Tag: MP Shobha Karandlaje

  • ಸಂಸದೆ ಶೋಭಾ ವಿರುದ್ಧ ಅವಹೇಳನಕಾರಿ ಬರಹ – ಯುವಕನ ವಿರುದ್ಧ ಕೇಸ್ ದಾಖಲು

    ಸಂಸದೆ ಶೋಭಾ ವಿರುದ್ಧ ಅವಹೇಳನಕಾರಿ ಬರಹ – ಯುವಕನ ವಿರುದ್ಧ ಕೇಸ್ ದಾಖಲು

    ಉಡುಪಿ: ಸಂಸದೆ ಶೋಭಾ ಕರಂದ್ಲಾಜೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಬರೆಯುತ್ತಿದ್ದ ಯುವಕನ ವಿರುದ್ಧ ಉಡುಪಿಯ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಉಡುಪಿ ನಿವಾಸಿ ಪ್ರವೀಣ್ ಯಕ್ಷಿಮಠ ಅವಹೇಳನಕಾರಿ ಪೋಸ್ಟ್ ಹಾಕುತ್ತಿದ್ದ ಆರೋಪಿ. ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರ ವಿರುದ್ಧ ಪ್ರವೀಣ್ ಯಕ್ಷಿಮಠ ಪೋಸ್ಟ್ ಹಾಕುತ್ತಿದ್ದಾನೆ. ಅಷ್ಟೇ ಅಲ್ಲದೆ ಅವರ ಬಗ್ಗೆ ಅಶ್ಲೀಲವಾಗಿ ಬರೆಯುತ್ತಿದ್ದಾರೆ. ಅಂತಹ ಬರಹಗಳನ್ನು ಫೇಸ್ ಬುಕ್, ವಾಟ್ಸಾಪ್ ಗಳಲ್ಲಿ ಶೇರ್ ಮಾಡುತ್ತಿದ್ದಾನೆ ಎಂದು ದೂರಿನಲ್ಲಿ ನಮೂದಿಸಲಾಗಿದೆ.

    ಈ ಸಂಬಂಧ ಉಡುಪಿಯ ಎಸ್‍ಪಿ ಲಕ್ಷ್ಮಣ ನಿಂಬರಗಿ ಅವರಿಗೂ ದೂರು ನೀಡಲಾಗಿದೆ. ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಲಾಗಿದ್ದು, 2019ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ರೀತಿಯ ಅಪಪ್ರಚಾರ ಮಾಡಲಾಗುತ್ತಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಕಳೆದ ಕೆಲ ದಿನಗಳಿಂದ ‘ಗೋ ಬ್ಯಾಕ್ ಶೋಭಾ’ ಹೆಸರಲ್ಲಿ ಅಭಿಯಾನವೂ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ.

    ಈ ಎಲ್ಲಾ ಬೆಳವಣಿಗೆಗಳನ್ನು, ಬರಹದ ದಾಖಲೆಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರಿಗೆ ರವಾನಿಸಲಾಗಿದೆ.

    ಬಿಜೆಪಿಯ ರಾಜ್ಯ ಕಾರ್ಯದರ್ಶಿ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿ, ಆರೋಪಿಯ ವಿರುದ್ಧ ದೂರು ನೀಡಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದೇವೆ. ಸಂಸದೆಯ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಬಾರದು. ಚುನಾವಣಾ ಅಭ್ಯರ್ಥಿಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ಅಧಿಕಾರ ಎಲ್ಲರಿಗೂ ಇದೆ. ತೇಜೋವಧೆ ಮಾಡುವುದು ತಪ್ಪು ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ವೇಳೆ ಹೈಡ್ರಾಮ – `ಕೈ, ಕಮಲ’ ಕಾರ್ಯಕರ್ತರ ನಡ್ವೆ ಫೈಟ್

    ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ವೇಳೆ ಹೈಡ್ರಾಮ – `ಕೈ, ಕಮಲ’ ಕಾರ್ಯಕರ್ತರ ನಡ್ವೆ ಫೈಟ್

    ಚಿಕ್ಕಮಗಳೂರು: ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸೇರಿದಂತೆ ಕ್ಷೇತ್ರದ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ಪರಸ್ಪರ ವಾಗ್ವಾದ ನಡೆಸಿ ಹೈಡ್ರಾಮ ನಡೆಸಿದ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ನರಸೀಪುರ ಗ್ರಾಮದಲ್ಲಿ ನಡೆದಿದೆ.

    ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಇಂದು ಶಂಕು ಸ್ಥಾಪನೆ ನಡೆಸಲು ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಬಿಜೆಪಿ ಶಾಸಕ ಸುರೇಶ್ ಆಗಮಿಸಿದ್ದರು. ಈ ವೇಳೆ ಸಂಸದರು ಹಾಗೂ ಶಾಸಕರ ಎದುರೇ ಎರಡು ಪಕ್ಷದ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ.

