Tag: MP Sumalatha ambareesh

  • ತಂದೆ-ಮಗ ಆಯ್ತು, ಇದೀಗ ಅವರ ಮಗ: ರಾಮನಗರದಲ್ಲಿ ಸುಮಲತಾ ವಾಗ್ದಾಳಿ

    ತಂದೆ-ಮಗ ಆಯ್ತು, ಇದೀಗ ಅವರ ಮಗ: ರಾಮನಗರದಲ್ಲಿ ಸುಮಲತಾ ವಾಗ್ದಾಳಿ

    ರಾಮನಗರ: 4 ತಲೆಮಾರಿನಿಂದ ಒಂದೇ ಕುಟುಂಬಕ್ಕೆ ಅವಕಾಶ ಕೊಟ್ಟಿದ್ದೀರಾ. ತಂದೆ ಆಯ್ತು, ಮಗ ಆಯ್ತು ಇದೀಗ ಅವರ ಮಗ ಎಂದು ದೇವೇಗೌಡರ (H.D.Deve Gowda) ಕುಟುಂಬ ರಾಜಕಾರಣದ ಬಗ್ಗೆ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ವಾಗ್ದಾಳಿ ನಡೆಸಿದರು.

    ಬಿಜೆಪಿ (BJP) ಬೂತ್ ಮಟ್ಟದ ಕಾರ್ತಕರ್ತರ ಸಭೆಯಲ್ಲಿ ಮಾತನಾಡಿದ ಸುಮಲತಾ ಅವರು, ಅಂಬರೀಶ್ ಅವರ ರಾಜಕೀಯ ಜೀವನ ಪ್ರಾರಂಭವಾಗಿದ್ದೇ ರಾಮನಗರದಿಂದ (Ramanagara). ರಾಮನಗರಕ್ಕೂ ನಮ್ಮ ಕುಟುಂಬಕ್ಕೂ ಸವಿಯಾದ ಸಂಬಂಧ ಇದೆ. ಬಿಜೆಪಿಯಲ್ಲಿ ಮಹಿಳೆಗೆ ಗೌರವ ಕೊಡುತ್ತಾರೆ. ಮಂಡ್ಯದಲ್ಲಿ ನನ್ನ ವಿರುದ್ಧ ಸ್ಪರ್ಧೆ ಮಾಡಿದವರೇ ಇಲ್ಲಿ ಸ್ಪರ್ಧೆ ಮಾಡಿದ್ದಾರೆ. ನಾನು ಒಂದು ಕುಟುಂಬದ ವಿರುದ್ಧ ಸ್ಪರ್ಧೆ ಮಾಡಿದ್ದೇ ಅವರ ದೃಷ್ಟಿಯಲ್ಲಿ ದೊಡ್ಡ ತಪ್ಪಾಯಿತು. ಹೆಣ್ಣು ಎಂಬ ಗೌರವ ಇಲ್ಲದೆ, ಮಾತುಗಳನ್ನಾಡಿದರು ಎಂದು ಜೆಡಿಎಸ್ ವಿರುದ್ಧ ಟೀಕಾಪ್ರಹಾರ ನಡೆಸಿದರು. ಇದನ್ನೂ ಓದಿ: ಅಂಬರೀಶ್ ಅಂತಿಮ ದರ್ಶನ ಪಡೆಯಲು ಬರದಿದ್ದಕ್ಕೆ ರಮ್ಯಾ ಮೊದಲ ಪ್ರತಿಕ್ರಿಯೆ

    ಚುನಾವಣೆಗೆ ಒಟ್ಟು 150 ಕೋಟಿ ಹಣ ಖರ್ಚು ಮಾಡಿದರು. ಆದರೆ ಮಂಡ್ಯದ ಜನ ನನ್ನ ಪರ ನಿಂತರು. ಭದ್ರಕೋಟೆ, ಜಾತಿ ಏನೆಲ್ಲಾ ತಂದರೂ ಮಂಡ್ಯದ ಜನ ಸ್ವಾಭಿಮಾನ ಮೆರೆದರು. ಅವರು ಆಡಳಿತ ಯಂತ್ರ ದುರ್ಬಳಕೆ ಮಾಡಿಕೊಂಡರು. ನಮ್ಮೂರಿಗೆ ನಮ್ಮೂರವರೇ ಸಾಕು. 4 ತಲೆಮಾರಿನಿಂದ ಒಂದೇ ಕುಟುಂಬಕ್ಕೆ ಅವಕಾಶ ಕೊಟ್ಟಿದ್ದೀರಾ. ತಂದೆ ಆಯ್ತು, ಮಗ ಆಯ್ತು, ಇದೀಗ ಅವರ ಮಗ. ಸಮರ್ಥ ಕಾರ್ಯಕರ್ತರು ಇಲ್ಲದ ಕ್ಷೇತ್ರದಲ್ಲಿ ಮಾತ್ರ ನಮ್ಮ ಕುಟುಂಬದವರು ನಿಲ್ಲಿಸುತ್ತೇನೆ ಎಂದು ಹೇಳುತ್ತಾರೆ. ಇವರಿಗೆ ರಾಮನಗರ, ಮಂಡ್ಯ, ಹಾಸನದಲ್ಲಿ ಒಬ್ಬರೇ ಒಬ್ಬ ಸಮರ್ಥ ಕಾರ್ಯಕರ್ತರನ್ನು ಬೆಳೆಸಲು ಸಾಧ್ಯವಾಗಲಿಲ್ಲವಾ ಎಂದು ಖಾರವಾಗಿ ಪ್ರಶ್ನಿಸಿದರು.

