Tag: MSP

  • ಬೆಂಬಲ ತೊಗರಿ ಖರೀದಿ ಶುರು – ಜಿಲ್ಲೆಯಾದ್ಯಂತ 177 ಖರೀದಿ ಕೇಂದ್ರ ಸ್ಥಾಪನೆ

    ಬೆಂಬಲ ತೊಗರಿ ಖರೀದಿ ಶುರು – ಜಿಲ್ಲೆಯಾದ್ಯಂತ 177 ಖರೀದಿ ಕೇಂದ್ರ ಸ್ಥಾಪನೆ

    ಕಲಬುರಗಿ: ಜಿಲ್ಲೆಯಾದ್ಯಂತ ಪ್ರಸಕ್ತ 2024-25ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ (MSP) ಯೋಜನೆಯಡಿ ತೊಗರಿ (Pigeon pea Crop) ಖರೀದಿ ಆರಂಭವಾಗಿದ್ದು, ಜಿಲ್ಲಾಯದ್ಯಂತ 177 ಖರೀದಿ ಕೇಂದ್ರಗಳನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

    ಪ್ರಸಕ್ತ 2024-25ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರಾಜ್ಯದಾದ್ಯಂತ FAQ ಗುಣಮಟ್ಟದ 3,06,150 ಮೆಟ್ರಿಕ್ ಟನ್ ತೊಗರಿ ಖರೀದಿಗೆ ಸರ್ಕಾರ ಆದೇಶಿಸಿದೆ ಎಂದಿರುವ ಅವರು, ಜಿಲ್ಲೆಯಲ್ಲಿ ಈಗಾಗಲೆ ಗುರುತಿಸಿರುವ 177 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಅಥವಾ ರೈತ ಉತ್ಪಾದಕ ಸಂಘಗಳಲ್ಲಿ ತೊಗರಿ ಖರೀದಿಗೆ ನೊಂದಣಿ ಪ್ರಕ್ರಿಯೆ ಆರಂಭವಾಗಿದೆ. ಖರೀದಿಗೆ 134 ಕೇಂದ್ರ ಮ್ಯಾಪಿಂಗ್ ಆಗಿದ್ದು, ಇನ್ನುಳಿದ 43 ಕೇಂದ್ರ ತುರ್ತಾಗಿ ಮ್ಯಾಪಿಂಗ್ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಿದ್ಯುತ್ ಶಾರ್ಟ್‌ ಸರ್ಕ್ಯೂಟ್; ಕೊಟ್ಟಿಗೆಯಲ್ಲಿದ್ದ 7 ಹೋರಿಗಳು ಸಜೀವ ದಹನ

    ಎಫ್.ಎ.ಕ್ಯೂ ಗುಣಮಟ್ಟದ ಪ್ರತಿ ಕ್ವಿಂಟಾಲ್ ತೊಗರಿಗೆ 7,550 ರೂ. ನಿಗದಿ ಮಾಡಲಾಗಿದ್ದು, ಪ್ರತಿ ಎಕರೆಗೆ 4 ಕ್ವಿಂಟಾಲ್‌ನಂತೆ ಪ್ರತಿ ರೈತರಿಂದ ಗರಿಷ್ಠ 40 ಕ್ವಿಂಟಾಲ್ ಖರೀದಿಸಲಾಗುತ್ತದೆ. ಹಣವನ್ನು ಡಿಬಿಟಿ ಮೂಲಕ ರೈತರ ಬ್ಯಾಂಕ್‌ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು ಎಂದು ಡಿಸಿ ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಮಹಿಳಾ ಮೋರ್ಚ ಅಧ್ಯಕ್ಷೆ ವಿರುದ್ಧ ವಂಚನೆ ಆರೋಪ – ಕೋರ್ಟ್‌ನಿಂದ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ

    ಇನ್ನು ನ್ಯಾಫೆಡ್ ನಿಂದ ತೊಗರಿ ಖರೀದಿಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ನಿಯಮಿತ ಮತ್ತು ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯನ್ನು ನೋಡಲ್ ಏಜೆನ್ಸಿಗಳನ್ನಾಗಿ ನೇಮಿಸಿದ್ದು, ರೈತ ಬಾಂಧವರು ಇದರ ಲಾಭ ಪಡೆಯಬೇಕೆಂದು ಡಿಸಿ ಅವರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಗರ್ಭಿಣಿಯರ ಬೃಹತ್ ಆರೋಗ್ಯ ತಪಾಸಣಾ ಶಿಬಿರ – ಮಾತೃತ್ವ ಸುರಕ್ಷತಾ ಅಭಿಯಾನಕ್ಕೆ ಆರೋಗ್ಯ ಇಲಾಖೆ ಒತ್ತು

  • ಬೆಂಬಲ ಬೆಲೆಯಲ್ಲಿ ತೊಗರಿ,ಕಡಲೆ ಖರೀದಿಗೆ ಕೇಂದ್ರ ಅನುಮತಿ – ಯಾವ ಜಿಲ್ಲೆಗಳಲ್ಲಿ ಖರೀದಿ?

    ಬೆಂಬಲ ಬೆಲೆಯಲ್ಲಿ ತೊಗರಿ,ಕಡಲೆ ಖರೀದಿಗೆ ಕೇಂದ್ರ ಅನುಮತಿ – ಯಾವ ಜಿಲ್ಲೆಗಳಲ್ಲಿ ಖರೀದಿ?

    ಬೆಂಗಳೂರು: ಕನಿಷ್ಠ ಬೆಂಬಲ ಬೆಲೆಯಲ್ಲಿ (MSP) ತೊಗರಿ ಮತ್ತು ಕಡಲೆ ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.

    ರಾಜ್ಯ ಸರ್ಕಾರದ ಕೋರಿಕೆಯ ಮೇರೆಗೆ ಕೇಂದ್ರ ಸರ್ಕಾರವು 3,06,150 ಮೆಟ್ರಿಕ್‌ ಟನ್‌ ತೊಗರಿ, 96,498 ಮೆಟ್ರಿಕ್‌ ಟನ್‌ ಕಡಲೆ ಖರೀದಿ ಮಾಡಲಿದೆ. ಪ್ರತಿ ಕ್ವಿಂಟಲ್‌ಗೆ ತೊಗರಿಗೆ 7,550 ರೂ. ಹಾಗೂ ಕಡಲೆಗೆ 5,650 ರೂ. ದರವನ್ನು ನಿಗದಿ ಮಾಡಲಾಗಿದೆ.

