Tag: MS Ramaiah hospital

  • AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಸ್ಪತ್ರೆಗೆ ದಾಖಲು

    AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಸ್ಪತ್ರೆಗೆ ದಾಖಲು

    ಬೆಂಗಳೂರು: ಅನಾರೋಗ್ಯದ ಹಿನ್ನೆಲೆ ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಎಂ.ಎಸ್ ರಾಮಯ್ಯ ಆಸ್ಪತ್ರೆಗೆ (MS Ramaiah Hospital) ದಾಖಲಾಗಿದ್ದಾರೆ.

    ಬಿಹಾರ ಚುನಾವಣೆ, ಸರಣಿ ಪ್ರವಾಸದಿಂದಾಗಿ ಉಸಿರಾಟದ ಸಮಸ್ಯೆ ಉಂಟಾದ ಹಿನ್ನೆಲೆ ಜನರಲ್ ಚೆಕಪ್‌ಗಾಗಿ ಆಸ್ಪತ್ರೆ ದಾಖಲಾಗಿದ್ದು, ವೈದ್ಯರು ನಿತ್ಯದ ಚೆಕಪ್ ನಡೆಸಿರುವುದಾಗಿ ತಿಳಿದುಬಂದಿದೆ.ಇದನ್ನೂ ಓದಿ: ಹಾಸನದಲ್ಲಿ ನಿಗೂಢ ಸ್ಫೋಟ ಕೇಸ್‌ – ಗಂಭೀರ ಗಾಯಗೊಂಡಿದ್ದ ದಂಪತಿ ಸಾವು; ಅನಾಥವಾದ 14 ತಿಂಗಳ ಮಗು

    ಇನ್ನೂ ಇದೇ ವೇಳೆ ವೈದ್ಯರು ಇಸಿಜಿ ಪರೀಕ್ಷೆ ಮಾಡಿದ್ದು, ಬುಧವಾರ ರಾತ್ರಿ ಖರ್ಗೆಯವರು ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ.

  • ರಾಮಯ್ಯ ಆಸ್ಪತ್ರೆಯಲ್ಲಿ ತ್ರಿಡಿ ಪ್ರಿಂಟಿಂಗ್ ಕೃತಕ ಕೈಕಾಲು ಜೋಡಣಾ ಘಟಕ ಉದ್ಘಾಟನೆ

    ರಾಮಯ್ಯ ಆಸ್ಪತ್ರೆಯಲ್ಲಿ ತ್ರಿಡಿ ಪ್ರಿಂಟಿಂಗ್ ಕೃತಕ ಕೈಕಾಲು ಜೋಡಣಾ ಘಟಕ ಉದ್ಘಾಟನೆ

    ಬೆಂಗಳೂರು: ಸಿಲಿಕಾನ್ ಸಿಟಿಯ ಎಂ.ಎಸ್ ರಾಮಯ್ಯ ಆಸ್ಪತ್ರೆಯ ಆವರಣದಲ್ಲಿರುವ ಎಂ.ಎಸ್.ರಾಮಯ್ಯ ರೋಟರಿ ಕೃತಕ ಕೈಕಾಲು ಜೋಡಣಾ ಕೇಂದ್ರದಲ್ಲಿ  ತ್ರಿಡಿ ಪ್ರಿಂಟಿಂಗ್ ಕೃತಕ ಕೈ, ಕಾಲು ಜೋಡಣಾ ಘಟಕವನ್ನು ಉದ್ಘಾಟಿಸಲಾಯಿತು.

