Tag: mrunal

  • ಸಾಯಿ ಪಲ್ಲವಿ ಬದಲು ಮೃಣಾಲ್‌ಗೆ ವಿಜಯ್ ಚಾನ್ಸ್ ಕೊಟ್ಟಿದ್ದೇಕೆ?

    ಸಾಯಿ ಪಲ್ಲವಿ ಬದಲು ಮೃಣಾಲ್‌ಗೆ ವಿಜಯ್ ಚಾನ್ಸ್ ಕೊಟ್ಟಿದ್ದೇಕೆ?

    ತೆಲುಗಿನ ಸ್ಟಾರ್ ನಟ ವಿಜಯ್ ದೇವರಕೊಂಡ (Vijay Devarakonda) ನಟನೆಯ ‘ಫ್ಯಾಮಿಲಿ ಸ್ಟಾರ್’ (Family Star) ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಇದರ ನಡುವೆ ಹೊಸ ವಿಚಾರವೊಂದು ಗಾಸಿಪ್ ಪ್ರಿಯರ ಚರ್ಚೆಗೆ ಗ್ರಾಸವಾಗಿದೆ. ವಿಜಯ್ ಜೊತೆ ನಟಿಸಲು ಸಾಯಿ ಪಲ್ಲವಿ (Sai Pallavi) ಫೈನಲ್‌ ಆಗಿದ್ದರು. ಆದರೆ ಲೈಗರ್ ಹೀರೋ ಮೃಣಾಲ್ ಠಾಕೂರ್ (Mrunal) ಮಣೆ ಹಾಕಿದ್ದೇಕೆ ಎಂದು ಚರ್ಚೆಯಾಗುತ್ತಿದೆ.

    ವಿಜಯ್ ದೇವರಕೊಂಡ, ಮೃಣಾಲ್ ನಟನೆಯ ‘ಫ್ಯಾಮಿಲಿ ಸ್ಟಾರ್’ ಸಿನಿಮಾ ಇದೇ ಏಪ್ರಿಲ್ 5ಕ್ಕೆ ರಿಲೀಸ್‌ಗೆ ಸಿದ್ಧವಾಗಿದೆ. ವಿಜಯ್- ಮೃಣಾಲ್ ನಟಿಸಿರುವ ಚಿತ್ರದ ಹಾಡು, ಟ್ರೈಲರ್ ಮೂಲಕ ಪ್ರೇಕ್ಷಕರಿಗೆ ಮೋಡಿ ಮಾಡುತ್ತಿದೆ. ಈ ಚಿತ್ರದಲ್ಲಿ ಮೊದಲು ಹೀರೋ ಜೊತೆ ನಟಿಸಲು ಸೆಲೆಕ್ಟ್ ಆಗಿದ್ದು ಸಾಯಿ ಪಲ್ಲವಿ ಆದರೆ ಅವರ ಬದಲು ಮೃಣಾಲ್ ಯಾಕೆ ಅವಕಾಶ ಕೊಟ್ಟರು. ಏಕಾಏಕಿ ನಾಯಕಿ ಬದಲಾವಣೆ ಆಗಿದ್ದೇಕೆ? ಸಾಯಿ ಪಲ್ಲವಿಯಂತಹ ಪ್ರತಿಭಾನ್ವಿತ ನಟಿಯನ್ನು ಕೈಬಿಟ್ಟಿದ್ದೇಕೆ? ಎಂದು ಫ್ಯಾನ್ಸ್‌ ಪ್ರಶ್ನಿಸುತ್ತಿದ್ದಾರೆ.

    ಕೋಟಿ ಕೋಟಿ ದುಡ್ಡು ಕೊಡುತ್ತೀವಿ ಅಂದ್ರು ಲಿಪ್ ಲಾಕ್, ಹಸಿ ಬಿಸಿ ದೃಶ್ಯಗಳಲ್ಲಿ ಸಾಯಿ ಪಲ್ಲವಿ ನಟಿಸಲ್ಲ. ಸಿನಿಮಾಗಳಲ್ಲಿ ನಟಿಸಲು ತಮ್ಮದೇ ಕೆಲವು ರೂಲ್ಸ್‌ಗಳನ್ನು ಇಂದಿಗೂ ಸಾಯಿ ಪಲ್ಲವಿ ಫಾಲೋ ಮಾಡ್ತಾರೆ. ವಿಜಯ್ ದೇವರಕೊಂಡ ಚಿತ್ರ ಅಂದ್ಮೇಲೆ ಅಲ್ಲಿ ಲಿಪ್ ಲಾಕ್ ಸೀನ್, ಕೆಲವು ಹಸಿ ಬಿಸಿ ದೃಶ್ಯಗಳು ಇದ್ದೇ ಇರುತ್ತದೆ. ಸಾಯಿ ಪಲ್ಲವಿ ಒಪ್ಪಲ್ಲ ಎಂದೇ ವಿಜಯ್, ಮೃಣಾಲ್‌ಗೆ ಚಾನ್ಸ್ ಕೊಟ್ಟಿದ್ದಾರೆ ಎಂದೇ ಟಾಕ್ ಆಗುತ್ತಿದೆ. ಇದನ್ನೂ ಓದಿ:ಅಮ್ಮನ ಲಾಲಿ: ಕನ್ನಡದಲ್ಲಿ ಮತ್ತೊಂದು ಕಾದಂಬರಿ ಆಧಾರಿತ ಚಿತ್ರ

