Tag: MTB

  • ಬಿಜೆಪಿಯಲ್ಲಿನ ಖಾತೆ ಹಂಚಿಕೆ ಬಿಕ್ಕಟ್ಟು ಬಹುತೇಕ ಶಮನ

    ಬಿಜೆಪಿಯಲ್ಲಿನ ಖಾತೆ ಹಂಚಿಕೆ ಬಿಕ್ಕಟ್ಟು ಬಹುತೇಕ ಶಮನ

    ಬೆಂಗಳೂರು: ಬಿಜೆಪಿಯಲ್ಲಿ ಖಾತೆ ಹಂಚಿಕೆ ಬಿಕ್ಕಟ್ಟು ಬಹುತೇಕ ಶಮನವಾದಂತೆ ಕಾಣುತ್ತಿದೆ. ವಸತಿ ಅಥವಾ ಲೋಕೋಪಯೋಗಿ ಖಾತೆಗೆ ಬೇಡಿಕೆ ಇಟ್ಟಿದ್ದ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ತಣ್ಣಗಾದಂತೆ ಕಾಣುತ್ತಿದ್ದಾರೆ.

    ಮೊನ್ನೆಯಷ್ಟೇ ಮೂರು ಕಾದು ತೀರ್ಮಾನ ಪ್ರಕಟಿಸ್ತೀನಿ ಅಂತಾ ಗುಡುಗಿದ್ದ ಎಂಟಿಬಿ ನಾಗರಾಜ್, ಈಗ ಏನೂ ಅಸಮಾಧಾನವೇ ಇಲ್ಲ ಅನ್ನೋ ರೀತಿ ಸಣ್ಣಕೈಗಾರಿಕಾ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಖಾತೆ ಬದಲಾವಣೆ ಮಾಡದಿದ್ರೂ ಸದ್ಯಕ್ಕೆ ಸುಮ್ಮನಾಗ್ತೀನಿ. ಹೆಂಗೂ ಖಾತೆ ಇದೆ. ಪಕ್ಷದಲ್ಲಿ 2023ರವರೆಗೆ ಮುಂದುವರಿಯುತ್ತೇನೆ ಅಂತಾ ಹೇಳಿದ್ದಾರೆ.

    ಇತ್ತ ಸಿಎಂ ಭೇಟಿಯಾದ ಮೇಲ್ಮನೆ ಸದಸ್ಯ ಆರ್. ಶಂಕರ್ ಮತ್ತೆ ಖಾತೆ ಬೇಡಿಕೆ ಇಟ್ಟಿದ್ದಾರೆ. ನಾನು ಬಿಜೆಪಿ ಸೇರಿದರೂ, ಒಂದು ರೀತಿ ಪಕ್ಷೇತರನಾಗಿ ದೂರ ಉಳಿದಿದ್ದೇನೆ ಅಂತಾ ನೋವು ತೋಡಿಕೊಂಡಿದ್ದಾರೆ. ಇನ್ನೊಂದೆಡೆ ಸಾರಿಗೆ ಖಾತೆಯಿಂದ ಅಸಮಾಧಾನಗೊಂಡಿದ್ದ ಸಚಿವ ರಾಮುಲು, ಕೊಟ್ಟ ಇಲಾಖೆಯಲ್ಲೇ ಸಕ್ರಿಯನಾಗಿ ಕೆಲಸ ಮಾಡ್ತೀನಿ. ಅಸಮಾಧಾನ ಎಲ್ಲಾ ಸುಳ್ಳು ಎಂದು ತೇಪೆ ಹಚ್ಚಿದ್ದಾರೆ. ಇದನ್ನೂ ಓದಿ: ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದ ಆನಂದ್ ಸಿಂಗ್ – ಸಿಎಂ ಸಂಧಾನ ಸಭೆ ಸಕ್ಸಸ್

    ಅತ್ತ ಸಚಿವ ಸ್ಥಾನ ಸಿಗದ ಕಾರಣ ಅಸಮಾಧಾನಗೊಂಡು ದೆಹಲಿ ದಂಡಯಾತ್ರೆ ಕೈಗೊಂಡಿರುವ ರೇಣುಕಾಚಾರ್ಯ, ಕ್ಷೇತ್ರದ ಅಭಿವೃದ್ಧಿ ಕೆಲಸಕ್ಕೆ ಬಂದಿದ್ದೀನಿ.. ಬಂಡಾಯ ಏನೂ ಇಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಮಸ್ಯೆ ಶೇ.100ರಷ್ಟು ಸುಖಾಂತ್ಯವಾಗಿದೆ, ಕೆಲ ತೀರ್ಮಾನಗಳನ್ನು ಹೇಳಲು ಸಾಧ್ಯವಿಲ್ಲ: ರಾಜೂ ಗೌಡ