    ಈ ಕೃತಕ ಕೈ, ಕಾಲು ಜೋಡಣಾ ಘಟಕವನ್ನು ರೋಟರಿ ಡಿಸ್ಟ್ರಿಕ್ಟ್ ಗವರ್ನರ್, 3190 ರೋ. ಫಜಲ್ ಮಹಮ್ಮದ್ ಉದ್ಟಾಟಿಸಿದರು. ಈ ಒಂದು ತಂತ್ರಜ್ಞಾನದಿಂದ ಅತೀ ಕಡಿಮೆ ಅವಧಿಯಲ್ಲಿ ಹಾಗೂ ಕಡಿಮೆ ವೆಚ್ಚದಲ್ಲಿ ಕೈ ಕಾಲಿನ ತದ್ರೂಪದಂತೆ ಕೃತಕ ಅಂಗವನ್ನು ಜೋಡಿಸಬಹುದಾಗಿದೆ. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ವ್ಯಾಕ್ಯೂಮ್ ಬಾಂಬ್ ಪ್ರಯೋಗ ಆರೋಪ – ಏನಿದರ ವಿಶೇಷ?

    ಇದರಿಂದ ರೋಗಿಗಳು ಸಾಕಷ್ಟು ಸಮಯ ಕಾಯುವುದು ತಪ್ಪುವುದಲ್ಲದೇ ಶೀಘ್ರವೇ ಚಿಕಿತ್ಸೆ ಪಡೆಯಲು ಸಹಾಯವಾಗುತ್ತದೆ. ಕೈ, ಕಾಲು ಮಾತ್ರವಲ್ಲದೇ ದೇಹದ ಯಾವುದೇ ಅಂಗವನ್ನು ಕಡಿಮೆ ಅವಧಿಯಲ್ಲಿ ತಯಾರು ಮಾಡಬಹುದು. ಇದನ್ನೂ ಓದಿ: ರಷ್ಯಾದಿಂದ ತೈಲ ಆಮದಿಗೆ ಮಾತ್ರ ಅಮೆರಿಕ ನಿರ್ಬಂಧ – ಯುರೇನಿಯಂಗೆ ಇಲ್ಲ ನಿಷೇಧ

    ಈ ಸಂದರ್ಭದಲ್ಲಿ ಗೋಕುಲ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಎಂ.ಆರ್.ಜಯರಾಂ, ಡಾ. ಸವಿತಾ ರವೀಂದ್ರ, ಡಾ. ಗುರುದೇವ್ ಮುಂತಾದವರು ಉಪಸ್ಥಿತರಿದ್ದರು.

  • ಕೇವಲ 7 ನಿಮಿಷಗಳಲ್ಲಿ ಏರ್ ಆಂಬುಲೆನ್ಸ್ ಮೂಲಕ ನಾರಾಯಣ ಹೃದಯಾಲಯಕ್ಕೆ 2 ತಿಂಗಳ ಮಗು ರವಾನೆ

    ಕೇವಲ 7 ನಿಮಿಷಗಳಲ್ಲಿ ಏರ್ ಆಂಬುಲೆನ್ಸ್ ಮೂಲಕ ನಾರಾಯಣ ಹೃದಯಾಲಯಕ್ಕೆ 2 ತಿಂಗಳ ಮಗು ರವಾನೆ

    ಬೆಂಗಳೂರು: ಎರಡು ತಿಂಗಳ ಮಗುವನ್ನು ಏರ್ ಆಂಬುಲೆನ್ಸ್ ಮುಖಾಂತರ ಹೆಚ್ಚಿನ ಚಿಕಿತ್ಸೆಗಾಗಿ ನಾರಾಯಣ ಹೃದಯಾಲಯಕ್ಕೆ ಸ್ಥಳಾಂತರ ಮಾಡಲಾಗಿದೆ.

    ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯಿಂದ ಹೊಸೂರು ರಸ್ತೆಯ ನಾರಾಯಣ ಹೆಲ್ತ್ ಸಿಟಿಗೆ ಕೇವಲ 7  ನಿಮಿಷಗಳಲ್ಲಿ ಮಗುವನ್ನ ಸ್ಥಳಾಂತರಿಸಲಾಯಿತು. ಎರಡು ತಿಂಗಳ ಮಗುವು ಶ್ವಾಸಕೋಶ ತೊಂದರೆ ಹಾಗೂ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದು 2 ದಿನಗಳಿಂದ ರಾಮಯ್ಯ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಆದರೆ ತ್ವರಿತ ಮತ್ತು ಹೆಚ್ಚಿನ ಚಿಕಿತ್ಸೆಗೆಗಾಗಿ ಮಗುವನ್ನು ನಾರಾಯಣ ಹೆಲ್ತ್ ಸಿಟಿಗೆ ಸ್ಥಳಾಂತರಿಸಬೇಕಾಗಿತ್ತು.

    ಬೆಂಗಳೂರಿನ ಟ್ರಾಫಿಕ್ ಜಂಜಾಟದಲ್ಲಿ ಮಗುವನ್ನು ಅಷ್ಟು ಬೇಗ ಆಸ್ಪತ್ರೆಗೆ ಸಾಗಿಸುವುದು ಕಷ್ಟವೇ ಆಗಿತ್ತು. ಆಗ ಮಗುವಿನ ಪೋಷಕರು ಏರ್ ಆಂಬುಲೆನ್ಸ್ ಸಹಾಯ ಪಡೆದು ಕೇವಲ 7 ನಿಮಿಷಗಳಲ್ಲಿ ಮಗುವನ್ನು ರವಾನಿಸಿದ್ದಾರೆ. ಮಗುವನ್ನು ದಾಖಲಿಸಿಕೊಂಡಿರುವ ನಾರಾಯಣ ಹೆಲ್ತ್ ಸಿಟಿ ವೈದ್ಯರು ಮಗುವಿಗೆ ಚಿಕಿತ್ಸೆಗೆ ಆರಂಭಿಸಿದ್ದು, ಮಗು ಕೂಡ ಚಿಕಿತ್ಸೆಗೆ ಸ್ಪಂದಿಸುತ್ತಿದೆ. ಶೀಘ್ರವೇ ಮಗುವನ್ನು ಗುಣಮುಖವಾಗಿಸುವುದಾಗಿ ವೈದ್ಯರು ಭರವಸೆ ನೀಡಿದ್ದಾರೆ.

  • ಪಾರ್ವತಮ್ಮ ರಾಜ್‍ಕುಮಾರ್‍ಗೆ ಜ್ವರ, ನಿನ್ನೆಗೆ ಹೋಲಿಸಿದ್ರೆ ಆರೋಗ್ಯ ಸ್ಥಿತಿ ಗಂಭೀರ – ಚಿಂತಿಸುವ ಅಗತ್ಯವಿಲ್ಲ ಎಂದ ಶಿವಣ್ಣ

    ಪಾರ್ವತಮ್ಮ ರಾಜ್‍ಕುಮಾರ್‍ಗೆ ಜ್ವರ, ನಿನ್ನೆಗೆ ಹೋಲಿಸಿದ್ರೆ ಆರೋಗ್ಯ ಸ್ಥಿತಿ ಗಂಭೀರ – ಚಿಂತಿಸುವ ಅಗತ್ಯವಿಲ್ಲ ಎಂದ ಶಿವಣ್ಣ

    ಬೆಂಗಳೂರು: ಹನ್ನೆರಡನೇ ದಿನವೂ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಚಿಕಿತ್ಸೆ ಮುಂದುವರೆದಿದೆ.

