Tag: msyuru

  • ಮೈಸೂರು ದಸರಾ ಮಹೋತ್ಸವ – ಸೆ.27ರಂದು ಬನ್ನಿ ಮಂಟಪದಲ್ಲಿ ವೈಮಾನಿಕ ಪ್ರದರ್ಶನ

    ಮೈಸೂರು ದಸರಾ ಮಹೋತ್ಸವ – ಸೆ.27ರಂದು ಬನ್ನಿ ಮಂಟಪದಲ್ಲಿ ವೈಮಾನಿಕ ಪ್ರದರ್ಶನ

    ಬೆಂಗಳೂರು: 2025ರ ಮೈಸೂರು ದಸರಾ (Mysuru Dasara) ಮಹೋತ್ಸವ ಸಂಬಂಧ ಸೆ.27ರಂದು ಸಂಜೆ 4 ಗಂಟೆಗೆ ಬನ್ನಿಮಂಟಪದಲ್ಲಿ ವೈಮಾನಿಕ ಪ್ರದರ್ಶನ (Air Show) ಹಾಗೂ ಸೆ.28 ಮತ್ತು ಸೆ.29ರಂದು ಅದೇ ಮೈದಾನದಲ್ಲಿ ಸಂಜೆ 6 ಗಂಟೆಗೆ ಡ್ರೋನ್ ಶೋ (Drone Show) ನಡೆಯಲಿದೆ.

    ಅ.1ರಂದು ಬನ್ನಿಮಂಟಪದ ಮೈದಾನದಲ್ಲಿ ಸಂಜೆ 4 ಗಂಟೆಗೆ ವೈಮಾನಿಕ ಪ್ರದರ್ಶನ ಮತ್ತು ಪಂಜಿನ ಕವಾಯತು ಪೂರ್ವಾಭ್ಯಾಸದ ಕಾರ್ಯಕ್ರಮ ಜರುಗಲಿದೆ. ಅ.2ರಂದು ಅರಮನೆ ಆವರಣದಲ್ಲಿ ಜಂಬೂಸವಾರಿ ಮೆರವಣಿಗೆ ಕಾರ್ಯಕ್ರಮ ಪ್ರಾರಂಭಗೊಳ್ಳುವುದು ಮತ್ತು ಅದೇ ದಿನ ಸಂಜೆ 6 ಗಂಟೆಗೆ ಬನ್ನಿಮಂಟಪದ ಮೈದಾನದಲ್ಲಿ ಪಂಜಿನ ಕವಾಯತು ಕಾರ್ಯಕ್ರಮ ಜರುಗಲಿದೆ. ಇದನ್ನೂ ಓದಿ: ನವರಾತ್ರಿಯಿಂದ ದೇಶದಲ್ಲಿ ಜಿಎಸ್‌ಟಿ ಉಳಿತಾಯ ಉತ್ಸವ – ಸ್ವದೇಶಿ ವಸ್ತುಗಳನ್ನು ಖರೀದಿಸಿ: ಮೋದಿ ಕರೆ

    ಅರಮನೆ ಆವರಣದಲ್ಲಿ ಮತ್ತು ಬನ್ನಿಮಂಟಪದ ಮೈದಾನದಲ್ಲಿ ಲಭ್ಯವಿರುವ ಆಸನಗಳನ್ನು ಗಮನದಲ್ಲಿಟ್ಟುಕೊಂಡು ವೀಕ್ಷಕರಿಗೆ ಟಿಕೆಟ್ ಮತ್ತು ಪಾಸುಗಳನ್ನು ನೀಡಲಾಗುತ್ತದೆ. ಅಲ್ಲದೇ ಅಧಿಕೃತ ಟಿಕೆಟ್ ಮತ್ತು ಪಾಸು ಹೊಂದಿದವರಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಇದನ್ನೂ ಓದಿ: ನಾಳೆಯಿಂದ ರಾಜ್ಯದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಶುರು – ಮಧುಸೂದನ್ ನಾಯ್ಕ್