    ಮಾಜಿ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ಶಾಸಕ ಸುರೇಶ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಪೊಲೀಸರು ಪ್ರತಿಭಟನೆಗೆ ಮುಂದಾದ ಶ್ರೀನಿವಾಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಬಂಧನ ಮಾಡಿ ಕರೆದ್ಯೊಯ್ದರು. ಇದರಿಂದ ಸ್ಥಳದಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಇತ್ತ ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರ ಹರಸಾಹಸ ಪಟ್ಟರು. ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಮಾಜಿ ಶಾಸಕ ಶ್ರೀನಿವಾಸ್ ಅವರು, ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಗೆ ಬರುವ ಸುಮಾರು 59 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಇದ್ದ ವೇಳೆಯೇ ಈ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು. ಆದರೆ ಇಂದು ಬಿಜೆಪಿ ಶಾಸಕರು ಮತ್ತೆ ಶಂಕುಸ್ಥಾಪನೆ ಮಾಡಲು ಮುಂದಾಗಿದ್ದಾರೆ. ಯೋಜನೆ ಆರಂಭವಾಗಿಯೇ 6 ತಿಂಗಳು ಆಗಿದೆ ಎಂದು ಆರೋಪ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೊದಲು ನಾನು ಶ್ರೀರಾಮ ಭಕ್ತೆ ನಂತರ ಸಂಸದೆ : ಶೋಭಾ ಕರಂದ್ಲಾಜೆ

    ಮೊದಲು ನಾನು ಶ್ರೀರಾಮ ಭಕ್ತೆ ನಂತರ ಸಂಸದೆ : ಶೋಭಾ ಕರಂದ್ಲಾಜೆ

    ಉಡುಪಿ: ಮೊದಲು ನಾನು ಶ್ರೀರಾಮ ಭಕ್ತೆ ನಂತರ ಸಂಸದೆ ಎಂದು ಉಡುಪಿ, ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ.

    ಉಡುಪಿಯಲ್ಲಿ ನಡೆದ ರಾಮಮಂದಿರ ಜನಾಗ್ರಹ ಸಭೆಯಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ, ದೇಶದಲ್ಲಿ ಜಾತ್ಯಾತೀತತೆಯ ಹೆಸರಿನಲ್ಲಿ ಬಂದ ಸರ್ಕಾರಗಳು ರಾಮಮಂದಿರ ನಿರ್ಮಾಣ ಮಾಡಿಲ್ಲ. ಆದರೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಮಮಂದಿರ ನಿರ್ಮಾಣಕ್ಕೆ ಪ್ರಯತ್ನ ಮಾಡುತ್ತಿದೆ. ಇದಕ್ಕೆ ಸುಪ್ರೀಂ ಕೋರ್ಟ್ ನಲ್ಲೂ ಪ್ರಯತ್ನ ಮಾಡಿದ್ದೇವೆ. ಕೇಂದ್ರ ಸರ್ಕಾರ ಸುಪ್ರೀಂ ಆದೇಶಕ್ಕಾಗಿ ಕಾಯುತ್ತಿದೆ. ರಾಮಮಂದಿರ ನಿರ್ಮಾಣ ಕುರಿತು ಇಂದು ಇಲ್ಲಿ ಸೇರಿರುವ ನಿಮ್ಮ ಭಾವನೆಯನ್ನು ಪ್ರಧಾನಿ ಮೋದಿ ಅವರಿಗೆ ಮುಟ್ಟಿಸುತ್ತೇನೆ ಎಂದು ಆಶ್ವಾಸನೆ ನೀಡಿದರು.

    ಇದೇ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡ ಕಪಿಲ್ ಸಿಬಲ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಾಮಮಂದಿರ ನಿರ್ಮಾಣದ ಕುರಿತು ಸುಪ್ರೀಂ ಕೋರ್ಟ್ ಅಕ್ಟೋಬರ್ 29 ರಂದು ನೀಡಬೇಕಿದ್ದ ತೀರ್ಪಿಗಾಗಿ ಕಾಯುತ್ತಿದ್ದೆವು. ಆದರೆ ಕಪಿಲ್ ಸಿಬಲ್ ಅವರು 2019ರ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ಮುಂದುಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅಲ್ಲದೇ ಕಳೆದ 4 ವರ್ಷಗಳಿಂದಲೂ ಕಪಿಲ್ ಸಿಬಲ್ ನೇತೃತ್ವದ ವಕೀಲರ ತಂಡ ಇದೇ ಪ್ರಯತ್ನ ನಡೆಸಿದೆ. ಪ್ರಕರಣದ ವಿಚಾರಣೆ ಮತ್ತೆ ಜನವರಿ 29ಕ್ಕೆ ಬರಲಿದ್ದು, ಈ ಕುರಿತ ತೀರ್ಪು ಏನಾಗಲಿದೆ ಎಂಬ ಭಯ ನಮ್ಮಲಿದೆ. ಡಿಸೆಂಬರ್ 11 ರಿಂದ ಲೋಕಸಭಾ ಅಧಿವೇಶನ ಆರಂಭವಾಗಲಿದ್ದು, ಈ ವೇಳೆ ರಾಮಮಂದಿರ ನಿರ್ಮಾಣದ ಚರ್ಚೆಗೆ ಪ್ರಸ್ತಾಪ ಮಾಡಲಾಗುವುದು ಎಂದು ತಿಳಿಸಿದರು.

    ರಾಮಮಂದಿರ ನಿರ್ಮಾಣ ಮಾಡುವ ಕುರಿತು ಸುಗ್ರೀವಾಜ್ಞೆ ಹೊರಡಿಸಲು ಇಂದು ಇಷ್ಟು ಮಂದಿ ಸೇರಿದ್ದೀರಾ. ಒಬ್ಬ ಜನಪ್ರತಿನಿಧಿಯಾಗಿ ನಾನು ಕೂಡ ಅಧಿವೇಶನದಲ್ಲಿ ಸುಗ್ರೀವಾಜ್ಞೆ ತರಲು ಪ್ರತ್ನಿಸುತ್ತೇನೆ. ನಿಮ್ಮ ಈ ಕಾರ್ಯಕ್ಕೆ ನಮ್ಮ ಬೆಂಬಲವೂ ಇದೆ. ದೇಶದಲ್ಲಿ ನಮ್ಮ ಸರ್ಕಾರ ಬರಲು ನಿಮ್ಮ ಬೆಂಬಲ ಕಾರಣ, ನಿಮ್ಮ ಆಗ್ರಹವನ್ನು ಪ್ರಧಾನಿಗಳಿಗೆ ನನ್ನ ಮೂಲಕ ಮುಟ್ಟಿಸುತ್ತೇನೆ ಎಂದು ತಿಳಿಸಿದರು. ಇದನ್ನು ಓದಿ : `ಮುಸಲ್ಮಾನರು ಕಲಿಯುಗದ ರಾಕ್ಷಸರು’: ರಾಘವಲು ಪ್ರಚೋದನಕಾರಿ ಭಾಷಣ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕನ್ನಡ ರಾಜ್ಯೋತ್ಸವದಂದು ಇಂಗ್ಲಿಷ್ ನಲ್ಲಿ ಶುಭಾಶಯ ಕೋರಿ, ಟ್ವೀಟ್ ಡಿಲೀಟ್ ಮಾಡಿದ್ರು ಶೋಭಾ ಮೇಡಂ

    ಕನ್ನಡ ರಾಜ್ಯೋತ್ಸವದಂದು ಇಂಗ್ಲಿಷ್ ನಲ್ಲಿ ಶುಭಾಶಯ ಕೋರಿ, ಟ್ವೀಟ್ ಡಿಲೀಟ್ ಮಾಡಿದ್ರು ಶೋಭಾ ಮೇಡಂ

    ಬೆಂಗಳೂರು: ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ಕನ್ನಡ ರಾಜ್ಯೋತ್ಸವ ದಿನದಂದೇ ನಾಡಿನ ಜನತೆಗೆ ಇಂಗ್ಲಿಷ್‍ನಲ್ಲಿ ಶುಭಾಶಯ ಕೋರಿದ್ದರು.

    ಕನ್ನಡ ರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಕನ್ನಡದಲ್ಲೇ ಟ್ವೀಟ್ ಮಾಡಿ ಶುಭ ಕೋರಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ ಅವರು ಮೋದಿ ಅವರ ಟ್ವೀಟನ್ನು ರೀ ಟ್ವೀಟ್ ಮಾಡಿದ್ದಾರೆ. ಆದರೆ ಇದರ ನಡುವೆ ನಾಡಿನ ಜನತೆಗೆ ಶುಭಕೋರುವ ವೇಳೆ ಇಂಗ್ಲಿಷ್‍ನಲ್ಲಿ ಶುಭಕೋರಿದ್ದರು.

