Tag: MT Krishnappa

  • ಗಂಡಸರಿಗೆ ಉಚಿತವಾಗಿ ವಾರಕ್ಕೆ 2 ಬಾಟಲಿ ಮದ್ಯ ಕೊಡಿ: ಶಾಸಕ ಎಂ.ಟಿ ಕೃಷ್ಣಪ್ಪ

    ಗಂಡಸರಿಗೆ ಉಚಿತವಾಗಿ ವಾರಕ್ಕೆ 2 ಬಾಟಲಿ ಮದ್ಯ ಕೊಡಿ: ಶಾಸಕ ಎಂ.ಟಿ ಕೃಷ್ಣಪ್ಪ

    ಬೆಂಗಳೂರು: ಗ್ಯಾರಂಟಿ ಯೋಜನೆಗಳ (Guarantee Scheme) ಮಾದರಿಯಲ್ಲಿ ಪುರುಷರಿಗೆ ಉಚಿತವಾಗಿ ವಾರಕ್ಕೆ ಎರಡು ಬಾಟಲಿ ಮದ್ಯ (Alcohol) ಕೊಡಿ ಎಂದು ತುರುವೇಕೆರೆ ಜೆಡಿಎಸ್ (JDS) ಶಾಸಕ ಎಂಟಿ ಕೃಷ್ಣಪ್ಪ (MT Krishnappa) ಹೇಳಿದ್ದಾರೆ.

    ಪುರುಷರ ವೆಚ್ಚದಲ್ಲಿ, ನೀವು ಮಹಿಳೆಯರಿಗೆ ತಿಂಗಳಿಗೆ 2,000 ರೂ. ಹಣ, ಉಚಿತ ವಿದ್ಯುತ್ ಮತ್ತು ಉಚಿತ ಬಸ್ ಪ್ರಯಾಣವನ್ನು ನೀಡುತ್ತಿದ್ದೀರಿ. ಆದ್ದರಿಂದ, ಕುಡಿಯುವವರಿಗೆ, ಪ್ರತಿ ವಾರ ಅವರಿಗೆ ಎರಡು ಬಾಟಲಿಗಳನ್ನು ಉಚಿತವಾಗಿ ನೀಡಿ. ಅವರು ಕುಡಿಯಲು ಬಿಡಿ. ನಾವು ಪುರುಷರಿಗೆ ಪ್ರತಿ ತಿಂಗಳು ಹಣ ನೀಡಲು ಸಾಧ್ಯವಿಲ್ಲ. ಅದರ ಬದಲಾಗಿ, ಅವರಿಗೆ ಏನಾದರೂ ನೀಡಿ. ವಾರಕ್ಕೆ ಎರಡು ಬಾಟಲಿ ಕೊಟ್ಟರೆ ತಪ್ಪೇನಿದೆ? ಸರ್ಕಾರವು ಇದನ್ನು ಸೊಸೈಟಿಗಳ ಮೂಲಕ ಒದಗಿಸಬಹುದು ಎಂದು ಕೃಷ್ಣಪ್ಪ ಸಲಹೆ ನೀಡಿದರು. ಇದನ್ನೂ ಓದಿ:  ಚಿಕ್ಕಮಗಳೂರು| ಬೈಕಿಗೆ ಹಿಂದಿನಿಂದ ಪೊಲೀಸ್ ಜೀಪ್ ಡಿಕ್ಕಿ – ಸವಾರ ಸ್ಥಳದಲ್ಲೇ ಸಾವು

