Tag: mud bath

  • ಬಿಜೆಪಿ MLAಗೆ ಮಣ್ಣಿನ ಸ್ನಾನ ಮಾಡಿಸಿದ ಮಹಿಳೆಯರ ಗುಂಪು – ಕಾರಣ ಕೇಳಿ ನೆಟ್ಟಿಗರು ಶಾಕ್

    ಬಿಜೆಪಿ MLAಗೆ ಮಣ್ಣಿನ ಸ್ನಾನ ಮಾಡಿಸಿದ ಮಹಿಳೆಯರ ಗುಂಪು – ಕಾರಣ ಕೇಳಿ ನೆಟ್ಟಿಗರು ಶಾಕ್

    ಲಕ್ನೋ: ಬಿಜೆಪಿ ಎಂಎಲ್‍ಎಗೆ ಮಹಿಳೆಯರ ಗುಂಪು ಮಣ್ಣಿನ ಸ್ನಾನ ಮಾಡಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಇದಕ್ಕೆ ಅಸಲಿ ಕಾರಣ ತಿಳಿದು ನೆಟ್ಟಿಗರು ಶಾಕ್ ಆಗಿದ್ದಾರೆ.

    ಉತ್ತರ ಪ್ರದೇಶದ ಮಹಾರಾಜ್‍ಗಂಜ್‍ನಲ್ಲಿ ಮಹಿಳೆಯರ ಗುಂಪೊಂದು ಬಿಜೆಪಿ ಶಾಸಕ ಜಯಮಂಗಲ್ ಕನೋಜಿಯಾ ಅವರಿಗೆ ಮಣ್ಣನ್ನು ಕಲಸಿದ ನೀರಿನಿಂದ ಸ್ನಾನ ಮಾಡಿಸಿದ ವೀಡಿಯೋ ವೈರಲ್ ಆಗಿದೆ. ವೀಡಿಯೋ ನೋಡಿದ ನೆಟ್ಟಿಗರು ಯಾಕೆ ಈ ರೀತಿ ಮಾಡುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಕೊನೆಗೆ ಇದು ಒಂದು ರೀತಿಯ ಆಚರಣೆ ಎಂದು ತಿಳಿದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 1 ಟಿಎಂಸಿ ನೀರು ತುಂಬಿದ್ರೆ KRS ಡ್ಯಾಂ ಸಂಪೂರ್ಣ ಭರ್ತಿ 

    ಕಾರಣವೇನು?
    ಬಿಸಿಲಿನ ತಾಪದ ನಡುವೆಯೂ ಮಳೆ ದೇವರನ್ನು ಒಲಿಸಿಕೊಳ್ಳುವ ಆಚರಣೆಯ ಭಾಗವಾಗಿ ಮಹಿಳೆಯರು ಬಿಜೆಪಿ ಶಾಸಕನಿಗೆ ಮಡೆ ಸ್ನಾನ(ಮಣ್ಣಿನ ಸ್ನಾನ) ಮಾಡಿಸಿದ್ದಾರೆ. ನಗರದ ಮುಖ್ಯಸ್ಥನಿಗೆ ಮಣ್ಣಿನ ಸ್ನಾನ ಮಾಡಿಸಿದರೆ ಇಂದ್ರ ದೇವನಿಗೆ ಸಂತೋಷವನ್ನು ನೀಡುತ್ತದೆ ಎಂಬುದು ನಂಬಿಕೆ. ಇದರಿಂದ ಮಳೆಯಾಗಿ ಭತ್ತದ ಇಳುವರಿ ಚೆನ್ನಾಗಿ ಆಗುತ್ತೆ ಎಂದು ಮಹಿಳೆಯರಲ್ಲಿ ಒಬ್ಬರಾದ ಮುನ್ನಿ ದೇವಿ ತಿಳಿಸಿದ್ದಾರೆ.

    ಮಹಾರಾಜ್‍ಗಂಜ್‍ನ ಪಿಪಾರ್ಡೆಯುರಾ ಪ್ರದೇಶದ ಮಹಿಳೆಯರು ಶಾಸಕ ಜಯಮಂಗಲ್ ಕನೋಜಿಯಾ ಮತ್ತು ನಗರಪಾಲಿಕೆ ಅಧ್ಯಕ್ಷ ಕೃಷ್ಣ ಗೋಪಾಲ್ ಜೈಸ್ವಾಲ್‍ಗೆ ಹಾಡುಗಳನ್ನು ಆಡುತ್ತ ಮಡೆ ಸ್ನಾನ ಮಾಡಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಅವರಿಬ್ಬರು ಸಂತೋಷದಿಂದ ಭಾಗಿಯಾಗಿದ್ದಾರೆ.

    ಈ ಕುರಿತು ಕನೋಜಿಯಾ ಅವರು ಮಾತನಾಡಿದ್ದು, ನಾನು ನನ್ನ ವಾರ್ಡ್‍ನಲ್ಲಿ ತಿರುಗಾಡುತ್ತಿದ್ದಾಗ ಹಲವಾರು ಮಹಿಳೆಯರು ಮತ್ತು ಮಕ್ಕಳು ನನಗೆ ಮಣ್ಣಿನಲ್ಲಿ ಸ್ನಾನ ಮಾಡಿಸಿದರು. ಇಂದ್ರದೇವನನ್ನು ಮೆಚ್ಚಿಸಲು ಇದು ಹಳೆಯ ಸಂಪ್ರದಾಯ ಮತ್ತು ನಂಬಿಕೆಯಾಗಿದೆ. ಅವರ ಪ್ರಾರ್ಥನೆಗಳು ನೆರವೆರಲಿ. ಶೀಘ್ರದಲ್ಲೇ ಮಳೆಯಾಗಲಿ ಎಂದು ನಾನು ಬಯಸುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಚಾಟ್ಸ್ ಪ್ರಿಯರು ಮಾಡಿ ಸವಿಯಿರಿ ‘ಮಸಾಲಾ ಕಾರ್ನ್ ಚಾಟ್’