    ಅಭಿಮಾನ ಏನೇ ಇರಲಿ. ಒಂದು ಕುಟುಂಬ ಮಾತ್ರ ಅಭಿವೃದ್ಧಿಯಾಗ್ತಿದೆ ಎಂದರೆ ಮನೆ ಮಕ್ಕಳು ಏನಾಗಬೇಕು? ಹಾಸನ ಅಭಿವೃದ್ಧಿ ಮಾಡೋದಕ್ಕೆ ನೀವು ವೋಟ್ ಹಾಕ್ಬೇಕಾ? ಹಾಸನದ ಅಭಿವೃದ್ಧಿಗೆ ಹಾಸನದವರು ವೋಟ್ ಹಾಕಿಕೊಳ್ಳಲಿ. ಮಂಡ್ಯ, ರಾಮನಗರದಲ್ಲಿ ಸ್ಥಳೀಯರನ್ನ ಅಯ್ಕೆ ಮಾಡಿ ಎಂದು ಜನತೆಗೆ ಕರೆ ನೀಡಿದರು. ಇದನ್ನೂ ಓದಿ: ನಾನು ಮಂಡ್ಯದವಳೇ, ಗೌಡ್ತಿ, ನಾನು ಗೌಡ್ತಿ ಎನ್ನುವುದನ್ನು ಯಾರೂ ಕಿತ್ತುಕೊಳ್ಳಲು ಆಗಲ್ಲ: ರಮ್ಯಾ

    ಮಾತೆತ್ತಿದರೆ ರೈತರ ಮಕ್ಕಳು ಅಂತಾರೆ. ಯಾವ ರೈತರು ನೂರಾರು ಕೋಟಿ ಆಸ್ತಿ ಮಾಡಿದ್ದಾರೆ. ಡಿಕ್ಲೇರ್ ಮಾಡಿರೋದು ಇಷ್ಟು. ಮಾಡದೇ ಇರೋ ಲೆಕ್ಕ ಬೇರೆ ಇದೆ. ಜನಸಾಮಾನ್ಯರು ಇದನ್ನ ಪ್ರಶ್ನಿಸಬೇಕು. ರಾಮನಗರದಲ್ಲಿ ಎಷ್ಟು ಅಭಿವೃದ್ಧಿಯಾಗಿದೆ. ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು.

    ಉಚಿತ ಯೋಜನೆಗಳು ನೀಡಲು ಸಾವಿರಾರು ಕೋಟಿ ರೂ. ಹಣ ಸರ್ಕಾರಿ ಖಜಾನೆಯಲ್ಲಿ ಇದೆಯಾ? ಶಿಕ್ಷಣ ಆರೋಗ್ಯ ನೀಡಲು ಸಮರ್ಪಕ ಯೋಜನೆ ಬೇಕು. ಕೇಂದ್ರದಿಂದ ನಾನು ಕೋಟ್ಯಂತರ ರೂ. ಅನುದಾನ ತಂದಿದ್ದೇನೆ. ಡಬ್ಬಲ್ ಎಂಜಿನ್ ಸರ್ಕಾರ ತನ್ನಿ. ಮಂಡ್ಯದ ಜನರ ರೀತಿ ರಾಮನಗರದಲ್ಲೂ ಸ್ವಾಭಿಮಾನ ಮೆರೆಯಿರಿ ತಿಳಿಸಿದರು. ಇದನ್ನೂ ಓದಿ: ಹಿಂದೆ ರಾಮನನ್ನು ಬಂಧಿಸಿಟ್ಟಿತ್ತು, ಈಗ ಹನುಮಾನ್ ಜನ್ಮಸ್ಥಳದಲ್ಲೇ ಭಜರಂಗಬಲಿಯನ್ನು ಬಂಧಿಸಿಡಲು ಮುಂದಾಗಿದೆ: ಮೋದಿ ಕಿಡಿ

  • ರಾಜ್ಯ ರಾಜಕೀಯ ಪ್ರವೇಶಿಸಲು ರೆಡಿಯಾಗಿದ್ದ ಸುಮಲತಾಗೆ ಬಿಗ್‌ ಶಾಕ್‌ – ಸಂಸದೆ ಸ್ಪರ್ಧೆಗೆ ರೈತ ಸಂಘದಿಂದ ವಿರೋಧ

    ರಾಜ್ಯ ರಾಜಕೀಯ ಪ್ರವೇಶಿಸಲು ರೆಡಿಯಾಗಿದ್ದ ಸುಮಲತಾಗೆ ಬಿಗ್‌ ಶಾಕ್‌ – ಸಂಸದೆ ಸ್ಪರ್ಧೆಗೆ ರೈತ ಸಂಘದಿಂದ ವಿರೋಧ

    ಮಂಡ್ಯ: ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕೀಯಕ್ಕೆ ಪ್ರವೇಶಿಸಲು ಸಿದ್ಧತೆ ನಡೆಸಿರುವ ಸಂಸದೆ ಸುಮಲತಾ ಅಂಬರೀಶ್‌ (Sumalatha Ambareesh) ಅವರಿಗೆ ಬಿಗ್‌ ಶಾಕ್‌ವೊಂದು ಎದುರಾಗಿದೆ. ಸಮಲತಾ ಅವರು ಸ್ಪರ್ಧೆಗೆ ಕಣ್ಣಿಟ್ಟಿರುವ 3 ಕ್ಷೇತ್ರಗಳ ಪೈಕಿ ಎರಡರಲ್ಲಿ ಸ್ಪರ್ಧೆಗೆ ಸಂಕಷ್ಟ ಎದುರಾಗಿದೆ.