    ದುಡಿಯುವ ಕಾರ್ಮಿಕರು, ಜನರು ಮದ್ಯ ಸೇವಿಸುತ್ತಾರೆ. ಇದನ್ನು ತಪ್ಪಿಸಲು ಸಾಧ್ಯವಿಲ್ಲ. ಹೀಗಾಗಿ ಪುರುಷರಿಗೆ ಉಚಿತವಾಗಿ ಮದ್ಯ ವಿತರಿಸುವ ಯೋಜನೆಯನ್ನ ರಾಜ್ಯ ಸರ್ಕಾರ ತರಬೇಕು. ಸಹಕಾರ ಸಂಘಗಳ ಮೂಲಕ ಉಚಿತ ಮದ್ಯ ವಿತರಿಸಬೇಕು ಎಂದು ಜೆಡಿಎಸ್ ಶಾಸಕ ಕೃಷ್ಣಪ್ಪ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಆಯುಷ್ಮಾನ್ ಭಾರತ್ ವ್ಯಾಪ್ತಿಗೆ ಹೃದಯಾಘಾತ, ಪಾರ್ಶ್ವವಾಯುಗೆ ಚಿಕಿತ್ಸೆ ತರಲು ಹೆಚ್.ಡಿ.ದೇವೇಗೌಡರ ಒತ್ತಾಯ

    ಪಂಚ ಗ್ಯಾರಂಟಿ ಯೋಜನೆಗಳನ್ನ ಜನರಿಗೆ ಸಮರ್ಪಕವಾಗಿ ತಲುಪಿಸೋಕೆ ಸರ್ಕಾರ ಹೆಣಗಾಡುತ್ತಿದೆ. ಸರಿಯಾಗಿ ಅನ್ನಭಾಗ್ಯದ ಅಕ್ಕಿ ನೀಡಲಾಗುತ್ತಿಲ್ಲ. ಗೃಹಲಕ್ಷ್ಮಿ ಹಣ ಅದ್ಯಾವಾಗ ಫಲಾನುಭವಿಗಳ ಖಾತೆಗೆ ಹೋಗುತ್ತೋ ಗೊತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ, ಮುಂದಿನ ಬಾರಿಯೂ ನಮ್ಮ ಸರ್ಕಾರ ಬಂದರೆ ಗೃಹಲಕ್ಷ್ಮಿ ಹಣವನ್ನು 2,000 ದಿಂದ 4,000ಕ್ಕೆ ಏರಿಕೆ ಮಾಡುತ್ತೇವೆ ಎಂದು ಸದನದ ಸಾಕ್ಷಿಯಾಗಿ ಕುಣಿಗಲ್ ಶಾಸಕ ರಂಗನಾಥ್ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರು| ಬೈಕಿಗೆ ಹಿಂದಿನಿಂದ ಪೊಲೀಸ್ ಜೀಪ್ ಡಿಕ್ಕಿ – ಸವಾರ ಸ್ಥಳದಲ್ಲೇ ಸಾವು

