Tag: MSRTC

  • ಬೆಳಗಾವಿ – ಮಹಾರಾಷ್ಟ್ರ ಮಧ್ಯೆ ಬಸ್ ಸಂಚಾರ ಪುನರಾರಂಭ

    ಬೆಳಗಾವಿ – ಮಹಾರಾಷ್ಟ್ರ ಮಧ್ಯೆ ಬಸ್ ಸಂಚಾರ ಪುನರಾರಂಭ

    ಬೆಳಗಾವಿ: ಕಳೆದ ಎರಡು ದಿನಗಳಿಂದ ಬಂದ್ ಆಗಿದ್ದ ಬೆಳಗಾವಿ-ಮಹಾರಾಷ್ಟ್ರ (Belagavi – Maharashtra) ನಡುವೆ ಬಸ್ (Bus) ಸಂಚಾರ ಪುನರಾರಂಭಗೊಂಡಿದೆ.

    ಎಂದಿನಂತೆ ಬಸ್‌ಗಳು ಓಡಾಡುತ್ತಿದ್ದು, ಕೊಲ್ಲಾಪುರಕ್ಕೆ ತೆರಳುವ ಬಸ್‌ಗಳು ನಗರದ ಹೊರವಲಯಗಳವರೆಗೆ ಮಾತ್ರ ಸಂಚಾರ ಮಾಡಲಿದ್ದು ಕೊಲ್ಲಾಪುರ ಹೊರವಲಯದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರ (National Highway) ಮೇಲೆ ಪ್ರಯಾಣಿಕರ ಇಳಿಸಿ ವಾಪಸ್ ಕರ್ನಾಟಕಕ್ಕೆ ಬರಲಿವೆ. ಬೆಳಗಾವಿ (Belagavi) ಜಿಲ್ಲೆಯಿಂದ ಮಹಾರಾಷ್ಟ್ರಕ್ಕೆ ನಿತ್ಯ 400ಕ್ಕೂ ಹೆಚ್ಚು ಬಸ್‌ಗಳ ಸಂಚಾರ ಮಾಡುತ್ತಿದ್ದು ಅದರಲ್ಲಿ ಪ್ರಮುಖವಾಗಿ ಬೆಳಗಾವಿ, ಚಿಕ್ಕೋಡಿ, ಕಾಗವಾಡ, ನಿಪ್ಪಾಣಿ ವಿಭಾಗಗಳಿಂದ ಸಂಚರಿಸುತ್ತವೆ. ಇದನ್ನೂ ಓದಿ: ಪಿಜಿ ಯುವತಿಯರ ನಗ್ನ ದೃಶ್ಯ ಸೆರೆ ಹಿಡಿದು ಟಾರ್ಚರ್ – ಸೆಕ್ಸ್ ಆಫರ್‌ ಕೊಟ್ಟು ಖೆಡ್ಡಾಕ್ಕೆ ಬೀಳಿಸಿದ ಖಾಕಿ

    ಕರ್ನಾಟಕ ಬಸ್‌ಗಳಿಗೆ (Karnataka Bus) ಮಸಿ ಬಳಿದು ಪುಂಡಾಟಿಕೆ ಮೆರೆದಿದ್ದ ಮರಾಠಿ ಪುಂಡರು ಮತ್ತು ಶಿವಸೇನೆ, ಎಂಇಎಸ್, ಸ್ವರಾಜ್ಯ ಸಂಘಟನೆ ಸೇರಿ ವಿವಿಧ ಸಂಘಟನೆಗಳ ಪುಂಡಾಟಿಕೆ ಹಿನ್ನೆಲೆ ಎರಡು ದಿನಗಳಿಂದ ಮಹಾರಾಷ್ಟ್ರಕ್ಕೆ (Maharashtra) ತೆರಳುವ ಬಸ್‌ಗಳ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಎರಡು ದಿನಗಳ ಬಳಿಕ ಇಂದಿನಿಂದ ಮತ್ತೆ ಬಸ್‌ಗಳ ಸಂಚಾರ ಪುನಾರಂಭ ಮಾಡಲಾಗಿದ್ದು ಪರಿಸ್ಥಿತಿ ಅವಲೋಕಿಸಿ ಹಂತ-ಹಂತವಾಗಿ ಬಸ್‌ಗಳ ಸಂಚಾರ ಆರಂಭ ಮಾಡಲಾಗುತ್ತದೆ. ಇದನ್ನೂ ಓದಿ: ಬುರ್ಕಾ ಧರಿಸಿ ಐಟಂ ಸಾಂಗ್‌ಗೆ ಸ್ಟೆಪ್ – ನಾಲ್ವರು ಮುಸ್ಲಿಂ ವಿದ್ಯಾರ್ಥಿಗಳು ಅಮಾನತು

    ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳು ಸಂಚಾರ ಆರಂಭಿಸಿದರೂ ಎಂಎಸ್‌ಆರ್‌ಟಿಸಿ (MSRTC) ಮಹಾರಾಷ್ಟ್ರ ಸಾರಿಗೆ ಇಲಾಖೆ ಬಸ್ ಗಳನ್ನು ಪ್ರಾರಂಭಿಸಿಲ್ಲ.