    ಹೌದು, ಮಂಡ್ಯ (Mandya) ಮತ್ತು ಮೇಲುಕೋಟೆಯಲ್ಲಿ (Melukote) ಸುಮಲತಾ ಸ್ಪರ್ಧೆಗೆ ರೈತ ಸಂಘ ವಿರೋಧ ವ್ಯಕ್ತಪಡಿಸಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಗೆಲುವಿಗೆ ರೈತ ಸಂಘವೇ ಪ್ರಮುಖ ಪಾತ್ರವಹಿಸಿತ್ತು. ಆದರೆ ಈ ಬಾರಿ ಮಂಡ್ಯ, ಮೇಲುಕೋಟೆಯಲ್ಲಿ ರೈತ ಸಂಘದ ಸದಸ್ಯರೇ ಸ್ಪರ್ಧೆಗೆ ನಿರ್ಧಾರ ಮಾಡಿದ್ದಾರೆ. ಹೀಗಾಗಿ ಸುಮಲತಾ ಅವರ ಸ್ಪರ್ಧೆಗೆ ಕಂಟಕ ಎದುರಾಗಿದೆ. ಇದನ್ನೂ ಓದಿ: 50 ಸಾವಿರ ವರ್ಷಕ್ಕೊಮ್ಮೆ ಗೋಚರಿಸುವ ವಿಸ್ಮಯ – ಬೆಂಗಳೂರಲ್ಲಿ ಗೋಚರಿಸಲಿಲ್ಲ ಹಸಿರು ಧೂಮಕೇತು

    ಮಂಡ್ಯದಿಂದ ಮಧುಚಂದನ್, ಮೇಲುಕೋಟೆಯಿಂದ ದರ್ಶನ್ ಪುಟ್ಟಣ್ಣಯ್ಯ (Darshan Puttannaiah) ಸ್ಪರ್ಧೆ ಖಚಿತವಾಗಿದೆ. ಸರ್ವೋದಯ ಕರ್ನಾಟಕ ಪಕ್ಷ ಈ ಇಬ್ಬರು ಹೆಸರನ್ನು ಈಗಾಗಲೇ ಘೋಷಣೆ ಮಾಡಿದೆ. ಟಿಕೆಟ್ ಘೋಷಣೆ ಬೆನ್ನಲ್ಲೆ ಕ್ಷೇತ್ರದಲ್ಲಿ ಆಕ್ಟಿವ್ ಆಗಿ ಅಭ್ಯರ್ಥಿಗಳು ಕೆಲಸ ಮಾಡುತ್ತಿದ್ದಾರೆ.

    ಮಂಡ್ಯ ಮತ್ತು ಮೇಲುಕೋಟೆ ಎರಡು ಕ್ಷೇತ್ರಗಳಲ್ಲಿ ಸುಮಲತಾಗೆ ರೈತ ಸಂಘ ಬೆಂಬಲ ನೀಡಲ್ಲ. ಈಗಾಗಲೇ ಕುಸ್ತಿ ಅಖಾಡಕ್ಕೆ ಧುಮುಕಿದ್ದೀವಿ. ಯಾರೇ ಬಂದ್ರು ಹೋರಾಡ್ತೀವಿ. ಸುಮಲತಾ ಆದ್ರು ಸರಿ, ಬೇರೆ ಯಾರೇ ಆದ್ರು ಸರಿ. ಸ್ಪರ್ಧೆಯಿಂದೆ ಹಿಂದೆ ಸರಿಯುವ ಮಾತೆ ಇಲ್ಲ ಎಂದ ರೈತ ಸಂಘದ ನಾಯಕರು ಹೇಳಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ದೇವರಿದ್ದಂತೆ, ಅವ್ರನ್ನ ಬಿಟ್ಟು ಹೋದ್ರೆ ದೇವರಿಂದ ದೂರವಾದಂತೆ: ಜಮೀರ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪ್ರಸಾದ್ ಬಿದ್ದಪ್ಪ ಪುತ್ರಿ ಜೊತೆ ಅಭಿಷೇಕ್‌ ಅಂಬರೀಶ್‌ ನಿಶ್ಚಿತಾರ್ಥ

    ಪ್ರಸಾದ್ ಬಿದ್ದಪ್ಪ ಪುತ್ರಿ ಜೊತೆ ಅಭಿಷೇಕ್‌ ಅಂಬರೀಶ್‌ ನಿಶ್ಚಿತಾರ್ಥ

    ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ (Abhishek Ambareesh) ಅವರ ನಿಶ್ಚಿತಾರ್ಥ ಇಂದು ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ವೊಂದರಲ್ಲಿ ನಡೆಯಿತು. ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ (Prasad Biddappa) ಅವರ ಪುತ್ರಿ ಅವಿವಾ (Aviva Biddappa) ಜೊತೆ ಅಭಿಷೇಕ್ ಇಂದು ಎಂಗೇಜ್ ಆಗಿದ್ದಾರೆ.

    ರೆಬೆಲ್‌ ಸ್ಟಾರ್‌ ಅಂಬರೀಶ್‌ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಇಂದು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಆಪ್ತರ ಸಮ್ಮುಖದಲ್ಲಿ ಅಭಿಷೇಕ್‌ ಅಂಬರೀಶ್‌ ಮತ್ತು ಅವಿವಾ ಬಿದ್ದಪ್ಪ ಜೊತೆ ಎಂಗೇಜ್‌ಮೆಂಟ್‌ ನೆರವೇರಿದೆ. ಈ ವೇಳೆ ಅಭಿಷೇಕ್‌ ತಾಯಿ ಸುಮಲತಾ ಅಂಬರೀಶ್‌, ಅವಿವಾ ಅವರ ತಂದೆ-ತಾಯಿ ಹಾಗೂ ನಟ, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಹಾಜರಿದ್ದು, ಜೋಡಿಗಳಿಗೆ ಶುಭಹಾರೈಸಿದರು.

    ಚಿತ್ರರಂಗದ ಗಣ್ಯರು ಹೊಸ ಜೋಡಿಗೆ ಶುಭಹಾರೈಸಿದ್ದಾರೆ. ಇನ್ನೂ ಅಭಿಷೇಕ್‌ ಮುಂದಿನ ಚಿತ್ರಕ್ಕೆ ಡೈರೆಕ್ಷನ್‌ ಮಾಡುತ್ತಿರುವ ಎಸ್‌. ಮಹೇಶ್‌ ಕುಮಾರ್‌ ಕೂಡ ನಿಶ್ಚಿತಾರ್ಥಕ್ಕೆ ಭಾಗಿಯಾಗಿದ್ದಾರೆ. ಈಗ ಅವರ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

    ಅವಿವಾ ಮತ್ತು ಅಭಿಷೇಕ್ ಹಲವು ವರ್ಷಗಳಿಂದ ಸ್ನೇಹಿತರು. ಈ ಸ್ನೇಹ ಪ್ರೇಮಕ್ಕೆ ತಿರುಗಿ, ಇದೀಗ ನವ ಜೀವನಕ್ಕೆ ಕಾಲಿಡುತ್ತಿದೆ ಜೋಡಿ. ಅವಿವಾ ಕೂಡ ತಮ್ಮ ತಂದೆಯ ಹಾದಿಯಲ್ಲೇ ಸಾಗಿದ್ದು, ಫ್ಯಾಷನ್ ಲೋಕದಲ್ಲೇ ಕೆಲಸ ಮಾಡುತ್ತಿದ್ದಾರೆ. ಈ ಜೋಡಿಯ ಮದುವೆ ಮುಂದಿನ ವರ್ಷ ನಡೆಯಲಿದೆ. ಇದನ್ನೂ ಓದಿ: ಅಭಿಷೇಕ್ ಅಂಬರೀಶ್ ಚಿತ್ರದಲ್ಲಿ ಅಬ್ಬರಿಸಲಿದ್ದಾರಾ ರಾಣಾ ದಗ್ಗುಭಾಟಿ?

    Live Tv
    [brid partner=56869869 player=32851 video=960834 autoplay=true]

  • ಮಂಡ್ಯದಲ್ಲಿ ಮತ್ತೆ ಸುಮಲತಾ Vs ಎಂಎಲ್‍ಎ ಫೈಟ್ – ದಿಶಾ ಸಭೆಯಲ್ಲಿ ಪ್ರತಿಷ್ಠೆಗೆ ಬಿದ್ದ ಜನಪ್ರತಿನಿಧಿಗಳು

    ಮಂಡ್ಯದಲ್ಲಿ ಮತ್ತೆ ಸುಮಲತಾ Vs ಎಂಎಲ್‍ಎ ಫೈಟ್ – ದಿಶಾ ಸಭೆಯಲ್ಲಿ ಪ್ರತಿಷ್ಠೆಗೆ ಬಿದ್ದ ಜನಪ್ರತಿನಿಧಿಗಳು

    – ಸುಮಲತಾ- ದಳಪತಿಗಳ ಪ್ರತಿಷ್ಠೆಯಿಂದ ಇಕ್ಕಟ್ಟಿಗೆ ಸಿಲುಕಿದ ಅಧಿಕಾರಿಗಳು
    – ದಿಶಾ ಸಭೆಯಲ್ಲಿ ‘ತಪ್ಪಿತಸ್ಥ’ ಸ್ಥಾನದಲ್ಲಿ ನಿಂತ ಅಧಿಕಾರಿಗಳು

    ಮಂಡ್ಯ: ಸಂಸದೆ ವರ್ಸಸ್ ದಳಪತಿಗಳ ಸಮರ ಮತ್ತೊಮ್ಮೆ ತಾರಕ್ಕೇರಿದೆ. ಇಷ್ಟು ದಿನ ಹಾದಿ ಬೀದಿಯಲ್ಲಿ ನಡೆಯುತ್ತಿದ್ದ ವಾಗ್ಯುದ್ಧ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯಬೇಕಿದ್ದ ಸಭೆಯಲ್ಲೂ ಮುಂದುವರಿದಿದೆ. ಎರಡು ವರ್ಷದಲ್ಲೇ ಮೊದಲ ಬಾರಿಗೆ ಸಂಸದರ ದಿಶಾ ಸಭೆಯಲ್ಲಿ ಭಾಗವಹಿಸಿದ್ದ ದಳಪತಿಗಳು ಸಂಸದರ ವಿರುದ್ಧ ಒಮ್ಮೆಲೇ ಮುಗಿಬಿದ್ರು. ಸಂಸದರ ಅಕ್ರಮ ಗಣಿಗಾರಿಕೆ ವಿರುದ್ಧದ ಹೋರಾಟಕ್ಕೆ ತಿರುಗೇಟು ನೀಡಿರುವ ಜೆಡಿಎಸ್ ಶಾಸಕರು ಸುಮಲತಾ ಸುತ್ತಮುತ್ತವಿರುವ ಅಕ್ರಮ ಕೂಟವನ್ನ ಬಹಿರಂಗಪಡಿಸಿದರು.

    ಇಂದು ಸಂಸದೆ ಸುಮಲತಾ ಅಂಬರೀಶ್ ಅಧ್ಯಕ್ಷತೆಯಲ್ಲಿ ಮಂಡ್ಯದ ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ದಿಶಾ ಸಭೆ ಕರೆಯಲಾಗಿತ್ತು. ಕಳೆದ ಎರಡೂ ವರ್ಷಗಳಿಂದ ನಡೆದ 8 ದಿಶಾ ಸಭೆಗಳಿಗೆ ನಿರಂತರವಾಗಿ ಗೈರಾಗಿದ್ದ ಮಂಡ್ಯ ಜಿಲ್ಲೆಯ ಜೆಡಿಎಸ್ ಶಾಸಕರು ಇಂದು ಹಾಜರಾಗಿದ್ರು. ಸಭೆ ಆರಂಭಕ್ಕೂ ಮುನ್ನವೇ ಸಮರಕ್ಕಿಳಿದ ಶಾಸಕ ರವೀಂದ್ರ ಶ್ರೀಕಂಠಯ್ಯ, ಸಭಾಂಗಣದೊಳಗಿದ್ದ ಸಂಸದರ ಆಪ್ತ ಕೂಟವನ್ನು ಕಂಡು ಕೆಂಡಾಮಂಡಲರಾದ್ರು. ಮೊದಲು ಅನಧಿಕೃತ ವ್ಯಕ್ತಿಗಳನ್ನು ಹೊರಕಳಿಸುವಂತೆ ಪಟ್ಟು ಹಿಡಿದ್ರು. ಈ ವೇಳೆ ಸಂಸದ ಆಪ್ತ ಕಾರ್ಯದರ್ಶಿ ಎನ್ನಲಾದ ಶ್ರೀನಿವಾಸ್ ಭಟ್ ಎಂಬಾತ ಅಧಿಕೃತನೋ ಅಥವಾ ಅನಧಿಕೃತವೋ. ಸಂಸದರ ಲೆಟರ್ ಹೆಡ್ ಗಳಿಗೆ ನಾಲ್ಕು ಮಂದಿ ಸಹಿ ಮಾಡಿದ್ದಾರೆ ಅದು ಅಕ್ರಮ ಅಲ್ವೇ ಎಂದು ಪ್ರಶ್ನಿಸಿದ್ರು. ಈ ವೇಳೆ ಕೆಲ ಕಾಲ ಸುಮಲತಾ ಅವರು ದಿಗ್ಭ್ರಾಂತರಾದಂತೆ ಕುಳಿತಿದ್ದರು.

    ಈ ನಡುವೆ ಸಂಸದೆ ಸುಮಲತಾ ತಮ್ಮ ಆಪ್ತರನ್ನ ಸಮರ್ಥಿಸಿಕೊಳ್ಳಲು ಮುಂದಾದರು. ಈ ವೇಳೆ ರವೀಂದ್ರ ಶ್ರೀಕಂಠಯ್ಯ ಜೊತೆಗೆ ಉಳಿದ ಜೆಡಿಎಸ್ ಶಾಸಕರೂ ಕೂಡ ಧ್ವನಿಗೂಡಿಸಿದ್ರು. ವಿಷಯ ದೊಡ್ಡದಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಸಂಸದರ ಕೆಲವು ಆಪ್ತರು ಸಭಾಂಗಣದಿಂದ ತಾವಾಗಿಯೇ ಹೊರ ನಡೆದರು. ಇದರ ಜೊತೆಗೆ ಸಂಸದ ಲೆಟರ್ ಹೆಡ್ ದುರ್ಬಳಕೆ ಮಾಡಿಕೊಂಡಿರುವ ಹಾಗೂ ಆಪ್ತ ಕಾರ್ಯದರ್ಶಿ ಹೆಸರಲ್ಲಿ ಅಧಿಕಾರಿಗಳು ಹಾಗೂ ಗಣಿ ಮಾಲೀಕರಿಗೆ ಫೋನ್ ಮಾಡಿ ಬೆದರಿಕೆ ಹಾಕುವವರ ವಿರುದ್ಧ ಕ್ರಮಕ್ಕೆ ಜೆಡಿಎಸ್ ಶಾಸಕರು ಒತ್ತಾಯಿಸಿದರು.

    ಅವಧಿಗೂ ಮುನ್ನ ದಿಶಾ ಸಭೆ ನಡೆಸೋಕ್ಕೆ ಸಿಇಓಗೆ ಅಧಿಕಾರ ಇದೆಯಾ? ಈ ಬಗ್ಗೆ ಲಿಖಿತ ಉತ್ತರ ನೀಡುವವರೆಗೂ ಸಭೆ ಆರಂಭಕ್ಕೆ ಅವಕಾಶ ನೀಡುವುದಿಲ್ಲ ಎಂದು ರವೀಂದ್ರ ಶ್ರೀಕಂಠಯ್ಯ ಪಟ್ಟು ಹಿಡಿದ್ರು. ಸತತ ಎರಡು ಗಂಟೆ ಸತಾಯಿಸಿ ಬಳಿಕ ಸಿಇಓ ದಿವ್ಯ ಪ್ರಭು ಲಿಖಿತ ಉತ್ತರ ನೀಡಿದ ಬಳಿಕ ಸಭೆ ಆರಂಭವಾಯ್ತು. ಈ ವೇಳೆ ಹಾಸ್ಯದ ಮೂಲಕವೇ ದಳಪತಿಗಳ ಕಾಲೆಳೆದ ಸಂಸದೆ, ನೀವೆಲ್ಲಾ ಸಭೆ ನಡೆಯಬಾರದು ಎಂಬ ಸ್ಟ್ರಾಟರ್ಜಿ ಇಟ್ಟುಕೊಂಡು ಬಂದಿದ್ದೀರಿ. ಇಲ್ಲವಾದ್ರೆ 8 ದಿಶಾ ಸಭೆಗೆ ಒಬ್ಬರೂ ಬರದಿದ್ದವರು ಇವತ್ತು ಒಟ್ಟಿಗೆ ಬಂದು ಹೀಗೆ ಮಾಡಿದ್ರೆ ಹೇಗೆ ಎಂದು ಪ್ರಶ್ನಿಸಿದ್ರು. ಈ ವೇಳೆ ಜೆಡಿಎಸ್ ಶಾಸಕ ಈ ಮಾತು ಹಿಂಪಡೆಯುವಂತೆ ಆಗ್ರಹಿಸಿದ್ರು. ಇದನ್ನೂ ಓದಿ: ಏರಿಕೆಯಾಯ್ತು ಗೃಹ ಬಳಕೆ ಎಲ್‍ಪಿಜಿ ಸಿಲಿಂಡರ್ ಬೆಲೆ

    ಸದಾ ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರುತ್ತಿದ್ದ ಸಂಸದರಿಗೆ ಇವತ್ತಿನ ದಿಶಾ ಸಭೆ ನುಂಗಲಾರದ ತುತ್ತಾಗಿತ್ತು. ಸಭೆ ಆರಂಭವಾದ ಬಳಿಕವೂ ದಳಪತಿಗಳ ಆರ್ಭಟವೇ ಜೋರಾಗಿತ್ತು. ಸಂಸದರನ್ನೇ ಟಾರ್ಗೆಟ್ ಮಾಡಿಕೊಂಡು ಅಧಿಕಾರಿಗಳ ಬೆವರಿಳಿಸಿದ್ರು. ಗಣಿಗಾರಿಕೆ ವಿಚಾರವನ್ನೇ ಪ್ರಮುಖವಾಗಿ ಜೆಡಿಎಸ್ ಶಾಸಕರು ಲೀಗಲ್ ಮೈನಿಂಗ್ ನಿಲ್ಲಿಸಲು ಅಧಿಕಾರ ಕೊಟ್ಟವರು ಯಾರು? ಯಾರು ಹೇಳಿದ್ದಾರೆ. ನಿಮ್ಮಿಂದಾಗಿ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ನಿಂತಿವೆ. ಮಂಡ್ಯ ಜಿಲ್ಲೆಗೆ ಪ್ರತ್ಯೇಕ ಕಾನೂನಿದಿಯಾ ಎಂದು ಗಣಿ ಅಧಿಕಾರಿ ಪದ್ಮಜ ಅವರನ್ನ ತರಾಟೆ ತೆಗೆದುಕೊಂಡ್ರು. ಇದನ್ನೂ ಓದಿ: ಸುನಂದಾ ಪುಷ್ಕರ್ ಪ್ರಕರಣ – 7 ವರ್ಷಗಳ ಬಳಿಕ ಶಶಿ ತರೂರ್​​​ಗೆ ರಿಲೀಫ್

    ಈ ವೇಳೆ ದಳಪತಿಗಳ ಪ್ರಶ್ನೆಗಳಿಗೆ ಅಧಿಕಾರಿ ಉತ್ತರಿಸಲಾಗದೇ ತಬ್ಬಿಬ್ಬಾದ್ರು. ಈ ವೇಳೆ ಸಂಸದೆ ಸುಮಲತಾ ಮಾತನಾಡಿ, ನನ್ನ ಹೋರಾಟ ಏನಿದ್ರೂ ಅಕ್ರಮದ ವಿರುದ್ಧ ಹೊರತು ಸಕ್ರಮದ ವಿರುದ್ಧವಲ್ಲ ಎಂದೇಳುವ ಮೂಲಕ ತಮ್ಮ ವಿರುದ್ಧದ ಆರೋಪಕ್ಕೆ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ರು. ಸಂಸದರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಸದರಿಗಿಂತ ಶಾಸಕರದ್ದೇ ಸೌಂಡ್ ಜೋರಾಗಿತ್ತು. ಇದನ್ನೂ ಓದಿ: ದಶಪಥದ ರಸ್ತೆ ಇರೋದು ಮೈಸೂರಿಗಾಗಿ, ಇದಕ್ಕಾಗಿ ಹೆಚ್ಚು ಆಸಕ್ತಿವಹಿಸಿದ್ದೇನೆ: ಪ್ರತಾಪ್ ಸಿಂಹ

  • ಸುಮಲತಾ ಅಭಿಮಾನಿಗಳಿಗೆ ಹೆಚ್‍ಡಿಕೆ ಅಭಿಮಾನಿಗಳ ತಿರುಗೇಟು

    ಸುಮಲತಾ ಅಭಿಮಾನಿಗಳಿಗೆ ಹೆಚ್‍ಡಿಕೆ ಅಭಿಮಾನಿಗಳ ತಿರುಗೇಟು

    ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೋಟೋಗೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅಭಿಮಾನಿಗಳು ತಿರುಗೇಟು ನೀಡಿದ್ದಾರೆ. ಫೋಟೋದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರು ಕೈ ಕಟ್ಟಿ ನಿಂತಿರೋದನ್ನು ಸಂಸದೆ ಸುಮಲತಾ ಮತ್ತು ಅಂಬಿ ಅಭಿಮಾನಿಗಳು ವಿವಿಧ ಬರಹಗಳನ್ನು ಬರೆದು ಶೇರ್ ಮಾಡಿಕೊಂಡಿದ್ದಾರೆ.

    ಕುಮಾರಸ್ವಾಮಿ ಅವರು ಆತ್ಮೀಯತೆ, ವಿನಮ್ರತೆಯಿಂದ ಕೈಕಟ್ಟಿ ನಿಂತಿರುವುದು ಸಹಜ. ಕುಮಾರಣ್ಣ-ಅಂಬರೀಶಣ್ಣರ ಬಾಂಧವ್ಯ ಅನನ್ಯ ಮತ್ತು ಅಮರ. ಇದು ಆಂಗಿಕ ಭಾಷೆಯೇ ಹೊರತು ಕುಮಾರಣ್ಣ ಶರಣಾಗತಿಯಿಂದ ಕೈಕಟ್ಟಿ ನಿಂತವರಲ್ಲ. ಸಾಮಾಜಿಕ ತಾಣದ ವಿಕೃತ, ವಿಲಕ್ಷಣ, ಅತೃಪ್ತ ಮತ್ತು ಹತಾಶಾ ಆತ್ಮಗಳಿಗೆ ಶಾಂತಿ ಸಿಗುವಂತಾಗಲಿ ಎಂದು ಕುಮಾರಸ್ವಾಮಿ ಅಭಿಮಾನಿ ನವೀನ್ ಕಾಡನಕುಪ್ಪೆ ಆಕ್ರೋಶ ಹೊರ ಹಾಕಿದ್ದಾರೆ.

    ಅಂಬರೀಷ್ ಎಂಬ ಆತ್ಮೀಯ ಗೆಳೆಯ ಹಾಗೂ ಚಿತ್ರರಂಗದ ಪ್ರಮುಖರೊಂದಿಗೆ ಆತ್ಮೀಯತೆ, ವಿನಯತೆ, ನಮ್ರತೆ ನಮ್ಮ ಕುಮಾರಣ್ಣನ ಸಂಸ್ಕಾರ. ಕೈಕಟ್ಟಿ ನಿಂತಿರುವುದನ್ನೇ ಶರಣಾಗತಿ ಎಂದು ಭಾವಿಸಿ ವಿಕೃತವಾಗಿ ಮುಖಪುಟಗಳಲ್ಲಿ ಕೂಗುಮಾರಿಗಳಂತೆ ಅರಚಿ-ಕಿರುಚುತ್ತಿರುವ ಮುಖಗೇಡಿಗಳೇ ಎಂದು ಕುಮಾರಸ್ವಾಮಿ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುವ ಮೂಲಕ ತಿರುಗೇಟು ನೀಡುತ್ತಿದ್ದಾರೆ. ಇದನ್ನೂ ಓದಿ: ನಾನು ಕ್ಷಮೆ ಕೇಳೋದಿಲ್ಲ ಸುಮಲತಾ ಕುತಂತ್ರಿ: ಎಚ್‍ಡಿಕೆ

    ಸುಮಲತಾ ಹೇಳಿಕೆ ಬೆನ್ನಲ್ಲೇ ಫೋಟೋ ವೈರಲ್:
    ಬುಧವಾರ ಮಾಧ್ಯಮಗಳ ಜೊತೆ ಮಾತನಾಡಿದ್ದ ಸುಮಲತಾ, ನಮ್ಮ ಪಕ್ಷ ನಿಮ್ಮಂತಹ ಸಾವಿರಾರೂ ಲೀಡರ್ ಗಳನ್ನು ತಯಾರು ಮಾಡಿದೆ ಅಂತ ಹೇಳುತ್ತಾರೆ. ನೀವು ಸಾವಿರಾರರು ಜನರನ್ನು ತಯಾರು ಮಾಡಿಸಿರಬಹುದು. ಆದ್ರೆ ನಿಮ್ಮ ಈ ರೀತಿಯ ನಡವಳಿಕೆ, ಮಾತುಗಳಿಂದಲೇ ಎಷ್ಟೋ ಒಳ್ಳೆಯ ಜನ ಬೇರೆ ಪಕ್ಷ ಸೇರಿಕೊಂಡಿದ್ದಾರೆ. ನಿಮ್ಮ ಮಾತುಗಳಿಂದಲೇ ಅವರೆಲ್ಲ ನಿಮ್ಮ ಪಕ್ಷ ತೊರೆದಿರೋದು. ನೀವು ತಯಾರು ಮಾಡಿರುವ ಸಾವಿರಾರರು ಜನ, ಅದಕ್ಕಿಂತ ದೊಡ್ಡವರು ಅಂಬರೀಶ್ ಅವರ ಮುಂದೆ ಕೈ ಕಟ್ಟಿ ನಮ್ಮ ಮನೆಯಲ್ಲಿ ನಿಂತಿರೋದನ್ನು ಹಲವು ವರ್ಷ ನೋಡಿದ್ದೇನೆ ಎಂದು ಹೇಳಿದ್ದರು. ಇದನ್ನೂ ಓದಿ: ಅಂಬರೀಶ್ ಮುಂದೆ ಹೆಚ್‍ಡಿಕೆ ಕೈಕಟ್ಟಿ ನಿಂತ ಫೋಟೋ ವೈರಲ್

    ಸುಮಲತಾ ಕ್ಷಮೆ ಕೇಳಲ್ಲ:
    ನಾನು ಯಾಕೆ ಕ್ಷಮೆ ಕೇಳಲಿ. ನಾನು ಕ್ಷಮೆ ಕೇಳೊದಿಲ್ಲ. ನಾನು ಕ್ಷಮೆ ಕೇಳೋ ಪದ ಬಳಿಕೆ ಮಾಡಿಲ್ಲ. ಯಾವ ತರಹ ಪದ ಬಳಕೆ ಮಾಡಬೇಕಿತ್ತು ನಾನು. ನಾನು ಸಂಸ್ಕೃತಿ, ಕನ್ನಡ ಭಾಷೆ ತಿಳಿದುಕೊಂಡಿದ್ದೇನೆ. ಕ್ಷಮೆ ಕೇಳಬೇಕಾದ ಪದ ನಾನು ಬಳಕೆ ಮಾಡಿಲ್ಲ ಎಂದು ಆಕ್ರೋಶ ಹೊರ ಹಾಕಿದರು. ಇದನ್ನೂ ಓದಿ: ಸುಮಲತಾ Vs ಕುಮಾರಸ್ವಾಮಿ – ಮೈ ಶುಗರ್ ವಿವಾದ ಈಗ ಎದ್ದಿದ್ದು ಯಾಕೆ?

  • ಮಂಡ್ಯ ಕೇಂದ್ರೀಯ ವಿದ್ಯಾಲಯದ ಸಮಸ್ಯೆಗಳ ಕ್ರಮಕ್ಕೆ ಕೇಂದ್ರ ಸಚಿವರಿಗೆ ಸುಮಲತಾ ಮನವಿ

    ಮಂಡ್ಯ ಕೇಂದ್ರೀಯ ವಿದ್ಯಾಲಯದ ಸಮಸ್ಯೆಗಳ ಕ್ರಮಕ್ಕೆ ಕೇಂದ್ರ ಸಚಿವರಿಗೆ ಸುಮಲತಾ ಮನವಿ

    ನವದೆಹಲಿ: ಮಂಡ್ಯದ ಕೇಂದ್ರೀಯ ವಿದ್ಯಾಲಯದಲ್ಲಿರುವ ಸಮಸ್ಯೆಗಳಿಗೆ ತ್ವರಿತ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಸದೆ ಸುಮಲತಾ ಅಂಬರೀಶ್ ಅವರು, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಸುಮಲತಾ ಅವರು, ಗುರುವಾರ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರನ್ನು ಭೇಟಿಯಾಗಿ ಮಂಡ್ಯ ಕೇಂದ್ರೀಯ ವಿದ್ಯಾಲಯದಲ್ಲಿರುವ ಸಮಸ್ಯೆಗಳನ್ನು ಗಮನಕ್ಕೆ ತಂದಿರುವೆ. ಜೊತೆಗೆ ತ್ವರಿತವಾಗಿ ಶಾಲಾ ಕೊಠಡಿ, ವಸತಿ ಗೃಹ ಸೇರಿದಂತೆ ಎಲ್ಲಾ ಸಮಸ್ಯೆಗಳಿಗೆ ಅಗತ್ಯ ಕ್ರಮ ತೆಗೆದುಕೊಳ್ಳಲು ಮನವಿ ಮಾಡಿರುವೆ. ಸಚಿವರು ಸಹ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

    ಸುಮಲತಾ ಅವರು ಈ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ, ಮಂಡ್ಯದಲ್ಲಿನ ಹಲವು ಕಾಮಗಾರಿಗಳಿಗೆ ಕೇಂದ್ರ ಸರ್ಕಾರದಿಂದ ಅನುದಾನ ಕೊಡಿಸುವಂತೆ ಮನವಿ ಸಲ್ಲಿಸಿದ್ದರು. ಜೊತೆಗೆ ಅಮಿತ್ ಶಾ ಅವರನ್ನು ಭೇಟಿಯಾಗಿರುವ ಬಗ್ಗೆ ಸುಮಲತಾ ಅವರು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಫೋಟೋ ಶೇರ್ ಮಾಡಿಕೊಂಡು, ದೇಶದ ಗೃಹ ಸಚಿವರೊಂದಿಗೆ ಕ್ಷೇತ್ರದ ಹಲವಾರು ಕೆಲಸಗಳಿಗೆ ಬೆಂಬಲಿಸುವಂತೆ ಮನವಿ ಮಾಡಿಕೊಂಡಿದ್ದೇನೆ ಎಂದು ಬರೆದುಕೊಂಡಿದ್ದರು.

    ಮಂಡ್ಯ ಜಿಲ್ಲೆಯ ಕಡೆ ಮುಂಗಾರು ಕೈ ಕೊಟ್ಟಿದೆ. ಮಂಡ್ಯದ ರೈತರು ಕಾವೇರಿ ನೀರನ್ನೇ ಅವಲಂಬಿಸಿದ್ದಾರೆ. ಆದರೆ ಸರಿಯಾಗಿ ಮಳೆಯಾಗದ ಕಾರಣ ಕಾವೇರಿ ನದಿಯೂ ತುಂಬಿಲ್ಲ. ಇದರಿಂದ ರೈತರು ತೀವ್ರ ಆತಂಕಕ್ಕೊಳಗಾಗಿದ್ದಾರೆ. ಹೀಗಾಗಿ ಸುಮಲತಾ ಅವರು ಅಮಿತ್ ಶಾ ಅವರನ್ನು ಭೇಟಿ ಮಾಡಿ ತಮ್ಮ ಜಿಲ್ಲೆಯ ಸಮಸ್ಯೆಯನ್ನು ಹೇಳಿಕೊಂಡಿದ್ದರು.

    ಇತ್ತೀಚೆಗಷ್ಟೆ ಸುಮಲತಾ ಅವರು ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ದಿನನಿತ್ಯ ಮೈಸೂರು- ಮಂಡ್ಯ-ಬೆಂಗಳೂರು ನಡುವೆ ಪ್ರಯಾಣಿಸುತ್ತಿರುವ ಮಹಿಳೆಯರಿಗೆ ಹೆಚ್ಚಿನ ಮಹಿಳಾ ಬೋಗಿಗಳನ್ನು ಅಳವಡಿಸುವಂತೆ ಹಾಗೂ ಹೆಚ್ಚಿನ ಪೊಲೀಸ್ ಬಂದೋಬಸ್ತುಗಳನ್ನು ಒದಗಿಸುವಂತೆ ಮನವಿ ಮಾಡಿಕೊಂಡಿದ್ದರು.

    ಅಷ್ಟೇ ಅಲ್ಲದೇ ಮುಂಬೈ ಮಾದರಿಯಲ್ಲಿ ವಿಶೇಷ ಮಹಿಳಾ ರೈಲನ್ನು ಬೆಳಗ್ಗೆ ಮತ್ತು ಸಂಜೆ ಕೆಲಸಕ್ಕೆ ತೆರಳುವ ಮಹಿಳೆಯರಿಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದ್ದರು. ಜೊತೆಗೆ ಕೆ.ಆರ್ ನಗರದಲ್ಲಿ ರೈಲ್ವೆ ಪೊಲೀಸ್ ಫೋರ್ಸ್ ಟ್ರೈನಿಂಗ್ ಸೆಂಟರನ್ನು ತೆರೆಯಲು ಮನವಿ ಮಾಡಿದ್ದರು.