    ಶೋಭಾ ಕರಂದ್ಲಾಜೆ ಅವರು ಇಲ್ಲಿಯೂ ಇಂಗ್ಲಿಷ್ ಪ್ರೇಮ ತೋರಿದ ಬಗ್ಗೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಶೋಭಾ ಅವರು ತಮ್ಮ ಟ್ವೀಟ್ ಡಿಲೀಟ್ ಮಾಡಿದ್ದಾರೆ. ಕನ್ನಡ ಜನತೆಗೆ ಇಂದು ವಿಶೇಷ ದಿನವಾಗಿದ್ದು, ರಾಜ್ಯದ ಸಂಸ್ಕೃತಿ ಹಾಗೂ ಸಂಪ್ರದಾಯಗಳ ಬಗ್ಗೆ ಹೆಮ್ಮೆ ಪಡುವ ಸಮಯವಾಗಿದೆ. ಇಂದು ನಮ್ಮ ಐತಿಹಾಸಿಕ ಪರಂಪರೆಯನ್ನು ನೆನೆಯುವ ಮೂಲಕ ಕನ್ನಡ ರಾಜ್ಯೋತ್ಸವ ಆಚರಣೆ ಮಾಡೋಣ ಎಂದು ಶೋಭಾ ಕರಂದ್ಲಾಜೆ ತಮ್ಮ ಟ್ವೀಟಿನಲ್ಲಿ ಬರೆದುಕೊಂಡಿದ್ದರು.

    ಪ್ರಧಾನಿ ಮೋದಿ, ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ರಾಜ್ಯ, ರಾಷ್ಟ್ರದ ನಾಯಕರು ಕನ್ನಡದಲ್ಲೇ ಶುಭಾಶಯ ತಿಳಿಸಿ ಟ್ವೀಟ್ ಮಾಡಿ ನಾಡಿನ ಜನರು ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದ್ದರು. ಇದನ್ನು ಓದಿ: ರಾಜ್ಯೋತ್ಸವಕ್ಕೆ ಕನ್ನಡದಲ್ಲಿ ಶುಭಾಶಯ ತಿಳಿಸಿದ್ರು ಮೋದಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನನ್ನ ಬಗ್ಗೆ ಮಾತನಾಡುವ ನೈತಿಕತೆ ಅವಳಿಗೆ ಇದೆಯಾ- ಕರಂದ್ಲಾಜೆಗೆ ಸಿದ್ದರಾಮಯ್ಯ ಪ್ರಶ್ನೆ

    ನನ್ನ ಬಗ್ಗೆ ಮಾತನಾಡುವ ನೈತಿಕತೆ ಅವಳಿಗೆ ಇದೆಯಾ- ಕರಂದ್ಲಾಜೆಗೆ ಸಿದ್ದರಾಮಯ್ಯ ಪ್ರಶ್ನೆ

    ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅವರ ಮಧ್ಯ ವಾಕ್ ಸಮರ ಮುಂದುವರಿದಿದೆ. ಈ ಬಾರಿ ಸಿದ್ದರಾಮಯ್ಯ ಅವರು, ನನ್ನ ಬಗ್ಗೆ ಮಾತನಾಡುವ ನೈತಿಕತೆ ಅವಳಿಗೆ ಇದೆಯೇ ಎಂದು ಪ್ರಶ್ನಿಸಿ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಮಾತನಾಡಿದ ಮಾಜಿ ಸಿಎಂ, ಅವಳ ಹಲ್ಲು ಏನು ಬಿಗಿಯಾಗಿದೆಯಾ? ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಅವಳು ಸೋತಿಲ್ಲವೇ? ಹೀಗಿರುವಾಗ ನನ್ನ ಕುರಿತಾಗಿ ಮಾತನಾಡುವ ನೈತಿಕತೆ ಅವಳಿಗಿಲ್ಲ ಎಂದ ಅವರು, ಬಿಜೆಪಿಯವರು ಒಣ ಜಂಭ ಬಿಡಬೇಕು. ನಮ್ಮ ಸರ್ಕಾರ ಸುಭದ್ರವಾಗಿದೆ. ಯಾವುದೇ ಕಾರಣಕ್ಕೂ ಸರ್ಕಾರ ಬೀಳುವುದಿಲ್ಲ ಅಂತ ಹೇಳಿದರು.  ಇದನ್ನೂ ಓದಿ: ಆ ಯಮ್ಮ ಹ್ಯೂಮನ್ ಬಿಯಿಂಗ್ ಹೌದೊ ಅಲ್ಲವೋ ನೀವೇ ಹೇಳಿ: ಕರಂದ್ಲಾಜೆಗೆ ಸಿದ್ದರಾಮಯ್ಯ ಟಾಂಗ್

