Tag: MP Sumalatha Ambarish

  • ಅಂಗನವಾಡಿ ಕೇಂದ್ರಗಳ ಸಮಸ್ಯೆಗಳ ಬಗ್ಗೆ ಲೋಕಸಭೆಯಲ್ಲಿ ದನಿ ಎತ್ತಿದ ಸುಮಲತಾ

    ಅಂಗನವಾಡಿ ಕೇಂದ್ರಗಳ ಸಮಸ್ಯೆಗಳ ಬಗ್ಗೆ ಲೋಕಸಭೆಯಲ್ಲಿ ದನಿ ಎತ್ತಿದ ಸುಮಲತಾ

    ನವದೆಹಲಿ: ಅಂಗನವಾಡಿ ಕೇಂದ್ರಗಳ ಸಮಸ್ಯೆಗಳ ಬಗ್ಗೆ ಇಂದು ಮಂಡ್ಯ ಲೋಕಸಭೆ ಸಂಸದೆ ಸುಮಲತಾ ಅಂಬರೀಶ್ ಲೋಕಸಭೆ ಕಲಾಪದ ವೇಳೆ ಗಮನ ಸೆಳೆದಿದ್ದಾರೆ.

    ಅಂಗನವಾಡಿ ಕೇಂದ್ರಗಳಲ್ಲಿ ಪ್ರತ್ಯೇಕ ಅಡುಗೆ ಕೋಣೆಗಳು ಸಮಸ್ಯೆಯಾಗಿದೆ. ಸಾಮಗ್ರಿಗಳ ದಾಸ್ತನಿಗೆ ತೊಂದರೆಯಾಗುತ್ತಿದೆ. ಗುಣಮಟ್ಟದ ಆಹಾರದ ಸಮಸ್ಯೆಯೂ ಇದೆ. ಹೀಗಾಗಿ ಅಂಗನವಾಡಿ ಮೂಲ ಸೌಕರ್ಯಗಳ ಸಮಸ್ಯೆಯನ್ನು ಪರಿಹರಿಸಲು ಕೇಂದ್ರ ಸರ್ಕಾರ ಏನು ಕ್ರಮ ತೆಗೆದುಕೊಂಡಿದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಆಸ್ತಿಗಾಗಿ ಬದುಕಿದ್ದ ಅಜ್ಜಿಯನ್ನು ದಾಖಲೆಗಳಲ್ಲಿ ಸಾಯಿಸಿದ ಸಂಬಂಧಿಕರು – ಡೆತ್ ಸರ್ಟಿಫಿಕೇಟ್ ಕೊಟ್ಟ ಅಧಿಕಾರಿ!

     

    ಇದಕ್ಕೆ ಉತ್ತರಿಸಿದ ಕೇಂದ್ರ ಮಹಿಳಾ ಮತ್ತು ಮಕ್ಕಳ ಖಾತೆ ಸಚಿವೆ ಸ್ಮೃತಿ ಇರಾನಿ, ಅಂಗನವಾಡಿಯಲ್ಲಿ ಮೂಲ ಸೌಕರ್ಯಗಳ ವಿಷಯದಲ್ಲಿ ಕೊರತೆ ಮತ್ತು ಸಮಸ್ಯೆ ಇರುವುದು ನಿಜ. ಅಂಗನವಾಡಿ ಆರಂಭವಾದಗಿನಿಂದ ಈ ಸಮಸ್ಯೆಗಳು ಕಂಡು ಬರುತ್ತಿದೆ. ನಮ್ಮ ಸರ್ಕಾರದ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುತ್ತಿದೆ ಎಂದು ಉತ್ತರಿಸಿದರು. ಇದನ್ನೂ ಓದಿ: ಲೋಕಸಭೆ ಕಲಾಪದಲ್ಲಿ ಹಿಜಬ್ ಚರ್ಚೆ – ಕೇಂದ್ರ ಸರ್ಕಾರ ಮಧ್ಯಪ್ರವೇಶಕ್ಕೆ ಆಗ್ರಹ