    Live Tv
    [brid partner=56869869 player=32851 video=960834 autoplay=true]

  • MSRTC ಸಾರಿಗೆ ನೌಕರರಿಗೆ ದೀಪಾವಳಿ ಗಿಫ್ಟ್ – 5,000 ರೂ. ಬೋನಸ್

    MSRTC ಸಾರಿಗೆ ನೌಕರರಿಗೆ ದೀಪಾವಳಿ ಗಿಫ್ಟ್ – 5,000 ರೂ. ಬೋನಸ್

    ಮುಂಬೈ: ಮಹಾರಾಷ್ಟ್ರ ರಸ್ತೆ ಸಾರಿಗೆ ನಿಗಮ (MSRTC) ನೌಕರರಿಗೆ ದೀಪಾವಳಿ (Deepavali) ಪ್ರಯುಕ್ತ 5,000 ರೂ. ಬೋನಸ್ (Bonus)  ನೀಡಲು ನಿರ್ಧರಿಸಿದೆ.

    ಮಹಾರಾಷ್ಟ್ರ (Maharashtra) ಸಾರಿಗೆ ನಿಗಮಕ್ಕೆ ಸರ್ಕಾರ 45 ಕೋಟಿ ರೂ. ಆರ್ಥಿಕ ನೆರವು ನೀಡಿದ ಬೆನ್ನಲ್ಲೇ ನೌಕರರಿಗೆ ಬೋನಸ್ ಆಗಿ ತಲಾ 5,000 ರೂ. ನೀಡಲು ಕಂಪನಿ ಮುಂದಾಗಿದೆ. ಎಮ್‍ಎಸ್‌ಆರ್‌ಟಿಸಿ ತಿಳಿಸಿದ ಪ್ರಕಾರ ಸಾರಿಗೆ ನೌಕರರಿಗೆ ಪ್ರತಿಯೊಬ್ಬರಿಗೂ ಬೋನಸ್ ನೀಡಲು ನಿರ್ಧರಿಸಿದ್ದು, ಒಟ್ಟು 87,000 ನೌಕರರು ಈ ಪ್ರಯೋಜನ ಪಡೆಯಲಿದ್ದಾರೆ. ಇದನ್ನೂ ಓದಿ: ಮುಸ್ಲಿಮರು ಲಕ್ಷ್ಮಿಯನ್ನು ಪೂಜಿಸಲ್ಲ, ಆದರೆ ಅವರಲ್ಲಿ ಶ್ರೀಮಂತರಿಲ್ಲವೇ?- ಬಿಜೆಪಿ ಶಾಸಕ

    ಕೊರೊನಾ (Corona) ಬಳಿಕ ಎಮ್‍ಎಸ್‌ಆರ್‌ಟಿಸಿ ನಷ್ಟದಲ್ಲಿ ಕಾರ್ಯಚರಿಸುತ್ತಿತ್ತು. ಕಳೆದೆರಡು ವರ್ಷಗಳಿಂದ ನಷ್ಟದಲ್ಲಿದ್ದ ಎಮ್‍ಎಸ್‌ಆರ್‌ಟಿಸಿ ಇದೀಗ ಬೋನಸ್ ನೀಡಲು ಮುಂದಾಗಿದ್ದು, ನೇರವಾಗಿ ನೌಕರರ ಬ್ಯಾಂಕ್‌ ಖಾತೆಗೆ ಜಮೆ ಮಾಡುವುದಾಗಿ ತಿಳಿಸಿದೆ. ಇದನ್ನೂ ಓದಿ: ಮೊಬೈಲ್ ಖರೀದಿಗಾಗಿ ರಕ್ತ ಮಾರಲು ಹೋದ 16ರ ಹುಡುಗಿ

    ಎಮ್‍ಎಸ್‌ಆರ್‌ಟಿಸಿ ದೇಶದ ಅತಿ ದೊಡ್ಡ ಸಾರಿಗೆ ಸಂಸ್ಥೆಗಳಲ್ಲಿ ಒಂದಾಗಿದ್ದು, ರಾಜ್ಯದಲ್ಲಿ ಒಟ್ಟು 16,000ಕ್ಕೂ ಹೆಚ್ಚು ಬಸ್‍ಗಳು ಕಾರ್ಯಚರಿಸುತ್ತಿದೆ. ಇತ್ತಿಚೇಗೆ ಪುಣೆಯಿಂದ ಅಹಮದ್‍ನಗರಕ್ಕೆ ಎಲೆಕ್ಟ್ರಿಕ್ ಬಸ್ ಸೇವೆ ಆರಂಭಿಸಿತ್ತು.

    Live Tv
    [brid partner=56869869 player=32851 video=960834 autoplay=true]