Tag: Mrinal Hebbalkar

  • ಹೆಬ್ಬಾಳ್ಕರ್‌ ಬಳಿ ಕ್ಷಮೆ ಕೇಳಿದ ಸಿದ್ದರಾಮಯ್ಯ

    ಹೆಬ್ಬಾಳ್ಕರ್‌ ಬಳಿ ಕ್ಷಮೆ ಕೇಳಿದ ಸಿದ್ದರಾಮಯ್ಯ

    ಬೆಂಗಳೂರು: ಮಗನ ಸೋಲಿನ ಬೇಸರಲ್ಲಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಬಳಿ ಸಿಎಂ ಸಿದ್ದರಾಮಯ್ಯ (CM Siddaramaiah) ಕ್ಷಮೆ ಕೇಳಿದ್ದಾರೆ.

    ಸಿಎಂ ಭೇಟಿಗೆ ಆಗಮಿಸಿದ್ದ ಬೆಳಗಾವಿ ಭಾಗದ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಹಾಗೂ ಸತೀಶ್ ಜಾರಕಿಹೊಳಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಆಗಮಿಸಿದ್ದರು. ಇದನ್ನೂ ಓದಿ: ಮೋದಿ ಸಂಪುಟದಲ್ಲಿ ನಡ್ಡಾಗೆ ಸ್ಥಾನ – ಯಾರಾಗ್ತಾರೆ ಬಿಜೆಪಿ ಮುಂದಿನ ಅಧ್ಯಕ್ಷ?

     
    ಲಕ್ಷ್ಮಿ ಹೆಬ್ಬಾಳ್ಕರ್ ನೋಡಿ ಸಿಎಂ ಸಿದ್ದರಾಮಯ್ಯ ಸಾರಿ ಕಣಮ್ಮ ಎಂದಿದ್ದಾರೆ. ಸಿಎಂ  ಸ್ವಾರಿ ಎಂದ ಕೂಡಲೇ ತುಂಬಾ ಭಾವುಕರಾಗಿ ಲಕ್ಷ್ಮಿ ಹೆಬ್ಬಾಳ್ಕರ್‌ ಮೌನಕ್ಕೆ ಶರಣಾದರು. ಇದನ್ನೂ ಓದಿ: ಬರೋಬ್ಬರಿ 25 ವರ್ಷದ ಬಳಿಕ ಜೆಡಿಎಸ್‌ಗೆ ಕೇಂದ್ರದಲ್ಲಿ ಮಂತ್ರಿ ಸ್ಥಾನ!

    ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಹೆಬ್ಬಾಳ್ಕರ್‌ ಪುತ್ರ ಮೃಣಾಲ್‌ (Mrinal Hebbalkar) ಅವರು 1,78,437 ಮತಗಳ ಅಂತರದಿಂದ ಸೋತಿದ್ದಾರೆ.  ಬಿಜೆಪಿಯ ಜಗದೀಶ್‌ ಶೆಟ್ಟರ್‌ ಅವರಿಗೆ 7,62,029 ಮತಗಳು ಬಿದ್ದರೆ ಮೃಣಾಲ್‌ ಅವರಿಗೆ 5,83,592 ಮತಗಳು ಬಿದ್ದಿದ್ದವು.

     

  • ನನಗೆ ಟಿಕೆಟ್ ನೀಡಿದರೆ ಹೈಕಮಾಂಡ್‌ಗೆ ತಲೆಬಾಗಿ ಸ್ಪರ್ಧೆ: ಮೃಣಾಲ್ ಹೆಬ್ಬಾಳ್ಕರ್

    ನನಗೆ ಟಿಕೆಟ್ ನೀಡಿದರೆ ಹೈಕಮಾಂಡ್‌ಗೆ ತಲೆಬಾಗಿ ಸ್ಪರ್ಧೆ: ಮೃಣಾಲ್ ಹೆಬ್ಬಾಳ್ಕರ್

    ಬೆಳಗಾವಿ: ನನಗೆ ಟಿಕೆಟ್ ನೀಡಿದರೆ ಹೈಕಮಾಂಡ್‌ಗೆ ತಲೆಬಾಗಿ, ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಮನಸ್ಸು ಗೆದ್ದು ಜನರ ಬಳಿ ಹೋಗುತ್ತೇನೆ ಎಂದು ಬೆಳಗಾವಿ (Belagavi) ಲೋಕಸಭೆ ಕಾಂಗ್ರೆಸ್ (Congress) ಟಿಕೆಟ್ ಆಕಾಂಕ್ಷಿ ಮೃಣಾಲ್ ಹೆಬ್ಬಾಳ್ಕರ್ (Mrinal Hebbalkar) ಹೇಳಿದರು.

    ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಸಭೆಗೂ ಮೊದಲು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಸುಮಾರು ವರ್ಷಗಳಿಂದ ಓಡಾಡುತ್ತಿದ್ದೇನೆ. ಪಕ್ಷ ಸಂಘಟನೆಗಾಗಿ ಹಳ್ಳಿ ಹಳ್ಳಿಗೆ ಭೇಟಿ ಕೊಡುತ್ತಿದ್ದೇನೆ. ಈಗ ಒಳ್ಳೆಯ ವಾತಾವರಣ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಟಿಕೆಟ್ ವಿಚಾರದಲ್ಲಿ ನಮ್ಮ ಪಕ್ಷ ಅಥವಾ ವಿರೋಧ ಪಕ್ಷ ಅಧಿಕೃತ ನಿರ್ಧಾರ ಬರುವವರೆಗೂ ಏನೂ ಹೇಳಲ್ಲ. ಅಲ್ಲಿಯವರೆಗೂ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಎದುರಾಳಿ ಯಾರೇ ಆದರೂ ನಾವು ಮಾಡಿದ ಕೆಲಸ, ಸತೀಶ್ ಜಾರಕಿಹೊಳಿ ಮತ್ತು ಸರ್ಕಾರ ಮಾಡಿದ ಕೆಲಸಗಳನ್ನು ಮುಂದಿಟ್ಟುಕೊಂಡು ಜನರ ಬಳಿ ಹೋಗಿ ಮತ ಕೇಳುತ್ತೇವೆ ಎಂದು ತಿಳಿಸಿದರು.

    ಕುಂದಾನಗರಿ ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ (ಸಿವಿಲ್) ಎಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಮೃಣಾಲ್ ಏಪ್ರಿಲ್ 6, 1993ರಲ್ಲಿ ಜನಿಸಿದ್ದಾರೆ. ಮೂಲತಃ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಟ್ಟಿಹೊಳಿ ಗ್ರಾಮದ ನಿವಾಸಿ ಆಗಿರುವ ಮೃಣಾಲ್ ಅವರ ತಂದೆ ರವೀಂದ್ರ, ತಾಯಿ ಲಕ್ಷ್ಮಿ ಹೆಬ್ಬಾಳ್ಕರ್. ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಕೆಲಸ ಮಾಡುತ್ತಿದ್ದಾರೆ. ಮೃಣಾಲ್ 2013ರಿಂದ ಸಕ್ರಿಯ ರಾಜಕಾರಣದಲ್ಲಿ ಭಾಗಿಯಾಗಿದ್ದಾರೆ. ಎರಡು ಅವಧಿಗೆ ಕಾಂಗ್ರೆಸ್ ಯುವ ಘಟಕದ ಬೆಳಗಾವಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

    ಮೃಣಾಲ್ ಶುಗರ್ಸ್‌ನ ವ್ಯವಸ್ಥಾಪಕ ನಿರ್ದೇಶಕರಾಗಿ, ಸವದತ್ತಿಯ ಹರ್ಷಾ ಶುಗರ್ಸ್ ನಿರ್ದೇಶಕರಾಗಿ, ಲಕ್ಷ್ಮಿತಾಯಿ ಸೌಹಾರ್ದ ಸಹಕಾರ ನಿಯಮಿತದ ನಿರ್ದೇಶಕರಾಗಿ, ಹರ್ಷಾ ಬಿಲ್ಡರ್ ಹಾಗೂ ಡೆವೆಲಪರ್‌ನ ಪಾರ್ಟ್ನರ್ ಕೂಡ ಆಗಿದ್ದಾರೆ. ಸದ್ಯ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ತಾಯಿ ಲಕ್ಷ್ಮಿ ಹೆಬ್ಬಾಳ್ಕರ್ ಅನುಪಸ್ಥಿತಿಯಲ್ಲಿ ಹೆಚ್ಚೆಚ್ಚು ಓಡಾಟ ಮಾಡುತ್ತಿದ್ದಾರೆ.