    ಭದ್ರತೆ, ಶಿಷ್ಟಾಚಾರ, ಆದ್ಯತೆ, ಸ್ಥಳದಲ್ಲಿ ಲಭ್ಯವಿರುವ ಸೌಕರ್ಯ ಹಾಗೂ ಸಾರ್ವಜನಿಕ ಸುರಕ್ಷತೆ ಮತ್ತು ಜನಸಮೂಹ ನಿಯಂತ್ರಣಗಳ ಮಾನದಂಡಗಳ ಅನುಗುಣವಾಗಿ ಪಾಸುಗಳನ್ನು ಮತ್ತು ಟಿಕೆಟುಗಳನ್ನು ವಿತರಿಸಲಾಗುತ್ತದೆ. ಈ ಕಾರ್ಯಕ್ರಮಗಳಿಗೆ ಟಿಕೆಟ್‌ಗಳನ್ನು ಆನ್‌ಲೈನ್ www.mysoredasara.gov.in ಮೂಲಕ ಪಡೆದುಕೊಳ್ಳಬಹುದಾಗಿದೆ. ಸಾರ್ವಜನಿಕರು ಕಾರ್ಯಕ್ರಮ ಯಶಸ್ವಿಯಾಗಿಸಲು ಸಹಕರಿಸುವಂತೆ ದಸರಾ ವಿಶೇಷಾಧಿಕಾರಿ ಮತ್ತು ಮೈಸೂರು ಜಿಲ್ಲಾಧಿಕಾರಿಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಆಣೆ ಪ್ರಮಾಣಕ್ಕಾಗಿ ದೇವಾಲಯಕ್ಕೆ ಬಂದ ಹೊನ್ನಾಳಿ ಶಾಸಕ – ಸವಾಲೆಸೆದು ಕೈಕೊಟ್ಟ ರೇಣುಕಾಚಾರ್ಯ ಆಪ್ತ

  • ಜೆಡಿಎಸ್ ಅಭ್ಯರ್ಥಿ ಕಿಡ್ನಿ ಮಾರಾಟ ಮಾಡೋದ್ರಲ್ಲಿ ನಂಬರ್ ಒನ್: ಎಸ್.ಟಿ ಸೋಮಶೇಖರ್

    ಜೆಡಿಎಸ್ ಅಭ್ಯರ್ಥಿ ಕಿಡ್ನಿ ಮಾರಾಟ ಮಾಡೋದ್ರಲ್ಲಿ ನಂಬರ್ ಒನ್: ಎಸ್.ಟಿ ಸೋಮಶೇಖರ್

    ಮೈಸೂರು: ದಿನದಿನದಿಂದ ದಿನಕ್ಕೆ ವಿಧಾನ ಪರಿಷತ್ ಚುನಾವಣೆ ಕಾವು ಪಡೆದುಕೊಳ್ಳುತ್ತಿದೆ. ಮೈಸೂರು ಜೆಡಿಎಸ್ ಆಭ್ಯರ್ಥಿ ವಿರುದ್ಧ ಸಚಿವ ಎಸ್.ಟಿ ಸೋಮಶೇಖರ್ ಗರಂ ಆಗಿದ್ದಾರೆ.

    ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಅಭ್ಯರ್ಥಿ ಒಂದು ಸೈಟನ್ನು ನಾಲ್ಕು ಜನರಿಗೆ ರಿಜಿಸ್ಟ್ರೇಷನ್ ಮಾಡಿಕೊಡುವವನು. ಯಾವುದೋ ನಿಗಮದ ಅಧ್ಯಕ್ಷ ಆಗಿದ್ದ ವೇಳೆ ಕಿಡ್ನಿ ಮಾರಾಟ ಮಾಡ್ತಿದ್ದ. ಆತ ಕಿಡ್ನಿ ಮಾರಾಟ ಮಾಡೋದ್ರಲ್ಲಿ ನಂಬರ್ ಒನ್ ಎಂದು ಮಂಜೇಗೌಡ ಅವರನ್ನು ಸೋಮಶೇಖರ್ ತೀಕ್ಷ್ಣವಾಗಿ ಟೀಕಿಸಿದ್ದಾರೆ.