    ಇಂದು ಆಸ್ಪತ್ರೆಯ ವೈದ್ಯರು ಮತ್ತು ನಟ ಶಿವರಾಜ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಪಾರ್ವತಮ್ಮನವರ ಆರೋಗ್ಯದ ಸ್ಥಿತಿ ಬಗ್ಗೆ ಮಾಹಿತಿ ನೀಡಿದ್ರು. ವೆಂಟಿಲೇಟರ್‍ನಲ್ಲೇ ಚಿಕಿತ್ಸೆ ನೀಡಲಾಗ್ತಿದೆ. ಪಾರ್ವತಮ್ಮ ಅವರ ಆರೋಗ್ಯ ಯಥಾಸ್ಥಿತಿಯಲ್ಲಿದೆ. ಉಸಿರಾಟ ಸುಲಭವಾಗಲಿ ಅಂತ ಟ್ರೈಕಾಸ್ಟಮಿ ಮಾಡಲಾಗಿದೆ. ಬಿಪಿ, ಪಲ್ಸ್ ಮೆಂಟೇನ್ ಮಾಡ್ತಿದ್ದೀವಿ ಅಂತ ಡಾ ಸಂಜಯ್ ಕುಲಕರ್ಣಿ ಹೇಳಿದ್ರು.

    ಶಿವರಾಜ್ ಕುಮಾರ್ ಕೂಡ ಅಮ್ಮನ ಆರೋಗ್ಯದ ಬಗ್ಗೆ ಮಾತನಾಡಿದ್ರು. ಜ್ವರ ಇರುವುದರಿಂದ ನಿನ್ನೆಗೆ ಹೋಲಿಸಿದ್ರೆ ಇವತ್ತು ಆರೋಗ್ಯ ಸ್ವಲ್ಪ ಗಂಭೀರವಾಗಿದೆ. ನಿನ್ನೆ ಟ್ರೆಕಾಸ್ಟಮಿ ಮಾಡಿದ್ದರಿಂದ ಇಂದು ಜ್ವರ ಕಾಣಿಸಿಕೊಂಡಿದೆ. ಐಸಿಯು ನಲ್ಲಿ ಇರೋದ್ರಿಂದ ಕಂಡಿಷನ್ ಬದಲಾಗುತ್ತಿರುತ್ತೆ. ಇನ್ನು ಭರವಸೆಯನ್ನ ನಾವು ಬಿಟ್ಟಿಲ್ಲ. ನಾವು ಅಷ್ಟು ಸುಲಭಕ್ಕೆ ಬಿಟ್ಟುಕೊಡಲ್ಲ. ವೈದ್ಯರು ಉತ್ತಮ ಚಿಕಿತ್ಸೆ ಕೊಡುತ್ತಿದ್ದಾರೆ ಅಂತ ಶಿವರಾಜ್ ಕುಮಾರ್ ಹೇಳಿದ್ರು.

    ಪಾರ್ವತಮ್ಮ ಅವರು ತೀರಾ ಗಂಭೀರ ಸ್ಥಿತಿಯಲ್ಲಿರೋದ್ರಿಂದ ಯಾರನ್ನೂ ಒಳಗಡೆ ಬಿಡಲಾಗ್ತಿಲ್ಲ. ದಯವಿಟ್ಟು ಯಾವುದೇ ನಟ ನಟಿಯರು ಅಥವಾ ಅಭಿಮಾನಿಗಳಾಗಲಿ ಎಲ್ಲಿದ್ದಿರೋ ಅಲ್ಲಿಂದಲೇ ಗುಣಮುಖವಾಗಲಿ ಎಂದು ಪ್ರಾರ್ಥಿಸಿ ಅಂತ ಎಂ ಎಸ್ ರಾಮಯ್ಯ ಆಸ್ಪತ್ರೆ ನಿರ್ದೇಶಕ ಪಟ್ಟಾಭಿರಾಮ್ ಹೇಳಿಕೆ ನೀಡಿದ್ರು.

  • ಪಾರ್ವತಮ್ಮ ರಾಜ್‍ಕುಮಾರ್ ಅನಾರೋಗ್ಯ – ಎಂಎಸ್ ರಾಮಯ್ಯ ಆಸ್ಪತ್ರೆಗೆ ಸಿಎಂ ಭೇಟಿ

    ಪಾರ್ವತಮ್ಮ ರಾಜ್‍ಕುಮಾರ್ ಅನಾರೋಗ್ಯ – ಎಂಎಸ್ ರಾಮಯ್ಯ ಆಸ್ಪತ್ರೆಗೆ ಸಿಎಂ ಭೇಟಿ

    ಬೆಂಗಳೂರು: ಪಾರ್ವತಮ್ಮ ರಾಜ್‍ಕುಮಾರ್ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದು, ಇಂದು ಸಿಎಂ ಸಿದ್ದರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿ ಪಾರ್ವತಮ್ಮ ರಾಜ್‍ಕುಮಾರ್ ಅವರ ಆರೋಗ್ಯ ವಿಚಾರಿಸಿದ್ರು.

