Tag: MPs Suspend

  • ಲೋಕಸಭೆಯಿಂದ ಮತ್ತೆ 31 ಸಂಸದರು ಅಮಾನತು

    ಲೋಕಸಭೆಯಿಂದ ಮತ್ತೆ 31 ಸಂಸದರು ಅಮಾನತು

    ನವದೆಹಲಿ: ಕಲಾಪಕ್ಕೆ ಅಡ್ಡಿಪಡಿಸಿದ ಕಾರಣಕ್ಕಾಗಿ ಕಾಂಗ್ರೆಸ್‌ನ ಅಧೀರ್ ರಂಜನ್ ಚೌಧರಿ (Adhir Ranjan Chowdhury) ಸೇರಿದಂತೆ ವಿಪಕ್ಷಗಳ 31 ಸಂಸದರನ್ನು ಲೋಕಸಭೆಯಿಂದ (Lok Sabha) ಅಮಾನತುಗೊಳಿಸಲಾಗಿದೆ.

    ಕಳೆದ ವಾರ ಆಗಿದ್ದ ಲೋಕಸಭಾ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿ ವಿಪಕ್ಷಗಳು ಪ್ರತಿಭಟಿಸಿದ್ದವು. ಇದನ್ನೂ ಓದಿ: ಕೇಂದ್ರದಲ್ಲಿ ಬೇರೆ ಪಕ್ಷ ಇರ್ತಿದ್ರೆ ಬಿಜೆಪಿ ಇಡೀ ದೆಹಲಿ ಬಂದ್ ಮಾಡ್ತಿತ್ತು: ಸಂಜಯ್ ರಾವತ್

    ಕಲಾಪಕ್ಕೆ ಅಡ್ಡಿಪಡಿಸಿದ್ದರಿಂದ ಪ್ರತಿಪಕ್ಷಗಳ ಸಂಸದರನ್ನು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಲೋಕಸಭೆಯಿಂದ ಅಮಾನತುಗೊಳಿಸಲಾಯಿತು.

    ಗೃಹ ಸಚಿವರ ಹೇಳಿಕೆಗೆ ಒತ್ತಾಯಿಸಿ ಕಳೆದ ವಾರ ವಿಪಕ್ಷಗಳ 13 ಸಂಸದರು ಅಮಾನತುಗೊಂಡಿದ್ದರು. ಈಗ ಮತ್ತೊಂದು ಸುತ್ತಿನಲ್ಲಿ 31 ಸಂಸದರು ಅಮಾನತುಗೊಂಡಿದ್ದಾರೆ. ಇದಲ್ಲದೇ ಇನ್ನೂ ಮೂವರು ಸಂಸದರನ್ನು ವಿಶೇಷಾಧಿಕಾರ ಸಮಿತಿ ವರದಿ ಬರುವವರೆಗೆ ಅಮಾನತುಗೊಳಿಸಲಾಗಿದೆ. ಇದರರ್ಥ ಒಟ್ಟು 46 ಸಂಸದರನ್ನು ಅಮಾನತುಗೊಳಿಸಲಾಗಿದೆ. ಅವರಲ್ಲಿ 43 ಮಂದಿ ಭದ್ರತಾ ಲೋಪದ ಬಗ್ಗೆ ಗೃಹ ಸಚಿವರ ಹೇಳಿಕೆಗೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸಂಸತ್‌ ಮೇಲಿನ ದಾಳಿ ಗಂಭೀರವಾದದ್ದು; ಚರ್ಚೆ ಬೇಡ, ವಿಸ್ತೃತ ತನಿಖೆಯಾಗಲಿ: ಪ್ರಧಾನಿ ಮೋದಿ ಮೊದಲ ಪ್ರತಿಕ್ರಿಯೆ

    ಅಮಾನತುಗೊಂಡ ಸಂಸದರಲ್ಲಿ ಲೋಕಸಭೆಯಲ್ಲಿ ಕಾಂಗ್ರೆಸ್‌ನ ನಾಯಕ ಅಧೀರ್ ರಂಜನ್ ಚೌಧರಿ ಮತ್ತು ಸದನದಲ್ಲಿ ಪಕ್ಷದ ಉಪನಾಯಕ ಗೌರವ್ ಗೊಗೊಯ್ ಸೇರಿದ್ದಾರೆ.