    ಕಲಬುರಗಿ, ಯಾದಗಿರಿ, ಬೀದರ್‌, ರಾಯಚೂರು, ವಿಜಯಪುರ, ಕೊಪ್ಪಳ ಬೆಳಗಾವಿ, ಬಳ್ಳಾರಿ, ವಿಜಯನಗರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ತೊಗರಿ ಖರೀದಿಸಲಾಗುತ್ತದೆ. ಇದನ್ನೂ ಓದಿ:ಚಾಂಪಿಯನ್ಸ್ ಟ್ರೋಫಿ 2025 ರ ವೇಳಾಪಟ್ಟಿ ಪ್ರಕಟ; ಫೆ.23ರ ಭಾನುವಾರ ಭಾರತ-ಪಾಕ್‌ ಮುಖಾಮುಖಿ

     

    ಧಾರವಾಡ, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ಗದಗ, ಬೆಳಗಾವಿ, ವಿಜಯಪುರ ಕಲಬುರಗಿ, ಯಾದಗಿರಿ, ಬೀದರ್‌, ಬಾಗಲಕೋಟೆ, ದಾವಣಗೆರೆ, ಚಿಕ್ಕಮಗಳೂರು ಮತ್ತು ರಾಯಚೂರು ಜಿಲ್ಲೆಗಳಲ್ಲಿ ಕಡಲೆಯನ್ನು ಖರೀದಿ ಮಾಡಲಾಗುತ್ತದೆ.

    ಕೇಂದ್ರ ಸರ್ಕಾರದ ಅನುಮತಿ ಬೆನ್ನಲ್ಲೇ ನೋಂದಣಿ ಮತ್ತು ಖರೀದಿ ಕೇಂದ್ರ ಆರಂಭಿಸುವಂತೆ ಜವಳಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ (Shivanand Patil) ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

     

  • ದೆಹಲಿ ಗಡಿಯಲ್ಲಿ ಮುಂದುವರಿದ ರೈತರ ಪ್ರತಿಭಟನೆ – ಹೋರಾಟ ಹತ್ತಿಕ್ಕಲು ಅಶ್ರುವಾಯು ಪ್ರಯೋಗ

    ದೆಹಲಿ ಗಡಿಯಲ್ಲಿ ಮುಂದುವರಿದ ರೈತರ ಪ್ರತಿಭಟನೆ – ಹೋರಾಟ ಹತ್ತಿಕ್ಕಲು ಅಶ್ರುವಾಯು ಪ್ರಯೋಗ

    – ಪಂಜಾಬ್ ಮತ್ತು ಹರಿಯಾಣ ಗಡಿಯಲ್ಲೂ ಬಿಗಿ ಭದ್ರತೆ

    ನವದೆಹಲಿ: ಕನಿಷ್ಠ ಬೆಂಬಲ ಬೆಲೆಗೆ (MSP) ಕಾನೂನಿನ ಮಾನ್ಯತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದೆಹಲಿ ಹರಿಯಾಣ ಗಡಿ ಶಂಭು ಗಡಿಯಲ್ಲಿ (Shambhu Border) ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.

    ಗಡಿಯಲ್ಲಿ ಭಾನುವಾರ (ಇಂದು) ದೆಹಲಿ ಪ್ರವೇಶಿಸಲು ಯತ್ನಿಸಿದ ಪ್ರತಿಭಟನಾ ನಿರತ ರೈತರ (Farmers) ಮೇಲೆ ಪೊಲೀಸರು ಅಶ್ರುವಾಯು ದಾಳಿ ನಡೆಸಿದರು. ಶುಕ್ರವಾರ ದೆಹಲಿ ಗಡಿ ಪ್ರವೇಶಕ್ಕೆ ತಡೆ ಬಿದ್ದ ಹಿನ್ನಲೆ ಸರ್ಕಾರದ ಜೊತೆಗಿನ ಮಾತುಕತೆಗೆ ರೈತ ಮುಖಂಡರು ಒಂದು ದಿನದ ಸಮಯ ನೀಡಿದ್ದರು. ಪ್ರಧಾನಿ ಮೋದಿ (PM Modi) ಸರ್ಕಾರದಿಂದ ಮಾತುಕತೆಗೆ ಯಾವುದೇ ಆಹ್ವಾನ ಬಾರದ ಹಿನ್ನಲೆ ರೈತರು ಇಂದು ಮತ್ತೆ ದೆಹಲಿ ಗಡಿ ಪ್ರವೇಶಕ್ಕೆ ಯತ್ನಿಸಿದರು. ಆದರೆ ಹರಿಯಾಣ ಪೊಲೀಸರು (Haryana Police) ರೈತರನ್ನು ತಡೆದರು, ಇದೇ ಕಾರಣಕ್ಕೆ ವಾಗ್ವಾದವೂ ಏರ್ಪಟ್ಟಿತು. ಇದನ್ನೂ ಓದಿ: ದೇಶ ತೊರೆಯುತ್ತಿದ್ದ ಸಿರಿಯಾ ಅಧ್ಯಕ್ಷನಿದ್ದ ವಿಮಾನ ಕಣ್ಮರೆ – ಕ್ಷಿಪಣಿ ದಾಳಿಗೆ ಪತನ?

    ದೆಹಲಿ ಪ್ರವೇಶಕ್ಕೆ ಪೊಲೀಸರು ಗುರುತಿನ ಚೀಟಿ ಕೇಳುತ್ತಿದ್ದಾರೆ. ಆದರೆ ದೆಹಲಿಗೆ ಹೋಗಲು ಅವಕಾಶ ನೀಡುತ್ತೇವೆ ಎಂಬ ಗ್ಯಾರಂಟಿ ನೀಡುತ್ತಿಲ್ಲ, ದೆಹಲಿಗೆ ಹೋಗಲು ಅನುಮತಿ ಇಲ್ಲ ಎನ್ನುತ್ತಾರೆ, ಹಾಗಾದರೆ ಗುರುತಿನ ಚೀಟಿ ಏಕೆ ಕೊಡಬೇಕು? ಪ್ರವೇಶಕ್ಕೆ ಅನುಮತಿ ಕೊಡುವುದಾದರೆ ಗುರುತಿನ ಚೀಟಿ ನೀಡುತ್ತೇವೆ ಎಂದು ಪ್ರತಿಭಟನಾನಿರತ ರೈತರೊಬ್ಬರು ಹೇಳಿದರು. ರೈತರು ಗುಂಪು ಗುಂಪಾಗಿ ಚಲಿಸುತ್ತಿದ್ದಾರೆಯೇ ಹೊರತು 101 ರೈತರ ಯೋಜಿತ ಗುಂಪಿನಂತೆ ಅಲ್ಲ ಎಂದು ಪೊಲೀಸರು ಹೇಳಿದ್ದಾರೆ.