    ಕಿಡ್ನಿ ಮಾರಾಟಕ್ಕೆ ಫೇಮಸ್ ಆಗಿದ್ದವ ಇಂದು ಜೆಡಿಎಸ್ ಅಭ್ಯರ್ಥಿ. ಇಂತಹ ಜೆಡಿಎಸ್ ಅಭ್ಯರ್ಥಿ ಗೆದ್ದರೆ ಅದು ಮೈಸೂರು, ಚಾಮರಾಜನಗರ ಜನತೆಗೆ ಅವಮಾನ ಎಂದರು. ಇದನ್ನೂ ಓದಿ: ಆಪರೇಶನ್ ಕಮಲಕ್ಕೆ ದುಡ್ಡು ಕೊಡಬೇಕು ಅನ್ನೋದನ್ನ ಒಪ್ಪಿಕೊಂಡ ಸಚಿವ ಈಶ್ವರಪ್ಪ

    ಅಂತಿಮ ಕ್ಷಣದವರೆಗೂ ಕಾಂಗ್ರೆಸ್ ಪಕ್ಷದಿಂದ ತಮಗೆ ಟಿಕೆಟ್ ಸಿಗಬಹುದೆಂದು ನಿರೀಕ್ಷೆ ಇಟ್ಟುಕೊಂಡಿದ್ದ ಸಿ.ಎನ್ ಮಂಜೇಗೌಡ ಅವರು ಜೆಡಿಎಸ್ ಗೆ ನೆಗೆದು ಆ ಪಕ್ಷದ ಅಭ್ಯರ್ಥಿಯಾಗಿ ಈ ಚುನಾವಣೆಯಲ್ಲಿ ಕಣಕ್ಕಿಳಿದಿದ್ದಾರೆ. ಮಂಜೇಗೌಡರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಲ್ಲಿ ಹೊಸಬರಾಗಿದ್ದು ಮಾಜಿ ಸಚಿವ ಸಾ.ರಾ ಮಹೇಶ್, ಶಾಸಕರುಗಳಾದ ಕೆ.ಮಹಾದೇವ, ಎಂ.ಅಶ್ವಿನ್ ಕುಮಾರ್ ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಬಿದ್ದಿದೆ.

  • ಚೌಟ್ರಿಯನ್ನು ನಾನೇ ಟ್ರ್ಯಾಲಿ ಹಾಕಿ ಹಿಂದೆ ಮುಂದೆ ಸರಿಸೋಕೆ ಆಗುತ್ತಾ?- ಸರ್ವೆಗೆ ಸ್ವಾಗತಿಸಿದ್ರು ಸಾ.ರಾ ಮಹೇಶ್

    ಚೌಟ್ರಿಯನ್ನು ನಾನೇ ಟ್ರ್ಯಾಲಿ ಹಾಕಿ ಹಿಂದೆ ಮುಂದೆ ಸರಿಸೋಕೆ ಆಗುತ್ತಾ?- ಸರ್ವೆಗೆ ಸ್ವಾಗತಿಸಿದ್ರು ಸಾ.ರಾ ಮಹೇಶ್

    ಮೈಸೂರು: ಚೌಟ್ರಿಯನ್ನು ನಾನೇ ಟ್ರ್ಯಾಲಿ ಹಾಕಿ ಹಿಂದೆ ಮುಂದೆ ಸರಿಸೋಕೆ ಆಗುತ್ತಾ ಎಂದು ಪ್ರಶ್ನಿಸಿರುವ ಶಾಸಕ ಸಾ.ರಾ ಮೇಶ್ ಅವರು ನೀವೇ ಸರ್ವೆಗೆ ಬನ್ನಿ ಎಂದು ಸ್ವಾಗತಿಸಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸರ್ವೆಗೆ ನನ್ನ ಸ್ವಾಗತವಿದೆ. ಸರ್ವೆಗೆ ಆಯುಕ್ತರೇ ಬರಲಿ. ಚೌಟ್ರಿಯನ್ನು ನಾನೇ ಟ್ರ್ಯಾಲಿ ಹಾಕಿ ಹಿಂದೆ ಮುಂದೆ ಸರಿಸೋಕೆ ಆಗಲ್ಲ. ಹೀಗಾಗಿ ಸರ್ವೆಗೆ ನೀವೇ ಬನ್ನಿ ಎಂದು ಸಂಪೂರ್ಣವಾಗಿ ಸ್ವಾಗತಿಸಿದ್ದಾರೆ.