    ಶೋಭಾ ಕರಂದ್ಲಾಜೆ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕಿಡಿಕಾರಿದ ಮಾಜಿ ಸಿಎಂ, ವೋಟ್‍ಗಳು ಯಡಿಯೂರಪ್ಪ ಅವರ ಜೇಬಿನಲ್ಲಿ ಇಲ್ಲ. ಈಗಾಗಲೇ ಅವರು ನೀಡಿದ್ದ ಹಲವು ಡೆಡ್ ಲೈನ್‍ಗಳು ಮುಗಿದಿವೆ ಎಂದು ವ್ಯಂಗ್ಯವಾಡಿದ್ದಾರೆ.   ಇದನ್ನೂ ಓದಿ: ಇನ್ನಾದರೂ ಭ್ರಮೆಯಿಂದ ಹೊರಬನ್ನಿ- ಬಿಎಸ್‍ವೈಗೆ ಸಿದ್ದರಾಮಯ್ಯ ಟಾಂಗ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://youtu.be/JtQJDl2Yv0s

  • ಆ ಯಮ್ಮ ಹ್ಯೂಮನ್ ಬಿಯಿಂಗ್ ಹೌದೊ ಅಲ್ಲವೋ ನೀವೇ ಹೇಳಿ: ಕರಂದ್ಲಾಜೆಗೆ ಸಿದ್ದರಾಮಯ್ಯ ಟಾಂಗ್

    ಆ ಯಮ್ಮ ಹ್ಯೂಮನ್ ಬಿಯಿಂಗ್ ಹೌದೊ ಅಲ್ಲವೋ ನೀವೇ ಹೇಳಿ: ಕರಂದ್ಲಾಜೆಗೆ ಸಿದ್ದರಾಮಯ್ಯ ಟಾಂಗ್

    ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅವರ ವಾಕ್ ಸಮರ ಮುಂದುವರಿದಿದ್ದು, ಆ ಯಮ್ಮ ಹ್ಯೂಮನ್ ಬಿಯಿಂಗ್ ಹೌದೊ ಅಲ್ಲವೋ ನೀವೇ ಹೇಳಿ ಅಂತಾ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ.

    ಬಾದಾಮಿ ತಾಲೂಕಿನ ಗುಳೇದಗುಡ್ಡ ಪಟ್ಟಣದಲ್ಲಿ ಮಾತನಾಡಿದ ಮಾಜಿ ಸಿಂಎ, ನಾನೊಬ್ಬ ಮನುಷ್ಯ, ಹ್ಯೂಮನ್ ಬಿಯಿಂಗ್, ಶೋಭಾ ಕರಂದ್ಲಾಜೆ ಅವರು ಹ್ಯೂಮನ್ ಬಿಯಿಂಗ್ ಹೌದೊ ಅಲ್ಲವೋ ನನಗೆ ಗೊತ್ತಿಲ್ಲ. ಮಾತಿನ ಮೇಲೆ ಹಿಡಿತ ಕಾಯ್ದುಕೊಳ್ಳಬೇಕು ಅಂದು ಟಾಂಗ್ ಕೊಟ್ಟರು.  ಇದನ್ನೂ ಓದಿ: ಸಿದ್ದರಾಮಯ್ಯ ಹಲ್ಲಿಲ್ಲದ ಹಾವು: ಶೋಭಾ ಕರಂದ್ಲಾಜೆ

    ಶೋಭಾ ಕರಂದ್ಲಾಜೆ ಅವರು ಸ್ನೇಕ್ ಫ್ಯಾಮಿಲಿಗೆ ಸೇರಿರಬೇಕು. ನಾನು ಹಾವಲ್ಲ, ಹಾವಿಗೆ ಹಲ್ಲುಗಳು ಇರಲಿ, ಇಲ್ಲದಿರಲಿ ಹಾಲು ಎರೆಯಲೇ ಬೇಕು. ಈ ರೀತಿ ಹಗುರವಾಗಿ ಮಾತನಾಡುವುದನ್ನ ಆ ಯಮ್ಮ ಬಿಡುವುದು ಒಳ್ಳೆಯದು ಅಂತಾ ಹೇಳಿದರು.

    ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಹತ್ತಿರ ಬಾಂಬೇ ಇಲ್ಲ. ಇನ್ನು ಟುಸ್ ಆಗೋದು ಎಲ್ಲಿಂದ ಬಂತು. ಅವರಿಗೆ ಸತ್ಯ ಅಂದರೆ ಗೊತ್ತಿಲ್ಲ, ಬರೀ ಸುಳ್ಳು ಹೇಳುತ್ತಾರೆ ಎಂದು ವ್ಯಂಗ್ಯವಾಡಿದರು. ಉಪಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ ಚರ್ಚೆ ನಡೆಸಿ, ರಣತಂತ್ರದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://youtu.be/JtQJDl2Yv0s