  • ನನಗೆ ಯಾವುದೇ ಆತಂಕವಿಲ್ಲ, ಕೋರ್ಟಿಗೆ ಅರ್ಜಿ ಹಾಕಲ್ಲ: ಎಂಟಿಬಿ

    ನನಗೆ ಯಾವುದೇ ಆತಂಕವಿಲ್ಲ, ಕೋರ್ಟಿಗೆ ಅರ್ಜಿ ಹಾಕಲ್ಲ: ಎಂಟಿಬಿ

    – ಸೋಮಶೇಖರ್ ಹೇಳಿಕೆ ಬಗ್ಗೆ ಗೊತ್ತಿಲ್ಲ

    ಬೆಂಗಳೂರು: ನಾನು ಕೊರ್ಟ್ ಮೊರೆ ಹೋಗಲ್ಲ. ನನಗೆ ಅಂತಹ ಯಾವುದೇ ಆತಂಕ ಇಲ್ಲ. ಹೀಗಾಗಿ ನಾನು ಕೋರ್ಟಿಗೆ ಅರ್ಜಿ ಹಾಕಲ್ಲ ಎಂದು ಸಚಿವ ಎಂಟಿಬಿ ನಾಗರಾಜ್ ಸ್ಪಷ್ಟನೆ ನೀಡಿದ್ದಾರೆ.

    ಮಾಜಿ ಸಚಿವರ ಸಿಡಿ ಹೊರಬರುತ್ತಿದ್ದಂತೆಯೇ ಆರು ಮಂದಿ ಕೋರ್ಟ್ ಮೊರೆ ಹೋಗಿದ್ದರು. ಈ ಸಂಬಂಧ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋರ್ಟಿಗೆ ಹೋಗುವ ವಿಚಾರದ ಬಗ್ಗೆ ನಾನು ಅವರ ಜೊತೆ ಚರ್ಚೆ ಮಾಡಿಲ್ಲ ಎಂದು ಎಂಟಿಬಿ ಹೇಳಿದರು.

    ಇದೇ ವೇಳೆ ಸಚಿವ ಎಸ್.ಟಿ ಸೋಮಶೇಖರ್ ಹೇಳಿಕೆ ವಿಚಾರ ಪ್ರತಿಕ್ರಿಯಸಿ, ಸೋಮಶೇಖರ್ ಹೇಳಿಕೆ ಬಗ್ಗೆ ಗೊತ್ತಿಲ್ಲ. ನನಗೆ ಗೊತ್ತಿಲ್ಲದ ವಿಚಾರದ ಬಗ್ಗೆ ನಾನು ಮಾತಾಡಲ್ಲ. ಸೋಮಶೇಖರ್ ಎಷ್ಟರ ಮಟ್ಟಿಗೆ ಮಾಹಿತಿ ಕಲೆ ಹಾಕಿದಾರೋ ಗೊತ್ತಿಲ್ಲ. ಸೋಮಶೇಖರ್ ಬಳಿಯೇ ನೀವು ಕೇಳಬೇಕು. ನನಗೆ ಮಾಹಿತಿ ಇರುವ ಹಾಗೆ ಕಾಂಗ್ರೆಸ್ಸಿನಲ್ಲಿ ಹಾಗೇನಿಲ್ಲ ಎಂದರು.

    ಸೋಮಶೇಖರ್ ಹೇಳಿದ್ದೇನು..?
    ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್, ನಮ್ಮ ಜೊತೆ ಹಲವರು ಕೋರ್ಟಿಗೆ ಬರಲು ಸಿದ್ಧರಿದ್ರು. ಆದ್ರೆ ಮಾಧ್ಯಮಗಳಲ್ಲಿ ಸುದ್ದಿ ನೋಡಿ ಹಿಂದೆ ಸರಿದ್ರು. ನಾನು 20 ವರ್ಷ ಕಾಂಗ್ರೆಸ್ ನಲ್ಲಿದ್ದು ಬಂದಿದ್ದೇನೆ. ಇವರ ಅನೈತಿಕತೆ ಏನು ಅನ್ನೋದು ರಾಜ್ಯಕ್ಕೂ ಮತ್ತು ನನಗೂ ಗೊತ್ತು. ಅಸೆಂಬ್ಲಿಯಲ್ಲಿ ನಮ್ಮ ವಿರುದ್ಧ ಎಷ್ಟು ಮಾತನಾಡಿದ್ರೂ ಗೊತ್ತಿಲ್ವಾ? ಆದ್ರೆ ಅನೈತಿಕ ರಾಜಕಾರಣಕ್ಕೆ ಮುಂದಾಗಿದ್ದಕ್ಕೆ ಕೋರ್ಟ್ ರಕ್ಷಣೆ ಪಡೆದಿದ್ದೇವೆ. ನೂರಕ್ಕೆ ನೂರರಷ್ಟು ಈ ಮನೆಹಾಳು ಕೆಲಸವನ್ನ ಕಾಂಗ್ರೆಸ್ಸಿನವರೇ ಮಾಡಿದ್ದಾರೆ ಎಂದು ಆರೋಪಿಸಿದರು.