  • ನಿಯಮ ಉಲ್ಲಂಘಿಸಿ ಹೇಮಾವತಿ ನೀರು ಹರಿಸಿದ ಕೃಷ್ಣಪ್ಪ ವಿರುದ್ಧ ಎಫ್‍ಐಆರ್

    ನಿಯಮ ಉಲ್ಲಂಘಿಸಿ ಹೇಮಾವತಿ ನೀರು ಹರಿಸಿದ ಕೃಷ್ಣಪ್ಪ ವಿರುದ್ಧ ಎಫ್‍ಐಆರ್

    ತುಮಕೂರು: ಹೇಮಾವತಿ ನೀರು ನಿರ್ವಹಣಾ ಸಭೆಯ ನಿರ್ಧಾರ ಧಿಕ್ಕರಿಸಿ ನಾಲೆಯ ಗೇಟನ್ನು ದರ್ಪದಿಂದ ತೆಗೆದು, ನೀರು ಹರಿಸಿಕೊಂಡಿದ್ದ ಜೆಡಿಎಸ್‍ನ ಮಾಜಿ ಶಾಸಕ ಎಂಟಿ ಕೃಷ್ಣಪ್ಪ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಕುಣಿಗಲ್‍ಗೆ ನೀರು ಹೋಗುತಿದ್ದ ಮಾರ್ಗ ಮಧ್ಯೆ ಡಿ.ಎಸ್.ಪಾಳ್ಯ ಬಳಿ ಎಸ್ಕೇಪ್ ಗೇಟಿಗೆ ಹಾನಿ ಮಾಡಿ, ಕೃಷ್ಣಪ್ಪ ಅವರು ಬೆಂಬಲಿಗರ ಜೊತೆಗೆ ದಾಂಧಲೆ ನಡೆಸಿ ನೀರು ಹರಿಸಿಕೊಂಡಿದ್ದರು. ಈ ವೇಳೆ ತಡೆಯಲು ಹೋದ ಹೇಮಾವತಿ ಅಧಿಕಾರಿ ಹಾಗೂ ಪೊಲೀಸರಿಗೆ ನಿಂದಿಸಿ ಗೂಂಡಾವರ್ತನೆ ತೋರಿದ್ದರು. ಅಲ್ಲದೆ ಎಸ್ಕೇಪ್ ಗೇಟ್ ತೆಗೆಯುವಾಗ ಅದಕ್ಕೆ ಹಾನಿ ಉಂಟುಮಾಡಿದ್ದರು. ಹೇಮಾವತಿ ನೀರು ನಿರ್ವಹಣಾ ಸಭೆಯ ನಿರ್ಧಾರ ಧಿಕ್ಕರಿಸಿ ನಿಯಮ ಉಲ್ಲಂಘಿಸಿ ದರ್ಪ ಮೆರೆದಿದ್ದರು.

    ಈ ಘಟನೆಗೆ ಸಂಬಂಧಿಸಿದಂತೆ ಹೇಮಾವತಿ ನಾಲಾ ಮುಖ್ಯ ಅಭಿಯಂತರ ಬಾಲಕೃಷ್ಣ ಹೆಬ್ಬೂರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಅನ್ವಯ, ಸಾರ್ವಜನಿಕ ಆಸ್ತಿಗೆ ಹಾನಿ, ಸರ್ಕಾರಿ ಕೆಲಸಕ್ಕೆ ಅಡ್ಡಿ, ಶಾಂತಿ ಭಂಗ ಮಾಡಿದ್ದಾರೆ ಎಂದು ಕೃಷ್ಣಪ್ಪ ಅವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಶುಕ್ರವಾರ ನಡೆದ ಹೇಮಾವತಿ ನೀರು ನಿರ್ವಹಣಾ ಸಭೆಯಲ್ಲಿ ವೇಳಾಪಟ್ಟಿ ಪ್ರಕಾರ ತಾಲೂಕುಗಳಿಗೆ ನೀರು ಬಿಡಲು ನಿರ್ಧಾರ ಮಾಡಲಾಗಿತ್ತು. ಈ ಸಭೆಯ ನಿರ್ಧಾರಕ್ಕೆ ಕ್ಯಾರೇ ಎನ್ನದ ಕೃಷ್ಣಪ್ಪ ಡಿ.ಎಸ್.ಪಾಳ್ಯ ಬಳಿ ಎಸ್ಕೇಪ್ ಗೇಟಿನಿಂದ ನೀರು ಹರಿಸಿ ಗುಂಡಾವರ್ತನೆ ಮೆರೆದಿದ್ದರು. ಹೇಮಾವತಿ ನೀರು ನಿರ್ವಹಣಾ ಪ್ರಾಧಿಕಾರದ ಅನುಮತಿ ಪಡೆಯದೇ ನೀರನ್ನು ಹರಿಸುವಂತಿಲ್ಲ. ಆದರೆ ಈ ನಿಯಮವನ್ನು ಉಲ್ಲಂಘಿಸಿ ಕೃಷ್ಣಪ್ಪ ಅವರು ನೀರು ಹರಿಸಿದ್ದರು.

    ತುರುವೇಕೆರೆಯಲ್ಲಿ ಸದ್ಯ ಬಿಜೆಪಿಯ ಮಸಾಲ ಜಯರಾಮ್ ಶಾಸಕರಾಗಿದ್ದಾರೆ. ಆದರೆ ಜೆಡಿಎಸ್‍ನ ಮಾಜಿ ಶಾಸಕ ಈ ರೀತಿ ದರ್ಪ ಮೆರೆದಿರುವುದು ಬಿಜೆಪಿಯವರ ಕೆಂಗಣ್ಣಿಗೆ ಕಾರಣವಾಗಿತ್ತು.