Tag: MRI

  • ಎಂಆರ್‌ಐ ಸ್ಕ್ಯಾನಿಂಗ್ ರೂಮ್‍ನಲ್ಲಿ ಕ್ಯಾಮೆರಾ ಬಚ್ಚಿಟ್ಟ ವಾರ್ಡ್ ಬಾಯ್

    ಎಂಆರ್‌ಐ ಸ್ಕ್ಯಾನಿಂಗ್ ರೂಮ್‍ನಲ್ಲಿ ಕ್ಯಾಮೆರಾ ಬಚ್ಚಿಟ್ಟ ವಾರ್ಡ್ ಬಾಯ್

    – ಮಹಿಳಾ ರೋಗಿಗಳಿಗೆ ಬಟ್ಟೆ ಬದಲಿಸುವಂತೆ ಕೋಣೆಗೆ ಕಳಿಸ್ತಿದ್ದ ಕಾಮುಕ

    ಮುಂಬೈ: ಪುಣೆಯ ಆಸ್ಪತ್ರೆಯಲ್ಲಿ ಮಹಿಳಾ ರೋಗಿಗಳು ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್(ಎಂಆರ್‌ಐ) ಸ್ಕ್ಯಾನಿಂಗ್ ಗೆ ಬಟ್ಟೆ ಬದಲಾಯಿಸುವಾಗ ವಿಡಿಯೋ ಮಾಡಿದ್ದ ವಾರ್ಡ್ ಬಾಯ್ ನನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯನ್ನು 25 ವರ್ಷದ ಲಕೇಶ್ ಲಾಹು ಉಟ್ಟೆಕರ್ ಎಂದು ಗುರುತಿಸಲಾಗಿದ್ದು, ಶನಿವಾರ ರಾತ್ರಿ ಮಹಿಳೆ ಎಂಆರ್‌ಐ ರೂಮಿನಲ್ಲಿ ಬಟ್ಟೆ ಬದಲಾಯಿಸುವುದಾಗ ಮೊಬೈಲ್ ಫೋನ್ ಕಂಡು ಬಂದಿದೆ. ಆಗ ವಾರ್ಡ್ ಬಾಯ್‍ನ ಕೃತ್ಯ ಬೆಳಕಿಗೆ ಬಂದಿದೆ. ಸದ್ಯಕ್ಕೆ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮಹಿಳೆ ಹೊಟ್ಟೆ ನೋವು ಎಂದು ಜನವರಿ 23 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಪರೀಕ್ಷೆ ಮಾಡಿ ಶನಿವಾರ ಎಂಆರ್‌ಐ ಸ್ಕ್ಯಾನ್ ಮಾಡಿಸುವಂತೆ ಸಲಹೆ ನೀಡಿದ್ದಾರೆ. ಅದರಂತೆಯೇ ಸ್ಕ್ಯಾನಿಂಗ್ ಮಾಡಿಸಲು ಹೋಗಿದ್ದು, ಆಗ ವಾರ್ಡ್ ಬಾಯ್ ಉದ್ದೇಶಪೂರ್ವಕ್ಕಾಗಿ ರೂಮಿಗೆ ಹೋಗಿ ಬಟ್ಟೆ ಬದಲಾಯಿಸುವಂತೆ ಹೇಳಿದ್ದಾನೆ.

    ಮಹಿಳೆ ರೂಮಿಗೆ ಹೋಗಿದ್ದು, ಅಲ್ಲಿ ಮೊಬೈಲ್ ಫೋನ್ ಕಂಡು ಬಂದಿದೆ. ತಕ್ಷಣ ಮಹಿಳೆ ಪತಿಗೆ ತಿಳಿಸಿದ್ದಾರೆ. ಆಗ ದಂಪತಿ ಫೋನ್ ಪರಿಶೀಲನೆ ಮಾಡಿದಾಗ ಬಟ್ಟೆ ಬದಲಾಯಿಸಿರುವ ವಿಡಿಯೋ ರೆಕಾರ್ಡ್ ಆಗಿದೆ. ತಕ್ಷಣ ದಂಪತಿ ಸಮೀಪದ ಕೊರೆಗಾಂವ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಪೊಲೀಸ್ ಠಾಣಾಧಿಕಾರಿ ಹೇಳಿದ್ದಾರೆ.

    ಆರೋಪಿ ಉಟ್ಟೆಕರ್ ನನ್ನು ವಿಚಾರಣೆ ನಡೆಸಿದ ಬಳಿಕ ಬಂಧಿಸಲಾಗಿದ್ದು, ಆರೋಪಿ ವಿರುದ್ಧ ವಿವಿಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv