕಾರ ತಯಾರಿಲ್ಲ. ಸರ್ಕಾರ ದಿವಾಳಿಯಾಗಿರುವುದಕ್ಕೆ ಇದಕ್ಕಿಂತ ಹೆಚ್ಚು ಸಾಕ್ಷಿ ಬೇಡ ಎಂದು ಹರಿಹಾಯ್ದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಎರಡು ಅಂತಸ್ತಿನ ಮನೆ ಕುಸಿತ

  • ಮುಡಾ ಕೇಸ್‌ನಲ್ಲಿ ಸಿದ್ದರಾಮಯ್ಯಗೆ ಕ್ಲೀನ್‌ಚಿಟ್ ಸಿಗಲಿದೆ: ಪರೋಕ್ಷ ಸುಳಿವು ಕೊಟ್ಟ ಕುಮಾರಸ್ವಾಮಿ

    ಮುಡಾ ಕೇಸ್‌ನಲ್ಲಿ ಸಿದ್ದರಾಮಯ್ಯಗೆ ಕ್ಲೀನ್‌ಚಿಟ್ ಸಿಗಲಿದೆ: ಪರೋಕ್ಷ ಸುಳಿವು ಕೊಟ್ಟ ಕುಮಾರಸ್ವಾಮಿ

    ಬೆಂಗಳೂರು: ಮುಡಾ ಅಕ್ರಮ ಕೇಸ್‌ನಲ್ಲಿ (MUDA Scam) ಸಿಎಂ ಅಡಿ ಇರುವ ಲೋಕಾಯುಕ್ತ (Lokayukta) ಸಂಸ್ಥೆ ಸಿಎಂಗೆ ಕ್ಲೀನ್‌ಚಿಟ್ ಕೊಡಲಿದೆ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಪರೋಕ್ಷವಾಗಿ ಸುಳಿವು ಕೊಟ್ಟಿದ್ದಾರೆ.

    ಮುಡಾ ಅಕ್ರಮ ತನಿಖೆ ಲೋಕಾಯುಕ್ತದಿಂದ ವರದಿ ಸಲ್ಲಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಲೋಕಾಯುಕ್ತ ತನಿಖೆಯನ್ನ ತನಿಖೆ ಅಂತ ಕರೆಯಬೇಕಾ? ತನಿಖೆ ಮಾಡಿದ ಅಧಿಕಾರಿ ವರದಿ ಕೊಡೋಕೆ ಮೇಲಿನ ಅಧಿಕಾರಿ ಹತ್ರ ಅನುಮತಿ ಪಡೆಯಬೇಕಂತೆ. ವರದಿ ಮೊದಲು ಮೇಲಾಧಿಕಾರಿಗಳಿಗೆ ಕೊಟ್ಟು, ಮೇಲಾಧಿಕಾರಿಗಳು ಕ್ಲಿಯರ್ ಮಾಡಿದ ಮೇಲೆ ಇವರು ಲೋಕಾಯುಕ್ತಗೆ ವರದಿ ಕೊಡುತ್ತಾರೆ ಅಂತೆ. ಹೇಗೆ ತನಿಖೆ ಆಗಿದೆ ಅಂತ ಮೇಲಾಧಿಕಾರಿಗೆ ತೋರಿಸಿಕೊಂಡು ಮೇಲಾಧಿಕಾರಿ ಗ್ರೀನ್ ಸಿಗ್ನಲ್ ಕೊಟ್ಟ ಮೇಲೆ ವರದಿ ಕೊಡೋದಾ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಬೆಂಗಳೂರು| ಜೆಸಿಬಿ ಹರಿದು 2 ವರ್ಷದ ಮಗು ಸಾವು

    ಸರ್ಕಾರದ ಮುಖ್ಯಮಂತ್ರಿ ವಿರುದ್ಧ ಅವರ ಕೈಕೆಳಗೆ ಕೆಲಸ ಮಾಡೋ ಅಧಿಕಾರಿಗಳು ಸಿಎಂ ವಿರುದ್ಧ ವರದಿ ಕೊಡುತ್ತಾರಾ? ವಾಸ್ತವಾಂಶ ಏನಾಗಿದೆ ಎಂದು ಸಿದ್ದರಾಮಯ್ಯ ವಿರುದ್ಧ ದಾಖಲೆಗಳು ಚೆಲ್ಲಾಡುತ್ತಿವೆ. ಲೋಕಾಯುಕ್ತದವರು ಮಾಡಿರೋದು ಒಂದು ತನಿಖೆನಾ? ಸಿದ್ದರಾಮಯ್ಯ ವಿರುದ್ಧ ಅವರ ವರದಿ ಕೊಡುತ್ತಾರಾ ಎಂದು ಪರೋಕ್ಷವಾಗಿ ಮುಡಾ ಕೇಸ್‌ನಲ್ಲಿ ಸಿದ್ದರಾಮಯ್ಯಗೆ ಕ್ಲೀನ್‌ಚಿಟ್ ಕೊಡುತ್ತಾರೆ ಎಂದು ಆರೋಪ ಮಾಡಿದರು. ಇದನ್ನೂ ಓದಿ: ಕೋಲಾರ | ಬೈಕ್‌ಗೆ ಕಾರು ಡಿಕ್ಕಿ – ಫಾರೆಸ್ಟ್ ವಾಚರ್ ಸ್ಥಳದಲ್ಲೇ ಸಾವು