  • ಕರ್ನಾಟಕವನ್ನು ಬೇರ್ಪಡಿಸುವುದು ಕಾಂಗ್ರೆಸ್, ಜೆಡಿಎಸ್ ಚಾಳಿ: ಸಂಸದೆ ಕರಂದ್ಲಾಜೆ

    ಕರ್ನಾಟಕವನ್ನು ಬೇರ್ಪಡಿಸುವುದು ಕಾಂಗ್ರೆಸ್, ಜೆಡಿಎಸ್ ಚಾಳಿ: ಸಂಸದೆ ಕರಂದ್ಲಾಜೆ

    ದಾವಣಗೆರೆ: ಕರ್ನಾಟಕವನ್ನು ಬೇರ್ಪಡಿಸುವ ಕೆಲಸವನ್ನು ಯಾರು ಮಾಡಬಾರದು. ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ರಾಜ್ಯವನ್ನು ಒಡೆಯುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಸಮ್ಮಿಶ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕರ್ನಾಟಕವನ್ನು ಬೇರ್ಪಡಿಸುವುದು ಕಾಂಗ್ರೆಸ್ ಹಾಗೂ ಜೆಡಿಎಸ್ ಚಾಳಿಯಾಗಿದೆ. ಈ ಹಿಂದೆ ಬೆಂಗಳೂರನ್ನು ಮೂರು ಭಾಗ ಮಾಡಲು ಹೊರಟಿದ್ದರು. ಆದರೆ ಅದಕ್ಕೆ ಬಿಜೆಪಿ ಅವಕಾಶ ಕೊಟ್ಟಿರಲ್ಲಿಲ್ಲ. ಬಳಿಕ ವೀರಶೈವ ಲಿಂಗಾಯಿತ ಧರ್ಮವನ್ನು ಒಡೆಯಲು ಹೊರಟಿದ್ದರು. ಈಗ ಜೆಡಿಎಸ್ ಕಾಂಗ್ರೆಸ್ ರಾಜ್ಯವನ್ನು ಒಡೆಯುವ ಮಾತನ್ನಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಕರ್ನಾಟಕದ ಜನ ಇದಕ್ಕೆ ಯಾವುದೇ ಕಾರಣಕ್ಕೂ ಒಪ್ಪಿಗೆ ನೀಡುವುದಿಲ್ಲ. ಸಿಎಂ ಕುಮಾರಸ್ವಾಮಿ ಅಖಂಡ ಕರ್ನಾಟಕದ ಪರ ಕೆಲಸ ಮಾಡಬೇಕು. ಅದನ್ನು ಬಿಟ್ಟು 38 ಶಾಸಕರಿಗೆ ಹಾಗೂ ನಾಲ್ಕೈದು ಜಿಲ್ಲೆಗಳಿಗೆ ಮಾತ್ರ ಮುಖ್ಯಮಂತ್ರಿಯಾಗಿ ಕೆಲಸ ಮಾಡಬಾರದು ಎಂದರು.

    ಮಾಜಿ ಸಿಎಂ ಯಡಿಯೂರಪ್ಪ ಅವರ ಅವಧಿಯಲ್ಲಿ ಉತ್ತಮ ಅಭಿವೃದ್ಧಿ ಕೆಲಸ ಮಾಡಿದ್ದರು. ಅದರಲ್ಲೂ ಉತ್ತರ ಕರ್ನಾಟಕಕ್ಕೆ ಸಾಕಷ್ಟು ಅನುದಾನ ನೀಡಿದ್ದರು. ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಾಣ ಮಾಡಿ ಹೆಚ್ಚಿನ ಸ್ಥಾನಮಾನ ನೀಡಿದ್ದರು. ಆದರೆ ಈಗ ಕುಮಾರಸ್ವಾಮಿಯವರು ಉತ್ತರ ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

  • ದನದ ವ್ಯಾಪಾರಿ ಸಾವು ಪ್ರಕರಣದಲ್ಲಿ ಅಮಾಯಕರನ್ನು ಶಿಕ್ಷಿಸಬೇಡಿ- ಉಡುಪಿ ಎಸ್‍ಪಿಗೆ ಶೋಭಾ ಕರಂದ್ಲಾಜೆ ಒತ್ತಾಯ

    ದನದ ವ್ಯಾಪಾರಿ ಸಾವು ಪ್ರಕರಣದಲ್ಲಿ ಅಮಾಯಕರನ್ನು ಶಿಕ್ಷಿಸಬೇಡಿ- ಉಡುಪಿ ಎಸ್‍ಪಿಗೆ ಶೋಭಾ ಕರಂದ್ಲಾಜೆ ಒತ್ತಾಯ