  • ಸಂಸತ್‌ನಲ್ಲಿನ ಭದ್ರತಾ ಲೋಪಕ್ಕೂ, ಸಂಸದರ ಅಮಾನತಿಗೂ ಸಂಬಂಧವಿಲ್ಲ: ಲೋಕಸಭಾ ಸ್ಫೀಕರ್‌ ಸ್ಪಷ್ಟನೆ

    ಸಂಸತ್‌ನಲ್ಲಿನ ಭದ್ರತಾ ಲೋಪಕ್ಕೂ, ಸಂಸದರ ಅಮಾನತಿಗೂ ಸಂಬಂಧವಿಲ್ಲ: ಲೋಕಸಭಾ ಸ್ಫೀಕರ್‌ ಸ್ಪಷ್ಟನೆ

    – ದೇಶದ ಎಲ್ಲಾ ಸಂಸದರಿಗೆ ಸ್ಪೀಕರ್‌ ಓಂ ಬಿರ್ಲಾ ಪತ್ರ

    ನವದೆಹಲಿ: ಲೋಕಸಭಾ ಸಂಸದರ ಅಮಾನತಿಗೂ, ಸಂಸತ್‌ ಭದ್ರತಾ ಲೋಪ (Lok Sabha Security Breach) ಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ಲೋಕಸಭೆಯ ಸ್ಫೀಕರ್‌ ಓಂ ಬಿರ್ಲಾ (Om Birla) ಸ್ಪಷ್ಟನೆ ನೀಡಿದ್ದಾರೆ.

    ಬುಧವಾರ ಸಂಸತ್‌ನಲ್ಲಿ ಸಂಭವಿಸಿದ ಭದ್ರತಾ ಲೋಪ ಘಟನೆ ಕುರಿತು ಲೋಕಸಭೆಯ ಸ್ಪೀಕರ್‌ (Lok Sabha Speaker) ಓಂ ಬಿರ್ಲಾ ಅವರು ಎಲ್ಲಾ ಸಂಸದರಿಗೆ ಶನಿವಾರ (ಇಂದು) ಪತ್ರ ಬರೆದಿದ್ದಾರೆ.‌ ಕೆಲವು ಸದಸ್ಯರನ್ನು ಅಮಾನುತುಗೊಳಿಸಿರುವ ಸದನದ ನಿರ್ಧಾರವನ್ನು ಸಂಸತ್ತಿನ ಭದ್ರತಾ ಲೋಪಕ್ಕೆ ಲಿಂಕ್‌ ಮಾಡುತ್ತಿರುವುದು ದುರದೃಷ್ಟಕರ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಸದಸ್ಯರನ್ನು ಅಮಾನತು ಮಾಡಿದ್ದು, ಸದನದ ಪಾವಿತ್ರ್ಯತೆ ಎತ್ತಿಹಿಡಿಯುವುದಕ್ಕಾಗಿ ಮಾತ್ರ ಎಂದು ಸ್ಪಷ್ಟನೆ ನೀಡಿದ್ದಾರೆ.

    ಡಿಸೆಂಬರ್‌ 13ರ ಬುಧವಾರ ನಡೆದ ಸಂಸತ್‌ನಲ್ಲಿ ನಡೆದ ಘಟನೆಯು ಭದ್ರತಾ ಲೋಪಕ್ಕೆ ಕಾರಣವಾಯಿತು. ಮರುದಿನ ಭದ್ರತಾ ಲೋಪ ಖಂಡಿಸಿ ಸಂಸದರು ಸದನದಲ್ಲಿ ಗದ್ದಲ ಎಬ್ಬಿಸಿದ್ದರಿಂದ ಓರ್ವ ರಾಜ್ಯಸಭಾ ಸದಸ್ಯರು ಸೇರಿದಂತೆ ಪ್ರತಿಪಕ್ಷಗಳ 14 ಮಂದಿ ಲೋಕಸಭಾ ಸದಸ್ಯರನ್ನು ಅಧಿವೇಶನದ ಉಳಿದ ಭಾಗದಿಂದ ಅಮಾನತುಗೊಳಿಸಲಾಯಿತು (MPs Suspend). ಇದನ್ನೂ ಓದಿ: ಸಂಸತ್ತಿನಲ್ಲಿ ಭದ್ರತಾ ಲೋಪ ಕೇಸ್‌ – ಭಾರತಕ್ಕೆ ಬೇಕಾಗಿರುವುದು ಬಾಂಬ್ ಎಂದು ಫೇಸ್ಬುಕ್‌ನಲ್ಲಿ ಬರೆದುಕೊಂಡಿದ್ದ ಮಾಸ್ಟರ್‌ಮೈಂಡ್‌