    ಗುರುತಿನ ಪರಿಶೀಲನೆಯ ನಂತರವೇ ರೈತರಿಗೆ ಮುಂದುವರಿಯಲು ಅವಕಾಶ ನೀಡಲಾಗುವುದು ಎಂದು ಹಿ ರಿಯ ಅಧಿಕಾರಿಗಳು ಹೇಳಿದ್ದಾರೆ. ಆದರೆ, ಇದನ್ನು ನಿರಾಕರಿಸಿದ ರೈತರು, ಪೊಲೀಸರಿಗೆ ಯಾವುದೇ ಪಟ್ಟಿ ನೀಡಿಲ್ಲ ಎಂದು ಹೇಳಿದರು. ದೆಹಲಿಯತ್ತ ಸಾಗಲು ರೈತರ ಹೊಸ ಪ್ರಯತ್ನ ಮಾಡುವ ದೃಷ್ಟಿಯಿಂದ, ಪಂಜಾಬ್-ಹರಿಯಾಣ ಗಡಿಯಲ್ಲಿ (Haryana Punjab Border) ಭದ್ರತೆಯನ್ನು ಹೆಚ್ಚಿಸಲಾಗಿದೆ. ಇದನ್ನೂ ಓದಿ: ಪೊಲೀಸ್ ಕಸ್ಟಡಿಯಲ್ಲಿ ಚಿತ್ರಹಿಂಸೆ ಕೇಸ್ – ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಖುಲಾಸೆ

    ರೈತರನ್ನು ತಡೆಯಲು ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಐದಕ್ಕಿಂತ ಹೆಚ್ಚು ಜನರು ಸೇರುವುದನ್ನು ತಡೆಯುವ ಸೆಕ್ಷನ್ 163 (ಹಿಂದೆ ಸೆಕ್ಷನ್ 144) ಅಡಿಯಲ್ಲಿ ನಿಷೇಧಾಜ್ಞೆಗಳು ಸಹ ಗಡಿಯಲ್ಲಿ ಜಾರಿಯಲ್ಲಿವೆ. ಶಂಭು ಹೊರತುಪಡಿಸಿ, ಪಂಜಾಬ್ ಮತ್ತು ಹರಿಯಾಣ ನಡುವಿನ ಖಾನೌರಿ ಗಡಿಯನ್ನು ಬಿಗಿಯಾದ ನಾಲ್ಕು ಪದರಗಳ ಭದ್ರತೆಯಲ್ಲಿ ಮುಚ್ಚಲಾಗಿದೆ, 13 ತುಕಡಿಗಳನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ಕೆನಡಾ| ಸೆಕ್ಯೂರಿಟಿಯಾಗಿ ಕೆಲಸ ಮಾಡ್ತಿದ್ದ ಭಾರತೀಯ ವಿದ್ಯಾರ್ಥಿಯನ್ನ ಗುಂಡಿಕ್ಕಿ ಹತ್ಯೆ – ಇಬ್ಬರು ಶಂಕಿತರ ಬಂಧನ

  • MSPಗೆ ಆಗ್ರಹಿಸಿ ದೆಹಲಿಗೆ ನುಗ್ಗಲು ಯತ್ನಿಸಿದ ರೈತರ ಮೇಲೆ ಅಶ್ರುವಾಯು ಪ್ರಯೋಗ

    MSPಗೆ ಆಗ್ರಹಿಸಿ ದೆಹಲಿಗೆ ನುಗ್ಗಲು ಯತ್ನಿಸಿದ ರೈತರ ಮೇಲೆ ಅಶ್ರುವಾಯು ಪ್ರಯೋಗ

    – ಅಂಬಾಲದಲ್ಲಿ ಡಿ.9 ರವರೆಗೆ ಇಂಟರ್‌ನೆಟ್ ಸೇವೆ ಸ್ಥಗಿತ
    – 8 ಮಂದಿ ರೈತರಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

    ನವದೆಹಲಿ: ಅನ್ನದಾತರು ಮತ್ತೆ ಸಿಡಿದೆದ್ದಿದ್ದಾರೆ. ಎಂಎಸ್‌ಪಿಗೆ (ಕನಿಷ್ಠ ಬೆಂಬಲ ಬೆಲೆ) ಕಾನೂನು ಸಿಂಧುತ್ವ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಂಜಾಬ್-ಹರಿಯಾಣ ಗಡಿಯ ಶಂಭು ಬಾರ್ಡರ್‌ನಿಂದ ಡೆಲ್ಲಿ ಚಲೋ ಹಮ್ಮಿಕೊಂಡಿದೆ. ಆದರೆ, ಅನ್ನದಾತರ ದೆಹಲಿ ಚಲೋ ಅನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ನೂಕಾಟ ತಳ್ಳಾಟಗಳೂ ನಡೆದಿವೆ.

    ಕೆಲ ಹೊತ್ತು ಉದ್ವಿಗ್ನ ಪರಿಸ್ಥಿತಿ ಸಹ ನಿರ್ಮಾಣ ಆಗಿತ್ತು. ಪೊಲೀಸರು ಅಶ್ರುವಾಯು ಪ್ರಯೋಗಿಸಿ, ಹಲವು ರೈತರನ್ನು ವಶಕ್ಕೆ ಪಡೆದ್ರು. ಮುಂಜಾಗ್ರತಾ ಕ್ರಮವಾಗಿ ಗಡಿಯಲ್ಲಿ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಮೂರು ಹಂತದ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದು, ನಿಷೇಧಾಜ್ಞೆ ವಿಧಿಸಲಾಗಿದೆ. ಹರಿಯಾಣದ ಅಂಬಾಲ ಸೇರಿ ವಿವಿಧೆಡೆ ಡಿಸೆಂಬರ್‌ 9ರ ವರೆಗೆ ಇಂಟರ್ನೆಟ್ ಸೇವೆ ಬಂದ್ ಮಾಡಲಾಗಿದೆ.

    ಈ ಮಧ್ಯೆ, ರೈತರು ಬೆಳೆದ ಎಲ್ಲಾ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆಯ ಅನ್ವಯವೇ ಖರೀದಿ ಮಾಡಲಾಗುವುದು. ಇದು ಮೋದಿ ಗ್ಯಾರಂಟಿ ಎಂದು ರಾಜ್ಯಸಭೆಯಲ್ಲಿ ಕೃಷಿ ಮಂತ್ರಿ ಶಿವರಾಜ್ ಸಿಂಗ್ ಚೌಹಾಣ್‌ ಸ್ಪಷ್ಟನೆ ನೀಡಿದ್ದಾರೆ.

    8 ಮಂದಿ ರೈತರಿಗೆ ಗಾಯ:
    ಇನ್ನೂ ದೆಹಲಿ ಪ್ರವೇಶಿಸಲು ಮುಂದಾದಾಗ ಶಂಭು ಗಡಿಯ ರಾಷ್ಟ್ರೀಯ ಹೆದ್ದಾರಿ-44 ರಲ್ಲಿ ರೈತರು ಹಾಗೂ ಪೊಲೀಸರ ನಡುವೆ ನಡೆದ ಘರ್ಷಣೆಯಲ್ಲಿ 8 ಮಂದಿ ರೈತರು ಗಾಯಗೊಂಡಿದ್ದಾರೆ, ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವರದಿಗಳು ತಿಳಿಸಿವೆ. ಇದರ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದಾರೆ.