    ಉಡುಪಿ: ದನದ ವ್ಯಾಪಾರಿ ಸಾವು ಪ್ರಕರಣದಲ್ಲಿ ಅಮಾಯಕರನ್ನು ಶಿಕ್ಷಿಸಬೇಡಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಒತ್ತಾಯ ಮಾಡಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಸಂಘಪರಿವಾರಕ್ಕೂ ವ್ಯಾಪಾರಿ ಸಾವಿಗೂ ಸಂಬಂಧವಿಲ್ಲ. ಪ್ರಕರಣ ಸಂಬಂಧ ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಪೊಲೀಸರು ದೌರ್ಜನ್ಯ ಮಾಡುತ್ತಿದ್ದಾರೆ. ಇದರ ಹಿಂದೆ ಸಮ್ಮಿಶ್ರ ಸರ್ಕಾರದ ಕುಮ್ಮಕ್ಕು ಇದೆ. ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳನ್ನಷ್ಟೇ ತನಿಖೆಗೆ ಒಳಪಡಿಸಿ, ನಿರಪರಾಧಿ ಕಾರ್ಯಕರ್ತರನ್ನು ಹಿಂಸಿಸದೆ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದ್ದಾರೆ.

    ಅಲ್ಲದೇ ದನ ಕಳ್ಳ ಸಾಗಣೆ ಸಂದರ್ಭ ಉಡುಪಿಯ ಪೆರ್ಡೂರಿನಲ್ಲಿ ಮಂಗಳೂರಿನ ಜೋಕಟ್ಟೆಯ ಹುಸೇನಬ್ಬ ಅನುಮಾನಾಸ್ಪದ ಸಾವನ್ನಪ್ಪಿದ್ದರು. ಹಿಂದೂ ಕಾರ್ಯಕರ್ತರು ದನಗಳ್ಳತನದ ಮಾಹಿತಿ ಪೊಲೀಸರಿಗೆ ಕೊಟ್ಟಿದ್ದರು. ಈ ವೇಳೆ ಎಸ್‍ಐ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದರೂ, ರಾಜ್ಯ ಸರ್ಕಾರ ಬಿಜೆಪಿ ಮತ್ತು ಸಂಘ ಪರಿವಾರದ ಮೇಲೆ ದೌರ್ಜನ್ಯ ಮಾಡುತ್ತಿದೆ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ. ಇದನ್ನು ಓದಿ: ದನದ ವ್ಯಾಪಾರಿ ಅನುಮಾನಾಸ್ಪದ ಸಾವು – ಕೊಲೆ ಶಂಕೆ ವ್ಯಕ್ತಪಡಿಸಿದ ಕುಟುಂಬಸ್ಥರು!

    ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಯ ಎಚ್ಚರಿಕೆ ನೀಡಿದ ಅವರು, ಬುಧವಾರ ರಾಜ್ಯ ಸರ್ಕಾರದ ವಿರುದ್ಧ ಉಡುಪಿಯಲ್ಲಿ ಪ್ರತಿಭಟನೆ ಮಾಡುತ್ತೇವೆ. ಹುಸೇನಬ್ಬ ಹೃದಯಾಘಾತದಿಂದ ಸಾವನ್ನಪ್ಪಿರಬಹುದು. ಅವರಿಗೆ ಹೃದಯ ಸಂಬಂಧಿ ಕಾಯಿಲೆಗಳು ಇದ್ದವು ಎಂಬ ಮಾಹಿತಿ ಇದೆ. ಮರಣೋತ್ತರ ಪರೀಕ್ಷೆ ಬಂದ ಮೇಲೆ ಸತ್ಯಾಸತ್ಯತೆ ಹೊರ ಬರುತ್ತದೆ ಎಂದು ಹೇಳಿದರು. ಇದನ್ನು ಓದಿ:  ದನದ ವ್ಯಾಪಾರಿ ಅನುಮಾನಾಸ್ಪದ ಸಾವು ಪ್ರಕರಣ- ಹಿರಿಯಡ್ಕ ಎಸ್‍ಐ ಬಂಧನ

  • ಕೃಷ್ಣ ಮಠಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿಲ್ಲ ಯಾಕೆ: ಬಿಜೆಪಿ ನಾಯಕರಿಂದ ಭಿನ್ನ ಹೇಳಿಕೆ

    ಕೃಷ್ಣ ಮಠಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿಲ್ಲ ಯಾಕೆ: ಬಿಜೆಪಿ ನಾಯಕರಿಂದ ಭಿನ್ನ ಹೇಳಿಕೆ

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರು ಬುಧವಾರ ಕೃಷ್ಣ ಮಠಕ್ಕೆ ಭೇಟಿ ನೀಡುತ್ತಾರೆ ಎಂದು ಆರಂಭದಲ್ಲಿ ಕೇಳಿ ಬಂದಿತ್ತು. ಆದರೆ ಮೋದಿ ಕೃಷ್ಣ ಮಠಕ್ಕೆ ಭೇಟಿ ನೀಡದೇ ಹೋಗಿದ್ದು ಯಾಕೆ ಎನ್ನುವ ಚರ್ಚೆ ಈಗ ಆರಂಭವಾಗಿದ್ದು ಬಿಜೆಪಿ ನಾಯಕರು ಈ ಪ್ರಶ್ನೆಗೆ ಒಂದೊಂದು ಉತ್ತರ ನೀಡಿದ್ದಾರೆ.