    ಸಿನಿಮಾ ಕಥೆಗೆ ಹಸಿ ಬಿಸಿ ದೃಶ್ಯಗಳು ಅವಶ್ಯಕತೆ ಇದ್ರೆ ಮೃಣಾಲ್ ನಟಿಸುತ್ತಾರೆ. ಹಾಗಾಗಿ ವಿಜಯ್ ದೇವರಕೊಂಡ ಅವರು ಮೃಣಾಲ್‌ಗೆ ಜೈ ಎಂದಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಕೂಡ ಡಿಯರ್ ಕಾಮ್ರೆಡ್ ಚಿತ್ರಕ್ಕೆ ಸಾಯಿ ಪಲ್ಲವಿ ಸೆಲೆಕ್ಟ್ ಆಗಿದ್ದರು. ಬೋಲ್ಡ್ ಆಗಿ ಸಾಯಿ ಪಲ್ಲವಿ ನಟಿಸಲ್ಲ ಎಂಬ ಕಾರಣಕ್ಕೆ ರಶ್ಮಿಕಾ ಮಂದಣ್ಣಗೆ ವಿಜಯ್ ಮಣೆ ಹಾಕಿದ್ದರು. ಈಗ ಮತ್ತೆ ಹಿಸ್ಟರಿ ರಿಪೀಟ್ ಆಗಿದೆ ಎಂಬ ಸುದ್ದಿ ಆಂಧ್ರದಲ್ಲಿ ಹರಿದಾಡುತ್ತಿದೆ.

    ‘ಲೈಗರ್’ (Liger) ಸಿನಿಮಾ ಮಕಾಡೆ ಮಲಗಿದ ಮೇಲೆ ಸಮಂತಾ (Samantha) ಜೊತೆ ‘ಖುಷಿ’ ಸಿನಿಮಾ ಮಾಡಿ ವಿಜಯ್‌ ದೇವರಕೊಂಡ ಗೆದ್ದರು. ಈಗ ಮತ್ತೆ ಫ್ಯಾಮಿಲಿ ಸ್ಟಾರ್ ಮೂಲಕ ನಟ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

  • ‘ಫ್ಯಾಮಿಲಿ ಸ್ಟಾರ್’ ಜೊತೆ ಒಂದಾದ ರಶ್ಮಿಕಾ ಮಂದಣ್ಣ

    ‘ಫ್ಯಾಮಿಲಿ ಸ್ಟಾರ್’ ಜೊತೆ ಒಂದಾದ ರಶ್ಮಿಕಾ ಮಂದಣ್ಣ

    ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಬಾರಿ ಅವರು ನಾಯಕಿಯಾಗಿ ನಟಿಸುವುದರ ಬದಲು ಅತಿಥಿ ಪಾತ್ರವನ್ನು ಮಾಡಲಿದ್ದಾರೆ ಎನ್ನುವ ಮಾಹಿತಿ ಇದೆ. ವಿಜಯ್ ದೇವರಕೊಂಡ (Vijay Devarakonda) ಹಾಗೂ ಮೃಣಾಲ್ (Mrunal) ಕಾಂಬಿನೇಷನ್ ನ ಫ್ಯಾಮಿಲಿ ಸ್ಟಾರ್  (Family Star) ಸಿನಿಮಾದಲ್ಲಿ ರಶ್ಮಿಕಾ ಅತಿಥಿ ಪಾತ್ರ ಮಾಡಲಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ.

    ರಶ್ಮಿಕಾ ಮಂದಣ್ಣ (Rashmika Mandanna) ಈಗ ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಮಿಂಚ್ತಿದ್ದಾರೆ. ಸದ್ಯ ಬಾಲಿವುಡ್‌ನ ‘ಅನಿಮಲ್’ (Animal) ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ತಂಡದ ಜೊತೆ ನಟಿ ಬೆಂಗಳೂರಿಗೆ ಬಂದಿದ್ದರು. ಸಿನಿಮಾ ಬಗ್ಗೆ ಹಲವು ವಿಚಾರಗಳ ಮಾತನಾಡಿದರು. ಈ ವೇಳೆ, ಮತ್ತೆ ಕನ್ನಡ ಸಿನಿಮಾದಲ್ಲಿ ರಶ್ಮಿಕಾ ನಟಿಸಲಿದ್ದಾರಾ ಎಂಬ ಮಾತು ತೂರಿ ಬಂತು.