    ಪೊಲೀಸರು ನಮ್ಮ ವಿರುದ್ಧ ಸಂಪೂರ್ಣ ಬಲ ಪ್ರಯೋಗ ಮಾಡಿದ್ದರೆ. ಶಾಂತಿಯುತವಾಗಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಹಿಂಸಾ ರೂಪವಾಗಿ ಪರಿವರ್ತಿಸಿದ್ದಾರೆ ಎಂದು ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಕಿಡಿ ಕಾರಿದ್ದಾರೆ.

  • 2025-26ರ ಹಿಂಗಾರು ಬೆಳೆಗಳ ಬೆಂಬಲ ಬೆಲೆ ಹೆಚ್ಚಳ – ಎಷ್ಟು ಏರಿಕೆಯಾಗಿದೆ?

    2025-26ರ ಹಿಂಗಾರು ಬೆಳೆಗಳ ಬೆಂಬಲ ಬೆಲೆ ಹೆಚ್ಚಳ – ಎಷ್ಟು ಏರಿಕೆಯಾಗಿದೆ?

    – ಅನ್ನದಾತರಿಗೆ ಬೆಳಕು ತೋರಿದ ಮೋದಿ: ಪ್ರಹ್ಲಾದ್‌ ಜೋಶಿ ಬಣ್ಣನೆ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಕೇಂದ್ರ ಸರ್ಕಾರ ಸಕಾಲಿಕವಾಗಿ ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಳ ಘೋಷಿಸಿ ರೈತರಿಗೆ ಬಲ ತುಂಬಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದ್ದಾರೆ.

    ನವದೆಹಲಿಯಲ್ಲಿ ಇಂದು ಮಾದ್ಯಮದವರೊಂದಿಗೆ ಮಾತನಾಡಿ, ಮುಂಗಾರು, ಹಿಂಗಾರು ಹಂಗಾಮಿನ ವಿವಿಧ ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಿಸುವ ಮೂಲಕ ಪ್ರಧಾನಿ ಮೋದಿ ಅವರು ಅನ್ನದಾತರಿಗೆ ಬೆಳಕು ತೋರಿದ್ದಾರೆ ಎಂದು ಬಣ್ಣಿಸಿದರು.

    2025-26ಕ್ಕೆ ಹಿಂಗಾರು ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ (MSP) ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಮೋದಿ ಅವರ ಅಧ್ಯಕ್ಷತೆಯಲ್ಲಿ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಮಂತ್ರಿಮಂಡಲ ಸಮಿತಿ (ಸಿಸಿಇಎ) ವ್ಯಾಪಾರ ವರ್ಷ 2025-26ಕ್ಕಾಗಿ ಸೂಚಿಸಿದ ಎಲ್ಲಾ ಬೆಳೆಗಳಿಗೆ ಎಂಎಸ್‌ಪಿ ಹೆಚ್ಚಿಸಲು ಅನುಮೋದನೆ ನೀಡಿದೆ ಎಂದರು.  ಇದನ್ನೂ ಓದಿ: ವಕ್ಫ್‌ ಜಾಗದಲ್ಲಿ ಹೊಸ ಸಂಸತ್‌ ಭವನ ನಿರ್ಮಾಣ: ಬದ್ರುದ್ದೀನ್ ಅಜ್ಮಲ್ ವಿವಾದ

     

    ಎಂಎಸ್‌ಪಿಯಲ್ಲಿ ಗರಿಷ್ಠ
    ಹೆಚ್ಚಳವಾಗಿ ಕುರಿ ಮೇವಿನ ಕಾಳು ಮತ್ತು ಸಾಸಿವೆಗಳಿಗೆ ಪ್ರತಿ ಕ್ವಿಂಟಲ್ ಗೆ 300 ರೂ. ಹಾಗೂ ಮಸೂರ ಬೇಳೆಗೆ ಪ್ರತಿ ಕ್ವಿಂಟಲ್ ಗೆ 275 ರೂ. ಹೆಚ್ಚಿಸಿದೆ. ಕಡಲೆ, ಗೋಧಿ, ಕುಸುಬೆ ಮತ್ತು ಬಾರ್ಲಿ ಧಾನ್ಯಗಳಿಗೆ ಪ್ರತಿ ಕ್ವಿಂಟಲ್ ಗೆ ಅನುಕ್ರಮವಾಗಿ 210 ರೂ., 150 ರೂ., 140 ರೂ. ಮತ್ತು 130 ರೂಪಾಯಿ ಹೆಚ್ಚಿಸಲಾಗಿದೆ ಎಂದು ಸಚಿವರು ವಿವರಿಸಿದರು.

    2025-26ರ ಹಿಂಗಾರು ಬೆಳೆಗಳಿಗಾಗಿ ಎಂ.ಎಸ್‌.ಪಿಯಲ್ಲಿ ಮಾಡಲಾದ ಹೆಚ್ಚಳ 2018-19ರ ಕೇಂದ್ರ ಬಜೆಟ್‌ನಲ್ಲಿ ಎಂ.ಎಸ್‌.ಪಿಯನ್ನು ಅಖಿಲ ಭಾರತೀಯ ನಿವ್ವಳ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಟ 1.5 ಪಟ್ಟು ಹೆಚ್ಚು ನಿಗದಿಪಡಿಸಿದೆ ಎಂದರು.

    ಗೋಧಿಗೆ ಶೇ.105, ಕುರಿ ಮೇವಿಕ ಕಾಳು ಮತ್ತು ಸಾಸಿವೆಗಳಿಗೆ ಶೇ.98; ಮಸೂರ ಬೇಳೆಗೆ ಶೇ.89, ಕಡಲೆಗೆ ಶೇ.60; ಬಾರ್ಲಿಗೆ ಶೇ.60, ಕುಸುಬೆಗೆ ಶೇ.50 ರಷ್ಟಿದೆ. ಹಿಂಗಾರು ಬೆಳೆಗಳ ಎಂಎಸ್‌ಪಿಯಲ್ಲಿ ಮಾಡಲಾದ ಈ ಹೆಚ್ಚಳದಿಂದ ನಿಶ್ಚಿತವಾಗಿ ರೈತರಿಗೆ ಲಾಭ ಸಿಗಲಿದೆ ಎಂದು ಜೋಶಿ ಹೇಳಿದರು.

  • APMC ಕಾಯ್ದೆ ಮರುಸ್ಥಾಪನೆಯಿಂದ ರೈತರಿಗೆ ಹೆಚ್ಚು ಅನುಕೂಲ – ಶಿವಾನಂದ ಪಾಟೀಲ

    APMC ಕಾಯ್ದೆ ಮರುಸ್ಥಾಪನೆಯಿಂದ ರೈತರಿಗೆ ಹೆಚ್ಚು ಅನುಕೂಲ – ಶಿವಾನಂದ ಪಾಟೀಲ

    – ಬೆಂಬಲ ಬೆಲೆ ಯೋಜನೆ ಅಡಿ ಏಕಕಾಲಕ್ಕೆ 4 ಬೆಳೆಗಳ ಖರೀದಿ

    ಬೆಂಗಳೂರು: ಎಪಿಎಂಸಿ ಕಾಯ್ದೆ (APMC Act) ಮರುಸ್ಥಾಪನೆಯಿಂದ ರೈತರಿಗೆ ಹೆಚ್ಚು ಅನುಕೂಲವಾಗಿದ್ದು, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಏಕಕಾಲದಲ್ಲಿ 4 ಬೆಳೆಗಳನ್ನು ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಖರೀದಿ ಮಾಡಲಾಗುತ್ತಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ (Shivananda Patil) ಹೇಳಿದರು.

    ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಸರುಕಾಳು, ಸೂರ್ಯಕಾಂತಿ, ಸೋಯಾಬಿನ್ ಮತ್ತು ಉದ್ದಿನಕಾಳನ್ನು ಬೆಂಬಲ ಬೆಲೆ (MSP) ಯೋಜನೆ ಅಡಿ ಖರೀದಿ ಮಾಡಲಾಗುತ್ತಿದೆ. ಸೋಯಾಬಿನ್ ಮತ್ತು ಉದ್ದಿನಕಾಳು ಖರೀದಿ ಪ್ರಕ್ರಿಯೆ ಆರಂಭಿಸಲು ಗುರುವಾರ (ಆ.5) ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಆರ್ಥಿಕ ಅವ್ಯವಹಾರಗಳ ಸಿಬಿಐ ತನಿಖೆ ಪ್ರಶ್ನಿಸಿ ಸಂದೀಪ್ ಘೋಷ್ ಸಲ್ಲಿಸಿದ್ದ ಅರ್ಜಿ ವಜಾ

    ಈಗಾಗಲೇ ಹೆಸರುಕಾಳು ಮತ್ತು ಸೂರ್ಯಕಾಂತಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲು ರಾಜ್ಯ ಸರ್ಕಾರ ಖರೀದಿ ಏಜನ್ಸಿಗಳನ್ನು ನೇಮಕ ಮಾಡಿದೆ. ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಲ್ ಸೂರ್ಯಕಾಂತಿ ಮತ್ತು 10 ಕ್ವಿಂಟಲ್ ಹೆಸರುಕಾಳು ಖರೀದಿ ಮಾಡಲಿದೆ. ಎಫ್.ಎ.ಕ್ಯೂ (FAQ) ಗುಣಮಟ್ಟದ ಸೋಯಾಬಿನ್‌ಗೆ ಕ್ವಿಂಟಲ್‌ಗೆ 4,892 ರೂ. ಹಾಗೂ ಉದ್ದಿನ ಕಾಳಿಗೆ ಕ್ವಿಂಟಲ್‌ಗೆ 7,400 ರೂ. ಬೆಲೆ ನಿಗದಿಪಡಿಸಲಾಗಿದೆ. ಬೆಂಬಲ ಬೆಲೆಯಲ್ಲಿ ಸುಮಾರು 10 ಲಕ್ಷ ಕ್ವಿಂಟಲ್ ಸೋಯಾಬಿನ್ ಮತ್ತು 2 ಲಕ್ಷ ಕ್ವಿಂಟಲ್ ಉದ್ದಿನಕಾಳು ಖರೀದಿ ಮಾಡಲಾಗುವುದು. 2024-25ನೇ ಸಾಲಿನಲ್ಲಿ 4.10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 4.72 ಲಕ್ಷ ಮೆಟ್ರಿಕ್ ಟನ್ ಸೋಯಾಬಿನ್ ಹಾಗೂ 0.77 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 0.40 ಲಕ್ಷ ಮೆಟ್ರಿಕ್ ಟನ್ ಉದ್ದಿನಕಾಳು ಇಳುವರಿ ನಿರೀಕ್ಷೆ ಮಾಡಲಾಗಿತ್ತು ಎಂದು ತಿಳಿಸಿದರು. ಇದನ್ನೂ ಓದಿ: Duleep Trophy | ಮುಶೀರ್ ಕೈತಪ್ಪಿದ ದ್ವಿಶತಕ – ಕೊನೇ 3 ವಿಕೆಟ್‌ಗೆ 227 ರನ್‌ ಪೇರಿಸಿದ ಭಾರತ-ಬಿ ತಂಡ!

    ಎಫ್.ಎ.ಕ್ಯೂ ಗುಣಮಟ್ಟದ ಹೆಸರುಕಾಳಿಗೆ ಪ್ರತಿ ಕ್ವಿಂಟಲ್‌ಗೆ 8,682 ರೂ. ಹಾಗೂ ಸೂರ್ಯಕಾಂತಿಗೆ 7,280 ರೂ. ನಿಗದಿಪಡಿಸಲಾಗಿದೆ. ಹೆಸರುಕಾಳು ಖರೀದಿಗೆ 172 ಖರೀದಿ ಕೇಂದ್ರ ಗುರುತಿಸಲಾಗಿದ್ದು, 1982 ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ. ಸೂರ್ಯಕಾಂತಿ ಖರೀದಿಗೆ 19 ಖರೀದಿ ಕೇಂದ್ರ ಗುರುತಿಸಲಾಗಿದ್ದು, 461 ರೈತರು ನೋಂದಣಿ ಮಾಡಿಕೊಂಡಿದ್ದಾರೆ‌. ಕೊಬ್ಬರಿ ಖರೀದಿಯಲ್ಲೂ ಈ ಬಾರಿ ಪ್ರಮುಖ ಪಾತ್ರ ವಹಿಸಲಾಗಿದ್ದು, ಇದೇ ಮೊದಲ ಬಾರಿಗೆ ಮಿಲ್ಲಿಂಗ್ ಕೊಬ್ಬರಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲಾಗಿದೆ ಎಂದು ತಿಳಿಸಿದರು.

    ಎಪಿಎಂಸಿ ಯಾರ್ಡ್‌ಗಳಲ್ಲಿ 150 ಕೋಟಿ ರೂ. ವೆಚ್ಚದಲ್ಲಿ 14ರಿಂದ 15 ಶೀಥಲ ಗೃಹಗಳನ್ನು ಎಪಿಎಂಸಿಗಳಲ್ಲಿ ನಿರ್ಮಾಣ ಮಾಡಲಾಗುವುದು. ರಾಜ್ಯದ 4 ಕಂದಾಯ ವಿಭಾಗಗಳಲ್ಲಿ ವಿಭಾಗಾವಾರು ವಿಜಿಲೆನ್ಸ್ ಸೆಲ್‌ಗಳನ್ನು ರಚಿಸಲಾಗಿದೆ. ವಿಜಿಲೆನ್ಸ್ ರಚನೆ ಪರಿಣಾಮ ಎಪಿಎಂಸಿ ಆದಾಯ ಕೂಡ ಹೆಚ್ಚಾಗಿದೆ, ಈ ವರ್ಷ ರೂ 380 ರಿಂದ 400 ಕೋಟಿ ರೂ. ಆದಾಯ ನಿರೀಕ್ಷೆ ಮಾಡಲಾಗಿದ್ದು, ಆರ್ಥಿಕ ವರ್ಷದ 5 ತಿಂಗಳಲ್ಲಿ 133.15 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 77.42 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು. ಇದನ್ನೂ ಓದಿ: ಎತ್ತಿನಹೊಳೆ ಯೋಜನೆಯ ಮೊದಲ ಹಂತಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