  • ಸಿದ್ದರಾಮಯ್ಯ, ಎಚ್‍ಡಿಕೆ ಅಧಿಕಾರದ ಹಗಲುಗನಸು ಕಾಣುತ್ತಿದ್ದಾರೆ: ಎಂಟಿಬಿ

    ಸಿದ್ದರಾಮಯ್ಯ, ಎಚ್‍ಡಿಕೆ ಅಧಿಕಾರದ ಹಗಲುಗನಸು ಕಾಣುತ್ತಿದ್ದಾರೆ: ಎಂಟಿಬಿ

    ಆನೇಕಲ್: ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ತಿಪ್ಪರಲಾಗ ಹಾಕಿದ್ರೂ ಅಧಿಕಾರಕ್ಕೆ ಬರುವುದಿಲ್ಲ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಭವಿಷ್ಯ ನುಡಿದಿದ್ದಾರೆ.

    ಎಂಟಿಬಿ ನಾಗರಾಜು ಇಂದು ತಮ್ಮ ಪುತ್ರ ಬಿಬಿಎಂಪಿ ಸದಸ್ಯ ನಿತಿನ್ ಪುರುಷೋತಮ್ ಹುಟ್ಟುಹಬ್ಬದಲ್ಲಿ ಪಾಲ್ಗೊಂಡ ಶುಭಾಶಯ ತಿಳಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅಧಿಕಾರ ಸಿಗುತ್ತೆ ಎಂಬ ಹಗಲುಗನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

    ಸಿದ್ದರಾಮಯ್ಯ ಅಧಿಕಾರಕ್ಕಾಗಿ ಏನ್ ಬೇಕಾದರೂ ಮಾಡುತ್ತಾರೆ. ಆದರೆ ಈ ಬಾರೀ ಸಿದ್ದರಾಮಯ್ಯ ತಿಪ್ಪರಲಾಗ ಹಾಕಿದರು ಅಧಿಕಾರ ಸಿಗಲ್ಲ. ಇನ್ನು ಮೂರುವರ್ಷ ಯಡಿಯೂರಪ್ಪ ಸರ್ಕಾರ ಸುಭದ್ರವಾಗಿರುತ್ತೆ ಎಂದರು. ಜೊತೆಗೆ ಆರ್. ಶಂಕರ್, ಎಚ್.ವಿಶ್ವನಾಥ್ ಹಾಗೂ ತಮ್ಮನ್ನ ಯಡಿಯೂರಪ್ಪ ಯಾವತ್ತೂ ಕೈ ಬಿಡುವುದಿಲ್ಲ. ನಮ್ಮನ್ನು ಇನ್ನು ಕೆಲವು ತಿಂಗಳಲ್ಲಿ ಸಚಿವರನಾಗಿ ಮಾಡುತ್ತಾರೆ. ಯಾರು ಏನೇ ಮಾಡಿದರೂ ಯಡಿಯೂರಪ್ಪ ಅಧಿಕಾರ ಪೂರ್ಣಗೊಳಿಸುತ್ತಾರೆ ಎಂದು ತಿಳಿಸಿದರು.

  • ಸುಧಾಕರ್ ಗೆದ್ದು ಸೋತರು, ಎಂಟಿಬಿ ಸೋತು ಗೆದ್ದರು!

    ಸುಧಾಕರ್ ಗೆದ್ದು ಸೋತರು, ಎಂಟಿಬಿ ಸೋತು ಗೆದ್ದರು!