    ಈ ಕುರಿತು ಮಾತನಾಡಿರುವ ರಶ್ಮಿಕಾ, ನಾನು ಪ್ಯಾನ್ ಇಂಡಿಯಾ ಸಿನಿಮಾ ಮಾಡುವಾಗ ಕನ್ನಡದಲ್ಲಿ ಡಬ್ ಮಾಡುವ ಅವಕಾಶ ಸಿಕ್ಕರೆ, ಖಂಡಿತಾ ಮಾಡ್ತೀನಿ. ಇನ್ನೂ ನನಗೆ ಅನಿಸುತ್ತಾ ಇಲ್ಲ, ನಾನು ಕನ್ನಡ ಇಂಡಸ್ಟ್ರಿಯಿಂದ ದೂರ ಇದ್ದೀನಿ ಅಂತ. ಅದರಲ್ಲೂ ಕನ್ನಡದ ಸಿನಿಮಾ ಬಗ್ಗೆ ಇದೀಗ ಮಾತುಕತೆ ನಡೆಯುತ್ತಿದೆ. ಅದರ ಬಗ್ಗೆ ಸದ್ಯದಲ್ಲೇ ಮಾಹಿತಿ ಕೊಡ್ತೀನಿ. ಅವಕಾಶ ಸಿಕ್ಕರೆ ಕಂಡಿತಾ ಕನ್ನಡದ ಸಿನಿಮಾದಲ್ಲಿ ನಟಿಸುತ್ತೇನೆ ಎಂದಿದ್ದಾರೆ.

  • ನಾಳೆ ಗೋವಾದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರನ ಅದ್ಧೂರಿ ವಿವಾಹ

    ನಾಳೆ ಗೋವಾದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರನ ಅದ್ಧೂರಿ ವಿವಾಹ

    ಬೆಳಗಾವಿ: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮದುವೆ ಅದ್ಧೂರಿಯಾಗಿ ನಾಳೆ ಗೋವಾದಲ್ಲಿ ನಡೆಯಲಿದೆ.

    ಗೋವಾದ ಲೀಲಾ ಪ್ಯಾಲೇಸ್ ಹೋಟೆಲ್‍ನಲ್ಲಿ ನಡೆಯುವ ಅದ್ಧೂರಿ ಕಾರ್ಯಕ್ರಮದಲ್ಲಿ ಹೆಬ್ಬಾಳ್ಕರ್ ಪುತ್ರ ಮೃಣಾಲ್, ಡಾ.ಹಿತಾ ಅವರ ಕೈಹಿಡಿಯಲಿದ್ದಾರೆ. ನಿನ್ನೆ ರಾತ್ರಿ ಮೆಹಂದಿ ಕಾರ್ಯಕ್ರಮ ನೆರವೇರಿದ್ದು, ಇಂದು ಹಳದಿ ಕಾರ್ಯಕ್ರಮ ನಡೆಯಲಿದೆ. ಡಾ.ಹಿತಾ ಅವರು ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ ಸಹೋದರ ಬಿ.ಕೆ.ಶಿವಕುಮಾರ್ ಪುತ್ರಿ.

    ನಾಳೆ ವಿವಾಹ ಸಮಾರಂಭದಲ್ಲಿ ಗಣ್ಯಾತಿಗಣ್ಯರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಕೋವಿಡ್ ಹಿನ್ನೆಲೆ ಆಪ್ತರು, ಗಣ್ಯರಿಗೆ ಮಾತ್ರ ವಿವಾಹ ಸಮಾರಂಭಕ್ಕೆ ಆಹ್ವಾನ ನೀಡಲಾಗಿದ್ದು, ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಈಶ್ವರ ಖಂಡ್ರೆ ಪಾಲ್ಗೊಳ್ಳುವ ನಿರೀಕ್ಷೆ ಇದೆ.

    ದೆಹಲಿಯಲ್ಲಿ ವಿಪರೀತ ವಾಯು ಮಾಲಿನ್ಯ ಹಿನ್ನೆಲೆಯಲ್ಲಿ ಈಗಾಗಲೇ ಸೋನಿಯಾ ಗಾಂಧಿ ವೈದ್ಯರ ಸಲಹೆ ಮೇರೆಗೆ ಗೋವಾದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.