  • ಕೇಂದ್ರದಿಂದ ಕೊಬ್ಬರಿ ಹಣ ಬಿಡುಗಡೆ; 24 ಸಾವಿರ ರೈತರ ಖಾತೆಗೆ 346 ಕೋಟಿ ರೂ. ಜಮೆ: ಸೋಮಣ್ಣ

    ಕೇಂದ್ರದಿಂದ ಕೊಬ್ಬರಿ ಹಣ ಬಿಡುಗಡೆ; 24 ಸಾವಿರ ರೈತರ ಖಾತೆಗೆ 346 ಕೋಟಿ ರೂ. ಜಮೆ: ಸೋಮಣ್ಣ

    ತುಮಕೂರು: ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಿದ್ದ ಕೊಬ್ಬರಿ (Copra) ಬಾಕಿ ಹಣ 346.50 ಕೋಟಿ ರೂ.ಗಳನ್ನು 24,600 ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ (V Somanna) ತಿಳಿಸಿದ್ದಾರೆ.

    ಸುಮಾರು 27 ಸಾವಿರ ರೈತರಿಂದ ಒಟ್ಟು 3.15 ಲಕ್ಷ ಕ್ವಿಂಟಲ್ ಉಂಡೆ ಕೊಬ್ಬರಿಯನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಲಾಗಿತ್ತು. ಜಿಲ್ಲೆಯ ರೈತರಿಗೆ (Farmers) ಒಟ್ಟು 378 ಕೋಟಿ ರೂ. ಹಣ ಪಾವತಿಸಬೇಕಿತ್ತು. ಆಗಸ್ಟ್ 5ರ ವರೆಗೆ 346.50 ಕೋಟಿ ರೂ. ಜಮೆ ಮಾಡಿಸಲಾಗಿದೆ. ಇದರಿಂದ ಶೇ.92ರಷ್ಟು ರೈತರಿಗೆ (Farmers) ಹಣ ಪಾವತಿಸಿದಂತಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಬಾಕಿ ಇರುವ 2,438 ರೈತರಿಗೆ 31.65 ಕೋಟಿ ರೂ.ಗಳನ್ನು ಪಾವತಿಸಬೇಕಿದೆ. ಬಾಕಿ ಹಣವನ್ನೂ ಪಾವತಿಸುವಂತೆ ಸೂಚನೆ ನೀಡಲಾಗಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: 138ಕ್ಕೆ ಆಲೌಟ್‌ – 27 ವರ್ಷಗಳಲ್ಲಿ ಭಾರತಕ್ಕೆ ಮೊದಲ ಸರಣಿ ಸೋಲು; 110 ರನ್‌ ಗೆಲುವಿನೊಂದಿಗೆ ಸರಣಿ ಗೆದ್ದ ಲಂಕಾ

    ನಾಫೆಡ್‌ನಿಂದ ರಾಜ್ಯಕ್ಕೆ 691 ಕೋಟಿ ರೂ. ಬರಬೇಕಿದ್ದು, ಶೀಘ್ರ ಹಣ ಬಿಡುಗಡೆ ಮಾಡುವಂತೆ ಕೋರಿ ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಅವರಿಗೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಶೀಘ್ರದಲ್ಲೇ ವೈದ್ಯಕೀಯ ಕಾಲೇಜುಗಳಿಗೆ 650 ಸಹಾಯಕ ಪ್ರಾಧ್ಯಾಪಕರು, 1,200 ದಾದಿಯರ ನೇಮಕ: ಶರಣಪ್ರಕಾಶ್‌ ಪಾಟೀಲ್ 

    ಕೊಬ್ಬರಿ ಮಾರಾಟ ಮಾಡಿದ ರೈತರಿಗೆ ಹಣ ಬಿಡುಗಡೆಗೆ ಸಹಕರಿಸಿದ ಸಚಿವ ಸೋಮಣ್ಣ ಅವರಿಗೆ ಶಾಸಕ ಜಿ.ಬಿ ಜ್ಯೋತಿಗಣೇಶ್ ಅಭಿನಂದನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ವಿನೇಶ್ ತರಬೇತಿಗೆ ಕೇಂದ್ರ 75 ಲಕ್ಷ ರೂ. ಖರ್ಚು ಮಾಡಿದೆ – ಮನ್ಸುಖ್ ಮಾಂಡವಿಯಾ ಮಾಹಿತಿ

  • ಭತ್ತ, ರಾಗಿ, ಹತ್ತಿ ಸೇರಿ 22 ಬೆಳೆಗಳಿಗೆ ಎಂಎಸ್‌ಪಿ ಹೆಚ್ಚಿಸಿದ ಕೇಂದ್ರ – ಇಲ್ಲಿದೆ ನೋಡಿ ದರ ಪಟ್ಟಿ..

    ಭತ್ತ, ರಾಗಿ, ಹತ್ತಿ ಸೇರಿ 22 ಬೆಳೆಗಳಿಗೆ ಎಂಎಸ್‌ಪಿ ಹೆಚ್ಚಿಸಿದ ಕೇಂದ್ರ – ಇಲ್ಲಿದೆ ನೋಡಿ ದರ ಪಟ್ಟಿ..

    ನವದೆಹಲಿ: ರೈತರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಭತ್ತ, ರಾಗಿ, ತೊಗರಿ ಸೇರಿ 22 ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆಯನ್ನು ಹೆಚ್ಚಿಸಿದೆ.

    ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ.50 ರಷ್ಟು ಎಂಎಸ್‌ಪಿ ಹೆಚ್ಚಿಸಿದೆ. ಭತ್ತದ ಮೇಲಿನ ಎಂಎಸ್‌ಪಿಯನ್ನು 143 ರೂಪಾಯಿ ಹೆಚ್ಚಿಸಿದ್ದು, ಭತ್ತದ ಕನಿಷ್ಠ ಬೆಲೆ ಈಗ 2,300 ರೂಪಾಯಿ ಆಗಿದೆ. ಅದೇ ರೀತಿ ರಾಗಿಗೆ 268 ರೂ., ಗೋಧಿ 150 ರೂ., ಮೆಕ್ಕೆ ಜೋಳ 128 ರೂ., ಜೋಳ 210 ರೂ., ಸಜ್ಜೆ 150 ರೂ., ತೊಗರಿ 400 ರೂ., ಹೆಸರುಬೇಳೆ 803 ರೂ., ಉದ್ದಿನ ಬೇಳೆ 350 ರೂ., ಕಡಲೆಕಾಯಿ 527 ರೂ., ಸೂರ್ಯಕಾಂತಿ 360 ರೂ., ಸೋಯಾಬೀನ್ 300 ರೂ., ಹತ್ತಿ 400 ರೂ., ಎಳ್ಳಿ 632 ರೂ., ಹುಚ್ಚೆಳ್ಳಿ 983 ರೂ. ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಘೋಷಿಸಿದೆ.

    ಇದರಿಂದ 2 ಲಕ್ಷ ರೈತರಿಗೆ ಲಾಭವಾಗಲಿದೆ. ಸರ್ಕಾರಕ್ಕೆ 35,000 ಕೋಟಿ ರೂ. ಹೆಚ್ಚುವರಿ ಹೊರೆ ಆಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

    ಸರ್ಕಾರಿ ಗೋದಾಮಿನಲ್ಲಿ ಅಕ್ಕಿಯ ದಾಸ್ತಾನು ಸಾಕಷ್ಟು ಇರುವಾಗಲೇ ಭತ್ತಕ್ಕೆ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಾಲ್‌ಗೆ 117 ರೂ. ಹೆಚ್ಚಳ ಮಾಡಲಾಗಿದೆ.

    ಕೇಂದ್ರದಲ್ಲಿ ಮೂರನೇ ಬಾರಿಗೆ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪ್ರಕಟಿಸಿದ ಮೊದಲ ನಿರ್ಧಾರ ಇದಾಗಿದೆ. ಬೆಂಬಲ ಬೆಲೆ ಹೆಚ್ಚಳ ಮಾಡಿರುವುದರ ಹಿಂದೆ ಹರಿಯಾಣ, ಮಹಾರಾಷ್ಟç, ಜಾರ್ಖಂಡ್, ದೆಹಲಿ ವಿಧಾನಸಭಾ ಚುನಾವಣೆಗಳ ಲೆಕ್ಕಾಚಾರವೂ ಇದೆ ಎನ್ನಲಾಗಿದೆ.

  • ಒಂದು ತಿಂಗಳಿಂದ ರಾಜಧಾನಿ ಗಡಿಯಲ್ಲಿ ಪ್ರತಿಭಟನೆ; ಇಂದು ದೆಹಲಿಯಲ್ಲಿ ರೈತರ ಮಹಾಪಂಚಾಯತ್‌ ಸಭೆ

    ಒಂದು ತಿಂಗಳಿಂದ ರಾಜಧಾನಿ ಗಡಿಯಲ್ಲಿ ಪ್ರತಿಭಟನೆ; ಇಂದು ದೆಹಲಿಯಲ್ಲಿ ರೈತರ ಮಹಾಪಂಚಾಯತ್‌ ಸಭೆ

    ನವದೆಹಲಿ: ಒಂದು ತಿಂಗಳಿಂದ ದೆಹಲಿಯ (New Dlhi) ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ರಾಷ್ಟ್ರ ರಾಜಧಾನಿಗೆ ಎಂಟ್ರಿ ಕೊಟ್ಟಿದ್ದಾರೆ. ಇಂದು (ಗುರುವಾರ) ದೆಹಲಿಯಲ್ಲಿ ಮಹಾಪಂಚಾಯತ್‌ ನಡೆಸಲಿದ್ದಾರೆ.

    ಇಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ‘ಕಿಸಾನ್ ಮಜ್ದೂರ್ ಮಹಾಪಂಚಾಯತ್’ (Kisan Mahapanchayat) ನಡೆಸಲು ದೆಹಲಿ ಪೊಲೀಸರು ರೈತರಿಗೆ ಅನುಮತಿ ನೀಡಿದ್ದಾರೆ. ಪೊಲೀಸರು ರೈತರಿಗೆ ಕೆಲವು ಷರತ್ತುಗಳನ್ನು ವಿಧಿಸಿದ್ದಾರೆ. ಟ್ರ್ಯಾಕ್ಟರ್ ಟ್ರಾಲಿಗಳು ಇರಬಾರದು, ಮೆರವಣಿಗೆ ಮಾಡಬಾರದು ಮತ್ತು 5,000 ಪ್ರತಿಭಟನಾಕಾರರನ್ನು ಮೀರಬಾರದು ಎಂದು ಸೂಚಿಸಿದ್ದಾರೆ. ಇದನ್ನೂ ಓದಿ: ಉತ್ತರಾಖಂಡದ ಏಕರೂಪ ನಾಗರಿಕ ಸಂಹಿತೆ ಮಸೂದೆಗೆ ರಾಷ್ಟ್ರಪತಿ ಅನುಮೋದನೆ

    ಬೆಳಗ್ಗೆ 11 ರಿಂದ ಮಧ್ಯಾಹ್ನ 2 ರವರೆಗೆ ಸಭೆಯನ್ನು ನಿಗದಿಪಡಿಸಲಾಗಿದೆ. ಸರ್ಕಾರದ ನೀತಿಗಳ ವಿರುದ್ಧದ ಹೋರಾಟವನ್ನು ತೀವ್ರಗೊಳಿಸುವ ಗುರಿಯನ್ನು ರೈತ ಸಂಘಟನೆಗಳು ಹೊಂದಿವೆ. ಕನಿಷ್ಠ ಬೆಂಬಲ ಬೆಲೆ (MSP) ಕಾನೂನು ಜಾರಿ, ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಕೇಂದ್ರದ ಮುಂದಿಟ್ಟು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

    ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ರೈತರ ಪ್ರತಿಭಟನೆ ನೇತೃತ್ವ ವಹಿಸಲಿದೆ. ಇದು ಮೂರು ಕೇಂದ್ರ ಕೃಷಿ ಕಾನೂನುಗಳ ವಿರುದ್ಧ 2020-21 ರೈತರ ಪ್ರತಿಭಟನೆಯನ್ನು ಮುಂದುವರಿದ ಭಾಗವಾಗಿದೆ. ಕಾರ್ಪೊರೇಟ್ ಪರ ನೀತಿಗಳ ವಿರುದ್ಧ ಕಾರ್ಯತಂತ್ರ ರೂಪಿಸುವುದು ಮತ್ತು ಮುಂಬರುವ ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿ ಭವಿಷ್ಯದ ಕ್ರಮಗಳನ್ನು ಪ್ರಕಟಿಸುವ ‘ಸಂಕಲ್ಪ ಪತ್ರ’ ಎಂಬ ನಿರ್ಣಯ ಅಂಗೀಕರಿಸಲಾಗುವುದು ಎಂದು ಎಸ್‌ಕೆಎಂ ಹೇಳಿದೆ. ಇದನ್ನೂ ಓದಿ: ಚುನಾವಣೆಗೆ ಖರ್ಚು ಮಾಡಲು ನಮ್ಮ ಪಕ್ಷದಲ್ಲಿ ಹಣವಿಲ್ಲ: ಖರ್ಗೆ

    ರೈತರ ಪ್ರತಿಭಟನೆಯಿಂದಾಗಿ ದೆಹಲಿಯ ವಿವಿಧ ಭಾಗಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಟ್ರಾಫಿಕ್ ಮೇಲೆ ಪರಿಣಾಮ ಬೀರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

  • ರೈತರ ಪ್ರತಿಭಟನೆಗೆ ಮಣಿಯಿತಾ ಸರ್ಕಾರ – ರೈತ ಪ್ರತಿನಿಧಿಗಳನ್ನೊಳಗೊಂಡ ಸಮಿತಿ ರಚನೆ ಪ್ರಸ್ತಾಪಿಸುವ ಸಾಧ್ಯತೆ?