    ಈ ಘಟನೆಗೆ ಸಂಬಂಧಿಸಿದಂತೆ ಸ್ಪೀಕರ್‌ ಸ್ಪಷ್ಟನೆ ನೀಡಿದ್ದಾರೆ. ಸಂಸತ್ತಿನ ಹೊಸ ಕಟ್ಟಡದ ಉದ್ಘಾಟನಾ ಸಮಯದಲ್ಲೇ ನಾವು ಸದನದೊಳಗೆ ಫಲಕ ಹಿಡಿದು ಬರುವುದನ್ನು ನಿಷೇಧಿಸಿದ್ದೇವೆ. ಅಲ್ಲದೇ ಸದನದ ಬಾವಿಗೆ ಇಳಿದು ಗದ್ದಲ ಸೃಷ್ಟಿಸುವುದುದಿಲ್ಲ ಎಂದು ಸಹ ನಿರ್ಧರಿಸಿದ್ದೇವೆ. ಸದನದ ಕಲಾಪಗಳ ಸಮಯದಲ್ಲಿ ಅನುಚಿತ ನಡವಳಿಕೆಗಳು ಹಾಗೂ ಕಲಾಪಕ್ಕೆ ಅಡ್ಡಿಯುಂಟುಮಾಡುವುದನ್ನು ಸಹಿಸುವುದಿಲ್ಲ. ಸಂಸತ್ತಿನ ಸಭ್ಯತೆ ಮತ್ತು ಘನತೆ ಕಾಪಾಡುವುದು ನಮ್ಮ ಆದ್ಯತೆ. ಆದ್ದರಿಂದ ಸರ್ವಾನುಮತದೊಂದಿಗೆ ಸದಸ್ಯರನ್ನು ಅಮಾನತುಗೊಳಿಸುವ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಯಿತು ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಸಂಸತ್‌ನಲ್ಲಿ ಭದ್ರತಾ ಲೋಪ- 6ನೇ ಆರೋಪಿ ಅರೆಸ್ಟ್

    ಇನ್ನೂ ಡಿಸೆಂಬರ್ 13ರ ಭದ್ರತಾ ಲೋಪ ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ. ಆ ಸಮಿತಿ ಈಗಾಗಲೇ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ. ಸಮಿತಿಯ ವರದಿಯನ್ನು ಶೀಘ್ರದಲ್ಲೇ ಸದನದೊಂದಿಗೆ ಹಂಚಿಕೊಳ್ಳಲಾಗುವುದು. ಜೊತೆಗೆ, ಸಂಸತ್ತಿನ ಸಂಕೀರ್ಣದಲ್ಲಿ ಭದ್ರತೆಯ ವಿವಿಧ ಅಂಶಗಳನ್ನು ಪರಿಶೀಲಿಸಲು ಮತ್ತು ಸಮರ್ಪಕ ಯೋಜನೆ ರೂಪಿಸಲು ನಾನು ಉನ್ನತ ಅಧಿಕಾರದ ಸಮಿತಿಯನ್ನೂ ಸಹ ರಚಿಸಿದ್ದೇನೆ. ಇಂತಹ ಘಟನೆಗಳು ಮರುಕಳಿಸುವುದಿಲ್ಲ ಎಂದು ಓಂ ಬಿರ್ಲಾ ಭರವಸೆ ನೀಡಿದ್ದಾರೆ.

    ಮೈಸೂರು-ಕೊಡಗು ಸಂಸದ ಪ್ರತಾಪ್‌ ಸಿಂಹ ಸೇರಿದಂತೆ ಅನೇಕರು ತಮ್ಮ ಎಕ್ಸ್‌ ಖಾತೆಯಲ್ಲಿ ಈ ಪತ್ರವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸಂಸತ್‌ ದಾಳಿಗೆ ಪ್ರಧಾನಿ ಮೋದಿ ನೀತಿಗಳೇ ಕಾರಣ: ರಾಹುಲ್‌ ಗಾಂಧಿ ಆರೋಪ