    Live Tv
    [brid partner=56869869 player=32851 video=960834 autoplay=true]

  • ಮಣ್ಣಿನಲ್ಲಿ ಮಿಂದೆದ್ದ ಊರ್ವಶಿ ರೌಟೆಲ್ಲಾ

    ಮಣ್ಣಿನಲ್ಲಿ ಮಿಂದೆದ್ದ ಊರ್ವಶಿ ರೌಟೆಲ್ಲಾ

    ಮುಂಬೈ: ಮಣ್ಣನ್ನು ಬಳಕೆ ಮಾಡಿಕೊಂಡು ಸ್ನಾನ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು ಎಂಬುದು ಅನೇಕರ ನಂಬಿಕೆ. ಈ ಬಗ್ಗೆ ಆಯುರ್ವೇದದಲ್ಲೂ ಕೂಡ ಹೇಳಲಾಗಿದೆ. ಐರಾವತ ಚಿತ್ರದ ನಟಿ ಊರ್ವಶಿ ರೌಟೆಲ್ಲಾ ಈಗ ಮಣ್ಣಿನಿಂದ ಸ್ನಾನ ಮಾಡಿದ ಫೋಟೋ  ವೈರಲ್ ಆಗಿದೆ.

    ಮಣ್ಣಿನ ಸ್ನಾನದಿಂದ ದೇಹದಲ್ಲಿರುವ ಕಲ್ಮಶಗಳೂ ನಾಶವಾಗುತ್ತವೆ. ಚರ್ಮವನ್ನು ಮೃದುಗೊಳ್ಳುತ್ತದೆ, ರಕ್ತ ಸಂಚಾರ ಸುಧಾರಿಸುತ್ತದೆ ಮತ್ತು ನೋವು ನಿವಾರಕವಾಗಿ ಇದು ಕೆಲಸ ಮಾಡುತ್ತದೆ ಎಂದು ಬರೆದುಕೊಂಡು ಮಣ್ಣಿನ ಸ್ನಾನ ಮಾಡಿರುವ ಫೋಟೋವನ್ನು ಊರ್ವಶಿ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:  ತಿಪಟೂರಿನಿಂದ ಧರ್ಮಸ್ಥಳಕ್ಕೆ ಸೈಕಲ್ ಪ್ರವಾಸ ಹೋಗ್ತಿದ್ರು ಸಂಚಾರಿ ವಿಜಯ್

    ನಟಿಮಣಿಯರು ಚರ್ಮದ ಆರೋಗ್ಯ ಕಾಪಾಡಿಕೊಳ್ಳೋಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ಹೀಗಾಗಿ, ಧೂಳು, ಬಿಸಿಲಿಗೆ ದೇಹ ತಾಗದಂತೆ ನೋಡಿಕೊಳ್ಳುತ್ತಾರೆ. ಆದರೆ, ಊವರ್ಶಿ ಮಣ್ಣಿನಲ್ಲೇ ಸ್ನಾನ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಊರ್ವಶಿ ಲಾಕ್‍ಡೌನ್ ವೇಳೆ ಫಿಟ್ನೆಸ್ ಕಾಯ್ದುಕೊಳ್ಳೋಕೆ ಏನೆಲ್ಲ ಮಾಡಬೇಕು ಎನ್ನುವುದನ್ನು ಅಭಿಮಾನಿಗಳಿಗೆ ಟಿಪ್ಸ್ ನೀಡುತ್ತಿದ್ದರು.

    2013ರಲ್ಲಿ ತೆರೆಗೆ ಬಂದ ಹಿಂದಿಯ ಸಿಂಗ್ ಸಾಬ್ ದಿ ಗ್ರೇಟ್ ಚಿತ್ರದಲ್ಲಿ ಊರ್ವಷಿ ನಟಿಸಿದ್ದರು. ಇದಾದ ನಂತರ 2015ರಲ್ಲಿ ತೆರೆಗೆ ಬಂದ ಕನ್ನಡದ ಐರಾವತ ಚಿತ್ರದಲ್ಲಿ ದರ್ಶನ್‍ಗೆ ಜೊತೆಯಾಗಿ ನಟಿಸಿದರು. ಎ.ಪಿ. ಅರ್ಜುನ್ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ನಂತರ ಅವರು ಕನ್ನಡಕ್ಕೆ ಮರಳಲೇ ಇಲ್ಲ. ಸದ್ಯ, ಬ್ಲ್ಯಾಕ್ ರೋಸ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಹಿಂದಿ, ತೆಲುಗು ಎರಡೂ ಭಾಷೆಯಲ್ಲಿ ತೆರೆಗೆ ಬರುತ್ತಿದೆ. ಹಿಂದಿ ಮತ್ತು ತಮಿಳಲ್ಲಿ ಒಟ್ಟಿಗೆ ಸಿದ್ಧವಾಗುತ್ತಿರುವ ಚಿತ್ರದಲ್ಲೂ ಊರ್ವಶಿ ನಟಿಸುತ್ತಿದ್ದಾರೆ.