    ರೈತರ ಪ್ರತಿಭಟನೆಗೆ ಮಣಿಯಿತಾ ಸರ್ಕಾರ – ರೈತ ಪ್ರತಿನಿಧಿಗಳನ್ನೊಳಗೊಂಡ ಸಮಿತಿ ರಚನೆ ಪ್ರಸ್ತಾಪಿಸುವ ಸಾಧ್ಯತೆ?

    ನವದೆಹಲಿ: ಕನಿಷ್ಠ ಬೆಂಬಲ ಬೆಲೆ ಖಾತ್ರಿಪಡಿಸುವ ಕಾನೂನು ಜಾರಿ ಸೇರಿದಂತೆ ವಿವಿಧ ಬೇಡಿಕೆಗಳೊಂದಿಗೆ ಹೋರಾಟ ಆರಂಭಿಸಿರುವ ರೈತರಿಗೆ (Farmers Protest) ಕೇಂದ್ರ ಸರ್ಕಾರ ಮಣಿದಂತೆ ಕಾಣಿಸುತ್ತಿದೆ. ಲೋಕಸಭಾ ಚುನಾವಣೆ (Lok Sabha Election 2024 )ಹೊತ್ತಲ್ಲಿ ರೈತರ ಪ್ರತಿಭಟನೆ ದೊಡ್ಡದು ಮಾಡದಿರಲು ನಿರ್ಧರಿಸಲು ಮೋದಿ ಸರ್ಕಾರ ಸರ್ಕಾರಿ ಅಧಿಕಾರಿಗಳ ಪ್ರತಿನಿಧಿಗಳು ಮತ್ತು ರೈತ ಸಂಘಟನೆಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿ ರಚನೆಗೆ ಪ್ರಸ್ತಾಪಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

    ಈ ಸಮಿತಿಯು ಕನಿಷ್ಠ ಬೆಂಬಲ ಬೆಲೆ (MSP) ಸೇರಿದಂತೆ ರೈತರ ವಿವಿಧ ಬೇಡಿಕೆಗಳ ಕಾರ್ಯ ಸಾಧ್ಯತೆ ಬಗ್ಗೆ ಪರಿಶೀಲನೆ ಮಾಡಲಿದೆ. ಸಮಿತಿಯು ಚರ್ಚೆಗಾಗಿ ರೈತ ಸಂಘಟನೆಗಳ ಪ್ರತಿನಿಧಿಗಳ ಹೆಸರನ್ನು ಸಹ ಕೇಳಬಹುದು. ರೈತರ ಬೇಡಿಕೆಗಳನ್ನು ಪರಿಹರಿಸಲು ರಾಜ್ಯ ಸರ್ಕಾರಗಳು ಮತ್ತು ಕೃಷಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಇತರ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಸೇರಿದಂತೆ ಎಲ್ಲಾ ಪಾಲುದಾರರೊಂದಿಗೆ ಚರ್ಚೆ ಅಗತ್ಯ ಎಂದು ಸರ್ಕಾರ ಹೇಳಿದೆ. ಇದನ್ನೂ ಓದಿ: ನಾನು ಲೋಕಸಭೆಗೆ ನಿಲ್ಲೋದಿಲ್ಲ: ಸಚಿವ ಹೆಚ್.ಸಿ.ಮಹದೇವಪ್ಪ ಸ್ಪಷ್ಟನೆ

    ರೈತರಿಗಾಗಿ ರಚಿಸಲಾದ ಕಳೆದ ಸಮಿತಿಯಲ್ಲಿ ಸಂಜಯ್ ಅಗರವಾಲ್ ನೇತೃತ್ವದಲ್ಲಿ ರೈತ ಸಂಘಟನೆಗಳ ಪ್ರತಿನಿಧಿಗಳು ತಮ್ಮ ಪ್ರತಿನಿಧಿಗಳ ಹೆಸರನ್ನು ನೀಡಿಲ್ಲ ಎನ್ನುವುದನ್ನು ಸರ್ಕಾರ ಗಮನಿಸಿದೆ. ಪ್ರಸ್ತುತ ಪಂಜಾಬ್-ಹರಿಯಾಣ ಗಡಿಯ ಶಂಭು ಮತ್ತು ಖಾನೌರಿ ಪಾಯಿಂಟ್‍ಗಳಲ್ಲಿ ಬೀಡುಬಿಟ್ಟಿರುವ ರೈತರು ಎಂಎಸ್‍ಪಿಗೆ ಕಾನೂನು ಖಾತರಿ ನೀಡುವ ಬಗ್ಗೆ ಕೇಂದ್ರವು ಸುಗ್ರೀವಾಜ್ಞೆಯನ್ನು ತರಬೇಕು ಎಂದು ಒತ್ತಾಯಿಸಿದ್ದಾರೆ.

    ತಮ್ಮ ವಿವಿಧ ಬೇಡಿಕೆಗಳ ಕುರಿತು ರೈತ ಮುಖಂಡರು ಮತ್ತು ಕೇಂದ್ರ ಸಚಿವರ ನಡುವಿನ ನಾಲ್ಕನೇ ಸುತ್ತಿನ ಮಾತುಕತೆಗೆ ಒಂದು ದಿನ ಮೊದಲು ಈ ಬೇಡಿಕೆ ಬಂದಿದೆ. ಕೇಂದ್ರ ಸಚಿವರಾದ ಅರ್ಜುನ್ ಮುಂಡಾ, ಪಿಯೂಷ್ ಗೋಯಲ್ ಮತ್ತು ನಿತ್ಯಾನಂದ ರೈ ಮತ್ತು ರೈತ ಮುಖಂಡರು ಭಾನುವಾರ ನಾಲ್ಕನೇ ಸುತ್ತಿನ ಮಾತುಕತೆ ನಡೆಸಲಿದ್ದಾರೆ. ಈ ಹಿಂದೆ ಫೆಬ್ರವರಿ 8, 12 ಮತ್ತು 15 ರಂದು ಸಭೆ ನಡೆದಿತ್ತು. ಈ ವೇಳೆ ಮಾತುಕತೆ ವಿಫಲವಾಗಿತ್ತು. ಇದನ್ನೂ ಓದಿ: ಬಿಜೆಪಿಯವ್ರು, ಹಿಂದುತ್ವವಾದಿಗಳು ಹೇಳುವ ಗ್ರಂಥ ನಮ್ಮದಲ್ಲ.. ಸಂವಿಧಾನವೇ ನಮ್ಮ ಧರ್ಮಗ್ರಂಥ: ಸಿದ್ದರಾಮಯ್ಯ