  • ಇಂದು ಗಣಿಗಾರಿಕೆ ಪ್ರದೇಶಕ್ಕೆ ಸಂಸದೆ ಸುಮಲತಾ ಅಂಬರೀಶ್ ಭೇಟಿ

    ಇಂದು ಗಣಿಗಾರಿಕೆ ಪ್ರದೇಶಕ್ಕೆ ಸಂಸದೆ ಸುಮಲತಾ ಅಂಬರೀಶ್ ಭೇಟಿ

    ಬೆಂಗಳೂರು: ಕೆಆರ್‍ಎಸ್ ಡ್ಯಾಂ ಬಿರುಕಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದ ಸಂಸದೆ ಸುಮಲತಾ ಇಂದು ಗಣಿಗಾರಿಕೆ ಪ್ರಾಂತ್ಯ ಬೇಬಿ ಬೆಟ್ಟಕ್ಕೆ ತೆರಳಿ ಪರಿಶೀಲನೆ ನಡೆಸಲು ತೀರ್ಮಾನಿಸಿದ್ದಾರೆ. ಈ ಮಧ್ಯೆ, ಕೆಆರ್‍ಎಸ್ ಡ್ಯಾಂ ಬಿರುಕು ಬಿಟ್ಟಿಲ್ಲ ಎಂದು ಕಾವೇರಿ ನೀರಾವರಿ ನಿಗಮದ ಸೂಪರಿಂಡೆಂಟ್ ಎಂಜಿನಿಯರ್ ವಿಜಯಕುಮಾರ್ ಸ್ಪಷ್ಟಪಡಿಸಿದ್ದಾರೆ. ಡ್ಯಾಮ್ ಸೇಫ್ಟಿ ಬಗ್ಗೆ ಸರ್ಕಾರ, ಎಂಪಿ ಸುಮಲತಾ ಅವರಿಗೆ ವರದಿ ಕೊಡಲಾಗಿದೆ.

    ಕ್ರ್ಯಾಕ್ ಬಿಟ್ಟಿದೆ ಅನ್ನೋ ವೈರಲ್ ವೀಡಿಯೋ ಬಿರುಕಿನದ್ದಲ್ಲ. ರೈತರು ಆತಂಕ ಪಡಬೇಕಿಲ್ಲ ಎಂದಿದ್ದಾರೆ. ಇನ್ನು ಡ್ಯಾಂ ಬಿರುಕು ಬಿಡಲು ಅವಕಾಶವೇ ಇಲ್ಲ ಅಂತಾ ಕಾವೇರಿ ತಾಂತ್ರಿಕ ಸಲಹಾ ಸಮಿತಿ ಹೇಳಿದೆ. ಆದರೆ ಕಲ್ಲು ಗಣಿಗಾರಿಕೆ ಮುಂದುವರಿದರೆ ಡ್ಯಾಂಗೆ ಅಪಾಯ ಎಂದಿದೆ. ಈ ಬೆನ್ನಲ್ಲೇ ಸಂಸದೆ ವಿರುದ್ಧ ಶಾಸಕ ರವೀಂದ್ರ ಶ್ರೀಕಂಠಯ್ಯ ಕ್ರಮಕ್ಕೆ ಆಗ್ರಹಿಸಿದ್ದಾರೆ. ಸುಮಲತಾ ಬೇಬಿ ಬೆಟ್ಟಕ್ಕೆ ಹೋಗುತ್ತಿರುವ ಉದ್ದೇಶವೇನು ಎಂದು ಪ್ರಶ್ನೆ ಮಾಡಿದ್ದಾರೆ.

    ಶ್ರೀರಂಗಪಟ್ಟಣ ತಾಲೂಕಿನ ಚನ್ನಕೆರೆ, ಹಂಗರಹಳ್ಳಿ, ಪಾಂಡವಪುರ ತಾಲೂಕಿನ ಬೇಬಿಬೆಟ್ಟಕ್ಕೂ ಸುಮಲರಾ ಅಂಬರೀಶ್ ಭೇಟಿ ನೀಡಲಿದ್ದಾರೆ. ಇದನ್ನೂ ಓದಿ: ಹೆಣ್ಣಿನ ಬಗ್ಗೆ ಹೇಗೆ ಮಾತಾಡ್ಬೇಕು ಅಂತ ಮಾಜಿ ಸಿಎಂ ಅರ್ಥ ಮಾಡಿಕೊಳ್ಳಬೇಕು: ಸುಮಲತಾ ಕಿಡಿ – ಇಂತಹ ಮಾತುಗಳಿಗೆ ನಾನು ಐ ಡೋಂಟ್ ಕೇರ್ ಅಂದ್ರು ಸಂಸದೆ

  • ಸಂಸದೆಗಾಗಿ 10 ಮೀಟರ್ ಮುಂದೆ ಬಂತು ಮೆಮೋ ರೈಲು

    ಸಂಸದೆಗಾಗಿ 10 ಮೀಟರ್ ಮುಂದೆ ಬಂತು ಮೆಮೋ ರೈಲು

    ಮಂಡ್ಯ: 10 ಮೀಟರ್ ಹಿಂದೆ ನಿಂತಿದ್ದ ರೈಲನ್ನು ತಾನಿದ್ದ ಜಾಗಕ್ಕೆ ಸಂಸದೆ ಸುಮಲತಾ ಅಂಬರೀಶ್ ಕರೆಸಿಕೊಂಡು ವಿಶೇಷ ಬೋಗಿಯನ್ನು ಉದ್ಘಾಟಿಸಿದ್ದಾರೆ.

    ಮಂಡ್ಯ ರೈಲು ನಿಲ್ದಾಣದಲ್ಲಿ ಮೆಮೋ ರೈಲಿನ ಮಹಿಳಾ ವಿಶೇಷ ಬೋಗಿಯನ್ನು ಉದ್ಘಾಟಿಸುವ ವೇಳೆ ಸಂಸದೆ ಸುಮಲತಾ ಅವರು ರೈಲನ್ನು ತಾವಿದ್ದಲ್ಲಿಯೇ ಕರೆಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ.

    ಉದ್ಘಾಟನೆ ಮಾಡಲು ಸಿದ್ಧಗೊಂಡಿದ್ದ ರೈಲು 10 ಮೀ. ಹಿಂದೆ ನಿಂತಿತ್ತು. 10 ಹೆಜ್ಜೆ ನಡೆಯಲು ಸಂಸದೆ ಸುಮಲತಾ ಯೋಚಿಸಿದ್ದಕ್ಕಾಗಿ ಅಧಿಕಾರಿಗಳೇ ರೈಲನ್ನು ಮುಂದಕ್ಕೆ ಕರೆಸಿದ್ದಾರೆ. ರೈಲು ತಾನಿದ್ದ ಸ್ಥಳಕ್ಕೆ ಬಂದ ನಂತರ ಸುಮಲತಾ ಮೆಮೋ ರೈಲಿನ ವಿಶೇಷ ಬೋಗಿಯ ಟೇಪ್ ಕತ್ತರಿಸಿ ಒಳ ಪ್ರವೇಶಿಸಿದರು.

    ಕೇಂದ್ರ ರೈಲ್ವೆ ಸಚಿವರ ಬಳಿ ಮೆಮೋ ರೈಲಿನಲ್ಲಿ ವಿಶೇಷ ಮಹಿಳಾ ಬೋಗಿಗಾಗಿ ಸಂಸದೆ ಸುಮಲತಾ ಮನವಿ ಮಾಡಿದ್ದರು. ಮನವಿ ಮೇರೆಗೆ ರೈಲ್ವೇ ಸಚಿವಾಲಯ ಮೆಮೋ ರೈಲಿನಲ್ಲಿ ಮಹಿಳಾ ವಿಶೇಷ ಬೋಗಿ ಮಂಜೂರು ಮಾಡಿತ್ತು. ಈ ಮೂಲಕ ಮಂಡ್ಯ ಮಹಿಳೆಯರಿಗೆ ಸುಮಲತಾ ದೀಪಾವಳಿ ಗಿಫ್ಟ್ ನೀಡಿದ್ದಾರೆ.

    ಈ ಮೆಮೋ ರೈಲು ಬೆಂಗಳೂರು- ಮೈಸೂರು ಮಾರ್ಗವಾಗಿ ಸಂಚರಿಸುತ್ತದೆ. ರೈಲಿನಲ್ಲಿ ಮಹಿಳಾ ಬೋಗಿಯನ್ನು ಅಳವಡಿಸಲಾಗಿರಲಿಲ್ಲ. ಇದಕ್ಕಾಗಿ ಸುಮಲತಾ ಅವರು ಕೇಂದ್ರ ರೈಲ್ವೆ ಇಲಾಖೆಗೆ ಮನವಿ ಮಾಡಿದ್ದರು. ಈ ಬೋಗಿಯಲ್ಲಿ 80 ಆಸನಗಳಿದ್ದು, ಪ್ರತ್ಯೇಕ ಮಹಿಳಾ ಬೋಗಿ ಅಳವಡಿಕೆಯಿಂದ ನಿತ್ಯ ಬೆಂಗಳೂರಿಗೆ ತೆರಳುವ ಮಹಿಳಾ ಕಾರ್ಮಿಕರಿಗೆ ಅನುಕೂಲವಾಗಿಲಿದೆ.

    ಸಂಸದೆ ಸುಮಲತಾ ಅಂಬರೀಶ್ ಮಾತನಾಡಿ, ಪ್ರತ್ಯೇಕ ಮಹಿಳಾ ಬೋಗಿಗೆ ಈ ಭಾಗದ ಮಹಿಳೆಯರು ನನ್ನಲ್ಲಿ ಮನವಿ ಸಲ್ಲಿಸಿದ್ದರು. ಚುನಾವಣೆ ಸಮಯದಲ್ಲಿ ಕೆಲಸ ನಿರತ ಮಹಿಳೆಯರು ಮನವಿ ಮಾಡಿದ್ದರು. ಜನರ ಕೋರಿಕೆಯಂತೆ ಕೇಂದ್ರ ರೈಲ್ವೇ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೆ. ಇದೀಗ ಮಹಿಳಾ ಬೋಗಿಯನ್ನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.