    – ನಗರಸಭೆ ಚುನಾವಣೆ ಫಲಿತಾಂಶದಲ್ಲಿ ಎಲ್ಲಾ ಲೆಕ್ಕಾಚಾರ ಉಲ್ಟಾ

    ಚಿಕ್ಕಬಳ್ಳಾಪುರ/ಹೊಸಕೋಟೆ: ನಗರಸಭೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಎರಡು ತಿಂಗಳ ಹಿಂದೆ ಚಿಕ್ಕಬಳ್ಳಾಪುರ ಹಾಗೂ ಹೊಸಕೋಟೆ ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದ್ದರಿಂದ ಈ ಎರಡೂ ನಗರಸಭೆಗಳ ಫಲಿತಾಂಶ ಏನಾಗಬಹುದು ಎಂಬ ಕುತೂಹಲ ಎಲ್ಲರಲ್ಲಿತ್ತು. ಆದರೆ ಚುನಾವಣಾ ಫಲಿತಾಂಶ ಬಂದಾಗ 2 ತಿಂಗಳ ಹಿಂದೆ ಚುನಾವಣೆಯಲ್ಲಿ ಗೆದ್ದು ಬಂದು ಸಚಿವರಾದ ಕೆ.ಸುಧಾಕರ್ ಸೋತಿದ್ದಾರೆ. ಉಪಚುನಾವಣೆಯಲ್ಲಿ ಸೋತಿದ್ದ ಮಾಜಿ ಸಚಿವ ಎಂಟಿಬಿ ನಾಗರಾಜ್ ನಗರಸಭೆ ಚುನಾವಣೆಯಲ್ಲಿ ಗೆದ್ದು ಬೀಗಿದ್ದಾರೆ.

    ಹೊಸಕೋಟೆಯಲ್ಲಿ ಅರಳಿದ ಕಮಲ: ಹೊಸಕೋಟೆ ನಗರಸಭೆ ಬಿಜೆಪಿ ತೆಕ್ಕೆಗೆ ಹೋದರೆ, ಚಿಕ್ಕಬಳ್ಳಾಪುರ ನಗರಸಭೆ ಕಾಂಗ್ರೆಸ್ ಪಾಲಾಗಿದೆ. 31 ವಾರ್ಡ್‍ಗಳಲ್ಲಿ 22 ವಾರ್ಡ್‍ಗಳನ್ನು ಗೆಲ್ಲುವ ಮೂಲಕ ಮಾಜಿ ಸಚಿವ ಎಂಟಿಬಿ ನಾಗರಾಜ್ ಅವರು ಶಾಸಕ ಶರತ್ ಬಚ್ಚೇಗೌಡರ ವಿರುದ್ಧದ ಉಪಚುನಾವಣೆಯ ಸೋಲಿನ ಸೇಡನ್ನು ತೀರಿಸಿಕೊಂಡರು. ಶರತ್ ಬಚ್ಚೇಗೌಡ ಅವರ ‘ಕುಕ್ಕರ್’ ಕೇವಲ 7 ಸೀಟನ್ನಷ್ಟೇ ಗೆಲ್ಲಲು ಸಾಧ್ಯವಾಯಿತು. ಕಾಂಗ್ರೆಸ್ ಶೂನ್ಯ ಸುತ್ತುವ ಮೂಲಕ ಎಂಟಿಬಿ ಹೀರೋ ಆದರೆ, ಎಸ್‍ಡಿಪಿಐ ಹಾಗೂ ಪಕ್ಷೇತರರು ತಲಾ 1 ಸ್ಥಾನ ಪಡೆದುಕೊಂಡರು.