    ಜೀವ ಭಯ: ಕೃಷ್ಣ ಮಠದಲ್ಲಿ ಮೋದಿ ಜೀ ಅವರಿಗೆ ಜೀವ ಭಯ ಇತ್ತು. ಹೀಗಾಗಿ ಭೇಟಿ ನೀಡಿಲ್ಲ ಎಂದು ಸಂಸದೆ ಶೋಭಾ ಕರಾಂದ್ಲಜೆ ತಿಳಿಸಿದ್ದಾರೆ.

    ನೀತಿ ಸಂಹಿತೆ: ಮಾಜಿ ಸಿಎಂ, ಕೇಂದ್ರ ಸಚಿವ ಸದಾನಂದ ಗೌಡರು, ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಕೃಷ್ಣ ಮಠಕ್ಕೆ ಭೇಟಿ ನೀಡಿಲ್ಲ. ಮಠಕ್ಕೆ ಭೇಟಿ ನೀಡದೆ ಅರ್ಧಗಂಟೆ ಚರ್ಚೆ ಆಗಿದೆ. ಇನ್ನು ಭೇಟಿ ನೀಡಿದ್ದರೆ 1 ಗಂಟೆ ಚರ್ಚೆ ಆಗುತ್ತಿತ್ತು. ನಾವು ನೀತಿ ಸಂಹಿತೆ ಪಾಲನೆ ಮಾಡುವವರು, ಕಾಂಗ್ರೆಸ್‍ನವರು ಉಲ್ಲಂಘನೆ ಮಾಡುವವರು ಎಂದು ಆರೋಪಿಸಿದ್ದಾರೆ.

    ಭದ್ರತೆ ಸಮಸ್ಯೆ ಇಲ್ಲ: ಪ್ರಧಾನಿ ಮೋದಿ ಕೃಷ್ಣ ಮಠಕ್ಕೆ ಭೇಟಿ ರದ್ದು ಮಾಡಿರುವ ಕುರಿತು ಸ್ಪಷ್ಟನೆ ನೀಡಿರುವ ಮಠದ ವಕ್ತಾರರು ಇಲ್ಲಿ ಯಾವುದೇ ಭದ್ರತೆಯ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಪ್ರಧಾನಿಗಳ ಭೇಟಿ ಕಾರ್ಯಕ್ರಮ ಕುರಿತು ಮಾತನಾಡಿದ್ದ ಪೇಜಾವರ ಶ್ರೀಗಳು, ಈ ಹಿಂದೆ ಪ್ರಧಾನಿಗಳಿಗೆ ಉಡುಪಿಗೆ ಬಂದಾಗ ಮಠಕ್ಕೆ ಬರಬೇಕೆಂದು ಪತ್ರ ಬರೆದಿದ್ದೆ. ಸದ್ಯ ಈ ಪತ್ರಕ್ಕೆ ಮೋದಿಯವರ ಆಪ್ತ ಕಾರ್ಯದರ್ಶಿಯವರು ನಮ್ಮ ಕಾರ್ಯದರ್ಶಿಗೆ ಕರೆ ಮಾಡಿ, ರಾಜಕೀಯ ಸಮಾವೇಶದ ನಡುವೆ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಮೋದಿ ತಿಳಿಸಿದ್ದಾಗಿ ಹೇಳಿದ್ದಾರೆ. ಆದ್ರೆ ಮುಂದೊಂದು ದಿನ ಧಾರ್ಮಿಕ ಕಾರ್ಯಕ್ರಮವನ್ನೇ ನಿಗದಿಪಡಿಸಿದರೆ ಪ್ರಧಾನಿ ಆಗಮಿಸಲಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ ಎಂದು ಶ್ರೀ ಗಳು ಹೇಳಿದರು.

    ಪ್ರಧಾನಿಗಳು ಮಠಕ್ಕೆ ಭೇಟಿ ನೀಡಲಿಲ್ಲ ಎಂಬುವುದರ ಬಗ್ಗೆ ಬೇಸರ ಮಾಡಿಕೊಳ್ಳುವ ಅಗತ್ಯವಿಲ್ಲ. ಜನರ ಸಮಸ್ಯೆ ಪರಿಹಾರ ಆಗದಿದ್ದಾರೆ ಬೇಸರ ಉಂಟಾಗುತ್ತದೆ ಎಂದು ಪೇಜಾವರ ಶ್ರೀಗಳು ತಿಳಿಸಿದ್ದಾರೆ.