Tag: Mrs. Sunny leone Youth Council

  • ‘ಶ್ರೀಮತಿ ಸನ್ನಿ ಲಿಯೋನ್ ಯುವಕ ಮಂಡಳಿ’ – ರಾಯಚೂರಿನಲ್ಲಿದೆ ಮಾದಕ ನಟಿಯ ಅಭಿಮಾನಿಗಳ ದಂಡು

    ‘ಶ್ರೀಮತಿ ಸನ್ನಿ ಲಿಯೋನ್ ಯುವಕ ಮಂಡಳಿ’ – ರಾಯಚೂರಿನಲ್ಲಿದೆ ಮಾದಕ ನಟಿಯ ಅಭಿಮಾನಿಗಳ ದಂಡು

    ರಾಯಚೂರು: ಮಾದಕ ನಟಿ ಸನ್ನಿ ಲಿಯೋನ್ ಅಭಿಮಾನಿ ಅಂತ ಸಾರ್ವಜನಿಕವಾಗಿ ಹೇಳಿಕೊಳ್ಳಲು ಡಬಲ್ ಗುಂಡಿಗೆ ಬೇಕು. ಆದರೆ ರಾಯಚೂರಿನ ಸಿಂಧನೂರು ತಾಲೂಕಿನ ಹುಡಾ ಗ್ರಾಮದಲ್ಲಿ ‘ಶ್ರೀಮತಿ ಸನ್ನಿಲಿಯೋನ್ ಯುವಕ ಮಂಡಳಿ’ ಸ್ಥಾಪನೆಯಾಗಿದ್ದು, ಗ್ರಾಮದ ಜನರೆಲ್ಲಾ ಹುಬ್ಬೇರಿಸುವಂತೆ ಮಾಡಿದೆ. ಗ್ರಾಮದಲ್ಲಿ ಈಗ ಶ್ರೀಮತಿ ಸನ್ನಿಲಿಯೋನ್ ಯುವಕ ಮಂಡಳಿ’ ಫ್ಲೆಕ್ಸ್ ರಾರಾಜಿಸುತ್ತಿದೆ.

    ಫ್ಲೆಕ್ಸ್ ನಲ್ಲಿ 13 ಯುವಕರು ಪಂಚೆ ಕಟ್ಟಿಕೊಂಡು ಸಾಲಾಗಿ ನಿಂತುಕೊಂಡ ಚಿತ್ರಗಳಿವೆ. ನಟಿ ಸನ್ನಿ ಲಿಯೋನ್ ಕೆಂಪು ಸೀರೆ ಧರಿಸಿ ನಿಂತಿರುವ ಚಿತ್ರವನ್ನು ಯುವ ಪದಾಧಿಕಾರಿಗಳ ಪಕ್ಕದಲ್ಲಿ ದೊಡ್ಡದಾಗಿ ಹಾಕಲಾಗಿದೆ. ‘ಶ್ರೀಮತಿ ಸನ್ನಿಲಿಯೋನ್’ ಅಂತ ಗೌರವ ಸೂಚಕ ಪದ ಬಳಿಸಿ ಸಂಘಕ್ಕೆ ನಾಮಕರಣ ಮಾಡಿಕೊಂಡಿದ್ದಾರೆ. ನಟಿಯ ಸಭ್ಯ ಚಿತ್ರವನ್ನೇ ಬಳಸಿಕೊಂಡಿರುವುದು ವಿಶೇಷ.

    ಗ್ರಾಮದಲ್ಲಿ ಜನವರಿ 10 ರಿಂದ 13 ರವರೆಗೆ ಅಂಬಾದೇವಿ ರಥೋತ್ಸವ ಹಾಗೂ ಕುಂಬೋತ್ಸವ ಆಯೋಜಿಸಲಾಗಿತ್ತು. ಜಾತ್ರಾ ಸಂದರ್ಭದಲ್ಲಿ ಹುಟ್ಟಿಕೊಂಡ ಯುವಕ ಸಂಘವು ಫ್ಲೆಕ್ಸ್ ಹಾಕಿಸಿದ್ದು, ಗಮನ ಸೆಳೆಯುತ್ತಿದೆ. ಶ್ರೀ ಶ್ರೀ ಶ್ರೀ ಸಿದ್ಧಪರ್ವತ ಅಂಬಾದೇವಿಯ ರಥೋತ್ಸವ ಹಾಗೂ ಕುಂಭೋತ್ಸವಕ್ಕೆ ಸರ್ವರಿಗೂ ಆದರದ ಸುಸ್ವಾಗತ. ಶ್ರೀಮತಿ ಸನ್ನಿ ಲಿಯೋನ್ ಯುವಕ ಮಂಡಳಿ ಹುಡಾ ಅನ್ನೋ ಫ್ಲೆಕ್ಸ್ ಈಗ ಗ್ರಾಮದಲ್ಲಿ ಎಲ್ಲರ ಕಣ್ಣು ಕುಕ್ಕುತ್ತಿದೆ.