    ಚಿಕ್ಕಬಳ್ಳಾಪುರದಲ್ಲಿ ಮತದಾರ `ಕೈ’ ಬಿಡಲಿಲ್ಲ: ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಗೆ ತನ್ನ ಸ್ಥಾನ ಹೆಚ್ಚಿಸಲು ಸಾಧ್ಯವಾಗಿದ್ದಷ್ಟೇ ಸುಧಾಕರ್ ಗೆ ಖುಷಿಯ ವಿಚಾರ. 2 ತಿಂಗಳ ಹಿಂದೆ ನಡೆದ ಉಪಚುನಾವಣೆಯಲ್ಲಿ ಚೊಚ್ಚಲ ಭಾರಿಗೆ ಭರ್ಜರಿ ಗೆಲುವು ದಾಖಲಿಸಿದ್ದ ಬಿಜೆಪಿ ಪಕ್ಷ, ಇದೀಗ ನಗರಸಭಾ ಚುನಾವಣೆಯಲ್ಲಿ ನೆಲಕಚ್ಚಿದೆ. 31 ಸ್ಥಾನಗಳಲ್ಲಿ 16 ಸ್ಥಾನಗಳನ್ನು ಗೆಲ್ಲುವ ಮೂಲಕ ಇಲ್ಲಿ ಕಾಂಗ್ರೆಸ್ ಸರಳ ಬಹುಮತ ಪಡೆದಿದೆ. ನಗರಸಭಾ ಚುನಾವಣಾ ಸಾರಥಿಯಾಗಿ ಸಚಿವ ಸುಧಾಕರ್ ಬಿರುಸಿನ ಚುನಾವಣಾ ಪ್ರಚಾರ ನಡೆಸಿದ್ರೂ ಫಲಕಾರಿಯಾಗಲಿಲ್ಲ. ನಗರಸಭೆಯ 31 ವಾರ್ಡ್ ಗಳಲ್ಲಿ ಕಾಂಗ್ರೆಸ್ 16, ಬಿಜೆಪಿ-9, ಜೆಡಿಎಸ್-2 ಹಾಗೂ ಪಕ್ಷೇತರು – 4 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಕಾಂಗ್ರೆಸ್ ಸರಳ ಬಹುಮತ ಪಡಿದಿದೆ. ಜೆಡಿಎಸ್ ಜೊತೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿದ್ದು ಎರಡು ಪಕ್ಷಗಳ 18 ಸದಸ್ಯರು ಸೇರಿ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆಯಿದೆ. ಆದರೆ ಬಿಜೆಪಿ 9 ಸದಸ್ಯರ ಜೊತೆ ಪಕ್ಷೇತರರು 4 ಹಾಗೂ ಶಾಸಕ, ಸಂಸದರ ಮತ ಸೇರಿದರೆ 15 ಮತಗಳಾಗಲಿದ್ದು, ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಆಪರೇಷನ್ ಕಮಲ ನಡೆಯುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಆದರೆ ಮತದಾರ ಹಣ, ದರ್ಪಕ್ಕೆ ತಕ್ಕಪಾಠ ಕಲಿಸಿದ್ದಾರೆಂಬ ವರಸೆ ಕಾಂಗ್ರೆಸ್ ನಾಯಕರದ್ದು.

    ಚಿಕ್ಕಬಳ್ಳಾಪುರ ನಗರಸಭೆಯ ಮಾಜಿ ಅಧ್ಯಕ್ಷರಾಗಿದ್ದ ಲೀಲಾವತಿ ಶ್ರೀನಿವಾಸ್, ಮುನಿಕೃಷ್ಣ ಹಾಗೂ ಎಂ.ವಿ. ಭಾಸ್ಕರ್ ಮೂವರು ಈ ಚುನಾವಣೆಯಲ್ಲಿ ಸ್ಫರ್ಧೆ ಮಾಡಿದ್ರೂ ಮೂವರು ಸೋಲುಂಡಿದ್ದಾರೆ. 17 ನೇ ವಾರ್ಡಿನ ಕಾಂಗ್ರೆಸ್ ಪಕ್ಷದ ಎಸ್.ಎಂ ರಫೀಕ್ ಸತತ 7ನೇ ಬಾರಿಗೆ ನಗರಸಭಾ ಸದಸ್ಯರಾದರು. ಇದೇ ಮೊದಲ ಬಾರಿಗೆ ಅತಿ ಹೆಚ್ಚು 9 ಸ್ಥಾನ ಗಳಿಸಿರೋದಷ್ಟೇ ಬಿಜೆಪಿಯ ಸಾಧನೆ.

    ಎರಡು ತಿಂಗಳ ಹಿಂದಿಗಿಂತ ವ್ಯತಿರಿಕ್ತ ಫಲಿತಾಂಶವನ್ನು ನಗರಸಭೆ ಚುನಾವಣೆಯಲ್ಲಿ ನೀಡಿದ ಚಿಕ್ಕಬಳ್ಳಾಪುರ ಹಾಗೂ ಹೊಸಕೋಟೆ ನಗರಸಭೆಯ ಮತದಾರರು ಎಲ್ಲಾ ಪಕ್ಷಗಳ ಲೆಕ್ಕಾಚಾರವನ್ನು ಉಲ್ಟಾ ಮಾಡಿದ್ದಾರೆ. ಮತದಾರರು ಯಾಕೆ ಹೀಗೆ ಮಾಡಿದರು ಎಂದು ಸುಧಾಕರ್ ಹಾಗೂ ಎಂಟಿಬಿ ನಾಗರಾಜ್ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ.