Tag: MP Sumalatha

  • ಸುಮಲತಾ ಹುಟ್ಟಹಬ್ಬ- ಅಂಬರೀಶ್ ಸಮಾಧಿಗೆ ಪೂಜೆ

    ಸುಮಲತಾ ಹುಟ್ಟಹಬ್ಬ- ಅಂಬರೀಶ್ ಸಮಾಧಿಗೆ ಪೂಜೆ

    ಬೆಂಗಳೂರು: ಸಂಸದೆ ಸುಮಲತಾ ಅಂಬರೀಶ್ ಅವರು ಇಂದು 57ನೇ ವಸಂತಕ್ಕೆ ಕಾಲಿಟ್ಟಿದ್ದು, ತಮ್ಮ ಹುಟ್ಟಹಬ್ಬದ ಹಿನ್ನೆಲೆಯಲ್ಲಿ ಪತಿ ಅಂಬರೀಶ್ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು.

    ಕಂಠೀರವ ಸ್ಟುಡಿಯೊ ಆವರಣದಲ್ಲಿರುವ ಅಂಬರೀಶ್ ಅವರ ಸಮಾಧಿಗೆ ಪೂಜೆ ಸಲ್ಲಿಸಿದ ಸುಮಲತಾ ಅವರು ಬಳಿಕ ಮಂಡ್ಯಗೆ ತೆರಳಿದರು. ಈ ವೇಳೆ ಸುಮಲತಾ ಅವರಿಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸಾಥ್ ನೀಡಿದರು. ಮಂಡ್ಯ ಕ್ಷೇತ್ರ ಜನತೆಯೊಂದಿಗೆ ಸುಮಲತಾ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.

    ಇತ್ತ ಸುಮಲತಾ ಅವರ ಪುತ್ರ ಅಭಿಷೇಕ್ ಅವರು ತಮ್ಮ ಮನೆಯಲ್ಲೇ ಹುಟ್ಟುಹಬ್ಬ ಆಚರಿಸಿದ್ದು, ಅಮ್ಮನ ಕೈಯಿಂದ ಕೇಕ್ ಕತ್ತರಿಸುವ ಮೂಲಕ ಹುಟ್ಟಹಬ್ಬ ಆಚರಿಸಿದ ವಿಡಿಯೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅಲ್ಲದೇ ವಿಶ್ವದಲ್ಲೇ ನೀವು ಬೆಸ್ಟ್ ಅಮ್ಮ ಆಗಿದ್ದಕ್ಕೆ ಧನ್ಯವಾದ ಎಂದು ಅಭಿಷೇಕ್ ಹೇಳಿದ್ದಾರೆ.

    ನಟ ದರ್ಶನ್ ಅವರು ಕೂಡ ಸುಮಲತಾ ಅವರಿಗೆ ಹುಟ್ಟಹಬ್ಬದ ಶುಭಾಶಯ ತಿಳಿಸಿದ್ದು. ಮದರ್ ಇಂಡಿಯಾ ಸುಮಲತಾ ಅಮ್ಮರವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯ ಎಂದು ತಿಳಿಸಿದ್ದಾರೆ. ಸುಮಲತಾ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸೇರಿದಂತೆ ಹಲವು ರಾಜಕೀಯ ನಾಯಕರು, ನಟ-ನಟಿಯರು ಕೂಡ ಸಾಮಾಜಿಕ ಜಾಲತಾಣದಲ್ಲಿ ಶುಭಕೋರಿದ್ದಾರೆ.

  • ‘ಕ್ವಾರಂಟೈನ್ ಮಾಡೋದು ಅವಮಾನ ಅಲ್ಲ’- ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯಗೆ ತಿಳಿ ಹೇಳಿದ ಸಂಸದೆ ಸುಮಲತಾ

    ‘ಕ್ವಾರಂಟೈನ್ ಮಾಡೋದು ಅವಮಾನ ಅಲ್ಲ’- ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯಗೆ ತಿಳಿ ಹೇಳಿದ ಸಂಸದೆ ಸುಮಲತಾ

    ಮಂಡ್ಯ: ಕ್ವಾರಂಟೈನ್ ಮಾಡೋದು ಅವಮಾನ ಅಲ್ಲ ಎಂದು ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರಿಗೆ ಸಂಸದೆ ಸುಮಲತಾ ತಿಳಿ ಹೇಳಿದ್ದಾರೆ.

    ಆಶಾ ಕಾರ್ಯಕರ್ತೆಗೆ ಕ್ವಾರಂಟೈನ್ ಮಾಡಿದ್ದಾರೆ. ಮೊದಲೇ ಮನನೊಂದು ಆತ್ಮಹತ್ಯೆಗೆ ಆಶಾ ಕಾರ್ಯಕರ್ತೆ ಯತ್ನಿಸಿದ್ದರು. ಈಗ ಕ್ವಾರಂಟೈನ್ ಮಾಡಿ ಇನ್ನೊಂದು ಅವಮಾನ ಮಾಡಿದ್ದಾರೆ. ಕ್ವಾರಂಟೈನ್ ಮಾಡುವ ಅಗತ್ಯ ಏನಿತ್ತು? ನನಗೆ ಅವರು ಫೋನ್ ಮಾಡಿ ನೋವು ತೋಡಿಕೊಂಡಿದ್ದಾರೆ ಎಂದು ಶಾಸಕ ರವೀಂದ್ರ ಶೀಕಂಠಯ್ಯ ಅವರು ಮಂಡ್ಯದ ಜಿಲ್ಲಾ ಪಂಚಾಯತಿಯ ಸಭೆಯಲ್ಲಿ ಪ್ರಸ್ತಾಪಿಸಿದರು.

    ಈ ವೇಳೆ ಮಾತನಾಡಿದ ಸಂಸದೆ ಸುಮಲತಾ ಅವರು, ಕ್ವಾರಂಟೈನ್ ಮಾಡೋದು ಅವಮಾನ ಅಂತ ತಿಳಿದುಕೊಳ್ಳೋದು ತಪ್ಪು. ಅರಿವು ಮೂಡಿಸಬೇಕಾದ ನಮ್ಮಂತ ಜನಪ್ರತಿನಿಧಿಗಳೇ ಅವಮಾನ ಎಂದು ಹೇಳಿದು ಸರಿಯಲ್ಲ. ಅವಮಾನ ಅಂತ ಹೇಳಿದರೆ ಬಹಳಷ್ಟು ಜನ ಹೆದರುತ್ತಾರೆ ಎಂದು ವಿವರಿಸಿದರು. ಈ ಸಂದರ್ಭದಲ್ಲಿ ಸಭೆಯಲ್ಲಿ ಸಚಿವರಾದ ಡಾ.ಸುಧಾಕರ್, ನಾರಾಯಣಗೌಡ ಅವರು ಹಾಜರಿದ್ದರು.

    ಏನಿದು ಘಟನೆ: ಇತ್ತೀಚೆಗೆ ಮಂಡ್ಯ ಆಶಾ ಕಾರ್ಯಕರ್ತೆ ಮೇಲಾಧಿಕಾರಿಗಳು ಹಾಗೂ ಗ್ರಾಮ ಪಂಚಾಯ್ತಿ ಸದಸ್ಯನ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದರು. ಮಂಡ್ಯ ತಾಲೂಕಿನ ಕಾಗೇಹಳ್ಳ ದೊಡ್ಡಿ ಗ್ರಾಮದ ಅಂಗನವಾಡಿಯ ಆಶಾ ಕಾರ್ಯಕರ್ತೆ ಭಾಗ್ಯಮ್ಮ (45) ಆತ್ಮಹತ್ಯೆಗೆ ಯತ್ನಿಸಿದ್ದರು. ಮತದಾರರ ಪಟ್ಟಿಗೆ ಹೆಸರು ಸೇರಿಸುವ ಮತ್ತು ಪರಿಷ್ಕರಿಸುವ ಕೆಲಸಕ್ಕೆ ಭಾಗ್ಯಮ್ಮ ಅವರನ್ನು ನಿಯೋಜನೆ ಮಾಡಲಾಗಿತ್ತು. ಈ ವೇಳೆ ಗ್ರಾಮ ಪಂಚಾಯ್ತಿ ಸದಸ್ಯ ಅಕ್ರಮವಾಗಿ ಮತದಾರರ ಪಟ್ಟಿಗೆ ಸೇರಿಸುವಂತೆ ಒತ್ತಡ ಹೇರಿದ್ದರು. ಇದಕ್ಕೆ ಭಾಗ್ಯ ಅವರು ನಿರಾಕರಿಸಿದರು ಎನ್ನಲಾಗಿತ್ತು. ಬಳಿಕ ರಾಜಕೀಯ ಪ್ರಭಾವ ಬಳಸಿ ಭಾಗ್ಯಮ್ಮ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಈ ವಿಚಾರದಲ್ಲಿ ಮೇಲಾಧಿಕಾರಿಗಳು ಶಾಮೀಲಾಗಿ ಕಿರುಕುಳ ನೀಡುತ್ತಿದ್ದರು ಎಂದು ಭಾಗ್ಯಮ್ಮ ಹೇಳಿಕೊಂಡಿದ್ದರು ಎನ್ನಲಾಗಿತ್ತು. ಆತ್ಮಹತ್ಯೆ ಪ್ರತ್ನಿಸಿದ್ದ ಭಾಗ್ಯಮ್ಮ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಹಿಂದಿರುಗಿದ್ದರು. ಆದ್ದರಿಂದ ಅವರಿಗೆ ಮನೆಯಲ್ಲೇ ಉಳಿದುಕೊಳ್ಳುವಂತೆ ಕ್ವಾರಂಟೈನ್ ಮಾಡಲಾಗಿದೆ ಎಂದು ಶಾಸಕರು ಪ್ರಶ್ನಿಸಿದ್ದರು.