    ಆಸ್ಪತ್ರೆ ಭೇಟಿ ಬಳಿಕ ಮಾತನಾಡಿದ ಸಿದ್ದರಾಮಯ್ಯ, ಪಾರ್ವತಮ್ಮ ರಾಜ್‍ಕುಮಾರ್ ಅವರು ಆರೋಗ್ಯವಾಗಿದ್ದಾರೆ, ಚೇತರಿಸಿಕೊಳ್ತಿದ್ದಾರೆ. ನನ್ನ ಜೊತೆ ಮಾತನಾಡಿದ್ರು. ಈಗ ಸುಧಾರಿಸಿಕೊಳ್ಳುತ್ತಿದ್ದಾರೆ ಅಂದ್ರು.

    ರಕ್ತದೊತ್ತಡ ಹಾಗೂ ಮಧುಮೇಹ ಕಾಯಿಲೆಯಿಂದಾಗಿ ಪಾರ್ವತಮ್ಮ ರಾಜ್‍ಕುಮಾರ್ ಸೋಮವಾರದಂದು ಆಸ್ಪತ್ರೆಗೆ ದಾಖಲಾಗಿದ್ದರು. ತಾಯಿ ಆರೋಗ್ಯ ವಿಚಾರಿಸಲು ಇಂದು ಬೆಳಿಗ್ಗೆ ಪುನೀತ್ ರಾಜ್‍ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿದ್ರು.

    ಪಾರ್ವತಮ್ಮ ಅವರ ಆರೋಗ್ಯದ ಬಗ್ಗೆ ಪಬ್ಲಿಕ್ ಟಿವಿಗೆ ಹೇಳಿಕೆ ನೀಡಿರೋ ರಾಮಯ್ಯ ಆಸ್ಪತ್ರೆ ವೈದ್ಯರಾದ ಡಾ. ಸಂಜಯ್ ಕುಲಕರ್ಣಿ, ಇನ್ನು ಎರಡು ದಿನ ಪಾರ್ವತಮ್ಮ ರಾಜ್‍ಕುಮಾರ್ ಅವರನ್ನ ಆಸ್ಪತ್ರೆಯಲ್ಲಿ ಇರಿಸಿಕೊಳ್ಳಲಾಗುತ್ತೆ. ಹಿಂದೆ ಕಾಣಿಸಿಕೊಂಡಿದ್ದ ಬ್ರೆಸ್ಟ್ ಕ್ಯಾನ್ಸರ್ ಲಿವರ್‍ಗೂ ಹರಡ್ತಿರೋದ್ರಿಂದ ಚಿಕಿತ್ಸೆ ನೀಡಲಾಗ್ತಿದೆ. ಶುಗರ್, ಬಿಪಿ ವ್ಯತ್ಯಯವಾಗ್ತಿರೋದ್ರಿಂದ ಆಸ್ಪತ್ರೆಯಲ್ಲಿಯೇ ಇರಿಸಿಕೊಳ್ಳಲಾಗ್ತಿದೆ. ಜಾಂಡೀಸ್ ಕೂಡ ಇದೆ. ಅದಕ್ಕೂ ಚಿಕಿತ್ಸೆ ನೀಡಲಾಗ್ತಿದೆ. ಸದ್ಯ ಚೇತರಿಸಿಕೊಳ್ತಿದ್ದಾರೆ ಅಂತ ಹೇಳಿದ್ದಾರೆ.