    ರಾಜಕಾಲುವೆ, ಗೋಮಾಳದ ಒಂದೇ ಒಂದು ಗುಂಟೆ ಒತ್ತುವರಿ ಆಗಿದ್ದರೆ ಚೆಕ್ ಮಾಡಿ ಬನ್ನಿ. ನಾನೇ ನಿಮಗೆ ಬೊಕ್ಕೆ ನೀಡಿ ಸರ್ವೆಗೆ ಸ್ವಾಗತಿಸುತ್ತೇನೆ. ನಿಮ್ಮ ಶಿಷ್ಯೆನೋ, ಜ್ಯೂನಿಯರ್ ಇದ್ದಾರಲ್ಲ ಅವರು ಆಸ್ತಿ ಘೋಷಣೆ ಮಾಡಿದ್ದಾರಾ ಮನೀಷ್ ಮುದ್ಗಲ್ ಅವರೇ? ಕಾನೂನಿನಲ್ಲಿ ಅವಕಾಶ ಇದ್ದರೂ ಶಿಷ್ಯೆಗಾಗಿ ಸರ್ವೆಗೆ ಆದೇಶ ಮಾಡಿದ್ದೀರಿ. ನಿಮ್ಮ ಕುಚುಕು ಶಿಷ್ಯೆಗಾಗಿ ಆದೇಶ ಮಾಡಿದ್ದೀರಿ ಎಂದು ಶಾಸಕರು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸಾರಾ ಚೌಟ್ರಿ ಹಳ್ಳದ ಮೇಲೂ ಕಟ್ಟಿಲ್ಲ, ನಾಲೆಯ ಮೇಲೂ ಕಟ್ಟಿಲ್ಲ: ಪ್ರಾದೇಶಿಕ ಆಯುಕ್ತರ ವರದಿಯಲ್ಲಿ ಬಹಿರಂಗ

    ಸಾರಾಗೆ ಭೂ ಕಂಟಕ:
    ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕಿಕ್‍ಬ್ಯಾಕ್ ಆರೋಪ ಮಾಡಿದ್ದ ಶಾಸಕ ಸಾ.ರಾ ಮಹೇಶ್‍ಗೆ ಮತ್ತೆ ಭೂಕಂಟಕ ಎದುರಾದಂತೆ ಇದೆ. ಮೈಸೂರು-ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ತನಿಖೆಗೆ ಹೊಸ ತಂಡ ರಚಿಸಿ ಭೂಕಂದಾಯ ಇಲಾಖೆ ಆಯುಕ್ತ ಮನಿಷ್ ಮೌದ್ಗಿಲ್ ಆದೇಶ ಹೊರಡಿಸಿದ್ದರು.

    ಕೇರಗಳ್ಳಿಯ ಸರ್ವೇ ನಂಬರ್ 115, ಯಡಹಳ್ಳಿಯ ಸರ್ವೇ ನಂಬರ್ 69,72, ದಟ್ಟಗಳ್ಳಿಯ ಸರ್ವೇ ನಂಬರ್ 130/3, ಲಿಂಗಾಬುದಿ ಸರ್ವೇ ನಂಬರ್ 10ರಲ್ಲಿ ನಡೆದ ಭೂಒತ್ತುವರಿಗಳ ತನಿಖೆ ನಡೆಸಿ 10 ದಿನದಲ್ಲಿ ವರದಿ ನೀಡಲು ಸೂಚಿಸಿದ್ದಾರೆ. ದಟ್ಟಗಳ್ಳಿ ಮತ್ತು ಲಿಂಗಾಬುದಿ ಸರ್ವೇ ನಂಬರ್ ಗಳಲ್ಲಿ ಸಾರಾ ಮಹೇಶ್ ಒಡೆತನದ ತೋಟ, ಕಲ್ಯಾಣ ಮಂಟಪ ಇದೆ. ಹೀಗಾಗಿ ಸಹಜವಾಗಿಯೇ ಇವುಗಳ ಸರ್ವೇ ಕೂಡ ನಡೆಯಲಿದೆ.